ಕನ್ನಡ ಸಣ್ಣ ಕಥೆಗಳು – Kannada Short Stories – Kannada Small Stories – Sanna Kathegalu

You are currently viewing ಕನ್ನಡ ಸಣ್ಣ ಕಥೆಗಳು – Kannada Short Stories – Kannada Small Stories – Sanna Kathegalu

1) ಪರ್ಲಿಯ ಪ್ರೇಮಕಥೆ : Great Love Story of Mermaid Pearly

ಪರ್ಲಿಯ ಪ್ರೇಮಕಥೆ : Great Love Story of Mermaid Pearly

ಪರ್ಲಿ ಒಬ್ಬಳು ಸುಂದರವಾದ ಮತ್ಯ್ಸ ಕನ್ಯೆ. ಜೊತೆಗೆ ಆಕೆ ಸಾಗರದ ರಾಣಿ. ಅವಳಿಗೆ ಸಮುದ್ರ ಜೀವನ ಬೇಸರವಾಗಿ ಒಬ್ಬ ಮಾಂತ್ರಿಕನ ಸಹಾಯ ಪಡೆದುಕೊಂಡು ಆಕೆ ಮನುಜೆಯಾಗಿ ಭೂಮಿಗೆ ಬರುತ್ತಾಳೆ. ಆಕೆ ಭೂಮಿಗೆ ಬಂದು ಭೂಮಿಯ ಸೌಂದರ್ಯವನ್ನು ಸವಿಯುವಾಗ ಆಕೆಗೆ ಒಬ್ಬ ಸುಂದರವಾದ ರಾಜಕುಮಾರ ಕಾಣಿಸುತ್ತಾನೆ. ಆಕೆ ಅವನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ. ಆದರೆ ಅವಳ ರಾಜಕುಮಾರ ಈ ಮೊದಲೇ ಬೇರೆಯವಳನ್ನು ಪ್ರೀತಿಸುತ್ತಿರುತ್ತಾನೆ. ಅದಕ್ಕಾಗಿ ಆಕೆ ಅವನ ಪ್ರೇಯಸಿಯನ್ನು ಕೊಂದು ತಾನು ಅವನೊಂದಿಗೆ ಬಾಳಲು ನಿರ್ಧರಿಸುತ್ತಾಳೆ. ಪರ್ಲಿಗೆ ಅವಳು ಇಷ್ಟಪಟ್ಟ ರಾಜಕುಮಾರನ ಪ್ರೀತಿ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರವೇ ಪರ್ಲಿಯ ಪ್ರೇಮಕಥೆ…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

2) ಪೋಲಿ ಪ್ರೇಮ ಕಥೆಗಳು – Kannada Short Love Stories

ಪೋಲಿ ಪ್ರೇಮ ಕಥೆಗಳು - Kannada Short Love Stories

“ಪೋಲಿ ಪ್ರೇಮಕಥೆಗಳು” ಈ ಪುಸ್ತಕ ನನ್ನ ಕಾಲೇಜು ದಿನಗಳಲ್ಲಾದ ಸಣ್ಣಸಣ್ಣ ಗುಪ್ತ ಪ್ರೇಮ ಕಥೆಗಳ ಸಂಗ್ರಹವಾಗಿದೆ. ಈ ಕಥೆಗಳು ನಿಮ್ಮ ಕಾಲೇಜು ದಿನಗಳ ಕ್ರಶ್‌ಗಳನ್ನು, ಮಾಜಿ ಪ್ರೀತಿಪಾತ್ರರನ್ನು ನೆನಪಿಸುತ್ತವೆ. ಈ ಕಥೆಗಳು ನಿಮ್ಮನ್ನು ನಗಿಸುತ್ತವೆ, ಅಳಿಸುತ್ತವೆ ಮತ್ತು ಸ್ವಲ್ಪ ಸಮಯದವರೆಗೆ ಯೋಚಿಸುವಂತೆ ಮಾಡುತ್ತವೆ. ಇಂದಿನ 4ಜಿ ಯುಗದಲ್ಲಿ ಯಾರಿಗೂ ದೊಡ್ಡ ಕಥೆಗಳನ್ನು ಓದುವಷ್ಟು ಸಮಯವಿಲ್ಲ. ಹಾಗಾಗಿ ನಾನು ಈ ಸಣ್ಣ ಪ್ರೇಮಕಥೆಗಳ ಸಂಗ್ರಹವನ್ನು ಬರೆದಿದ್ದೇನೆ. ಇದು ನನ್ನ ಹೊಸ ಪ್ರಯತ್ನ. ದಯವಿಟ್ಟು ಈ ಪುಸ್ತಕವನ್ನು ಒಮ್ಮೆ ಓದಿ ಮತ್ತು ನಿಮ್ಮ ಪ್ರಾಮಾಣಿಕ ವಿಮರ್ಶೆಗಳನ್ನು ನೀಡಿ.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

3) ಒಂದು ಬಂಗಾರದ ಗುಲಾಬಿ – ಕಾಲೇಜ ಹುಡುಗಿಯ ಪ್ರೇಮಕಥೆ One Golden Rose – Love Story of Indian College Girl in Kannada

ಒಂದು ಬಂಗಾರದ ಗುಲಾಬಿ - ಕಾಲೇಜ ಹುಡುಗಿಯ ಪ್ರೇಮಕಥೆ One Golden Rose - Love Story of Indian College Girl in Kannada

ರಶ್ಮಿ ಒಬ್ಬಳು ಭಾರತೀಯ ಕಾಲೇಜು ಹುಡುಗಿ. ಅವಳೇ ಕಾಲೇಜ ಟಾಪರ್. ಅವಳು ಕಾಲೇಜ್ ಟಾಪರ್ ಆಗಿದ್ದರೂ ಸಹ ಆಕೆ ಬಹು ಸುಂದರವಾಗಿದ್ದಳು. ಅವಳಂದಕ್ಕೆ ಜೊಲ್ಲು ಸುರಿಸಿ ನಾಲ್ಕಾರು ಶ್ರೀಮಂತ ಹುಡುಗರು ಅವಳ ಹಿಂದೆ ಸುತ್ತುತ್ತಿರುತ್ತಾರೆ. ಅವರಲ್ಲೊಬ್ಬ ಅವಳಿಗೆ ಬಂಗಾರದ ಗುಲಾಬಿಯನ್ನು ಗಿಫ್ಟಾಗಿ ಕೊಡುತ್ತಾನೆ. ಅವಳನ್ನು ಸೂರ್ಯ ಎಂಬ ಬಡ ಹುಡುಗ ಸಹ ಪ್ರೀತಿಸುತ್ತಿರುತ್ತಾನೆ. ರಶ್ಮಿ ಯಾರ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ ? ಮುಂದೆ ಏನು ಮಾಡುತ್ತಾಳೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರವೇ “ಒಂದು ಬಂಗಾರದ ಗುಲಾಬಿ” ಎಂಬ ಪ್ರೇಮಕಥೆ…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

4) ಕಾದಿರುವೆ ನಿನಗಾಗಿ – One Dreamy Love Story of a Lonely lad in Kannada

ಕಾದಿರುವೆ ನಿನಗಾಗಿ - One Dreamy Love Story of a Lonely lad in Kannada

“ಕಾದಿರುವೆ ನಿನಗಾಗಿ…” ಇದೊಂದು ಭಾರತದ ಒಂಟಿ ಹುಡುಗನ ಕನಸಿನ ಕನ್ಯೆಯ ಪ್ರೇಮಕಥೆ. ಯಾವುದೇ ಗರ್ಲಫ್ರೆಂಡಗಳಿಲ್ಲದ ಒಂಟಿ ಹುಡುಗ ಯಾವ ರೀತಿಯ ವ್ಯಥೆಯನ್ನು ಅನುಭವಿಸುತ್ತಾನೆ ಎಂಬುದರ ಮೇಲೆ ಈ ಕಥೆ ಬೆಳಕು ಚೆಲ್ಲುತ್ತದೆ. ಆ ಹುಡುಗನಿಗೆ ಕನಸ್ಸಲ್ಲೊಬ್ಬಳು ಅಪ್ಸರೆ ಸಿಗುತ್ತಾಳೆ. ಅವಳಿಗಾಗಿ ಆತ ಎಲ್ಲವನ್ನು ಮಾಡುತ್ತಾನೆ. ಆದರೆ ಆಕೆ ಅವನಿಂದ ದೂರಾಗುತ್ತಾಳೆ. ಅವನ ಕಾಯುವಿಕೆಯೊಂದಿಗೆ ಹೇಗೆ ಕಥೆ ಮುಗಿಯುತ್ತದೆ ಎಂಬುದಕ್ಕೆ ನೀವು ಪೂರ್ತಿ ಕಥೆಯನ್ನು ಓದಬೇಕು…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

5) ಹೀಗೊಂದು ಪ್ರೇಮಕಥೆ – One Beautiful Love Story a Parrot and Fish in Kannada

ಹೀಗೊಂದು ಪ್ರೇಮಕಥೆ - One Beautiful Love Story a Parrot and Fish in Kannada

“ಹೀಗೊಂದು ಪ್ರೇಮಕಥೆ…” ಇದೊಂದು ಸರೋವರದ ಮೀನು ಮತ್ತು ಕಾಡಿನ ಗಿಳಿಗಳ ಮಧ್ಯೆ ನಡೆಯುವ ಸುಂದರವಾದ ಪ್ರೇಮಕಥೆಯಾಗಿದೆ. ಮೀನು ಹಾಗೂ ಗಿಳಿಗಳು ಪರಸ್ಪರ ಪ್ರೀತಿಸುತ್ತವೆ. ಆದರೆ ಅವುಗಳಿಗೆ ಅವುಗಳ ದೈಹಿಕ ದುರ್ಬಲತೆಗಳ ಕಾರಣಗಳಿಂದ ಜೊತೆಯಾಗಿ ಬಾಳಲಾಗುವುದಿಲ್ಲ. ಹೀಗಾಗಿ ಅವು ಬೇರೆ ಬೇರೆಯಾಗುತ್ತವೆ. ಯಾಕೆ ಈ ಕಥೆ ಅವರಿಬ್ಬರ ದುರಂತ ಸಾವುಗಳಲ್ಲಿ ಕೊನೆಯಾಗುತ್ತದೆ ಎಂಬುದೇ ಈ ಪ್ರೇಮಕಥೆಯ ರಹಸ್ಯ….

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

6) ಮಡದಿಯ ಪ್ರೇಮ ಪಾಠ – Life Lesson of Wife – One Romantic Love Story in Kannada

ಮಡದಿಯ ಪ್ರೇಮ ಪಾಠ - Life Lesson of Wife - One Romantic Love Story in Kannada

“ಮಡದಿಯ ಪ್ರೇಮ ಪಾಠ” ಇದು ಹೊಸದಾಗಿ ಮದುವೆಯಾದ ಗಂಡ ಮತ್ತು ಹೆಂಡತಿಯರ ನಡುವೆ ನಡೆದ ಒಂದು ರೋಮ್ಯಾಂಟಿಕ್ ಪ್ರೇಮಕಥೆಯಾಗಿದೆ. ಜೀವನದಲ್ಲಿ ಯಾವುದೇ ದೊಡ್ಡ ಗುರಿಗಳನ್ನು ಹೊಂದಿರದ ಗಂಡ ಹಾಗೂ ಐಎಎಸ್ ಅಧಿಕಾರಿಯಾಗಲು ಬಯಸುವ ಹೆಂಡತಿಯ ಕಥೆ ಇದಾಗಿದೆ. ಒಂದು ಕಡೆ ಗಂಡ ಅವಳನ್ನು ದೈಹಿಕ ಸುಖಕ್ಕಾಗಿ ಬಲವಂತವಾಗಿ ಬಳಸಿಕೊಳ್ಳಲು ಮುಂದಾಗುತ್ತಾನೆ. ಮತ್ತೊಂದು ಕಡೆ ಅವನ ತಾಯಿ ಉದ್ದೇಶಪೂರ್ವಕವಾಗಿ ಅವನ ಹೆಂಡತಿಗೆ ಕಾಟ ಕೊಟ್ಟು ಹಿಂಸಿಸುತ್ತಾಳೆ. ಕಥೆ ಈ ರೀತಿ ಮುಂದುವರಿಯುತ್ತದೆ. ಕೊನೆಗೆ ಆ ಸೃಜನಶೀಲ ಹೆಂಡತಿಯ ಪ್ರೇಮಪಾಠದೊಂದಿಗೆ ಗಂಡನ ಮುಚ್ಚಿದ ಕಣ್ಣುಗಳು ತೆರೆಯುತ್ತವೆ, ಆತ ಬದಲಾಗುತ್ತಾನೆ. ಇಲ್ಲೊಂದು ರೋಚಕ ತಿರುವಿದೆ. ಅದನ್ನು ತಿಳಿಯಲು ಈ ಪುಸ್ತಕವನ್ನು ಓದಿ…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

7) ಕಾಡಿನಲ್ಲೊಂದು ಕ್ರೈಮಸ್ಟೋರಿ – Crime Love Story in Kannada

ಕಾಡಿನಲ್ಲೊಂದು ಕ್ರೈಮಸ್ಟೋರಿ - Crime Love Story in Kannada

“ಕಾಡಿನಲ್ಲೊಂದು ಕ್ರೈಮಸ್ಟೋರಿ” ಇದು ವಾರಾಂತ್ಯದಲ್ಲಿ ಪರಿಶುದ್ಧ ಏಕಾಂತವನ್ನು ಅರಸಿ ಒಂದು ಜನ ನಿಬಿಡ ಬೆಟ್ಟಕ್ಕೆ ಹೋದ ಯುವ ಪ್ರೇಮಿಗಳ ದುರಂತ ಕಥೆಯಾಗಿದೆ. ದುರದೃಷ್ಟವಶಾತ್ ಬೆಟ್ಟಕ್ಕೆ ಹೋದ ಆ ಕಾಲೇಜ ಪ್ರೇಮಿಗಳು, ಅಲ್ಲಿ ಈಗಾಗಲೇ ಬೇರೊಬ್ಬರಿಗಾಗಿ ಕಾಯುತ್ತಿದ್ದ ಗೂಂಡಾಗಳ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆ ಪ್ರೇಮಿಗಳಲ್ಲಿ, ಹುಡುಗನನ್ನು ಆ ಗೂಂಡಾಗಳು ಬೆಟ್ಟದಿಂದ ತಳ್ಳಿ ಸಾಯಿಸುತ್ತಾರೆ ಮತ್ತು ಹುಡುಗಿಯನ್ನು ತಮ್ಮ ಕಾಮದಾಹಕ್ಕೆ ಬಳಸಿಕೊಳ್ಳುತ್ತಾರೆ. ಕಮರ್ಷಿಯಲ್ ಬ್ಲೂ ಫಿಲಂ ತಯಾರಿಸುವುದಕ್ಕಾಗಿ ಅವಳನ್ನು ನಾನಾ ತರಹದಲ್ಲಿ ಹಿಂಸಿಸುತ್ತಾರೆ. ಅವಳ ಕೋಮಲ ದೇಹ ಕಾಮದ ಬೇಗೆಯಲ್ಲಿ ದಹಿಸಿ ಹೋದರೂ ಆ ಕಾಮುಕರ ದಾಹ ತೀರುವುದಿಲ್ಲ. ಆಕೆ ಅಲ್ಲಿಯೇ ಕಣ್ಮುಚ್ಚುತ್ತಾಳೆ. ಇಂತಹ ಅಪಾಯಕಾರಿ ಸ್ಥಳಗಳಿಗೆ ಡೇಟಿಂಗ್ ಮಾಡಲು ಹೋಗುವ ಯುವ ಪ್ರೇಮಿಗಳಿಗೆ ಈ ಕ್ರೈಂ ಸ್ಟೋರಿ ಒಂದು ಎಚ್ಚರಿಕೆಯ ಗಂಟೆಯಾಗಿದೆ.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

8) ಬುದ್ಧಿವಂತ ಪತ್ನಿ – One Husband Wife Love Story

ಬುದ್ಧಿವಂತ ಪತ್ನಿ - One Husband Wife Love Story

“ಬುದ್ಧಿವಂತ ಪತ್ನಿ” ಇದು ಹೊಸದಾಗಿ ಮದುವೆಯಾದ ರಾಣಿ ಎಂಬ ಸುಂದರ ಪತ್ನಿಯ ಸುಂದರ ಸಣ್ಣ ಕಥೆಯಾಗಿದೆ. ಆಕೆ ರವಿ ಎಂಬ ಮಿಡಲ್ ಕ್ಲಾಸ್ ಇಂಜಿನಿಯರನನ್ನು ಮದುವೆಯಾಗಿರುತ್ತಾಳೆ. ಆದರೆ ಮದುವೆಯಾದ ಕೆಲವು ತಿಂಗಳುಗಳ ನಂತರ ರವಿ ಕೆಟ್ಟ ಸ್ನೇಹಿತರ ಸಹವಾಸ ದೋಷದಿಂದ ಮದ್ಯ ಮಾದಕ ವಸ್ತುಗಳ ದಾಸನಾಗುತ್ತಾನೆ ಮತ್ತು ತನ್ನ ಪತ್ನಿ ರಾಣಿಯನ್ನು ಕಾಡಲು ಪ್ರಾರಂಭಿಸುತ್ತಾನೆ. ಅವನನ್ನು ಹತೋಟಿಯಲ್ಲಿಡಲು ರಾಣಿ ಅವನೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುತ್ತಾಳೆ. ಆದರೆ ಆತ ಅವಳ ಬೆಡ್ರೂಮ್ ಬ್ರಹ್ಮಾಸ್ತ್ರಕ್ಕೆ ಬಗ್ಗುವುದಿಲ್ಲ. ಆಗ ಬುದ್ಧಿವಂತ ಪತ್ನಿ ರಾಣಿ ಒಂದು ಖತರ್ನಾಕ ಉಪಾಯ ಮಾಡಿ ತನ್ನ ಗಂಡನ ಚಟವನ್ನು ಬಿಡಿಸುತ್ತಾಳೆ. ಅವಳ ಖತರ್ನಾಕ ಉಪಾಯ, ಪ್ರೀತಿ ಮತ್ತು ಪ್ರಣಯದ ಕಥೆಯ ಮಜಾ ಅನುಭವಿಸಲು ಈ ಪುಸ್ತಕವನ್ನು ಓದಿ.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

9) True ಗರ್ಲಫ್ರೆಂಡ್ – One Friendship love story in Kannada

True ಗರ್ಲಫ್ರೆಂಡ್ - One Friendship love story in Kannada - Kannada Love Story Books

“True ಗರ್ಲಫ್ರೆಂಡ್” ಇದು ಹದಿಹರೆಯದ ಹುಡುಗ ಹುಡುಗಿಯರ ಕಣ್ಣು ತೆರೆಸುವ ಕಥೆಯಾಗಿದೆ. ಫೇಸ್ಬುಕ್ ಸ್ನೇಹವೇ ನಿಜವಾದ ಸ್ನೇಹವೆಂದು ಹೆಚ್ಚಿನ ಜನ ನಂಬಿದ್ದಾರೆ. ಆದರೆ ಅದು ನಿಜವಾದ ಸ್ನೇಹವಲ್ಲ. ನಕಲಿ ಫೇಸ್‌ಬುಕ್ ಸ್ನೇಹಿತರಿಗಿಂತ ಲೈಫ್‌ಬುಕ್ ಸ್ನೇಹಿತರು ಮುಖ್ಯ ಎಂದು ಈ ಕಥೆ ಸಾಬೀತುಪಡಿಸುತ್ತದೆ. ಫೇಸ್‌ಬುಕ್ ಮತ್ತು ಮೊಬೈಲ್ ಸ್ನೇಹಿತರು ನಿಜವಾದ ಸ್ನೇಹಿತರಾಗಿದ್ದಾರೆ ಹಾಗೂ ಅವರು ನಮ್ಮ ಸಂಕಷ್ಟದ ಸಮಯದಲ್ಲಿ ನಮಗೆ ಸಹಾಯ ಮಾಡಲು ಬರುತ್ತಾರೆ ಎಂದು ನಂಬಿದ್ದ ಇಬ್ಬರು ಒಡಹುಟ್ಟಿದವರ ಕಥೆ ಇದು. ಅವರು ಹೇಗೆ ನಕಲಿ ಸ್ನೇಹಿತರನ್ನು ಬಿಟ್ಟು ನಿಜವಾದ ಸ್ನೇಹಿತರನ್ನು ಕಂಡುಕೊಳ್ಳುತ್ತಾರೆ ಎಂಬುದು ಈ ಕಥೆಯ ಆತ್ಮವಾಗಿದೆ. ನಾನು ಈ ಕಥೆಯನ್ನು ಆರು ವರ್ಷಗಳ ಹಿಂದೆ ಬರೆದಿರುವೆ. ಆದರೆ ಇದು ಇಂದಿನ ಸಂದರ್ಭಗಳಿಗೆ ಹೆಚ್ಚು ಸೂಕ್ತವಾಗಿದೆ. ಫೇಸ್‌ಬುಕ್ ಸ್ನೇಹಿತರನ್ನು ನಿಜವಾದ ಸ್ನೇಹಿತರೆಂದು ನಂಬುವ, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಜನರು ಈ ಸಣ್ಣ ಕಥೆಯನ್ನು ಒಮ್ಮೆ ಓದಬೇಕು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

10) ಬಿಳಿಕಾಗೆ : ಕಾಲೇಜ ಕಿರಾತಕಿಯ ಕಥೆ – Kannada Short Story – Kannada Moral Story

ಬಿಳಿಕಾಗೆ : ಕಾಲೇಜ ಕಿರಾತಕಿಯ ಕಥೆ - Kannada Short Story - Kannada Moral Story

ಎಷ್ಟೋ ಜನ ಫೆಮಿನಿಸಮ್ ಪಂಡಿತೆಯರಿಗೆ ಫೆಮಿನಿಸಮ್ ಪದದ ನಿಜವಾದ ಅರ್ಥ ಹಾಗೂ ಉದ್ದೇಶ ಗೊತ್ತಿಲ್ಲ. ಅವರು ತಾವು ಮಾಡುವ ದುಶ್ಚಟಗಳಿಗೆ ಫೆಮಿನಿಸಮನ ಲೇಬಲ್ ಅಂಟಿಸಿ ಜಾರಿಕೊಳ್ಳುತ್ತಾರೆ. ಎಲ್ಲ ತರಹದ ದುಶ್ಚಟಗಳನ್ನು, ಅಶ್ಲೀಲತೆಗಳನ್ನು ಮಾಡಿ ದಾರಿ ತಪ್ಪಿ ಹಾಳಾಗುತ್ತಾರೆ. ಅಂಥವರಲ್ಲಿ ಈ ಕಥೆಯ ನಾಯಕಿ ಅನಿ ಕೂಡ ಒಬ್ಬಳು. ಹುಡುಗಿಯರು ಫೇಕ್ ಫೆಮಿನಿಸಮನಿಂದ ಹೇಗೆ ದಾರಿ ತಪ್ಪುತ್ತಾರೆ ಎಂಬುದಕ್ಕೆ ಈ ಕಥೆಯ ನಾಯಕಿ ಉತ್ತಮ ಉದಾಹರಣೆಯಾಗಿದ್ದಾಳೆ. ಹುಡುಗಿಯರ ಉನ್ನತಿಗಾಗಿ ಫೆಮಿನಿಸಮ್ ಬೇಕು. ಆದರೆ ಅದನ್ನು ದುರುಪಯೋಗಪಡಿಸಿಕೊಂಡರೆ ಅದರಿಂದಲೇ ಅವರು ಅವನತಿಯಾಗುತ್ತಾರೆ ಎಂಬುದನ್ನು ಈ ಕಥೆ ನಿರೂಪಿಸುತ್ತದೆ.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

11) 5 ಕಾಲೇಜ ಪ್ರೇಮ ಕಥೆಗಳು – ಸಣ್ಣ ಪ್ರೇಮ ಕಥೆಗಳ ಸಂಗ್ರಹ College Love Stories – Collection Small Love Stories

5 ಕಾಲೇಜ ಪ್ರೇಮ ಕಥೆಗಳು - ಸಣ್ಣ ಪ್ರೇಮ ಕಥೆಗಳ ಸಂಗ್ರಹ College Love Stories - Collection Small Love Stories

“5 ಕಾಲೇಜ ಪ್ರೇಮ ಕಥೆಗಳು” ಇದು ನನ್ನ ಕಾಲೇಜ್ ಜೇವನದಲ್ಲಿ ಸಂಭವಿಸಿದ ಸಣ್ಣ ಪ್ರೇಮಕಥೆಗಳ ಸಂಗ್ರಹವಾಗಿದೆ. ಪ್ರತಿಯೊಬ್ಬರೂ ಈ ಕಥೆಗಳೊಂದಿಗೆ ತಮ್ಮನ್ನು ತಾವು ರಿಲೇಟ್ ಮಾಡಿಕೊಳ್ಳಬಹುದು. ಈ ಪುಸ್ತಕವು 5 ಸಣ್ಣ ಪ್ರೇಮ ಕಥೆಗಳನ್ನು ಒಳಗೊಂಡಿದೆ ;

1) ಆಕರ್ಷಣೆಯ ಪ್ರೀತಿ – One Friendship Story

2) ರಾಣಿ ಮಹಲ್ – One Cute Love Story

3) ವೈದ್ಯರ ಧರ್ಮ ಸಂಕಟ – One Love Story with Death

4) ಹೇಳದೆ ಉಳಿದ ಪ್ರೀತಿ – Story of Unexpressed Love

5) ಸಂದೀಪನ ಸಂದೇಹ – Love Story of Doubtful Boy

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

12) ಮೋಸಗಾರ ರಾಜ – The King Cheater – Kannada Sad Love Stories

ಮೋಸಗಾರ ರಾಜ - The King Cheater - Kannada Sad Love Stories

“ಮೋಸಗಾರ ರಾಜ” ಇದು ರಾಜಕುಮಾರಿ ಅಮೃತಾ ಹಾಗೂ ಸಾಮಾನ್ಯ ಗುಮಾಸ್ತ ಅಗಸ್ತ್ಯನ ಕಾಲ್ಪನಿಕ ಪ್ರೇಮಕಥೆಯಾಗಿದೆ. ಅಮೃತಾಳ ತಂದೆ ಕ್ರೂರ ರಾಜ ಸುದರ್ಶನನೇ ಈ ಕಥೆಯ ಮೋಸಗಾರ ರಾಜ. ಅವನು ಕ್ರೂರ ರಾಜನಾಗಿದ್ದರೂ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಿದ್ದನು. ಆದರೆ ಕೊನೆಯಲ್ಲಿ ಆತ ಅಮೃತಾಳನ್ನು ಬರ್ಬರವಾಗಿ ಕೊಲ್ಲುತ್ತಾನೆ. ಆತ ಯಾಕೆ ಅವಳನ್ನು ಕೊಲ್ಲುತ್ತಾನೆ? ಹೇಗೆ ಕೊಲ್ಲುತ್ತಾನೆ? ಅಗಸ್ತ್ಯ ಏನಾಗುತ್ತಾನೆ? ಎಂಬುದೇ ಈ ಕಥೆಯ ಮುಖ್ಯ ಕಥಾವಸ್ತು. ಒಟ್ಟಿನಲ್ಲಿ ಇದು ಅಮೃತಾಳ ಪ್ರೀತಿ ಹಾಗೂ ಸುದರ್ಶನನ ದ್ವೇಷದ ರೋಚಕ ಕಥೆಯಾಗಿದೆ.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

13) ಮಾಜಿ ಪ್ರೇಯಸಿಗೊಂದು ಪತ್ರ – A letter to X lover in Kannada

ಮಾಜಿ ಪ್ರೇಯಸಿಗೊಂದು ಪತ್ರ - A letter to X lover in Kannada

“ಮಾಜಿ ಪ್ರೇಯಸಿಗೊಂದು ಪತ್ರ” ಇದೊಂದು ಅತ್ಯುತ್ತಮ ಲವ್ ಬ್ರೇಕಪ್ ಮೋಟಿವೇಷನ್ ಬುಕ್ ಆಗಿದೆ. ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಒಬ್ಬ ಸುಂದರ ಹಾಗೂ ಯಶಸ್ವಿ ಹುಡುಗನಿಂದ ದೂರಾದ ಒಬ್ಬಳು ಅನಲಕ್ಕಿ ಹುಡುಗಿಯನ್ನು ಈ ಪುಸ್ತಕವು ಮೋಟಿವೇಟ್ ಮಾಡುತ್ತದೆ. ಟೀನೇಜಲ್ಲಿ ತಮ್ಮ ಹೃದಯಕ್ಕೆ ಗಾಯ ಮಾಡಿಕೊಂಡ ಎಲ್ಲ ಹರೆಯದ ಹುಡುಗಿಯರಿಗೆ ಜೀವನದಲ್ಲಿ ಸಕ್ಸೆಸಫುಲ್ಲಾಗಲು ಈ ಪುಸ್ತಕ ಪ್ರೇರೇಪಿಸುತ್ತದೆ. ಲವ್ವಲ್ಲಿ ಫೇಲಾದಾಗ ಲೈಫಲ್ಲಿ ಪಾಸಾಗಲು ಈ ಪುಸ್ತಕ ಉಪದೇಶಿಸುತ್ತದೆ. ಮನಸ್ಸು ಮುರಿದ ಹುಡುಗ ಅಥವಾ ಹುಡುಗಿ ಒಮ್ಮೆ ಓದಲೇಬೇಕಾದ ಪುಸ್ತಕವಿದು…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

14) ಗುಪ್ತ ಪ್ರೇಯಸಿ : ಕನ್ನಡ ಗುಪ್ತ ಪ್ರೇಮಕಥೆ Kannada Sad Love Story

ಗುಪ್ತ ಪ್ರೇಯಸಿ : ಕನ್ನಡ ಗುಪ್ತ ಪ್ರೇಮಕಥೆ Kannada Sad Love Story

ಅವರಿಬ್ಬರದು ಇತಿಹಾಸದ ಪುಟ ಸೇರುವ ಸ್ನೇಹವಾಗಿತ್ತು. ಅವರಿಬ್ಬರು ಪ್ರೇಮಿಗಳಿಗಿಂತ ಹೆಚ್ಚು ಹತ್ತಿರವಾಗಿದ್ದರು. ಅವರಿಬ್ಬರ ಮಧ್ಯೆ ಯಾವುದೇ ಮುಚ್ಚುಮರೆಯಿರಲಿಲ್ಲ. ಅವನು ಅವಳನ್ನು ಬೆಸ್ಟ ಫ್ರೆಂಡ್ ಎಂದುಕೊಂಡಿದ್ದನು. ಅವನ ಮನಸ್ಸಲ್ಲಿ ಪ್ರೇಮ ಗೀಮವೇನು ಇರಲಿಲ್ಲ. ಆದರೆ ಅವಳ ಮನಸ್ಸಲ್ಲಿ ಅವನ ಮೇಲೆ ಪ್ರೇಮವಿರುತ್ತದೆ. ಆದರೆ ಆಕೆ ಅದನ್ನು ಅವನಿಗೆ ಹೇಳುವುದಿಲ್ಲ. ತರಾತುರಿಯಲ್ಲಿ ಅವಳ ಮದುವೆ ನಡೆದು ಹೋಗುತ್ತದೆ. ಮದುವೆಯಾದ ನಂತರ ಅವಳು ಅವನಿಗೆ ಮೆಸೇಜ್ ಮಾಡಿ “ನಾನು ನಿನ್ನನ್ನು ಪ್ರೀತಿಸುತ್ತಿದ್ದೆ…” ಎಂದೆಲ್ಲ ಹೇಳಿದಳು. ಇದಾದ ನಂತರ ಅವನ ಮನಸ್ಸಲ್ಲಿ ಇಲ್ಲದ ಪ್ರೀತಿ ಕಾಯಿಲೆ ಹುಟ್ಟಿಕೊಳ್ಳುತ್ತದೆ. ಮುಂದೆ ಅವರಿಬ್ಬರ ಜೀವನದಲ್ಲಿ ಏನಾಗುತ್ತದೆ ಎಂಬುದೇ ಈ “ಗುಪ್ತ ಪ್ರೇಯಸಿ” ಎಂಬ ಸಣ್ಣ ಪ್ರೇಮಕಥೆಯಾಗಿದೆ.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books