ಮುಚ್ಚಿಡಬೇಕಾದ 5 ವಿಷಯಗಳು – 5 Things to be kept secretly in Kannada

You are currently viewing ಮುಚ್ಚಿಡಬೇಕಾದ 5 ವಿಷಯಗಳು – 5 Things to be kept secretly in Kannada

ನಾವು ಸದಾಕಾಲ ಸಂತೋಷವಾಗಿರಬೇಕೆಂದರೆ ಕೆಲವು ವಿಷಯಗಳನ್ನು ಮುಚ್ಚಿಡಬೇಕು. ಯಾಕೆಂದರೆ ನಾವು ಅತಿಯಾಗಿ ಯಾರನ್ನು ನಂಬಿರುತ್ತೇವೇಯೋ ಅವರೇ ನಮಗೆ ನಂಬಿಕೆ ದ್ರೋಹ ಮಾಡುತ್ತಾರೆ. ಅಲ್ಲದೆ ವಿಶ್ವಾಸಘಾತುಕರು ನಮ್ಮ ಜೊತೆಯಲ್ಲೇ ಇರುತ್ತಾರೆ. ಕೆಲವು ಸಂಗತಿಗಳು ರಹಸ್ಯವಾಗಿದ್ದರೆ ಮಾತ್ರ ನಾವು ಸುಖವಾಗಿರಬಹುದು. ಗುಟ್ಟುಗಳು ಗುಟ್ಟಾಗೆ ಇರಬೇಕು. ಗುಟ್ಟು ರಟ್ಟಾದರೆ ನಮ್ಮ ಜುಟ್ಟು ಬೇರೆಯವರ ಕೈಗೆ ಹೋದಂತೆ…

ಮುಚ್ಚಿಡದಬೇಕಾದ ೫ ವಿಷಯಗಳು ಇಂತಿವೆ :

೧) ಸಾಚಾ ಅನ್ನಿಸಿಕೊಳ್ಳಲು ನೀವು ಮಾಡಿದ ಸಣ್ಣಪುಟ್ಟ ಸಹಾಯಗಳನ್ನು ಊರತುಂಬ ಡಂಗುರ ಸಾರುವ ಅವಶ್ಯಕತೆ ಏನಿಲ್ಲ. ನೀವು ಮಾಡಿದ ಸಣ್ಣ ಸಹಾಯವನ್ನು ಎಲ್ಲರಿಗೂ ಹೇಳಿ, ನಿಮ್ಮಿಂದ ಸಹಾಯ ಪಡೆದ ವ್ಯಕ್ತಿಯ ಮಾನಹರಣ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನೀವು ಒಂದು ಕೈಯಿಂದ ಕೊಟ್ಟಿರುವ ದಾನ ಮತ್ತೊಂದು ಕೈಗೆ ಗೊತ್ತಾಗದಿದ್ದರೆ ನಿಮ್ಮ ಘನತೆ ಮತ್ತಷ್ಟು ಹೆಚ್ಚಾಗುತ್ತದೆ. ನೀವು ಮಾಡಿದ ಸಹಾಯವನ್ನು ಎಲ್ಲರ ಮುಂದೆ ಬಡಾಯಿ ಕೊಚ್ಚಿಕೊಂಡಂತೆ ಹೇಳುವುದರಿಂದ ನಿಮ್ಮಲ್ಲಿ ಒಣಜಂಭ ತುಂಬಿಕೊಳ್ಳುತ್ತದೆ. ಈ ಒಣಜಂಭ ನಿಮ್ಮ ಅವನತಿಗೆ ನೇರ ಆಮಂತ್ರಣ ನೀಡುತ್ತದೆ. ಆದ್ದರಿಂದ ಮಾಡಿದ ಸಹಾಯ, ದಾನ ಮತ್ತು ತ್ಯಾಗಗಳನ್ನು ಗುಟ್ಟಾಗಿಡುವುದು ನಿಮಗೇ ಶ್ರೇಯಸ್ಸುಕರ…

ಮುಚ್ಚಿಡಬೇಕಾದ 5 ವಿಷಯಗಳು - 5 Things to be kept secretly in Kannada

೨) ನಿಮ್ಮ ಆಂತರಿಕ ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದರಿಂದ ನಿಮಗೆ ಸಿಗುವುದಾದರೂ ಏನಿದೆ? ನಿಮ್ಮ ಆಂತರಿಕ ಭಾವನೆಗಳನ್ನು ಮತ್ತು ನಂಬಿಕೆಗಳನ್ನು ನೀವು ಬೇರೆಯವರೊಂದಿಗೆ ಹಂಚಿಕೊಳ್ಳುವುದರಿಂದ ನೀವು ಅನಾವಶ್ಯಕವಾಗಿ ನಗೆಪಾಟಲಿಗೀಡಾಗುತ್ತೀರಿ. ನಿಮ್ಮ ಭಾವನೆಗಳಿಗೆ ಬೇರೆಯವರು ಬೆಲೆ ಕೊಡದಿದ್ದಾಗ ನೋವಾಗುವುದು ನಿಮಗೆ ತಾನೇ? ಬೇರೆ ವ್ಯಕ್ತಿ ಇಲ್ಲವೇ ವಸ್ತುವಿನ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಶೇರ್ ಮಾಡುವುದರಿಂದ ವಿನಾಕಾರಣ ವಾದ ಶುರುವಾಗುತ್ತದೆ. ಇದರಿಂದ ನಿಮ್ಮ ಸಮಯದ ಜೊತೆಗೆ ನಿಮ್ಮ ಮಾನಸಿಕ ನೆಮ್ಮದಿಯು ಹಾಳಾಗುತ್ತದೆ. ಬೇರೆಯವರ ಬಗ್ಗೆ ನಿಮಗಿರುವ ಭಾವನೆಗಳನ್ನು ಸೂಕ್ತವಲ್ಲದ ಜಾಗದಲ್ಲಿ ವ್ಯಕ್ತಪಡಿಸಿದಾಗ ನಿಮಗೆ ಶತ್ರುಗಳು ಹುಟ್ಟಿಕೊಳ್ಳುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಆದ್ದರಿಂದ ನಿಮ್ಮ ಭಾವನೆಗಳು ಮತ್ತು ನಂಬಿಕೆಗಳು ನಿಮ್ಮಲ್ಲೇ ಇದ್ದರೆ ಕ್ಷೇಮ…

೩) ನಿಮ್ಮ ಗುರಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಅವಶ್ಯಕತೆ ಏನಿಲ್ಲ. ನಿಮ್ಮ ಕನಸುಗಳನ್ನು ಕೇಳಿ ಹೊಟ್ಟೆ ಉದುರಿಕೊಂಡು ನಿಮ್ಮ ದಾರಿಗೆ ಕಲ್ಲಾಕುವ ಜನರಿಗೇನು ಕೊರತೆಯಿಲ್ಲ. ನಿಮ್ಮ ಕನಸುಗಳು ನನಸಾದಾಗ ಎಲ್ಲರೂ ಸಹಾಯ ಕೇಳಿ ಮನೆಮುಂದೆ ಬಂದು ಕ್ಯೂ ಹಚ್ಚಿ ನಿಲ್ಲುತ್ತಾರೆ. ಆದರೆ ನಿಮ್ಮ ಕನಸುಗಳು ಕನಸಾಗಿರುವಾಗ ಎಲ್ಲರೂ ನಿಮ್ಮನ್ನು ನೋಡಿ ನಗುತ್ತಾರೆ. ನಿಮ್ಮ ಗುರಿಗಳನ್ನು ಅನಾವಶ್ಯಕವಾಗಿ ಅಸೂಕ್ತ ವ್ಯಕ್ತಿಗಳೊಂದಿಗೆ ಶೇರ್ ಮಾಡುವುದರಿಂದ ನಿಮ್ಮನ್ನು ಜನ ಗೇಲಿ ಮಾಡುತ್ತಾರೆ. ಇದರಿಂದ ನಿಮ್ಮ ಮೇಲೆ ನಿಮಗಿರುವ ನಂಬಿಕೆ ಕಮ್ಮಿಯಾಗಬಹುದು. ಜನ ಗೇಲಿ ಮಾಡಲು ಪ್ರಾರಂಭಿಸಿದಾಗ ನೀವು ನಿಮ್ಮ ಗುರಿಯಿಂದ ವಿಚಲೀತರಾಗುತ್ತೀರಿ. ನಿಮ್ಮ ಪ್ಲ್ಯಾನಗಳನ್ನು ಶೇರ್ ಮಾಡಿ ಗೇಲಿ ಮಾಡಿಸಿಕೊಳ್ಳುವ ಬದಲು ನಿಮ್ಮ ಸಾಧನೆಯ ರಿಸಲ್ಟನ್ನು ತೋರಿಸಿ ಗೌರವಿಸಿಕೊಳ್ಳಿ….

೪) ನಿಮ್ಮ ಸಮಸ್ಯೆಗಳನ್ನು ಸುಮ್ಮನೆ ಎಲ್ಲರ ಜೊತೆ ಶೇರ್ ಮಾಡುವುದರಿಂದ ನಿಮಗೆ ಪರಿಹಾರ ಸಿಗಲ್ಲ. ನಿಮ್ಮ ಸಮಸ್ಯೆಗಳು ಜನರ ಕಿವಿಗೆ ಬಿದ್ದಾಗ ನಿಮ್ಮ ಘನತೆಗೆ, ಗೌರವಕ್ಕೆ ಕುತ್ತು ಬರುತ್ತದೆ. ನಿಮ್ಮ ಸಮಸ್ಯೆಗಳನ್ನು ಕೇಳಿ ಜನ ನಿಮಗೆ ಸಹಾಯ ಮಾಡುವ ಬದಲು ನಿಮ್ಮನ್ನು ಕೀಳಾಗಿ ಕಾಣುತ್ತಾರೆ. ನೀವು ಸಮಸ್ಯೆಗಳನ್ನು ಶೇರ್ ಮಾಡಿದಷ್ಟು ಜನರನ್ನು ಕಳೆದುಕೊಳ್ಳುತ್ತೀರಿ. ಸಮಸ್ಯೆಗಳನ್ನು ಶೇರ್ ಮಾಡುವುದರಿಂದ ನಿಮಗೆ ಸಿಂಪಥಿ ಸಿಗಬಹುದೇ ವಿನ: ಸೋಲುಷನ್ ಸಿಗಲ್ಲ. ನಿಮ್ಮ ಸಮಸ್ಯೆಗಳಿಗೆ ಫೇಸ್ಬುಕ್ನಲ್ಲಿ ನಿಮಗೆ ಲೈಕು ಕಮೆಂಟುಗಳು ಬರಬಹುದಷ್ಟೇ. ನಿಮ್ಮ ಮನೆಯ ಸಮಸ್ಯೆಗಳನ್ನು ಬೀದಿಗೆ ತಂದರೆ ಜನರಿಗೆ ಬಿಟ್ಟಿ ಮನರಂಜನೆ ಸಿಗುತ್ತದೆಯೇ ಹೊರತು ನಿಮಗೆ ಸಮಾಧಾನ ಸಿಗಲ್ಲ…

೫) ನಿಮ್ಮ ಪರ್ಸನಲ ಲೈಫಿಗೆ ಪಬ್ಲಿಸಿಟಿ ಕೊಡುವ ಅವಶ್ಯಕತೆ ಇಲ್ಲ. ನಿಮ್ಮ ಆಂತರಿಕ ಜೀವನವನ್ನು ಜಗತ್ತಿಗೆ ತೆರೆದಿಟ್ಟಷ್ಟು ನಿಮಗೆ ಅಪಾಯಗಳು ಹೆಚ್ಚು. ಎಲ್ಲರಿಗೂ ಹೇಳಲು ನಿಮ್ಮ ಖಾಸಗಿ ಜೀವನವೇನು ಧಾರಾವಾಹಿಯೇ? ನಿಮ್ಮ ಖಾಸಗಿ ವಿಚಾರಗಳನ್ನು ಯಾರೊಂದಿಗೂ ಶೇರ್ ಮಾಡದಿದ್ದರೆ ತುಂಬಾನೆ ಒಳ್ಳೆಯದು. ನಿಮ್ಮ ಸೆಕ್ಸ್ ಲೈಫನ್ನು ಮತ್ತು ನಿಮ್ಮ ಸಂಗಾತಿಯ ಸೌಂದರ್ಯವನ್ನು ಬೇರೆಯವರೊಂದಿಗೆ ಶೇರ್ ಮಾಡಿ ಕಿರುಕುಳವನ್ನು ಅನುಭವಿಸುವ ಪ್ರಮೇಯವೇಕೆ? ನಿಮ್ಮ ಪ್ರೇಯಸಿ ಇಲ್ಲ ಮಡದಿಯ ಗುಣಗಳನ್ನು ಅಥವಾ ವಿಕನೆಸಗಳನ್ನು ನಿಮ್ಮ ಗೆಳೆಯರೊಡನೆ ಶೇರ್ ಮಾಡಿ ಅವಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಗೀಳೆಕೆ? ನಿಮ್ಮ ಪರ್ಸನಲ್ ಲೈಫ್ ಪ್ರೈವೇಟ್ ಆಗಿದಷ್ಟು ನಿಮಗೆ ಕ್ಷೇಮ. ಬೆಡ್ರೂಮಿನ ರಹಸ್ಯಗಳು ಬೀದಿಗೆ ಬರದಿದ್ದರೆ ಚೆಂದ…

ಮುಚ್ಚಿಡಬೇಕಾದ 5 ವಿಷಯಗಳು - 5 Things to be kept secretly in Kannada

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books