10 ರೊಮ್ಯಾಂಟಿಕ್ ಮಾತುಗಳು – Love Quotes in Kannada – Kannada Romantic Kavanagalu

You are currently viewing 10 ರೊಮ್ಯಾಂಟಿಕ್ ಮಾತುಗಳು – Love Quotes in Kannada – Kannada Romantic Kavanagalu

೧) ಅವಳ ನಗುವಿನ ಸದ್ದಿಗೆ ನನ್ನೆದೆಯ ಬಡಿತ ಒಂದು ಸೆಕೆಂಡ್ ನಿಲ್ಲಬಹುದು. ಈ ಜಗತ್ತಿನಲ್ಲಿ ನನ್ನ ಪಾಲಿಗೆ ಅತ್ಯಂತ ಕಾಸ್ಟ್ಲಿಯಾಗಿರುವ ಏಕೈಕ ವಸ್ತುವೆಂದರೆ ಅವಳ ನಗು ಮಾತ್ರ. ಅವಳ ನಗುವಿನ ಮುಂದೆ ಎಲ್ಲವೂ ಶೂನ್ಯ…

೨) ಅವಳ ಹಾರಾಡುವ ಕೂದಲು, ಕೊಲ್ಲುವ ಕಣ್ಣೋಟ, ನಾಚುವ ನಗು, ಕಂಡು ಕಾಣದ ಮೂಗು ಬೊಟ್ಟು, ಉಯ್ಯಾಲೆಯಾಡುವ ಕಿವಿಯೋಲೆ, ಅರೆಬರೆ ಮುಚ್ಚಿದ ಎದೆ, ಬಳ್ಳಿಯಂತೆ ಬಳಕುವ ನಡು, ಮತ್ತೇರಿಸುವ ಮಾದಕ ಮೈಮಾಟಗಳು ಸಾಕು ನನ್ನ ನಿದ್ದೆ ನೆಗೆದು ಬೀಳಲು…

೩) ನನ್ನೆದೆಯ ಮೀಡಿತದಲ್ಲಾಗುವ ಏರುಪೇರುಗಳನ್ನು ಅಳೆದು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರುವುದು ಅವಳಿಗೆ ಮಾತ್ರ. ಏಕೆಂದರೆ ಪ್ರತಿದಿನ ರಾತ್ರಿ ನನ್ನೆದೆಯ ಮೇಲೆ ತಲೆಯಿಟ್ಟು ಮಲಗಿಕೊಳ್ಳುವ ಅವಕಾಶವಿರುವುದು ಅವಳಿಗಷ್ಟೇ…

೪) ಜಗತ್ತಿನಲ್ಲಿರುವ ಶಕ್ತಿಶಾಲಿ ಅಸ್ತ್ರಗಳಲ್ಲಿ ಅವಳ ಕಣ್ಣೋಟವು ಒಂದು…

10 ರೊಮ್ಯಾಂಟಿಕ್ ಮಾತುಗಳು - Love Quotes in Kannada - Kannada Romantic Kavanagalu

೫) ಅವಳು ವಾಸ್ತವಕ್ಕಿಂತ ನನ್ನ ಕನಸ್ಸಿನಲ್ಲಿಯೇ ಮತ್ತಷ್ಟು ಮುದ್ದಾಗಿ ಕಾಣಿಸುತ್ತಾಳೆ. ಅವಳು ಚೂಡಿದಾರ, ಲಂಗದಾವಣಿಗಿಂತ ಸೀರೆಯಲ್ಲೇ ಸೂಪರ್ ಸೆಕ್ಸಿಯಾಗಿ ನನ್ನ ಸೆಳೆಯುತ್ತಾಳೆ…

10 ರೊಮ್ಯಾಂಟಿಕ್ ಮಾತುಗಳು - Love Quotes in Kannada - Kannada Romantic Kavanagalu

೬) ಅವಳ ಮಡಿಲು ನನ್ನ ನೆಚ್ಚಿನ ತಲೆದಿಂಬಾಗಿದೆ. ನಾನು ನಿಶ್ಚಿ0ತೆಯಾಗಿ ಮಲಗಲು ಅವಳ ಮಡಿಲು ಸುರಕ್ಷಿತ ಸ್ಥಾನವಾಗಿದೆ. ಜಗತ್ತಿನಲ್ಲಿ ನಾನು ಕೊಂಡುಕೊಳ್ಳಲಾಗದ ಏಕೈಕ ಜಾಗವೆಂದರೆ ಅವಳ ಹೃದಯ ಮಾತ್ರ…

10 ರೊಮ್ಯಾಂಟಿಕ್ ಮಾತುಗಳು - Love Quotes in Kannada - Kannada Romantic Kavanagalu

೭) ನನ್ನ ಬದುಕಿನ ಪುಸ್ತಕದಲ್ಲಿ ಅವಳಿಗೊಂದು ವಿಶೇಷ ಅಧ್ಯಾಯವಿದೆ. ಆದರೆ ಅದನ್ನು ಓದುವ ಅಧಿಕಾರವಿರುವುದು ಅವಳಿಗೆ ಮಾತ್ರ…

10 ರೊಮ್ಯಾಂಟಿಕ್ ಮಾತುಗಳು - Love Quotes in Kannada - Kannada Romantic Kavanagalu

೮) ಚಂದ್ರನ ನಗು,
ನವಿಲಿನ ವಯ್ಯಾರ,
ಗಿಳಿಗಳ ಮಾತು,
ನದಿಗಳ ಚಂಚಲತೆ,
ಹೂಗಳ ಕೋಮಲತೆ,
ಮೋಹಿನಿಯ ಮಾದಕತೆಗಳೆಲ್ಲ ಸೇರಿ ಅವಳು ಸೃಷ್ಟಿಯಾಗಿದ್ದಾಳೆ.

10 ರೊಮ್ಯಾಂಟಿಕ್ ಮಾತುಗಳು - Love Quotes in Kannada - Kannada Romantic Kavanagalu

೯) ಅವಳ ಕಣ್ಣೀರಿಗೆ ನನ್ನನ್ನು ಮಂಜಿನಂತೆ ಕರಗಿಸುವ ಶಕ್ತಿಯಿದೆ. ಅವಳ ಮಹಾಮೌನಕ್ಕೆ ನನ್ನನ್ನು ನಿಶಬ್ದವಾಗಿ ಕೊಲ್ಲುವ ತಾಕತ್ತಿದೆ.

10 ರೊಮ್ಯಾಂಟಿಕ್ ಮಾತುಗಳು - Love Quotes in Kannada - Kannada Romantic Kavanagalu

೧೦) ನನ್ನ ಪ್ರೀತಿಯ ಪೋಲಿ ಮಾತುಗಳಿಗೆ, ಮುದ್ದಿನ ಅಪ್ಪುಗೆಗೆ, ಸಿಹಿಮುತ್ತಿನ ಮಳೆಗೆ ಅವಳ ಬೆನ್ನು ನಾಚಿ ನೀರಾಗಬಹುದು…

10 ರೊಮ್ಯಾಂಟಿಕ್ ಮಾತುಗಳು - Love Quotes in Kannada - Kannada Romantic Kavanagalu

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books