ಕನ್ನಡ ಜೋಕ್ಸ – Best Kannada Jokes – Jokes in Kannada – Kannada Jokes

You are currently viewing ಕನ್ನಡ ಜೋಕ್ಸ – Best Kannada Jokes – Jokes in Kannada – Kannada Jokes

ಹಾಯ್, ಜೀವನದಲ್ಲಿ ಬರೀ ದು:ಖವಿದೆ ಎಂದುಕೊಂಡರೆ ಬರೀ ದು:ಖವೇ ಎದುರಾಗುತ್ತದೆ. ಸ್ವಲ್ಪ ನಮ್ಮ ದೃಷ್ಟಿಕೋನವನ್ನು ಬದಲಾಯಿಸಿದರೆ ನಗುವಿನ ಜೊತೆಗೆ ಹೊಸಹೊಸ ಅವಕಾಶಗಳು ಸಹ ಸಿಗುತ್ತವೆ. ಒಂದೇ ಜೋಕಿಗೆ ನಾವು ಪದೇಪದೇ ನಗಲ್ಲವೆಂದರೆ ಒಂದೇ ನೋವಿಗೆ ಯಾಕೆ ಪದೇಪದೇ ಅಳಬೇಕು? ಏನಾದರೂ ನಗ್ತಾಯಿರಿ. ನಗುನಗುತಾ ನಲಿ ಏನೇ ಆಗಲಿ. ಇಲ್ಲಿರುವ ಯಾವ ಜೋಕಗಳು ಸಹ ನನಗಾಗಲಿ ಅಥವಾ ಬೇರೆ ಯಾರಿಗಾಗಲಿ ಸೇರಿದ್ದಲ್ಲ. ಎಲ್ಲವೂ ಮೊಬೈಲನಲ್ಲಿ ವೈರಲಾದ ಜೋಕ್ಸಗಳಾಗಿವೆ‌. ಎರಡು ವರ್ಷದ ಹಿಂದೆ ನಾನು ಕಾಲೇಜಿನಲ್ಲಿರುವಾಗ ನನಗೆ ಮೊಬೈಲನಲ್ಲಿ ಬಂದ ಜೋಕ್ಸಗಳನ್ನೇ ನಾನಿಲ್ಲಿ ಶೇರ್ ಮಾಡುತ್ತಿರುವೆ.‌ ಎಲ್ಲವೂ ಗೆಳೆಯರು ಕಳುಹಿಸಿದ ಮೆಸೆಜಗಳಾಗಿವೆ. ಎಲ್ಲರ ಗೆಳೆಯರು ನಾಟಿಯಾಗಿರುತ್ತಾರೆ. ನಾಟಿ ಜೋಕ್ಸ ಬಂದರೆ ನಕ್ಕು ನೆಗ್ಲೆಕ್ಟ ಮಾಡಿ‌ ಅಷ್ಟೇ.‌ ಹರ ಏಕ ಫ್ರೆಂಡ್ ಕಮಿನಾ ಹೊತಾ ಹೈ. ಜಸ್ಟ ಸ್ಮೈಲ್ & ಎಂಜಾಯ್…‌

ಕನ್ನಡ ಜೋಕ್ಸ – Kannada Jokes – Jokes in Kannada

1) ಟೀಚರ್ : ಯಾಕೋ ಲೇಟಾಗಿ ಬಂದೇ?

ಗುಂಡಾ : ದಾರಿಯಲ್ಲಿ ಒಂದು ಬೋರ್ಡ್ ಇತ್ತು ಮೇಡಂ, ಅದಕ್ಕೆ ಲೇಟಾಗಿ ಬಂದೆ.

ಟೀಚರ್ : ಏನ ಅಂಥಾ ಮಹಾನ್‌ ಬೋರ್ಡಿತ್ತು?

ಗುಂಡಾ : “ಮುಂದೆ ಶಾಲೆಯಿದೆ, ದಯವಿಟ್ಟು ನಿಧಾನವಾಗಿ ಚಲಿಸಿ” ಅಂತಾ ಇತ್ತು ಮೇಡಂ.

**********************************

2) ಗಂಡ ಹೆಂಡತಿ ಒಂದೇ ಸ್ಕೂಲಲ್ಲಿ ಟೀಚರಾಗಿ ಕೆಲಸ ಮಾಡುತ್ತಿದ್ದರು. ಟೀಚರ ಪಾಠ ಮಾಡುವಾಗ ಅವರ ಗಂಡ ಬಂದರು.

ಸರ್ : (ಕ್ಲಾಸಲ್ಲಿ ಬಂದು ಮೇಡಂಗೆ ಕಿಸ್ ಮಾಡಿ) ನೋಡಿ ಮಕ್ಕಳೇ ಕಿಸ್ ಕೊಟ್ರೆ ಏಡ್ಸ ಹರಡುವುದಿಲ್ಲ.

ಮಕ್ಕಳು : ಹೌದಾ ಸರ್? ಹಾಗಾದರೆ ಈಗ ಏಡ್ಸ ಹೇಗೆ ಹರಡುತ್ತೆ ಅಂತಾ ತೋರಿಸಿ…

**********************************

3) ಜೀವನವೆಂಬ ಕ್ರಿಕೆಟನಲ್ಲಿ, ಪ್ರೀತಿಯೆಂಬ ಬಾಲ್ ಮಾಡಿ, ಹುಡ್ಗಿಯೆಂಬ ವಿಕೆಟ್ ಪಡೆದೆ. ಆದ್ರೆ ಅವರಪ್ಪ ಅಂಪಾಯರ ಆಗಿ ನೋ ಬಾಲ್ ಎಂದೇಳಿ ನಾಟ ಔಟ ಕೊಟ್ಟ. ಅವತ್ತಿನಿಂದ ನಾನು ಪ್ರೀತಿಯೆಂಬ ಆಟವನ್ನೇ ಬಿಟ್ಟೆ…

**********************************

4) ಆಸ್ಪತ್ರೆಯಲ್ಲಿ ಆಗ ತಾನೇ ಹುಟ್ಟಿದ ಮಗು,

ಮಗು : ಡಾಕ್ಟ್ರೇ ಸ್ವಲ್ಪ ಮೊಬೈಲ ಕೊಡ್ತಿರಾ?

ಡಾಕ್ಟರ್ : ಯಾಕ ಪುಟ್ಟ?

ಮಗು : ಏನಿಲ್ಲ ಡಾಕ್ಟ್ರೆ ನಾನು ಸೇಫಾಗಿ ಭೂಮಿಗೆ ಬಂದಿರುವೆ ಅಂತಾ ಸ್ಟೇಟಸ ಅಪಡೇಟ ಮಾಡಬೇಕಾಗಿದೆ, ಅರ್ಜೆಂಟಾಗಿ…‌

**********************************

5) ರಾಮ : ಹುಡ್ಗೀರ್ನಾ ಎಷ್ಟು ಪ್ರೀತಿಸಬೇಕು?

ಭೀಮ : ನಾವು ಅಕ್ಕನ ಪ್ರೀತಿಸೊದನ್ನ ನೋಡಿ ಅವಳ ತಂಗಿ ನಮ್ಮ ಜೊತೆ ಓಡಿ ಬರೋಕೆ ತಯಾರಾಗಬೇಕು, ಆ ತರ ಪ್ರೀತಿಸಬೇಕು…

**********************************

6) ಕರ್ನಾಟಕದಲ್ಲಿ ಸುಮಾರು 14 ಮುಖ್ಯ ನದಿಗಳು, 354 ಜಲಾಶಯಗಳು, 9568 ಕೆರೆಗಳು, 73,059 ಬಾವಿಗಳು, 6,89,437 ಬೋರವೆಲಗಳಿವೆ. ಪ್ಲೀಸ್ ಹಠ ಮಾಡಬೇಡ ಇವತ್ತಾದ್ರೂ ಸ್ನಾನ ಮಾಡಿ ಕಾಲೇಜಗೆ ಬಾ…

**********************************

7) ದೇಶ ಬೇಕು ಆದ್ರೆ ದ್ವೇಷ ಬೇಡ (ಸ್ವಾಮಿ ವಿವೇಕಾನಂದ)

ಹುಡ್ಗಿ ಬೇಕು ಆದ್ರೆ ಮದ್ವೆ ಬೇಡ (ಸ್ವಾಮಿ ನಿತ್ಯಾನಂದ)

ಮದ್ವೆ ಬೇಕು ಆದ್ರೆ ಮಗ ಬೇಡ (ಜೊಕುಮಾರ ಸ್ವಾಮಿ)

ನರ್ಸ ಬೇಕು ಆದ್ರೆ ಡಾಕ್ಟರ್ ಬೇಡ (ತೇಣುಕಾಚಾರ್ಯ)

ಕಟ್ಕೊಂಡವಳು ಬೇಗನೆ ಸಾಯಲಿ, ಇಟ್ಕೊಂಡವಳು ಮಂತ್ರಿ ಆಗಲಿ (ಯಲ್ರಪ್ಪ)

**********************************

8) ರೈಟರ – Poem is my life

ಲವರ್ – Love is my life

ಟೀಚರ್ – Students are my life

ಸ್ಟೂಡೆಂಟ್ಸ – ನಿಮ್ಮ ಮಗಳು ನಮ್ಮ‌ ಲೈಫ್…

**********************************

9) ಆಧುನಿಕ ಹುಡುಗಿಯರು

1980 – ಲವ್ ಮಾಡು ಆದ್ರೆ ಟಚ್ ಮಾಡಬೇಡ,

1990 – ಟಚ್ ಮಾಡು ಆದ್ರೆ ಕಿಸ್ ಮಾಡಬೇಡ,

2000 – ಕಿಸ್ ಮಾಡು ಆದ್ರೆ ಸೆಕ್ಸ ಮಾಡಬೇಡ

2010 – ಸೆಕ್ಸ ಮಾಡು ಆದ್ರೆ ಯಾರಿಗೂ ಹೇಳಬೇಡ

2020 – ಏನಾದ್ರೂ ಮಾಡು ಆದರೆ ವಿಡಿಯೋ ಮಾಡ್ಕೋಬೇಡ…‌

**********************************

10) ಪ್ರೇಯಸಿ ಇರದಿದ್ದರೆ ಆಗುವ ಪ್ರಯೋಜನಗಳು;

* ಸಮಯದ ಉಳಿತಾಯ

* ಕಣ್ತುಂಬ ನಿದ್ದೆ

* ಕಡಿಮೆ ಮಿಸಕಾಲ್

* ಚಿಂತೆರಹಿತ ಜೀವನ

* ತುಂಬಿದ ಜೇಬು…

**********************************

11) ಗುಂಡ : ನಿಜವಾದ ಹಳ್ಳಿ ಗುಗ್ಗುಗಳ್ಯಾರು?

ಸರ್ದಾರಜಿ : ಓದಿದ್ರೂ ಹೆಬ್ಬೆಟ್ಟು ಬಳಸೋರು

ಗುಂಡ : ಉದಾಹರಣೆ ಕೊಡು

ಸರ್ದಾರಜಿ : ಮೊಬೈಲ್ ಯುಜ ಮಾಡೋ ಪ್ರತಿಯೊಬ್ಬರೂ ಗುಗ್ಗುಗಳೇ, ನಗಬೇಡ ನಿನ್ನೂ ಸೇರಿ ಹೇಳಿರೊದು…

**********************************

12) ಒಂದಿನ ಬೆಳಿಗ್ಗೆ,

ಸರ್ದಾರಜಿ : ರಾತ್ರಿಯೆಲ್ಲ ಚಾರ್ಜಗೆ ಹಾಕಿದ್ದೆ ಚಾರ್ಜೆ ಆಗಿಲ್ಲ ಕಣೇ,

ಹೆಂಡ್ತಿ : ರಾತ್ರಿಯೆಲ್ಲ ಚಾರ್ಜಗೆ ಹಾಕಿದ್ರೆ ಬ್ಯಾಟರಿ ಸುಡಲ್ವಾ?

ಸರ್ದಾರಜಿ : ದಡ್ಡಿ ಅದ್ಕೆ ನಾನು ಬ್ಯಾಟರಿ ತೆಗೆದೇ ಮೊಬೈಲ್ ಚಾರ್ಜಗೆ ಹಾಕಿದ್ದೆ…

**********************************

13) ಕೆಲವದರ ನಿಜವಾದ ಲಾಂಗ ಫಾರ್ಮಗಳು ;

PUC : ಪಕ್ಕಾ ಉಡಾಳರ ಕಂಪನಿ

LLB : ಲಾರ್ಡ ಆಫ್ ಲಾಸ್ಟ ಬೆಂಚ್

MSc : ಮಾಸ್ಟರ್ ಆಫ್ ಸೈಂಟಿಫಿಕ್ ಕನಫ್ಯೂಜನ

H1N1 : ಹಾಲಪ್ಪನು ಒಂದೇ, ನಿತ್ಯಾನಂದನೂ ಒಂದೇ

VIP : ವಿಚಿತ್ರ ಇಂಡಿಯನ್ ಪ್ರಾಣಿ

PhD : ಪಕ್ಕಾ ಹಸಿ ದಡ್ಡ

MATHS : ಮೆಂಟಲ ಅಟ್ಯಾಕ ಟು ಹೆಲ್ದಿ ಸ್ಟೂಡೆಂಟ್ಸ

**********************************

14) ಟೀಚರ್ : ಯಾಕೋ ಗುಂಡ ಇನ್ನೊಬ್ಬರು ಬರೆದ ಆ್ಯನ್ಸರನಾ ನೋಡಿ ಹೇಳ್ತಿಯಾ? ನಾಚ್ಕೆ ಆಗಲ್ವಾ?

ರಾಜಾ : ನೋ ಮಿಸ್, ಯಾರೋ ಬರೆದ ಬುಕ್ ನೋಡಿ ನೀವು ಪ್ರಶ್ನೆ ಕೇಳ್ತಿರಲ್ಲ ನಿಮಗೆ ನಾಚ್ಕೆ ಆಗಲ್ವಾ ಮಿಸ್?

**********************************

15) ಹೆಂಡ್ತಿ : ರೀ ನೋಡ್ರಿ ನಮ್ಮ ಮಗ ತುಂಬಾನೆ ಹಣ ಕದ್ದು ಖರ್ಚು ಮಾಡ್ತಿದಾನೆ‌

ಗಂಡ : ಹಣವನ್ನು ಅವನಿಗೆ ಸಿಗದಂತೆ ಬಚ್ಚಿಡು

ಹೆಂಡ್ತಿ : ಇಲ್ಲಾ ರೀ ಎಲ್ಲಿ ಇಟ್ಟರು ಸಹ ಆತ ಕದಿಯುತ್ತಿದ್ದಾನೆ

ಸರ್ದಾರಜಿ : ಬಡ್ಡಿಮಗನ ಬುಕ್ಕಲ್ಲಿ ಬಚ್ಚಿಡು, ಮುಂದಿನ ಎಗ್ಸಾಮ ತನಕ ನೋಡಲ್ಲ ಕಳ್ಳನನ ಮಗ…‌

**********************************

16) ಹೀಗೊಂದು ಲವ್ ಸ್ಟೋರಿ

ಅವಳು ಕುಂಟೆಬಿಲ್ಲೆ ಆಟವಾಡುವಾಗ ಇಟ್ಟ ಹೆಜ್ಜೆ ಕಡೆಗೆಲ್ಲ ನಾನು ಮುತ್ತು ಕೊಡ್ತಾಯಿದ್ದೆ.‌ ಆದ್ರೆ ಆ ಹುಚ್ಚು ಹುಡುಗಿಗೆ ನನ್ನ ಪ್ರೀತಿ ಅರ್ಥವಾಗಲಿಲ್ಲ. ಅವಳು ನನ್ನ ಅಮ್ಮನ ಬಳಿ ಹೋಗಿ ಹೀಗಂತಾ ಹೇಳಿದಳು. “ಆಂಟಿ ನಿಮ್ಮ ಮುದ್ದಿನ ಮಗ ಶಾಲೆಯಲ್ಲಿ ನಾವು ಕುಂಟೆಬಿಲ್ಲೆಯಾಡುವ ಅಂಗಳದಲ್ಲೇ ಮಣ್ಣು ತಿಂತಾನೆ ಸ್ವಲ್ಪ ಬುದ್ಧಿವಾದ ಹೇಳಿ…”

**********************************

17) ನರಕದಲ್ಲಿ ಸ್ವಲ್ಪ ಜನ ಎಂಜಾಯ ಮಾಡ್ತಾಯಿದ್ದರು.‌ಆಗ

ಯಮ : ಯಾರೋ ಇವರೆಲ್ಲ? ನರಕದಲ್ಲಿ ಇಷ್ಟೊಂದು ಸಂತೋಷವಾಗಿದ್ದಾರೆ.

ಚಿತ್ರಗುಪ್ತ : ಇವರು ಇಂಡಿಯನ್ಸ ಬಾಸ್, ಎಲ್ಲಾದರೂ ಹೇಗಾದರೂ ಹ್ಯಾಪಿಯಾಗಿರತಾರೆ…

**********************************

18) ಹುಡುಗಿಯರ ಹೆಸರನ್ನು ಶಾರ್ಟಾಗಿ ಕರೆಯುವ ಹೊಸ ಚಾಳಿ

ವಿನಯಾ – ವಿನಯ

ಮಂದಾಕಿನಿ – ಮಂದಿ

ಪೂಜಾ – ಪೂಜಿ

ರಾಜೇಶ್ವರಿ – ರಾಜಿ

ರೂಪಾ – ರೂಪಿ

ಶಶಿಕಲಾ – ಶಶಿ

ಅಮ್ರತಾ – ಅಮ್ಮು

ಪ್ರಿಯಂಕಾ – ಪಿಂಕಿ

ಅನೀತಾ – ಅನಿ

**********************************

19) ರಾಣಿ : ಉಗ್ರ ಕಸಬಗೆ ಸೊಳ್ಳೆ ಕಚ್ಚಿ ಡೆಂಗ್ಯೂ ಜ್ವರ ಬಂದಿದೆ

ರಾಜಾ : ದೇಶಪ್ರೇಮಿ ಸೊಳ್ಳೆಗಳಿಗೆ ಜಯವಾಗಲಿ…

**********************************

20) ಗುಂಡನ ಪ್ರೇಮಗೀತೆ

ಪ್ರಿಯೆ ಕತ್ತಲಲ್ಲಿ ನಿನ್ನನ್ನು ಹುಣ್ಣಿಮೆಯ ಬೆಳದಿಂಗಳ ಚಂದ್ರನಿಗೆ ಹೋಲಿಸಬೇಕೆಂದಿದ್ದೆ. ಆದರೆ ಬೆಳಕಿನಲ್ಲಿ ನಿನ್ನನ್ನು ಕಂಡಾಗ ನಿನ್ನ ಮುಖಕ್ಕಿಂತ ಅಮವಾಸ್ಯೆಯ ಕತ್ತಲು ವಾಸಿಯೆಂದು ಸುಮ್ಮನಾದೆ‌.

**********************************

21) ಹುಡುಗರ ಪಾಡುಪಾಡು

ಓದಬೇಕೆಂಬ ಆಸೆಯಿಂದ ಬೆಳಿಗ್ಗೆ ಬೇಗನೆ ಎದ್ದೆ, ಆದ್ರೆ ಆಸೆಯೇ ದು:ಖಕ್ಕೆ ಮೂಲವೆಂದು ಮತ್ತೆ ಹಾಸಿಗೆಯ ಮೇಲೆ ಬಿದ್ದೆ…

**********************************

22) ಚಟಗಾರರ ಸಿನೆಮಾ

ಸಿಗರೇಟ ಅರ್ಪಿಸುವ, ಮ್ಯಾಚಬಾಕ್ಸ ನಿರ್ದೇಶನದ, ಎಸ್ ಜಿ ಸ್ಟಾರ ನಟಿಸಿರುವ, ಹೊಗೆಯಲ್ಲಿ ಚಿತ್ರಿಕರಣವಾದ, ಹೊಚ್ಚ ಹೊಸ ಸಿನಿಮಾ “ಕ್ಯಾನ್ಸರ್‌”

**********************************

23) ಹುಡುಗಿ : ಡಾರ್ಲಿಂಗ್ ಪರ್ಸನಲ್ ಅಂದರೆ ಏನು? ಸೆಕ್ರೆಟ ಅಂದರೆ ಏನು?

ಹುಡುಗ : ನೀನು ನನ್ನ ಲವರ ಇದು ಪರ್ಸನಲ್. ನಿನ್ನ ಸಿಸ್ಟರ ಕೂಡ ನನ್ನ ಲವರ, ಇದು ಸೆಕ್ರೆಟ

**********************************

24) ಒಂದಿನ ಚನ್ನಪ್ಪ ಡ್ರೈವಿಂಗ್ ಲೈಸೆನ್ಸ ತೆಗೆಸಲು RTO ಆಫೀಸಗೆ ಹೋಗಿದ್ದ. ಆಗ

RTO : ನೀನು 180 KM/H ವೇಗದಲ್ಲಿ ಹೋಗುವಾಗ ಮುಂದೆ ಎಮ್ಮೆ ಬಂದ್ರೆ ಏನ ಮಾಡ್ತಿಯಾ?

ಚನ್ನಪ್ಪ : ಹಾರ್ನ ಮಾಡ್ತೀನಿ ಸರ್…

**********************************

25) ಒಂದಿನ ಇಂಜಿನಿಯರ ಹಾಗೂ ಅವನ ಪುಟ್ಟ ಮಗಳು ಮಾತಾಡುತ್ತಾ ಟಿಫಿನ್ ಮಾಡ್ತಾಯಿದ್ರು, ಆಗ

ಮಗಳು : ಪಪ್ಪಾ ಈ ರಜೆ ಮುಗಿಯೋವಷ್ಟರಲ್ಲಿ ನಂಜೊತೆ ಸ್ಕೂಲಿಗೆ ಹೋಗೊಕೆ ಒಬ್ಬ ತಮ್ಮ ಬೇಕು

ಇಂಜಿನಿಯರ್ : ಪುಟ್ಟ ಈ ಕೆಲ್ಸಕ್ಕೆ 9 ತಿಂಗಳು ಬೇಕು, 2 ತಿಂಗಳಲ್ಲಿ ಆಗಲ್ಲ.

ಮಗಳು : ಪಪ್ಪಾ ಹಂಗಾದ್ರೆ ಮೂರ್ನಾಲ್ಕು ಜನರಿಗೆ ಕಂಟ್ರ್ಯಾಕ್ಟ ಕೊಟ್ಟ ಬಿಡು ಬೇಗನೆ ಮಾಡಲಿ…

**********************************

25) SMS ಮಾಡುವುದರಿಂದಾಗುವ ಲಾಭಗಳು

* ಮೊಬೈಲಗೆ ತುಕ್ಕು ಹಿಡಿಯಲ್ಲ

* ಟೈಂ ಪಾಸಾಗುತ್ತೆ

* ಓದೋರು ಹ್ಯಾಪಿಯಾಗಿರುತ್ತಾರೆ

* ಟಚ್ ಇರುತ್ತೆ

* ಸೋಮಾರಿತನ ಹೋಗುತ್ತೆ

* ABCD ಮರೆತು ಹೋಗಲ್ಲ

* ಕ್ರಿಯೇಟಿವ್ ಮೈಂಡ ಬೆಳೆಯುತ್ತೆ

* ನಿಮ್ಮನ್ನು ಯಾರು ಕಂಜೂಸ ಅನ್ನಲ್ಲ

**********************************

26) ಅಮ್ಮ : ಲೋ ಮಗನೆ ರಾತ್ರಿ ಹತ್ತಾಯ್ತು, ಇನ್ನೂ ಏನ ಮಾಡ್ತಿದಿಯಾ?

ರಾಜಾ : ಏನಿಲ್ಲ ಅಮ್ಮ ಓದ್ತಾ ಇದೀನಿ

ಅಮ್ಮ : ಗುಡ್ ಪುಟ್ಟ ಏನ ಓದ್ತಿದಿಯಾ?

ರಾಜಾ : (ಮನಸ್ಸಲ್ಲಿ) ನಿನ ಸೊಸೆ‌‌ ಕಳಿಸಿರೋ ಮೆಸೆಜ…

**********************************

27) ಹುಡುಗ : ಮಸ್ತ ಡ್ರೆಸ್ ಹಾಕಿಯಲ್ಲ?

ಹುಡುಗಿ : ಥ್ಯಾಂಕ್ಸ ಹ್ಯಾಂಡಸಮ್

ಹುಡುಗ : ಲಿಪಸ್ಟೀಕ್ ಭಾರೀ ಇದೆಯಲ್ಲ

ಹುಡುಗಿ : ಥ್ಯಾಂಕ್ಸ ಸ್ಮಾರ್ಟ

ಹುಡುಗ : ಮೇಕಪ ಅಂತು ಸೂಪರ

ಹುಡುಗಿ : ಥ್ಯಾಂಕ್ಸ ಬ್ರದರ

ಹುಡುಗ : ಏನ ಬಿಡ್ವಾ ತಂಗಿ ಚೆಂದ ಕಾಣಿಸವಲ್ಲಿ…!!

**********************************

28) ಆಟೋನಲ್ಲಿ ಒಂದ ಹುಡುಗ ಹುಡುಗಿ ಹೋಗ್ತಾಯಿದ್ರು. ಆಟೋ ಸ್ಟಾರ್ಟಾದಾಗ ಅವರಿಬ್ಬರು ರೋಮ್ಯಾನ್ಸ ಮಾಡೋಕೆ ಶುರು ಮಾಡ್ತಾರೆ. ಆಟೋ ಡ್ರೈವರ ಮಿರರನಲ್ಲಿ ಅವರಿಬ್ಬರ ರೋಮ್ಯಾನ್ಸ ನೋಡ್ತಾ ಆಟೋ ಚಲಾಯಿಸುತ್ತಿರುತ್ತಾನೆ. ಮುಂದೆ ಚಿಕ್ಕ ಆ್ಯಕ್ಸಿಡೆಂಟಾಗುತ್ತೆ. ಆಗ ಹುಡುಗಿ ಕೇಳ್ತಾಳೆ “ಏನಾಯ್ತು?” ಅಂತ. ಆಗ ಡ್ರೈವರ್ ಹೇಳ್ತಾನೆ “ಏನಿಲ್ಲ ಮೇಡಂ ಟೈಟಾನಿಕ್ ಹಡಗು ಯಾಕೆ ಮುಳುಗಿತು ಅಂತಾ ಗೊತ್ತಾಯಿತು ಅಷ್ಟೇ ಮೇಡಂ….”.

**********************************

29) SSLCಯಲ್ಲಿ ಒಬ್ಬ ಹುಡುಗ ಫಸ್ಟ Rank ಬಂದಿದ್ದ. ಆಗ ಜನ ಹೇಳಿದ್ರು “ಅವನು ನಿಜವಾಗಿಯೂ ತುಂಬಾ ಪ್ರತಿಭಾವಂತ” ಅಂತಾ. ಆದ್ರೆ ಅದೇ ಹುಡುಗ PUCಯಲ್ಲಿ ಫೇಲಾದಾಗ ಗೊತ್ತಾಯಿತು ಅದಕ್ಕೆ ಕಾರಣ “ಪ್ರತಿಭಾ” ಅಂತಾ…

**********************************

30) ಒಂದಿನ ಯಮ ಧರ್ಮರಾಜ ನರಕದಲ್ಲಿ ಮೂವರು ಹುಡುಗಿಯರನ್ನು ವಿಚಾರಣೆ ಮಾಡುತ್ತಿದ್ದನು. ಆಗ

ಯಮಧರ್ಮ : ನೀವು ಯಾವಾಗಲಾದರೂ ಗಂಡಸರ ಜೊತೆಗೆ ರಾತ್ರಿ ಮಲಗಿದ್ದೀರಾ?

ಹುಡುಗಿ 1 : ಮದುವೆಗೂ ಮುಂಚೆ ಒಂದ್ಸಲ ಲವರ ಜೊತೆಗೆ ಮಲಗಿದ್ದೆ

ಯಮಧರ್ಮ : ನೀನು ನರಕಕ್ಕೆ ಹೋಗು

ಹುಡುಗಿ 2 : ಮದುವೆಯಾದ ನಂತರ ಗಂಡನ ಜೊತೆಗೆ ಮಲಗತಿದ್ದೆ ದಿನಾ.

ಯಮಧರ್ಮ : ನೀನು ಸ್ವರ್ಗಕ್ಕೆ ಹೋಗು

ಹುಡುಗಿ 3 : ನಾನಿನ್ನೂ ಯಾರ ಜೊತೆಗೂ ಮಲಗಿಲ್ಲ.

ಯಮಧರ್ಮ : ವ್ಹೆರಿ ಗುಡ್, ನೀನು ನನ್ನ ಬೆಡರೂಮಿಗೆ ಹೋಗು, ನಾನು ಐದೇ ನಿಮಿಷದಲ್ಲಿ ರೆಡಿಯಾಗಿ ಬರ್ತಿನಿ…

**********************************

31) ಹುಡುಗಿ : ಸಾಕು ನಿಲ್ಲಿಸು ರಾತ್ರಿ 12 ಗಂಟೆಯಿಂದ ಮಾಡ್ತೀದಿಯಾ ಬೆಳಗಾಯ್ತು ಸುಸ್ತಾಗಿಲ್ವಾ?

ಹುಡುಗ : ಅದೇನ ಮಹಾ ಇನ್ಮುಂದೆ ನೋಡು ಹಗಲು ರಾತ್ರಿಯೆನ್ನದೆ ಮಾಡ್ತೀನಿ ಯಾಕಂದ್ರೆ ಮೆಸೆಜ ಫ್ರೀ ಪ್ಯಾಕ ಆಫರ ಬಂದಿದೆ…‌

**********************************

32) ಕಂಡಕ್ಟರ್ : ಏನಪ್ಪ ಯಾವಾಗ್ಲೂ ಡೋರಲ್ಲೇ ನಿಂತ್ಕೊತಿಯಲ್ಲ ನಿಮ್ಮಪ್ಪ ಏನ ವಾಚಮನ್ನಾ?

ಹುಡುಗ : ಯಾಕ ಸರ್? ನೀವು ಯಾವಾಗಲೂ ಚಿಲ್ರೆ ಕೇಳ್ತಿರಲ್ಲ ನಿಮ್ಮಪ್ಪ ಏನ ಬೆಗ್ಗರಾ?

**********************************

33) ಹುಡುಗ : ಹಾಯ್

ಹುಡುಗಿ : ಹಲೋ

ಹುಡುಗ : ಎಲ್ಲಿದಿಯಾ?

ಹುಡುಗಿ : ನಾನೀಗ ಅಪ್ಪನ ಜೊತೆಗೆ BMW ಕಾರಲ್ಲಿ ಶಾಪಿಂಗಗೆ ಬಂದಿದಿನಿ. ನಿನೇಲ್ಲಿದಿಯಾ?

ಹುಡುಗ : ನಾನು KSRTC ಬಸ್ಸಲ್ಲಿ ನಿನ್ನ ಹಿಂದೆನೇ ಕುಂತಿದೀನಿ…

**********************************

34) ಕಾನಸ್ಟೇಬಲ : ಸರ್ ನಿನ್ನೆ ಜೈಲಲ್ಲಿ ಖೈದಿಗಳು ರಾಮಾಯಣ ನಾಟಕ ಮಾಡ್ತಿದ್ರು.

ಜೈಲರ : ಅದಕ್ಕೇನಿಗ?

ಕಾನ್ಸಸ್ಟೇಬಲ : ಹನುಮಂತ ಸಂಜೀವಿನಿ ತರಲು ಕಂಪೌಂಡ ಹಾರಿ ಹೋದವನು ಇನ್ನು ಬಂದಿಲ್ಲ‌…

**********************************

35) ಹುಡುಗಿ : ನನ್ನ ಹ್ರದಯ ಮೊಬೈಲ್‌ ಇದ್ದ ಹಾಗೆ, ಅದರಲ್ಲಿ ನೀನೇ ಸಿಮಕಾರ್ಡ

ಹುಡುಗ : ಹೋ ಹೌದಾ ಚಿನ್ನಾ?

ಹುಡುಗಿ : ಜಾಸ್ತಿ ಖುಷಿ ಪಡಬೇಡ, ಒಳ್ಳೇ ಆಫರ್ ಸಿಕ್ಕರೆ ಸಿಮ ಕಾರ್ಡ ಚೆಂಜ ಮಾಡ್ತೀನಿ…

**********************************

36) ಅಮ್ಮ : ಮಗನೇ ರಾತ್ರಿಯೆಲ್ಲ ಒಬ್ಬನೇ ಇರ್ತಿಯಲ್ಲ, ಭೂತಾಗೀತಾ ಬಂದ್ರೆ ಏನ ಮಾಡ್ತಿಯಾ?

ಮಗ : ಭೂತಾ ಬಂದ್ರೆ ಒದ್ದು ಓಡಿಸತ್ತೀನಿ, ಗೀತಾ ಬಂದ್ರೆ ಮುದ್ದ ಮಾಡಿ ಬೆಳಿಗ್ಗೆ ಕಳಿಸ್ತೀನಿ…

**********************************

37) ಮೊಮ್ಮಗಳು : ಅಜ್ಜಿ ನಿಮ ಕಾಲದಲ್ಲಿ ಹೆಂಗಸರು ಎರಡೆರಡು ಡಜನ ಮಕ್ಕಳನ್ನು ಹೆರುತ್ತಿದ್ದರಲ್ಲ ಹೇಗ ಸಾಧ್ಯ?

ಅಜ್ಜಿ : ಆವಾಗ ಕರೆಂಟ ಇರಲಿಲ್ಲ ಕಣಮ್ಮ ಅದ್ಕೆ ಎಲ್ಲ ಸಾಧ್ಯ ಆಗತಿತ್ತು.

**********************************

38) ಅಳಿಯ : ನಿಮ್ಮ ಮಗಳಲ್ಲಿ ತುಂಬಾ ದೋಷಗಳಿವೆ

ಅತ್ತೆ : ಹೌದು ಕಣಪ್ಪ, ಅದ್ಕೆ ಅವಳಿಗೆ ಒಳ್ಳೆ ಗಂಡ ಸಿಗಲಿಲ್ಲ.

**********************************

39) ಅಮೇರಿಕನ್ಸ : ನಾವು ಚಂದ್ರಲೋಕಕ್ಕೆ ಹೋಗಿದ್ವಿ ನಾವೇ ಗ್ರೇಟ್

ಇಂಡಿಯನ್ಸ : ನಾವು ಸೂರ್ಯಲೋಕಕ್ಕೆ ಹೋಗೊಕೆ ಪ್ಲ್ಯಾನ ಮಾಡಿದೀವಿ ನಾವೇ ಗ್ರೇಟ್

ಅಮೇರಿಕನ್ಸ : ಅಲ್ಲಿಗೋದ್ರೆ ನೀವು ಸುಟ್ಟೋಗತ್ತೀರಾ

ಇಂಡಿಯನ್ಸ : ಅದಕ್ಕೆ ನಾವು ರಾತ್ರಿ ಹೋಗೋಕೆ ಪ್ಲ್ಯಾನ ಮಾಡಿದೀವಿ…‌

**********************************

40) ಟೀಚರ್ : ಯಾವ ಡಿಪಾರ್ಟ್‌ಮೆಂಟನಲ್ಲಿ ಲೇಡಿಸ ಕೆಲಸ ಮಾಡಲ್ಲ?

ಸ್ಟೂಡೆಂಟ್ಸ : ಅಗ್ನಿಶಾಮಕ ದಳದಲ್ಲಿ

ಟೀಚರ್ : ಯಾಕೆ?

ಸ್ಟೂಡೆಂಟ್ಸ : ಅವರಿಗೆ ಹುಡುಗರ ಹಾರ್ಟಿಗೆ ಬೆಂಕಿ ಹಚ್ಚೋದು ಮಾತ್ರ ಗೊತ್ತು ಆದ್ರೆ ಆರಿಸೋದು ಗೊತ್ತಿಲ್ಲ…‌

**********************************

41) ಹುಡುಗ ಸ್ಮೈಲ ಕೊಟ್ರೆ ನಗೆ, ಅದೇ ಹುಡುಗಿ ಸ್ಮೈಲ ಕೊಟ್ರೆ ಹೊಗೆ…

ಹುಡುಗ ಲವ್ ಲೆಟರ್ ಕೊಟ್ರೆ ಲೋಫರ, ಅದೇ ಹುಡುಗಿ ಲವ ಲೆಟರ್ ಕೊಟ್ರೆ ಆಫರ್…

ಲವ ಶುರುವಾಗೋದು ಕಾಫಿ ಶಾಪಲ್ಲಿ , ಲವ್ ಮುಗಿಯೋದು ವೈನ ಶಾಪಲ್ಲಿ…

ಹುಡುಗರು ಲವ್ ಮಾಡಿದ್ರೆ ಸಾಯೋ ತನಕ ಬಿಡಲ್ಲ, ಅದೇ ಹುಡುಗಿಯರು ಲವ್ ಮಾಡಿದ್ರೆ ಸಾಯಿಸದೇ ಬಿಡಲ್ಲ…

**********************************

42) ಸಮುದ್ರದಲ್ಲಿ ಬಿದ್ದವ ಮುತ್ತು ಎತ್ತಿದ,

ಗಣಿಯಲ್ಲಿ ಬಿದ್ದವ ಚಿನ್ನ ಎತ್ತಿದ,

ಆದ್ರೆ ಪ್ರೀತಿಯಲ್ಲಿ ಬಿದ್ದವ ಭಿಕ್ಷೆ ಎತ್ತಿದ…

**********************************

43) ಒಂದಿನ ಒಬ್ಬ ಹುಡುಗ ಆ ದೇವರಿಗೆ ಕೇಳ್ತಾನೆ “ಒಂದಿನದಲ್ಲಿ ಸಾಯೋ ಗುಲಾಬಿಯನ್ನು ಅವಳು ಪ್ರೀತಿಸುತ್ತಾಳೆ, ಆದರೆ ಅವಳಿಗಾಗಿ ದಿನಾ ಸಾಯೋ ನನ್ನ ಯಾಕೆ ದ್ವೇಷಿಸುತ್ತಾಳೆ” ಅಂತಾ. ಆಗ ದೇವರು “ಏನ ಡೈಲಾಗ್ ಹೇಳ್ದೆ ಗುರು, ಇದ್ನ ಬೇಗನೆ ಟೈಪ ಮಾಡಿ ನನಗ ಸೇಂಡ ಮಾಡು ನಾನು ಅದ್ನ ವಾಟ್ಸಾಪ ಸ್ಟೇಟಸಲ್ಲಿ ಇಡ್ತೀನಿ…” ಅಂತಾ ಹೇಳಿದ…

**********************************

44) LKG ಹುಡುಗ : ಅಕ್ಕ ನಿನ್ನ ಹೊಸ ಪಾಟಿ ಮಸ್ತ ಐತಲ್ಲ ಎಲ್ಲಿ ತಗೊಂಡಿ?

UKG ಹುಡುಗಿ : ತಮ್ಮಾ ಇದ ಪಾಟಿ ಅಲ್ಲ, ಇದ ಸ್ಯಾಮಸಂಗ ಗ್ಯಾಲಕ್ಸಿ ಟ್ಯಾಬ ಐತಿ…

**********************************

45) ಹೆಂಡತಿ : ರೀ ಧೋನಿಗೆ ಹೆಣ್ಣು ಮಗು ಆಯ್ತಂತೆ ಇವತ್ತಿನ ಪೇಪರನಲ್ಲಿ ಹಾಕಿದ್ದಾರೆ

ಗಂಡ : ಯಾಕೇ ಧೋನಿಗೆ ಏನಾಯ್ತು? ಹುಟ್ಟಿದ ಹಸಿಗೂಸನ್ನಾ ತೊಟ್ಲಲ್ಲಿ ಹಾಕೋದ ಬಿಟ್ಟು ಪೇಪರನಲ್ಲೇಕೆ ಹಾಕಿದ್ದಾನೆ?

**********************************

46) ಹುಡುಗಿಗೆ ಫೋನ ಮಾಡಿದ್ರೆ ಜೇನು ತುಪ್ಪ ಸವಿದಂತೆ,

ವ್ಹಾ ವ್ಹಾ ವ್ಹಾ

ಹುಡುಗಿಗೆ ಪೋನ ಮಾಡಿದ್ರೆ ಜೇನುತುಪ್ಪ ಸವಿದಂತೆ

ವ್ಹಾ ವ್ಹಾ ವ್ಹಾ

ಅವರಪ್ಪ ರೀಸಿವ ಮಾಡಿದ್ರೆ ಜೇನುಹುಳ ಕಚ್ಚಿಸಿಕೊಂಡಂತೆ…

**********************************

47) ಸರ್ : ಕಾಗೆ ಕಾಕಾ ಅಂತಾ ಯಾಕೆ ಕೂಗುತ್ತದೆ?

ಗುಂಡ : ಅದ್ಕೆ ಚಿಕ್ಕಪ್ಪ ಅಂತಾ ಕೂಗೋಕೆ ಬರಲ್ಲ ಅದಕ್ಕೆ ಅದು ಕಾಕಾ ಕಾಕಾ ಅಂತಾ ಕೂಗುತ್ತೆ…

**********************************

48) ಹುಡುಗ ಅವನ ಗರ್ಲಫ್ರೆಂಡಗೆ ಕಾಲ ಮಾಡಿ ಹಾಡ ಹಾಡೋಕೆ ಶುರು ಮಾಡಿದ

ಹುಡುಗ : ನೀ ಚಂದಾನೆ ನಿನ್ನಾಸೆ ಚಂದಾನೆ ನೀ ನನ್ನಲ್ಲಿ ಎಂದೆಂದೂ ಚಂದಾನೆ

ಹುಡುಗಿ : ನಾನು ಯಾವತಿದ್ರೂ ಚಂದಾನೆ, ಇವತ್ತ ನಮ್ಮಪ್ಪ ಮನೇಲಿದಾನೆ, ನೀ ಸಿಕ್ರೆ ಅಡ್ಡಾಡಿಸಿಕೊಂಡು ಹೊಡಿತಾ‌ನೆ, ನೀ ಮುಚಕೊಂಡ ಫೋನ ಇಟ್ರೆ ಇನ್ನೂ ಚಂದಾನೆ‌‌‌‌….

**********************************

49) ಮೊಮ್ಮಗ : ಅಜ್ಜಿ ನಾನು ಒಲಂಪಿಕ್ ರನ್ನಿಂಗ್ ರೇಸಗೆ ಸ್ಪರ್ಧಿಸುತ್ತಿದ್ದೇನೆ ಆರ್ಶಿವಾದ ಮಾಡು

ಅಜ್ಜಿ : ಸಾವಕಾಶವಾಗಿ ಓಡು ಮಗಾ ಎಲ್ಲಿಯಾದ್ರೂ ಬಿದ್ದಿಯಾ ಜೋಪಾನ…

**********************************

50) ಶಾಪ ಗರ್ಲ : ಸ್ವಾರಿ ಸರ್ ಇಲ್ಲಿ ಸ್ಮೋಕಿಂಗ್ ಮಾಡೋ ಹಂಗಿಲ್ಲ

ಬಾಯ್ : ಆದ್ರೆ ನಾನ ಈ ಸಿಗರೇಟನಾ ನಿಮ್ಮ ಶಾಪಲ್ಲೇ ತಗೊಂಡಿದ್ದು

ಶಾಪಗರ್ಲ : ನಾವ ನಮ ಶಾಪಲ್ಲಿ ಕಾಂಡೋಮ ಕೂಡಾ ಮಾರ್ತೀವಿ, ಹಾಗಂತಾ ಆವಾಗೇನ ಮಾಡ್ತೀರಿ?

ಬಾಯ್ : ಕೊಟ್ಟ ನೋಡಿ…

**********************************

51) ಮಗಳು : ನನಗೆ ನನ್ನ ಲವರನಾ ಮರೆಯೋಕ್ಕಾಗ್ತಿಲ್ಲ, ನಾನು ಮನೆ ಬಿಟ್ಟು ಓಡಿ ಹೋಗ್ತೀದಿನಿ, ಐ ಆ್ಯಮ ಸ್ವಾರಿ, ಬಾಯ್…

ಅಪ್ಪ : ಥ್ಯಾಂಕ್ಸ ಯು, ವರದಕ್ಷಿಣೆ, ಮದ್ವೆಗಿದ್ವೆ ಇತ್ಯಾದಿ ಖರ್ಚೆಲ್ಲ ಉಳಿಯಿತು.

ಮಗಳು : ಡ್ಯಾಡಿ ಇದು ನನ ಲೆಟರಲ್ಲ. ಅಮ್ಮ ಬರೆದಿರೋ ಲೆಟರ್ ನಾನು ಓದ್ತಾ ಇದೀನಿ ಅಷ್ಟೇ… ‌

**********************************

52) ತಾಯಿಗೋಸ್ಕರ ನನ್ನ ಪ್ರಾರ್ಥನೆ :

ಓ ದೇವ್ರೆ‌, ನೀ ನನಗಾಗಿ ಏನು ಕೊಡದಿದ್ರೂ ಪರವಾಗಿಲ್ಲ, ನನ ತಾಯಿಗೋಸ್ಕರ ಒಬ್ಬಳು ಸುಂದರವಾದ ಸೊಸೆ ಸಿಗುವಂತೆ ಮಾಡು, ಅಷ್ಟೇ ಬೇರೆನು ಬೇಡ…

**********************************

53) ಮಂಜ್ಯಾ : ಓ ದೇವರೆ, ನಿದ್ದೆ ಬರ್ತಿಲ್ಲ, ಹಸಿವು ಆಗ್ತಿಲ್ಲ, ಮೈಕೈ‌ ಎಲ್ಲ ನೋಯ್ತಿದೆ, ಪ್ರೀತಿ ಅಂದರೆ ಇದೆನಾ?

ದೇವರು : ಮೂರ್ಖ ಇದು ಪ್ರೀತಿಯಲ್ಲ, ಚಿಕನ್ ಗುನ್ಯಾ ಕಾಯಿಲೆ.

**********************************

54) ಭಾರತದ ಸಾಕ್ಷರತೆ ಜಾಸ್ತಿಯಾಗಲಿ ಅಂತಾ ನಾನು ಎಲ್ಲರಿಗೂ ನನಗೆ ದಿನಾ ಮೆಸೆಜ ಮಾಡ್ರಪ್ಪಾ ಅಂತಾ ಹೇಳೊದು…‌

**********************************

55) ಹೆಂಡತಿ : ರೀ ನಿಮ್ಮ ಫ್ರೆಂಡ್ ಮದ್ವೆಯಾಗ್ತಿರೋ ಹುಡುಗಿ ಸರಿಯಿಲ್ಲ. ನೀವಾದ್ರು ಸ್ವಲ್ಪ ಹೇಳಬಾರದಾ?

ಗಂಡ : ನಾನೇಕೆ ಹೇಳಲಿ? ನಾನ್ ಮದ್ವೆಯಾಗೋವಾಗ ಆತ ಸುಮ್ಮನಿದ್ದ.

**********************************

56) ಒಬ್ಬ ಹುಡುಗ ಸತ್ತೋಗಿದ್ದ. ಅವನ ಹೆಣದ ಮುಂದೆ ಅವರಮ್ಮ ಅಳ್ತಾಯಿದ್ಲು.

ಅಮ್ಮ : ಅಯ್ಯೋ ದೇವ್ರೇ ನನ್ಮಗ ಈ ಪ್ರಪಂಚದಲ್ಲಿ ಏನನ್ನೂ ನೋಡಿರಲಿಲ್ಲ, ಅಷ್ಟು ಬೇಗನೆ ನಿನ್ನ ಬಳಿ ಕರ್ಕೊಂಡ ಬಿಟ್ಟೆಯಾ?

ಪಕ್ಕದ್ಮನೆ ಹುಡುಗಿ : ಆಂಟಿ ಅಳಬೇಡಿ, ನಾನು ಅವನಿಗೆ ಏನೇನ ತೋರಿಸಬೇಕೋ ಅದ್ನೆಲ್ಲ ತೋರಿಸಿದಿನಿ…

**********************************

57) ಮಗ : ಮಮ್ಮಿ ಪಕ್ಕದ ಮನೆ ಅಣ್ಣನ ಹೇಸ್ರೇನು?

ಮಮ್ಮಿ : ಶರಣು ಅಂತಾ ಕಣಪ್ಪ

ಮಗ : ಮಮ್ಮಿ ಅಕ್ಕಾಗೆ ಅದು ಕೂಡ ಗೊತ್ತಿಲ್ಲ, ಡಾರ್ಲಿಂಗ್ ಡಾರ್ಲಿಂಗ್ ಅಂತಾ ಕರಿತಾಳೆ…‌

**********************************

58) ಒಂದಿನ ಟಿವಿ ಶಾಪಲ್ಲಿ

ಸರ್ದಾರಜಿ : ಟಿವಿ ಬೆಲೆ ಎಷ್ಟು?

ಅಂಗಡಿಯಾತ : 14,999/- ರೂ ಮಾತ್ರ ಸರ್

ಸರ್ದಾರಜಿ : ಇದರಲ್ಲೇನು ಅಂಥಾ ಸ್ಪೆಶಾಲಿಟಿಯಿದೆ?

ಅಂಗಡಿಯಾತ : ಇದೆ ಸರ್, ಲೈಟ ಹೋದ್ರೆ ತಾನಾಗಿಯೇ ಆಫ್ ಆಗುತ್ತೆ.

ಸರ್ದಾರಜಿ : ಸೂಪರ ಬೇಗನೆ ಪ್ಯಾಕ ಮಾಡು…

**********************************

59) ರಾವಣ : ಭಿಕ್ಷೆ‌ ಪ್ಲೀಜ

ಸೀತಾ : ತಗೊಳ್ಳಿ

ರಾವಣ : ಆ ಗೆರೆ ದಾಟಿ ಬಾ (ಆಕೆ ಬಂದಳು)

ರಾವಣ : ಹ್ಹಾ ಹ್ಹಾ ನಾನು ಭಿಕ್ಷುಕ ಅಲ್ಲ, ರಾವಣ…

ಸೀತಾ : ಹ್ಹಾ ಹ್ಹಾ ನಾನು ಸೀತೆಯಲ್ಲ ನಾಗವಲ್ಲಿ, ಲಕ್ ಲಕಾ ಲಕ್ ಲಕಾ…

**********************************

60) ಮಮ್ಮಿ : ಯಾಕೋ ಸ್ಕೂಲಿನಿಂದ ಅರ್ಧಕ್ಕೆ ಬಂದೆ?

ಗುಂಡಾ : ಒಂದು ಸೊಳ್ಳೆನಾ ಸಾಯಿಸಿದೆ, ಅದಕ್ಕೆ ಟೀಚರ್ ಮನೆಗೆ ಕಳುಹಿಸಿದರು.

ಮಮ್ಮಿ : ಅದರಲ್ಲೇನಿದೆ? ಯಾಕೆ ಮನೆಗೆ ಕಳಿಸಿದ್ರು?

ಗುಂಡಾ : ಆ ಸೊಳ್ಳೆ ಟೀಚರ್ ಕೆನ್ನೆ ಮೇಲೆ ಕುಳಿತಿತ್ತು…‌

**********************************

61) ಸರ್ದಾರಜಿ : ಡಾಕ್ಟ್ರೇ ನಂಗೆ ಬರೀ ಧ್ವನಿ ಮಾತ್ರ ಕೇಳುತ್ತೆ, ಆದರೆ ಮನುಷ್ಯರು ಮಾತ್ರ ಕಾಣಿಸಲ್ಲ.

ಡಾಕ್ಟರ್ : ಈ ಥರಾ ಯಾವಾಗ ಆಗುತ್ತೆ?

ಸರ್ದಾರಜಿ : ಫೋನನಲ್ಲಿ ಮಾತಾಡುವಾಗ ಡಾಕ್ಟ್ರೇ…

**********************************

62) ಮಗ : ಅಪ್ಪ ನಿಮಗೆ ಅಮ್ಮನ ಮೇಲೆ ಎಷ್ಟೊಂದು ಪ್ರೀತಿ, ಡೈಲಿ ಹೂ ತರ್ತಿರಾ.

ಅಪ್ಪ : ಲೋ‌ ಡಡ್ಡ ಇದು ಅಮ್ಮನ ಮೇಲಿನ ಪ್ರೀತಿ ಅಲ್ವೋ, ಹೂ ಮಾರೋ ಹುಡುಗಿ ಮೇಲಿನ ಪ್ರೀತಿ…

**********************************

63) ಹೆಂಡತಿ : ರೀ ಈ ವಾರ ಫುಲ್ ಸಿನಿಮಾಕ್ಕೋಗೋಣಾ, ಮುಂದಿನ ವಾರ ಫುಲ್ ಶಾಪಿಂಗಗೆ ಹೋಗೋಣಾ

ಗಂಡ : ಅದರ ಮುಂದಿನ ವಾರ ದೇವಸ್ಥಾನಕ್ಕೆ ಹೋಗೋಣಾ

ಹೆಂಡತಿ : ಯಾಕ್ರೀ?

ಗಂಡ : ಭಿಕ್ಷೆ‌ ಎತ್ತೋಕೆ?

**********************************

64) ಹುಡುಗ : ಪ್ರಿಯೆ ನಾನು ನಿನಗಾಗಿ ಹೆತ್ತವರನ್ನೇ ಬಿಟ್ಟು ಬಂದೆ

ಹುಡುಗಿ : ಅದೇನ ಮಹಾ, ನಾನು ನಿನಗಾಗಿ ಹೆತ್ತ ಮಗುವನ್ನೇ ಬಿಟ್ಟು ನಿನ್ನೊಂದಿಗೆ ಓಡಿ ಬಂದಿರುವೆ…

**********************************

65) I am Stupid

I am Mad

I am Idiot

I am Monkey

I am Donkey

I am Third Class

I am Loafer

I am Useless

I am full mental

ಹೋಗ್ಲಿ ಬಿಡ್ರಿ ಸುಮಸುಮ್ನೆ ಯಾಕ್ರೀ ನಿಮ್ಮನ್ನು ನೀವೇ ಬೈಯ್ಕೊತ್ತೀರಾ? ಹೋಗ್ಲಿ ಬಿಡ್ರಿ ಪ್ಲೀಜ…

**********************************

66) ನಿಮ್ಮ ಮೊಬೈಲನಲ್ಲಿ “ಲವ್” ಅಂತಾ ಟೈಪ ಮಾಡಿ, ಸ್ಪೇಸ ಕೊಟ್ಟು “ನಿಮ್ಮ ಹೆಸರು”, ಮತ್ತೆ ಸ್ಪೇಸ ಕೊಟ್ಟು “ನಿಮ್ಮ ಲವರ್ ಹೆಸರು” ಟೈಪ ಮಾಡಿ ನಿಮ್ಮಪ್ಪನ ನಂಬರಗೆ ಸೆಂಡ ಮಾಡಿ. ಫ್ರೀಯಾಗಿ ನಿಮ್ಮ ಭವಿಷ್ಯ ತಿಳಿಯುತ್ತೆ…

**********************************

67) ಟೀಚರ್ : ಮಕ್ಕಳೇ ನೀವು ಮುಂದೆ ಏನಾಗ ಬಯಸುತ್ತೀರಾ?

ರಾಜಾ : ಜಿರಲೆ ಮೇಡಂ

ಟೀಚರ್ : ಯಾಕೋ?

ಟೀಚರ್ : ಹುಲಿಗೆ ಹೆದರದ ನೀವು ಜಿರಲೆಗೆ ಹೆದರತ್ತಿರಲ್ಲ ಅದ್ಕೆ‌ ಮೇಡಂ….

**********************************

68) ಮೆಗಾ ಆಫರ್

4 Lux = 20 Rs

3 Medimix = 10 Rs

2 Chandrika = 5 Rs

ಸಾಕ ಬಾಯ್ಮುಚ್ಚು, ಈ ಆಫರ್ ನಿನಗಲ್ಲ, ದಿನಾ ಸ್ನಾನ ಮಾಡೋರಿಗೆ ಮಾತ್ರ…

**********************************

69) ಹೆಂಡತಿ : ನಾನು ನಿಮ್ಮನ್ನ ಬಿಟ್ಟೊದ್ರೆ ಏನ ಮಾಡ್ತೀರಾ?

ಗಂಡ : ನ್ಯೂಜ ಪೇಪರನಲ್ಲಿ ಹಾಕಿಸ್ತೀನಿ

ಹೆಂಡತಿ : ಸೋ ಸ್ವೀಟ, ಏನಂತಾ?

ಗಂಡ : ನೀ ಎಲ್ಲೆ ಇರು, ಹೇಗೆ ಇರು, ಹಾಯಾಗಿರು, ಮತ್ತೆ ಮನೆಗೆ ಮರಳಿ ಬರದಿರು ಅಂತಾ ಹಾಕಿಸ್ತೀನಿ…

**********************************

70) ಟೀಚರ್ : ನಿನ್ನ ಕ್ಲಾಸಮೇಟ್ಸ ಎಲ್ಲರೂ ಸರಿಯಾಗಿ ಸರಿಯಾದ ಟೈಮಿಗೆ ಕ್ಲಾಸಿಗೆ ಬರ್ತಾರೆ, ನೀನೊಬ್ಬ ಯಾಕ ದಿನಾ ಲೇಟು? ಏನ ಧಾಡಿ ನಿನಗೆ?

ರಾಜಾ : ಗುಂಪಾಗಿ ಬರೋದು ಕುರಿಗಳು, ಸಿಂಹ ಯಾವಾಗಲೂ ಸಿಂಗಲಾಗೆ ಬರೋದು…

**********************************

71) ರಾಣಿ : ನಾಳೆ‌ ಯಾವ ಎಕ್ಸಾಮಿದೆ?

ರಾಜಾ : ನನಗೂ ಗೊತ್ತಿಲ್ಲ, ನಾಳೆ ಕ್ವೇಷನ ಪೇಪರ ನೋಡಿ ಹೇಳ್ತೀನಿ…‌

**********************************

72) ಒಂದಿನ‌ ಒಬ್ಬ ಹುಡುಗ ಒಂದ ಹಳ್ಳಿಗೆ ಹುಡುಗಿ ನೋಡೊಕೆ ಹೋಗಿದ್ದ,

ಹುಡುಗಿ : (ಹೆದರುತ್ತಾ) ಅಣ್ಣಾವ್ರ ನಿಮಗೆಷ್ಟ ಜನ ಅಕ್ಕತಂಗಿಯರ ಇದಾರ್ರಿ?

ಹುಡುಗ : ಇಬ್ಬರ ಇದ್ರೂ ನೀ‌ ಮೂರನೇದಕ್ಕಿ…

**********************************

73) ಶಿಲ್ಪಿ ಕಲ್ಲನ್ನು ಕೆತ್ತಿದರೆ ಕಲೆ,

ಆದ್ರೆ ಅದೇ ಕಲ್ಲು ಶಿಲ್ಪಿನಾ ಕೆತ್ತಿದರೆ ಕೊಲೆ…

**********************************

74) ಗುಂಡ : ಡಾಕ್ಟರ್ ನನ್ನ ಹೆಂಡತಿ 1 ಲೀಟರ್ ಪೆಟ್ರೋಲ್ ಕುಡಿದು ಬಿಟ್ಟಿದ್ದಾಳೆ, ಏನ ಮಾಡ್ಲಿ?

ಡಾಕ್ಟರ್ : ಡೊಂಟ ವರಿ, ಅವಳ್ನಾ 60 KM ಓಡಿಸಿ, ಎಲ್ಲಾ ಸರಿ‌ ಹೋಗುತ್ತೆ…

**********************************

75) ರಾಮ ಬಿಲ್ಲು ಮುರಿದಿದ್ದಕ್ಕೆ ಸೀತೆ ಅಪ್ಪನ ಬಿಟ್ಟು ಬಂದಳು,

ಕ್ರಷ್ಣ ಕೊಳಲು ಊದಿದಕ್ಕೆ ರಾಧೆ ಅಪ್ಪನ ಬಿಟ್ಟು ಬಂದಳು.

ಆದ್ರೆ ನಾನು ಬರೀ ಒಂದ‌ ಮೆಸೆಜ ಕಳಿಸಿದಕ್ಕೆ ಒಂದು ಹುಡುಗಿ ಅವರಪ್ಪನನ್ನೇ ಕರ್ಕೊಂಡ ಬಂದಳು…

**********************************

76) ಸರ್ದಾರಜಿ ಬಾರಲ್ಲಿ ಅಳ್ತಾಯಿದ್ದ

ವೇಟರ್ : ಯಾಕೆ ಅಳ್ತಿದೀಯಾ?

ಸರ್ದಾರಜಿ : ಒಂದ ಹುಡ್ಗಿನಾ ಮರಿಬೇಕು ಅಂತಾ ಇದ್ದೆ, ಆದ್ರೆ 90 ಹಾಕಿದ ಮೇಲೆ ಆ ಹುಡ್ಗಿ ಯಾರು ಅಂತಾನೇ ನೆನಪಿಗೆ ಬರ್ತಿಲ್ಲ…

**********************************

77) ಜಡ್ಜ : ಆರನೇ‌ ಸಲ ಕೋರ್ಟಿಗೆ ಬರ್ತಿದಿಯಲ್ಲ ನಿಂಗೆ ನಾಚ್ಕೆ ಆಗಲ್ವಾ?

ಕಳ್ಳ : ನೀವ ದಿನಾ ಬರ್ತಿರಲ್ಲ ನಾಚ್ಕೆ ಆಗಲ್ವಾ?

**********************************

78) ಅತ್ತೆ : ಅಯ್ಯೋ ಕತ್ತೆ ಎಂಟ ವರ್ಷ ಆದ್ಮೇಲೆ‌ ಒಂದು ಮಗು ಹೆತ್ತಿದಿಯಾ ಅದು ಹೆಣ್ಣು…!

ಸೊಸೆ : ಏ ಬಾಯ ಮುಚ್ಚೆ ಮುದ್ಕಿ, ನಿನ‌ ಮಗನನ್ನ ನಂಬ್ಕೋಂಡ‌ ಕುಂತಿದ್ರೆ ಅದು ಆಗ್ತಿರಲಿಲ್ಲ…

**********************************

79) ಹುಡುಗಿ : ಸ್ಮೋಕ‌ ಮಾಡಬೇಡ್ವೊ ಕ್ಯಾನ್ಸರ್ ಬರುತ್ತೆ,

ಹುಡುಗ : ಇಲ್ಲ‌ ಕಣೇ ಬರೀ ಹೊಗೆ ಬರುತ್ತೆ…‌

**********************************

80) ಮಗ : ನಾಳೆಯಿಂದ ನಾ ಸ್ಕೂಲಿಗೆ ಹೋಗಲ್ಲ, ತುಂಬಾ ಹೊಡಿತಾರಮ್ಮ

ಅಮ್ಮ : ತುಂಬಾ ಗಲಾಟೆ ಮಾಡ್ತಿರಬಹುದು ಅದ್ಕೆ ಹೊಡಿತಾರೆ ಅಲ್ವಾ?

ಮಗ : ಇಲ್ಲಮ್ಮ ಸುಮ್ನೆ ಮಲಗಿದ್ರು ಎಬ್ಬಿಸಿ ಎಬ್ಬಿಸಿ ಹೊಡಿತಾರಮ್ಮ…

**********************************

81) ಹುಡುಗಿ : ನಿನ್ನೆ ನಾ ರಾಖಿ ತಂದಿದ್ದೆ ಯಾಕ‌ ಕಟ್ಟಿಸಿಕೊಳ್ಳಲಿಲ್ಲ.

ಹುಡುಗ : ನಾಳೆ ನಾ ತಾಳಿ‌ ತರ್ತಿನಿ ಕಟ್ಟಿಸಿಕೊಳ್ತಿಯಾ?

**********************************

82) ಗಂಡ : ನಿನಗಾಗಿ ಈ ಗೋಲ್ಡನ್ ರಿಂಗ ತಂದಿರುವೆ ಪ್ಲೀಜ ಧರಿಸು

ಹೆಂಡತಿ : ಡಾರ್ಲಿಂಗ್ ನೀನೇ ನಿನ ಕೈಯ್ಯಾರೆ ಹಾಕು

ಗಂಡ : ಅಯ್ಯೋ ನಿನ್ನ, ನೀ ಹೀಗೆ ಹೇಳ್ತಿಯಾ ಅಂತಾ ಮೊದಲೇ ಗೊತ್ತಿದ್ರೆ ಸೀರೆನಾದ್ರೂ ತರ್ತಿದ್ದೆ…

**********************************

83) ಗುಂಡಾ : ಟ್ರಾಫಿಕ ಪೊಲೀಸ್ ಕೆಲ್ಸ ಸಿಕ್ಕಿತ್ತು, ಆದ್ರೆ ಮಧ್ಯಾಹ್ನ ಸಸ್ಪೆಂಡ ಆದೆ.

ಸರ್ದಾರಜಿ : ಯಾಕೆ?

ಗುಂಡಾ : ಓವರ್ ಸ್ಪೀಡಂತ ಅಂಬುಲೆನ್ಸಗೆ ಫೈನ ಹಾಕಿದೆ…

**********************************

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books