ಲೋನ್ ತೆಗೆದುಕೊಳ್ಳದೇ ಬಿಜನೆಸ್ ಸ್ಟಾರ್ಟ ಮಾಡುವುದೇಗೆ? – How to Start Business without Loan? Business Boot Strapping in Kannada

You are currently viewing ಲೋನ್ ತೆಗೆದುಕೊಳ್ಳದೇ ಬಿಜನೆಸ್ ಸ್ಟಾರ್ಟ ಮಾಡುವುದೇಗೆ? – How to Start Business without Loan? Business Boot Strapping in Kannada

ಬಿಜನೆಸ್ ಲೆಸನ್ – 10

ಹಾಯ್ ಗೆಳೆಯರೇ, ಭಾರತದಲ್ಲಿ ನಿಜವಾಗಿಯೂ ಅವಶ್ಯಕತೆ ಇರುವವರಿಗೆ ಲೋನ ಸಿಗುವುದಿಲ್ಲ. ನೀವು ಕಾಲೇಜ ಡ್ರಾಪೌಟಾಗಿ ಅಥವಾ ಗ್ರ್ಯಾಜುಯೇಷನ ಕಂಪ್ಲೀಟ ಮಾಡಿದ ತಕ್ಷಣವೇ ಬಿಜನೆಸ್ ಸ್ಟಾರ್ಟ ಮಾಡ್ತೀನಿ ಅಂದ್ರೆ ನಿಮಗೆ ಯಾವ ಬ್ಯಾಂಕ ಕೂಡ ಲೋನ ಕೊಡಲ್ಲ. ಏಕೆಂದರೆ ನಿಮ್ಮ ಸಿಬಿಲ್ ಸ್ಕೋರ ಚೆನ್ನಾಗಿರಲ್ಲ ಮತ್ತು ನಿಮ್ಮತ್ರ ಯಾವುದೇ ಕೋ-ಲ್ಯಾಟರಲ ಸೆಕ್ಯುರಿಟಿ, ಬಿಜನೆಸ್ ಎಕ್ಸಪಿರಿಯನ್ಸ, ಒಲ್ಡ ಫೈನಾನ್ಸಿಯಲ್ ಟ್ರ್ಯಾಕ್ ರೆಕಾರ್ಡ ಯಾವುದೂ ಇರಲ್ಲ. ಅದಕ್ಕಾಗಿ ನಿಮಗೆ ಲೋನ ಸಿಗಲ್ಲ. ದುಡ್ಡಿಲ್ಲದೇ ಬಿಜನೆಸ್ ಮಾಡಕ್ಕಾಗಲ್ಲ, ಸ್ವಲ್ಪನಾದ್ರೂ ದುಡ್ಡು ಬೇಕೆ ಬೇಕು. ಆದರೆ ಲೋನ ತೆಗೆದುಕೊಳ್ಳದೇ ಬಿಜನೆಸ್ ಮಾಡಬಹುದು. ಇದಕ್ಕೆ ನಾವು Business Boot Strapping ಎನ್ನುತ್ತೇವೆ.

ಲೋನ್ ತೆಗೆದುಕೊಳ್ಳದೇ ಬಿಜನೆಸ್ ಸ್ಟಾರ್ಟ ಮಾಡುವುದೇಗೆ? - How to Start Business without Loan? Business Boot Strapping in Kannada

Business Boot Strappingನಿಂದ ನೀವು ಸಾಲ ಮಾಡದೇ ಅಂದರೆ ಲೋನ ತೆಗದುಕೊಳ್ಳದೇ ನಿಮ್ಮ ಬಿಜನೆಸಗೆ ಬೇಕಾದ ದುಡ್ಡನ್ನು ಹೊಂದಿಸಬಹುದು. ಅದು ಹೇಗೆಂದರೆ ;

* ಮೊದಲು ಸೆಲ್ಪ ಫೈನಾನ್ಸ್ ಮಾಡಿ ಅಂದರೆ ಪಾಕೆಟ್ ಫೈನಾನ್ಸ್ ಮಾಡಿ. ಅಂದರೆ ನೀವು ಗಳಿಸಿದ ಹಣ ಎಷ್ಟಿದೆ ಹಾಗೂ ಕೂಡಿಟ್ಟ ಹಣ ಎಷ್ಟಿದೆ ಎಂಬುದನ್ನು ಲೆಕ್ಕ ಹಾಕಿ. ಸದ್ಯಕ್ಕೆ ನಿಮ್ಮ ಬಳಿ ಟೊಟಲಾಗಿ ಹಣ ಎಷ್ಟಿದೆ? ಹಾಗೂ ನಿಮ್ಮ ಬಿಜನೆಸ್ಸಗೆ ಟೊಟಲಾಗಿ ಎಷ್ಟು ಹಣ ಬೇಕಿದೆ? ಎಂಬುದನ್ನು ಕ್ಯಾಲ್ಕುಲೇಟ ಮಾಡಿ.

* ಈಗ ನಿಮ್ಮ ಬಳಿಯಿರುವ ಹಣವನ್ನು ಬಿಟ್ಟು ನಿಮ್ಮ ಬಿಜನೆಸ್ಸಗೆ ಟೊಟಲಾಗಿ ಇನ್ನೂ ಎಷ್ಟು ಹಣ ಬೇಕು ಎಂಬುದನ್ನು ಕ್ಯಾಲ್ಕುಲೇಟ ಮಾಡಿದ ನಂತರ ಡೆಡ್ ಮನಿಯನ್ನು ಹುಡುಕಲು ಪ್ರಾರಂಭಿಸಿ. ಅಂದ್ರೆ ನಿಮ್ಮ ಫ್ಯಾಮಿಲಿ ಮೆಂಬರ್ಸಗಳಲ್ಲಿ, ಫ್ರೆಂಡ್ಸ್ ಸರ್ಕಲನಲ್ಲಿ, ರಿಲೆಟಿವ್ಸಗಳಲ್ಲಿ ಆ್ಯಂಡ್ ಟೀಚರ್ಸಗಳಲ್ಲಿ ಯಾರ ಬಳಿ ದುಡ್ಡು ಯುಜ ಆಗದೆ ಬ್ಯಾಂಕಲ್ಲಿ ಕೊಳಿತಾ ಬಿದ್ದಿದೆ ಎಂಬುದನ್ನು ಹುಡುಕಿ. ಅವರತ್ರ ನಿಮ್ಮ ಬಿಜನೆಸಗೆ ಹಣವನ್ನು ಕೊಡುವಂತೆ ರಿಕ್ವೆಸ್ಟ ಮಾಡಿಕೊಳ್ಳಿ. ಹಣ ಕೇಳುವಾಗ ಅವರಿಗೆ ನಿಮ್ಮ ಬಿಜನೆಸ್ ಬಗ್ಗೆ ಇರೋ ಸತ್ಯವನ್ನೆಲ್ಲ ಹೇಳಿ. ಜೊತೆಗೆ ಎರಡು ವರ್ಷದ ತನಕ ಹಣ ರಿಟರ್ನ ಮಾಡಲ್ಲ, ಅಲ್ಲಿ ತನಕ ನಿಮಗೆ ಈ ಡೆಡ್ ಮನಿಯ ಅವಶ್ಯಕತೆ ಇಲ್ಲದಿದ್ರೆ ಮಾತ್ರ ಕೊಡಿ. ನಿಮ್ಮ ಖರ್ಚುಗಳಿಗೆ ಈ ಹಣ ಅವಶ್ಯಕವಾಗಿದ್ದರೆ ಕೊಡಬೇಡಿ ಅಂತಾ ಸ್ಪಷ್ಟವಾಗಿ ಹೇಳಿ. ಏಕೆಂದರೆ ನೀವು ಸುಳ್ಳೇಳಿ ಅವರತ್ರ ಹಣ ತರೋದು, ಅವರು ಒಂದೆರಡು ತಿಂಗಳಲ್ಲಿ ನಮ್ಮ ಮಗಳ ಮದುವೆ ಬಂತು, ಮಗನ ಅಡ್ಮಿಷನ್ ಇದೆ ಅಂತೆಲ್ಲ ಹೇಳಿ ಹಣ ಕೇಳೋದು ಇವೆಲ್ಲ ಸರಿಬರಲ್ಲ. ಅದಕ್ಕಾಗಿ ನೀವು ಯಾರತ್ರ ಡೆಡ್ ಮನಿ ಇದೆಯೋ ಅವರತ್ರ ಮಾತ್ರ ಹಣ ಸಹಾಯ ಪಡೆದುಕೊಳ್ಳಿ. ಯಾರ ದುಡ್ಡು ಯುಜ ಆಗದೇ ಬ್ಯಾಂಕಲ್ಲಿ ಕೊಳಿತಾ ಬಿದ್ದಿದೆಯೋ ಅವರತ್ರ ಮಾತ್ರ ಹಣ ತೆಗೆದುಕೊಳ್ಳಿ.

ನಿಮಗೆ ಈ ಡೆಡ್ ಮನಿ ಸ್ಟ್ರ್ಯಾಟರ್ಜಿ ಯುಜ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ನನಗಂತು ವರ್ಕೌಟ ಆಗಿದೆ. ನಾನು ನಮ್ಮ ಬಿಜನೆಸ್ಸನ್ನು ಸ್ಟಾರ್ಟ ಮಾಡುವಾಗ ನನ್ನ ಎಲ್ಲ ಫ್ಯಾಮಿಲಿ ಮೆಂಬರ್ಸತ್ರ, ರಿಲೆಟಿವ್ಸಗಳತ್ರ, ಫ್ರೆಂಡ್ಸಗಳತ್ರ, ಟೀಚರ್ಸಗಳತ್ರ ಹಣ ಸಹಾಯ ಕೇಳಿದ್ದೆ. Sadly ಟೀಚರ್ಸ ಆ್ಯಂಡ್ ರಿಲೆಟಿವ್ಸಗಳ ಕಡೆಯಿಂದ ಯಾವುದೇ ಪೋಜಿಟಿವ ರಿಸ್ಪಾನ್ಸ ಬರಲಿಲ್ಲ. ಬಟ್ ನನ್ನ ಬೆಸ್ಟ್ ಫ್ರೆಂಡ್ ಆ್ಯಂಡ್ ಫ್ಯಾಮಿಲಿ ಕಡೆಯಿಂದ ತುಂಬಾ ಒಳ್ಳೇ ರೆಸ್ಪಾನ್ಸ ಬಂತು. ನನ್ನ ಬಿಜನೆಸಗೆ ಬೇಕಿದ್ದ 30% ಹಣ ಅರೇಂಜ್ ಆಯ್ತು.

ಲೋನ್ ತೆಗೆದುಕೊಳ್ಳದೇ ಬಿಜನೆಸ್ ಸ್ಟಾರ್ಟ ಮಾಡುವುದೇಗೆ? - How to Start Business without Loan? Business Boot Strapping in Kannada

ನೀವು ಒಬ್ಬರತ್ರಾನೇ ದೊಡ್ಡ ಅಮೌಂಟ್ ಕೇಳಿದ್ರೆ ಯಾರಿಗಾದರೂ ಕೊಡೋಕೆ ಕಷ್ಟವಾಗುತ್ತದೆ. ಅದಕ್ಕೆ ನೀವು ಬಹಳಷ್ಟು ಜನರತ್ರ ಸಣ್ಣ ಸಣ್ಣ ಅಮೌಂಟ್ ಕೇಳಿ, ಎಲ್ರೂ ಕೊಡ್ತಾರೆ. ಉದಾಹರಣೆಗೆ ; ನಿಮಗೆ ೫ ಲಕ್ಷ ಹಣ ಬೇಕಿದೆ ಎಂದುಕೊಳ್ಳಿ. ಆಗ ನೀವು ಒಬ್ಬರಾತ್ರನೇ ೫ ಲಕ್ಷ ಕೇಳಿದ್ರೆ ಯಾರು ಕೊಡಲ್ಲ. ಆದರೆ ನೀವು ಬಹಳಷ್ಟು ಜನರತ್ರ ೨೦ ಸಾವಿರ ಅಥವಾ ೫೦ ಸಾವಿರ ಅಥವಾ ೧ ಲಕ್ಷ ಕೇಳಿದ್ರೆ ಎಲ್ರೂ ಕೊಡುವ ಸಾಧ್ಯತೆ ಬಹಳಷ್ಟಿರುತ್ತದೆ. ಅದಕ್ಕಾಗಿ ಎಲ್ಲರತ್ರ ಸಣ್ಣ ಸಣ್ಣ ಅಮೌಂಟ ಕಲೆಕ್ಟ್ ಮಾಡಿ ದೊಡ್ಡ ಅಮೌಂಟ ಹೊಂದಿಸಿ.

* ನಿಮಗೆ ಡೆಡ್ ಮನಿ ಸಿಗದಿದ್ರೆ ನೀವು ನಿಮ್ಮ ಬಿಜನೆಸ್ ಸ್ಟಾರ್ಟ ಮಾಡಲು ಕ್ರೌಡ ಫಂಡಿಂಗ್ ಮಾಡಬಹುದು. ನಿಮಗೆ ಗೊತ್ತಿರುವ ವ್ಯಕ್ತಿಗಳಿಂದ ನಿಮ್ಮ ಬಿಜನೆಸಗೆ ಸ್ಪಾನ್ಸರಶೀಪ್ಪಾಗಿ ಹಣ ಪಡೆಯಬಹುದು. ನಿಮ್ಮ ಪರ್ಸನಲ್ ಬ್ರ್ಯಾಂಡಿಂಗ ಚೆನ್ನಾಗಿದ್ರೆ ನೀವು ನಿಮ್ಮ ಫ್ಯಾನ್ಸಗಳಿಂದ ಹಾಗೂ ಪಬ್ಲಿಕ್ ವ್ಯಕ್ತಿಗಳಿಂದ ಹಣ ಸಂಗ್ರಹಿಸಿ ಬಿಜನೆಸ್ ಸ್ಟಾರ್ಟ ಮಾಡಬಹುದು. ನಿಮ್ಮಲ್ಲಿ ಪ್ರಾಮಾಣಿಕತೆ ಇದ್ರೆ ಖಂಡಿತವಾಗಿಯೂ ಜನ ಸಹಾಯ ಮಾಡೇ ಮಾಡುತ್ತಾರೆ. ಟ್ರಾಯ ಮಾಡಿ ನೋಡಿ.

ಲೋನ್ ತೆಗೆದುಕೊಳ್ಳದೇ ಬಿಜನೆಸ್ ಸ್ಟಾರ್ಟ ಮಾಡುವುದೇಗೆ? - How to Start Business without Loan? Business Boot Strapping in Kannada

ಗೆಳೆಯರೇ, ಈ ರೀತಿ ನೀವು ಲೋನ ತೆಗೆದುಕೊಳ್ಳದೇ Boot Strappingನಿಂದ ನಿಮ್ಮ ಬಿಜನೆಸ್ಸನ್ನು ಸ್ಟಾರ್ಟ ಮಾಡಬಹುದು. ನಾಳೆಯ ಬಿಜನೆಸ್ ಲೆಸ್ಸನನಲ್ಲಿ ದುಡ್ಡಿಲ್ಲದೇ ಬಿಜನೆಸ್ ಮಾಡುವುದೇಗೆ ಎಂಬುದನ್ನು ನೋಡೋಣಾ. ಸದ್ಯಕ್ಕೆ ಈ ವಿಡಿಯೋಗೆ ಲೈಕ ಮಾಡಿ ಆ್ಯಂಡ್ ಈ ಚಾನೆಲಗೆ ಸಬಸ್ಕ್ರೈಬ್ ಮಾಡಿ. All the Best and Thanks you…

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books