ಡಿಜಿಟಲ ಮಾರ್ಕೆಟಿಂಗ್ – Digital Marketing in Kannada

You are currently viewing ಡಿಜಿಟಲ ಮಾರ್ಕೆಟಿಂಗ್ – Digital Marketing in Kannada

ಬಿಜನೆಸ್ ಲೆಸನ್ 18

ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ನಿಮಗೆ ಈಗಾಗಲೇ ಮಾರ್ಕೆಟಿಂಗ್ ಬಗ್ಗೆ ಗೊತ್ತಿದೆ. ಜನರಲ್ಲಾಗಿ ವಸ್ತುಗಳನ್ನು ಅಥವಾ ಸರ್ವಿಸನ್ನು ಮಾರಾಟ ಮಾಡುವುದಕ್ಕೆ ನಾವು ಮಾರ್ಕೆಟಿಂಗ್ ಎನ್ನುತ್ತೇವೆ. ಇದೇ ವಸ್ತುಗಳನ್ನು ಇಂಟರನೆಟ್, ಡಿಜಿಟಲ ಟೆಕ್ನಾಲಜಿ ಹಾಗೂ ಸೋಡಿಯಲ್ ಮೀಡಿಯಾಗಳ ಮೂಲಕ ಮಾರಾಟ ಮಾಡಿದರೆ ಅದಕ್ಕೆ ನಾವು ಡಿಜಿಟಲ ಮಾರ್ಕೆಟಿಂಗ್ ಎನ್ನುತ್ತೇವೆ. ಡಿಜಿಟಲ ಮಾರ್ಕೆಟಿಂಗ್ ಎಂದರೆ ಇಂಟರನೆಟ್ ಹಾಗೂ ಆನಲೈನ ಮಾಧ್ಯಮಗಳನ್ನು ಬಳಸಿಕೊಂಡು ನಮ್ಮ ವಸ್ತು ಅಥವಾ ಸರ್ವಿಸಗಳನ್ನು ಮಾರುವುದು. ನೀವು ನಿಮ್ಮ ಬಿಜನೆಸ್ ಹೆಸರಲ್ಲಿ ಒಂದು ಲೀಡ ಜನರೆಟಿಂಗ ವೆಬಸೈಟನ್ನು ಕ್ರಿಯೆಟ ಮಾಡಿದರೆ ನಿಮ್ಮ ಬಿಜನೆಸ್ ಆನಲೈನಗೆ ಅಪಡೇಟ ಆಗುತ್ತದೆ. ಆದರೆ ಬರೀ ವೆಬಸೈಟ ಮಾಡುವುದರಿಂದ ನಿಮ್ಮ ಬಿಜನೆಸ್ ಗ್ರೋ ಆಗುವುದಿಲ್ಲ. ಆ ವೆಬಸೈಟಗೆ ಲಕ್ಷಗಟ್ಟಲೆ ಕ್ವಾಲಿಟಿ ಟ್ರಾಫಿಕ್ ಬಂದಾಗ ಮಾತ್ರ ನಿಮ್ಮ ಬಿಜನೆಸ್ ಗ್ರೋ ಆಗುತ್ತದೆ. ನಿಮ್ಮ ವೆಬಸೈಟಗೆ ಕೋಟಿಗಟ್ಟಲೆ ಜನ ವಿಜಿಟ ಮಾಡಿ ಪ್ರೋಡಕ್ಟಗಳನ್ನು ಅಥವಾ ಸರ್ವಿಸನ್ನು ಖರೀದಿಸಿದಾಗ ನಿಮ್ಮ ಬಿಜನೆಸ್ ಗ್ರೋ ಆಗುತ್ತದೆ. ಅದಕ್ಕಾಗಿ ನಿಮ್ಮ ವೆಬಸೈಟಗೆ ಕ್ವಾಲಿಟಿ ಟ್ರಾಫಿಕನ್ನು ತರಬೇಕಾಗುತ್ತದೆ, ಕಸ್ಟಮರಗಳಿಗೆ ನಿಮ್ಮ ವೆಬಸೈಟ ಬಗ್ಗೆ ಗೊತ್ತಾಗುವಂತೆ ಮಾಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಡಿಜಿಟಲ ಮಾರ್ಕೆಟಿಂಗ್ ನಿಮ್ಮ ಪ್ರಯೋಜನಕ್ಕೆ ಬರುತ್ತದೆ.

ಆನಲೈನ ಅಡ್ವಟೈಜಿಂಗ V/S ಆಫಲೈನ ಅಡ್ವಟೈಜಿಂಗ ಯಾವುದು ಬೆಸ್ಟ? - Online Ads V/S Offline Ads in Kannada

ನಿಮ್ಮ ಬಿಜನೆಸ್ ಗ್ರೋ ಆಗಬೇಕೆಂದರೆ ನಿಮ್ಮ ವೆಬಸೈಟಗೆ ಕ್ವಾಲಿಟಿ ಟ್ರಾಫಿಕ್ ಬರಬೇಕು. ಅಂದರೆ ಅನಾವಶ್ಯಕ ಜನ ನಿಮ್ಮ ವೆಬಸೈಟಗೆ ಬರಬಾರದು. ಅವಶ್ಯಕತೆ ಇರುವ ಜನ ಮಾತ್ರ ನಿಮ್ಮ ವೆಬಸೈಟಗೆ ವಿಸಿಟ್ ಮಾಡಬೇಕು.

ಉದಾಹರಣೆಗೆ ; ನೀವು ನಿಮ್ಮ ವೆಬಸೈಟ ಮೂಲಕ ಲೇಡೀಸ್ ಬ್ಯೂಟಿ ಪ್ರೋಡಕ್ಟಗಳನ್ನು ಮಾರುತ್ತಿದ್ದರೆ ಆಗ ನಿಮ್ಮ ವೆಬಸೈಟಗೆ ಅನಾವಶ್ಯಕವಾಗಿ ಲಕ್ಷಾಂತರ ಹುಡುಗರು ವಿಜಿಟ ಮಾಡಿದರೆ ನಿಮಗೆ ಯಾವುದೇ ತರಹದ ಲೀಡ್ ಜನರೇಟ ಆಗುವುದಿಲ್ಲ. ಹುಡುಗಿಯರು ವಿಜಿಟ ಮಾಡಿದಾಗಲೇ ನಿಮ್ಮ ಬ್ಯೂಟಿ ಪ್ರೋಡಕ್ಟಗಳು ಮಾರಾಟವಾಗುತ್ತವೆ, ನಿಮ್ಮ ಬಿಜನೆಸ್ ಗ್ರೋ ಆಗುತ್ತದೆ. ಅದಕ್ಕಾಗಿ ನಿಮ್ಮ ವೆಬಸೈಟಗೆ ಬರೀ ಕ್ವಾಲಿಟಿ ಟ್ರಾಫಿಕನ್ನು ಮತ್ತು ಆ್ಯಕ್ಯುರೇಟ ಕಸ್ಟಮರಗಳನ್ನು ತರಬೇಕು. ಇದು ಡಿಜಿಟಲ ಮಾರ್ಕೆಟಿಂಗನಿಂದ ಮಾತ್ರ ಸಾಧ್ಯ. ನಿಮಗೆ ಡಿಜಿಟಲ ಮಾರ್ಕೆಟಿಂಗನ ನಾಲೇಡ್ಜಯಿದ್ದರೆ ನೀವು ನಿಮ್ಮ ಬಿಜನೆಸ್ಸನ್ನು ಫಾಸ್ಟೆಸ್ಟಾಗಿ ಗ್ರೋ ಮಾಡಬಹುದು. ಅದಕ್ಕಾಗಿ ಡಿಜಿಟಲ ಮಾರ್ಕೆಟಿಂಗನ್ನು ಕಲಿಯಿರಿ. ಮುಂದೆ ಬಹಳಷ್ಟು ಪ್ರಯೋಜನಕ್ಕೆ ಬರುತ್ತದೆ.

ನಿಮ್ಮ ಬಿಜನೆಸ್ಸನ್ನು ಫ್ರೀಯಾಗಿ ಅಡ್ವಟೈಜ ಮಾಡುವುದೇಗೆ? - How to Advertise Your Business Freely? in Kannada

ಸದ್ಯಕ್ಕೆ ನಿಮಗೆ ಡಿಜಿಟಲ ಮಾರ್ಕೆಟಿಂಗ್ ಅಂದ್ರೆ ಏನು ಅಂತಾ ಗೊತ್ತಾಗಿದೆ. ಈಗ ಅದರಲ್ಲಿರುವ ಸ್ಟ್ರ್ಯಾಟರ್ಜಿಗಳ ಬಗ್ಗೆ ಬ್ರೀಫ್ ಆಗಿ ನೋಡೋಣಾ.

Strategy – 1 : Search Engine Optimization (SEO)

ನೀವು SEO ಅಂದ್ರೆ Search Engine Optimization ಮೂಲಕ ನಿಮ್ಮ ವೆಬಸೈಟಗೆ ಕ್ವಾಲಿಟಿ ಟ್ರಾಫಿಕನ್ನು, ಆ್ಯಕ್ಯುರೇಟ ಕಸ್ಟಮರಗಳನ್ನು ತರಬಹುದು. ಇದಕ್ಕಾಗಿ ನೀವು ನಿಮ್ಮ ವೆಬಸೈಟನ್ನು ಸರಿಯಾಗಿ ಆಪ್ಟಿಮೈಜ ಮಾಡಬೇಕಾಗುತ್ತದೆ. ಅದರಲ್ಲಿ ನಿಮ್ಮ ಬಿಜನೆಸಗೆ ಸಂಬಂಧಪಟ್ಟಂತೆ ಎಲ್ಲ ಕೀವರ್ಡಗಳನ್ನು ಸೇರಿಸಿ ನಿಮ್ಮ ವೆಬಸೈಟನ್ನು ಗೂಗಲನಲ್ಲಿ Rank ಹೊಡೆಸಬೇಕಾಗುತ್ತದೆ. ಸರ್ಚ ರಿಜಸ್ಟ್ಸಗಳಲ್ಲಿ ನಿಮ್ಮ ವೆಬಸೈಟ ನ್ಯಾಚುರಲಿ ಬೀಳುವಂತೆ ಕೋಡಿಂಗ್ ಮಾಡಬೇಕಾಗುತ್ತದೆ. ಆಗ ಯಾರಾದರೂ ನಿಮ್ಮ ಬಿಜನೆಸ್ ಬಗ್ಗೆ ಗೂಗಲನಲ್ಲಿ ಹುಡುಕಿದರೆ ಅವರಿಗೆ ನಿಮ್ಮ ವೆಬಸೈಟ ಕಾಣಿಸುತ್ತದೆ. ಒಮ್ಮೆ ನೀವು ನಿಮ್ಮ ವೆಬಸೈಟಗೆ SEO ಮಾಡಿದರೆ ಅದು ಗೂಗಲ ಸರ್ಚ ರಿಜಸ್ಟ್ಸಗಳಲ್ಲಿ ಅಪೀಯರ್ ಆಗುತ್ತದೆ. ಕಸ್ಟಮರಗಳ ಕಣ್ಣಿಗೆ ನಿಮ್ಮ ವೆಬಸೈಟ ಬಿದ್ದಾಗ ಅವರು ನಿಮ್ಮ ವೆಬಸೈಟಗೆ ವಿಜಿಟ ಮಾಡುತ್ತಾರೆ, ಇಷ್ಟವಾದರೆ ನಿಮ್ಮ ಪ್ರೋಡಕ್ಟ ಅಥವಾ ಸರ್ವಿಸನ್ನು ಖರೀದಿಸುತ್ತಾರೆ. ನಿಮ್ಮ SEO ಎಷ್ಟು ಪವರಫುಲ್ ಆಗಿರುತ್ತದೆಯೋ ಅಷ್ಟು ಕ್ವಾಲಿಟಿ ಟ್ರಾಫಿಕ್ ನಿಮ್ಮ ವೆಬಸೈಟಗೆ ಬರುತ್ತದೆ. ಕ್ವಾಲಿಟಿ ಟ್ರಾಫಿಕ್ ಬಂದಷ್ಟು ನಿಮ್ಮ ಬಿಜನೆಸ್ ಗ್ರೋ ಆಗುತ್ತದೆ.

ಉದಾಹರಣೆಗೆ : ನೀವು ಗೂಗಲನಲ್ಲಿ Best Construction Company in Jamakhandi ಅಂತಾ ಟೈಪ್ ಮಾಡಿ ನಿಮಗೆ ನಮ್ಮ ಕ್ಲೈಂಟ ವೆಬಸೈಟ www.Pailwanbuildcon.in ಸಿಗುತ್ತದೆ. ಅದೇ ರೀತಿ ನೀವು ಗೂಗಲನಲ್ಲಿ ಯಾವುದೇ ಪ್ರೋಡಕ್ಟನ್ನು ಹುಡುಕಿದಾಗ ನಿಮಗೆ ಮೊದಲು ಅಮೆಜಾನನ ವೆಬಸೈಟ ಸಿಗುತ್ತದೆ. ಏಕೆಂದರೆ ಅಮೆಜಾನನ SEO ಪವರಫುಲ್ ಆಗಿದೆ. ನೀವು ಗೂಗಲನಲ್ಲಿ ಕನ್ನಡ ಲವಸ್ಟೋರಿಗಳನ್ನು ಹುಡುಕಿದಾಗ ನಮ್ಮ ವೆಬಸೈಟ www.Skkannada.com ಸಿಗುತ್ತದೆ. ಇದೇ SEO.

ಡಿಜಿಟಲ ಮಾರ್ಕೆಟಿಂಗ್ - Digital Marketing in Kannada

2) Social Media Advertisements & Marketing

ನೀವು ಫೇಸ್ಬುಕ್, ಇನಸ್ಟಾಗ್ರಾಮ, ಲೀಂಕ್ಡಇನ್, ಕೋರಾ, ಟ್ವೀಟರ್, ಯುಟ್ಯೂಬ ಇತ್ಯಾದಿಗಳಲ್ಲಿ ನಿಮ್ಮ ಬಿಜನೆಸ್ ಬಗ್ಗೆ ಅಡ್ವಟೈಜ ಮಾಡಿ ನಿಮ್ಮ ವೆಬಸೈಟಗೆ ಕ್ವಾಲಿಟಿ ಟ್ರಾಫಿಕ ತರಬಹುದು. ನೀವು ಸ್ವಲ್ಪ ಫೇಮಸ್ ಆಗಿದ್ದರೆ ನಿಮಗೆ ಫ್ರಿಯಾಗಿ ಟ್ರಾಫಿಕ ಬರಬಹುದು. ಆದರೆ ನೀವು ಫೇಮಸ್ ಆಗಿರದಿದ್ದರೆ ನೀವು ಸೋಸಿಯಲ್ ಮೀಡಿಯಾಗಳಲ್ಲಿ ಪೇಡ್ ಅಡ್ವಟೈಜಮೆಂಟಗಳನ್ನು ರನ್ ಮಾಡಿ ನಿಮ್ಮ ವೆಬಸೈಟಗೆ ಟ್ರಾಫಿಕ್ ತರಬೇಕಾಗುತ್ತದೆ.

ಉದಾಹರಣೆಗೆ : ನಿಮಗೆ ಫೇಸ್ಬುಕ್, ಇನಸ್ಟಾಗ್ರಾಮಗಳಲ್ಲಿ Sponsored ಎಂಬ ಟ್ಯಾಗಲೈನನೊಂದಿಗೆ ಕಾಣಿಸುವ ಎಲ್ಲ ಪೋಸ್ಟಗಳು ಪೇಡ್ ಅಡ್ವಟೈಜಮೆಂಟಗಳಾಗಿರುತ್ತವೆ. ನೀವು ಯುಟ್ಯೂಬನಲ್ಲಿ ವಿಡಿಯೋ ನೋಡುವಾಗ ಮಧ್ಯೆದಲ್ಲಿ ಅಥವಾ ಆರಂಭದಲ್ಲಿ ಬರುವ ಎಲ್ಲ ಆ್ಯಡಗಳು ಪೇಡ್ ಅಡ್ವಟೈಜಮೆಂಟಗಳಾಗಿರುತ್ತವೆ.

ಈ ರೀತಿ ನೀವು ಸಹ ಪೇಡ್ ಅಡ್ವಟೈಜಮೆಂಟಗಳನ್ನು ರನ್ ಮಾಡಿ ನಿಮ್ಮ ಬಿಜನೆಸ್ ಗ್ರೋ ಮಾಡಬಹುದು.

ಡಿಜಿಟಲ ಮಾರ್ಕೆಟಿಂಗ್ - Digital Marketing in Kannada

3) Content Marketing :

ನೀವು ಬ್ಲಾಗ, ಆರ್ಟಿಕಲ್ಸ್, ವಿಡಿಯೋ, ಈಬುಕ್ ಇತ್ಯಾದಿಗಳ ರೂಪದಲ್ಲಿ ನಿಮ್ಮ ಬಿಜನೆಸ್ಸಗೆ ತಕ್ಕಂತೆ ಕಂಟೆಂಟನ್ನು ಕ್ರಿಯೆಟ್ ಮಾಡಿ ಅದನ್ನು ಗೂಗಲ ಮತ್ತು ಸೋಸಿಯಲ್ ಮೀಡಿಯಾಗಳಲ್ಲಿ ಪಬ್ಲಿಶ ಮಾಡಿ ನಿಮ್ಮ ಪ್ರೋಡಕ್ಟಗಳನ್ನು, ಸರ್ವಿಸನ್ನು ಅಥವಾ ಕೋರ್ಸಗಳನ್ನು ಮಾರಾಟ ಮಾಡಬಹುದು. ಇದಕ್ಕೆ ನಾವು ಕಂಟೆಂಟ ಮಾರ್ಕೆಟಿಂಗ್ ಎನ್ನುತ್ತೇವೆ.

ಉದಾಹರಣೆಗೆ ; ನಾನೀಗ ಕಂಟೆಂಟ ಮಾರ್ಕೆಟಿಂಗನ್ನೇ ಮಾಡುತ್ತಿರುವೆ. ನಾನೀಗ ವಿಡಿಯೋ ಮಾಧ್ಯಮದಲ್ಲಿ ನಿಮ್ಮನ್ನು ಫ್ರಿಯಾಗಿ ಎಜುಕೇಟ ಮಾಡುವುದರ ಜೊತೆಗೆ ನನ್ನ ಬಿಜನೆಸ್ಸನ್ನು ಪ್ರೊಮೋಟ ಮಾಡಿ ನನ್ನ ಕೋರ್ಸಗಳನ್ನು, ವರ್ಕಶಾಪಗಳನ್ನು, ಈಬುಕ್ಸಗಳನ್ನು ಹಾಗೂ ಡಿಜಿಟಲ ಪ್ರೋಡಕ್ಟಗಳನ್ನು ಸೇಲ್ ಮಾಡುತ್ತಿರುವೆ. ನೀವು ನನ್ನ ಎಲ್ಲ ವಿಡಿಯೋಗಳನ್ನು ಹಾಗೂ www.Skkannada.comಗೆ ವಿಜಿಟ ಮಾಡಿ ನನ್ನ ಎಲ್ಲ ಆರ್ಟಿಕಲ್ಸಗಳನ್ನು ಓದಿ ನಿಮಗೆ ಕಂಟೆಂಟ ಮಾರ್ಕೆಟಿಂಗ್ ಬಗ್ಗೆ ಎಲ್ಲ ಅರ್ಥವಾಗುತ್ತದೆ. ಫ್ರಿಯಾಗಿದೆ ಇದನ್ನು ಮಿಸ್ ಮಾಡಿಕೊಳ್ಳಬೇಡಿ. ಎಲ್ಲ ಆರ್ಟಿಕಲ್ಸ್ ಹಾಗೂ ವಿಡಿಯೋಗಳನ್ನು ನೋಡಿ.

ಡಿಜಿಟಲ ಮಾರ್ಕೆಟಿಂಗ್ - Digital Marketing in Kannada

4) Affiliate Marketing

ನೀವು ಅಫೀಲಿಯೆಟ್ ಮಾರ್ಕೆಟಿಂಗ್ ಮೂಲಕವೂ ನಿಮ್ಮ ವೆಬಸೈಟಗೆ ಕ್ವಾಲಿಟಿ ಟ್ರಾಫಿಕನ್ನು ತರಬಹುದು. ನೀವು ನಿಮ್ಮ ಪ್ರೋಡಕ್ಟಗಳನ್ನು ಸೇಲ್ ಮಾಡಿದವರಿಗೆ ಇಂತಿಷ್ಟು % ಕಮಿಷನನ್ನು ಕೊಡಲು ಪ್ರಾರಂಭಿಸಿದರೆ ಜನ ಕಮೀಷನಿನ್ ಆಸೆಗಾಗಿ ನಿಮ್ಮ ಪ್ರೋಡಕ್ಟಗಳನ್ನು ಫೇಸ್ಬುಕ್, ಯುಟ್ಯೂಬ, ವಾಟ್ಸಾಪ ಸೇರಿ ಎಲ್ಲೆಡೆಗೆ ಪ್ರೊಮೊಟ ಮಾಡುತ್ತಾರೆ ಮತ್ತು ಹೆಚ್ಚಿಗೆ ಪ್ರೋಡಕ್ಟಗಳನ್ನು ಸೇಲ್ ಮಾಡುತ್ತಾರೆ. ಇದೇ ಅಫೀಲಿಯೆಟ ಮಾರ್ಕೆಟಿಂಗ್.

ಉದಾಹರಣೆಗೆ : ಸದ್ಯಕ್ಕೆ ಅಮೆಜಾನ್, ಫ್ಲಿಪಕಾರ್ಟಗಳಂಥ ಈಕಾಮರ್ಸ ಕಂಪನಿಗಳು ಹಾಗೂ ಗೋ-ಡ್ಯಾಡಿ, ರೀಸೆಲ್ಲರ ಕ್ಲಬಗಳಂಥ ಡಿಜಿಟಲ ಪ್ರೋಡಕ್ಟ ಸೆಲ್ಲಿಂಗ ಕಂಪನಿಗಳು ತಮ್ಮದೇ ಆದಂತಹ ಅಫಿಲಿಯೆಟ ಪ್ರೋಗ್ರಾಮನ್ನು ನಡೆಸುತ್ತಿವೆ. ನೀವು ಅಮೆಜಾನನಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿದರೆ ನಿಮಗೆ 5 ರಿಂದ 12%ವರೆಗೂ ಕಮಿಷನ್ ಸಿಗುತ್ತದೆ. ನೀವು ಸಹ ಇದೇ ರೀತಿ ಕಮಿಷನನ್ನು ಕೊಡಲು ಪ್ರಾರಂಭಿಸಿದರೆ ಜನ ನಿಮ್ಮ ಕಂಪನಿಯ ಪ್ರೋಡಕ್ಟಗಳನ್ನು ಸಹ ಮಾರಾಟ ಮಾಡುತ್ತಾರೆ.

ಡಿಜಿಟಲ ಮಾರ್ಕೆಟಿಂಗ್ - Digital Marketing in Kannada

5) Influencer Marketing

ನೀವು ಸೋಸಿಯಲ್ ಮೀಡಿಯಾ Influencerಗಳಿಗೆ, ಯುಟ್ಯೂಬರ್ಸಗಳಿಗೆ, ಬ್ಲಾಗರಗಳಿಗೆ, ಸೆಲೆಬ್ರಿಟಿಗಳಿಗೆ, ಕ್ರಿಕೆಟರಗಳಿಗೆ ಅಥವಾ ಆನಲೈನನಲ್ಲಿ ಫೇಮಸಾದ ಯಾರಿಗಾದರೂ ಸ್ವಲ್ಪ ಹಣ ನೀಡಿ ನಿಮ್ಮ ಬಿಜನೆಸ್ಸನ್ನು ಪ್ರೋಮೋಟ ಮಾಡಿ ನಿಮ್ಮ ವೆಬಸೈಟಗೆ ಕ್ವಾಲಿಟಿ ಟ್ರಾಫಿಕನ್ನು ತರಬಹುದು. ಫೇಮಸಾದವರಿಗೆ ಕೋಟ್ಯಾಂತರ ಜನ ಫ್ಯಾನ್ಸ ಇರ್ತಾರೆ, ಅವರು ಅವರ ವಿಡಿಯೋಗಳಲ್ಲಿ, ಸೋಸಿಯಲ್ ಮೀಡಿಯಾಗಳಲ್ಲಿ, ಟ್ವೀಟರ, ಇನಸ್ಟಾಗ್ರಾಮ ಅಥವಾ ಫೇಸ್ಬುಕ್ ಪೋಸ್ಟಗಳಲ್ಲಿ ನಿಮ್ಮ ಬಿಜನೆಸ್ಸನ್ನು ಪ್ರೋಮೋಟ ಮಾಡಿದರೆ ಒಂದು ಲಕ್ಷ ಜನ ನಿಮ್ಮ ವೆಬಸೈಟಗೆ ವಿಜಿಟ ಮಾಡುತ್ತಾರೆ. ಅವರಲ್ಲಿ ಒಂದಹತ್ತ ಸಾವಿರ ಜನ ನಿಮ್ಮ ಪ್ರೋಡಕ್ಟಗಳನ್ನು ಪರಚೇಸ್ ಮಾಡುತ್ತಾರೆ. ಇದೇ ಇನಫ್ಲುಯನ್ಸರ ಮಾರ್ಕೆಟಿಂಗ್.

ಡಿಜಿಟಲ ಮಾರ್ಕೆಟಿಂಗ್ - Digital Marketing in Kannada

6) Email Marketing

ಈಮೇಲ ಮಾರ್ಕೆಟಿಂಗನಲ್ಲಿ ಎರಡು ಟೆಕ್ನಿಕಗಳಿವೆ. ಒಂದು ಈಮೇಲನಲ್ಲಿ ಪೇಡ್ ಆ್ಯಡಗಳನ್ನು ರನ್ ಮಾಡಿ ಇಂಟರೆಸ್ಟೆಡ್ ಕಸ್ಟಮರಗಳನ್ನು ಟಾರ್ಗೆಟ ಮಾಡುವುದು. ಎರಡನೆಯ ಟೆಕ್ನಿಕ್ ಏನಪ್ಪ ಅಂದರೆ ನಾವೇ ನಮ್ಮ ಕಸ್ಟಮರಗಳ ಈಮೇಲ ಐಡಿಗಳನ್ನು ಕಲೆಕ್ಟ ಮಾಡಿ ಅವರಿಗೆ ನಮ್ಮ ಹೊಸ ಪ್ರೋಡಕ್ಟ ಅಥವಾ ಆಫರ್ ಬಗ್ಗೆ ನೇರವಾಗಿ ಈಮೇಲ ಮಾಡುವುದು. ಈಗ ಸಾಕಷ್ಟು ಈಮೇಲ ಮಾರ್ಕೆಟಿಂಗ್ ಸಾಫ್ಟವೇರಗಳು ಅವೇಲೇಬಲಾಗಿವೆ. ಅವುಗಳನ್ನು ಬಳಸಿಕೊಂಡು ನಾವು ಈಮೇಲ ಮಾರ್ಕೆಟಿಂಗ್ ಮಾಡಬಹುದು.

ಡಿಜಿಟಲ ಮಾರ್ಕೆಟಿಂಗ್ - Digital Marketing in Kannada

7) Viral Marketing

ಆನಲೈನ ಮಾರ್ಕೆಟನಲ್ಲಿ ಅಂದರೆ ಇಂಟರನೆಟ್ ಹಾಗೂ ಸೋಸಿಯಲ್ ಮೀಡಿಯಾಗಳಲ್ಲಿ ಯಾವುದಾದರೂ ಟ್ರೆಂಡ್ ನಡೆಯುತ್ತಿದ್ದರೆ ಅಥವಾ ಯಾವುದಾದರೂ ವಿಷಯ ವೈರಲ ಆಗುತ್ತಿದ್ದರೆ ನೀವು ಅದರೊಂದಿಗೆ ನಿಮ್ಮ ಪ್ರೋಡಕ್ಟಗಳನ್ನು ಪ್ರೋಮೋಟ ಮಾಡಬಹುದು. ಇದೇ ವೈರಲ ಮಾರ್ಕೆಟಿಂಗ್. ಇಲ್ಲವೇ ನೀವೇ ವೈರಲ ಕಂಟೆಂಟನ್ನು ಕ್ರಿಯೆಟ್ ಮಾಡಿ ನಿಮ್ಮ ಬಿಜನೆಸ್ಸನ್ನು ಅಡ್ವಟೈಜ ಮಾಡಬಹುದು.

ಉದಾಹರಣೆಗೆ : ಹೋಳಿ ಹಬ್ಬ ಬಂದಿದೆ ಅಂತಾ ಅಂದುಕೊಳ್ಳಿ. ಆಗ ನೀವು ಸೋಸಿಯಲ್ ಮೆಸೇಜ್ ಇರುವ ಹಾಗೂ ಎಮೋಷನಲಿ ಕನೆಕ್ಟ ಆಗುವ ಶಾರ್ಟಫಿಲ್ಮ ಅಥವಾ ಸಾಂಗ ಮಾಡಿ ಅದರೊಂದಿಗೆ ನಿಮ್ಮ ಬಿಜನೆಸ್ಸನ್ನು ಈಜಿಯಾಗಿ ಪ್ರೋಮೋಟ ಮಾಡಬಹುದು. ನೀವು ಇದೇ ತರಹ ಫ್ರೆಂಡಶೀಪ ಡೇಗೆ, ಲವರ್ಸ ಡೇಗೆ, ದೀಪಾವಳಿಗೆ, ರಮಜಾನಗೆ ವೈರಲ ವಿಡಿಯೋಗಳನ್ನು ಮಾಡಬಹುದು. ಇತ್ತೀಚೆಗೆ ಪಾರ್ಲೆಜಿಯವರು ಮದರ್ಸ ಡೇಗೆ ಮಾಡಿದ ವಿಡಿಯೋಗಳನ್ನು ನೋಡಿ ನಿಮಗೆ ಅರ್ಥವಾಗುತ್ತದೆ. ಯುಟ್ಯೂಬನಲ್ಲಿ ಸಿಗುತ್ತೆ ಹುಡುಕಿ ನೋಡಿ.

ಡಿಜಿಟಲ ಮಾರ್ಕೆಟಿಂಗ್ - Digital Marketing in Kannada

8) Paid Search Ads

ನೀವು ನೇರವಾಗಿ ಗೂಗಲ ಪೇಡ್ ಆ್ಯಡ್ಸಗಳ ಮೂಲಕ ನಿಮ್ಮ ಪ್ರೊಡಕ್ಸಗಳನ್ನು ಮಾರಾಟ ಮಾಡಬಹುದು. ನೀವು ಗೂಗಲನಲ್ಲಿ ಯಾವುದಾದರೂ ಪ್ರೋಡಕ್ಟನ್ನು ಅಥವಾ ಮೊಬೈಲನ್ನು ಹುಡುಕಿದಾಗ ಸರ್ಚ ರಿಜಸ್ಟ್ಸಗಳ ಮೇಲೆ ಟಾಪಲ್ಲಿ Ad ಅಂತಾ ಬರುವ ಪ್ರೋಡಕ್ಟಗಳನ್ನು ನೀವು ನೋಡಿರಬಹುದು. ಇವೆಲ್ಲವೂ ಪೇಡ್ ಸರ್ಚ ಆ್ಯಡಗಳಾಗಿರುತ್ತವೆ. ಅಂದರೆ ಇಂಟರನೆಟ್ಟಲ್ಲಿ ನಿಮ್ಮ ಪ್ರೋಡಕ್ಟನ್ನು ಹುಡುಕಿದವರಿಗೆ ಮಾತ್ರ ಈ ಆ್ಯಡ ಕಾಣಿಸುತ್ತದೆ. ಬೇರೆಯವರಿಗೆ ಇದು ಕಾಣಿಸಲ್ಲ. ಅವಶ್ಯಕತೆ ಬಿದ್ದು ಹುಡುಕುವವರಿಗೇನೆ ನಿಮ್ಮ ಪ್ರೋಡಕ್ಟ ಕಾಣಿಸಿದಾಗ ಅವರು ಬೇಗನೆ ಖರೀದಿಸುವ ಸಾಧ್ಯತೆ ಅಧಿಕವಾಗಿರುತ್ತದೆ. ಸೋ, Paid Search Adsಗಳು ಬಹಳಷ್ಟು ಎಫೇಕ್ಟಿವ ಆಗಿವೆ.

ಡಿಜಿಟಲ ಮಾರ್ಕೆಟಿಂಗ್ - Digital Marketing in Kannada

9) Funnel Marketing

ಈಬುಕ್ಸ, ಸಾಫ್ಟವೇರ್ಸ ಹಾಗೂ ವಿಡಿಯೋ ಕೋರ್ಸಗಳಂಥ ಡಿಜಿಟಲ ಪ್ರೋಡಕ್ಟಗಳನ್ನು ಮಾರಲು ಫನೆಲ್ ಮಾರ್ಕೆಟಿಂಗ್ ಬೆಸ್ಟ ಸ್ಟ್ರ್ಯಾಟರ್ಜಿಯಾಗಿದೆ. ಒಂದು ಲಾರ್ಜ ಡೊಮೆನನಿಂದ ನಿಮ್ಮ ಪ್ರೋಡಕ್ಟಗಳಲ್ಲಿ ಇಂಟರೆಸ್ಟ್ ಇರುವವರನ್ನು ಮಾತ್ರ ಜಾಲಿಸಿ ಬರೀ ಅವರಿಗಷ್ಟೇ ನಿಮ್ಮ ಆ್ಯಡನ್ನು ತೋರಿಸಿ ಅವರಿಗೆ ನಿಮ್ಮ ಪ್ರೋಡಕ್ಟಗಳನ್ನು ಮಾರುವಲ್ಲಿ ಈ ಫನೆಲ್ ಮಾರ್ಕೆಟಿಂಗ್ ಬಹಳಷ್ಟು ಪ್ರಯೋಜನಕಾರಿಯಾಗಿದೆ.

ಉದಾಹರಣೆಗೆ : ಈಗ ಕರ್ನಾಟಕದಲ್ಲಿ 2 ಕೋಟಿ ಜನ ರೀಡಿಂಗಲ್ಲಿ ಇಂಟರೆಸ್ಟನ್ನು ಹೊಂದಿದ್ದಾರೆ. ನನಗೆ ನನ್ನ ಈಬುಕ್ಸಗಳನ್ನು ಮಾರಬೇಕಾಗಿದೆ. ಈ 2 ಕೋಟಿ ಜನರಿಗೆಲ್ಲ ಆ್ಯಡ ತೋರಿಸಿದರೆ ನನ್ನ ಲಾಭವೆಲ್ಲ ಅಡ್ವಟೈಜಮೆಂಟಲ್ಲೆ ಹೋಗುತ್ತದೆ. ಆಗ ನಾನು ಫನೆಲ್ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ಮೂಲಕ ಹಣ ಕೊಟ್ಟು ಖರೀದಿಸಲು ಸಶಕ್ತರಾದ 20 ಸಾವಿರ ಜನರಿಗೆ ಮಾತ್ರ ನನ್ನ ಆ್ಯಡನ್ನು ಕಳುಹಿಸುವೆ ಮತ್ತು ನನ್ನ ಈಬುಕ್ಸಗಳನ್ನು ಈಜಿಯಾಗಿ ಮಾರಾಟ ಮಾಡುವೆ. 2 ಕೋಟಿ ಜನರಲ್ಲಿ 20 ಸಾವಿರ ಜನರಿಗೆ ಮಾತ್ರ ಹಣ ಕೊಟ್ಟು ಬುಕ್ಕನ್ನು ಖರೀದಿಸಿ ಓದುವ ಸಾಮರ್ಥ್ಯವಿದೆ ಎಂಬುದನ್ನು ನಾವು ಫನೆಲ್ ಮಾರ್ಕೆಟಿಂಗನಿಂದ ಕಂಡುಕೊಳ್ಳಬಹುದು. ಇದರ ಬಗ್ಗೆ ಮುಂದಿನ ಎಪಿಸೋಡನಲ್ಲಿ ಡಿಟೇಲಾಗಿ ಹೇಳ್ತೀನಿ. ಸದ್ಯಕ್ಕೆ ಇಷ್ಟು ತಿಳ್ಕೋಳಿ ಸಾಕು.

ವಿಡಿಯೋ ಮಾರ್ಕೆಟಿಂಗ್ - Video Marketing in Kannada

10) Self Promoting

ನಿಮ್ಮತ್ರ ಮೇಲೆ ತಿಳಿಸಿದ ಡಿಜಿಟಲ ಮಾರ್ಕೆಟಿಂಗ ಸ್ಟ್ರ್ಯಾಟರ್ಜಿಗಳಿಗೆ ಸಾಕಷ್ಟು ದುಡ್ಡಿಲ್ಲದಿದ್ದರೆ ನೀವು ಸೆಲ್ಫ ಪ್ರಮೋಟಿಂಗ್ ಸ್ಟ್ರ್ಯಾಟರ್ಜಿ ಮೂಲಕವು ನಿಮ್ಮ ಬಿಜನೆಸ್ಸನ್ನು ಗ್ರೋ ಮಾಡಬಹುದು. ನೀವು ಯುಟ್ಯೂಬ ಹಾಗೂ ಫೇಸ್ಬುಕಗಳಲ್ಲಿ ನಿಮ್ಮ ಬಿಜನೆಸಗೆ ಸಂಬಂಧಪಟ್ಟಂತೆ ವಿಡಿಯೋಗಳನ್ನು, ವೆಬಿನಾರಗಳನ್ನು ಮಾಡಿ ನಿಮ್ಮ ಪ್ರೋಡಕ್ಟಗಳನ್ನು ಮಾರಾಟ ಮಾಡಬಹುದು.

ಓಕೆ ಗೆಳೆಯರೇ, ಇವಿಷ್ಟು ಡಿಜಿಟಲ ಮಾರ್ಕೆಟಿಂಗನ ಟಾಪ 10 ಪವರಫುಲ್ ಸ್ಟ್ರ್ಯಾಟರ್ಜಿಗಳಾದವು. ನಿಮ್ಮ ಬಜೆಟ ಹಾಗೂ ಬಿಜನೆಸ್ ನೇಚರ್ ಮೇಲೆ ನೀವು ಈ ಸ್ಟ್ರ್ಯಾಟರ್ಜಿಗಳನ್ನ ಆಯ್ಕೆ ಮಾಡಿಕೊಂಡು ಅಪ್ಲಾಯ ಮಾಡಬೇಕಾಗುತ್ತದೆ. ಇದು ಬರೀ ಥಿಯರಿಯಷ್ಟೇ. ನಿಮಗೆ ಇವುಗಳನ್ನು ಪ್ರ್ಯಾಕ್ಟಿಕಲ್ಲಾಗಿ ಕಲಿತು ನಿಮ್ಮ ಬಿಜನೆಸ್ಸನ್ನು ಫಾಸ್ಟೆಸ್ಟಾಗಿ ಗ್ರೋ ಮಾಡಬೇಕೆನ್ನುವ ಆಸೆಯಿದ್ದರೆ ನೀವು ನಮ್ಮ ಬಿಜನೆಸ್ ವರ್ಕಶಾಪಗಳಿಗೆ ಅಟೆಂಡಾಗಬಹುದು. ಅದಕ್ಕಾಗಿ ಕಮೆಂಟ ಹಾಗೂ ಡಿಸ್ಕ್ರಿಪ್ಷನಲ್ಲಿ ಕೊಟ್ಟಿರುವ ಫಾರ್ಮನ್ನು ತುಂಬಿ ನಿಮಗೆ ಮುಂದಿನ ಬಿಜನೆಸ್ ವರ್ಕಶಾಪ ಹಾಗೂ ಆನಲೈನ ಕೋರ್ಸಗಳ ಮಾಹಿತಿ ಸಿಗುತ್ತದೆ.

All the best and Thanks You….

Digital Marketing Course Notification Form : https://www.roaringcreations.com/digital-marketing-course-notification-form/

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books