ಬಿಜನೆಸ್ಸನ್ನು ಸ್ಟಾರ್ಟ ಮಾಡುವುದು ಹೇಗೆ? – How to Start Business? How to start Start-up? in Kannada

You are currently viewing ಬಿಜನೆಸ್ಸನ್ನು ಸ್ಟಾರ್ಟ ಮಾಡುವುದು ಹೇಗೆ? – How to Start Business? How to start Start-up? in Kannada

ಬಿಜನೆಸ್ ಲೆಸನ್ – 09 :

ಹಾಯ್ ಗೆಳೆಯರೇ, ಕಳೆದ ಎಪಿಸೋಡನಲ್ಲಿ ನಾನು ಬಿಜನೆಸ್ ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ತಿಳಿದುಕೊಳ್ಳಲೇಬೇಕಾದ ವಿಷಯಗಳ ಬಗ್ಗೆ ಡಿಸ್ಕಸ್ ಮಾಡಿರುವೆ. ಮೊದಲು ಆ ಎಪಿಸೋಡನ್ನು ನೋಡಿದ ನಂತರ ಈ ಬಿಜನೆಸ್ ಲೆಸ್ಸನ್ನನ್ನು ನೋಡಿ. ಓಕೆ ಏನಿವೇ, ಯಾವುದೇ ಒಂದು ಬಿಜನೆಸ್ಸನ್ನು ಸ್ಟಾರ್ಟ ಮಾಡಲು ಅಥವಾ ಸ್ಟಾರ್ಟಪನ್ನು ಸ್ಟಾರ್ಟ ಮಾಡಲು ಬೆಸ್ಟ ಆ್ಯಂಡ್ ರೈಟ ಮೆಥಡ ಇಲ್ಲಿದೆ ;

Step – 1 : Business Idea Validation and Protection.

ಯಾವುದೇ ಬಿಜನೆಸ್ ಸ್ಟಾರ್ಟ ಮಾಡುವಾಗ ಫಾಲೋ ಮಾಡಬೇಕಾದ ಫಸ್ಟ್ ಸ್ಟೆಪ ಅಂದರೆ Business Idea Validation and Protection. ನಿಮ್ಮ ತಲೆಯಲ್ಲಿ ಬರುವ ಎಲ್ಲ ಬಿಜನೆಸ್ ಐಡಿಯಾಗಳು ನಿಮಗೆ ಲಾಭವನ್ನು ತಂದುಕೊಂಡಲ್ಲ. ಅದಕ್ಕಾಗಿ ನೀವು ನಿಮ್ಮ ಬಿಜನೆಸ್ ಐಡಿಯಾವನ್ನು ಸರಿಯಾಗಿ ವ್ಯಾಲಿಡೇಟ ಮಾಡಬೇಕು.

* ಮೊದಲು ಸರಿಯಾಗಿ ಮಾರ್ಕೆಟ್ ರೀಸರ್ಚ ಮಾಡಬೇಕು.

* ಮಾರ್ಕೆಟಲ್ಲಿ ನಿಮ್ಮ ಬಿಜನೆಸ್ಸಗೆ ಡಿಮ್ಯಾಂಡ ಇದೆಯಾ ಅಥವಾ ಡಿಮ್ಯಾಂಡನ್ನು ಕ್ರಿಯೆಟ್ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಾ ಎಂಬುದನ್ನು ನೋಡಬೇಕು.

* ನಿಮ್ಮ ಬಿಜನೆಸ್ ಐಡಿಯಾದಿಂದ ಮಾರುಕಟ್ಟೆಯಲ್ಲಿನ ಯಾವ ಪ್ರಾಬ್ಲಮ್ ಸಾಲ್ವ ಆಗುತ್ತಿದೆ ಎಂಬುದನ್ನು ನೋಡಬೇಕು. ನಿಮ್ಮ ಬಿಜನೆಸ್ ಐಡಿಯಾದಿಂದ ಮಾರುಕಟ್ಟೆಯಲ್ಲಿನ ಪ್ರಾಬ್ಲಮ್ ಸಾಲ್ವ ಆಗುತ್ತಿದ್ದರೆ ಮಾತ್ರ ನಿಮಗೆ ಪ್ರೋಫಿಟಾಗುತ್ತದೆ. ಎಷ್ಟು ದೊಡ್ಡ ಪ್ರಾಬ್ಲಮ್ ಸಾಲ್ವ ಆಗುತ್ತೋ ಅಷ್ಟು ದೊಡ್ಡ ಪ್ರೋಫಿಟ ನಿಮ್ಮದಾಗುತ್ತದೆ.

* ನಿಮ್ಮ ಬಿಜನೆಸ್ ಐಡಿಯಾ ಸ್ಕೇಲೆಬಲ್ ಆ್ಯಂಡ್ ಪ್ರೋಫಿಟ ಮೇಕಿಂಗ್ ಆಗುತ್ತಾ ಎಂಬುದನ್ನು ನೋಡಬೇಕು. ನಿಮ್ಮ ಬಿಜನೆಸ್ ಪ್ಯಾಸಿವ್ ಬಿಜನೆಸ್ ಮಾಡೆಲ ಆಗುತ್ತಾ ಎಂಬುದನ್ನು ನೋಡಬೇಕು.

ಇವೆಲ್ಲ ಸಂಗತಿಗಳ ಆಧಾರದ ಮೇಲೆ ನೀವು ನಿಮ್ಮ ಬಿಜನೆಸ್ ಐಡಿಯಾವನ್ನು ಸರಿಯಾಗಿ ವ್ಯಾಲಿಡೇಟ್ ಮಾಡಬೇಕು. ಒಂದು ವೇಳೆ ನಿಮ್ಮ ಬಿಜನೆಸ್ ಐಡಿಯಾ ವ್ಯಾಲಿಡ್ ಆಗಿದ್ದರೆ ನೀವದನ್ನು ಕಾನೂನಾತ್ಮಕವಾಗಿ ಪ್ರೊಟೆಕ್ಟ ಮಾಡಿಸಬೇಕು. ಅಂದರೆ ನಿಮ್ಮ ಬಿಜನೆಸ್ ಐಡಿಯಾಗೆ ಸಂಬಂಧಪಟ್ಟಂತೆ ಕಾಪಿರೈಟ್ಸ, ಪೇಟೆಂಟ್ಸ ಆ್ಯಂಡ್ ಟ್ರೆಡಮಾರ್ಕ ಇತ್ಯಾದಿಗಳನ್ನು ಮಾಡಿಸಬೇಕು.

ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ - You Should Know these things before starting Business in Kannada

Step – 2 : Business Model Making

ನಿಮ್ಮ ಬಿಜನೆಸ್ ಐಡಿಯಾವನ್ನು ವ್ಯಾಲಿಡೆಟ್ ಆ್ಯಂಡ್ ಪ್ರೊಟೆಕ್ಟ ಮಾಡಿದ ನಂತರ ಅನುಸರಿಸಬೇಕಾದ ಎರಡನೇ ಸ್ಟೆಪ ಏನಪ್ಪ ಅಂದ್ರೆ Business Model Making. ಬರೀ ಬಿಜನೆಸ್ ಐಡಿಯಾದಿಂದ ಏನು ಆಗಲ್ಲ. ಆ ಐಡಿಯಾವನ್ನು ಒಂದು ಬೆಸ್ಟ ಬಿಜನೆಸ್ ಮಾಡಲ್ ಆಗಿ ಕನವರ್ಟ ಮಾಡಬೇಕಾಗುತ್ತದೆ. ಈ ಹಂತದಲ್ಲಿ ನಿಮ್ಮ ಬಿಜನೆಸನ ಮ್ಯಾನೇಜಮೆಂಟ ಟೀಮ ಡಿಸೈಡಾಗುತ್ತದೆ. ಅಂದ್ರೆ ನಿಮ್ಮ ಬಿಜನೆಸನ ಮ್ಯಾನೇಜಮೆಂಟ ಕಮೀಟಿಯಲ್ಲಿ ಯಾರ್ಯಾರು ಇರ್ತಾರೆ ಎಂಬುದು ಡಿಸೈಡಾಗುತ್ತದೆ. ಬರೀ ನೀವೊಬ್ಬರೇ ಇಂಡಿಪೆಂಡೆಂಟಾಗಿ ಬಿಜನೆಸ್ ಸ್ಟಾರ್ಟ ಮಾಡ್ತಿರಾ? ಅಥವಾ ನಿಮ್ಮ ಫ್ಯಾಮಿಲಿಯಿಂದ ಯಾರಾದರೂ ಇದರಲ್ಲಿ ಕೈಜೋಡಿಸುತ್ತಾರಾ? ಅಥವಾ ನಿಮ್ಮ ಫ್ರೆಂಡ್ ಸರ್ಕಲನಿಂದ ಯಾರಾದರೂ ನಿಮ್ಮ ಬಿಜನೆಸ್ ಪಾರ್ಟನರ್ ಆಗ್ತಾರಾ? ಯಾರು ಎಷ್ಟು ಹಣ ಹೂಡಿಕೆ ಮಾಡ್ತಾರೆ? ಯಾರಿಗೆ ಎಷ್ಟು ಶೇರಿದೆ? ಯಾರಿಗೆ ಯಾವ ಜವಾಬ್ದಾರಿಯಿದೆ? ಎಂಬಿತ್ಯಾದಿ ವಿಷಯಗಳು ಡಿಸೈಡ ಆಗುತ್ತವೆ. ನಿಮ್ಮ ಮ್ಯಾನೇಜಮೆಂಟ ಟೀಮ ತಯಾರಾದ ನಂತರ ನಿಮ್ಮ ಬಿಜನೆಸ್ ಮಾಡಲನ್ನು ಬಿಲ್ಡ ಮಾಡಬೇಕಾಗುತ್ತದೆ. ನಿಮ್ಮ ಬಿಜನೆಸನ ಎಕ್ಸಿಕುಷನ್ ಪ್ಲ್ಯಾನ, ಬೇಸಿಕ್ ಫಂಡ್ ಅರೆಂಜಮೆಂಟ್ ಪ್ಲ್ಯಾನ್, ಫೈನಾನ್ಸ್ ಮ್ಯಾನೇಜಮೇಂಟ, ಲೀಗಲ್ ಅಡ್ವೈಜರ, CA and CS, ಲೋಕೇಶನ ಆ್ಯಂಡ್ ಆಫೀಸ್, ಅಡ್ವಟೈಜಿಂಗ್ ಬಜೆಟ್, ಸೇಲ್ಸ ಆ್ಯಂಡ್ ಮಾರ್ಕೆಟಿಂಗ್ ಸ್ಟ್ರಾಟರ್ಜಿ ಇತ್ಯಾದಿಗಳನ್ನೆಲ್ಲ ನೀವು ಡಿಸೈಡ ಮಾಡಿದಾಗ ನಿಮ್ಮ ಬಿಜನೆಸ್ ಮಾಡಲ ರೆಡಿಯಾಗುತ್ತದೆ.

ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills in Kannada

Step – 3 : Business Registration and Legalization.

ನಿಮ್ಮ ಬಿಜನೆಸ್ ಮಾಡಲ ರೆಡಿಯಾದಾಗ, ನಿಮ್ಮ ಬಿಜನೆಸ್ ಮಾಡಲ ಮೇಲೆ ನಿಮಗೆ ಭರವಸೆ ಮೂಡಿದಾಗ ನೀವು ಮಾಡಬೇಕಾದ ಮುಂದಿನ ಕೆಲಸವೇನೆಂದರೆ ಬಿಜನೆಸ್ ರೆಜಿಸ್ಟ್ರೇಶನ್ ಆ್ಯಂಡ್ ಲಿಗಲೈಜೆಶನ್. ನೀವು ಯಾವುದೇ ಬಿಜನೆಸ್ಸನ್ನು ಸ್ಟಾರ್ಟ ಮಾಡಬೇಕೆಂದರೂ ಕಂಪಲ್ಸರಿಯಾಗಿ ಗವರ್ನಮೆಂಟ ಕಡೆಯಿಂದ ಪರ್ಮಿಷನನ್ನು ಪಡೆದುಕೊಳ್ಳಲೇಬೇಕು, ಅದನ್ನು ರೆಜಿಸ್ಟ್ರೇಶನ್ ಮಾಡಿಸಿ ಲೀಗಲಾಗಿ ನಡೆಸಬೇಕು. ನಮ್ಮದು ಸ್ಟಾರ್ಟಪ ಆಗಿರುವುದರಿಂದ ನಾನು ಸ್ಟಾರ್ಟಪನ್ನು ಹೇಗೆ ರೆಜಿಸ್ಟ್ರೇಶನ್ ಮಾಡಿಸಬೇಕು ಎಂಬುದರ ಬಗ್ಗೆ ಮಾತ್ರ ಹೇಳುವೆ. ನೀವು ಯಾವ ಬಿಜನೆಸ್ ಸ್ಟಾರ್ಟ ಮಾಡಲು ಬಯಸುತ್ತೀರಿ ಎಂಬುದನ್ನು ಕಮೆಂಟ ಮಾಡಿ, ನಾನು ಅದರ ಬಗ್ಗೆ ಬೇರೆ ಎಪಿಸೋಡ ಮಾಡುವೆ. ಈಗ ಸ್ಟಾರ್ಟಪ ಬಗ್ಗೆ ಮಾತ್ರ ನೋಡೋಣಾ.

ನಮ್ಮ ದೇಶದಲ್ಲಿ ಸ್ಟಾರ್ಟಪಗಾಗಿ ಬೇರೆ ಸ್ಪೆಷಲ್ ರೆಜಿಸ್ಟ್ರೇಶನ್ ಮೆಥಡಗಳೆನಿಲ್ಲ. ಸಾಮಾನ್ಯವಾಗಿ ಸ್ಟಾರ್ಟಪ ಒಂದು ಹೊಸ ಪ್ರೈವೇಟ್ ಲಿಮಿಟೆಡ್ ಕಂಪನಿ ಆಗಿರುತ್ತದೆ ಅಷ್ಟೇ. ನೀವು ಒಂದು ಕಂಪನಿಯನ್ನು ರೆಜಿಸ್ಟ್ರೇಶನ್ ಮಾಡಿಸುವುದಕ್ಕಿಂತ ಮುಂಚೆ ಅದರ ಬಿಜನೆಸ್ ನೇಮ, ಲೋಕೇಶನ, ಬಿಜನೆಸ್ ಓನರಗಳ ಡಾಕುಮೆಂಟಗಳನ್ನು ರೆಡಿಮಾಡಿಕೊಳ್ಳಬೇಕಾಗುತ್ತದೆ ಮತ್ತು ಮಿನಿಸ್ಟ್ರಿ ಆಫ್ ಕಾರ್ಪೊರೆಟ್ ಅಫೇರ್ಸನಿಂದ ನಿಮ್ಮ ಕಂಪನಿಯನ್ನು ಅಪ್ರೂವ ಮಾಡಿಸಿಕೊಂಡು ಲೈಸೆನ್ಸನ್ನು ಪಡೆದುಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ಬಿಜನೆಸ್ ನೇಚರಗೆ ಸಂಬಂಧಪಟ್ಟಂತೆ ಬೇರೆಬೇರೆ ಡಿಪಾರ್ಟಮೆಂಟಗಳಿಂದ ಅವಶ್ಯಕವಾದ ಪರ್ಮಿಶನಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಕೆಲಸಗಳನ್ನೆಲ್ಲಾ ನಿಮ್ಮ ಮ್ಯಾನೇಜಮೆಂಟ ಟೀಮಲ್ಲಿರೋ CA, CS ಹಾಗೂ ಲೀಗಲ್ ಅಡ್ವೈಜರಗಳು ನೋಡಿಕೊಳ್ಳುತ್ತಾರೆ. ನೀವು ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಏನಿಲ್ಲ. ನೀವು ಬರೀ ಅವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೋ ಅಥವಾ ಇಲ್ವೋ ಎಂಬುದನ್ನು ಗಮನಿಸಿದರೆ ಸಾಕು. ನೀವು ನಿಮ್ಮ ಮ್ಯಾನೇಜಮೆಂಟ ಟೀಮ ಮೂಲಕ ಗವರ್ನಮೆಂಟಗೆ ಎಲ್ಲ ಡಾಕ್ಯುಮೆಂಟಗಳನ್ನು ಸರಿಯಾಗಿ ಸಬ್ಮಿಟ ಮಾಡಿ ಮತ್ತು ಗವರ್ನಮೆಂಟ ಪರ್ಮಿಷನ್ ಸಿಗುವ ತನಕ ವೇಟ್ ಮಾಡಿ. ಜನರಲ್ಲಾಗಿ ಒಂದು ತಿಂಗಳ ಒಳಗೆ ಎಲ್ಲ ಸ್ಟಾರ್ಟಪಗಳಿಗೆ ಪರ್ಮಿಷನ್ ಸಿಕ್ಕೇ ಸಿಗುತ್ತದೆ. ಏಕೆಂದರೆ ನಮ್ಮ ಭಾರತ ಸರ್ಕಾರ ಬಿಜನೆಸಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ.

ಹೊಸ ಬಿಜನೆಸ್ ಸ್ಟಾರ್ಟ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ - Don't do these mistakes while starting New Business in Kannada

Step – 4 : Business Starting

ಗವರ್ನಮೆಂಟ ಕಡೆಯಿಂದ ನಿಮ್ಮ ಕಂಪನಿ ರೆಜಿಸ್ಟರ ಆಗಿ ಎಲ್ಲ ಪರ್ಮಿಷನಗಳು ಸಿಕ್ಕಿ ಎಲ್ಲ ಸರ್ಟಿಫಿಕೇಟಗಳು ನಿಮ್ಮ ಕೈ ಸೇರಿದ ನಂತರ ನೀವು ಧೈರ್ಯವಾಗಿ ನಿಮ್ಮ ಬಿಜನೆಸ್ಸನ್ನು ಸ್ಟಾರ್ಟ ಮಾಡಬಹುದು. ನಿಮ್ಮ ಕಂಪನಿ ರೆಜಿಸ್ಟರ ಆದ ನಂತರ ನಿಮ್ಮ ಕಂಪನಿ ಮೇಲೆ ಗವರ್ನಮೆಂಟ ನಿಗಾ ಇಟ್ಟಿರುತ್ತದೆ. ಜೊತೆಗೆ ನಿಮಗೆ ಸೇಪರೆಟಾದ ಬಿಜನೆಸ್ ನೇಮ, ಪ್ಯಾನ್, ಟ್ಯಾನ ಇತ್ಯಾದಿಗಳನ್ನು ಕೊಟ್ಟಿರುತ್ತದೆ. ನೀವು ಇವುಗಳನ್ನು ಬಳಸಿಕೊಂಡು ಒಂದು ಕರೆಂಟ ಅಕೌಂಟನ್ನು ಓಪನ ಮಾಡಬೇಕು. ಈ ಕರೆಂಟ ಅಕೌಂಟಿನಿಂದಲೇ ನೀವು ನಿಮ್ಮ ಫೈನಾನ್ಸನ್ನು ಆಪರೇಟ್ ಮಾಡಬೇಕು, ಜೊತೆಗೆ ಟೈಮ ಟು ಟೈಮ ಗವರ್ನಮೆಂಟನ ಎಲ್ಲ ಕಂಪ್ಲಾಯನ್ಸಗಳನ್ನು ಫುಲಫಿಲ್ ಮಾಡಿ ಗವರ್ನಮೆಂಟ ಜೊತೆಗೆ ಒಳ್ಳೆ ಸಂಬಂಧವನ್ನು ಇಟ್ಟುಕೊಳ್ಳಬೇಕು. ಈ ಕೆಲಸಗಳನ್ನೆಲ್ಲಾ ನಿಮ್ಮ CA, CS ಹಾಗೂ ಲೀಗಲ್ ಅಡ್ವೈಜರಗಳು ಸರಿಯಾಗಿ ಮಾಡುತ್ತಾರೆ. ನೀವು ಸರಿಯಾದ ವರ್ಕಿಂಗ್ ಟೀಮನ್ನು ಬಿಲ್ಡ ಮಾಡಿ ಸರಿಯಾಗಿ ಬಿಜನೆಸ್ ಮಾಡುವುದರ ಕಡೆಗೆ ಮಾತ್ರ ಗಮನ ಹರಿಸಿ. ಹೆಚ್ಚೆಚ್ಚು ಲಾಭಗಳಿಸುವುದರ ಕಡೆಗೆ ಮಾತ್ರ ಗಮನ ಹರಿಸಿ. ನೀವು ಹೆಚ್ಚಿಗೆ ಹಣ ಸಂಪಾದಿಸಿ ಹೆಚ್ಚಿಗೆ ಟ್ಯಾಕ್ಸ ಕಟ್ಟಿದರೆ ನಿಮಗೆ ಗವರ್ನಮೆಂಟ ಕಡೆಯಿಂದ ಬಹಳಷ್ಟು ಸಪೋರ್ಟ್ ಆ್ಯಂಡ್ ಸ್ಪೆಸಿಲಿಟಿಗಳು ಸಿಗುತ್ತವೆ. ನೀವು ಅವುಗಳನ್ನು ಕನಸ್ಸಲ್ಲೂ ಊಹಿಸಿರಲ್ಲ. ನೀವು ಸರಿಯಾಗಿ ಬಿಜನೆಸ್ ಮಾಡಿ, ಸರಿಯಾಗಿ ಟ್ಯಾಕ್ಸ ಕಟ್ಟಿದರೆ ನಿಮಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಎದುರಾದರೂ ಗವರ್ನಮೆಂಟ ಹಾಗೂ ಕಾನೂನು ನಿಮ್ಮ ಬೆನ್ನ ಹಿಂದಿರುತ್ತೆ.

ಬಿಜನೆಸ್ಸನ್ನು ಸ್ಟಾರ್ಟ ಮಾಡುವುದು ಹೇಗೆ? - How to Start Business? How to start Start-up? in Kannada

ಓಕೆ ಗೆಳೆಯರೇ, ಇದಿಷ್ಟು ಬಿಜನೆಸ್ಸನ್ನು ಮತ್ತು ಸ್ಟಾರ್ಟಪನ್ನು ಸ್ಟಾರ್ಟ ಮಾಡುವ ಸರಿಯಾದ ಮತ್ತು ಬೆಸ್ಟ ಮೆಥಡ. ನಿಮಗಿದು ಅರ್ಥವಾಗಿದೆ ಅನ್ಕೋತ್ತೀನಿ. ಏನಾದರೂ ಅನುಮಾನಗಳಿದ್ದರೆ ಅವುಗಳನ್ನು ತಪ್ಪದೆ ಕಮೆಂಟ ಮಾಡಿ ಮತ್ತು ಈ ವಿಡಿಯೋಗೆ ಲೈಕ್ ಮಾಡಿ. All the Best and Thanks You…

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books