5 ಗೋಲ್ಡನ್ ಸ್ಕಿಲಗಳು – 5 Golden Skills – Top 5 Skills to Grow in your Job and Business in Kannada

You are currently viewing 5 ಗೋಲ್ಡನ್ ಸ್ಕಿಲಗಳು – 5 Golden Skills – Top 5 Skills to Grow in your Job and Business in Kannada

ಹಾಯ್ ಗೆಳೆಯರೇ, ನಮ್ಮ ಬದುಕು ವಿದ್ಯೆಗಿಂತ ಹೆಚ್ಚಾಗಿ ಬುದ್ಧಿಯ ಮೇಲೆ ನಿರ್ಧಾರಿತವಾಗುತ್ತದೆ. ನಮ್ಮಲ್ಲಿರುವ ಕೌಶಲ್ಯಗಳ ಆಧಾರದ ನಮ್ಮ ಸಂಪಾದನೆ ನಿರ್ಧಾರವಾಗುತ್ತದೆ. ಉದಾಹರಣೆಗೆ ; ಯಾವುದೇ ಕಂಪನಿಯನ್ನು ತೆಗೆದುಕೊಳ್ಳಿ, ಸಾಮಾನ್ಯವಾಗಿ ಅದರಲ್ಲಿ ತಿಂಗಳಿಗೆ 10 ಸಾವಿರದಿಂದ ಹಿಡಿದು 1 ಕೋಟಿ ಸಂಬಳ ಪಡೆಯುವ ನೌಕರರಿರುತ್ತಾರೆ. ಆ ಕಂಪನಿಯ ವಾಚಮನ 10 ಸಾವಿರ ಸಂಬಳ ಪಡೆಯುತ್ತಾನೆ, ಹೆಚ್ಚಿಗೆ ಓದಿ ಡಿಗ್ರಿಗಳನ್ನು ಪಡೆದುಕೊಂಡು ಕೆಲಸ ಮಾಡುತ್ತಿರುವ ನೌಕರರು ತಿಂಗಳಿಗೆ 20 ಸಾವಿರ ಸಂಬಳ ಪಡೆಯುತ್ತಾರೆ. ಸೂಪರವೈಜರ 40 ಸಾವಿರ ಸಂಬಳ ಪಡೆಯುತ್ತಾನೆ. ಪ್ರೊಜೆಕ್ಟ್ ಮ್ಯಾನೇಜರ ಅಥವಾ ಟೀಮ್ ಲೀಡರ್ 1 ಲಕ್ಷದವರೆಗೆ ಸಂಬಳ ಪಡೆಯುತ್ತಾನೆ. ಆದರೆ ಆ ಕಂಪನಿಯ CEO ತಿಂಗಳಿಗೆ 1 ಕೋಟಿ ಸಂಬಳ ಪಡೆಯುತ್ತಾನೆ. ಇದು ಜಸ್ಟ ಒಂದು ಎಕ್ಸಾಮಪಲ್ ಅಷ್ಟೇ. ಇಲ್ಲಿ ಇವರಿಗೆ ಇವರ ಡಿಗ್ರಿಗಳ ಆಧಾರದ ಮೇಲೆ ಸಂಬಳ ಸಿಗುತ್ತಿಲ್ಲ. ಇವರ ಕೌಶಲ್ಯಗಳ ಆಧಾರದ ಮೇಲೆ ಸಂಬಳ ಸಿಗುತ್ತಿದೆ. ಯಾವುದೇ ಕೌಶಲ್ಯಗಳಿಲ್ಲದ ವಾಚಮನ 10 ಸಾವಿರ ಸಂಪಾದಿಸುತ್ತಾನೆ, ಅದೇ ಕಂಪನಿಯಲ್ಲಿ ಎಲ್ಲ ಕೌಶಲ್ಯಗಳಿರುವ CEO ಕೋಟಿ ಸಂಪಾದಿಸುತ್ತಾನೆ. ನಿಮ್ಮ ಅರ್ನಿಂಗ್ ನಿಮ್ಮ ಲರ್ನಿಂಗ್ ಮೇಲೆ ಡಿಸೈಡ ಆಗುತ್ತದೆ. ಅದಕ್ಕಾಗಿ ಹೆಚ್ಚು ಹೆಚ್ಚು ಕೌಶಲ್ಯಗಳನ್ನು ಅಂದರೆ ಸ್ಕಿಲ್ಸಗಳನ್ನು ಬೆಳೆಸಿಕೊಳ್ಳಬೇಕು. ನಿಮಗೆ High profile salary ಇರುವ ಜಾಬ್ ಬೇಕಿದ್ದರೆ ಅಥವಾ ನಿಮಗೆ ನಿಮ್ಮ ಬಿಜನೆಸನಲ್ಲಿ ಮ್ಯಾಸೀವ ಗ್ರೋಥ ಆ್ಯಂಡ್ ಸಕ್ಸೆಸ್ ಬೇಕಿದ್ದರೆ ನೀವು ಈ 5 ಸ್ಕೀಲ್ಸಗಳನ್ನು ಬೆಳೆಸಿಕೊಳ್ಳಲೇಬೇಕು. ಈ ಸ್ಕೀಲ್ಸಗಳು ಒಂದೇ ದಿನದಲ್ಲಿ ಬೆಳೆಯಲ್ಲ. ನೀವು ದಿನಾಲು ಪ್ರ್ಯಾಕ್ಟೀಸ ಮಾಡಿ ಇವುಗಳನ್ನು ಹಂತಹಂತವಾಗಿ ಬೆಳೆಸಿಕೊಳ್ಳಬೇಕು. ಆ 5 ಸ್ಕೀಲ್ಸಗಳು ಇಂತಿವೆ.

5 ಗೋಲ್ಡನ್ ಸ್ಕಿಲಗಳು - 5 Golden Skills - Top 5 Skills to Grow in your Job and Business in Kannada

1) ಸಾಫ್ಟ ಸ್ಕೀಲ್ಸ : Soft Skills

ನೀವು ಹಾರ್ಡ ಸ್ಕೀಲ್ ಜೊತೆಗೆ ಸಾಫ್ಟ ಸ್ಕೀಲಗಳನ್ನ ಬೆಳೆಸಿಕೊಳ್ಳಲೇಬೇಕು. ಏಕೆಂದರೆ ನಿಮ್ಮ ಹಾರ್ಡ ಸ್ಕೀಲನಿಂದ ನಿಮಗೆ ಕೆಲಸ ಸಿಕ್ಕೆ ಸಿಗುತ್ತದೆ. ಆದರೆ ಆ ಕೆಲಸದಲ್ಲಿ ನೀವು ಗ್ರೋ ಆಗಬೇಕೆಂದರೆ ನಿಮ್ಮಲ್ಲಿ ಸಾಫ್ಟ ಸ್ಕೀಲಗಳಿರಲೇಬೇಕು. ನೀವು ಯಾವುದರಲ್ಲಿ ಎಕ್ಸಪರ್ಟ ಆಗಿರುತ್ತಿರೋ ಅದು ನಿಮ್ಮ ಹಾರ್ಡ ಸ್ಕೀಲ ಆಗುತ್ತದೆ. ನಿಮ್ಮ ಹಾರ್ಡ ಸ್ಕೀಲನ್ನು ರಿಪ್ರಜೆಂಟ ಮಾಡಲು ಹಾಗೂ ಮಾರ್ಕೆಟಿಂಗ್ ಮಾಡಲು ಬಳಕೆಯಾಗುವ ಸ್ಕೀಲಗಳು ಸಾಫ್ಟ ಸ್ಕೀಲಗಳಾಗುತ್ತವೆ.

ಉದಾಹರಣೆಗೆ : ನೀವೊಬ್ಬ ಪ್ರೀ ವೆಡ್ಡಿಂಗ್ ಫೋಟೋಗ್ರಾಫರ್ ಆಗಿದ್ದರೆ ಫೋಟೋಗ್ರಾಫಿ ನಿಮ್ಮ ಹಾರ್ಡ ಸ್ಕೀಲ ಆಗುತ್ತದೆ. ನೀವು ನಿಮ್ಮ ಕ್ಲೈಂಟಗಳೊಂದಿಗೆ ಹೇಗೆ ಕಮ್ಯುನಿಕೇಟ್ ಮಾಡುತ್ತೀರಿ, ಹೇಗೆ ಬಿಹೇವ ಮಾಡುತ್ತೀರಿ, ನಿಮ್ಮ ಬಾಡಿ ಲಾಂಗ್ವೇಜ ಯಾವ ರೀತಿ ಇರುತ್ತದೆ, ನೀವು ಅವರೊಂದಿಗೆ ಹೇಗೆ ಬೆರೆಯುತ್ತೀರಿ, ನೀವು ಅವರಿಗೆ ಹೇಗೆ ನಿಮ್ಮ ಐಡಿಯಾವನ್ನು ಪ್ರಜೆಂಟ ಮಾಡುತ್ತೀರಿ, ನೀವು ಹೇಗೆ ಅವರೊಂದಿಗೆ ನೆಗೊಶಿಯೇಟ್ ಮಾಡುತ್ತೀರಿ ಎಂಬುದೆಲ್ಲಾ ನಿಮ್ಮ ಸಾಫ್ಟ ಸ್ಕೀಲಗಳಾಗುತ್ತವೆ. ಒಂದು ವೇಳೆ ನಿಮ್ಮಲ್ಲಿ ಸಾಫ್ಟ ಸ್ಕೀಲಗಳಿಲ್ಲದಿದ್ದರೆ ನೀವು ನಿಮ್ಮ ಜಾಬಲ್ಲಿ ಅಥವಾ ಬಿಜನೆಸ್ಸಲ್ಲಿ ಗ್ರೋ ಆಗಲು ಸಾಧ್ಯವೇ ಇಲ್ಲ. ನೀವು ಕಸ್ಟಮರಗಳೊಂದಿಗೆ ಸರಿಯಾಗಿ ಮಾತನಾಡದಿದ್ದರೆ, ಅವರೊಂದಿಗೆ ಸರಿಯಾಗಿ ಬಿಹೇವ ಮಾಡದಿದ್ದರೆ ಅವರು ಮತ್ತೊಮ್ಮೆ ನಿಮಗೆ ಕೆಲಸ ಕೊಡುವುದಿಲ್ಲ. ಅದಕ್ಕಾಗಿ Communication skills, Presentation skills, Negotiation skills, Stage performance, Body language, Leadership skills, professional skills, people & social skillsಗಳನ್ನು ಬೆಳೆಸಿಕೊಳ್ಳಿ.

5 ಗೋಲ್ಡನ್ ಸ್ಕಿಲಗಳು - 5 Golden Skills - Top 5 Skills to Grow in your Job and Business in Kannada

2) ಕ್ರಿಟಿಕಲ್ ಥಿಂಕಿಂಗ್ : Critical Thinking

ನಿಮಗೆ ನಿಮ್ಮ ಜಾಬನಲ್ಲಿ ಇಲ್ಲವೇ ಬಿಜನೆಸನಲ್ಲಿ ಬೇಗನೆ ಗ್ರೋ ಆಗಬೇಕೆಂಬ ಆಸೆಯಿದ್ದರೆ ನಿಮ್ಮಲ್ಲಿ ಕ್ರಿಟಿಕಲ್ ಥಿಂಕಿಂಗ್ ಇರಲೇಬೇಕು. ಅಂದರೆ ನೀವು ನಿಮ್ಮ ಕೆಲಸದಲ್ಲಾಗುವ ಪ್ರತಿ ಏಳುಬೀಳುಗಳನ್ನು, ನಷ್ಟಗಳನ್ನು, ಸಮಸ್ಯೆಗಳನ್ನು ಲಾಜಿಕಲ್ಲಾಗಿ ನೋಡಬೇಕು. ಲಾಜಿಕಲ್ಲಾಗಿ ಯೋಚಿಸಬೇಕು. ಮೊದಲು ಸಮಸ್ಯೆ ಎಲ್ಲಿದೆ ಎಂಬುದನ್ನು ಅನಲೈಜ ಮಾಡಬೇಕು. ಕಠಿಣ ಪರಿಸ್ಥಿತಿಗಳಿಗೆ, ಸಮಸ್ಯೆಗಳಿಗೆ ಚಾಲೆಂಜ್ ಮಾಡಬೇಕು. ಅವುಗಳನ್ನು question ಮಾಡಬೇಕು. ಯಾಕೆ ಸಮಸ್ಯೆ ಸಾಲ್ವ ಆಗಲ್ಲ? ಎಂದು ಪ್ರಶ್ನಿಸಿ ಬಂದಿರುವ ಸಮಸ್ಯೆಗೆ ಶಾಂತಚಿತ್ತದಿಂದ ಯೋಚಿಸಿ ಶೀಘ್ರ ಪರಿಹಾರವನ್ನು ಹುಡುಕಬೇಕು. ನಿಮ್ಮಲ್ಲಿ ಕ್ರಿಟಿಕಲ ಥಿಂಕಿಂಗ್ ಇಲ್ಲದಿದ್ದರೆ ನಿಮ್ಮಿಂದ ಯಾವ ಸಮಸ್ಯೆಗೂ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಕ್ರಿಟಿಕಲ್ ಥಿಂಕಿಂಗ್ ಇರದಿದ್ದರೆ ನಿಮ್ಮಿಂದಲೇ ನಿಮ್ಮ ಕೆಲಸದಲ್ಲಿ ಅನಾವಶ್ಯಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಅದಕ್ಕಾಗಿ ನೀವು ಲಾಜಿಕಲ್ಲಾಗಿ ಯೋಚಿಸಿ, ಪ್ರ್ಯಾಕ್ಟಿಕಲ್ಲಾಗಿ ಕೆಲಸ ಮಾಡಬೇಕು. ನೀವು ಲಾಜಿಕಲ್ಲಾಗಿ ಥಿಂಕ್ ಮಾಡಿ ಪ್ರ್ಯಾಕ್ಟಿಕಲ್ಲಾಗಿ ಕೆಲಸ ಮಾಡಿದರೆ ನಿಮ್ಮ ಗ್ರೋಥ ರೇಟ್ ಸ್ಪೀಡಾಗಿರುತ್ತದೆ.

5 ಗೋಲ್ಡನ್ ಸ್ಕಿಲಗಳು - 5 Golden Skills - Top 5 Skills to Grow in your Job and Business in Kannada

3) ಮಾನಸಿಕ ಬುದ್ಧಿಮತ್ತೆ : Emotional Intelligence

ನೀವು ಎಮೋಷನಲ್ಲಾದಷ್ಟು ನೀವು ಮೋಸ ಹೋಗುತ್ತೀರಿ. ನೀವು ಎಮೋಷನಲ್ ಫೂಲಾದಷ್ಟು ನಷ್ಟವನ್ನು ಅನುಭವಿಸುತ್ತೀರಿ, ತಪ್ಪುಗಳನ್ನು ಮಾಡುತ್ತೀರಿ. ಅದಕ್ಕಾಗಿ ಎಮೋಷನಲ್ ಫೂಲಾಗಬೇಡಿ. ಜಾಬ್ ಅಥವಾ ಬಿಜನೆಸನ ಗ್ರೋಥನಲ್ಲಿ ಎಮೋಷನಲ್ ಇಂಟಲಿಜೆನ್ಸ ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅದಕ್ಕಾಗಿ ಎಮೋಷನಲ್ ಇಂಟಲಿಜೆನ್ಸನ್ನು ಬೆಳೆಸಿಕೊಳ್ಳಿ. ನೀವು ಬರೀ ವಟವಟ ಅಂತಾ ಮಾತನಾಡದೆ ಮೊದಲು ಸರಿಯಾಗಿ ಕೇಳಿಸಿಕೊಳ್ಳುವುದನ್ನು ಕಲಿಯಬೇಕು. ನೀವು ಸ್ವಲ್ಪ ಮ್ಯಾಚುರಾಗಿ ವರ್ತಿಸುವುದನ್ನು ಕಲಿಯಬೇಕು. ಯಾವಾಗ ನೀವು ಬೇರೆಯವರನ್ನು ನಿಂದಿಸುವುದನ್ನು ಬಿಟ್ಟು ನಿಮ್ಮ ಕೆಲಸಗಳನ್ನು ನೀವು ಸರಿಯಾಗಿ ಮಾಡುತ್ತೀರೋ ಅವತ್ತು ನೀವು ಮ್ಯಾಚುರ್ ಆಗಿದ್ದೀರಿ ಎಂದರ್ಥ. ಯಾವಾಗ ನಿಮಗೆ, ಯಾವಾಗ ಮಾತನಾಡಬೇಕು? ಯಾವಾಗ ಮಾತನಾಡಬಾರದು? ಎಲ್ಲಿ ಏನು ಮಾತನಾಡಬೇಕು? ಏನು ಕೇಳಿಸಿಕೊಳ್ಳಬೇಕು? ಎಂಬಿತ್ಯಾದಿ ವಿಷಯಗಳು ಅರ್ಥವಾಗುತ್ತವೆಯೋ ಅವತ್ತು ನೀವು ಮ್ಯಾಚುರ್ ಆದಂತೆ. ಆದಕಾರಣ ಮ್ಯಾಚುರ್ ಆಗಿ ಹಾಗೂ ಎಮೊಷನಲಿ ಇಂಟಲಿಜೆಂಟಾಗಿ ವರ್ತಿಸಿ.

5 ಗೋಲ್ಡನ್ ಸ್ಕಿಲಗಳು - 5 Golden Skills - Top 5 Skills to Grow in your Job and Business in Kannada

4) ಪೊಜಿಟಿವ ಥಿಂಕಿಂಗ್ ಹಾಗೂ ಕ್ರಿಯೆಟಿವಿಟಿ ; Positive Thinking & Creativity

ನೀವು ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಸ್ವಲ್ಪ ನೆಗೆಟಿವ್ ಆಗಿ ಯೋಚಿಸಬೇಕು. ನಾನು ಪ್ರಾರಂಭಿಸುತ್ತಿರುವ ಕೆಲಸ ಸಕ್ಸೆಸಫುಲ್ ಆಗುತ್ತಾ? ಅದರ ಬೇಡಿಕೆ ಇದೆಯಾ? ಅದರಲ್ಲಿ ಲಾಭವಿದೆಯಾ? ಎಂಬಿತ್ಯಾದಿ ಪ್ರಶ್ನೆಗಳನ್ನು ನಿಮಗೆ ನೀವು ಕೇಳಿಕೊಳ್ಳಬೇಕು. ಪೊಜಿಟಿವ ಉತ್ತರಗಳು ಸಿಕ್ಕರೆ ಮಾತ್ರ ಮುಂದುವರೆಯಬೇಕು. ಒಮ್ಮೆ ಪೊಜಿಟಿವ ಉತ್ತರಗಳು ಸಿಕ್ಕರೆ ಯಾವುದೇ ಕಾರಣಕ್ಕೂ ಮತ್ತೆಮತ್ತೆ ನೆಗೆಟಿವ್ ಆಲೋಚನೆಗಳನ್ನು ಮಾಡದೇ ಟಾರ್ಗೆಟ ಕಡೆಗೆ ಫೋಕಸ್ ಮಾಡಬೇಕು. 100% ಎಫರ್ಟನೊಂದಿಗೆ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಬೇಕು. ನಿಮ್ಮಲ್ಲಿ ಲಿಡರಶೀಪ ಕ್ವಾಲಿಟಿಯೊಂದಿಗೆ ಡಿಸಿಜನ ಮೇಕಿಂಗ್ ಸ್ಕೀಲ್ಸ ಇರಲೇಬೇಕು. ಬರೀ ದೇಶಕ್ಕೆ ಮಾತ್ರ ಉತ್ತಮ ಲೀಡರನ ಕೊರತೆಯಿಲ್ಲ, ಪ್ರತಿಯೊಂದು ಬಿಜನೆಸಗೆ, ಪ್ರತಿಯೊಂದು ಕಂಪನಿಗೆ ಉತ್ತಮ ವಿಜನರಿ ಲೀಡರನ ಅವಶ್ಯಕತೆ ತುಂಬಾನೇ ಇದೆ. ಅದಕ್ಕಾಗಿ ಪೋಜಿಟಿವ ಮೆಂಟ್ಯಾಲಿಟಿ ಬೆಳೆಸಿಕೊಳ್ಳಿ. ಲಿಡರಶೀಪ ಗುಣವನ್ನು ಬೆಳೆಸಿಕೊಳ್ಳಿ. ಮೆಂಟಲಿ ಹಾಗೂ ಫಿಜಿಕಲಿ ಫಿಟ್ಟಾಗಿರಿ. ನಿಮ್ಮನ್ನು ನೋಡಿದ ನಂತರ ನಿಮ್ಮ ಸುತ್ತಮುತ್ತಲಿನ ಜನರಿಗೆ ಮೋಟಿವೇಷನ ಸಿಗಬೇಕು, ಕಾನ್ಫಿಡೆನ್ಸ ಬಂದು ಮುಖದ ಮೇಲೆ ರಿಯಲ್ ಸ್ಮೈಲ್ ಮೂಡಬೇಕು. ಆ ರೀತಿಯ ಅಟ್ರ್ಯಾಕ್ಟಿವ ಪರ್ಸಾಲಿಟಿ ನಿಮ್ಮದಾಗಿರಬೇಕು.

5 ಗೋಲ್ಡನ್ ಸ್ಕಿಲಗಳು - 5 Golden Skills - Top 5 Skills to Grow in your Job and Business in Kannada

5) ಅಡಾಪ್ಶನ್ ಸ್ಕೀಲ್ಸ : Adoption Skills

ಗೆಳೆಯರೇ, ಸದ್ಯಕ್ಕೆ ಮಾರುಕಟ್ಟೆಯಲ್ಲಿ ಯಾವ ರೀತಿಯ ಕಾಂಪಿಟೇಷನ ಇದೆಯೆಂದರೆ ಇವತ್ತು ಹೊಸದಾಗಿ ಮಾರ್ಕೆಟಗೆ ಬಂದಿರುವ ಪ್ರೊಡಕ್ಟ ಇವತ್ತೇ ಹಳೆಯದಾಗುತ್ತದೆ. ಕಾಂಪಿಟೆಷನ್ ಬಹಳಷ್ಟಿದೆ. ಅದಕ್ಕಾಗಿ ನೀವು ಅಡಾಪ್ಶನ ಸ್ಕೀಲನ್ನು ಬೆಳೆಸಿಕೊಳ್ಳಲೇಬೇಕು. ನೀವು ಹೊಸ ಟೆಕ್ನಾಲಜಿಗೆ ಹಾಗೂ ಟ್ರೆಂಡಗಳಿಗೆ ತಕ್ಕಂತೆ ನೀವು ಅಪಡೇಟ್ ಆಗಬೇಕು. ಒಂದು ವೇಳೆ ನೀವು ಅಪಡೇಟ್ ಆಗದಿದ್ದರೆ ನೀವು ಮಾರುಕಟ್ಟೆಯಿಂದ ಆದಷ್ಟು ಬೇಗನೆ ಅನಇನಸ್ಟಾಲ ಆಗುತ್ತೀರಿ.

ಉದಾಹರಣೆಗಾಗಿ ; ಜನರಲ್ ಮೋಟರ್ಸ್, ನೋಕಿಯಾ ಮೊಬೈಲ್, ಯಾಹೂ ಮೇಲ್, ಕೊಡಕ್ ಕ್ಯಾಮರಾ ಇತ್ಯಾದಿ.

5 ಗೋಲ್ಡನ್ ಸ್ಕಿಲಗಳು - 5 Golden Skills - Top 5 Skills to Grow in your Job and Business in Kannada

ಗೆಳೆಯರೇ, ನೀವು ಜಾಬ್ ಮಾಡಿ ಇಲ್ಲವೇ ಬಿಜನೆಸ್ ಮಾಡಿ. ನಿಮ್ಮಲ್ಲಿ ಈ 5 ಸ್ಕೀಲಗಳು ಇರಲೇಬೇಕು. ಈ ಸ್ಕೀಲಗಳಿಲ್ಲದೆ ನೀವು ಒಂದು Top Levelಗೆ ಹೋಗಲು ಸಾಧ್ಯವಿಲ್ಲ. ಅದಕ್ಕಾಗಿ ಈ ಸ್ಕೀಲಗಳನ್ನು ಬೆಳೆಸಿಕೊಳ್ಳಿ ಹಾಗೂ ಸಕ್ಸೆಸಫುಲ್ಲಾಗಿರಿ.

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books