ನಿಮ್ಮಲ್ಲಿರುವ ಭಯವನ್ನು ಸಾಯಿಸುವುದು ಹೇಗೆ? – How to Be Fearless in Kannada

You are currently viewing ನಿಮ್ಮಲ್ಲಿರುವ ಭಯವನ್ನು ಸಾಯಿಸುವುದು ಹೇಗೆ? – How to Be Fearless in Kannada

ಈ ಭಯ ಅನ್ನೋದು ಮನುಷ್ಯನಲ್ಲಿರುವ ಒಂದು ಬೇಸಿಕ್ ಭಾವನೆಯಷ್ಟೇ. Yes, Fear is basic human nature. ಭಯಪಡದ ವ್ಯಕ್ತಿ ಈ ಭೂಮಿಯ ಮೇಲಿಲ್ಲ. ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಭಯಪಡುತ್ತಾರೆ. ಸಾವಿರಾರು ತರಹದ ಭಯಗಳಿವೆ. ಕೆಲವರು ದೆವ್ವಗಳಿಗೆ ಹೆದರಿದರೆ, ಕೆಲವರು ಬೆಕ್ಕುಗಳಿಗೆ ಹೆದರುತ್ತಾರೆ. ಕೆಲವರು ನೀರಿಗೆ ಹೆದರಿದರೆ, ಕೆಲವರು ನೀರೆಯರಿಗೆ ಹೆದರುತ್ತಾರೆ. ಕೆಲವರು ಪಬ್ಲಿಕಲ್ಲಿ ಮಾತಾಡಲು ಹೆದರಿದರೆ, ಕೆಲವರು ಕತ್ತಲ ಕೋಣೆಯಲ್ಲಿ ಒಬ್ಬರೇ ಮಲಗಲು ಹೆದರುತ್ತಾರೆ. ಈ ರೀತಿ ನಾನಾ ತರಹದ ಭಯಗಳಿವೆ. ಈ ಭಯದಿಂದ ನಮಗೆ ಲಾಭವೂ ಇದೆ. ನಷ್ಟವೂ ಇದೆ. ಈ ಭಯ ನಮ್ಮ ಎನರ್ಜಿಯನ್ನು ಹಾಳು ಮಾಡುತ್ತದೆ. ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಕುಂದಿಸುತ್ತದೆ. ಈ ಭಯ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಸೋಲಿನ ಭಯದಿಂದಲೇ ನಾವು ಹೊಸದಾಗಿ ಏನನ್ನೂ ಕಲಿಯುವುದಿಲ್ಲ. ಹೊಸದಾಗಿ ಏನನ್ನೂ ಮಾಡುವುದಿಲ್ಲ.

ನಿಮ್ಮಲ್ಲಿರುವ ಭಯವನ್ನು ಸಾಯಿಸುವುದು ಹೇಗೆ? - How to Be Fearless in Kannada

ಈ ಭಯ ನಮ್ಮನ್ನು ಎಷ್ಟೋ ಸಲ ಕಾಪಾಡುತ್ತೆ, ಕೆಲವು ಸಲ ಕಾಲೆಳೆಯುತ್ತೆ, ಕೆಲವು ಸಲ ನಮ್ಮನ್ನು ಕೊಲ್ಲುತ್ತದೆ. ಉದಾಹರಣೆಗಾಗಿ ನಾವು ಜೋಷಿನಲ್ಲಿ ಕಾರನ್ನು ಜೋರಾಗಿ ಅಡ್ಡಾದಿಡ್ಡಿಯಾಗಿ ಓಡಿಸಲು ಪ್ರಾರಂಭಿಸಿದರೆ ಪ್ರಾಣಭಯ ನಮ್ಮನ್ನು ಸರಿದಾರಿಗೆ ತಂದು ಸರಿಯಾಗಿ ಸಾವಕಾಶವಾಗಿ ಕಾರನ್ನು ಚಲಾಯಿಸುವಂತೆ ಮಾಡುತ್ತದೆ. ಈ ರೀತಿ ಪ್ರಾಣಭಯ ನಮ್ಮನ್ನು ಕಾಪಾಡುತ್ತದೆ. ನಮ್ಮಲ್ಲಿನ ಹಿಂಜರಿಕೆಯ ಭಯ ನಮ್ಮನ್ನು ಸ್ಟೇಜ ಮೇಲತ್ತಿ ನಾಲ್ಕು ಜನರ ಮುಂದೆ ಮಾತಾಡದಂತೆ ಕಟ್ಟಿ ಹಾಕುತ್ತದೆ. ಈ ರೀತಿ ಹಿಂಜರಿಕೆ ಭಯ ನಮ್ಮ ಕಾಲೆಳೆಯುತ್ತದೆ. ರಾತ್ರಿ ಕತ್ತಲಲ್ಲಿ ನಾವು ಒಬ್ಬರೇ ಹೋಗುವಾಗ ನಮ್ಮ ಮೇಲೆ ಹಗ್ಗ ಬಿದ್ದರೆ ನಾವು ಹಾವೆಂದುಕೊಂಡು ಹೆದರಿ ಎದೆಯೊಡೆದುಕೊಂಡು ಸಾಯುತ್ತೇವೆ. ಈ ರೀತಿ ಕಾಲ್ಪನಿಕ ಭಯ ನಮ್ಮನ್ನು ಕೊಲ್ಲುತ್ತದೆ. ನಮಗೆ ನಮ್ಮನ್ನು ಕಾಪಾಡುವ ಭಯದ ಅವಶ್ಯಕತೆ ಇದೆ. ನಮಗೆ ನಮ್ಮ ಕಾಲೆಳುವ, ನಮ್ಮನ್ನು ಕೊಲ್ಲುವ ಭಯದ ಅವಶ್ಯಕತೆ ಇಲ್ಲ.

ನಿಮ್ಮಲ್ಲಿರುವ ಭಯವನ್ನು ಸಾಯಿಸುವುದು ಹೇಗೆ? - How to Be Fearless in Kannada

ಈ ಭಯಗಳಲ್ಲಿ ಎರಡು ವಿಧ. ಒಂದು ಮಾನಸಿಕ ಭಯ (Psychological Fear), ಎರಡನೆಯದ್ದು ದೈಹಿಕ ಭಯ (Physical Fear). ಈ ಭಯಗಳು ಕೇವಲ ನಮ್ಮ ಮನಸ್ಸಲ್ಲಿರುತ್ತವೆಯೇ ಹೊರತು ರಿಯಾಲಿಟಿಯಲ್ಲಲ್ಲ. ಈ ಭಯಗಳ ಬಗ್ಗೆ ಒಂದೊಂದಾಗಿ ನೋಡೋಣಾ.

೧) ಮಾನಸಿಕ ಭಯ : (Psychological Fear)

ಈ ಮಾನಸಿಕ ಭಯ ಕೆಲವು ಸಲ ನಮ್ಮ ಕಾಲೆಳೆಯುತ್ತದೆ. ಕೆಲವು ಸಲ ನಮ್ಮನ್ನು ಕೊಲ್ಲುತ್ತದೆ. ಹೀಗಾಗಿ ನಮಗೆ ಈ ಮಾನಸಿಕ ಭಯದ ಅವಶ್ಯಕತೆ ಇಲ್ಲ. ಇದನ್ನು ನಾವು ಕೊಲ್ಲಲೇಬೇಕು. ಇಲ್ಲವಾದರೆ ಇದು ನಮ್ಮನ್ನು ಕೊಲ್ಲುತ್ತದೆ. ನಮ್ಮ ಏಳ್ಗೆಯನ್ನು ತಡೆಯುತ್ತದೆ. ಉದಾಹರಣೆಗಾಗಿ ಸಾರ್ವಜನಿಕ ಭಾಷಣದ ಭಯ, ಸೋಲಿನ ಭಯ, ಸಮಾಜದ ಭಯ, ಸಾವಿನ ಭಯ ಇತ್ಯಾದಿ. ಜನ ನಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂಬ ಭಯದಿಂದ ನಾವು ಪಬ್ಲಿಕಲಿ ಮಾತನಾಡಲು ಹಿಂಜರಿದು ಹಿಂದೆ ಉಳಿಯುತ್ತೇವೆ. ಸೋಲುತ್ತೇವೆ ಎಂಬ ಭಯದಿಂದ ನಾವು ಹೊಸದಾಗಿ ಏನನ್ನು ಕಲಿಯುವುದಿಲ್ಲ ಮತ್ತು ಹೊಸದಾಗಿ ಏನನ್ನು ಮಾಡುವುದಿಲ್ಲ. ಕೆಲವು ಜನರಿಗೆ ನಾನು ಈಗಲೇ ಸತ್ತರೆ, ಇಲ್ಲ ಅವಳು ಅಥವಾ ಅವನು ನನ್ನನ್ನು ಬಿಟ್ಟೊದರೆ, ನನ್ನಿಂದ ದೂರಾದರೆ ಎಂಬ ಭಯಗಳಿರುತ್ತವೆ. ಈ ಭಯಗಳಿಂದ ಅವರು ಯಾವಾಗಲೂ ಗೊಂದಲದಲ್ಲಿಯೇ ಬದುಕುತ್ತಾರೆ. ಈ ಮಾನಸಿಕ ಭಯದಿಂದಾಗಿ ಅವರು ತಮ್ಮ ಜೀವನದಲ್ಲಿ ಮಹತ್ತರವಾದ ಏನನ್ನೂ ಸಾಧಿಸುವುದಿಲ್ಲ.

ನಿಮ್ಮಲ್ಲಿರುವ ಭಯವನ್ನು ಸಾಯಿಸುವುದು ಹೇಗೆ? - How to Be Fearless in Kannada

ಈ ಮಾನಸಿಕ ಭಯವನ್ನು ಕೊಲ್ಲಲು ಒಂದೇ ಒಂದು ಸುಲಭ ಉಪಾಯವಿದೆ. ಈ ಮಾನಸಿಕ ಭಯವನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ಅದನ್ನು ಸಾಯಿಸಬಹುದು. ಈ ಮಾನಸಿಕ ಭಯ ರಿಯಾಲಿಟಿಯಲ್ಲಿಲ್ಲ. ಅದು ಕೇವಲ ನಮ್ಮ ಮೆಂಟಾಲಿಟಿಯಲ್ಲಿರುತ್ತದೆ. ಅನಾವಶ್ಯಕವಾಗಿ ಯೋಚಿಸುವುದನ್ನು ನಿಲ್ಲಿಸಿ, ಪ್ರಸೆಂಟನಲ್ಲಿ ಬದುಕುವುದಕ್ಕೆ ಪ್ರಾರಂಭಿಸಿದರೆ ಈ ಮಾನಸಿಕ ಭಯ ತಾನಾಗಿಯೇ ನಾಶವಾಗುತ್ತದೆ.

ನಿಮ್ಮಲ್ಲಿರುವ ಭಯವನ್ನು ಸಾಯಿಸುವುದು ಹೇಗೆ? - How to Be Fearless in Kannada

೨) ದೈಹಿಕ ಭಯ (Physical Fear)

ಈ ದೈಹಿಕ ಭಯ ಬಹಳಷ್ಟು ಸಂದರ್ಭಗಳಲ್ಲಿ ನಮ್ಮನ್ನು ಕಾಪಾಡುತ್ತದೆ. ತಪ್ಪು ಕೆಲಸಗಳಿಗೆ ಕೈ ಹಾಕದಂತೆ ನಮ್ಮನ್ನು ತಡೆಯುತ್ತದೆ. ಇದು ನಮ್ಮಲ್ಲಿ ಜಾಗೃತಿಯನ್ನು ಮೂಡಿಸುತ್ತದೆ. ಈ ದೈಹಿಕ ಭಯದಿಂದ ನಮಗೆ ಯಾವುದೇ ಹಾನಿಗಳಿಲ್ಲ, ಜೊತೆಗೆ ಸಾಕಷ್ಟು ಲಾಭಗಳಿವೆ. ಉದಾಹರಣೆಗಾಗಿ ನೀರಿನ ಭಯ, ಬೆಂಕಿಯ ಭಯ, ಸಮುದ್ರದ ಭಯ, ಹಣವನ್ನು ಕಳೆದುಕೊಳ್ಳುವ ಭಯ, ಬ್ಯುಸಿನೆಸನ ಭಯ, ಸಕ್ಸೆಸನ ಭಯಗಳನ್ನು ನಾವು ದೈಹಿಕ ಭಯ ಎನ್ನಬಹುದು. ಈಜಲು ಬರುತ್ತದೆ ಅಂತಾ ಬಾವಿಯಲ್ಲಿ ಈಜಿದ ಅನುಭವವಿಟ್ಟುಕೊಂಡು ಸಮುದ್ರಕ್ಕೆ ನೆಗೆದರೆ ಪ್ರಾಣ ಹೋಗುವ ಸಾಧ್ಯತೆ ಅಧಿಕವಾಗಿರುತ್ತದೆ. ಆ ಸಂದರ್ಭದಲ್ಲಿ ನಮ್ಮಲ್ಲಿನ ದೈಹಿಕ ಭಯ ನಮ್ಮನ್ನು ನೇರವಾಗಿ ಸಮುದ್ರಕ್ಕೆ ನೆಗೆಯದಂತೆ ತಡೆಯುತ್ತದೆ. ಸಾಕಷ್ಟು ದುಡ್ಡಿದೆಯಂತಾ ಅನುಭವವಿಲ್ಲದೆ ಬ್ಯುಸಿನೆಸ್ ಪ್ರಾರಂಭಿಸಿದರೆ ನಾವು ಬೀದಿ ಭೀಕಾರಿಗಳಾಗುವುದಂತು ಗ್ಯಾರಂಟಿ. ಇಂಥ ಪರಿಸ್ಥಿತಿಗಳಲ್ಲಿ ನಮ್ಮಲ್ಲಿನ ದೈಹಿಕ ಭಯ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಈ ರೀತಿ ದೈಹಿಕ ಭಯ ನಮ್ಮನ್ನು ಕಾಪಾಡುತ್ತದೆ.

ನಿಮ್ಮಲ್ಲಿರುವ ಭಯವನ್ನು ಸಾಯಿಸುವುದು ಹೇಗೆ? - How to Be Fearless in Kannada

ಕೆಲವು ಸಂದರ್ಭಗಳಲ್ಲಿ ನಾವು ದೈಹಿಕ ಭಯವನ್ನು ಕೊಲ್ಲಬೇಕಾಗುತ್ತದೆ. ಉದಾಹರಣೆಗಾಗಿ ನೀರಿಗೆ ಹೆದರಿ ನಾವು ಈಜು ಕಲಿಯಲು ಹಿಂದೇಟು ಹಾಕುತ್ತೇವೆ. ಆದರೆ ಈಜು ಕಲಿಯದಿದ್ದರೆ ಮುಂದೊಂದು ದಿನ ನೀರಿಗೆ ಬಿದ್ದು ನಮ್ಮ ಪ್ರಾಣ ಹೋಗಬಹುದು. ಅದಕ್ಕಾಗಿ ನಾವು ಈಜು ಕಲಿಯಲೇಬೇಕು. ಈ ದೈಹಿಕ ಭಯವನ್ನು ನಾವು ಪ್ಲ್ಯಾನಿಂಗ್ ಮಾಡಿ ಕೆಲಸ ಮಾಡುವುದರಿಂದ, ಸರಿಯಾಗಿ ಕಲಿಯುವುದರಿಂದ ಸಂಪೂರ್ಣವಾಗಿ ನಾಶ ಮಾಡಬಹುದು. ನಾವು ದೈಹಿಕ ಭಯವನ್ನು ಧೈರ್ಯವಾಗಿ ಫೇಸ್ ಮಾಡಿದರೆ ಮುಗೀತು ಅದು ತಂತಾನೇ ಮಾಯವಾಗುತ್ತದೆ.

ನಿಮ್ಮಲ್ಲಿರುವ ಭಯವನ್ನು ಸಾಯಿಸುವುದು ಹೇಗೆ? - How to Be Fearless in Kannada

ಎಲ್ಲ ತರಹದ ಭಯಗಳಿಂದ ಹೊರಬರಲು ಕೆಲವು ಸುಲಭ ಉಪಾಯಗಳು ಇಂತಿವೆ ;

೧) ನಿಮ್ಮ ತಿಳುವಳಿಕೆಯನ್ನು ಅಂದರೆ Understandingನ್ನು ಹೆಚ್ಚಿಸುವುದರ ಮೂಲಕ ನಿಮ್ಮಲ್ಲಿನ ಮಾನಸಿಕ ಭಯವನ್ನು ಸಾಯಿಸಿ.

೨) ಸರಿಯಾಗಿ ಪ್ಲ್ಯಾನಿಂಗ್ ಮಾಡಿ ಕೆಲಸ ಮಾಡುವುದರ ಮೂಲಕ, ಕಲಿಯುವುದರ ಮೂಲಕ, ಧೈರ್ಯವಾಗಿ ಎದುರಿಸುವ ಮೂಲಕ ನಾವು ದೈಹಿಕ ಭಯವನ್ನು ಸಾಯಿಸಬಹುದು.

೩) ನಿಮ್ಮ ತಿಳುವಳಿಕೆಯನ್ನು ಮತ್ತು ನಾಲೇಡ್ಜನ್ನು ಹೆಚ್ಚಿಸುವ ಮೂಲಕ ನೀವು ನಿಮ್ಮಲ್ಲಿನ ಭಯವನ್ನು ನಾಶ ಮಾಡಬಹುದು. ಉದಾಹರಣೆಗಾಗಿ ನಿಮ್ಮಲ್ಲಿ ಕಾನೂನಿನ ಬಗ್ಗೆ ಅರಿವಿದ್ದರೆ, ನಾಲೇಡ್ಜ ಇದ್ದರೆ ನೀವು ಅನಾವಶ್ಯಕವಾಗಿ ಪೊಲೀಸರಿಗೆ ಹೆದರುವುದು ತಪ್ಪುತ್ತದೆ.

೪) ನೆಗೆಟಿವ್ ವಸ್ತುಗಳಿಂದ ದೂರವಿರಿ. ನೆಗೆಟಿವ್ ಜನರಿಂದ ದೂರವಿರಿ. ನೆಗೆಟಿವ್ ಆಗಿ ಯೋಚಿಸುವುದನ್ನು ನಿಲ್ಲಿಸಿ.

ನಿಮ್ಮಲ್ಲಿರುವ ಭಯವನ್ನು ಸಾಯಿಸುವುದು ಹೇಗೆ? - How to Be Fearless in Kannada

೫) ಯಾವಾಗಲೂ ಫಿಟ್ ಆ್ಯಂಡ್ ಆಕ್ಟೀವ್ ಆಗಿರಿ. ದಿನಾಲು ಎಕ್ಸರಸೈಜ್ ಮಾಡಿ. ಯೋಗ ಪ್ರಾಣಾಯಾಮ ಧ್ಯಾನಗಳನ್ನು ಮಾಡಿ.

೬) ನಿಮ್ಮನ್ನು ಹೆದರಿಸುವ ವಸ್ತುಗಳನ್ನು, ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಕಲ್ಪನಾ ಲೋಕದಿಂದ ಹೊರಬಂದು ವಾಸ್ತವದಲ್ಲಿ ಬದುಕುವುದನ್ನು ಕಲಿಯಿರಿ. ಅನಾವಶ್ಯಕವಾಗಿ ಯೋಚಿಸುವುದನ್ನು ನಿಲ್ಲಿಸಿ.

೭) ಮೊದಲು ನಿಮ್ಮನ್ನು ನೀವು ನಂಬಿ. ನೀವು ಏನು ಬೇಕಾದರೂ ಮಾಡಬಲ್ಲಿರಿ ಎಂಬುದನ್ನು ನಂಬಿ. ಭಯದ ಬಗ್ಗೆ ಅನಾವಶ್ಯಕವಾಗಿ ಯೋಚಿಸುವುದನ್ನು ನಿಲ್ಲಿಸಿ, ಆ್ಯಕ್ಷನಗಳನ್ನು ತೆಗೆದುಕೊಳ್ಳಿ. ಆತ್ಮವಿಶ್ವಾಸದೊಂದಿಗೆ ಎಲ್ಲ ಕೆಲಸಗಳನ್ನು ಮಾಡಿ. ಬರುವುದೆಲ್ಲವನ್ನು ಎದುರಿಸಲು ಸನ್ನದ್ಧರಾಗಿ. ಭಯವನ್ನು ಅಪ್ಪಿಕೊಂಡು ಅದನ್ನು ಎದುರಿಸಿ ಅದನ್ನು ನಾಶಪಡಿಸಿ.

ಹೆದರಿಕೊಂಡು ನೂರು ವರ್ಷ ಬದುಕುವುದಕ್ಕಿಂತ ಧೈರ್ಯವಾಗಿ ಒಂದು ದಿನ ಬದುಕುವುದು ಹೆಮ್ಮೆಯ ವಿಷಯ. ಆದ್ದರಿಂದ ನಿಮ್ಮಲ್ಲಿರುವ ಭಯವನ್ನು ಸಾಯಿಸಿ ಮತ್ತು ಧೈರ್ಯದಿಂದ ಬದುಕಿ… All the Best and Thanks you…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books