ಈಮೇಲ ಮಾರ್ಕೆಟಿಂಗ್ – Email Marketing in Kannada

You are currently viewing ಈಮೇಲ ಮಾರ್ಕೆಟಿಂಗ್ – Email Marketing in Kannada

Business Lesson 23

ಹಾಯ್ ಗೆಳೆಯರೇ, ಇವತ್ತಿನ ಬಿಜನೆಸ ಲೆಸನನಲ್ಲಿ ಈಮೇಲ ಮಾರ್ಕೆಟಿಂಗ್ ಬಗ್ಗೆ ಡಿಸ್ಕಸ ಮಾಡೋಣಾ. ಇತ್ತೀಚಿಗೆ ಈಮೇಲ ಮಾರ್ಕೆಟಿಂಗ್ ಕೂಡ ಒಂದು ಬೆಸ್ಟ ಡಿಜಿಟಲ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿಯಾಗಿದೆ. ಜನರಲ್ಲಾಗಿ ಈಮೇಲನ್ನು ಯುಜ ಮಾಡುತ್ತಿರುವವರು ಪ್ರೋಫೆಷನಲ್ಲಾಗಿರುತ್ತಾರೆ, ಎಜುಕೇಟೆಡಾಗಿರುತ್ತಾರೆ, ಮ್ಯಾಚುರಾಗಿರುತ್ತಾರೆ. ನೀವು ಇಂಥವರಿಗೆ ನಿಮ್ಮ ಪರ್ಸನಲೈಜ್ಡ ಅಡ್ವಟೈಜಮೆಂಟಗಳನ್ನು ತೋರಿಸಿದರೆ ಬೇಗನೆ ಲೀಡ್ ಜನರೇಟ ಆಗುವ ಸಾಧ್ಯತೆ ‌ತುಂಬಾನೆ ಇರುತ್ತದೆ. ದೊಡ್ಡದೊಡ್ಡ ವ್ಯಕ್ತಿಗಳು ಹೆಚ್ಚಾಗಿ ಸೋಸಿಯಲ್ ಮೀಡಿಯಾಗಳನ್ನು ಯುಜ ಮಾಡಲ್ಲ. ಇಂಥವರನ್ನು ನೀವು ಕಸ್ಟಮರಗಳನ್ನಾಗಿ ಕನವರ್ಟ ಮಾಡಿಕೊಳ್ಳಬೇಕಂದರೆ ಈಮೇಲ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ಬೆಸ್ಟಾಗಿದೆ. ಈಮೇಲ ಮಾರ್ಕೆಟಿಂಗ್ ಮೂಲಕ ನೀವು ಬಿಗ ಆಡಿಯನ್ಸಗಳನ್ನ, ಲಾರ್ಜ ನಂಬರ ಆಫ್ ಕಸ್ಟಮರಗಳನ್ನ ಪರ್ಸನಲ್ಲಾಗಿ ಟಾರ್ಗೆಟ ಮಾಡಬಹುದು. ಈಮೇಲ ಮಾರ್ಕೆಟಿಂಗ್ ಮೂಲಕ ನೀವು ನಿಮ್ಮ ವಿಡಿಯೋ ಕೋರ್ಸುಗಳನ್ನು, ಸಾಫ್ಟವೇರಗಳನ್ನು, ಸರ್ವಿಸಗಳನ್ನು, ಪ್ರೋಡಕ್ಟಗಳನ್ನು ಈಜಿಯಾಗಿ ಸೆಲ್ ಮಾಡಬಹುದು. ನಿಮ್ಮ ಎಲ್ಲ ಕಸ್ಟಮರಗಳ ಡಾಟಾ ಬೇಸನ್ನು ತಯಾರಿಸಿ ಅವರನ್ನು ಸರಿಯಾಗಿ ಮ್ಯಾನೇಜ ಮಾಡಬಹುದು. ಅವರಿಗೆ ನಿಮ್ಮ ಹೊಸ ಆಫರಗಳ ಬಗ್ಗೆ ಮೇಲ್ ಮಾಡಿ ಮತ್ತೆ ಅವರಿಗೆ ರಿಮಾರ್ಕೆಟಿಂಗ ಮಾಡಬಹುದು, ರಿಸೆಲ್ ಮಾಡಬಹುದು. ಅವರೊಂದಿಗೆ ಎಮೊಷನಲಿ ಕನೆಕ್ಟಾಗಿ ಅವರೊಂದಿಗೆ ಒಂದೊಳ್ಳೆ ರಿಲೆಷನಶೀಪನ್ನು ಬಿಲ್ಡ ಮಾಡಬಹುದು. ಈಮೇಲ ಮಾರ್ಕೆಟಿಂಗನಿಂದ ಇಷ್ಟೆಲ್ಲ ಲಾಭಗಳಿವೆ. ಸೋ ಬನ್ನಿ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ ಈಮೇಲ ಮಾರ್ಕೆಟಿಂಗನ್ನು ಹೇಗೆ ಮಾಡೋದಂತ ನೋಡೋಣಾ ;

Step – 1 : Collection of Email Ids

ಈಮೇಲ ಮಾರ್ಕೆಟಿಂಗನಲ್ಲಿ ನೀವು ಮಾಡಬೇಕಾದ ಮೊದಲ ಕೆಲಸ ಏನಪ್ಪ ಅಂದ್ರೆ ನೀವು ಹೇಗಾದರೂ ಮಾಡಿ ನಿಮ್ಮ ಟಾರ್ಗೆಟ ಆಡಿಯನ್ಸಗಳ ಈಮೇಲ ಐಡಿಗಳನ್ನ ಕಂಪಲ್ಸರಿಯಾಗಿ ಕಲೆಕ್ಟ ಮಾಡಬೇಕು. ಹೇಗ ಕಲೆಕ್ಟ ಮಾಡ್ತಿರಾ ಈಮೇಲ ಐಡಿಗಳನ್ನ? ಡೊಂಟ ವರಿ, ಇದು ಸಿಂಪಲಾಗಿದೆ.

ನೀವು ಫೀಡಬ್ಯಾಕ ಫಾರ್ಮಗಳ ಮೂಲಕ, ಆನಲೈನ ಸರ್ವೆಗಳ ಮೂಲಕ, ಲೈವ ಸೆಷನಗಳ ಮೂಲಕ, ಫ್ರಿ ವಿಡಿಯೋ ಲೆಸನಗಳ ಮೂಲಕ, ಬ್ಲಾಗಗಳ ಮೂಲಕ ಈಮೇಲ ಐಡಿಗಳನ್ನ ಕಲೆಕ್ಟ ಮಾಡಬಹುದು‌. ನೀವು ನಿಮ್ಮ ಟಾರ್ಗೆಟ ಆಡಿಯನ್ಸಗಳಿಗೆ ಫ್ರಿ ವೆಬಿನಾರ ಮಾಡಿಯೂ ಅವರ ಈಮೇಲ ಐಡಿಗಳನ್ನ ಈಜಿಯಾಗಿ ಕಲೆಕ್ಟ ಮಾಡಬಹುದು. ಅವರು ಫ್ರಿ ವೆಬಿನಾರಗೆ ಅಟೆಂಡಾಗುವಾಗ ತಮ್ಮ ಹೆಸರು, ಫೋನ ನಂಬರ ಮತ್ತು ಈಮೇಲ ಐಡಿ ಕೊಟ್ಟು ರೆಜಿಸ್ಟರ್ ಆಗಿರುತ್ತಾರೆ‌. ಅದನ್ನೆ ನೀವು ಸರಿಯಾಗಿ ಕಲೆಕ್ಟ ಮಾಡಿಕೊಳ್ಳಿ. ಅಲ್ಲದೇ ನೀವು ನಿಮ್ಮ ಟಾರ್ಗೆಟ ಆಡಿಯನ್ಸಗಳಿಗೆ ಫ್ರೀ ಈ ಬುಕಗಳನ್ನು ಡೌನಲೋಡ ಮಾಡಲು ಕೊಟ್ಟು ಡೌನಲೋಡ ಮಾಡಿಕೊಳ್ಳುವುದಕ್ಕಿಂತ ಮುಂಚೆ ಅವರ ಈಮೇಲ ಐಡಿಗಳನ್ನ ಕಂಪಲ್ಸರಿಯಾಗಿ ಕೊಡುವಂತೆ ಮಾಡಬಹುದು. ಈ ರೀತಿ ಈಜಿ ಮೆಥಡಗಳ ಮೂಲಕ ನಿಮ್ಮ ಟಾರ್ಗೆಟ ಆಡಿಯನ್ಸಗಳ ಈಮೇಲ ಐಡಿಗಳನ್ನ ಕಲೆಕ್ಟ ಮಾಡಬಹುದು. ಮೊದಲು ಹೇಗಾದರೂ ಮಾಡಿ ನಿಮ್ಮ ಟಾರ್ಗೆಟ ಆಡಿಯನ್ಸಗಳ ಈ ಮೇಲ ಐಡಿಗಳನ್ನ ಕಲೆಕ್ಟ ಮಾಡಿ.

Step -2 : Installation of Automatic Email Management Software

ನೀವು ನಿಮ್ಮ ಟಾರ್ಗೆಟ ಆಡಿಯನ್ಸಗಳ ಅಂದರೆ ಕಸ್ಟಮರಗಳ ಈಮೇಲ ಐಡಿಗಳನ್ನ ಕಲೆಕ್ಟ ಮಾಡಿದ ನಂತರ ನೀವು ಅವುಗಳನ್ನು ಸರಿಯಾಗಿ ಮ್ಯಾನೇಜ ಮಾಡಬೇಕು. ಅದಕ್ಕಾಗಿ ನಿಮಗೆ ಆಟೋಮ್ಯಾಟಿಕ್ ಈಮೇಲ ಮ್ಯಾನೇಜಮೆಂಟ ಸಾಫ್ಟ‌ವೇರಗಳ ಅವಶ್ಯಕತೆ ಬೀಳುತ್ತದೆ. ಸದ್ಯಕ್ಕೆ ಮಾರ್ಕೆಟನಲ್ಲಿ ಎರಡು ಈಮೇಲ ಮಾರ್ಕೆಟಿಂಗ್ ಸಾಫ್ಟ‌ವೇರಗಳು ಸದ್ದು ಮಾಡ್ತಿವೆ‌. ಅವುಗಳಲ್ಲಿ ಒಂದು – Active Campaign, ಇನ್ನೊಂದು – Mail Chimp. ಪರ್ಸನಲ್ಲಾಗಿ ನಾನು Mail Chimp ಸಾಫ್ಟವೇರನ್ನು ರೆಕಮೆಂಡ ಮಾಡುವೆ‌. ಏಕೆಂದರೆ ನಾವು ನಮ್ಮ ಕಂಪನಿಯಲ್ಲಿ ಹೆಚ್ಚಾಗಿ Mail Chimpನ್ನೇ ಯುಜ ಮಾಡುತ್ತೇವೆ. ನೀವು ಈಮೇಲ ಮಾರ್ಕೆಟಿಂಗ್ ಮಾಡಲು Mail Chimp ಅಥವಾ Active Campaign ಸಾಫ್ಟ‌ವೇರಗಳನ್ನು ಯುಜ ಮಾಡಬಹುದು.

ನೀವು ಈ ಆಟೋಮ್ಯಾಟಿಕ್ ಈಮೇಲ ಮ್ಯಾನೇಜಮೆಂಟ ಸಾಫ್ಟವೇರಗಳ ಮೂಲಕ ಒಂದೇ ಸಲಕ್ಕೆ ನೂರಾರು ಈಮೇಲಗಳನ್ನು ಸೆಂಡ ಮಾಡಬಹುದು ಅಂದರೆ Unlimited Bulk Emailಗಳನ್ನು ಕಳುಹಿಸಬಹುದು. ಯಾರಾದರೂ ನಿಮ್ಮ ಸರ್ವಿಸ್ ಬಗ್ಗೆ ಅಥವಾ ಪ್ರೊಡಕ್ಟ ಬಗ್ಗೆ ಎನ್ಕ್ವೈರಿ ಮಾಡಿದರೆ ನೀವು ಈ ಸಾಫ್ಟವೇರಗಳ ಮೂಲಕ ಆಟೋಮ್ಯಾಟಿಕ್ ರಿಪ್ಲೆ ಈಮೇಲಗಳನ್ನು ಸೆಂಡ ಮಾಡಬಹುದು. ಪ್ರೋಡಕ್ಟ ಸೇಲ್ ಆದ ತಕ್ಷಣವೇ ಆಟೋಮ್ಯಾಟಿಕ್ ಪರಚೇಸ ಕನಫರ್ಮೆಷನ ಈಮೇಲನ್ನು ಕಳುಹಿಸಬಹುದು. ನೀವು ಒಂದ ಸರ್ತಿ ಇವುಗಳನ್ನು ಸೆಟ್ ಮಾಡಿದರೆ ಮುಗಿತು ಇವು ಆಟೋಮ್ಯಾಟಿಕಾಗಿ ವರ್ಕಾಗುತ್ತವೆ. ಈ ಸಾಫ್ಟ‌ವೇರಗಳು ಫುಲ್ಲಿ ಅಟೋಮ್ಯಾಟಿಕ್ಕಾಗಿ ಕೆಲಸ ಮಾಡುತ್ತವೆ, ನೀವು ಒಂದ್ಸಲ ನಿಮ್ಮ ಟಾರ್ಗೆಟ ಸೆಟ ಮಾಡಿದರೆ ಮುಗಿತು. ಪದೇಪದೇ ಮ್ಯಾನುವಲಿ ಕೆಲಸ ಮಾಡುವ ಅಗತ್ಯತೆ ನಿಮಗೆ ಬೀಳಲ್ಲ.

ಈ ಸಾಫ್ಟ‌ವೇರಗಳ ಮೂಲಕ ನೀವು ನಿಮ್ಮ ಕಸ್ಟಮರಗಳ ಡಾಟಾಬೇಸನ್ನು ಮೆಂಟೆನ ಮಾಡಬಹುದು. ಸಾವಿರಾರು ಕಸ್ಟಮರಗಳಿಗೆ ಒಂದೇ ಒಂದು ಕ್ಲಿಕ್ಕಲ್ಲಿ ನಿಮ್ಮ ಮುಂದಿನ ಆಫರಗಳ ಬಗ್ಗೆ ಈಮೇಲ ಮಾಡಬಹುದು. ನೀವು ಕಳುಹಿಸಿದ ಈಮೇಲನ್ನು ನಿಮ್ಮ ಕಸ್ಟಮರಗಳು ನೋಡಿದ್ದಾರಾ ಅಥವಾ ಇಲ್ವಾ ಎಂಬುದನ್ನು ಸಹ ತಿಳಿದುಕೊಳ್ಳಬಹುದು. ಒಂದು ವೇಳೆ ಅವರು ನಿಮ್ಮ ಈಮೇಲನ್ನು ನೋಡಿ ನಿಮ್ಮ ಪ್ರೋಡಕ್ಟನ್ನು ಖರಿದಿಸಿದರೆ ಅವರನ್ನು ಟಾರ್ಗೆಟ ಲಿಸ್ಟನಿಂದ ಆಟೋಮ್ಯಾಟಿಕಾಗಿ ರಿಮೂವ ಮಾಡಬಹುದು. ನೀವು ಎಷ್ಟೇ ಈಮೇಲಗಳನ್ನು ಕಳುಹಿಸಿದರೂ ಸಹ ರಿಸ್ಪಾನ್ಸ ಮಾಡದ ಯುಜಲೆಸ ಕಸ್ಟಮರಗಳನ್ನು ಸಹ ನೀವು ಈಜಿಯಾಗಿ ಫಿಲ್ಟರ್ ಮಾಡಬಹುದು. ಬರೀ ಇಂಟರೆಸ್ಟೆಡ ಕಸ್ಟಮರಗಳ ಜೊತೆಗಷ್ಟೇ ಕ್ಯಾಂಟ್ಯಾಕ್ಟ ಇಟ್ಟುಕೊಳ್ಳಬಹುದು. ಈ ರೀತಿ ನೀವು ಈಮೇಲ ಮಾರ್ಕೆಟಿಂಗ್ ಮೂಲಕ ನಿಮ್ಮ ಬಿಜನೆಸನ್ನು ಈಜಿಯಾಗಿ ಮ್ಯಾನೇಜ ಮಾಡಬಹುದು ಮತ್ತು ಫಾಸ್ಟೆಸ್ಟಾಗಿ ಗ್ರೋ ಮಾಡಬಹುದು.

ಈಮೇಲ ಮಾರ್ಕೆಟಿಂಗ್ ಸಾಫ್ಟ‌ವೇರ್ ಸಿಕ್ಕಿದೆ ಅಂತ ಸಿಕ್ಕಸಿಕ್ಕವರಿಗೆಲ್ಲ ಈಮೇಲ ಮಾಡಬೇಡಿ. ಬರೀ ನಿಮ್ಮ ವಾರ್ಮ ಮತ್ತು ಹಾಟ ಕಸ್ಟಮರಗಳಿಗಷ್ಟೇ ಈಮೇಲ ಮಾಡಿ. ಕೋಲ್ಡ ಆಡಿಯನ್ಸಗಳ ಜೊತೆಗೆ ಬಹಳಷ್ಟು ಟೈಮವೆಸ್ಟ ಮಾಡಬೇಡಿ. ಕಸ್ಟಮರಗಳಲ್ಲಿ ಮೂರ ಟೈಪ ಇರ್ತಾರೆ.

೧) ಕೋಲ್ಡ ಕಸ್ಟಮರ – ಇವರಿಗೆ ನಿಮ್ಮ ಬಗ್ಗೆ ಮತ್ತು ನಿಮ್ಮ‌ ಬಿಜನೆಸ ಬಗ್ಗೆ ಏನು ಗೊತ್ತಿರಲ್ಲ. ಇವರಿಗೆ ನೀವು ಎಷ್ಟೇ ಈಮೇಲ ಮಾಡಿದರೂ ಸಹ ಇವರು ನಿಮ್ಮ ಪ್ರೋಡಕ್ಟಗಳನ್ನು ಅಥವಾ ಸರ್ವಿಸನ್ನು ಪರಚೇಸ ಮಾಡುವ ಸಾಧ್ಯತೆ ತುಂಬಾನೇ ಕಮ್ಮಿ ಇರುತ್ತೆ‌. ಇಂಥವರಿಗೆ ಜಾಸ್ತಿ ಈಮೇಲಗಳನ್ನು ಕಳುಹಿಸದಿರುವುದು ಬೆಟರ್ ಆಗಿದೆ.

೨) ವಾರ್ಮ ಕಸ್ಟಮರ – ಇವರಿಗೆ ನಿಮ್ಮ ಬಗ್ಗೆ ಹಾಗೂ ನಿಮ್ಮ ಬಿಜನೆಸ ಬಗ್ಗೆ ಅಲ್ಪಸ್ವಲ್ಪ ಗೊತ್ತಿರುತ್ತದೆ‌. ನೀವು ಇವರಿಗೆ ಸರಿಯಾದ ಆ್ಯಡಗಳನ್ನು ಕಳುಹಿಸಿ ಸರಿಯಾಗಿ ಟಾರ್ಗೆಟ ಮಾಡಿದರೆ ಇವರು ಬೇಗನೆ ನಿಮ್ಮ ಪ್ರೋಡಕ್ಟಗಳನ್ನು ಪರಚೇಸ ಮಾಡುವ ಸಾಧ್ಯತೆ ತುಂಬಾನೇ ಇರುತ್ತೆ. ಇವರಿಗೆ ಸರಿಯಾಗಿ ಈಮೇಲಗಳನ್ನು ಕಳುಹಿಸಿ. ಇವರಿಗೆ ನಿಮ್ಮ ಪ್ರೋಡಕ್ಟ ಅಥವಾ ಸರ್ವಿಸ ಬಗ್ಗೆ ಸರಿಯಾಗಿ ಅವೇರನೆಸ್ಸನ್ನು ಮೂಡಿಸಿ.

೩) ಹಾಟ್ ಕಸ್ಟಮರ – ಇವರು ಆಲರೆಡಿ ನಿಮ್ಮ ಸರ್ವಿಸ್ ಅಥವಾ ಪ್ರೋಡಕ್ಟಗಳನ್ನು ಖರೀದಿಸಿ ನಿಮಗೆ ಕಸ್ಟಮರಗಳಾಗಿರುತ್ತಾರೆ. ಇವರಿಗೆ ನಿಮ್ಮ ಬಿಜನೆಸ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ‌. ನೀವು ಇವರಿಗೆ ನಿಮ್ಮ ಮುಂದಿನ ಆಫರಗಳ ಬಗ್ಗೆ ಈಮೇಲ ಮಾಡಿ ಸ್ವಲ್ಪ ಡಿಸ್ಕೌಂಟ ಇಲ್ಲವೇ ಎಕ್ಸಟ್ರಾ ಬೆನಫಿಟ್ಸ ಕೊಟ್ರೆ ಸಾಕು ಇವರು ಬೇಗನೆ ನಿಮ್ಮ ಪ್ರೋಡಕ್ಟನ್ನು ಪರಚೇಸ್ ಮಾಡುತ್ತಾರೆ. ಸೋ ನೀವು ವಾರ್ಮ ಹಾಗೂ ಹಾಟ ಕಸ್ಟಮರಗಳ ಮೇಲೆ ಜಾಸ್ತಿ ಫೋಕಸ ಮಾಡಿ. ಕೋಲ್ಡ ಕಸ್ಟಮರಗಳನ್ನು ವಾರ್ಮ ಕಸ್ಟಮರಗಳನ್ನಾಗಿ ಕನವರ್ಟ ಮಾಡಲು ಟ್ರಾಯ ಮಾಡಿ.

ಓಕೆ‌ ಗೆಳೆಯರೇ ಫೈನ, ಇದೀಷ್ಟು ಈಮೇಲ ಮಾರ್ಕೆಟಿಂಗಗೆ ಸಂಬಂಧಿಸಿದ ಸಣ್ಣ ಥಿಯರಿ ಕ್ಲಾಸ್. ನಿಮಗೆ ಈಮೇಲ ಮಾರ್ಕೆಟಿಂಗನ್ನು ‌ಪ್ರ್ಯಾಕ್ಟಿಕಲ್ಲಾಗಿ‌ ಕಲಿಯುವಲ್ಲಿ ಇಂಟರೆಸ್ಟ ಇದ್ದರೆ ವಿಡಿಯೋ ಡಿಸ್ಕ್ರಿಕ್ಷನಲ್ಲಿ ಕೊಟ್ಟಿರೋ ಫಾರ್ಮನ್ನು ಫಿಲ ಮಾಡಿ.‌ ನಮ್ಮ ಕೋರ್ಸ ರಿಲೀಸಾದಾಗ ನಿಮಗೆ ನೋಟಿಫಿಕೇಷನ ಬರುತ್ತದೆ. All the Best and Thanks You…

Email Marketing Course Notification Form : Click Here

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books