ಹೊಸ ಬಿಜನೆಸ್ ಸ್ಟಾರ್ಟ ಮಾಡಲು ಇದು ಗುಡ್ ಟೈಮಾ ಅಥವಾ ಬ್ಯಾಡ್ ಟೈಮಾ? – Is it best time to start new business?

You are currently viewing ಹೊಸ ಬಿಜನೆಸ್ ಸ್ಟಾರ್ಟ ಮಾಡಲು ಇದು ಗುಡ್ ಟೈಮಾ ಅಥವಾ ಬ್ಯಾಡ್ ಟೈಮಾ? – Is it best time to start new business?

Business QNA -01:

ಹಾಯ್ ಗೆಳೆಯರೇ, ಬಿಜನೆಸಗೆ ಸಂಬಂಧಪಟ್ಟಂತೆ ಕೆಲವೊಂದಿಷ್ಟು ಪ್ರಶ್ನೆಗಳು ಬಂದಿವೆ. ಅವುಗಳಲ್ಲಿನ ಒಂದು ಪ್ರಶ್ನೆಯನ್ನು ಇವತ್ತಿನ ಬಿಜನೆಸ್ QNAದಲ್ಲಿ ನೋಡೋಣಾ. ಆ ಪ್ರಶ್ನೆ ಇಂತಿದೆ‌ ; “ಸರ್ ಸದ್ಯಕ್ಕೆ ಕೋವಿದ-19 ಹಾಗೂ ಲಾಕಡೌನನಿಂದ ದೇಶದ ಎಕಾನಮಿ ಬಿದ್ದಿದೆ. ಇದು ಹೊಸ ಬಿಜನೆಸ್ ಸ್ಟಾರ್ಟ ಮಾಡಲು ಗುಡ್ ಟೈಮಾ ಅಥವಾ ಬ್ಯಾಡ್ ಟೈಮಾ?”.

ಹೊಸ ಬಿಜನೆಸ್ ಸ್ಟಾರ್ಟ ಮಾಡಲು ಇದು ಗುಡ್ ಟೈಮಾ ಅಥವಾ ಬ್ಯಾಡ್ ಟೈಮಾ? - Is it best time to start new business?

ಮೊದಲನೆದಾಗಿ ಪ್ರಶ್ನೆ ಕಳುಹಿಸಿದಕ್ಕೆ ಧನ್ಯವಾದಗಳು ಮಾಧವ. ನೋಡಿ ಸರ್ ಕೋವಿದ-19 ಹಾಗೂ ಲಾಕಡೌನನಿಂದ ಎಲ್ಲ ಬಿಜನೆಸಮ್ಯಾನಗಳಿಗೂ ಸಿಕ್ಕಾಪಟ್ಟೆ ನಷ್ಟವಾಗಿದೆ. ನನಗೂ ನಷ್ಟವಾಗಿದೆ. ಈಗ ಲಾಕಡೌನ ಸಡಿಲವಾಗಿದೆ. ಬಿಜನೆಸ್ ರಿಓಪನ ಮಾಡಲು ಗವರ್ನಮೆಂಟ ಪರ್ಮಿಷನ ಕೂಡ ಕೊಟ್ಟಿದೆ. ಆದರೆ ಕರೋನಾ ಪೇಶಂಟಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನ ಮಾರ್ಕೆಟಿಗೆ ಬರಲು ಹೆದರುತ್ತಿದ್ದಾರೆ. ನಮ್ಮ ಪುಣೆ ಹಾಗೂ ಮುಂಬೈ ನಗರಗಳಂತು ಕಂಟ್ರೋಲ್ ತಪ್ಪಿ ಹೋಗಿವೆ‌. ಇದೇ ರೀತಿ ದೇಶದ ಬಹಳಷ್ಟು ನಗರಗಳು ಕಂಟ್ರೋಲ ಕಳೆದುಕೊಂಡಿವೆ‌. ಇನ್ನು ಕೆಲವೊಂದಿಷ್ಟು ನಗರಗಳು ಕಂಟ್ರೋಲ್ ತಪ್ಪಲು ರೆಡಿಯಾಗಿವೆ‌‌. ಮುಂಬೈ ಪುಣೆಯಂಥ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಕೋಟ್ಯಾಂತರ ಜನ ಅವರವರ ಹಳ್ಳಿಗಳಿಗೆ ವಾಪಸ ಹೋಗಿದ್ದಾರೆ. ಈಗ ಹಳ್ಳಿಹಳ್ಳಿಗೂ ಕರೋನಾ ಕಾಲಿಟ್ಟಿದೆ. ಟೆಸ್ಟಿಂಗ್ ಸ್ಲೋಯಿದೆ. ಹೀಗಾಗಿ ಬರೀ ಸೀಟಿಗಳ ಸಂಖ್ಯೆ ಮಾತ್ರ ದೊಡ್ಡದಾಗಿ ಕಾಣಿಸ್ತಿದೆ. ಮುಂದೆ ಹಳ್ಳಿಹಳ್ಳಿಗಳಲ್ಲೂ ಸಾವಿರಾರು ಕರೋನಾ ಪೋಜಿಟಿವ ಕೇಸಗಳು ಸಿಕ್ಕರೆ ಅಚ್ಚರಿಯೇನಿಲ್ಲ. ಒಪನಾಗಿ ಹೇಳಬೇಕೆಂದರೆ ಇವೆಲ್ಲುಗಳ ನೇರ ಪರಿಣಾಮ ಭಾರತದ ಮಾರುಕಟ್ಟೆಯ ಮೇಲಾಗಿದೆ. ಎಲ್ಲ ಬಿಜನೆಸಗಳು ಸ್ಟ್ರಕ ಆಗಿವೆ. ದೇಶ ಮೊದಲಿನಂತಾಗಲು ಹಾಗೂ ಮಾರ್ಕೆಟ ಒಂದು ರೂಟಿನಗೆ ಬರಲು ಇನ್ನೂ ಮಿನಿಮಮ‌ ಮೂರು ತಿಂಗಳಾದರೂ ಬೇಕೆಬೇಕು. ಇದು ಮಾರ್ಕೆಟನ ಸದ್ಯದ ಪರಿಸ್ಥಿತಿ. ನಾವಿದನ್ನು ಅರ್ಥಮಾಡಿಕೊಳ್ಳಲೇಬೇಕು. ಹೀಗಾಗಿ ಹೊಸ ಬಿಜನೆಸ್ ಸ್ಟಾರ್ಟ ಮಾಡಲು ಇದು ಅಷ್ಟೊಂದು ಗುಡ್ ಟೈಮಲ್ಲ. ಸ್ವಲ್ಪ ವೇಟ ಮಾಡಿ.

ಹೊಸ ಬಿಜನೆಸ್ ಸ್ಟಾರ್ಟ ಮಾಡಲು ಇದು ಗುಡ್ ಟೈಮಾ ಅಥವಾ ಬ್ಯಾಡ್ ಟೈಮಾ? - Is it best time to start new business?

ಗುಡ್ ಟೈಮಲ್ಲ ಅಂತಾ ಬಹಳ ದಿನ ಸುಮ್ಮನೆ ಕೂಡಲು ಸಾಧ್ಯವಿಲ್ಲ. ನಾವು ಮುಂದಿನ ಮೂರು ತಿಂಗಳು ಅಥವಾ ಆರು ತಿಂಗಳು ಇಲ್ಲವೇ ಒಂದು ವರ್ಷ ಕರೋನಾದೊಂದಿಗೆ ಫೈಟ ಮಾಡುತ್ತಲೇ ನಮ್ಮ ಬಿಜನೆಸ್ಸನ್ನು ರನ್ ಮಾಡಬೇಕು. ನೀವು ಹಳೇ ಬಿಜನೆಸ್ಸನ್ನು ರಿಒಪನ ಮಾಡುವವರಿದ್ದರೆ ಧೈರ್ಯವಾಗಿ ಒಪನ ಮಾಡಿ. ಬಂದಷ್ಟು ಬರುತ್ತೆ. ಅದನ್ನು ಬಿಟ್ಟು ಬೇರೆ ಆಪ್ಶನಿಲ್ಲ. ಒಂದು ವೇಳೆ ನೀವು ಹೊಸ ಬಿಜನೆಸ್ ಸ್ಟಾರ್ಟ ಮಾಡುವವರಿದ್ದರೆ ಸ್ವಲ್ಪ ವೇಟ್ ಮಾಡಿ. ನೀವು ನಿಮ್ಮ ಸ್ವಂತ ಬಜೆಟ್‌ನಲ್ಲಿ, ಸ್ವಂತ ಬಿಲ್ಡಿಂಗನಲ್ಲಿ ಬಿಜನೆಸ ಸ್ಟಾರ್ಟ ಮಾಡುತ್ತಿದ್ದರೆ ಸ್ಟಾರ್ಟ ಮಾಡಿ ಯಾವುದೇ ಪ್ರಾಬ್ಲಮ ಇಲ್ಲ‌. ಈಗ ಮಾರ್ಕೆಟ ಸ್ಲೋ ಇದ್ದರೂ ಹಂತಹಂತವಾಗಿ ಒಂದೆರಡು ತಿಂಗಳಲ್ಲಿ ಮಾರ್ಕೆಟ ಪೂರ್ತಿ ಒಪನಾಗುತ್ತೆ‌. ನಿಮ್ಮ ಬಿಜನೆಸ್ ಒಂದು ಟ್ರ್ಯಾಕಿಗೆ ಬರುತ್ತೆ‌. ಆದರೆ ನೀವು ಸಾಲ ಮಾಡಿ, ಬಾಡಿಗೆ ಬಿಲ್ಡಿಂಗನಲ್ಲಿ ಬಿಜನೆಸ್ ಸ್ಟಾರ್ಟ ಮಾಡುವವರಿದ್ದರೆ ಪ್ಲೀಜ ಮಾಡಬೇಡಿ, ಸ್ವಲ್ಪ ವೇಟ ಮಾಡಿ. ಏಕೆಂದರೆ ಮಾರ್ಕೆಟ ಇನ್ನೂ ಪೂರ್ತಿಯಾಗಿ ಒಪನಾಗಿಲ್ಲ, ಜನ ಬರ್ತಿಲ್ಲ, ಇಂಥ ಸಮಯದಲ್ಲಿ ನೀವು ಸಾಲ ಮಾಡಿ ಬಾಡಿಗೆ ಬಿಲ್ಡಿಂಗನಲ್ಲಿ ಹೊಸ ಬಿಜನೆಸ್ ಸ್ಟಾರ್ಟ ಮಾಡಿದರೆ ತುಂಬಾ ದೊಡ್ಡ ಆರ್ಥಿಕ ಸಂಕಟ ಎದುರಾಗುತ್ತೆ. ಸಾಲದ ಬಡ್ಡಿ ಹಾಗೂ ಬಿಲ್ಡಿಂಗ್ ಬಾಡಿಗೆ ಕಟ್ಟಲು ನೀವು ಬಹಳಷ್ಟು ಪರದಾಡಬೇಕಾಗುತ್ತದೆ.

ಹೊಸ ಬಿಜನೆಸ್ ಸ್ಟಾರ್ಟ ಮಾಡಲು ಇದು ಗುಡ್ ಟೈಮಾ ಅಥವಾ ಬ್ಯಾಡ್ ಟೈಮಾ? - Is it best time to start new business?

ಈಗ ಅಲರೆಡಿ ಬಿಜನೆಸ್ ಸ್ಟಾರ್ಟ ಮಾಡಿದವರೆ ಆಫೀಸ್ ಬಾಡಿಗೆ ಕಟ್ಟಕ್ಕಾಗದೆ, ಸಾಲದ ಬಡ್ಡಿ ಕಟ್ಟಕ್ಕಾಗದೆ ಬಿಜನೆಸ್ ಕ್ಲೋಜ ಮಾಡುವ ಹಂತಕ್ಕೆ ಬಂದಿದ್ದಾರೆ. ನಮಗೆ ಲೋನ ಏನಿಲ್ಲ. ಆದರೆ ಇನಕಮಯಿಲ್ಲದೆ ಮೂರ್ನಾಲ್ಕು ಲಕ್ಷ ಆಫೀಸ್ ಬಾಡಿಗೆ ಕಟ್ಟಲು ನಮಗೇ ಕಷ್ಟವಾಗುತ್ತಿದೆ. ಅದಕ್ಕಾಗಿ ನೀವು ಬಾಡಿಗೆ ಬಿಲ್ಡಿಂಗನಲ್ಲಿ ಸಾಲ ಮಾಡಿ ಬಿಜನೆಸ್ ಸ್ಟಾರ್ಟ ಮಾಡ್ತಿದ್ರೆ ಮಾಡಬೇಡಿ. ಸ್ವಂತ ಬಜೆಟ್ ಹಾಗೂ ಸ್ವಂತ ಜಾಗದಲ್ಲಿ ಸ್ಟಾರ್ಟ ಮಾಡ್ತಿದ್ರೆ ಮಾಡಿ. ಖಾಲಿ ಕೂತು ಟೈಮಪಾಸ ಮಾಡುವುದಕ್ಕಿಂತ ಬಿಜನೆಸ್ ಸ್ಟಾರ್ಟ ಮಾಡುವುದು ಬೆಸ್ಟಾಗಿದೆ. ಕಠಿಣ ಪರಿಸ್ಥಿತಿಗಳನ್ನು ‌ಎದುರಿಸಿ, ಸಮಸ್ಯೆಗಳನ್ನು ಫೇಸ್ ಮಾಡಿದಾಗಲೇ ನೀವು ಬಿಜನೆಸನಲ್ಲಿ ಬಾಹುಬಲಿಯಾಗುತ್ತೀರಿ.

ಫೈನಾನ್ಸಿಯಲ್ ‌ಫ್ರೀಡಂನ್ನು ಸಾಧಿಸುವುದು ಹೇಗೆ? - How to achieve Financial Freedom? in Kannada

ಇದೀಷ್ಟು ನೀವು ಕೇಳಿದ ಪ್ರಶ್ನೆಗೆ ನನ್ನ ಪರ್ಸನಲ್ ಅಭಿಪ್ರಾಯ. ನೀವು ಸರಿಯಾಗಿ ಥಿಂಕ್ ಮಾಡಿ ಮತ್ತು ಸರಿಯಾದ ಡಿಸಿಜನ ತೆಗೆದುಕೊಳ್ಳಿ‌. ಆತುರಪಟ್ಟು ಎಡವಿ ಬೀಳಬೇಡಿ. ಬಿದ್ದರೂ ಮತ್ತೆ ಎದ್ದೇಳಿ ಮತ್ತು ಮುಂದೆ ಸಾಗಿ.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books