ಆನಲೈನ ಅಡ್ವಟೈಜಿಂಗ V/S ಆಫಲೈನ ಅಡ್ವಟೈಜಿಂಗ ಯಾವುದು ಬೆಸ್ಟ? – Online Ads V/S Offline Ads in Kannada

You are currently viewing ಆನಲೈನ ಅಡ್ವಟೈಜಿಂಗ V/S ಆಫಲೈನ ಅಡ್ವಟೈಜಿಂಗ ಯಾವುದು ಬೆಸ್ಟ? – Online Ads V/S Offline Ads in Kannada

ಬಿಜನೆಸ್ ಲೆಸನ್ 14

ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಬಹಳಷ್ಟು ಜನ ಹೊಸ ಬಿಜನೆಸಮ್ಯಾನಗಳು ನನಗೆ ಸೋಸಿಯಲ್ ಮಿಡಿಯಾಗಳಲ್ಲಿ “ಆಲನೈನ ಅಡ್ವಟೈಜಿಂಗ ಮತ್ತು ಆಫಲೈನ ಅಡ್ವಟೈಜಿಂಗಗಳಲ್ಲಿ ಯಾವುದು ಬೆಸ್ಟ?” ಅಂತಾ ಕೇಳುತ್ತಲೇ ಇರುತ್ತಾರೆ. ನನ್ನ ಪ್ರಕಾರ ಆಫಲೈನ ಅಡ್ವಟೈಜಿಂಗಗಿಂತ ಆನಲೈನ ಅಡ್ವಟೈಜಮೆಂಟ ಬಹಳಷ್ಟು ಬೆಸ್ಟ ಆಗಿದೆ. ಆನಲೈನ ಅಡ್ವಟೈಜಿಂಗನಿಂದಾಗುವ ಈ ಸ್ಪೆಷಲ್ ಲಾಭಗಳನ್ನು ಗಮನಿಸಿ ನಿಮಗೆ ಯಾಕೆ ಆನಲೈನ ಅಡ್ವಟೈಜಿಂಗ್ ಬೆಸ್ಟ ಎಂಬುದು ಗೊತ್ತಾಗುತ್ತದೆ.

ಆನಲೈನ ಅಡ್ವಟೈಜಿಂಗ V/S ಆಫಲೈನ ಅಡ್ವಟೈಜಿಂಗ ಯಾವುದು ಬೆಸ್ಟ? - Online Ads V/S Offline Ads in Kannada

ಆನಲೈನ ಅಡ್ವಟೈಜಿಂಗ V/S ಆಫಲೈನ ಅಡ್ವಟೈಜಿಂಗ ಯಾವುದು ಬೆಸ್ಟ? – Online Ads V/S Offline Ads

1) ನ್ಯೂಜಪೇಪರ, ಬ್ಯಾನರ್, ಬೋರ್ಡ್ಸ, ಹೋರ್ಡಿಂಗ್ಸ, ಟಿವಿಗಳಂಥ ಆಫಲೈನ ಆ್ಯಂಡ್ ಟ್ರೆಡಿಷನಲ್ ಅಡ್ವಟೈಜಿಂಗಗಳಿಗೆ ಹೋಲಿಸಿದರೆ ಆನಲೈನ ಅಡ್ವಟೈಜಿಂಗ್ ಬಹಳಷ್ಟು ಅಗ್ಗವಾಗಿದೆ ಮತ್ತು ಜಾಸ್ತಿ ಪರಿಣಾಮಕಾರಿಯಾಗಿದೆ. ಅಂದರೆ ಚೀಪ್ ಆ್ಯಂಡ್ ಬೆಸ್ಟಾಗಿದೆ.

2) ಆನಲೈನ ಅಡ್ವಟೈಜಿಂಗನಿಂದ ನಾವು ನಮ್ಮ ಆ್ಯಕ್ಯುರೇಟ ಕಸ್ಟಮರಗಳನ್ನು ಟಾರ್ಗೆಟ ಮಾಡಬಹುದು. ಈಗಾಗಲೇ ಫೇಸ್ಬುಕ್, ಗೂಗಲ ಹಾಗೂ ಯುಟ್ಯೂಬಗಳತ್ರ ಎಲ್ಲರ ಡಾಟಾ ಇದೆ. ಜನ ಇಂಟರನೆಟ್ಟಲ್ಲಿ ಏನು ಹುಡುಕುತ್ತಾರೆ? ಅವರ ಇಂಟರೆಸ್ಟ್ ಏನಿದೆ? ಅವರು ಯಾವ ಪ್ರೊಡಕ್ಟನ್ನು ಖರೀದಿಸಲು ತಯಾರಿ ನಡೆಸುತ್ತಿದ್ದಾರೆ? ಎಂಬಿತ್ಯಾದಿ ಮಾಹಿತಿಗಳು ಗೂಗಲ ಹಾಗೂ ಫೇಸ್ಬುಕ್ ಬಳಿ ಸ್ಪಷ್ಟವಾಗಿ ಅವೇಲೇಬಲ ಆಗಿದೆ. ನಾವದನ್ನು ಬಳಸಿಕೊಂಡು ನಮ್ಮ ಬಿಜನೆಸ್ಸನ್ನು ಬಹಳಷ್ಟು ಎಫೆಕ್ಟಿವ ಆಗಿ ಅಡ್ವಟೈಜ ಮಾಡಬಹುದು. ನೇರವಾಗಿ ನಮ್ಮ ಆ್ಯಕ್ಯುರೇಟ ಕಸ್ಟಮರಗೆ ನಮ್ಮ ಆ್ಯಡನ್ನು ತೋರಿಸಿ ಈಜಿಯಾಗಿ ಪ್ರೋಡಕ್ಟಗಳನ್ನು, ಸರ್ವಿಸನ್ನು ಸೇಲ್ ಮಾಡಬಹುದು. ಆನಲೈನ ಅಡ್ವಟೈಜಿಂಗ್ ಎಷ್ಟು ಆ್ಯಕ್ಯುರೇಟಾಗಿದೆ ಎಂದರೆ ನಾವು ನಮ್ಮ ಪಕ್ಕದ್ಮನೆಯವರಿಗೆ ಅವರ ಮೊಬೈಲನಲ್ಲಿಯೇ ಅವರಿಗೆ ಗೊತ್ತಾಗದಂತೆ ನಮ್ಮ ಆ್ಯಡನ್ನು ತೋರಿಸಬಹುದು. ಅವರು ಮೊಬೈಲ್ ಆನ ಮಾಡಿ ಅವರು ಏನೇ ಓಪನ ಮಾಡಿದರೂ ನಮ್ಮ ಆ್ಯಡ ಕಂಪಲ್ಸರಿಯಾಗಿ ಕಾಣುವಂತೆ ಮಾಡಬಹುದು. ಇಷ್ಟೇ ಅಲ್ಲ ಒಂದೇ ಸಮಯಕ್ಕೆ ಈಡೀ ದೇಶಕ್ಕೆ ನಮ್ಮ ಆ್ಯಡನ್ನು ತೋರಿಸಬಹುದು. ಒಂದು ದೊಡ್ಡ ಸೀಟಿಯ ಸಣ್ಣ ಬೀದಿಯ ಜನರಿಗಷ್ಟೇ ನಮ್ಮ ಆ್ಯಡನ್ನು ತೋರಿಸಬಹುದು. ಇಂಟರನೆಟ್ಟಲ್ಲಿ ನಮ್ಮ ಪ್ರೋಡಕ್ಟನ್ನು ಹುಡುಕುತ್ತಿರುವವರಿಗಷ್ಟೇ ನಮ್ಮ ಆ್ಯಡನ್ನು ತೋರಿಸಬಹುದು. ಈ ರೀತಿ ಆನಲೈನ ಅಡ್ವಟೈಜಿಂಗ್ ಬಹಳಷ್ಟು ಆ್ಯಕ್ಯುರೇಟ ಆ್ಯಂಡ್ ಎಫೆಕ್ಟಿವಾಗಿದೆ.

ನಿಮ್ಮ ಬಿಜನೆಸ್ಸನ್ನು ಫ್ರೀಯಾಗಿ ಅಡ್ವಟೈಜ ಮಾಡುವುದೇಗೆ? - How to Advertise Your Business Freely? in Kannada

3) ಆನಲೈನ ಅಡ್ವಟೈಜಿಂಗನಲ್ಲಿ Cost of Customer Acquisition ಬಹಳಷ್ಟು ಕಡಿಮೆಯಾಗಿದೆ. ನೀವು ಪೈಸೆ ಮತ್ತು ರೂಪಾಯಿಗಳಲ್ಲಿ ಒಬ್ಬೊಬ್ಬ ಕಸ್ಟಮರಗಳನ್ನು ಅಕ್ವೈರ ಮಾಡಿಕೊಳ್ಳಬಹುದು.

4) ಆನಲೈನ ಮಾರುಕಟ್ಟೆ ಬಹಳಷ್ಟು ವಿಶಾಲವಾಗಿದೆ. ಏಕೆಂದರೆ ಭಾರತದಲ್ಲಿ ಈಗ ಸರಿಸುಮಾರು 70 ಕೋಟಿ ಇಂಟರನೆಟ್ ಯುಜರ್ಸಗಳಿದ್ದಾರೆ. ಈಗ ಭಾರತ ಡಿಜಿಟಲಿಕರಣವಾಗುತ್ತಿದೆ. ಹೀಗಾಗಿ ಭಾರತದಲ್ಲಿ ಇಂಟರನೆಟ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತದೆ. ಜಗತ್ತು ಇನ್ನೆರಡ್ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಡಿಜಿಟಲಿ ಅಪಡೇಟ ಆಗುತ್ತದೆ. ನೀವು ಆನಲೈನ ಅಡ್ವಟೈಜಿಂಗನಲ್ಲಿ ಎಕ್ಸಪರ್ಟ ಆದರೆ ನಿಮ್ಮ ಬಿಜನೆಸ್ಸನಿಂದ ನೀವು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಬಹುದು.

ನಿಮ್ಮ ಬಿಜನೆಸ್ಸನ್ನು ಫ್ರೀಯಾಗಿ ಅಡ್ವಟೈಜ ಮಾಡುವುದೇಗೆ? - How to Advertise Your Business Freely? in Kannada

5) ಆನಲೈನ ಆ್ಯಡ್ಸಗಳು ಏನಿಟೈಮ ಸಂಪೂರ್ಣವಾಗಿ ನಿಮ್ಮ ಕಂಟ್ರೋಲನಲ್ಲಿರುತ್ತವೆ. ನೀವು ಅವುಗಳನ್ನು ಯಾವಾಗ ಬೇಕಾದರೂ ಎಡಿಟ ಮತ್ತು ಡೀಲಿಟ ಮಾಡಬಹುದು, Pause and Resume ಮಾಡಬಹುದು. ಅದಕ್ಕಾಗಿಯೇ ಆನಲೈನ ಅಡ್ವಟೈಜಿಂಗ್ ಸೂಪರಫಾಸ್ಟಾಗಿದೆ ಮತ್ತು ಮೊಸ್ಟ ಎಫೆಕ್ಟಿವಾಗಿದೆ.

6) ಆನಲೈನ ಅಡ್ವಟೈಜಿಂಗ್ ನಿಮ್ಮ ಬಿಜನೆಸನ ಬ್ರ್ಯಾಂಡ ಬಿಲ್ಡಿಂಗಗೆ ಬಹಳಷ್ಟು ಹೆಲ್ಪ ಮಾಡುತ್ತದೆ. ನೀವು ನಿಮ್ಮ ಬಿಜನೆಸನ್ನು ಅಡ್ವಟೈಜ ಮಾಡುವುದರ ಜೊತೆಗೆ ನಿಮ್ಮ ಬಿಜನೆಸಗೆ ಸೋಸಿಯಲ್ ಮೀಡಿಯಾಗಳಲ್ಲಿ ಲಕ್ಷಾಂತರ ಫ್ಯಾನ ಫಾಲೋಯಿಂಗನ್ನು ಸಹ ಬೆಳೆಸಬಹುದು. ಆನಲೈನ ಅಡ್ವಟೈಜಿಂಗನಿಂದ ಅತೀ ಕಡಿಮೆ ಖರ್ಚಿನಲ್ಲಿ ಮತ್ತು ಅತೀ ಕಡಿಮೆ ಸಮಯಾವಕಾಶದಲ್ಲಿ ನಿಮ್ಮ ಬಿಜನೆಸ್ ಒಂದು ಬ್ರ್ಯಾಂಡ ಆಗಿ ಮಾರುಕಟ್ಟೆಯಲ್ಲಿ ಫೇಮಸ ಆಗುತ್ತದೆ.

ನಿಮ್ಮ ಬಿಜನೆಸ್ಸನ್ನು ಫ್ರೀಯಾಗಿ ಅಡ್ವಟೈಜ ಮಾಡುವುದೇಗೆ? - How to Advertise Your Business Freely? in Kannada

7) Images, Animations, Colorful graphics, videos ಹಾಗೂ Motion Graphics Picturesಗಳಿಂದಾಗಿ ಆನಲೈನ ಅಡ್ವಟೈಜಿಂಗ್ ಬಹಳಷ್ಟು ಎಫೆಕ್ಟಿವಾಗಿ ನಿಮ್ಮ ಕಸ್ಟಮರಗಳನ್ನು ಸೆಳೆಯುತ್ತದೆ. ಇದರಿಂದ ನಿಮ್ಮ ಕಸ್ಟಮರ ಬೇಗನೇ ನಿಮ್ಮ ಬಿಜನೆಸನೊಂದಿಗೆ ಎಮೋಷನಲಿ ಕನೇಕ್ಟ ಆಗುತ್ತಾನೆ. ಆತ ನಿಮ್ಮೊಂದಿಗೆ ಎಮೊಷನಲಿ ಕನೇಕ್ಟಾದಾಗ ನೀವು ಅವನಿಗೆ ಏನು ಬೇಕಾದರೂ ಈಜಿಯಾಗಿ ಮಾರಬಹುದು, ಅದು ಹಾಯ ಮಾರ್ಜಿನನೊಂದಿಗೆ.

8) ಆಫಲೈನ ಅಡ್ವಟೈಜಿಂಗನಲ್ಲಿ ನಿಮ್ಮ ಕಸ್ಟಮರಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸುದ್ದಿಯಿಲ್ಲದ ರದ್ದಿ ಪೇಪರಗಳಲ್ಲಿ ನಿಮ್ಮ ಕಸ್ಟಮರ ನಿಮ್ಮ ಆ್ಯಡನ್ನು ನೋಡಿದ್ನಾ ಅಥವಾ ಇಲ್ವಾ ಎಂಬುದು ನಿಮಗೆ ಗೊತ್ತಾಗುವುದಿಲ್ಲ, ಅದೇ ರೀತಿ ನ್ಯೂಜಯಿಲ್ಲದ Noise ಚಾನೆಲಗಳಲ್ಲಿ ನಿಮ್ಮ ಆ್ಯಡ ನಿಮ್ಮ ಕಸ್ಟಮರ ಕಣ್ಣಿಗೆ ಬಿತ್ತಾ ಇಲ್ವಾ ಎಂಬುದು ಗೊತ್ತಾಗೋದೆ ಇಲ್ಲ. ಆದರೆ ಆನಲೈನ ಅಡ್ವಟೈಜಿಂಗನಲ್ಲಿ ಹೀಗಾಗುವುದಿಲ್ಲ. ಇಲ್ಲಿ ನೀವು ನಿಮ್ಮ ಕಸ್ಟಮರಗಳನ್ನು ಆ್ಯಕ್ಯುರೇಟಾಗಿ ಟ್ರ್ಯಾಕ್ ಮಾಡಬಹುದು. ಆತ ನಿಮ್ಮ ಆ್ಯಡನ್ನು ನೋಡಿದ್ನಾ ಅಥವಾ ಇಲ್ವಾ? ನೋಡಿದ್ರೆ ಎಷ್ಟು ಸೆಕೆಂಡಗಳ ತನಕ ನೋಡಿದ? ಅವನ ಬಾಯಿಂಗ್ ಬಿಹೇವಿಯರ್ ಹೇಗಿತ್ತು? ಅವನ ಹೆಸರು, ಈಮೇಲ ಐಡಿ, ಫೋನ ನಂಬರ? ಇತ್ಯಾದಿಗಳನ್ನೆಲ್ಲ ಈಜಿಯಾಗಿ ಟ್ರ್ಯಾಕ್ ಮಾಡಬಹುದು. ಆತ ನಿಮ್ಮ ಆ್ಯಡ ನೋಡಿದರೂ ನಿಮ್ಮ ಪ್ರೋಡಕ್ಟನ್ನು ಖರೀದಿಸದಿದ್ದರೆ ನೀವು ಅವನಿಂದ ಫಿಡಬ್ಯಾಕನ್ನು ತೆಗೆದುಕೊಳ್ಳಬಹುದು. ಇಲ್ಲವೇ ಮತ್ತೆ ಅವನನ್ನು ರಿಟಾರ್ಗೆಟ ಮಾಡಿ ಮತ್ತೆ ಅವನಿಗೆ ಆ್ಯಡ ತೋರಿಸಿ ರಿಮಾರ್ಕೆಟಿಂಗ ಮಾಡಬಹುದು. ಇದು ಆನಲೈನ ಅಡ್ವಟೈಜಿಂಗನಲ್ಲಿ ಮಾತ್ರ ಸಾಧ್ಯ.

ನಿಮ್ಮ ಬಿಜನೆಸ್ಸನ್ನು ಫ್ರೀಯಾಗಿ ಅಡ್ವಟೈಜ ಮಾಡುವುದೇಗೆ? - How to Advertise Your Business Freely? in Kannada

ಇವಿಷ್ಟೂ ಕಾರಣಗಳಿಂದಾಗಿ ಆನಲೈನ ಅಡ್ವಟೈಜಿಂಗ್ ಬೆಸ್ಟ ಆಗಿದೆ. ಅಡ್ವಟೈಜಿಂಗ್ ಎಕ್ಸಪೇನ್ಸಲ್ಲ, ಅದು ಬೆಸ್ಟ ಇನ್ವೇಸ್ಟಮೆಂಟ ಆಗಿದೆ. ಅದಕ್ಕಾಗಿ ನಿಮ್ಮ ಬಿಜನೆಸನ ಬ್ರ್ಯಾಂಡಿಗ್ ಹಾಗೂ ಮಾರ್ಕೆಟಿಂಗಗಾಗಿ ಅಡ್ವಟೈಜಮೆಂಟ ಮೇಲೆ ಸ್ವಲ್ಪ ಹಣ ಖರ್ಚು ಮಾಡಿ. ಕಡಿಮೆ ಖರ್ಚು ಹಾಗೂ ಕಡಿಮೆ ಸಮಯದಲ್ಲಿ ಬೆಟರ್ ಪ್ರೋಫಿಟನ್ನು ಪಡೆಯುವುದಕ್ಕಾಗಿ ಆನಲೈನ ಅಡ್ವಟೈಜಿಂಗನ್ನು ಬಳಸಿಕೊಳ್ಳಿ. ನಿಮಗೆ ಇದರ ಬಗ್ಗೆ ಏನು ನಾಲೇಜ್ಡಯಿಲ್ಲದಿದ್ದರೆ ನೀವು ನಮ್ಮ ಬಿಜನೆಸ್ ವರ್ಕಶಾಪಗಳಿಗೆ ಅಟೆಂಡಾಗಿ ಆನಲೈನ ಅಡ್ವಟೈಜಿಂಗ್ ಜೊತೆಗೆ ಇನ್ನೂ ಬೇರೆ ಬೇರೆ ಸ್ಟ್ರ್ಯಾಟರ್ಜಿಗಳನ್ನು ಕಲಿತು ನಿಮ್ಮ ಬಿಜನೆಸ್ಸನ್ನು ಟಾಪ ಲೆವೆಲಗೆ ತೆಗೆದುಕೊಂಡು ಹೋಗಬಹುದು. ನಿಮಗೆ ಇಂಟರೆಸ್ಟಯಿದ್ದರೆ ಕಮೆಂಟ ಹಾಗೂ ಡಿಸ್ಕ್ರಿಪ್ಶನನಲ್ಲಿ ಕೊಟ್ಟಿರೋ ಫಾರ್ಮನ್ನು ತುಂಬಿ ನಮ್ಮ ಟೀಮನವರು ನಿಮ್ಮನ್ನು ಸಂಪರ್ಕಿಸುತ್ತಾರೆ. All the best and Thanks You…

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books