ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು – 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

You are currently viewing ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು – 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

ಜಾಸ್ತಿ ನಾಲೇಡ್ಜ ಇರುವವರಿಗೆ ಒಂದು ಡ್ರೀಮ ಜಾಬ್ ಮಾಡಬೇಕು ಅಂತ ಇರುತ್ತೆ. ಜಾಸ್ತಿ ನಾಲೇಡ್ಜ ಇರದವರಿಗೆ ಯಾವುದೇ ಡ್ರೀಮ ಜಾಬಗಳಿರುವುದಿಲ್ಲ. ಅವರು ಯಾವುದೇ ಕೆಲಸ ಸಿಕ್ಕರೂ ಮಾಡಲು ತಯಾರಿರುತ್ತಾರೆ. ನಿಜವಾದ ಪ್ಯಾಷನ ಇರುವವರು ಬೇರೆಯವರಿಗೆ ಯಾವ ಕೆಲಸ ಮಾಡಲಿ? ಎಂದು ತಪ್ಪಿಯೂ ಕೇಳುವುದಿಲ್ಲ. ಯಾವುದೇ ಪ್ಯಾಷನ ಹಾಗೂ ಸ್ಕೀಲಗಳಿಲ್ಲದವರು ಎಲ್ಲರಿಗೂ “ಯಾವ ಕೆಲಸ ಮಾಡಲಿ? ಯಾವ ಬಿಜನೆಸ್ ಮಾಡಲಿ?” ಎಂದು ಕೇಳುತ್ತಾರೆ. ಇಂಥವರ ಮಧ್ಯೆ ನಮ್ಮ ಅಮಾಯಕ ಕಾಲೇಜ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಕಲಿಯುವ ಆಸೆಯಿದೆ. ಕಲಿತು ಲೈಫಲ್ಲಿ ಚೆನ್ನಾಗಿ ಸೆಟ್ಲಾಗುವ ಆಸೆಯಿದೆ. ಆದರೆ ಏನು ಕಲಿಯಲಿ? ಎಲ್ಲಿ ಕಲಿಯಲಿ?. ಹೇಗೆ ಕಲಿಯಲಿ? ಯಾವುದನ್ನು ಕಲಿತರೆ ಬೇಗ ಕೆಲಸ ಸಿಗುತ್ತೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಅಂಥವರಿಗಾಗಿ ನಾನು ಇವತ್ತಿನ ಎಪಿಸೋಡನ್ನು ಮಾಡುತ್ತಿರುವೆ. ಈ ಎಪಿಸೋಡನಲ್ಲಿ ನಾನು 2020ರಲ್ಲಿ ಮತ್ತು 2020ರ ನಂತರ ಸದ್ದು ಮಾಡಬಹುದಾದ ಜಾಬ್ಸ ಮತ್ತು ಬಿಜನೆಸಗಳ ಬಗ್ಗೆ ಒಂದು ಬ್ರೀಫ್ ಇನಫಾರ್ಮೆಷನನ್ನು ಕೊಡುತ್ತಿರುವೆ. ಸದ್ಯಕ್ಕೆ ಡಿಗ್ರಿ ಫೈನಲ್ ಇಯರನಲ್ಲಿರುವವರು ಮತ್ತೆ ಜಸ್ಟ ಡಿಗ್ರಿ ಮುಗಿಸಿದವರು ಈ ಸ್ಕಿಲಗಳನ್ನು ಕಲಿತು ಜಾಬ ಮಾಡಬಹುದು, ಬರೀ ಜಾಬ್ ಅಷ್ಟೇ ಅಲ್ಲ ನಿಮ್ಮದೇ ಆದಂತಹ ಬಿಜನೆಸ್ಸನ್ನು ಸಹ ಪ್ರಾರಂಭಿಸಬಹುದು. ಆ ಜಾಬ ಹಾಗೂ ಬಿಜನೆಸಗಳು ಇಂತಿವೆ ;

ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು - 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

1) ಕನ್ಸಲ್ಟನ್ಸಿ ಜಾಬಗಳು ಮತ್ತು ಬಿಜನೆಸಗಳು : Consultancy Jobs and Businesses

ಸದ್ಯಕ್ಕೆ ಬಹಳಷ್ಟು ಜನರತ್ರ ನಾಲೇಡ್ಜ ಹಾಗೂ ಎಕ್ಸಪೀರಿಯನ್ಸ ಇಲ್ಲ. ಅವರು ಹಾಫ್ ನಾಲೇಡ್ಜ ಹಾಗೂ ಝೀರೋ ಎಕ್ಸಪೀರಿಯನ್ಸ ಇಟ್ಟುಕೊಂಡು ಜಾಬ್ ಅಥವಾ ಬಿಜನೆಸ್ ಮಾಡುತ್ತಿದ್ದಾರೆ. ಇವರಿಗೆ ಕನ್ಸಲ್ಟನ್ಸಿ ಅವಶ್ಯಕತೆ ತುಂಬಾನೆ ಇದೆ. ನೀವು ಯಾವುದೇ ವಿಷಯದ ಮೇಲೆ ಆಳವಾಗಿ ತಿಳಿದುಕೊಂಡು, ಅದರಲ್ಲಿ ಎಕ್ಸಪರ್ಟ ಆಗಿ ಒಬ್ಬ Individual Consultant ಆಗಿ ಕೆಲಸ ಮಾಡಬಹುದು ಇಲ್ಲವೇ Consultancy Agencyಯನ್ನು ತೆಗೆಯಬಹುದು.

ಉದಾಹರಣೆಗೆ : GST and other Tax consultant, Mutual Funds and Share Market Consultant, Investment Consultant, Business Consultant like CA and CS, Finance Consultant, Legal adviser etc…

ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು - 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

2) ಮ್ಯಾನೇಜಮೆಂಟ ಜಾಬಗಳು ಹಾಗೂ ಬಿಜನೆಸಗಳು : Management Jobs and Businesses.

ಸದ್ಯಕ್ಕೆ ನಮ್ಮ ದೇಶದಲ್ಲಿ ಬಿಜನೆಸ್ ಹಾಗೂ ಸ್ಟಾರ್ಟಪ್ ಅಲೆ ಸೃಷ್ಟಿಯಾಗುತ್ತಿದೆ. ಹೀಗಾಗಿ ಆರ್ಡಿನರಿ ಕೆಲಸಗಾರರೊಂದಿಗೆ, ಮಾಲೀಕರಂತಿರುವ ಕೆಲಸಗಾರರ ಅವಶ್ಯಕತೆ ಇದೆ. ಅಂದರೆ ಮಾಲೀಕನ ಸ್ಥಾನದಲ್ಲಿ ನಿಂತು, ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುವ ಕೆಲಸಗಾರರ ಅವಶ್ಯಕತೆಯಿದೆ. ಇವೆಲ್ಲವೂ ಮ್ಯಾನೇಜಮೆಂಟ ಕೆಲಸಗಳ ಅಡಿಯಲ್ಲಿ ಬರುತ್ತವೆ. ನಿಮ್ಮಲ್ಲಿ ಉತ್ತಮ ಮ್ಯಾನೇಜಿಂಗ್ ಹಾಗೂ ಲೀಡರಶೀಪ ಸ್ಕೀಲ್ಸ ಇದ್ದರೆ ನೀವು ಮ್ಯಾನೇಜಮೆಂಟ ಫೀಲ್ಡಲ್ಲಿ ಜಾಬ್ ಅಥವಾ ಬಿಜನೆಸ್ ಮಾಡಬಹುದು.

ಉದಾಹರಣೆಗಾಗಿ ; Finance Management, Business Management, Company Management, Hotel Management, Travel Management, Celebrity Management, Social media Management, Project Management, Film Production Management, Sales & Marketing Management, Event Management, Health & Hospital Management etc.

ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು - 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

3) ಡಿಜಿಟಲ ಜಾಬಗಳು ಹಾಗೂ ಬಿಜನೆಸಗಳು : Digital Jobs and Businesses

ಸದ್ಯಕ್ಕೆ ಭಾರತದಲ್ಲಿ ಇಂಟರನೆಟ ಹಾಗೂ ಸೋಸಿಯಲ್ ಮೀಡಿಯಾ ಕ್ರಾಂತಿಯಾಗಿದೆ. ಎಲ್ಲರ ಕೈಯಲ್ಲೂ ಮೊಬೈಲಗಳಿವೆ. ಎಲ್ಲರಿಗೂ ಅನ್ನ, ನೀರು, ಗಾಳಿಗಿಂತ ಇಂಟರನೆಟ್ ಮುಖ್ಯವಾಗಿದೆ. ಎಲ್ಲ ಜನ ಆನಲೈನನಲ್ಲಿರುವುದರಿಂದ ಎಲ್ಲ ಬಿಜನೆಸಗಳು ಹಂತಹಂತವಾಗಿ ಆನಲೈನಗೆ ಶಿಪ್ಟ ಆಗುತ್ತಿವೆ. ಡಿಜಿಟಲಿಕರಣಕ್ಕೆ ಒಳಗಾಗುತ್ತಿವೆ. ಹೀಗಾಗಿ ಸದ್ಯಕ್ಕೆ ಡಿಜಿಟಲ ಮಾರ್ಕೆಟಿಂಗಗೆ ಬೇಡಿಕೆ ತುಂಬಾನೆ ಇದೆ. ನೀವು ಡಿಜಿಟಲ ಮಾರ್ಕೆಟಿಂಗ್, ಈಮೇಲ ಮಾರ್ಕೆಟಿಂಗ್, ಸೋಸಿಯಲ್ ಮೀಡಿಯಾ ಮಾರ್ಕೆಟಿಂಗ್, ಡಾಟಾ ಸ್ಟೋರಿಂಗ್ & ಮಾರ್ಕೆಟಿಂಗ್, ಡಾಟಾ ಸೈಂಟಿಸ್ಟ, ಸಾಫ್ಟವೆರ್ ಡೆವಲಪರ, ವೆಬ ಡೆವಲಪರ, ಆಂಡ್ರಾಯ್ಡ್ ಡೆವಲಪರ, ಸೈಬರ ಸೆಕ್ಯುರಿಟಿಗಳಂಥ ಕೆಲಸಗಳನ್ನು ಇಲ್ಲವೆ ಬಿಜನೆಸಗಳನ್ನು ಮಾಡಬಹುದು.

ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು - 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

4) ಟೆಕ್ನಾಲಜಿ ಜಾಬಗಳು ಮತ್ತು ಬಿಜನೆಸಗಳು : Technology Jobs and Businesses

ಸದ್ಯಕ್ಕೆ ಜಗತ್ತಿನಲ್ಲಿ ಬಿಜನೆಸ್ ದೃಷ್ಟಿಯಿಂದ ಅಂದರೆ ಹಣ ಗಳಿಸುವ ಉದ್ದೇಶದಿಂದ ಬಹಳಷ್ಟು ರೀಸರ್ಚಗಳು, ಎಕ್ಸಪೇರಿಮೆಂಟಗಳು ನಡೆಯುತ್ತಿವೆ. ಇವುಗಳ ಪರಿಣಾಮವಾಗಿ ಈಗಾಗಲೇ ಟೆಕ್ನಾಲಜಿಗೆ ಸಂಬಂಧಪಟ್ಟಂತೆ ಸಾಕಷ್ಟು ಬಿಜನೆಸಗಳು, ಜಾಬ್ಸಗಳು ಸೃಷ್ಟಿಯಾಗಿವೆ. ಮುಂದೇಯು ಬಹಳಷ್ಟು ಜಾಬ್ಸಗಳು, ಬಿಜನೆಸಗಳು ತಲೆಯೆತ್ತಲಿವೆ. ನಿಮ್ಮ ಬಳಿ ಸಿಕ್ಕಾಪಟ್ಟೆ ನಾಲೇಡ್ಜ, ಸ್ಕೀಲ, ಹಠ, ಹುಚ್ತನ ಹಾಗೂ ತಾಳ್ಮೆಯ ಜೊತೆಗೆ ಸಿಕ್ಕಾಪಟ್ಟೆ ದುಡ್ಡಿದ್ದರೆ ನೀವು ಈ ಬಿಜನೆಸಗಳಲ್ಲಿ ಕೈ ಹಾಕಬಹುದು.

ಉದಾಹರಣೆಗಾಗಿ ; Electric Vehicles, Solar Cars (Tesla Cars), Artificial Intelligency, Virtual Reality, Augmented reality, Wireless power transportation, Space Transportation and Tourism etc…

ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು - 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

5) ಡಿಜೈನರ್ ಜಾಬಗಳು ಹಾಗೂ ಬಿಜನೆಸಗಳು ; Designer Jobs and Businesses

ನಿಮ್ಮಲ್ಲಿ ಕ್ರಿಯೆಟಿವಿಟಿ ಹಾಗೂ ಫ್ರಿ ಥಿಂಕಿಂಗ್ ಇದ್ದರೆ ನೀವು ಡಿಜೈನರ್ ಆಗಿ ಕೆಲಸ ಮಾಡಬಹುದು ಇಲ್ಲವೇ ಬಿಜನೆಸ್ ಮಾಡಬಹುದು.

ಉದಾಹರಣೆಗೆ ; ಗ್ರಾಫಿಕ್ ಡಿಜೈನರ್, ವೆಬ್ ಡಿಜೈನರ್, ಕಾರ್ ಡಿಜೈನರ್, ಹೋಮ್ ಆ್ಯಂಡ್ ಆರ್ಕಿಟೆಕ್ ಡಿಜೈನರ್, ಇಂಟಿರಿಯರ ಡಿಜೈನರ್, ಫ್ಯಾಷನ್ ಡಿಜೈನರ್, ಕಾಸ್ಟುಮ್ ಡಿಜೈನರ್, ಇಂಡಸ್ಟ್ರಿಯಲ್ ಡಿಜೈನರ್, ಟೆಕ್ಸ್‌ಟೈಲ್ ಡಿಜೈನರ್, ಜ್ಯುವೆಲರಿ ಡಿಜೈನರ್, ಫಿಲ್ಮ ಪ್ರೊಡಕ್ಷನ್ ಡಿಜೈನರ್, ಫಿಲ್ಮ ಸೆಟ ಡಿಜೈನರ್, ಡೆಕೊರೆಷನ ಡಿಜೈನರ್ ಇತ್ಯಾದಿ.

ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು - 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

6) ಫಿಲ್ಮ ಮೇಕಿಂಗ್ ಹಾಗೂ ಮಾಸ ಮೀಡಿಯಾ ಜಾಬಗಳು ಮತ್ತು ಬಿಜನೆಸಗಳು ; Film-making, and Mass Media Jobs and Businesses

ನಾನು ಈಗಾಗಲೇ ಹೇಳಿದಂತೆ ಭಾರತದಲ್ಲಿ ಬಿಜನೆಸ್ ಹಾಗೂ ಸ್ಟಾರ್ಟಪ್ ಗಾಳಿ ಜೋರಾಗಿ ಬೀಸ್ತಿದೆ. ಇದರಿಂದಾಗಿ ಅಡ್ವಟೈಜಿಂಗ್ ಇಂಡಸ್ಟ್ರಿ ದಿನದಿಂದ ದಿನಕ್ಕೆ ದೈತ್ಯಾಕ್ಕಾರವಾಗಿ ಬೆಳೆಯುತ್ತಿದೆ. ಇದರ ಜೊತೆಗೆ ಎಂಟರಟೈನಮೆಂಟ ಇಂಡಸ್ಟ್ರಿ ಕೂಡ ಬೆಳೆಯುತ್ತಿದೆ. ಇವುಗಳ ಹೊರತಾಗಿ ನ್ಯೂಸ್ ಇಂಡಸ್ಟ್ರಿಯಲ್ಲಿ ಹೊಸ ಅಲೆ ಶುರುವಾಗಿದೆ. ಬಹಳಷ್ಟು ಆನಲೈನ ನ್ಯೂಸ್ ಚಾನೆಲಗಳು ತಲೆ ಎತ್ತುತ್ತಿವೆ. ಹೀಗಾಗಿ ನೀವು ಫಿಲ್ಮ್ ಮೇಕಿಂಗ್ ಹಾಗೂ ಮಾಸ ಮೀಡಿಯಾದಲ್ಲಿ ಜಾಬ್ ಮಾಡಬಹುದು ಇಲ್ಲವೇ ಸ್ವತಂತ್ರವಾಗಿ ಬಿಜನೆಸ್ ಸ್ಟಾರ್ಟ ಮಾಡಬಹುದು.

ಉದಾಹರಣೆಗಾಗಿ ; ನೀವು ರೈಟರ್, ಆ್ಯಕ್ಟರ, ಡೈರೆಕ್ಟರ್, ಸಿನಿಮ್ಯಾಟೋಗ್ರಾಫರ್, ಎಡಿಟರ್, ಸೌಂಡ್ ಇಂಜಿನಿಯರ್, ಆ್ಯಂಕರ್, VFx ಆರ್ಟಿಸ್ಟ, ಫೋಟೋಗ್ರಾಫರ್, ವಿಡಿಯೋಗ್ರಾಫರ್, ಡ್ರೋನ್ ಆಪರೇಟರ ಇತ್ಯಾದಿ ಕೆಲಸ ಮಾಡಬಹುದು. ಟೂರಿಜಂ ಇಂಡಸ್ಟ್ರಿ ಸಹ ಬೆಳೆಯುತ್ತಿದೆ. ನೀವು ಟ್ರಾವೆಲ್ ಫೋಟೋಗ್ರಾಫರ್, ಟ್ರಾವೆಲ್ ಫಿಲ್ಮಮೇಕರ ಆಗಿ ಸಹ ಕೆಲಸ ಮಾಡಬಹುದು. ನಿಮ್ಮ ಬಳಿ ಹಣವಿದ್ದರೆ ಸ್ವಂತ ವಿಡಿಯೋ ಪ್ರೋಡಕ್ಷನ ಕಂಪನಿ, ಫಿಲ್ಮ ಪ್ರೊಡಕ್ಷನ್ ಹೌಸ್, ಆ್ಯಡ್ ಫಿಲ್ಮ ಆ್ಯಜೆನ್ಸಿ ಹಾಗೂ ಆನಲೈನ್ ನ್ಯೂಸ್ ಚಾನೆಲನ್ನು ಸ್ಟಾರ್ಟ ಮಾಡಬಹುದು.

ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು - 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

7) ಟ್ರೇನರ್ ಜಾಬಗಳು ಹಾಗೂ ಬಿಜನೆಸಗಳು ; Trainer Jobs and Businesses

ನಿಮಗೆ ಕಲಿಯುವ ಮತ್ತು ಕಲಿಸುವ ಆಸಕ್ತಿಯಿದ್ದರೆ ನೀವು ಧಾರಾಳವಾಗಿ ಟ್ರೇನಿಂಗ ಇಂಡಸ್ಟ್ರಿಗೆ ಬರಬಹುದು ಹಾಗೂ ಕಡಿಮೆ ಸಮಯದಲ್ಲಿ ಜಾಸ್ತಿ ದುಡ್ಡನ್ನು ಮಾಡಬಹುದು.

ಉದಾಹರಣೆಗಾಗಿ ; ನೀವು ಫಿಟನೆಸ್ ಟ್ರೇನರ್, ಟೀಚರ್, ಡೈಟಿಷಿಯನ್, ನ್ಯೂಟ್ರಿಷನಿಸ್ಟ, ಕೌನ್ಸಲರ್, ಮೆಂಟಲ್ ಹೆಲ್ಥ ಅಡ್ವೈಜರ್, ಪರ್ಸನಲ ಪ್ರಾಬ್ಲಮ್ ಸಾಲ್ವರ, ಬಿಜನೆಸ್ ಕೋಚ್, ಸಾಫ್ಟ ಸ್ಕೀಲ್ಸ ಟ್ರೇನರ್ ಅಂದರೆ ಕಮ್ಯುನಿಕೇಷನ್ ಸ್ಕೀಲ್ಸ, ಪರ್ಸನಾಲಿಟಿ ಡೆವಲಪಮೆಂಟ್, ಲಿಡರಶೀಪ, ಸ್ಪೋಕನ ಇಂಗ್ಲಿಷ್ ಟ್ರೇನರ್, ಮೋಟಿವೆಷನಲ್ ಸ್ಪೀಕರ್, ಪಬ್ಲಿಕ್ ಸ್ಪೀಕರ್ ಆಗಿ ಜಾಬ್ ಇಲ್ಲವೇ ಬಿಜನೆಸ್ ಸ್ಟಾರ್ಟ ಮಾಡಬಹುದು.

ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು - 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

8) ವೆಡ್ಡಿಂಗ್ ಇಂಡಸ್ಟ್ರಿ ಜಾಬಗಳು ಹಾಗೂ ಬಿಜನೆಸಗಳು ; Wedding Industry Jobs and Businesses

ಗೆಳೆಯರೇ, ಸದ್ಯಕ್ಕೆ ವೆಡ್ಡಿಂಗ್ ಇಂಡಸ್ಟ್ರಿ ಒಂದು ಹೊಸ ಸಕ್ಸೆಸನೊಂದಿಗೆ ಮುಂದೆ ಸಾಗುತ್ತಿದೆ. ಪ್ರಿವೆಡ್ಡಿಂಗ್ ಫೋಟೋಶೂಟ, ಪ್ರಿವೆಡ್ಡಿಂಗ್ ಸಾಂಗ್ಸ, ಪೋಸ್ಟ ವೆಡ್ಡಿಂಗ್ ಫೋಟೋಶೂಟ್, ಸಿನಿಮ್ಯಾಟಿಕ ವೆಡ್ಡಿಂಗ್ ಫಿಲ್ಮ್ಸ್, ಕಪಲ್ಸ ಫೋಟೋಶೂಟ್, ನ್ಯೂ ಬಾರ್ನ್ ಬೇಬಿ ಫೋಟೋಶೂಟ, ಪ್ರೆಗ್ನನ್ಸಿ ಫೋಟೋಶೂಟ ಇತ್ಯಾದಿಗಳು ಬೂಮನಲ್ಲಿವೆ. ನೀವು ಈ ವೆಡ್ಡಿಂಗ್ ಇಂಡಸ್ಟ್ರಿಯಲ್ಲಿ ಫೋಟೋಗ್ರಾಫರ್, ವಿಡಿಯೋಗ್ರಾಫರ, ಸಿನಿಮ್ಯಾಟೋಗ್ರಾಫರ, ಮೇಕಪ ಆರ್ಟಿಸ್ಟ, ಮೆಹಂದಿ ಆರ್ಟಿಸ್ಟ, ಡ್ರೆಸ್ ಡಿಜೈನರ್, ಸ್ಟೇಜ್ ಡೆಕೋರೇಟರ್, ಲೈಟ್ಸ ಡೆಕೋರೆಷನ್ ಆ್ಯಂಡ ಸೌಂಡ್ ಆರ್ಟಿಸ್ಟ, ವೆಡ್ಡಿಂಗ ಅಲ್ಬಮ್ ಡಿಜೈನರ್, ಫೋಟೋ ಎಡಿಟರ್, ವೆಡ್ಡಿಂಗ ಈವೆಂಟ್ ಮ್ಯಾನೇಜರ etc ಆಗಿ ಜಾಬ ಮಾಡಬಹುದು ಇಲ್ಲವೇ ನಿಮ್ಮದೇ ಆದಂತಹ ಒಂದು ವೆಡ್ಡಿಂಗ್ ಫಿಲ್ಮ ಮೇಕಿಂಗ್ ಕಂಪನಿಯನ್ನು, ವೆಡ್ಡಿಂಗ್ ಮ್ಯಾನೇಜಮೆಂಟ ಕಂಪನಿಯನ್ನು ಪ್ರಾರಂಭಿಸಬಹುದು.

ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು - 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

Bonus Tip – ಗೆಳೆಯರೇ, ಎಲ್ಲ ಜನ ದುಡ್ಡಿನ ಬೆನ್ನತ್ತಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. Continuously ಟ್ರಾವೆಲ್ ಮಾಡಿ ಸಿಕ್ಕಿದ್ದನ್ನು ತಿಂದು, ಬೇಡದಿರುವುದನ್ನು ಕುಡಿದು ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಇವರೆಲ್ಲರಿಗೆ ಹೆಲ್ತ್ ಹಾಗೂ ಮೆಡಿಸಿನಗಳ ಅವಶ್ಯಕತೆ ತುಂಬಾನೇ ಇದೆ. ನಿಮಗೇನಾದ್ರೂ ಹೆಲ್ತ್ ಹಾಗೂ ಮೆಡಿಸಿನ ಇಂಡಸ್ಟ್ರಿಯಲ್ಲಿ ಕಲಿಯುವ ಅವಕಾಶ ಸಿಕ್ಕರೆ, ಬಿಜನೆಸ್ ಮಾಡುವ ಅವಕಾಶ ಸಿಕ್ಕರೆ ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಏನಾದರೂ ಮೆಡಿಕಲ್ ಇಂಡಸ್ಟ್ರಿ ತನ್ನ ಬೇಡಿಕೆಯನ್ನು ಕಳೆದುಕೊಳ್ಳುವುದಿಲ್ಲ.

ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು - 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

ಫೈನ್ ಗೆಳೆಯರೇ, ಇವಿಷ್ಟು ನನ್ನ ಪ್ರಕಾರ 2020ರಲ್ಲಿ ಮತ್ತು 2020ರ ನಂತರ ಹೆಚ್ಚು ಹಣ ಗಳಿಸಿ ಕೊಡುವ ಜಾಬ ಮತ್ತು ಬಿಜನೆಸಗಳಾಗಿವೆ. ಇವೆಲ್ಲವೂ ರೈಜಿಂಗ್ ಬಿಜನೆಸಗಳಾಗಿರುವುದರಿಂದ ನೀವು ಇವುಗಳನ್ನು ಮೊದಲು ಚೆನ್ನಾಗಿ ಕಲಿತು ಆನಂತರ ಪ್ರಾರಂಭಿಸಬಹುದು. ನೋಡಿ ಸರಿಯಾಗಿ ಯೋಚನೆ ಮಾಡಿ, ಮತ್ತೊಮ್ಮೆ ಮಾರ್ಕೆಟ್ ರೀಸರ್ಚ ಮಾಡಿ. ಆಮೇಲೆ ಏನು ಕಲಿಯಬೇಕು? ಎಲ್ಲಿಂದ ಹೇಗೆ ಕಲಿಯಬೇಕು? ಯಾವ ಜಾಬ ಮಾಡಬೇಕು? ಯಾವ ಬಿಜನೆಸ್ ಮಾಡಬೇಕು? ಎಂಬುದನ್ನು ನಿರ್ಧರಿಸಿ.

ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು - 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

ಕೊನೆಗೆ ಒಂದು ಅನೌನ್ಸಮೆಂಟ್. ನೀವೇನಾದ್ರೂ ದೊಡ್ಡ ಮಟ್ಟದಲ್ಲಿ ಅಂದರೆ ಬಿಗ್ ಬಜೆಟನೊಂದಿಗೆ ಯಾವುದಾದರೂ ಬಿಜನೆಸನ್ನು ಪ್ರಾರಂಭಿಸುವವರಿದ್ದರೆ ಇಲ್ಲವೇ ಪ್ರಾರಂಭಿಸಿದ್ದರೆ ಅಡ್ವಟೈಜಿಂಗ್ ವೆಬಸೈಟ್ ಡೆವಲಪಮೆಂಟ್, ಆನಲೈನ್ ಅಡ್ವಟೈಜಿಂಗ ಆ್ಯಂಡ್ ಬ್ರ್ಯಾಂಡ್ ಬಿಲ್ಡಿಂಗ್, ಕಮರ್ಷಿಯಲ್ ಫೋಟೋಗ್ರಾಫಿ, ಆ್ಯಡ ಫಿಲ್ಮ, ವಿಡಿಯೋ ಪ್ರೋಡಕ್ಷನ ಸರ್ವಿಸಗಳಿಗಾಗಿ ನೀವು ನಮ್ಮ ಕಂಪನಿಯನ್ನು ಸಂಪರ್ಕಿಸಬಹುದು. ನಮ್ಮ ಚಾನೆಲನ ವೀಕ್ಷಕರಿಗೆ ಡಿಸ್ಕೌಂಟ್ ಹಾಗೂ ಸ್ಪೆಷಲ್ ಆಫರಗಳಿವೆ. ಹೆಚ್ಚಿನ ಮಾಹಿತಿಗೆ www.Roaringcreations.comಗೆ ವಿಸಿಟ್ ಮಾಡಿ. ಧನ್ಯವಾದಗಳು…

ಹೆಚ್ಚು ಹಣಗಳಿಸಿ ಕೊಡುವ ಜಾಬ್ ಮತ್ತು ಬಿಜನೆಸಗಳು - 2020ರ ಬೆಸ್ಟ ಜಾಬ ಮತ್ತು ಬಿಜನೆಸಗಳು : Best Jobs and Businesses of 2020

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books