101 ಸಂಪೂರ್ಣ ಸತ್ಯಗಳು….!! – Life Truths in Kannada – Life Quotes in Kannada

You are currently viewing 101 ಸಂಪೂರ್ಣ ಸತ್ಯಗಳು….!! – Life Truths in Kannada – Life Quotes in Kannada

ಸುಳ್ಳಿನಷ್ಟು ಸತ್ಯ ಸಿಹಿಯಾಗಿರುವುದಿಲ್ಲ. ಅದಕ್ಕಾಗಿ ಸತ್ಯವನ್ನು ಯಾರು ಇಷ್ಟಪಡುವುದಿಲ್ಲ. ಆದರೆ ಸತ್ಯ ಸುಳ್ಳಿಗಿಂತ ಆರೋಗ್ಯಕರ ಎಂಬುದು ಎಲ್ಲರಿಗೂ ಗೊತ್ತಿದೆ. ಕೆಲವು ಸತ್ಯಗಳು ಎಲ್ಲರಿಗೂ ಚೆನ್ನಾಗಿ ಗೊತ್ತಿರುತ್ತವೆ. ಆದರೂ ಎಲ್ಲರೂ ಸುಮ್ಮನಿರುತ್ತಾರೆ. ಅವುಗಳನ್ನೆ ಓಪನ್ ಸೆಕ್ರೆಟ್ಸ (Open Secrets) ಅಥವಾ ನ.. ಸತ್ಯಗಳು ಅಥವಾ ಸಂಪೂರ್ಣ ಸತ್ಯಗಳೆಂದು ಕರೆಯುತ್ತಾರೆ. ಅಂಥಹ ಕೆಲವು ಸಂಪೂರ್ಣ ಸತ್ಯಗಳು ಇಲ್ಲಿವೆ ;

101 ಸಂಪೂರ್ಣ ಸತ್ಯಗಳು....!! - Life Truths in Kannada

೧) ಕಾ… ಸೂತ್ರಗಳಿಗೆ ಮದುವೆಯಲ್ಲಿ ಕಟ್ಟುವ ಮಂಗಲಸೂತ್ರ ಲೈಸೆನ್ಸ್ ಇದ್ದಂತೆ. ಅದಕ್ಕಾಗಿ ಎಲ್ಲರೂ ತಪ್ಪದೆ ಮದುವೆಯಾಗಲು ಬಯಸುತ್ತಾರೆ. ಈಗ ಉನ್ನತವಾದ ವಿಚಾರಗಳನ್ನಿಟ್ಟುಕೊಂಡು ಮದುವೆಯಾಗುವವರು ತುಂಬಾ ಅಪರೂಪ.

101 ಸಂಪೂರ್ಣ ಸತ್ಯಗಳು....!! - Life Truths in Kannada

೨) ಇಂಟರನೆಟ್ ಅಥವಾ ಆನಲೈನನಲ್ಲಿ ಸದಾಕಾಲ ಕ್ರಿಯಾಶೀಲರಾಗಿರುವ ಜನ ಮಾನಸಿಕವಾಗಿ ಖಿನ್ನರಾಗಿರುತ್ತಾರೆ ಮತ್ತು ಒಬ್ಬಂಟಿಯಾಗಿರುತ್ತಾರೆ. ಅದಕ್ಕೆ ಅವರು ಸಿಕ್ಕಸಿಕ್ಕವರ ಜೊತೆ ಚಾಟ್ ಮಾಡಲು ಸಾಯ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೩) ಸುಂದರವಾಗಿರುವ  ವ್ಯಕ್ತಿಗಳು ನಮ್ಮನ್ನು ಸುಲಭವಾಗಿ ಸೆಳೆಯುತ್ತಾರೆ. ಸುಂದರವಾದ ವಸ್ತುಗಳನ್ನು ನೋಡುತ್ತಿದ್ದರೆ ನಮ್ಮ ಮೂಡ್ ಬದಲಾಗುತ್ತದೆ. ಅದಕ್ಕಾಗಿ ನಾವು ಸುಂದರವಾಗಿರುವ ವ್ಯಕ್ತಿಗಳಿಗೆ ಮತ್ತು ವಸ್ತುಗಳಿಗೆ ಮನಸೋಲುತ್ತೇವೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೪) ಕಣ್ತೆರೆದು ಕಿಸ್ ಮಾಡಿದವರು ಮತ್ತು ಕಿಸ್ ಮಾಡಿಸಿಕೊಂಡವರು ಯಾರು ಇಲ್ಲ. ಇದ್ರೂ ತುಂಬಾ ಕಮ್ಮಿ ಜನ ಇರ್ತಾರೆ.

೫) ಹ್ಯಾಂಡ್ ಶೇಕ್ ಮಾಡುವುದಕ್ಕಿಂತ ಚುಂಬಿಸುವುದು ಎಷ್ಟೋ ಪಟ್ಟು ಸುರಕ್ಷಿತ ಮತ್ತು ಆರೋಗ್ಯಕರ. ಜನಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿರುವ ದೇಶದ ಜನರಿಗೆ ಇದನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೬) ರಾತ್ರಿ ಮಲಗಿದಾಗ ನಿಮಗೆ ತಪ್ಪಿಯೂ ಕನಸು ಬೀಳದಿದ್ದರೆ ನಿಮ್ಮ ಮೆದುಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ.

101 ಸಂಪೂರ್ಣ ಸತ್ಯಗಳು....!! - Life Truths in Kannada

೭) ಭಾರತದ ಶಿಕ್ಷಣ ವ್ಯವಸ್ಥೆ ನಮಗೆ ಸ್ವತಂತ್ರವಾಗಿ ಬದುಕುವುದನ್ನು ಕಲಿಸಲ್ಲ. ಬರೀ ಗುಲಾಮರಂತೆ ಬೇರೆಯವರ ಕೈಕೆಳಗೆ ಕೆಲಸ ಮಾಡುವುದನ್ನು ಕಲಿಸುತ್ತದೆ.

೮) ಹೃದಯಕ್ಕೆ ಸಾಯೋತನಕ ವಿಶ್ರಾಂತಿ ಇಲ್ಲ ಅಂತ ಎಲ್ಲರೂ ಅನ್ಕೊಂಡಿದಾರೆ. ಆದರೆ ನಾವು ಸೀನಿದಾಗ ಹೃದಯಕ್ಕೆ ಕೆಲವು ಸೆಕೆಂಡುಗಳ ಕಾಲ ವಿಶ್ರಾಂತಿ ಸಿಗುತ್ತದೆ.

೯) ದೇವರ ಮೇಲಿನ ಭಕ್ತಿಗೆ ಪೂಜಿಸುವವರಿಗಿಂತ, ಭಯಕ್ಕೆ ಪೂಜಿಸುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

೧೦) ಕಣ್ತೆರೆದು ಸೀನಲು ಸಾಧ್ಯವಿಲ್ಲ. ಅನುಮಾನವಿದ್ದರೆ ಪ್ರಯತ್ನಿಸಿ ನೋಡಿ.

೧೧) ಅತ್ಯಂತ ಬುದ್ಧಿವಂತ ವ್ಯಕ್ತಿಗಳೇ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಅಧಿಕವಾಗಿದೆ. ಅವರು ಅವಶ್ಯಕತೆಗಿಂತ ಅಧಿಕವಾಗಿ ಯೋಚಿಸಿ ಜಾಣ ಪೆದ್ದನಂತಾಗುತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೧೨) ಹೆಣ್ಣಿಗೆ ಹೆಣ್ಣೇ ನಿಜವಾದ ಶತ್ರು. ಅದೇ ರೀತಿಯಲ್ಲಿ ಗಂಡಿಗೆ ಗಂಡೇ ಶತ್ರು. ಯಾಕೆಂದರೆ ಹುಡುಗಿ ಎದುರಿಗಿದ್ದಾಗ ಎಲ್ಲ ಹುಡುಗರು ಹೀರೋಗಳ ರೀತಿ ಹಾರಾಡುತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೧೩) ದೇಹ ಬೆಳದಿದ್ರೆ ಬುದ್ಧಿ ಬೆಳೆದಿರಲ್ಲ. ಬುದ್ಧಿ ಬೆಳೆದಿದ್ರೆ ದೇಹ ಬೆಳೆದಿರಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೧೪) ಕದ್ದುಮುಚ್ಚಿ ಮಾಡೋಕೆ ಪ್ರೀತಿಯೇನು ಬ್ಲ್ಯಾಕ್ ಬ್ಯುಸಿನೆಸ್ಸಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೧೫) ರಾಯಲ್ ಜೆಲ್ಲಿ ಹೊಂದಿರುವ ರಾಣಿ ಜೇನು ನೊಣದೊಂದಿಗೆ ಸೆಕ್ಸ್ ಮಾಡಲು ಸಾವಿರಾರು ಗಂಡು ಜೇನು ನೊಣಗಳು ಸ್ಪರ್ಧೆಗೆ ಇಳಿದಿರುತ್ತವೆ. ರಾಣಿಯೊಂದಿಗೆ ಸೆಕ್ಸ್ ಮಾಡಿದ ಮರುಕ್ಷಣವೇ ಗಂಡು ನೊಣ ಸಾಯುತ್ತದೆ. ಆದರೆ ಸೆಕ್ಸ್ ಮಾಡಿದರೆ ಸಾಯ್ತೀನಿ ಅಂತ ಅದಕ್ಕೆ ಮುಂಚೆ ಗೊತ್ತಿರಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೧೬) ಭಾರತದಲ್ಲಿರುವ ಡ್ರೈವರ್‌ಗಳು ಹೊರ ದೇಶದ ಡ್ರೈವರಗಳಿಗಿಂತ ಎಷ್ಟೋ ಪಟ್ಟು ಮೇಲು. ಕೆಟ್ಟ ರಸ್ತೆಗಳು ಮಾತ್ರ ಒಬ್ಬ ಉತ್ತಮ ಚಾಲಕನನ್ನು ನಿರ್ಮಿಸಲು ಸಾಧ್ಯ ಎಂಬುದಕ್ಕೆ ಜೀವಂತ ಸಾಕ್ಷಿ ನಮ್ಮ ದೇಶದ ರಸ್ತೆಗಳು.

101 ಸಂಪೂರ್ಣ ಸತ್ಯಗಳು....!! - Life Truths in Kannada

೧೭) ಫಸ್ಟ್ ಬೆಂಚರಗಳು ಬರೀ ಕಾಲೇಜಿನ ಆಸ್ತಿ. ಆದರೆ ಲಾಸ್ಟ್ ಬೆಂಚರಗಳು ಇಡೀ ದೇಶದ ಆಸ್ತಿ ಎಂಬ ಸತ್ಯವನ್ನು ಯಾವ ಮೇಷ್ಟ್ರು ಅರಗಿಸಿಕೊಳ್ಳಲ್ಲ.

೧೮) ಒಳ್ಳೆಯವರು ಕೆಟ್ಟವರಿಗಿಂತ ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಾರೆ. ಕೆಟ್ಟವರಿಗಿಂತ ಮೊದಲು ಒಳ್ಳೆಯವರೆ ಸಾಯುತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೧೯) ಕನಸು ಕಾಣದ ವ್ಯಕ್ತಿಗಳು ಇದ್ದು ಸತ್ತಂತೆ. ಅವರು ಜೀವಂತ ಶವವಲ್ಲದೆ ಮತ್ತೇನು ಆಗಿರಲು ಸಾಧ್ಯವೇ ಇಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೨೦) ಇರುವೆಗಳಲ್ಲಿ ರಾಜ, ರಾಣಿ ಮತ್ತು ಕೆಲಸಗಾರರು ಎಂಬ ಮೂರು ವಿಧಗಳಿರುತ್ತವೆ. ರಾಜ ಮತ್ತು ರಾಣಿ ಇರುವೆಗಳು ಬರೀ ಸಂತಾನಾಭಿವೃದ್ಧಿಯಲ್ಲಿ ತೊಡಗಿರುತ್ತವೆ. ಅವು ಬೇರೆನು ಕೆಲಸ ಮಾಡುವುದಿಲ್ಲ. ಎಲ್ಲ ಕೆಲಸವನ್ನು ಕೆಲಸಗಾರ ಇರುವೆಗಳೇ ಮಾಡುತ್ತವೆ. ಆದರೆ ಆಹಾರದ ಕಟಾವು ಆದ ನಂತರ ರಾಜ ಮತ್ತು ರಾಣಿ ಇರುವೆಗಳು ಸೇರಿ ಸಾಧ್ಯವಾದಷ್ಟು ಕೆಲಸಗಾರ ಇರುವೆಗಳನ್ನು ಕಾರಣವಿಲ್ಲದೆ  ಸಾಯಿಸುತ್ತವೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೨೧) ಎಲ್ಲರಿಗೂ ತಂಪಾದ ತಿಂಡಿಗಳಿಗಿಂತ ಬಿಸಿ ಬಿಸಿಯಾದ ಫಾಸ್ಟ್ ಫುಡ್ಸಗಳೇ ತುಂಬ ಇಷ್ಟ. ಅದೇ ರೀತಿ ಒಳ್ಳೆ ಸುದ್ದಿಗಳಿಗಿಂತ ಕೆಟ್ಟ ಸುದ್ದಿಗಳನ್ನು ಕೇಳಲು ಎಲ್ಲರ ಕಿವಿಗಳಿಗೆ ಎಲ್ಲಿಲ್ಲದ ಕಾತುರ.

101 ಸಂಪೂರ್ಣ ಸತ್ಯಗಳು....!! - Life Truths in Kannada

೨೨) ಜನರಿಗೆ ಅವರ ಜೀವನಕ್ಕಿಂತ ಬೇರೆಯವರ ಜೀವನದಲ್ಲೇ ಹೆಚ್ಚಿನ ಆಸಕ್ತಿಯಿದೆ. ಆ ಕಾರಣದಿಂದಲೇ ಟಿವಿ ಸೀರಿಯಲ್ಗಳು, ನ್ಯೂಸ್ ಚಾನೆಲ್ಗಳು ಮತ್ತು ಸಾಮಾಜಿಕ ಜಾಲತಾಣಗಳು ಸಾವಿರಾರು ಕೋಟಿ ಸಂಪಾದನೆ ಮಾಡುತ್ತಿವೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೨೩) ಸತ್ಯಕ್ಕೆ ಸಾವಿಲ್ಲ. ಆದರೆ ಸತ್ಯ ಹೇಳುವವರಿಗೆ ಸಾವಿದೆ. ಸತ್ಯ ಹೇಳಲು ಹೊರಟವರು ಸಾಯುತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೨೪) ಈಗ ಎಲ್ಲರ ಕಪ್ಪು ಕಣ್ಣುಗಳಲ್ಲಿ ಹೆಚ್ಚಾಗಿ ನೀಲಿ ಕನಸುಗಳೇ ತುಂಬಿಕೊಂಡಿವೆ. ಜನರಿಗೆ ಈಗ ನೀಲಿ ಕಿವಿಗಳೂ ಬಂದಂತಿವೆ. ವಾತಾವರಣದ ಜೊತೆಗೆ ಜನರ ಮನಸ್ಸುಗಳು ಸಹ ಮಲಿನವಾಗಿವೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೨೫) ಎಷ್ಟೇ ಶ್ರೀಮಂತಿಕೆ ಸಿಕ್ಕರೂ, ಸುಟ್ಟರೂ ಸುಡದಷ್ಟು ಸಂಪತ್ತು ಸಿಕ್ಕರೂ, ಕಂಡ ಕನಸುಗಳೆಲ್ಲ ನನಸಾದರೂ, ಶಕ್ತಿ ಸಾಯುವ ತನಕ ಸೆಕ್ಸ್ ಮಾಡಿದರೂ ಸಹ ಮನುಷ್ಯ ಎಂಬ ಪ್ರಾಣಿಗೆ ತೃಪ್ತಿ ಎಂಬುದು ಸತ್ತರೂ ಸಿಗಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೨೬) ಮೈಮಾರಿಕೊಳ್ಳೊ ಹುಡುಗಿಯರಿಗೆ ಇರೋ ನಿಯತ್ತು, ಪ್ರೀತಿಸಿ ಮನಸ್ಸು ಮಾರಿಕೊಂಡು ಹೋಗುವ ಹುಡುಗಿಯರಿಗೆ ಇರಲ್ಲ ಅನಿಸುತ್ತೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೨೭) ಎಲ್ಲರೂ ಸ್ನೇಹಿತನನ್ನು ಮೆಡಿಸಿನ್ ತರಹ ಬಳಸುತ್ತಾರೆ. ಕಷ್ಟ ಬಂದಾಗ ಸ್ನೇಹಿತ ಬೇಕೇ ಬೇಕು ಅಂತಾರೆ. ಆದರೆ ಸುಖ ಬಂದಾಗ ಆತ ಸಮೀಪಕ್ಕೆ ಇಲ್ದೇ ಇದ್ರೆ ತುಂಬಾನೇ ಒಳ್ಳೆಯದು ಅಂತಾರೆ.

೨೮) ಮನಸ್ಸು ಭಾವನೆಗಳ ಸುಳಿಗೆ ಸಿಕ್ಕಿ ಒದ್ದಾಡುತ್ತಿರುವಾಗ, ತುಟಿಗಳಿಂದ ಮಾತು ಆಚೆ ಬರಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೨೯) ನಿಮ್ಮ ಕನಸುಗಳು ನಿಮ್ಮ  ಮನಸಿನ ಅಂತರಾಳದ ಯೋಚನೆಗಳನ್ನು, ಬಯಕೆಗಳನ್ನು ನಿಮಗೆ ಸಸ್ಪೆನ್ಸ್ ಸಿನಿಮಾದ ರೀತಿಯಲ್ಲಿ ತೋರಿಸುತ್ತವೆ. ಕನಸುಗಳು ನಿಮ್ಮ ಯೋಚನೆಗಳಿಗೆ ಮತ್ತು ಯೋಜನೆಗಳಿಗೆ ಕನ್ನಡಿಯಿದ್ದಂತೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೩೦) ಸಕ್ಸೆಸ್ ಮತ್ತು ಸೆಕ್ಸ್ ಎರಡು ಸುಲಭವಾಗಿ ಸಿಗುವುದಿಲ್ಲ. ಎರಡಕ್ಕೂ ಸಾಕಷ್ಟು ಬೆವರು ಸುರಿಸಬೇಕಾಗುತ್ತದೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೩೧) ಕಾಲೋಳಗೆ ಮುರಿದ ಮುಳ್ಳು, ಮನಸ್ಸಲ್ಲೇ ಉಳಿದ ಸುಳ್ಳು ಎರಡೂ ಅಪಾಯಕಾರಿನೇ…

101 ಸಂಪೂರ್ಣ ಸತ್ಯಗಳು....!! - Life Truths in Kannada

೩೨) ಈ ಜಗತ್ತಿನಲ್ಲಿ ಯಾರೂ ಸಹ ಅವರು ಹೇಳಿಕೊಳ್ಳುವಂತೆ ಬ್ಯುಸಿಯಿಲ್ಲ. ಬೇಡದವರನ್ನು ಅವೈಡ್ ಮಾಡಲು ಬ್ಯುಸಿ ಇದೀನಿ ಅಂತೇಳಿ ದೂರ ಓಡುತ್ತಾರೆ ಅಷ್ಟೇ. ಭೇಟಿಯಾಗಲು ಮನಸ್ಸಿದ್ದವರು ಎಷ್ಟೇ ಬ್ಯುಸಿಯಾಗಿದ್ದರೂ ಭೇಟಿಯಾಗುತ್ತಾರೆ. ಒಲ್ಲದ ಮನಸ್ಸಿನವರು ಇಲ್ಲಸಲ್ಲದ ನೆಪ ಹೇಳಿ ಜಾರಿಕೊಳ್ಳುತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೩೩) ಯಾವ ಗೆಳೆತನವೂ ಶಾಶ್ವತವಲ್ಲ. ಎಲ್ಲರೂ ಸಮಯಸಾಧಕ ಸ್ವಾರ್ಥಿಗಳೇ. ಸ್ವಾರ್ಥವಿಲ್ಲದ ಸ್ನೇಹ ಎಲ್ಲಿಯೂ ಇಲ್ಲ. ಬೇಕಾದಾಗ ಯಾರು ಬಂದು ಸಹಾಯ ಮಾಡಲ್ಲ. ಫ್ರೇಂಡಶೀಪ ಡೇ ದಿನ ಕೈಮೇಲೆ ಇದ್ದ ಬ್ಯಾಂಡಗಳಷ್ಟು ಕೈಗಳು ಕಷ್ಟ ಬಂದಾಗ ನಮ್ಮ ಹೆಗಲ ಮೇಲೆ ಇರುವುದಿಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೩೪) ಎಲ್ಲರೂ ಸಂಪತ್ತು, ಸೌಂದರ್ಯ, ಮುದ್ದಾದ ಮುಖ ಮತ್ತು ಮಾದಕವಾದ ಮೈಮಾಟವನ್ನು ನೋಡಿಯೇ ಪ್ರೀತಿಸಲು ಪ್ರಾರಂಭಿಸುತ್ತಾರೆ. ಆದರೆ ಸಾಚಾ ಅಂತಾ ತೋರಿಸಿಕೊಳ್ಳಲು ಮುದ್ದಾದ ಮನಸ್ಸನ್ನು ನೋಡಿ ಪ್ರೀತಿಸುತ್ತಿರುವೆ ಅಂತಾ ಬುರುಡೆ ಬಿಡುತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೩೫) ಕೆಲ ಹುಡುಗರು ಅಮಾಯಕ ಹುಡುಗಿಯರನ್ನು ಸುಖದ ಸರಕಿಗೆ ಕಾಮದ ಗೊಂಬೆಯಂತೆ ಬಳಸಿಕೊಳ್ಳುತ್ತಾರೆ. ಕೆಲ ಕಿಲಾಡಿ ಹುಡುಗಿಯರು ಅಮಾಯಕ ಹುಡುಗರನ್ನು ತಮ್ಮ ಬೇಡಿಕೆಗಳಿಗೆ ತಕ್ಕಂತೆ ಆಟದ ಗೊಂಬೆಗಳಂತೆ ಬಳಸಿಕೊಂಡು ಬೇಸರವಾದಾಗ ಕಸದ ತೊಟ್ಟಿಗೆ ಬೀಸಾಕುತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೩೬) ಶಾಲಾ ಕಾಲೇಜಿನಲ್ಲಿ ನಡೆಸುವ ಪರೀಕ್ಷೆಗಳು ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸಲ್ಲ. ಅದರ ಬದಲಾಗಿ ಅವರ ಜ್ಞಾಪಕಶಕ್ತಿಯನ್ನು ಪರೀಕ್ಷಿಸುತ್ತವೆ. ಅದಕ್ಕೆ ಟಾಪರಗಳು ಕೆಲಸ ಹುಡುಕಿಕೊಂಡು ಬೀದಿಬೀದಿ ಅಲೆಯುತ್ತಾರೆ. ಲಾಸ್ಟ್ ಬೆಂಚರಗಳು ಕೆಲಸ ಹುಡುಕಿಕೊಂಡು ಅಲೆಯುವವರಿಗೆ ಕೆಲಸ ಕೊಡುತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೩೭) ಭಾರತೀಯ ಶಿಕ್ಷಣ ಸದ್ಯಕ್ಕೆ ಉಪ್ಪಿಲ್ಲದ ಅಡುಗೆಯಂತಾಗಿದೆ. ಅದರಲ್ಲಿ ರುಚಿಯೆಂಬುದಿಲ್ಲ. ಅದಕ್ಕಾಗಿ ಎಲ್ಲ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹುಟ್ಟಲ್ಲ. ಎಲ್ಲ ವಿದ್ಯಾರ್ಥಿಗಳು ಈಗ ಕಾಲೇಜೆಂಬ ದೊಡ್ಡ ಪ್ರೆಶರ್ ಕುಕ್ಕರ್‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೩೮) ಆಯಾಸಕ್ಕೆ ಆಲಸ್ಯವೂ ಒಂದು ಪ್ರಮುಖ ಕಾರಣ.

101 ಸಂಪೂರ್ಣ ಸತ್ಯಗಳು....!! - Life Truths in Kannada

೩೯) ಸಾವಿರ ಸುಳ್ಳೇಳಿದ್ರು ಮದ್ವೆ ನಡೆಯುತ್ತೆ. ಆದರೆ ಒಂದೇ ಒಂದು ನಿಜ ಹೇಳಿದ್ರೆ ಮದ್ವೆ ನಿಂತೊಗತ್ತೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೪೦) ಒಬ್ಬ ಹುಡುಗ ಮತ್ತು ಒಬ್ಬಳು ಹುಡುಗಿ ಎಷ್ಟೇ ಒಳ್ಳೆ ಫ್ರೆಂಡ್ಸ್ ಆಗಿದ್ರೂ ಕೂಡ, ನೀಲಿ ಕಣ್ಣುಗಳಿರುವ ಈ ಸಮಾಜ ಅವರನ್ನು ಬೇರೆ ರೀತಿಯಲ್ಲೇ ನೋಡುತ್ತದೆ. ಇದರಿಂದ ಅವರು ಎಷ್ಟೇ ಪ್ರಯತ್ನಿಸಿದರೂ ಬರೀ ಫ್ರೇಂಡ್ಸಾಗಿ ಉಳಿಯಲು ಸಾಧ್ಯವಾಗುವುದಿಲ್ಲ. ಪ್ರೇಮಿಗಳೆಂಬ ಆರೋಪವನ್ನು ಪದೇಪದೇ ಕೇಳಿ ಕೊನೆಗೆ ಅವರು ಗುಪ್ತ ಪ್ರೇಮಿಗಳಾಗುತ್ತಾರೆ.

೪೧) ಯಾವ ಪ್ರೇಮಿಯೂ ಸಹ ತನ್ನ ಪ್ರೇಯಸಿಗೆ ಮೊದಲ ಸಲ ಮುತ್ತಿಡಲು, ಮೊದಲ ಸಲ ಅವಳನ್ನು ಅಪ್ಪಿಕೊಳ್ಳಲು ಕಿಸ್ ಡೇ, ಹಗ್ ಡೇ ತನಕ ಕಾದು ಕುಳಿತುಕೊಳ್ಳಲ್ಲ. ಎಲ್ಲರೂ ಸಮಯದ ಜೊತೆಗೆ ಅವಕಾಶ  ಸಿಕ್ಕಾಗ ಆಸೆ ಈಡೇರಿಸಿಕೊಂಡು ಬಿಡುತ್ತಾರೆ. So ಪ್ರೇಮಿಗಳ ದಿನ, ಪ್ರೇಮಿಗಳ ವಾರಗಳಿಗೆ ಯಾವುದೇ ನೈಜ ಅರ್ಥವಿಲ್ಲ. ಎಲ್ಲವೂ ಪೆದ್ದು ಆಚರಣೆಗಳಷ್ಟೇ..!

೪೨) ಕೆಲವು ಸಲ ರಾಮನಂತೆ ತಾಟಕಿಯಂಥ ಪಾತಕಿಯನ್ನು ಸಂಹರಿಸಬೇಕಾಗುತ್ತದೆ. ಲಕ್ಷ್ಮಣನಂತೆ ಶೂರ್ಪನಖಿಯಂಥ ರಕ್ಕಸಿಯರ ಅಭಿಮಾನ ಭಂಗ ಮಾಡಬೇಕಾಗುತ್ತದೆ. ಆವಾಗ ಸ್ತ್ರೀ ಹತ್ಯಾ ದೋಷ ಬಾಧಿಸಲ್ಲ.

೪೩) ರಾವಣ ಕುಬೇರನಿಂದ ಪುಷ್ಪಕ ವಿಮಾನವನ್ನು ಕಿತ್ತುಕೊಂಡು ಅದರಲ್ಲಿ ಮೆರೆದಾಡಿ ಕೊನೆಗೆ ರಾಮನಿಂದ ಸತ್ತ. ಗ್ರೀಕನ ಐರಾಕಸ್ ಮೇಣದ ರೆಕ್ಕೆಗಳನ್ನು ಕಟ್ಟಿಕೊಂಡು ಆಕಾಶದಲ್ಲಿ ಹಾರಾಡುತ್ತಿದ್ದ. ಸೂರ್ಯನ ಶಾಖಕ್ಕೆ ಮೇಣ ಕರಗಿದ್ದರಿಂದ ಆತ ಕೆಳಗೆ ಬಿದ್ದು ಸತ್ತ. ಸತ್ತವರ ಸಂಖ್ಯೆ ಕಣ್ಮುಂದಿದ್ದರೂ ಸುತ್ತಲಿರುವವರು ಸುಧಾರಿಸಿಕೊಳ್ಳಲ್ಲ. ಎಲ್ಲರಿಗೂ ಕೆಟ್ಟ ಮೇಲೆಯೇ ಬುದ್ಧಿ ಬರೋದು.

101 ಸಂಪೂರ್ಣ ಸತ್ಯಗಳು....!! - Life Truths in Kannada

೪೪) ಅಧರ್ಮಿಯರನ್ನು ಅಧರ್ಮದಿಂದ ಕೊಂದರೆ ಧರ್ಮಕ್ಕೆ ಅಪಚಾರವಿಲ್ಲ. ಪಾಪಿಗಳನ್ನು ಕೊಂದರೆ ಪಾಪ ಸುತ್ಕೊಳಲ್ಲ. ದುಷ್ಟರನ್ನು ದಂಡಿಸಿದವನು ದುಷ್ಟನಲ್ಲ. ಪ್ರತಿಸಲ ಶತ್ರುಗಳನ್ನು ಗೆಲ್ಲೊಕ್ಕಾಗಲ್ಲ. ಕೆಲವು ಸಲ ಕೊಲ್ಲಲೇಬೇಕಾಗುತ್ತದೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೪೫) ಪ್ರೀತಿಸಿದವರು ದೂರಾದಾಗ ಹೂಬುಟ್ಟಿಯಂತಿದ್ದ ಹೃದಯ ಕಸದ ತೊಟ್ಟಿಯಂತಾಗುತ್ತದೆ. ಆನೆ ಭಾರ ಹೊರಬಹುದು. ಆದರೆ ಭಾವನೆಗಳ ಭಾರಾನಾ ಹೊರಕ್ಕಾಗಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೪೬) ಗಂಡ್ಮಕ್ಕಳು ಹಳೇ ನೋವುಗಳನ್ನು ನೆನಪಿಸಿಕೊಂಡು ಬಾರಲ್ಲಿ ಕುಂತು ಕಣ್ಣೀರಾಕ್ತಾರೆ. ಹೆಣ್ಮಕ್ಕಳು ಟಿವಿ ಸೀರಿಯಲ್ನಲ್ಲಿ ಹೊಸ ನೋವುಗಳನ್ನು ನೋಡಿ ಮನೆಯಲ್ಲಿ ಕುಂತು ಕಣ್ಣೀರಾಕ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೪೭) ನಮ್ಮ ಜೊತೆಗಿರೋರಿಗೆ ನಮ್ಮ ಸಕ್ಸೆಸ್ ಇಷ್ಟವಿರಲ್ಲ. ಅವರು ಸಪೋರ್ಟ್ ಮಾಡೋ ಥರ ನಾಟಕವಾಡಿ ಸ್ಮೈಲ್ ಕೊಟ್ಟು ಸುಮ್ನೆ ಸೈಡಲ್ಲಿರುತ್ತಾರೆ.

೪೮)  ಊಸರವಳ್ಳಿ ಬಣ್ಣ ಬದಲಾಯಿಸಿದರೆ ಅದು ಆತ್ಮರಕ್ಷಣೆ. ಆದರೆ ಪ್ರೇಮಿಗಳು ಬಣ್ಣ ಬದಲಾಯಿಸಿದರೆ ಅದು ಆತ್ಮವಂಚನೆ.

೪೯) ಅಂದು ದೇಶಪ್ರೇಮಕ್ಕಾಗಿ ದೇಹತ್ಯಾಗ ಮಾಡ್ತಿದ್ರು. ಆದ್ರೆ ಇಂದು ದೇಹಪ್ರೇಮಕ್ಕಾಗಿ ದೇಶತ್ಯಾಗ ಮಾಡುತ್ತಿದ್ದಾರೆ. ಯಾಕ ಗೊತ್ತಾ? ನಮ್ಮ ಹಿರಿಯರು ಕಿರಿಯರಿಗೆ “ಯೌವ್ವನ, ಪ್ರೀತಿ ಮತ್ತು ಸೆಕ್ಸಗಳ” ಬಗ್ಗೆ ಸರಿಯಾದ ಮಾರ್ಗದರ್ಶನ ನೀಡ್ತಿಲ್ಲ. ಮಡಿವಂತಿಕೆಯ ನೆಪದಲ್ಲಿ ಎಲ್ಲವನ್ನೂ ಮುಚ್ಚಿಟ್ಟು, ನಮ್ಮ ಕುತೂಹಲವನ್ನು ಕೆರಳಿಸಿ ನಮ್ಮನ್ನು ಕೆಟ್ಟ ದಾರಿಗೆ ತಳ್ಳಿದ್ದಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೫೦) ಪ್ರತಿಯೊಬ್ಬ ಪುರುಷ ತಾನು ಪವಿತ್ರನಲ್ಲದಿದ್ದರೂ ಪವಿತ್ರವಾದ ಮಡದಿಯನ್ನು ಬಯಸುತ್ತಾನೆ. ತಾನು ವರ್ಜಿನ್ ಆಗಿರದಿದ್ದರೂ, ವರ್ಜಿನ್ ಹೆಂಡತಿಯನ್ನು ಹುಡುಕುತ್ತಾನೆ. ಅವನಿಗೆ ಒರಿಜಿನಲ್ (Original) ಹುಡುಗಿ ಬೇಕಿಲ್ಲ. ಬರೀ ವರ್ಜಿನ್ (Virgin) ಹುಡುಗಿ ಮಡದಿಯಾಗಿ ಬರಬೇಕಷ್ಟೇ.

101 ಸಂಪೂರ್ಣ ಸತ್ಯಗಳು....!! - Life Truths in Kannada

೫೧) ಬಹಳಷ್ಟು ಜನ ಒಳ್ಳೇ ಹುಡುಗರು ಸಿಂಗಲ್ ಆಗೇ ಇರುತ್ತಾರೆ. ಒಳ್ಳೇ ಹುಡುಗರಿಗೆ ಒಳ್ಳೇ ಹುಡುಗಿ ಸಿಗಲ್ಲ. ಬಹಳಷ್ಟು ಜನ ಒಳ್ಳೇ ಹುಡುಗಿಯರು ಕೆಟ್ಟ ಹುಡುಗರನ್ನೇ ಇಷ್ಟ ಪಡುತ್ತಾರೆ.

೫೨) ದುಡ್ಡಿನಿಂದ ಸಂತೋಷವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಆದರೆ ದುಡ್ಡಿದ್ರೆ ನಮ್ಮ ಅವಶ್ಯಕತೆಗಳನ್ನೆಲ್ಲ ಪೂರೈಸಿಕೊಂಡು ಸಂತೋಷವಾಗಿರಬಹುದು.

101 ಸಂಪೂರ್ಣ ಸತ್ಯಗಳು....!! - Life Truths in Kannada

೫೩) ನಮ್ಮ ಬಹುಪಾಲು ನಿರ್ಧಾರಗಳು ನಮ್ಮ ಬಳಿಯಿರುವ ದುಡ್ಡನ್ನು ಅವಲಂಬಿಸಿರುತ್ತವೆ. ನಮ್ಮ ಸ್ನೇಹ, ಪ್ರೀತಿ, ಮದುವೆ ಇತ್ಯಾದಿಗಳೆಲ್ಲವು ದುಡ್ಡಿನಿಂದಲೇ ನಿರ್ಧಾರವಾಗುತ್ತವೆ.

೫೪) ಭಾರತೀಯರಷ್ಟು ಬುದ್ಧಿವಂತ ಜನ ಬೇರೆಲ್ಲೂ ಸುಲಭವಾಗಿ ಸಿಗುವುದಿಲ್ಲ. ಇದಕ್ಕೆ ನಾಸಾ ಮತ್ತು ಗೂಗಲಗೆ ಬೆನ್ನೆಲುಬುಗಾಗಿ ಕೆಲಸ ಮಾಡುತ್ತಿರುವ 36% ಭಾರತೀಯ ಕಾರ್ಮಿಕರು ಸಾಕ್ಷಿ. ಅವರೆಲ್ಲರೂ ಕೆಲಸಕ್ಕಾಗಿ ಭಾರತವನ್ನು ಬಿಟ್ಟು ಬೇರೆಡೆಗೆ ಹೋಗಿದ್ದಾರೆ. ಯಾಕೆಂದರೆ ನಮ್ಮ ದೇಶದಲ್ಲಿ ಬುದ್ಧಿವಂತರಿಗೆ ಬೆಲೆ ಸಿಗಲ್ಲ. ನಮ್ಮ ಜನ ಬರೀ ರಾಜಕಾರಣ ಮಾಡ್ತಾರೆ.

೫೫) ಪೆನ್ನಿನಿಂದಾಗದ ಕೆಲಸಗಳು ಗನ್ನಿನಿಂದಾಗುತ್ತವೆ. ಗನ್ನಿನಿಂದಾಗದ ಕೆಲಸಗಳು ಪೆನ್ನಿನಿಂದಾಗುತ್ತವೆ. ಪೆನ್ನು, ಗನ್ನಿನಿಂದಾಗದ ಕೆಲಸಗಳು ಹೆಣ್ಣಿನಿಂದಾಗುತ್ತವೆ. So ಹೆಣ್ಣು, ಪೆನ್ನು, ಗನ್ನುಗಳೆಲ್ಲವೂ ಅಪಾಯಕಾರಿನೇ.

೫೬) ಸಮುದ್ರದಲ್ಲಿ ಕಳೆದೋದ ಮುತ್ತು ಹುಡುಕ್ಕಿದ್ರೆ ಸಿಗಬಹುದು. ಆದರೆ ಕಣ್ಣೀರಲ್ಲಿ ಕಳೆದೋದ ಪ್ರೀತಿ ಎಂಬ ಮುತ್ತು ಸಾಯೋತನಕ ಹುಡುಕಿದ್ರು ಮತ್ತೆ ಮರಳಿ ಸಿಗಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೫೭) ಎಷ್ಟೇ ಆತ್ಮೀಯರಾದರು ಮನೆತನಕ ಬರಬಹುದು. ಅತೀ ಆತ್ಮೀಯರಾಗಿದ್ದರೆ ಮಸಣದ ತನಕ ಬರಬಹುದು. ಅತ್ಯಂತ ಆತ್ಮೀಯರಾಗಿದ್ರೆ ಸಮಾಧಿತನಕ ಬರಬಹುದು. ಆದರೆ ಯಾರೂ ಸಮಾಧಿ ಶೇರ್ ಮಾಡ್ಕೊಳೋಕೆ ಬರಲ್ಲ. So ಎಲ್ಲರೂ ಅನಾಥರೆ…

೫೮) ಏಪ್ರಿಲ್ 1stಗೂ ಫೂಲಾಗದ ಭಾರತೀಯರು ಎಲೆಕ್ಷನ್ ಟೈಮಲ್ಲಿ ಪದೇಪದೇ ಫೂಲಾಗುತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೫೯) ಬಡವರ ಮನೆಯಲ್ಲಿ ಬೆಕ್ಕು, ನಾಯಿಗಳಂಥ ಪ್ರಾಣಿಗಳು ಮನುಷ್ಯರಂತಿರುತ್ತವೆ. ಆದರೆ ಕೆಲ ಶ್ರೀಮಂತರ ಮನೆಯಲ್ಲಿ ಮನುಷ್ಯರೇ ಕಾಡು ಮೃಗಗಳಂತಿರುತ್ತಾರೆ.

೬೦) ನಾವು ಒಳ್ಳೆ ಮನಸ್ಸಿನಿಂದ ರಕ್ತದಾನ ಮಾಡ್ತೀವಿ. ಆದರೆ ನಮಗೆ ಅವಶ್ಯಕತೆ ಬಿದ್ದಾಗ ಯಾರು ಉಚಿತವಾಗಿ ರಕ್ತ ಕೊಡಲ್ಲ. ಅರ್ಥಾತ ಯಾವ ಬ್ಲಡಬ್ಯಾಂಕನವರು ಸಹ ನಮಗೆ ರಕ್ತದಾನ ಮಾಡಲ್ಲ. ನಾವು ಉಚಿತವಾಗಿ ಕೊಟ್ಟ ರಕ್ತ, ಪುನಃ ನಮಗೆ ಉಚಿತವಾಗಿ ಸಿಗಲ್ಲ. ಜನ ರಕ್ತದ ಜೊತೆಗೂ ಕೋಟ್ಯಾಂತರ ರೂಪಾಯಿ ಬ್ಯುಸಿನೆಸ್ ಮಾಡ್ತಾರೆ. ಜನರಿಂದ ಉಚಿತವಾಗಿ ರಕ್ತದಾನ ಮಾಡಿಸಿಕೊಂಡು ಮತ್ತೆ ಅದನ್ನ ಜನರಿಗೆ ಮಾರಿ ದುಡ್ಡು ಮಾಡ್ತಾರೆ. ಆದ್ರೂ ಅವರನ್ನು ಯಾರು ಏನೂ ಕೇಳಲ್ಲ.

೬೧) ಮೋಡದ ಮರೆಯಲ್ಲಿ ಸೂರ್ಯನನ್ನು ತುಂಬಾವೊತ್ತು ಬಚ್ಚಿಡೋಕೆ ಆಗಲ್ಲ. ಅದೇ ರೀತಿ ಈ ಮನದ ಮರೆಯಲ್ಲಿ ಈ ಪ್ರೀತಿಯನ್ನು ಮುಚ್ಚಿಡೋಕೆ ಆಗಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೬೨) ಕೆಲವು ಸಮಸ್ಯೆಗಳನ್ನು ನೆಗಡಿಯೆಂದು ತಿಳಿದು ಸುಮ್ಮನಿರಬೇಕು. ಯಾಕೆಂದರೆ ಯಾವುದೇ ಟ್ರೀಟ್‌ಮೆಂಟ್ ತಗೊಳದಿದ್ರು ನೆಗಡಿ ತಾನಾಗಿಯೇ ವಾಸಿಯಾಗುತ್ತದೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೬೩) ನಿನಗಾಗಿ ಸಾಯೋತನಕ ಕಾಯ್ತೀನಿ ಅಂತಾ ಸಾವಿರಾರು ಪ್ರೇಮಿಗಳು ಹೇಳ್ತಾರೆ. ಆದ್ರೆ ಯಾರು ಕಾಯಲ್ಲ. ಸ್ವಲ್ಪ ದಿನ ಕಾದು, ಸಿಕ್ಕವರ ಜೊತೆ ಲೈಫ್ ಸೆಟ್ಲ ಮಾಡ್ಕೊಂಡು ಆರಾಮಾಗಿರ್ತಾರೆ.

೬೪) ಯೌವ್ವನದಲ್ಲಿ ಪ್ರೀತಿಯೆಂಬ ಹಣತೆಯಿಂದ ಬಾಳನ್ನು ಬೆಳಗಿಸಿಕೊಂಡವರಿಗಿಂತ, ಬೆಳಕ್ಕಿದ್ದ ಬಾಳನ್ನು ಕತ್ತಲಾಗಿಸಿಕೊಂಡವರೆ ಹೆಚ್ಚು.

101 ಸಂಪೂರ್ಣ ಸತ್ಯಗಳು....!! - Life Truths in Kannada

೬೫) ಹುಡುಗಿ ಎಂಬ ಒಂದು ಕ್ಯಾಂಡಲನ್ನಾ ಬೆಳಗಿಸೋಕೆ ಹೋಗಿ ನಾಲ್ಕಾರು ಹುಡುಗರು ಬೆಂಕಿಕಡ್ಡಿ ಥರಾ ಪ್ರಾಣ ಕಳ್ಕೊತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೬೬) ನಿಮ್ಮ ಲೈಫ್ ಸೂತ್ರದಾರವಿಲ್ಲದ ಗಾಳಿಪಟ ಅಂತಾ ಗೊತ್ತಾದಾಗ ಎಲ್ಲರೂ ಗಾಳಿಪಟಾನಾ ಮನಬಂದಂತೆ ಹಾರಿಸಿ ಹರಿದಾಕೋಕೆ ತುದಿಗಾಲ ಮೇಲೆ ನಿಲ್ತಾರೆ.

೬೭) ಚಿನ್ನ ಎಷ್ಟೇ ಕಾಸ್ಟ್ಲಿಯಾದರೂ ಅದರ ಡಿಮ್ಯಾಂಡ್ ಮಾತ್ರ ಕಮ್ಮಿಯಾಗಲ್ಲ. ಅದೇ ರೀತಿ ಪ್ರೇಯಸಿ ಎಷ್ಟೇ ಬೈದ್ರು ಅವಳ ಮೇಲಿನ ಪ್ರೀತಿ ವ್ಯಾಮೋಹ ಯಾವತ್ತೂ ಬಿಟ್ಟೊಗಲ್ಲ.

೬೮) ಕೆಲವು ಆಸೆಗಳು ತಲೆಯ ಮೇಲಿರೋ ಕೂದಲ್ಲಿದ್ದಂಗೆ. ಹೆಚ್ಚಿಗೆ ಆಸೆಪಟ್ಟಷ್ಟು ಹೆಚ್ಚಿಗೆ ದೂರ ಹೋಗುತ್ತವೆ. ಕೆಲವು ಹುಡುಗಿಯರು ಹಂಗೆ….

೬೯) ಎಲ್ಲ ಹುಡುಗರು ಹುಲಿಗೆ ಹೆದ್ರಲ್ಲ. ಆದರೆ ಹುಡುಗಿಯರಿಗೆ ಖಂಡಿತ ಹೆದರತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೭೦) ಒಂದ್ಸಲ ಬಂದೋದ್ರೆ ಮತ್ತೆ ಮರಳಿ ಬರಲ್ಲ ಅನ್ನೋಕೆ ಈ ಪ್ರೇಮ ಕಾಮಗಳೇನು ದಢಾರ್, ಸಿಡುಬು ರೋಗಗಳಂತಲ್ಲ. ಮತ್ತೆ ಮತ್ತೆ ಅವು ಬರ್ತಾನೆ ಇರ್ತವೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೭೧) ಅದೇನು ರೋಗವೋ, ಟೀಚರ್ ಶಾಪವೋ ಗೊತ್ತಿಲ್ಲ. ಓದಲು ಶುರು ಮಾಡಿದರೆ ನಿದ್ದೆ ತಂತಾನೇ ಬರುತ್ತೆ. ಕೆಲವು ಕ್ಲಾಸಲ್ಲಿ ತಲೆಯೊಳಗೆ ಏನು ಇಳಿಯಲ್ಲ. ಎಲ್ಲ ಹಾಗೇ ಹಾರಿ ಹೋಗುತ್ತದೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೭೨) ಸ್ನೇಹ ಪ್ರೀತಿಗಳು ಈಗ ಸಂಬಂಧಗಳಾಗಿ ಉಳಿದಿಲ್ಲ. ಅವು ಅನುಕೂಲಕ್ಕೆ ತಕ್ಕಂತೆ ಮಾಡುವ ಪಾರ್ಟಟೈಮ್ ಕೆಲಸಗಳಾಗಿವೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೭೩) ಬಾಲರ್ ಅಪೀಲ್ ಹಾಕಿದಾಗೆಲ್ಲ ಅಂಪೈರ್ ವಿಕೆಟ ಕೊಡಲ್ಲ. ಹುಡುಗರು ಫೇಸ್ಬುಕಲ್ಲಿ ಫ್ರೆಂಡ್ ರಿಕ್ವೇಸ್ಟ ಕಳಿಸಿದಾಗೆಲ್ಲ ಹುಡುಗಿಯರು ಆ್ಯಕ್ಸೆಪ್ಟ ಮಾಡ್ಕೋಳಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೭೪) ಗೌತಮನ ಮಾರುವೇಷದಲ್ಲಿ ಬಂದ ದೇವೆಂದ್ರನಿಗೆ ಸೆರಗು ಹಾಸಿ ಮೋಸ ಹೋದ ಅಹಲ್ಯ ಸಾವಿರಾರು ವರ್ಷಗಳ ಕಾಲ ಕಲ್ಲಾಗಿರಬೇಕಾಯಿತು. ಈಗಲೂ ಅದೆಷ್ಟೋ ಅಹಲ್ಯಯರು ಮೋಸಹೋಗಿ ಕಲ್ಲಾಗಿದ್ದಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೭೫) ಪಾವಿತ್ರ್ಯತೆಯ ಪರೀಕ್ಷೆಗಾಗಿ ಸೀತೆಯಂತೆ ಈಗಿನ ಎಲ್ಲ ಪುರುಷರಿಗೆ ಮತ್ತೆ ಮಹಿಳೆಯರಿಗೆ ಅಗ್ನಿ ಪರೀಕ್ಷೆಯನ್ನಿಟ್ಟರೆ ಎಲ್ಲರೂ ಪಾಸಾಗುವುದು ಅನುಮಾನ. 99% ಜನ ಪರೀಕ್ಷೆಯನ್ನೇ ಒಪ್ಪಿಕೊಳ್ಳಲ್ಲ. ಯಾಕೆಂದರೆ ಅವರಿಗೆ ತಾವು ಪಾಸಾಗಲ್ಲ ಎಂಬುದು ಚೆನ್ನಾಗಿ ಗೊತ್ತು.

101 ಸಂಪೂರ್ಣ ಸತ್ಯಗಳು....!! - Life Truths in Kannada

೭೬) ಈಗ ಎಲ್ಲರಿಗೂ ಅನ್ನ, ನೀರು, ಗಾಳಿಗಿಂತ ಇಂಟರನೆಟ್ಟಿನ ಅವಶ್ಯಕತೆ ಹೆಚ್ಚಾದಂತೆ ತೋರುತ್ತಿದೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೭೭) ಪ್ರತಿಯೊಬ್ಬ ಕಾಮಿಡಿಯನನ ಹಿಂದೆ ದು:ಖದ ಸಾಗರವೇ ಇರುತ್ತದೆ. ಆದರೂ ಆತ ಬೇರೆಯವರ ನಗುವಲ್ಲಿ ತನ್ನ ನೋವನ್ನು ಮರೆಯುತ್ತಾನೆ. ಜಗಬೆಳಗೊ ಸೂರ್ಯನೆದೆಯಲ್ಲಿಯೂ ನೋವಿದೆ. ಕಿಲಕಿಲನೆ ನಗುವ ಚಂದ್ರನ ಮುಖದಲ್ಲಿಯೂ ಕಪ್ಪು ಕಂದರವಿದೆ.

೭೮) ಹುಡುಗರೆಲ್ಲ ಕೆಟ್ಟವರಲ್ಲ.

ಹುಡುಗಿಯರೆಲ್ಲ ಒಳ್ಳೆಯವರಲ್ಲ.

೭೯) ಮುದ್ದಾದ ನೆನಪುಗಳು ಮನಸ್ಸು ಮುರಿದ ಮೇಲೆ ಮುಳ್ಳಾಗಿ ಚುಚ್ಚುತ್ತವೆ. ನೆನಪುಗಳನ್ನು ಕೊಲ್ಲಲು ಯಾವುದೇ ಔಷಧಿಯಿಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೮೦) ಹೆಣ್ಣಿನ ಸೌಂದರ್ಯ ಅವಳಿಗೆ ಸಾಕಷ್ಟು ಸಂದರ್ಭಗಳಲ್ಲಿ ಶಾಪವಾಗಿ ಪರಿಣಮಿಸುತ್ತದೆ. ಸೌಂದರ್ಯ ವರವಾಗಿದ್ದಕ್ಕಿಂತ ಶಾಪವಾದ ಸಂದರ್ಭಗಳೇ ಅಧಿಕವಾಗಿವೆ.

೮೧) ಬ್ಯಾಚರಲ್ ರೂಮಲ್ಲಿ ಎಷ್ಟೇ ಗೂಡಿಸಿದ್ರು ಅಳಿಯದ ಧೂಳಿರುತ್ತೆ. ಜೊತೆಗೆ ಅವನ ಮನಸ್ಸಲ್ಲಿ ಎಷ್ಟೇ ಹೇಳಕೊಂಡ್ರು ಮುಗಿಯದ ಗೋಳಿರುತ್ತೆ.

೮೨) ಈಡಿ ಜಗತ್ತನ್ನೇ ಗೆದ್ದ ವೀರನು ಸಹ ಹೆಣ್ಣಿನ ಸೌಂದರ್ಯಕ್ಕೆ ಸಲೀಸಾಗಿ ಸೋತು ಶರಣಾಗುತ್ತಾನೆ.

೮೩)  ಇಸ್ಕೋಳೊ ಕೈಗೆ ಎಷ್ಟಾದ್ರು ಸಾಕಾಗಲ್ಲ. ಕೊಡೊ ಕೈಗೆ ಕಷ್ಟ ಬಂದ್ರು ಕಮ್ಮಿ ಬೀಳಲ್ಲ. ಮೋಹ ಮತ್ತು ದಾಹ ಮಿತಿ ಮೀರಿದರೆ ದೇಹ ಮಣ್ಣಾಗುವುದಂತು ನಿಜ.

101 ಸಂಪೂರ್ಣ ಸತ್ಯಗಳು....!! - Life Truths in Kannada

೮೪) ಚಿಕ್ಕಚಿಕ್ಕ ವಿಷಯಗಳಿಗೆಲ್ಲ ಕೋಪ ಮಾಡಿಕೊಳ್ಳುವುದು ಹುಡುಗಿಯರ ಹುಟ್ಟುಗುಣ. ಅವರನ್ನು ಪದೇ ಪದೇ ಸಮಾಧಾನ ಮಾಡಿ ಬೀಳುತ್ತೆ ಹುಡುಗರ ಅರ್ಧ ಹೆಣ. ಇತ್ತೀಚಿಗೆ ಹುಡುಗಿಯರಿಗೆ ಕೋಪವೆನ್ನುವುದೆ ಮೂಗುತಿಯಾಗಿದೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೮೫) ಹುಡುಗಿಯರು ಪಕ್ಷಿಗಳಿದ್ದಂತೆ. ಯಾಕೆಂದರೆ ಅವರು ಬೇಜಾರಾದಾಗ ಹಿಂದುಮುಂದು ನೋಡದೆ ತಮಗಿಷ್ಟ ಬಂದ ಕಡೆಗೆ ವಲಸೆ ಹೋಗುತ್ತಾರೆ.

೮೬) ಮುಳ್ಳಿನ ಮರವೂ ನೆರಳಾಗುವಂತೆ, ಕೆಟ್ಟವರು ಸಹ ಕೆಲವರಿಗೆ ಒಳ್ಳೆಯವರಾಗಿರುತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೮೭) ಫೇವರೆಟ ಸಬ್ಜೆಕ್ಟಲ್ಲಿ ಫೇಲ್ ಆಗೋದು, ಪ್ರೀತಿಸಿದವರು ಕೈಕೊಟ್ಟಾಗ ಸಾಯೋಕೆ ಫೇವರೇಟ್ ಸ್ಪಾಟಗೇನೆ ಹೋಗೊದು ಎರಡು ಒಂದೇ..!

೮೮) ಹುಡುಗರ ಗಡ್ಡ, ವಿರಹದ ಗುಡ್ಡ ಎರಡು ಒಂದೇ..!

೮೯) ಕಳ್ಳ ಸಂಬಂಧಗಳು ಹೀಗೆ ಹೆಚ್ಚಾಗುತ್ತಾ ಹೋದರೆ ಮುಂದೊಂದು ದಿನ ಸಂಸಾರಗಳಿಗೂ ಸೆನ್ಸಾರ್ ಮಂಡಳಿ ನೇಮಿಸುವ ಅವಶ್ಯಕತೆ ಬಂದೇ ಬರುತ್ತೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೯೦) ಕೆಲ ಪುರುಷರು ಹೆಜ್ಜೇನಿದ್ದಂತೆ. ಹೆಣ್ಣೆಂಬ ಹೂವಿನಂದವನ್ನು ಮನಬಂದಂತೆ ಅನುಭವಿಸಿ ಮಂಗ ಮಾಯವಾಗುತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೯೧) ಎಲ್ಲ ಮನುಷ್ಯರು ಕೂಡ ವ್ಯಾಘ್ರರೆ. ಆದರೆ ನಿಜವಾದ ವ್ಯಾಘ್ರರಲ್ಲ. ಗೋಮುಖ ವ್ಯಾಘ್ರರು.

101 ಸಂಪೂರ್ಣ ಸತ್ಯಗಳು....!! - Life Truths in Kannada

೯೨) ಗಿಣಿನಾ ಬಂಗಾರದ ಪಂಜರದಲ್ಲಿ ಬಂಧಿಸಿಡಬಹುದು. ಆದರೆ ರಣಹದ್ದನಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೯೩) ದೇಶಕ್ಕೆ ತೂತು ಬಿದ್ರು ರಾಜಕಾರಣಿಗಳ ಜರಡಿ ಮಾತು ನಿಲ್ತಿಲ್ಲ. ಎಲ್ಲಿಯೂ ಸಲ್ಲದವನು ರಾಜಕಾರಣದಲ್ಲಿ ಸಲ್ಲುವನಯ್ಯ.

101 ಸಂಪೂರ್ಣ ಸತ್ಯಗಳು....!! - Life Truths in Kannada

೯೪) ಮೂಗುತಿನಾ ಮನಸ್ಸು ಗೆದ್ದವನು ಹಾಕಿದ್ರೆ ನೋವಾಗಲ್ಲ. ಪ್ರೀತಿ ಸ್ವಾರ್ಥ, ವಿರಹ ವ್ಯರ್ಥ.

101 ಸಂಪೂರ್ಣ ಸತ್ಯಗಳು....!! - Life Truths in Kannada

೯೫) ಹತ್ತು ಕೈಗಳ ಕೆಲಸವನ್ನು ಒಬ್ಬಳೇ ಮಾಡಿದರೂ ಅವಳ ಮೇಲೆ ಯಾರಿಗೂ ಪ್ರೀತಿ ಹುಟ್ಟಲ್ಲ. ಅವಳ ಬೆಲೆ ಗೊತ್ತಾಗಲ್ಲ. ಸಂಬಳವಿಲ್ಲದೆ ಕೆಲಸ ಮಾಡುವ ಏಕೈಕ ವ್ಯಕ್ತಿ ಅವಳು. ಪ್ರತಿಮನೆಯ ಮಹಾಲಕ್ಷ್ಮಿ ಅವಳು. ಆದರೆ ಅವಳ ಬಳಿಯೇ ದುಡ್ಡಿರುವುದಿಲ್ಲ.

101 ಸಂಪೂರ್ಣ ಸತ್ಯಗಳು....!! - Life Truths in Kannada

೯೬) ಪ್ರೀತಿಸಿದವಳು ಮಡದಿಯಾದರೆ ಅವಳೇ ಬಾಳಿನ ಕಣ್ಣು. ಪ್ರೀತಿಸಿದವಳೇ ಪರದೇಶಿ ಮಾಡಿ ಹೋದರೆ ಅವಳೇ ಹೃದಯದ ಹುಣ್ಣು.

101 ಸಂಪೂರ್ಣ ಸತ್ಯಗಳು....!! - Life Truths in Kannada

೯೭) ಕಣ್ಣಿಗೆ ಇಷ್ಟವಾದವರು ಬೇಗನೆ ಸಿಗ್ತಾರೆ. ಆದ್ರೆ ಮನಸ್ಸಿಗೆ ಇಷ್ಟವಾದವರು ಬೇಗನೆ ಸಿಗಲ್ಲ. ಇಷ್ಟ ಆದವರು ಸಿಗಬೇಕಂದ್ರೆ ಸ್ವಲ್ಪ ಕಷ್ಟಾನೂ ಪಡಬೇಕಾಗುತ್ತದೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೯೮) ಪ್ರೀತಿಸಿದ ಹುಡುಗಿಗೆ ನೆಗಡಿಯಾದರೆ ಹುಡುಗರು ಸೀನಬೇಕಾಗುತ್ತದೆ. ಆದರೂ ಹುಡುಗರಿಗ್ಯಾರೂ ಪಾಪ ಅನ್ನಲ್ಲ. ಪ್ರೀತಿಸಿದವರು ಹ್ಯಾಪಿಯಾಗಿದ್ರೆ ಮಾತ್ರ ನಮ್ಮ ಬಿಪಿ ಕಂಟ್ರೋಲಲ್ಲಿರುತ್ತದೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೯೯)  ಏಕಾಂತದಲ್ಲಿ ಮನಸ್ಸು ತತ್ವಜ್ಞಾನಿಯಂತೆ ಯೋಚಿಸುತ್ತದೆ. ದೇವರಿಗೆ ಅನ್ನದ ನೈವೇದ್ಯಗಿಂತ ಆತ್ಮದ ನೈವೇದ್ಯ ಹೆಚ್ಚು ಇಷ್ಟವಾಗುತ್ತದೆ

101 ಸಂಪೂರ್ಣ ಸತ್ಯಗಳು....!! - Life Truths in Kannada

೧೦೦) ಇಷ್ಟವಿಲ್ಲದ ಮದುವೆಯ ನಂತರ ಅವಳು ಬಂಗಾರದ ಪಂಜರದಲ್ಲಿರುವ ಪಕ್ಷಿಯಾಗುತ್ತಾಳೆ. ಮದುವೆಯ ನಂತರ ಹುಡುಗಿಯರು 80% ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಅದೇ ರೀತಿ ಹುಡುಗರು ಸಹ ಮದುವೆಯಾದ ನಂತರ 20% ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ.

101 ಸಂಪೂರ್ಣ ಸತ್ಯಗಳು....!! - Life Truths in Kannada

೧೦೧) ಹುಡುಗರಿಗೆ ಕುಡಿಬೇಡ ಅಂತಾ ಹೇಳೋದು. ಹುಡ್ಗಿರಿಗೆ ಕನ್ನಡಿ ಮುಂದೆ ನಿಂತ್ಕೊಬೇಡ ಅಂತಾ ಹೇಳೋದು ಎರಡು ಒಂದೇ..!!

101 ಸಂಪೂರ್ಣ ಸತ್ಯಗಳು....!! - Life Truths in Kannada

Note: This article is written for commercial and entertainment purpose only. Please don’t take it seriously. Read this on your own responsibility.

All images used in this article are for illustrative purposes only

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books