ರೀಚ್ ಡ್ಯಾಡ ಪೂವರ್ ಡ್ಯಾಡ – Rich Dad Poor Dad Book Summary in Kannada – Robert Kiyosaki Book in Kannada

You are currently viewing ರೀಚ್ ಡ್ಯಾಡ ಪೂವರ್ ಡ್ಯಾಡ – Rich Dad Poor Dad Book Summary in Kannada – Robert Kiyosaki Book in Kannada

“ರೀಚ್ ಡ್ಯಾಡ್ ಪೂವರ್ ಡ್ಯಾಡ್” ನನ್ನ ಫೇವರೆಟ ಪುಸ್ತಕಗಳಲ್ಲಿ ಒಂದಾಗಿದೆ. ಹಣದ ಬಗ್ಗೆ ನನ್ನ ಮೈಂಡಸೆಟನ್ನು ಬದಲಿಸಿದ ಪುಸ್ತಕವಿದು. ಯಾರು ಬೇಕಾದರೂ ಶ್ರೀಮಂತರಾಗಬಹುದು? ಹೇಗೆ ಶ್ರೀಮಂತರಾಗಬಹುದು? ಎಂಬುದನ್ನು ಕಲಿಸಿದ ಪುಸ್ತಕವಿದು. ನೀವು ರಿಚ್ ಆಗಬೇಕೆಂದರೆ ಮೊದಲು ನೀವು ರಿಚ್ ಮೈಂಡಸೆಟನ್ನು ಬೆಳೆಸಿಕೊಳ್ಳಬೇಕು. ತಮ್ಮ ರಾಂಗ ಥಾಟ್ಸ ಹಾಗೂ ಆ್ಯಕ್ಷನ್ಸಗಳಿಂದಾಗಿ ಬಹಳಷ್ಟು ಜನ ಬಡವರಾಗಿ ಉಳಿಯುತ್ತಾರೆ. ಹೆಲ್ಥಗಾಗಿ ಫಿಜಿಕಲ ಎಕ್ಸರಸೈಜ ಎಷ್ಟು ಮುಖ್ಯವೋ ವೆಲ್ಥಗಾಗಿ ಮೆಂಟಲ ಎಕ್ಸರಸೈಜ ಅಷ್ಟೇ ಮುಖ್ಯವಾಗಿದೆ. ಶ್ರೀಮಂತರು ತಮ್ಮ ಮಕ್ಕಳಿಗೆ ಹಣದ ಬಗ್ಗೆ ಕಲಿಸುತ್ತಾರೆ, ಆದರೆ ಬಡವರು ಮತ್ತು ಮಿಡಲ್ ಕ್ಲಾಸ್ ಜನ ತಮ್ಮ ಮಕ್ಕಳಿಗೆ ಹಣದ ಬಗ್ಗೆ ಏನನ್ನೂ ಸಹ ಕಲಿಸುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ಸಹ ಹಣದ ಬಗ್ಗೆಯಾಗಲಿ ಅಥವಾ ಫೈನಾನ್ಸಿಯಲ್ ಸ್ಕೀಲ್ಸಗಳ ಬಗ್ಗೆಯಾಗಲಿ ಏನನ್ನೂ ಕಲಿಸುವುದಿಲ್ಲ. ಸೋ ಮೈಂಡಸೆಟನಿಂದಾಗಿ ಬಡವರು ಬಡವರಾಗಿ ಉಳಿಯುತ್ತಾರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ.

ಬಹಳಷ್ಟು ಜನರಿಗೆ ಹಣದ ಬಗ್ಗೆ ಒಂದು ತಪ್ಪು ಪರಿಕಲ್ಪನೆಯಿದೆ‌. ಅದೆನೇಂದರೆ ಹಣ ಕೆಟ್ಟದಾಗಿದೆ, ಹಣ ಗಳಿಸಿದರೆ ರೋಗಗಳು ಬರುತ್ತವೆ, ಹಣದಿಂದ ಮನುಷ್ಯ ಹಾಳಾಗುತ್ತಾನೆ ಇತ್ಯಾದಿ. ‌ಇವೆಲ್ಲ ಹಣ ಗಳಿಸಲಾಗದ ಆಲಸಿಗಳು ಹಬ್ಬಿಸಿದ ರೂಮರಗಳಾಗಿವೆ. ಹಣದ ಬಗ್ಗೆ ಪ್ರೀತಿ ಇಟ್ಟುಕೊಳ್ಳುವುದು ಕೆಟ್ಟದಲ್ಲ, ನಿಮ್ಮ ಬಳಿ ಹಣವಿಲ್ಲದಿರುವುದು ಎಲ್ಲ ಕೆಟ್ಟ ಸಂಗತಿಗಳಿಗೆ ಮೂಲವಾಗಿದೆ. ಸುಖ, ಸಂತೋಷದೊಂದಿಗೆ ಸಕ್ಸೆಸಫುಲ್ಲಾಗಿ ಬದುಕಲು ದುಡ್ಡು ಬೇಕೆ ಬೇಕು. ದುಡ್ಡಿದ್ರೇನೆ ದುನಿಯಾ, ಇಲ್ಲದಿದ್ದರೆ ಯಾವ ನಾಯಿನೂ ಸಹ ನಿಮಗೆ ಕೇರ್ ಮಾಡಲ್ಲ, ನಿಮಗೆ ಗರ್ಲಫ್ರೆಂಡ್ ಸಿಗಲ್ಲ, ನಿಮ್ಮ ಮನೆಯವರೇ ನಿಮಗೆ ಗೌರವ ಕೊಡಲ್ಲ. ಸೋ ದುಡ್ಡು ಮಾಡುವುದು‌ ಬಹಳಷ್ಟು ಮುಖ್ಯವಾಗಿದೆ‌. ನಿಮಗೆ‌ ನಿಮ್ಮ ಜೀವನದಲ್ಲಿ ಶ್ರೀಮಂತರಾಗಬೇಕು ಎಂಬಾಸೆಯಿದ್ದರೆ ನೀವು ಒಂದ್ಸಲ ರಾಬರ್ಟ್ ಕಿಯೋಸಾಕಿ ಅವರು ಬರೆದ “ರಿಚ್ ಡ್ಯಾಡ್ ಪೂವರ್ ಡ್ಯಾಡ್” ‌ಬುಕ್ಕನ್ನು ಮಿಸ್ ಮಾಡದೇ ಓದಲೇಬೇಕು. ಕೆಳಗೆ ಈ ಬುಕ್ಕಿನ ಕನ್ನಡ ವರ್ಷನ್ ಲಿಂಕ್ ಇದೆ, ಬುಕ್ಕನ್ನು ಖರೀದಿಸಿ ಓದಿ. ಒಂದು ವೇಳೆ ನಿಮ್ಮತ್ರ ಅಷ್ಟೊಂದು ‌ಟೈಮ‌ ಇರದಿದ್ದರೆ ಈ ಅಂಕಣವನ್ನು ಕೊನೆ ತನಕ ಗಮನವಿಟ್ಟು ಓದಿ. ರಿಚ್ ಡ್ಯಾಡ್ ಪೂವರ್ ಡ್ಯಾಡ್ ಬುಕನಿಂದ ನಾನು ಕಲಿತ ಕೆಲವೊಂದಿಷ್ಟು ಮನಿ ಲೆಸನಗಳು ಇಂತಿವೆ ;

Rich Dad Poor Dad Book Link – Click Here

Rich Dad Poor Dad Book in Kannada

Money Lesson – 1 : ಶ್ರೀಮಂತರು ದುಡ್ಡಿಗಾಗಿ ಕೆಲಸ ಮಾಡುವುದಿಲ್ಲ. Rich People Don’t work for Money

ಬಡವರು ಮತ್ತು ಮಿಡಲ್ ಕ್ಲಾಸ‌ ಜನ ದುಡ್ಡಿಗಾಗಿ ದುಡಿಯುತ್ತಾರೆ. ಆದರೆ ‌ಶ್ರೀಮಂತರು ದುಡ್ಡನ್ನು ‌ದುಡಿಸಿಕೊಳ್ಳುತ್ತಾರೆ. ಸೋ ನಿಮಗೆ ಶ್ರೀಮಂತರಾಗಬೇಕು ಎಂಬಾಸೆಯಿದ್ದರೆ ಮೊದಲು ನೀವು “ಹಣವನ್ನು ಹೇಗೆ ಗಳಿಸುವುದು?” ಎಂಬುದನ್ನು ‌ಕಲಿಯಲೇಬೇಕು. ನಿಮಗೆ ಏನಾದರೂ ‌ಒಂದು ಬೇಕಾದರೆ ಅದಕ್ಕಾಗಿ ನೀವು ತಕ್ಷಣವೇ ಕೆಲಸ ಮಾಡಲು ಪ್ರಾರಂಭಿಸಬೇಕು.

ಮೊದಲು ಹೇಗೆ ಹಣವನ್ನು ಗಳಿಸುವುದು ಎಂಬುದನ್ನು ಕಲಿಯಿರಿ. ಆನಂತರ ಕೆಲಸ ಮಾಡಿ. ನಿಮ್ಮ ಕೆಟ್ಟ ಪರಿಸ್ಥಿತಿಗೆ ಬೇರೆಯವರನ್ನು ಬ್ಲೇಮ ಮಾಡಬೇಡಿ. ನಿಮ್ಮ ಬಾಸನ್ನು ಇಲ್ಲವೇ ಜಾಬನ್ನು ಬ್ಲೇಮ ಮಾಡಬೇಡಿ. ಇದರಿಂದ ಕಲಿಯಿರಿ‌ ಹಾಗೂ ಬೇಗನೆ ವೈಜ್ಲಿ ಗ್ರೋ ಆಗಿ. ಬದುಕು ಬೆಸ್ಟ ಟೀಚರಾಗಿದೆ. ಅದು ನಿಮ್ಮನ್ನು ಬಲಿಷ್ಟರನ್ನಾಗಿಸಲು‌ ನಿಮ್ಮನ್ನು ಕಷ್ಟಗಳ ಕೂಪಕ್ಕೆ ತಳ್ಳುತ್ತದೆ. ಸೋ ಕಷ್ಟಗಳಿಂದ ಕಲಿಯಿರಿ.

ಬಹಳಷ್ಟು ಜನ ಬರೀ ದುಡ್ಡಿಗಾಗಿ ಕೆಲಸ ಮಾಡುತ್ತಾರೆ. ಅವರಿಗೆ ಎಷ್ಟೇ ಹೆಚ್ಚಿನ ಸಂಬಳ ಬಂದರೂ ಸಹ ಅವರು ಸಾಲದಲ್ಲೇ ಇರುತ್ತಾರೆ. ಹಣದ ಕೊರತೆಯನ್ನು ಎದುರಿಸುತ್ತಾರೆ. ಏಕೆಂದರೆ ಅವರು ಬರೀ ದುಡ್ಡಿಗಾಗಿ ಕೆಲಸ ಮಾಡುತ್ತಾರೆ. ದುಡ್ಡನ್ನು ಹೇಗೆ ದುಡಿಸುವುದು ಎಂಬುದನ್ನು ಅವರು ಅವರ ಶಾಲೆಯಲ್ಲಿ ಕಲಿತಿಲ್ಲ. ಹೀಗಾಗಿ ಜನರಲ್ಲಿನ ಭಯ ಅವರ ಪ್ಯಾಷನನ್ನು ಫಾಲೋ ಮಾಡಲು ಬಿಡಲ್ಲ. ಅವರು ಆರ್ಡಿನರಿ ಅವಶ್ಯಕತೆಗಳಿಗಾಗಿ ಬರೀ ಹಣಕ್ಕಾಗಿ ದುಡಿಯುತ್ತಾರೆ. ಹಣಕ್ಕೆ ಗುಲಾಮರಾಗುತ್ತಾರೆ. ಆದರೆ ಶ್ರೀಮಂತರು ಹಣವನ್ನು ತಮ್ಮ ಗುಲಾಮನನ್ನಾಗಿ ಮಾಡಿಕೊಳ್ಳುತ್ತಾರೆ.

ಜನರ ಬದುಕು ಯಾವಾಗಲೂ ಎರಡು ಬಲಿಷ್ಟ ಎಮೋಷನಗಳಿಂದ‌ ನಿಯಂತ್ರಿಸಲ್ಪಡುತ್ತದೆ. ಅವುಗಳಲ್ಲಿ ಒಂದು ಭಯ, ಇನ್ನೊಂದು ದುರಾಸೆ. Fear and Greed. ಈ‌ ಭಯ ಮತ್ತು ‌ದುರಾಸೆಗಳಿಂದಾಗಿ ಬಹಳಷ್ಟು ‌ಜನ ಲೈಫಿನ ಟ್ರ್ಯಾಪಿನಲ್ಲಿ ಸಿಲುಕಿ ಸ್ಟ್ರಕ್ ಆಗುತ್ತಾರೆ. ಜಾಬ್ ಸೇಫ್ಟಿ ಹಾಗೂ ಹಣದ ಕೊರತೆಯ ಭಯದಿಂದಾಗಿ ಬಹಳಷ್ಟು ‌ಜನ ಲೈಫಿನ‌ ಟ್ರ್ಯಾಪಿನೊಳಗೆ ಸಿಲುಕುತ್ತಾರೆ ಮತ್ತು ಜೀವನಪೂರ್ತಿ ಬಡವರಾಗಿ ಉಳಿಯುತ್ತಾರೆ. ಜೀವನಪೂರ್ತಿ ಹಣಕ್ಕಾಗಿ ಕತ್ತೆ ತರ ದುಡಿಯುತ್ತಾರೆ. ಜಾಬ್ ಎಂಬ Rat Raceನಲ್ಲಿ ಓಡುತ್ತಲೇ ಇರುತ್ತಾರೆ. ನೀವು ಶ್ರೀಮಂತರಾಗಬೇಕೆಂದರೆ‌ ಲೈಫಿನ ಈ ಟ್ರ್ಯಾಪನ್ನು ಅವೈಡ ಮಾಡಲೇಬೇಕು.

Fear of Lack of Money motivates you to do Hard Work. When you get money, then you work for money only in greed. ಅಂದರೆ‌ ಹಣದ ಕೊರತೆಯ ಭಯ ನಿಮಗೆ ಹಾರ್ಡವರ್ಕ ಮಾಡಲು ಮೋಟಿವೇಟ ಮಾಡುತ್ತದೆ. ಆನಂತರ ನಿಮ್ಮ ಬಳಿ ಹಣ ಬಂದಾಗ ದುರಾಸೆ ನಿಮ್ಮನ್ನು ಬರೀ ಹಣಕ್ಕಾಗಿ ಕೆಲಸ ಮಾಡುವಂತೆ ನಿಮ್ಮನ್ನು ಕಟ್ಟಿ ಹಾಕುತ್ತದೆ. ಇದೇ ಬದುಕಿನ ಅತೀ ದೊಡ್ಡ ಟ್ರ್ಯಾಪ್ ಆಗಿದೆ. ಯಾರು ಈ ಭಯ ಹಾಗೂ ದುರಾಸೆಗಳ ಟ್ರ್ಯಾಪನ್ನು ಭೇದಿಸಿ ರಿಸ್ಕ ತೆಗೆದುಕೊಳ್ಳುತ್ತಾರೋ‌ ಅವರು ಮುಂದೆ ಶ್ರೀಮಂತರಾಗುತ್ತಾರೆ, ಮಿಕ್ಕವರು ಜಾಬ್ ಸೇಫ್ಟಿ ನೋಡಿ ಜಾಬ್ ಹಿಡಿದು ಆರ್ಡಿನರಿ ಲೈಫ ಲೀಡ ಮಾಡ್ತಾರೆ. “ನನಗೆ ಹಣದಲ್ಲಿ ಆಸಕ್ತಿಯಿಲ್ಲ, ನನಗೆ ಹಣದ ಅವಶ್ಯಕತೆಯಿಲ್ಲ…” ಎಂದೆನುತ್ತಾ ಹಣಕ್ಕಾಗಿ ದಿನಾ 8 ಗಂಟೆ ಕತ್ತೆ ತರ ದುಡಿಯುತ್ತಾರೆ. ಜೀವನಪೂರ್ತಿ ಹಣಕ್ಕಾಗಿ ದುಡಿಯುತ್ತಾರೆ, ಹಣಕ್ಕಾಗಿಯೇ ಸಾಯುತ್ತಾರೆ.

ಶಾಲಾ ಕಾಲೇಜುಗಳು ನಿಮಗೆ ಮನಿ ಮ್ಯಾನೇಜಮೆಂಟ ಬಗ್ಗೆ ಯಾವತ್ತೂ ಏನನ್ನೂ ಕಲಿಸಲ್ಲ. ಏಕೆಂದರೆ ಅಲ್ಲಿರುವ ಟೀಚರಗಳಿಗೇನೆ ಮನಿ ಮ್ಯಾನೇಜಮೆಂಟ ಬಗ್ಗೆ ಏನ‌‌ ಮಣ್ಣೂ ಗೊತ್ತಿಲ್ಲ. ಕಾಲೇಜ ಬಿಟ್ಟ ಮೇಲೆನೆ ನಿಜವಾದ ಕಲಿಕೆ ಪ್ರಾರಂಭವಾಗುವುದು. ಆದರೆ ಬಹಳಷ್ಟು ಜನ ಅದನ್ನ ಅರ್ಥಮಾಡಿಕೊಳ್ಳಲ್ಲ. ಶಾಲೆಗಳು ನಿಮಗೆ ಬರೀ ಹಣಕ್ಕಾಗಿ ದುಡಿಯುವುದನ್ನು ಕಲಿಸುತ್ತವೆ, ಜಾಬ್ ಮಾಡಲು ನಿಮ್ಮನ್ನು ಟ್ರೇನ ಮಾಡುತ್ತವೆ ಅಷ್ಟೇ. ಆದರೆ ಬದುಕು‌ ನಿಮಗೆ ಹಣ ಮಾಡುವುದನ್ನು ಕಲಿಸುತ್ತದೆ. ಸೋ ನಿಮ್ಮ ಎಮೋಷನಗಳಾದ Fear & Greed ಅಂದರೆ ಭಯ ಮತ್ತು ದುರಾಸೆಗಳನ್ನು ಕಂಟ್ರೋಲ ಮಾಡಿ. ಬರೀ ದುಡ್ಡಿಗಾಗಿ ದುಡಿಯುವ ಬದಲು, ದುಡ್ಡನ್ನು ದುಡಿಸುವುದನ್ನು‌ ಕಲಿಯಿರಿ‌. ಅಂದಾಗಲೇ ನೀವು ಶ್ರೀಮಂತರಾಗಬಹುದು.

Money Lesson -2 : ಫೈನಾನ್ಸಿಯಲ್ ಲಿಟರಸಿಯ ಮಹತ್ವ – Importance of Financial Literacy

ಬಹಳಷ್ಟು ‌ಜನರಿಗೆ ಹೆಚ್ಚಿಗೆ ಹಣ ಹೇಗೆ ಸಂಪಾದಿಸುವುದು ಎಂಬುದು ಗೊತ್ತಿಲ್ಲ, ಗಳಿಸಿರುವ ಹಣವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದು ಗೊತ್ತಿಲ್ಲ. ಹೀಗಾಗಿ ಫೈನಾನ್ಸಿಯಲ್ ಲಿಟರಸಿ ಬಹಳಷ್ಟು ಅವಶ್ಯಕವಾಗಿದೆ.

ನೀವು ಎಷ್ಟು ಹಣವನ್ನು ಗಳಿಸುತ್ತೀರಿ ಎಂಬುದಕ್ಕಿಂತ ಕೊನೆಗೆ ಎಷ್ಟು ಹಣವನ್ನು ನಿಮ್ಮ ಬಳಿ‌ ಉಳಿಸಿಕೊಳ್ಳುತ್ತೀರಿ ಎಂಬುದು ಮುಖ್ಯವಾಗುತ್ತದೆ. ಅದಕ್ಕಾಗಿ ಹೊಸ ವಿಷಯಗಳನ್ನು ಕಲಿಯಲು ಓಪನ ಮೈಂಡೆಡ ಆಗಿರಿ. ಫೈನಾನ್ಸಿಯಲ್ ಎಜುಕೇಷನನ್ನು ಇಗ್ನೋರ ಮಾಡಬೇಡಿ. ಹಣದಿಂದ ನಿಮ್ಮ ಸಮಸ್ಯೆಗಳು ಸಾಲ್ವಾಗಲ್ಲ, ನಿಮ್ಮ ಇಂಟಲಿಜೆನ್ಸನಿಂದ ಸಮಸ್ಯೆಗಳು ಸಾಲ್ವಾಗುತ್ತವೆ, ನಿಮ್ಮ ಇಂಟಲಿಜೆನ್ಸನಿಂದ ಹಣ ಸಂಪಾದನೆಯಾಗುತ್ತದೆ‌.

ನಿಮಗೆ ಫೈನಾನ್ಸಿಯಲ್ ಇಂಟಲಿಜೆನ್ಸ ಇಲ್ಲದಿದ್ದರೆ ನೀವು ಎಷ್ಟೇ ಹಣ ಗಳಿಸಿದರೂ ಸಹ ಬಡವರಾಗೇ ಉಳಿಯುತ್ತೀರಿ. ನಿಮ್ಮ ಬಳಿ ಹಣ ಉಳಿಯುವುದಿಲ್ಲ. ಉದಾಹರಣೆಗೆ ; ಸಡನ್ನಾಗಿ ಲಾಟರಿ ಸಿಕ್ಕಿ ರಾತ್ರೋರಾತ್ರಿ ಶ್ರೀಮಂತರಾದ ಜನ ಆರು ತಿಂಗಳಲ್ಲಿ ಮತ್ತೆ ಬಡವರಾಗಿ ಬೀದಿಗೆ ಬೀಳುತ್ತಾರೆ. 24ನೇ ವಯಸ್ಸಿಗೆ ಮಿಲೆನಿಯರ ಆಗಿ ಮೆರೆದ ಅಥ್ಲೀಟ್ 29ನೇ ವಯಸ್ಸಿಗೆ ಬೇರೆಯವರ ಕಾರ ಕ್ಲೀನ ಮಾಡುವ ಕೆಲಸ ಮಾಡ್ತಾನೆ. ಬಹಳಷ್ಟು ಬಡ ಜನ ಶ್ರೀಮಂತರಾಗಿ ಮತ್ತೆ ಬಡವರಾಗುತ್ತಾರೆ. ಸೋ ಫೈನಾನ್ಸಿಯಲ್ ಇಂಟಲಿಜೆನ್ಸ ತುಂಬಾನೇ ಮುಖ್ಯವಾಗಿದೆ‌. ನೀವು ರಿಚ್ ಆಗಬೇಕೆಂದರೆ, ರಿಚ್ ಆದ ನಂತರ ರಿಚ್ ಆಗಿ ಉಳಿಯಬೇಕೆಂದರೆ, ನಂತರ ರಿಚ್ಚರ್ ಆಗಬೇಕೆಂದರೆ ನಿಮಗೆ ಫೈನಾನ್ಸಿಯಲ್ ಲಿಟರಸಿ ಬೇಕೆಬೇಕು.

ನೀವು ಶ್ರೀಮಂತರಾಗಬೇಕೆಂದರೆ ಇನ್ನೊಂದು ವಿಷಯವನ್ನು ತಿಳಿದುಕೊಳ್ಳಲೇಬೇಕು, ಅದೇನೆಂದರೆ ಅಸೆಟ್ ಹಾಗೂ ಲೈಯಾಬಿಲಿಟಿಗಳ ನಡುವಿನ ಅಂತರ. ಯಾವುದು ನಿಮ್ಮ ಜೇಬಿಗೆ ಹಣವನ್ನು ತಂದಾಕುತ್ತದೆಯೋ ಅದು ನಿಮಗೆ ಅಸೆಟ್ಟಾಗುತ್ತದೆ. ಯಾವುದು ನಿಮ್ಮ ಜೇಬಿನಿಂದ ಹಣವನ್ನು ತೆಗೆದುಕೊಳ್ಳುತ್ತದೆಯೋ ಅದು ನಿಮಗೆ ಲೈಯಾಬಿಲಿಟಿಯಾಗುತ್ತದೆ. ಉದಾಹರಣೆಗೆ : ನಿಮ್ಮ ಐಷಾರಾಮಿ ಮನೆ, ಐಷಾರಾಮಿ‌ ಕಾರು, ಇನ್ನಿತರೇ ಲಗ್ಜುರಿ ವಸ್ತುಗಳೆಲ್ಲ ನಿಮಗೆ ಲೈಯಾಬಿಲಿಟಿಗಳಾಗಿವೆ. ಏಕೆಂದರೆ ಇವು ಪದೇಪದೇ ನಿಮ್ಮ ಜೇಬಿನಿಂದ‌ ಹಣವನ್ನು ಕಿತ್ತುಕೊಳ್ಳುತ್ತವೆ‌. ಅದೇ ಮನೆಯನ್ನು ನೀವು ಒಂದು ವೇಳೆ ಬಾಡಿಗೆಗೆ ಬಿಟ್ಟಿದ್ದರೆ ಅದರಿಂದ‌ ನಿಮ್ಮ‌ ಜೇಬಿಗೆ ಪ್ರತಿ‌ ತಿಂಗಳು ಹಣ ಬರುತ್ತದೆ. ಆಗ ನಿಮ್ಮ‌ ಮನೆ ನಿಮಗೆ ಅಸೆಟ್ಟಾಗುತ್ತದೆ, ಹಣ ಗಳಿಸದಿದ್ದರೆ ಅದು ನಿಮಗೆ ಲೈಯಾಬಿಲಿಟಿಯಾಗುತ್ತದೆ.

ಜನರಿಗೆ ದುಡ್ಡಿಗಾಗಿ ಕತ್ತೆ ತರ ದುಡಿಯುವುದು ಗೊತ್ತು. ಆದರೆ ದುಡ್ಡನ್ನು ದುಡಿಸುವುದು ಗೊತ್ತಿಲ್ಲ. ಶ್ರೀಮಂತರು ಹೆಚ್ಚೆಚ್ಚು ಅಸೆಟಗಳನ್ನು ಅಕ್ವೈರ ಮಾಡುತ್ತಾರೆ, ಹೀಗಾಗಿ ಅವರು ಮತ್ತಷ್ಟು ಶ್ರೀಮಂತರಾಗುತ್ತಾರೆ. ಆದರೆ ಬಡವರು ಹಾಗೂ ಮಿಡಲ ಕ್ಲಾಸನವರು ಲೈಯಾಬಿಲಿಟಿಗಳನ್ನು ಮಾಡಿಕೊಳ್ಳುತ್ತಾರೆ, ಅಸೆಟ ಎಂದುಕೊಂಡು ಲೈಯಾಬಿಲಿಟಿಗಳನ್ನು ಖರೀದಿಸಿ ಮತ್ತಷ್ಟು ಬಡವರಾಗುತ್ತಾರೆ. ಅವರಿಗೆ ಅಸೆಟ ಹಾಗೂ ಲೈಯಾಬಿಲಿಟಿಗಳ ನಡುವಿನ‌ ಅಂತರ ಗೊತ್ತೆ ಇಲ್ಲ. ಹೀಗಾಗಿ ಅವರ ಇನಕಂ ಹೆಚ್ಚಿದಂತೆ ಅವರ ಎಕ್ಸಪೆನ್ಸಗಳು ಕೂಡ ಹೆಚ್ಚಾಗುತ್ತವೆ. ಅವರಿಗೆ ಮನಿಯನ್ನು ಮ್ಯಾನೇಜ ಮಾಡಲು ಬರುವುದಿಲ್ಲ. ಅವರು ಎಷ್ಟೇ ಹೈಯ್ಲಿ ಎಜುಕೇಟೆಡಾಗಿದ್ದರೂ, ಪ್ರೋಫೇಷನಲಿ ಸಕ್ಸೆಸಫುಲ್ಲಾಗಿದ್ದರೂ ಫೈನಾನ್ಸಿಯಲಿ ಇಲಲಿಟರೆಟಾಗಿರುತ್ತಾರೆ, ಫೈನಾನ್ಸಿಯಲ್ ನಾಲೇಜ್ಡನಲ್ಲಿ‌ ಸ್ಟೂಪಿಡಾಗಿರುತ್ತಾರೆ. ಸೋ ಅಸೆಟ ಎಂದುಕೊಂಡು ಲೈಯಾಬಿಲಿಟಿಗಳನ್ನು ಖರೀದಿಸಿ ಆರ್ಡಿನರಿಯಾಗಿ ಉಳಿಯುತ್ತಾರೆ.

ಫೈನಲಿ ನೀವು ಶ್ರೀಮಂತರಾಗಬೇಕೆಂದರೆ “More Income, more Assets & Less Expenses, less liabilities” ಫಾರ್ಮುಲಾವನ್ನು ಫಾಲೋ ಮಾಡಿ. ಲೈಯಾಬಿಲಿಟಿಗಳನ್ನು ಕಡಿಮೆ ಮಾಡಿ. ಹೆಚ್ಚೆಚ್ಚು ಅಸೆಟಗಳನ್ನು ಅಕ್ವೈರ ಮಾಡುವುದರ ಕಡೆಗೆ ಹೆಚ್ಚು ಫೋಕಸ್ ಮಾಡಿ.

Money Lesson 3 : ನೀವು ನಿಮ್ಮ ಬಿಜನೆಸ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳಿ : Mind Your Own Business

ಬಡವರು ತಮ್ಮ ಇನಕಮ ಸ್ಟೇಟಮೆಂಟ ಮೇಲೆ ಫೋಕಸ ಮಾಡುತ್ತಿರುವಾಗ ಶ್ರೀಮಂತರು ತಮ್ಮ ಅಸೆಟಗಳ ಮೇಲೆ ಫೋಕಸ ಮಾಡುತ್ತಾರೆ. ಬಡವರು ಹಾಗೂ ಮಿಡಲ ಕ್ಲಾಸ ಜನ ಕಂಪನಿಗೋಸ್ಕರ, ಓನರಗೋಸ್ಕರ, ಟ್ಯಾಕ್ಸ ತುಂಬುವ ಮೂಲಕ ಗವರ್ನಮೆಂಟಗೋಸ್ಕರ ಇಲ್ಲವೇ EMI ತುಂಬಿ ಬ್ಯಾಂಕಗೋಸ್ಕರ ಕೆಲಸ ಮಾಡುತ್ತಾರೆ ಅಂದರೆ ಬರೀ ಬೇರೆಯವರಿಗಾಗಿ ಕೆಲಸ ಮಾಡುತ್ತಾರೆ. ಅವರು ಬೇರೆಯವರಿಗಾಗಿ ಕೆಲಸ ಮಾಡುವುದರಿಂದಲೇ ಫೈನಾನ್ಸಿಯಲಿ‌ ಸ್ಟ್ರಗಲ ಮಾಡುತ್ತಾರೆ. ಆದರೆ ಶ್ರೀಮಂತರು ತಮಗಾಗಿ ಕೆಲಸ ಮಾಡುತ್ತಾರೆ. ಸೋ ನೀವು ಶ್ರೀಮಂತರಾಗಬೇಕೆಂದರೆ ನೀವು ನಿಮ್ಮ ಬಿಜನೆಸ ಮೇಲೆ ಮಾತ್ರ ಫೋಕಸ ಮಾಡಿ, ಮಿಕ್ಕವರು ಏನು ಮಾಡುತ್ತಾರೆ ಎಂಬುದರ ಬಗ್ಗೆ ತಲೆ‌ ಕೆಡಿಸಿಕೊಳ್ಳಬೇಡಿ.

ಪೂವರ ಹಾಗೂ ಮಿಡಲ ಕ್ಲಾಸ್ ಜನ ಸ್ಯಾಲರಿ ಬರುತ್ತಿದ್ದಂತೆಯೇ EMI ಮೇಲೆ ಲಗ್ಜುರಿಗಳನ್ನು ಖರೀದಿಸುತ್ತಾರೆ. ಆದರೆ ರಿಚ್ ಜನ ಫೈನಾನ್ಸಿಯಲ್ ಫ್ರೀಡಂನ್ನು ಅಚೀವ ಮಾಡಿದ ನಂತರ ಲಗ್ಜುರಿಗಳನ್ನ ಖರೀದಿಸುತ್ತಾರೆ. ಮೊದಲವರು ರಿಯಲ ಅಸೆಟ್ಟಗಳನ್ನು ಮಾಡುವುದರ ಕಡೆಗಷ್ಟೇ ಗಮನ‌‌ ಹರಿಸುತ್ತಾರೆ.

ಮಿಡಲ ಕ್ಲಾಸ್ ತಾವು ರಿಚ್ ಎಂದು ತೋರಿಸಿಕೊಳ್ಳುವುದಕ್ಕಾಗಿ ದೊಡ್ಡ ಮನೆ, ಕಾರು ಹಾಗೂ ಅನಾವಶ್ಯಕ ಲಗ್ಜುರಿಗಳನ್ನು ಖರೀದಿಸುತ್ತಾರೆ. ಬಟ ಲೋನ ಹಾಗೂ EMIದಿಂದ ಮತ್ತಷ್ಟು ಬಡವರಾಗುತ್ತಾರೆ.

ಪೂವರ ಪೀಪಲ್ ತಮ್ಮ ಡೈರೆಕ್ಟ ಇನಕಮನಿಂದ ಲಗ್ಜುರಿಗಳನ್ನು ಖರೀದಿಸುತ್ತಾರೆ. ಬಟ ರೀಚ್ ಪೀಪಲ್‌ ತಮ್ಮ ಅಸೆಟಗಳಿಂದ ಜನರೇಟಾದ ಸೈಡ್ ಇನಕಮನಿಂದ ಲಗ್ಜುರಿಗಳನ್ನು ಖರೀದಿಸುತ್ತಾರೆಯೇ ಹೊರತು ಡೈರೆಕ್ಟ ಇನಕಮನಿಂದಲ್ಲ.

ಉದಾಹರಣೆಗೆ ; ನನ್ನ ಫ್ರೆಂಡ್ಸಗಳೆಲ್ಲ ಜಾಬ್ ಸಿಗುತ್ತಿದ್ದಂತೆಯೇ ನನ್ನ ಹೊಟ್ಟೆ ಉರಿಸಲು ಲೋನ ಮೇಲೆ ಕಾರು ಮನೆ ಇತ್ಯಾದಿಯೆಲ್ಲ ಖರೀದಿಸಿದರು. ಆದರೆ ನಾನು ನನಗೆ ಸಿಗುತ್ತಿದ್ದ ಎಲ್ಲ ಹಣವನ್ನು ನನ್ನ ಕಂಪನಿಯಲ್ಲಿ ಇನ್ವೇಸ್ಟ ಮಾಡಿದೆ. ಸ್ಟಾರ್ಟಪಗಳನ್ನ ಮಾಡಿದೆ. ಈಗ ನನ್ನ ಕಂಪನಿ ಹಾಗೂ ಸ್ಟಾರ್ಟಪಗಳು ನನ್ನ ರಿಯಲ್ ಅಸೆಟಗಳಾಗಿವೆ. ತೀರಾ ಇತ್ತೀಚಿಗೆ ನಾನು ಇವುಗಳಿಂದ ಬಂದ ಹಣದಿಂದ ಕಾರು, ಮನೆ ಖರೀದಿಸಿರುವೆ. ನಾನು ಯಾವುದೇ ಲೋನ ಮಾಡದೆ ಫುಲ್ ಪೇಮೆಂಟ್ ಮಾಡಿ ಇವುಗಳನ್ನು ಖರೀದಿಸಿರುವೆ‌. ಆದರೆ ನನ್ನ ಫ್ರೆಂಡ್ಸ ಇನ್ನೂ ತಮ್ಮ ಕಾರು ಹಾಗೂ ಮನೆಯ EMI ಕಟ್ಟುತ್ತಿದ್ದಾರೆ. ಮುಂದಿನ 10 ವರ್ಷ ಕಳೆದರೂ ಕಟ್ಟುತ್ತಲೇ ಇರುತ್ತಾರೆ.‌ ಅವರ ಈಡೀ ಜೀವನ ಲೋನ್ ಹಾಗೂ EMIಗಳಿಂದ ನರಕವಾಗುವುದಂತು ನಿಜ. ಸೋ ನಿಮಗೆ ನಿಜವಾಗಿಯೂ ರೀಚ್ ಆಗುವ ಆಸೆಯಿದ್ದರೆ ನೀವು ಬರೀ ನಿಮ್ಮ ಬಿಜನೆಸ ಮೇಲೆ ಫೋಕಸ ಮಾಡಿ. ಬೇರೆಯವರು ಸಾಲ ಮಾಡಿ ಏನಾದರೂ ಖರೀದಿಸಲಿ. ನೀವು ಮಾತ್ರ ರಿಯಲ್ ಅಸೆಟಗಳನ್ನು ಮಾಡುವುದರ ಕಡೆಗೆ ಮಾತ್ರ ಗಮನ ಹರಿಸಿ‌. ಉದಾಹರಣೆಗೆ : 1) Business, 2) Stocks, 3) Bonds, 4) Income Generating Real Estate, 5) Royalties from Intellectual Property such as Music, Scripts, Patents etc.

ಬೇರೆಯವರು ಶೋಕಿ ಮಾಡಲು ಲೋನ ಮಾಡಿ ಮತ್ತಷ್ಟು ಬಡವರಾಗುತ್ತಿರುವಾಗ ನೀವು ಸ್ವಲ್ಪ ತಾಳ್ಮೆಯಿಂದಿದ್ದು ರಿಯಲ ಅಸೆಟಗಳನ್ನು ಮಾಡಿ.

Money Lesson 4 : ಟ್ಯಾಕ್ಸನ‌ ಇತಿಹಾಸ ಹಾಗೂ ಕಾರ್ಪೋರೇಷನಿನ ಶಕ್ತಿ – The History of Taxes and Power of Corporations

ಬಡವರ ದೃಷ್ಟಿಯಲ್ಲಿ ಟ್ಯಾಕ್ಸ ಸಿಸ್ಟಮ ರಾಬಿನ ಹುಡ್ ಆಗಿದೆ. ಬಡವರು ಯಾವ ತರಹ ಯೋಚನೆ ಮಾಡುತ್ತಾರೆಂದರೆ ಸರ್ಕಾರ ಶ್ರೀಮಂತರಿಗೆ ಟ್ಯಾಕ್ಸ ಹಾಕಿ‌ ಅವರಿಂದ ಹಣವನ್ನು ಸುಲಿಗೆ ಮಾಡಿ ನಮಗೆ ಅಂದರೆ ಬಡವರಿಗೆ ಕೊಡುತ್ತದೆ ಅಂತಾ. ಆದರೆ ರಿಯಾಲಿಟಿಯಲ್ಲಿ ಹೀಗಾಗುವುದಿಲ್ಲ. ಹೆಚ್ಚಾಗಿ ಶ್ರೀಮಂತರು ಟ್ಯಾಕ್ಸ ಪೇ ಮಾಡುವುದಿಲ್ಲ. ಮಿಡಲ್ ಕ್ಲಾಸಿನ ಎಜುಕೆಟೆಟ ಎಂಪ್ಲಾಯರಗಳು ಹೆಚ್ಚಾಗಿ ಟ್ಯಾಕ್ಸ ಕಟ್ಟುತ್ತಾರೆ. ಸೋ‌ ಫೈನಲಾಗಿ ಟ್ಯಾಕ್ಸ ಬಡ ಹಾಗೂ ಮಿಡಲ ಕ್ಲಾಸ್ ಜನರಿಗೇನೆ ಬರ್ಡನ ಆಗಿದೆ. ಸರ್ಕಾರ ಟ್ಯಾಕ್ಸ ನೆಪದಲ್ಲಿ ಇವರನ್ನೇ ಸುಲಿಗೆ ಮಾಡುತ್ತದೆ.

ರೀಚ್ ಪೀಪಲ್ ಟ್ಯಾಕ್ಸ ಕದಿಯುತ್ತಾರೆ ಅಂತಲ್ಲ. ಅವರು ತಮ್ಮ ಬಿಜನೆಸ ಹಾಗೂ ಕಾರ್ಪೋರೇಷನಗಳಿಂದ ಅಂದರೆ ಕಂಪನಿಗಳ ಮೂಲಕ ಸ್ಮಾರ್ಟಾಗಿ ಈ ಟ್ಯಾಕ್ಸದಿಂದ ಎಸ್ಕೇಪ ಆಗುತ್ತಾರೆ. ನಮ್ಮ ಸಿಸ್ಟಮನಲ್ಲಿರುವ ಲೂಪಹೋಲಗಳನ್ನು ಹುಡುಕಿ ಅದರ ಮೂಲಕ ಅವರು ಲೀಗಲಾಗಿ ಟ್ಯಾಕ್ಸಗಳಿಂದ ಪಾರಾಗುತ್ತಾರೆ. ಅವರು ಮೊದಲು ಟ್ಯಾಕ್ಸನ ಕಾನೂನುಗಳನ್ನು ಸ್ಟಡಿ ಮಾಡುತ್ತಾರೆ. ಅವುಗಳ ಮೂಲಕ ತಮ್ಮ ಕಂಪನಿಗಳನ್ನು ಗ್ರೋ ಮಾಡುತ್ತಾರೆ‌. ನಂತರ ಕಂಪನಿಗಳ‌ ಮೂಲಕ ಅವರ ಟ್ಯಾಕ್ಸನ್ನು ಸೇವ ಮಾಡುತ್ತಾರೆ. ಇದು ನಿಮಗೆ ಅಷ್ಟು ಸುಲಭವಾಗಿ ಅರ್ಥವಾಗಲ್ಲ. ಅರ್ಥವಾಗಿದ್ದರೆ ನೀವು ಸಹ ಇಷ್ಟೊತ್ತಿಗೆ ಜಾಬ್ ಬಿಟ್ಟು ಬಿಜನೆಸಮ್ಯಾನಗಳಾಗುತ್ತಿದ್ರಿ.

ಸರ್ಕಾರ ನೌಕರರಿಗೆ ಸ್ಯಾಲರಿ ಸಿಕ್ಕ ನಂತರ ಮೊದಲು ಅವರಿಂದ ಟ್ಯಾಕ್ಸನ್ನು ವಸೂಲಿ ಮಾಡುತ್ತದೆ. ನಂತರ ಮಿಕ್ಕ ಹಣದಲ್ಲಿ ನೌಕರರು ತಮ್ಮ ಖರ್ಚುಗಳನ್ನು ನಿಭಾಯಿಸುತ್ತಾರೆ. ಆದರೆ ಮಾಲೀಕರ ವಿಷಯದಲ್ಲಿ ಅಂದರೆ ಕಂಪನಿಗಳ ವಿಷಯದಲ್ಲಿ ಹೀಗಾಗುವುದಿಲ್ಲ. ಸರ್ಕಾರ ಕಂಪನಿಗಳಿಗೆ ತಾವು ಗಳಿಸಿದ ಹಣದಿಂದ ಮೊದಲು ತಮ್ಮೆಲ್ಲ ಖರ್ಚುಗಳನ್ನು ನಿಭಾಯಿಸುವ ಅವಕಾಶ ಕೊಡುತ್ತದೆ. ಮಿಕ್ಕ ಹಣದಿಂದ ಟ್ಯಾಕ್ಸ ಕಲೆಕ್ಟ ಮಾಡುತ್ತದೆ. ಏಕೆಂದರೆ ಕಂಪನಿಗಳು ಬಹಳಷ್ಟು ಜನರಿಗೆ ಕೆಲಸ ಕೊಡುತ್ತವೆ. ಅದಕ್ಕಾಗಿ ಕಂಪನಿಗಳಿಗೆ ಈ ವಿಶೇಷ ಸವಲತ್ತಿದೆ. ಈ ವಿಶೇಷ ಸವಲತ್ತನ್ನೇ ಶ್ರೀಮಂತರು ಟ್ಯಾಕ್ಸ ಉಳಿಸಲು ಬಳಸಿಕೊಳ್ಳುತ್ತಾರೆ.

ಈ ವಿಷಯ ನಿಮಗೆ ಈಗಲೂ ಅರ್ಥವಾಗದಿದ್ದರೆ ಸಿಂಪಲಾಗಿ ಹೇಳ್ತನಿ ಡೊಂಟ ವರಿ. ನಿಮಗೆ ಸ್ಯಾಲರಿ ಬಂದಾಗ ನೀವು ಮೊದಲು ಟ್ಯಾಕ್ಸ ಕಟ್ಟಿ ಆನಂತರ ಮಿಕ್ಕಿದ ಹಣದಲ್ಲಿ ನಿಮ್ಮ ಖರ್ಚುವೆಚ್ಚಗಳನ್ನ ನಿಭಾಯಿಸುತ್ತೀರಾ. ಆದರೆ ಬಿಜನೆಸಮ್ಯಾನಗಳು, ಕಂಪನಿಯ ಮಾಲೀಕರು ಮೊದಲು ತಮ್ಮ ಖರ್ಚುವೆಚ್ಚಗಳೆಲ್ಲ ನಿಭಾಯಿಸಿ‌ ಆನಂತರ ಮಿಕ್ಕಿದ ಹಣದಲ್ಲಿ ಟ್ಯಾಕ್ಸ ಕಟ್ಟುತ್ತಾರೆ. ಅವರು ಕಂಪನಿಯ ಕೆಲಸ ಅಂತೇಳಿ ಯಾವುದೇ ಟ್ಯಾಕ್ಸ ಕಟ್ಟದೇ ಎಲ್ಲ ಕಡೆ ಸುತ್ತಾಡುತ್ತಾರೆ, ಹೋಟೆಲಗಳಲ್ಲಿ ಖರ್ಚು ಮಾಡುತ್ತಾರೆ. ಅವರು ತಮ್ಮ ಕಂಪನಿಗಳ ಮೂಲಕ ಟ್ಯಾಕ್ಸನ ಹಣ ಉಳಿಸಿ ಅದರಲ್ಲಿ ಐಷಾರಾಮಿ ಲೈಫಸ್ಟೈಲ ಮೆಂಟೆನ ಮಾಡುತ್ತಾರೆ. ಬಟ ನಿಮಗೆ ಆ ತರ ಮಾಡಲು ಸಾಧ್ಯವಿಲ್ಲ. ಸರ್ಕಾರ ಹೆಜ್ಜೆಹೆಜ್ಜೆಗೆ ನಿಮ್ಮ ಮೇಲೆ ಟ್ಯಾಕ್ಸ ಹೇರುತ್ತದೆ, ನಿಮ್ಮನ್ನು ಸುಲಿಗೆ ಮಾಡುತ್ತದೆ. ಅದಕ್ಕಾಗಿ ಬುದ್ಧಿವಂತರು ಜಾಬ ಮಾಡಲ್ಲ, ಬಿಜನೆಸ ಮಾಡುತ್ತಾರೆ‌.

Money Lesson 5 : ಶ್ರೀಮಂತರು ಹಣವನ್ನು ಹುಡುಕಿ ಹುಡುಕಿ ತೆಗೆಯುತ್ತಾರೆ. Rich People Invent Money

ಜೀವನದಲ್ಲಿ ಯಾವಾಗಲೂ ಸ್ಮಾರ್ಟ ಜನರಿಗಿಂತ ಬೋಲ್ಡ ಜನ ಮುಂದೆ ಹೋಗುತ್ತಾರೆ. ಧೈರ್ಯಶಾಲಿಗಳಿಗೆ ಸೋಲಿಲ್ಲ‌. ಎಷ್ಟೇ ದೊಡ್ಡ ಫೈನಾನ್ಸಿಯಲ್ ಜೀನಿಯಸ್ ಆಗಿದ್ದರೂ ಸಹ ಭಯ ಅನ್ನೋದು ಅವನಲ್ಲಿದ್ದರೆ ಆತ ಸಪ್ರೆಸ್ ಆಗುತ್ತಾನೆ. ಭಯವನ್ನು ಗೆದ್ದವನು ಮುಂದೆ ಹೋಗುತ್ತಾನೆ‌.

ಪೂವರ ಪೀಪಲ್ ರೈಟ ಅಪಾರ್ಚುನಿಟಿಗೋಸ್ಕರ ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಆದರೆ ಅದೇ ಸಮಯದಲ್ಲಿ ರೀಚ್ ಪೀಪಲ್ ತಮ್ಮ ಫೈನಾನ್ಸಿಯಲ್ ಐಕ್ಯೂವನ್ನು ಹೆಚ್ಚಿಸಿಕೊಂಡು ರಿಸ್ಕಗಳನ್ನು ತೆಗೆದುಕೊಂಡು ರೈಟ ಅಪಾರ್ಚುನಿಟಿಯನ್ನು ಕ್ರಿಯೆಟ ಮಾಡಿಕೊಳ್ಳುತ್ತಾರೆ‌. ನಮ್ಮ ಮೈಂಡ್ ನಮ್ಮ ಅತೀ ದೊಡ್ಡ ಅಸೆಟ್ಟಾಗಿದೆ. ಅದನ್ನು ನಾವು ಸರಿಯಾಗಿ ಟ್ರೇನ ಮಾಡಿದರೆ ಅದು ನಮಗೆ ಸಾಕಷ್ಟು ಸಂಪತ್ತನ್ನು ಕ್ರಿಯೆಟ ಮಾಡಿಕೊಡುತ್ತದೆ. ಇದೇ ಮೈಂಡನ್ನು ಯುಜ ಮಾಡಿಕೊಂಡು, ಫೈನಾನ್ಸಿಯಲ್ ಐಕ್ಯೂವನ್ನು ಯುಜ ಮಾಡಿಕೊಂಡು ಶ್ರೀಮಂತರು ‌ಹಣವನ್ನು ಸಂಪಾದಿಸುತ್ತಾರೆ ಮತ್ತು ಸಂರಕ್ಷಿಸಿ ಇಟ್ಟುಕೊಳ್ಳುತ್ತಾರೆ‌.

ಗ್ರೇಟ ಅಪಾರ್ಚುನಿಟಿಗಳು ಕಣ್ಣಿಗೆ ಕಾಣಿಸುವುದಿಲ್ಲ, ಅವು ಮೈಂಡಿಗೆ ಮಾತ್ರ ಕಾಣಿಸುತ್ತವೆ‌. ಸೋ ಶ್ರೀಮಂತರು ಯಾರಿಗೂ ಕಾಣಿಸದ ಅವಕಾಶಗಳನ್ನು, ಆಸ್ತಿಗಳನ್ನು ಹುಡುಕುತ್ತಾರೆ. ಅವುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರುತ್ತಾರೆ. ಕೆಲವು ಸಲ ಅವರು ಹಣವಿಲ್ಲದಿದ್ದರೂ ಹಣ ಗಳಿಸುತ್ತಾರೆ.

ಶ್ರೀಮಂತರು ರಿಸ್ಕ ತೆಗೆದುಕೊಂಡು ಹಣವನ್ನು ಸಂಪಾದಿಸುತ್ತಲೇ ಇರುತ್ತಾರೆ. ಆದರೆ ಬಡವರು ಹಣವನ್ನು ಕಳೆದುಕೊಳ್ಳುವ ಭಯದಿಂದ ಬಂದಿರುವ ಅಪಾರ್ಚುನಿಟಿಯನ್ನು ಕೈಚೆಲ್ಲುತ್ತಾರೆ. ಶ್ರೀಮಂತರು ಹಣವನ್ನು ಕಳೆದುಕೊಳ್ಳುವ ಭಯದಿಂದ ಹಿಂದೆ ಸರಿಯುವುದಿಲ್ಲ. ಅವರು ರಿಸ್ಕ ತೆಗೆದುಕೊಳ್ಳುತ್ತಾರೆ. ಏಕೆಂದರೆ ಫೇಲಿವರ ಸಕ್ಸೆಸನ ಒಂದು ಮುಖ್ಯ ಪಾರ್ಟಾಗಿದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಫೇಲಿವರನ್ನು ಅವೈಡ ಮಾಡಲು ಪ್ರಯತ್ನಿಸಿದವರು ಅದೇ ಕ್ಷಣವೇ ಸಕ್ಸೆಸನ್ನು ಸಹ ಅವೈಡ ಮಾಡುತ್ತಾರೆ. ಸೋ ಗೆಳೆಯರೇ, ನೀವು ಶ್ರೀಮಂತರಾಗಬೇಕೆಂದರೆ ರಿಸ್ಕನ್ನು ಅವೈಡ ಬದಲು ಅದನ್ನು ಸರಿಯಾಗಿ ಧೈರ್ಯದಿಂದ ಮ್ಯಾನೇಜ ಮಾಡುವುದನ್ನು ಕಲಿಯಿರಿ. ಹಣವನ್ನು ಕಳೆದುಕೊಳ್ಳುವ ಭಯದಿಂದ ಮೊದಲು ಹೊರಬನ್ನಿ. ನಿಮ್ಮ ಫೈನಾನ್ಸಿಯಲ್ ಐಕ್ಯೂವನ್ನು ಹೆಚ್ಚಿಸಿಕೊಳ್ಳಿ.

Money Lesson 6 : ಕಲಿಯುವುದಕ್ಕಾಗಿ ಕೆಲಸ ಮಾಡಿ, ಬರೀ ಹಣಕ್ಕಾಗಿ ಕೆಲಸ ಮಾಡವೇಡಿ. Don’t Work for money, work to Learn.

ಪೂವರ ಹಾಗೂ ಮಿಡಲ ಕ್ಲಾಸ್ ಜನರಿಗೆ ಒಂದು ಕಿತ್ತೊದ ಜಾಬ್ ಎಲ್ಲವೂ ಆಗಿದೆ. ಒಂದು ಸೇಫ್ ಜಾಬಿಗಾಗಿ ಇವರು ಜೀವನಪೂರ್ತಿ ಸಾಯುತ್ತಾರೆ. ಲಾಂಗ ಟೈಮಲ್ಲಿ ನಾಲೇಜ ಹಣಕ್ಕಿಂತ ತುಂಬಾ ಇಂಪಾರಟಂಟಾಗುತ್ತದೆ, ಜೀವನದಲ್ಲಿ ಹಣ ಗಳಿಸಲು ಸ್ಕೀಲಗಳು ಬೇಕಾಗುತ್ತವೆ. ಅದಕ್ಕಾಗಿ ದಿನಾ ಹೊಸಹೊಸ ಸ್ಕೀಲಗಳನ್ನು ಕಲಿಯಬೇಕಾಗುತ್ತದೆ ಎಂಬುದು ಈ ಮಿಡಲ ಕ್ಲಾಸ ಜನರಿಗೆ ಅರ್ಥವಾಗೋದೆ ಇಲ್ಲ. ಅವರು ಜಾಬ್ ಜಾಬ್ ಅಂತಾ ಸಾಯ್ತಾರೆ ಅಷ್ಟೇ‌. ಸ್ಪೆಷಲ್ ಸ್ಕೀಲಗಳ ಕೊರತೆಯಿಂದಲೇ ಇವರು ಹೆಚ್ಚಿಗೆ ಹಣ ಗಳಿಸುವಲ್ಲಿ ಫೇಲಾಗುತ್ತಾರೆ, ಬಡವರಾಗಿ ಉಳಿಯುತ್ತಾರೆ. ಇವರೊಂಥರಾ ಬದಲಾಗಲು ಬಯಸದ ಹಳೇ ನಾಯಿಗಳಿದ್ದಂತೆ. ಇವರಿಗೆ ಹೊಸದಾಗಿ ಏನನ್ನೂ ಕಲಿಸಲು ಸಾಧ್ಯವಿಲ್ಲ. ಜೀವನದಲ್ಲಿ ಸಕ್ಸೆಸಫುಲ್ಲಾಗಲು ಗುಡ್ ಸ್ಟೂಡೆಂಟ ಹಾಗೂ ಗುಡ್ ಟೀಚರಾಗಬೇಕಾಗುತ್ತದೆ. ಆದರೆ ಈ ಮಿಡಲ್ ಕ್ಲಾಸ್ ಜನ ಇತ್ತ ಕಡೆ ಗುಡ್ ಸ್ಟೂಡೆಂಟು ಆಗಲ್ಲ, ಅತ್ತ ಕಡೆ ಗುಡ್ ಟೀಚರೂ ಆಗಲ್ಲ.

ಮಿಡಲ ಕ್ಲಾಸ್ ಪೀಪಲ್ ಜಾಬ ಹಿಡಿದು ಹಣಕ್ಕಾಗಿ ಕತ್ತೆ ತರಹ ದುಡಿಯುತ್ತಿರುವಾಗ ರೀಚ್ ಪೀಪಲ ತಮ್ಮ ಕಲಿಕೆಯ ಮೇಲೆ ಫೋಕಸ ಮಾಡುತ್ತಾರೆ. ಕಲಿಯುವುದಕ್ಕಾಗಿ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಾರೆ. ಹೊಸ ಹೊಸ ಸ್ಕೀಲಗಳನ್ನು ಕಲಿಯುತ್ತಾರೆ. ಅವರು ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ, ಕಮ್ಯುನಿಕೇಷನ ಸ್ಕೀಲ್ಸ, ರಿಜೆಕ್ಷನ ಹ್ಯಾಂಡಲಿಂಗ ಸ್ಕೀಲ್ಸ, ಬಿಜನೆಸ ಸ್ಕೀಲ್ಸ, ಕ್ಯಾಷ್ ಫ್ಲೋ ಮ್ಯಾನೇಜ್ಮೆಂಟ್, ಸಿಸ್ಟಮ ಮ್ಯಾನೆಜ್‌ಮೆಂಟ್‌, ಪೀಪಲ್ ಮ್ಯಾನೇಜ್ಮೆಂಟಗಳಂಥ ಸ್ಕೀಲಗಳನ್ನು ಕಲಿಯುತ್ತಾರೆ. ಈ ಸ್ಕೀಲಗಳು ಅವರಿಗೆ ಹೆಚ್ಚಿಗೆ ಹಣ ಸಂಪಾದಿಸಲು ಹೆಲ್ಪ ಮಾಡುತ್ತವೆ‌.

ಸೋ ಗೆಳೆಯರೇ, ನಿಮಗೆ ಶ್ರೀಮಂತರಾಗಬೇಕು ಎಂಬಾಸೆಯಿದ್ದರೆ ಒಂದರಲ್ಲೇ ಪಂಡಿತನಾಗದೆ ಎಲ್ಲ ವಿಷಯಗಳ ಬಗ್ಗೆ ಸ್ವಲ್ಪ ಸ್ವಲ್ಪನಾದ್ರೂ ತಿಳಿದುಕೊಳ್ಳಿ. ಹೊಸಹೊಸ ಸ್ಕೀಲಗಳನ್ನು ಕಲಿಯಿರಿ. ನಿಮಗಿಂತಲೂ ಸ್ಮಾರ್ಟಾಗಿರುವ ಜನರೊಂದಿಗೆ ಕೆಲಸ ಮಾಡಿ. ಹಣಕ್ಕಾಗಿ ಕೆಲಸ ಮಾಡದೇ ಕಲಿಯುವುದಕ್ಕಾಗಿ ಕೆಲಸ ಮಾಡಿ. ಹಣ ತಾನಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

Money Lesson 7 : ಅಡೆತಡೆಗಳಿಂದ ಹೊರ ಬರುವುದು : Overcoming Obstacles

ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ‌ಬರುವ ಅಡೆತಡೆಗಳನ್ನು ಹೇಗೆ ನಿಭಾಯಿಸುತ್ತಾನೆ ಎಂಬುದರ ಮೇಲೆ ಅವನು ಬಡವನಾಗಿರಬೇಕಾ ಅಥವಾ ಶ್ರೀಮಂತನಾಗಬೇಕಾ ಎಂಬುದು ಡಿಸೈಡಾಗುತ್ತೆ. ಮನುಷ್ಯರ ಜೀವನದಲ್ಲಿ ಬರುವ 5 ಅಡತಡೆಗಳು ಅವರನ್ನು ಬಡವರನ್ನಾಗಿಸುತ್ತವೆ‌. ಈ 5 ಅಡೆತಡೆಗಳನ್ನು ಸರಿಯಾಗಿ ನಿಭಾಯಿಸಿದರೆ‌ ಸಾಕು ಶ್ರೀಮಂತರಾಗಲು ನಿಮ್ಮ ದಾರಿ‌ ಸುಗಮವಾಗುತ್ತದೆ‌. ಆ ಅಡೆತಡೆಗಳು ಇಂತಿವೆ ;

1) ಹಣವನ್ನು ಕಳೆದುಕೊಳ್ಳುವ ಭಯ (Fear of Losing Money)

ಎಲ್ಲರೂ ಸ್ವರ್ಗಕ್ಕೆ ಹೋಗಲು ಇಷ್ಟಪಡುತ್ತಾರೆ, ಆದರೆ ಸಾಯಲು ಯಾರು ಮುಂದಾಗುವುದಿಲ್ಲ. ಅದೇ ರೀತಿ ಎಲ್ಲರೂ ಶ್ರೀಮಂತರಾಗುವ ಕನಸು ಕಾಣುತ್ತಾರೆ, ಆದರೆ ರಿಸ್ಕ ತೆಗೆದುಕೊಳ್ಳುವ ಧೈರ್ಯ ಮಾಡುವುದಿಲ್ಲ. ರಿಸ್ಕ ತೆಗೆದುಕೊಂಡರೆ ಅವರು ಶ್ರೀಮಂತರಾಗಬಹುದು. ಆದರೆ ಅವರು ಹಣವನ್ನು ಕಳೆದುಕೊಳ್ಳುವ ಭಯದಿಂದಾಗಿ ರಿಸ್ಕ ತೆಗೆದುಕೊಳ್ಳುವುದಿಲ್ಲ. ಅದಕ್ಕಾಗಿ ಅವರು ಸೇಫಾಗಿ ಆಟವಾಡುತ್ತಾರೆ. ಅವರು ತಮ್ಮ ಹಣವನ್ನು ಎಲ್ಲಿಯೂ ಇನ್ವೇಸ್ಟ ಮಾಡುವುದಿಲ್ಲ. ಸೋ ಗೆಳೆಯರೇ, ನೀವು ಶ್ರೀಮಂತರಾಗಬೇಕೆಂದರೆ‌ ಹಣವನ್ನು ಕಳೆದುಕೊಳ್ಳುವ ಭಯದಿಂದ ಹೊರಬಂದು ರಿಸ್ಕ ತೆಗೆದುಕೊಳ್ಳಬೇಕು, ನಿಮ್ಮ ಹಣವನ್ನು ಸರಿಯಾದ ಸ್ಥಳಗಳಲ್ಲಿ ಸರಿಯಾಗಿ ಇನ್ವೇಸ್ಟ ಮಾಡಬೇಕು. ಏಕೆಂದರೆ If No Risk, then No Gain…

2) ಸಿನಿಸಿಜಮ / ಸಿನಿಕತೆ (Cynicism)

ಸರಿಯಾದ ನಾಲೇಜ ಹಾಗೂ ಇನ್ಫಾರ್ಮೇಶನಿನ ಕೊರತೆಯಿಂದಾಗಿ ಬಗೆಬಗೆಯಾದ ಸ್ಟೂಪಿಡ ಸಿನಿಕತೆಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗಾಗಿ; ಶೇರ್ ಮಾರ್ಕೆಟ್ ‌ಹಾಗೂ ರಿಯಲ್ ಎಸ್ಟೇಟಗಳು ಹಣವನ್ನು ಸಂಪಾದಿಸಲು ‌ಬೆಸ್ಟ ಅಪಾರ್ಚುನಿಟಿಗಳಾಗಿವೆ‌‌. ಆದರೆ ಜನ ಇವುಗಳ ಬಗ್ಗೆ ಡೆಂಜರಸ ರೂಮರ್ಸಗಳನ್ನು ಹಬ್ಬಿಸಿ ಜನರನ್ನು ಹೆದರಿಸಿದ್ದಾರೆ, ಜನ ತಮ್ಮ ಹಣವನ್ನು ಇನ್ವೇಸ್ಟ ‌ಮಾಡದಂತೆ ಮಾಡಿದ್ದಾರೆ. ಶೇರ್ ಮಾರ್ಕೆಟ್ ಹಾಗೂ ರಿಯಲ ಎಸ್ಟೇಟಗಳ ಬಗ್ಗೆ ಜನ ತಮ್ಮ ಮೂರ್ಖ ಗೆಳೆಯರಿಂದ ಸಲಹೆಗಳನ್ನು ಪಡೆದುಕೊಂಡು ಅವುಗಳನ್ನು ಬ್ಲೇಮ ಮಾಡುತ್ತಾರೆ. ಅವರ ಗೆಳೆಯರು ಸಹ ಎಲ್ಲಿಯೂ ಹಣ ಇನ್ವೇಸ್ಟ ಮಾಡದೇ ಗೊಳ್ಳು ಕಥೆ ಹೊಡೆಯುತ್ತಿರುತ್ತಾರೆ. ಅದನ್ನೇ ನಿಜ ಅಂತಾ ನಂಬಿ ಇವರು ಸಹ ಹಣವನ್ನು ಇನ್ವೇಸ್ಟ ಮಾಡದೇ ಸುಮ್ಮನಾಗುತ್ತಾರೆ. ಸೋ ಗೆಳೆಯರೇ, ನೀವು ಈ ರೀತಿ ಮಾಡಬೇಡಿ. ಮೊದಲು ನೀವು ಈ ತರಹದ ಸ್ಟೂಪಿಡ ಜನರ ದೋಸ್ತಿ ಕಟ ಮಾಡಿ. ಆನಂತರ ಶೇರ್ ಮಾರ್ಕೆಟ್, ರಿಯಲ್ ಎಸ್ಟೇಟ್, ಮ್ಯೂಚುಯಲ್‌ ಫಂಡ್ಸ, ಬಾಂಡ್ಸ ಇತ್ಯಾದಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ ಮತ್ತು ನಿಮ್ಮ ಹಣವನ್ನು ಅವುಗಳಲ್ಲಿ ಇನ್ವೇಸ್ಟ ಮಾಡಿ.

3) ಆಲಸಿತನ (Laziness)

ಬಿಜಿ ಪೀಪಲಗಳು ಲೇಜಿಯಾಗಿರುತ್ತಾರೆ. ಮೊಸ್ಟ ಆಫ್ ಲೇಜಿ ಜನರು ತಮ್ಮನ್ನು ತಾವು ಬಿಜಿ ಅಂತಾ ತೋರಿಸಿಕೊಳ್ಳುತ್ತಾರೆ. ತಮ್ಮನ್ನು ತಾವು ಬಿಜಿ ಅಂತಾ ತೋರಿಸಿಕೊಂಡು ಕೆಲಸದಿಂದ ಹಾಗೂ ಜನರಿಂದ ದೂರ ಓಡುತ್ತಾರೆ. ಹೀಗಾಗಿ ಅವರು ಬಡವರಾಗಿ ಉಳಿಯುತ್ತಾರೆ. ಸೋ ಗೆಳೆಯರೇ, ನೀವು ಬಿಜಿಯಾಗಬೇಡಿ, ಲೇಜಿಯಾಗಬೇಡಿ. ಸರಿಯಾಗಿ ಕೆಲಸ ಮಾಡಿ. ಹಣಕ್ಕಾಗಿ ಸ್ವಲ್ಪ ಗ್ರಿಡಿಯಾಗಿ. ಹೆಚ್ಚಿಗೆ ಹಣ ಗಳಿಸುವ ಆಸೆ ನಿಮ್ಮ ಲೇಜಿತನವನ್ನು ಸಾಯಿಸುತ್ತದೆ ಮತ್ತು ನಿಮ್ಮಿಂದ ಹಾರ್ಡ ವರ್ಕ ಮಾಡಿಸುತ್ತದೆ. ಸೋ ಹಣಕ್ಕಾಗಿ ಸ್ವಲ್ಪ ಗ್ರಿಡಿಯಾಗಿ.

4) ದುಶ್ಚಟಗಳು (Bad Habits)

ನಿಮಗೆ ದುಶ್ಚಟಗಳಿದ್ದರೆ ನೀವು ಹೆಚ್ಚಿಗೆ ಹಣ ಸಂಪಾದಿಸಲಾರಿರಿ. ನಿಮ್ಮ ಲೈಫ ನಿಮ್ಮ ಹ್ಯಾಬಿಟ್ಸಗಳ ರಿಫ್ಲೆಕ್ಷನ ಆಗಿದೆ‌. ನಿಮಗೆ ಗುಡ್ ಮನಿ ಮೇಕಿಂಗ್ ಹ್ಯಾಬಿಟ್ಸಗಳಿದ್ದರೆ ನೀವು ರೀಚ್ ಆಗುತ್ತೀರಿ. ಸೋ ರೀಚ್ ಹ್ಯಾಬಿಟ್ಸಗಳನ್ನು ಬೆಳೆಸಿಕೊಳ್ಳಿ.

5) ಅಹಂಕಾರ (Arrogance)

ನನಗೆಲ್ಲ ಗೊತ್ತು ಅನ್ನೋದು ಅತೀ ದೊಡ್ಡ ಅಹಂಕಾರವಾಗಿದೆ. ಯಾರ ಬಳಿ ಈ ಅಹಂಕಾರವಿರುತ್ತೋ ಅವರು ಯಾವತ್ತೂ ತಮ್ಮ ಜೀವನದಲ್ಲಿ ಮುಂದೆ ಹೋಗಲ್ಲ. ಬಹಳಷ್ಟು ಜನ ದುಡ್ಡಿನ ವಿಷಯದಲ್ಲಿ ತಾವು ಮಾಡಿದ ಇಗ್ನೋರನ್ಸನ್ನು ಬಚ್ಚಿಡಲು ಆ್ಯರೋಗನ್ಸನ್ನು ಬಳಸಿಕೊಳ್ಳುತ್ತಾರೆ. ಸೋ ನೀವು ಈ ತಪ್ಪನ್ನು ‌ಮಾಡಬೇಡಿ. ಅಹಂಕಾರವನ್ನು ಬಿಟ್ಟು ಬಿಡಿ. ದುಡ್ಡಿನ ವಿಷಯದಲ್ಲಿ ನೀವು ಮಾಡಿದ ಇಗ್ನೋರನ್ಸನ್ನು, ಮಿಸ್ಟೇಕ್ಸಗಳನ್ನು ಒಪ್ಪಿಕೊಳ್ಳಿ. ನಿಮ್ಮ ನಾಲೇಡ್ಜನ್ನು ಹೆಚ್ಚಿಸಿಕೊಂಡು ಮನಿ ಮೇಕಿಂಗ್ ಮಾಡೆಲನ್ನು ಕ್ರಿಯೆಟ ಮಾಡಿ.

Money Lesson 8 : ಹಣ ಗಳಿಸಲು ಹೇಗೆ ಪ್ರಾರಂಭಿಸುವುದು? How to start earning money?

ನಮ್ಮ ಸುತ್ತಮುತ್ತಲು ಬಂಗಾರವಿದೆ. ಆದರೆ ಅದನ್ನು ನೋಡುವ ಬುದ್ಧಿವಂತ ಮೈಂಡ ಎಲ್ಲರ ಬಳಿ ಇರುವುದಿಲ್ಲ, ಯಾರ ಬಳಿ ಇರುತ್ತೋ ಅವರು ಶ್ರೀಮಂತರಾಗುತ್ತಾರೆ. ಬಟ್ ಈ ಮೈಂಡ ಇರದವರು ಬಡವರಾಗಿ ಉಳಿಯುತ್ತಾರೆ. ಅಂಥವರಿಗಾಗಿ ರಾಬರ್ಟ್ ಕಿಯೋಸಾಕಿ (Robert Kiyosaki) ಕೆಲವೊಂದಿಷ್ಟು ಟಿಪ್ಸಗಳನ್ನು ಕೊಟ್ಟಿದ್ದಾರೆ. ಅವು ಇಂತಿವೆ.

1) ನೀವು ಯಾಕೆ ಶ್ರೀಮಂತರಾಗಬೇಕು ಎಂಬುದಕ್ಕೆ ಒಂದು ಸ್ಟ್ರಾಂಗ್ ರಿಜನನ್ನು, ಪರಪಜನ್ನು ಹುಡುಕಿ. ನಿಮಗೆ ಒಂದು ಕ್ಲಿಯರ್ ಪರಪಜ ಇಲ್ಲದಿದ್ದರೆ ನೀವು ಎಷ್ಟೇ ಹಾರ್ಡ್ ವರ್ಕ ಮಾಡಿದರೂ ಸಹ ಎಲ್ಲವೂ ವ್ಯರ್ಥವಾಗುತ್ತದೆ, ನೀವು ಆರ್ಡಿನರಿಯಾಗಿ ಉಳಿಯುತ್ತಿರಿ. ಅದಕ್ಕಾಗಿ ಸ್ಟ್ರಾಂಗ ಪರಪಜನ್ನು ಹುಡುಕಿ

2) ಸರಿಯಾದ ಚಾಯ್ಸಗಳನ್ನು ಮಾಡಿ. ನಾನು ಶ್ರೀಮಂತನಾಗಲು ಚಾಯ್ಸ ಮಾಡಿದೆ. ಆದ್ರೆ ಬಹಳಷ್ಟು ಜನರಿಗೆ ಶ್ರೀಮಂತರಾಗಬೇಕು ಎಂಬ ಆಸೆನೇ ಇಲ್ಲ. ನಿಮ್ಮ ಮೈಂಡ ನಿಮ್ಮ ಬಿಗ್ಗೇಸ್ಟ ಅಸೆಟ್ಟಾಗಿದೆ. ಅದರ ಮೇಲೆ ಇನ್ವೇಸ್ಟ ಮಾಡಿ ಮತ್ತು ರೀಚ್ ಆಗಲು ಸರಿಯಾದ ಚಾಯ್ಸಗಳನ್ನು ಮಾಡಿ.

3) ನಿಮ್ಮ ಗೆಳೆಯರನ್ನು ಬಹಳಷ್ಟು ಕೇರಫುಲ್ಲಾಗಿ ಚೂಜ ಮಾಡಿ. ಕುರಿಗಳ ಥರ ಗುಂಪಲ್ಲಿ ಗೋವಿಂದ ಅನಬೇಡಿ. ನಿಮ್ಮ ಮನಸ್ಸಿನ ಮಾತನ್ನು ಕೇಳಿ. ಒಳ್ಳೇ ಸಕ್ಸೆಸಫುಲ ವ್ಯಕ್ತಿಗಳ ಜೊತೆಗೆ ಗೆಳೆತನ ಮಾಡಿ. ಅವರಿಂದ ಅವರ ರಿಚನೆಸ್ ಸೆಕ್ರೆಟ್ಸಗಳನ್ನು ಕೇಳಿ ತಿಳಿದುಕೊಳ್ಳಿ, ಇಲ್ಲ ಸೈಲೆಂಟಾಗಿ ನೋಡಿ ತಿಳಿದುಕೊಳ್ಳಿ. ನಿಮ್ಮ ಸಕ್ಸೆಸಫುಲ ಗೆಳೆಯರಿಂದ ಕಲಿಯಿರಿ.‌

4) ಒಂದು ಬೆಸ್ಟ ಮನಿ ಮೇಕಿಂಗ ಫಾರ್ಮುಲಾವನ್ನು ಹುಡುಕಿ, ಅದರಲ್ಲಿ ಮಾಸ್ಟರ ಆಗಿ ಮತ್ತು ಸಾಕಷ್ಟು ಹಣ ಗಳಿಸಿ. ಆನಂತರ ಮತ್ತೊಂದು ಹೊಸ ಸ್ಕೀಲ ಕಲಿಯಿರಿ‌, ಅದರಿಂದಲೂ ಹಣ ಗಳಿಸಿ. ಇದನ್ನ ಕಂಟಿನ್ಯುವ ಮಾಡಿ. ಹೀಗೆ ಮಲ್ಟಿಪಲ್ ಮೂಲಗಳಿಂದ ಹಣಗಳಿಸಿ.

5) ಡಿಸಿಪ್ಲೇನನ್ನು ಬೆಳೆಸಿಕೊಳ್ಳಿ. ಡಿಸಿಪ್ಲೇನಿನ ಕೊರತೆಯಿಂದಲೇ ಬಹಳಷ್ಟು ಜನ ಬಡತನವನ್ನು ಹಾಗೂ ಭಯವನ್ನು ಅನುಭವಿಸುತ್ತಾರೆ. ಸೋ ಡಿಸಿಪ್ಲೇನನ್ನು ಬೆಳೆಸಿಕೊಳ್ಳಿ. ಅದು ನಿಮ್ಮನ್ನು ಕಾಪಾಡುತ್ತದೆ. ಮೊದಲು ಅಸೆಟಗಳನ್ನು ಮಾಡಿ, ಆನಂತರ ದೊಡ್ಡ ಮನೆ, ಕಾರು, ಇತ್ಯಾದಿಗಳನ್ನು ಖರೀದಿಸಿ. Rat ರೇಸಲ್ಲಿ ಸಿಲುಕಿ‌ ಒದ್ದಾಡಬೇಡಿ. ನೀವು ನಿಮ್ಮ ಬಿಜನೆಸ ಮೇಲಷ್ಟೇ ಫೋಕಸ ಮಾಡಿ.

6) ನಿಮ್ಮ ಟೀಮನ್ನು ಸರಿಯಾಗಿ ‌ಮೆಂಟೆನ ಮಾಡಿ. ನಿಮ್ಮ ಪ್ರೊಫೆಷನಲಗಳಾದ ಅಕೌಂಟಂಟಗಳಿಗೆ, ಅಡವೈಜರಗಳಿಗೆ ಸರಿಯಾಗಿ ಪೇಮೆಂಟ ಕೊಡಿ. ಅವರ ಒಂದು ಬೆಸ್ಟ ಅಡವೈಜ ಕೂಡ ನಿಮಗೆ ಬಹಳಷ್ಟು ಲಾಭ ಕೊಡುತ್ತದೆ. ನಿಮಗಿಂತಲೂ ಸ್ಮಾರ್ಟಾಗಿರುವ ಜನರನ್ನು ಗೌರವಿಸಿ, ಅವರೊಂದಿಗೆ ‌ಒಳ್ಳೇ ಫ್ರೆಂಡಶೀಪ ಮಾಡಿ.

7) ಮೊದಲು ನಿಸ್ವಾರ್ಥದಿಂದ ಕೊಡುವುದನ್ನು ಕಲಿಯಿರಿ. ROIಗಿಂತ ಹೆಚ್ಚಿನ ವಿಷಯಗಳ ಕಡೆಗೆ ಗಮನ ಹರಿಸಿ. ಕೆಲವೊಂದಿಷ್ಟು ವಸ್ತುಗಳನ್ನು ಫ್ರೀಯಾಗಿ ಕೊಡುವುದರಿಂದ ನೀವು ಬಯಸಿದ್ದಕ್ಕಿಂತ ಹೆಚ್ಚಿಗೆ ನಿಮಗೆ ಸಿಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. Nothingದಿಂದ Somethingನ್ನು ಪಡೆದುಕೊಳ್ಳುವ ಕಲೆಯನ್ನು ಕಲಿಯಿರಿ. ನಿಮಗೆ ಏನಾದರೂ ಬೇಕಾದರೆ ನೀವು ಏನಾದರೂ ಒಂದನ್ನು ಕೊಡಲೇಬೇಕು. ನಿಮಗೆ ಏನೋ ಬೇಕೋ ಅದನ್ನು ಕೊಡಿ. ಕೊಟ್ಟಿದ್ದಕ್ಕಿಂತ ಹೆಚ್ಚಿಗೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ‌. ಈ ಫಾರ್ಮುಲಾ ಹಣ, ನಗು, ಸ್ನೇಹ, ಪ್ರೀತಿ ಎಲ್ಲದಕ್ಕೂ ವರ್ಕೌಟ ಆಗುತ್ತದೆ.

8) ನಿಮ್ಮ ಡೈರೆಕ್ಟ ಇನಕಮನಿಂದ ಅನಾವಶ್ಯಕ ಲಗ್ಜುರಿಗಳನ್ನು ಖರೀದಿಸಬೇಡಿ. ನಿಮ್ಮ ಇನಕಮನಿಂದ ಮೊದಲು ಅಸೆಟಗಳನ್ನು ಕ್ರಿಯೆಟ ಮಾಡಿ. ಆನಂತರ ಅಸೆಟಗಳಿಂದ ಬರುವ ಸೈಡ್ ಇನಕಮನಿಂದ ಲಗ್ಜುರಿಗಳನ್ನು ಖರೀದಿಸಿ.

Money Lesson 9 : ಬೋನಸ್ ಟಿಪ್ಸ Bonus Tips.

ಇದು ಕೊನೆಯ ಲೆಸನ್ನಾಗಿದೆ‌. ಈ ಲೆಸನನಲ್ಲಿ ರಾಬರ್ಟ್ ಕಿಯೋಸಾಕಿಯವರು ಮನಿ ಮೇಕಿಂಗಗೆ ಕೆಲವೊಂದಿಷ್ಟು ಬೆಸ್ಟ & ಯುನಿಕ್ ಟಿಪ್ಸಗಳನ್ನು ಕೊಟ್ಟಿದ್ದಾರೆ. ಅವು ಇಂತಿವೆ ;

1) ನೀವು ಎಷ್ಟೇ ಕೆಲಸ ಮಾಡಿದರೂ ಹಣ ನಿಮ್ಮ ಬಳಿ ಹರಿದು ಬರದಿದ್ದರೆ ಸದ್ಯಕ್ಕೆ ನೀವೇನು ಮಾಡುತ್ತಿದ್ದಿರೋ ಅದನ್ನು ನಿಲ್ಲಿಸಿ. ಮೊದಲು ‌ಯಾವುದು ವರ್ಕಾಗುತ್ತಿದೆ? ಯಾವುದು ವರ್ಕಾಗುತ್ತಿಲ್ಲ ಎಂಬುದನ್ನು ಸರಿಯಾಗಿ ಗಮನಿಸಿ. ಹೊಸ ಪ್ಲ್ಯಾನನೊಂದಿಗೆ ಕೆಲಸ ಮಾಡಿ. ಇಲ್ಲವೇ ಹೊಸ ಕೆಲಸ ಸ್ಟಾರ್ಟ್ ಮಾಡಿ.

2) ಯಾವಾಗಲೂ ಹೊಸ ಐಡಿಯಾಗಳನ್ನು ಹುಡುಕುತ್ತಲೇ ಇರಿ. ಬೇರೆ ಬೇರೆ ಟಾಪಿಕಗಳಿಗೆ ಸಂಬಂಧಿಸಿದಂತೆ ಬೆಸ್ಟ ಬುಕ್ಸಗಳನ್ನು ಓದಿ. ಹೊಸ ಹೊಸ ಇನ್ವೆಸ್ಟಮೆಂಟ ಐಡಿಯಾಗಳ ಬಗ್ಗೆ ಹಾಗೂ ಮನಿ ಮೇಕಿಂಗ ಫಾರ್ಮುಲಾಗಳ ಬಗ್ಗೆ ತಿಳಿದುಕೊಳ್ಳಿ. ಬಿಜನೆಸ ಕ್ಲಾಸಗಳಿಗೆ, ವರ್ಕಶಾಪಗಳಿಗೆ ಅಟೆಂಡಾಗಿ.

3) ನೀವು ಮಾಡಬೇಕೆಂದಿರುವುದನ್ನು ಈಗಾಗಲೇ ಯಾರಾದರೂ ಮಾಡಿದ್ದರೆ ಅವರಿಂದ ಕಲಿಯಿರಿ. ಇನ್ಸಪಿರೇಷನ ತೆಗೆದುಕೊಳ್ಳಿ, ಆದರೆ ಅವರನ್ನು ಕಾಪಿ‌ ಮಾಡಬೇಡಿ.

4) ದೊಡ್ಡದಾಗಿ ಯೋಚಿಸಿ. ಥಿಂಕ್ ಬಿಗ. ಹಿಸ್ಟರಿಯಿಂದ ಕಲಿಯಿರಿ‌. ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳಿ. ನೀವು ಆ್ಯಕ್ಷನ್ಸಗಳನ್ನು ತೆಗೆದುಕೊಂಡಾಗಲೇ ನಿಮಗೆ ರಿಜಲ್ಟಗಳು ಸಿಗಲು ಸಾಧ್ಯ.

ಗೆಳೆಯರೇ, ಕೊನೆಯದಾಗಿ ಹೇಳಬೇಕೆಂದರೆ‌ ನಿಮ್ಮ ಹಾಗೂ ನಿಮ್ಮ ಮಕ್ಕಳ ಭವಿಷ್ಯ ಇವತ್ತು ನೀವು ಏನನ್ನು ಆಯ್ಕೆ ಮಾಡಿಕೊಳ್ಳುತ್ತಿರಿ ಎಂಬುದರ ಮೇಲೆ ಡಿಸೈಡಾಗುತ್ತದೆ. ಮೈಂಡ್ ಹಾಗೂ ಟೈಮ ನಿಮಗೆ ಸಿಕ್ಕ ಬೆಸ್ಟ ಗಿಫ್ಟಗಳಾಗಿವೆ. ಅವುಗಳನ್ನು ಯುಜ ಮಾಡಿಕೊಳ್ಳಿ. ನಿಮ್ಮ ಕೈಗೆ ಸಂಬಳ ಬಂದಾಗ ನೀವದನ್ನು ಸ್ಟೂಪಿಡಾಗಿ ಯುಜ ಮಾಡಿ ಲೈಯಾಬಿಲಿಟಿಗಳನ್ನು ‌ಮಾಡಿಕೊಂಡರೆ ನೀವು ಪೂವರ ಹಾಗೂ ಮಿಡಲ ಕ್ಲಾಸ ಕೆಟಗೇರಿಗೆ ಎಂಟರ ಆಗುತ್ತೀರಿ. ನೀವು ನಿಮ್ಮ ಇನಕಮನಿಂದ ಅಸೆಟಗಳನ್ನು ಬಿಲ್ಡ ಮಾಡಿದರೆ ಖಂಡಿತ ನೀವು ಶ್ರೀಮಂತರಾಗುತ್ತೀರಿ. ಇದರಲ್ಲಿ ಯಾವುದೇ ಡೌಟಿಲ್ಲ. ಈಗ ಚಾಯ್ಸ ನಿಮ್ಮದಾಗಿದೆ. ವೈಜ್ಲಿ ಚೂಜ ಮಾಡಿ ಮತ್ತು ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳಿ.

ಇದೀಷ್ಟು ವಿಷಯಗಳನ್ನು ನಾನು ರಾಬರ್ಟ್ ಕಿಯೋಸಾಕಿಯವರ (Robert Kiyosaki) ರೀಚ್ ಡ್ಯಾಡ ಪೂವರ ಡ್ಯಾಡ ಬುಕನಿಂದ ಕಲಿತಿರುವೆ. ಆ ಬುಕ್ಕನಲ್ಲಿರುವ ಬರೀ 10% ವಿಷಯಗಳನ್ನಷ್ಟೇ ನಾನು ನಿಮ್ಮೊಂದಿಗೆ ಶೇರ್ ಮಾಡಿರುವೆ‌. ಮಿಕ್ಕ 90% ಸೆಕ್ರೆಟಗಳನ್ನು ಕಲಿಯಲು ನೀವೊಮ್ಮೆ ಈ ಬುಕ್ಕನ್ನು ಓದಲೇಬೇಕು. ನಾನಿದನ್ನ ಹಾಯ್ಲಿ ರೆಕಮೆಂಡ ಮಾಡುವೆ. ಈ ಲಿಂಕ ಮೇಲೆ ಕ್ಲೀಕ್ ಮಾಡಿ. (ಲಿಂಕ್ – Rich Dad Poor Dad Book Link – Click Here) ಬುಕ ತೆಗೆದುಕೊಂಡು ಓದಿ. ಮತ್ತೊಂದು ಬೆಸ್ಟ ಬುಕನೊಂದಿಗೆ ಮತ್ತೆ ಸಿಗ್ತೀನಿ. ನಿಮಗೆ ಏನಾದರೂ ಡೌಟ್ಸಗಳಿದ್ದರೆ ನನಗೆ ಇನಸ್ಟಾಗ್ರಾಮಲ್ಲಿ (@director_satishkumar) ಡೈರೆಕ್ಟ ಮೆಸೆಜ ಮಾಡಿ. Thanks You and All the Very Best…

ಕನ್ನಡದಲ್ಲಿ ರೀಚ್ ಡ್ಯಾಡ ಪೂವರ್ ಡ್ಯಾಡ ಬುಕ್ನ್ನು ಓದಲು ಕ್ಲಿಕ್ ಮಾಡಿ : ಲಿಂಕ್ Rich Dad Poor Dad Book Link – Click Here

Rich Dad Poor Dad Book in Kannada

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books