ಅರ್ಧ ಸತ್ಯಗಳು : Kannada Status – whatsapp status Kannada – Facebook Status in Kannada – Kannada Quotes – Life Quotes Kannada

You are currently viewing ಅರ್ಧ ಸತ್ಯಗಳು : Kannada Status – whatsapp status Kannada – Facebook Status in Kannada – Kannada Quotes – Life Quotes Kannada

೧) ಪ್ರಚೋದನೆ ಇಲ್ಲದೆ ಪ್ರತಿಕ್ರಿಯೆ ಬರಲು ಸಾಧ್ಯವೇ ಇಲ್ಲ ಅಂತ ವಿಜ್ಞಾನ ಸ್ಪಷ್ಟವಾಗಿ ಹೇಳುತ್ತದೆ. ಆದರೆ ಕೆಲವು ಸಲ ನಾವು ಏನೇ ತಪ್ಪು ಮಾಡದಿದ್ದರೂ ಸಹ ಅನಾವಶ್ಯಕ ಆರೋಪಗಳು, ನಿಂದನೆಗಳು ನಮಗೆ ಎದುರಾಗುತ್ತವೆ. ಸಾಲದ್ದಕ್ಕೆ ನಾವು ಏನು ತಪ್ಪು ಮಾಡದಿದ್ದರೂ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

೨) ಕೆಲವು ಸಲ ಈ ಪ್ರಪಂಚ ಎಷ್ಟು ವಿಶಾಲವಾಗಿದೆಯೋ ಅಷ್ಟೇ ದು:ಖದಾಯಕವಾಗಿ ಪರಿಣಮಿಸುತ್ತದೆ. ಆ ದು:ಖಕ್ಕೆ ಕಾರಣ ಹುಡುಕುವಷ್ಟರಲ್ಲಿ ನಮ್ಮ ಖುಷಿ ನಮ್ಮಿಂದಲೇ ಕೊಲೆಯಾಗಿರುತ್ತದೆ.

೩) ಜನ ಇತರರ ತಪ್ಪುಗಳನ್ನು ಎತ್ತಿ ತೋರಿಸುವುದನ್ನೇ ಸಮಾಜಸೇವೆ ಎಂದುಕೊಂಡಿದ್ದಾರೆ. ಅದೇ ಭ್ರಮೆಯಲ್ಲಿ ತಪ್ಪಿತಸ್ಥರ ಸಣ್ಣಪುಟ್ಟ ತಪ್ಪುಗಳನ್ನು ಎತ್ತಿ ತೋರಿಸಿ, ಅವರು ಇಷ್ಟು ದಿನ ಮಾಡಿದ ದೊಡ್ಡ ದೊಡ್ಡ ಒಳ್ಳೆ ಕೆಲಸಗಳನ್ನು ಮರೆಮಾಚುತ್ತಾರೆ.

೪) ಗೆಲ್ಲುವುದು ತುಂಬಾ ಕಷ್ಟ. ಆದ್ರೆ ಗೆಲುವಿಗೆ ಸಲಹೆ ಕೊಡೋದು ತುಂಬಾ ಸುಲಭ.
ಸೋಲುವುದು ತುಂಬಾ ಸುಲಭ. ಆದ್ರೆ ಸೋಲಿಗೆ ಸಮಜಾಯಿಸಿ ಕೊಡೋದು ಸ್ವಲ್ಪ ಕಷ್ಟ…

೫) ಹೊತ್ತಿ ಉರಿಯುತ್ತಿರುವ ಕಾಡ್ಗಿಚ್ಚನ್ನು ಎಂಥ ಬಿರುಗಾಳಿ ಬಂದರೂ ನಂದಿಸಲಾಗದು. ಸಾವಿರ ಮೋಡಗಳು ಒಗ್ಗಟ್ಟಾಗಿ ಬಂದರೂ ಉರಿಯುವ ಸೂರ್ಯನನ್ನು ಶಾಶ್ವತವಾಗಿ ಬಚ್ಚಿಡಲಾಗದು.

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

೬) ನಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳು ಮಂಜುಗಡ್ಡೆಯಿದ್ದ ಹಾಗೆ. ನಾವು ಧೃತಿಗೆಡದೆ ಧೈರ್ಯವೆಂಬ ಬೆಂಕಿಯನ್ನು ಬಳಿಯಿಟ್ಟುಕೊಂಡರೆ, ಆ ಸಂಕಷ್ಟಗಳೆಲ್ಲವು ತಾನಾಗಿಯೇ ಕರಗಿ ನೀರಾಗಿ ಹರಿದು ನಮ್ಮಿಂದ ದೂರ ಹೋಗುತ್ತವೆ.

೭) ಮುಂದಾಲೋಚನೆ ಮಂದ ಆಲೋಚನೆಯಾದರೆ, ಮಂದಹಾಸ ಮದದ ಹಾಸ್ಯವಾದರೆ, ನಮ್ಮನ್ನು ನಮ್ಮ ಅವನತಿಯಿಂದ ಕಾಪಾಡಲು ಆ ದೇವರಿಗೂ ಸಾಧ್ಯವಿಲ್ಲ.

೮) ರಕ್ತದಲ್ಲಿ ಚರಿತ್ರೆ ಬರೆಯಬಲ್ಲವನು ಜಗತ್ತನ್ನು ಗೆಲ್ಲಲಾರ. ಕೋಟ್ಯಾಂತರ ಜೀವಗಳ ಸಮಾಧಿಯ ಮೇಲೆ ನಿಂತವ ಜಗತ್ತನ್ನು ಅಳಲಾರ. ಎದೆಯ ತುಂಬೆಲ್ಲ ಬರೀ ದ್ವೇಷವನ್ನೇ ತುಂಬಿಕೊಂಡಿರುವವನು ಜಗತ್ತನ್ನು ಪ್ರೀತಿಸಲಾರ. ಆದರೆ ಹೃದಯದ ಪುಟ್ಟ ಗುಡಿಯೊಳಗೆ ಸ್ವಚ್ಛವಾದ ಸ್ನೇಹ ಪ್ರೀತಿ ತುಂಬಿಕೊಂಡವನು ಜಗತ್ತನ್ನು ಗೆಲ್ಲಬಲ್ಲ, ಆಳಬಲ್ಲ, ಪ್ರೀತಿಸಬಲ್ಲ.

೯) ಜಗತ್ತು ವಿಶಾಲವಾದಷ್ಟು ಯಾರ ಮನಸ್ಸು ವಿಶಾಲವಾಗಿರುವುದಿಲ್ಲ. ಕಣಿವೆ ಕಿರಿದಾಗಿರುವಷ್ಟು ಯಾರ ಮನಸ್ಸು ಕಿರಿದಾಗಿರುವುದಿಲ್ಲ. ಆಕಾಶ ಪವಿತ್ರವಾಗಿರುವಷ್ಟು ಯಾರ ಮನಸ್ಸು ಪವಿತ್ರವಾಗಿರುವುದಿಲ್ಲ. ಭೂಮಿ ಭದ್ರವಾಗಿರುವಷ್ಟು ಯಾರ ಮನಸ್ಸು ಭದ್ರವಾಗಿರುವುದಿಲ್ಲ.

೧೦) ಯೌವ್ವನದಲ್ಲಿ ಯುವಕರಿಗೆ ಕತ್ತೆಯೂ ಸಹ ಸುಂದರ ಕನ್ಯೆಯಂತೆ ಕಾಣುತ್ತದೆ, ಯುವತಿಯರಿಗೆ ಒಡೆದ ಕನ್ನಡಿಯು ಸಹ ಸರ್ವಾಂಗ ಸುಂದರನಂತೆ ಕಾಣುತ್ತದೆ. ಅದಕ್ಕಾಗಿಯೇ ಪ್ರೀತಿಯೆಂಬ ಮಾಯೆ ಯುವಜನಾಂಗವನ್ನು ಬೇಡವೆಂದ್ರು ಬೇಗನೆ ಆವರಿಸಿಕೊಂಡು ಬಿಡುತ್ತದೆ.

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

೧೧) ಶಾಲೆಯಲ್ಲಿ ಶ್ರದ್ಧೆಯಿಂದ ಕಲಿತವನಿಗಿಂತ ಸಂಕಷ್ಟಕ್ಕೆ ಸಿಲುಕಿ, ಕ್ರೂರ ವಿಧಿಯೊಂದಿಗೆ ಆಟವಾಡುತ್ತಾ ಬದುಕಿನ ಪಾಠಶಾಲೆಯಲ್ಲಿ ಕಲಿತವನೇ ಶ್ರೇಷ್ಠ…

೧೨) ಜೇಬಲ್ಲಿ ಎಂಟಾನೆ ಇಲ್ಲದಿದ್ದ್ರೂ ಎಂಟೆದೆ ಗುಂಡಿಗೆ ಇರಬೇಕು. ಮನಿ ಪವರ್, ಮ್ಯಾನ್ ಪವರ್ ಇಲ್ಲದಿದ್ದ್ರೂ ಮೈಂಡ್ ಪವರ್ ಇರಬೇಕು. ಆವಾಗ್ಲೆ ನಾವು ನಮ್ಮಿಷ್ಟದಂತೆ ಬದುಕೋಕೆ ಆಗೋದು…

೧೩) ಜಗತ್ತು ಯಾವತ್ತೂ ಕೂಡ ಮುಳಗೋ ಸೂರ್ಯನಿಗೆ ನಮಸ್ಕಾರ ಮಾಡಲ್ಲ. ಸೋತವನಿಗೆ ಸನ್ಮಾನ ಸಿಗಲ್ಲ. ಸತ್ತವನಿಗೆ ಸ್ವರ್ಗ ಸಿಗಬಹುದು. ಆದರೆ ಸೋತವನಿಗಲ್ಲ…

೧೪) ಪ್ರೀತಿಗಿಂತ ಸ್ನೇಹದಲ್ಲೇ ಹೆಚ್ಚಿನ ಸ್ವಾರ್ಥ, ದ್ವೇಷ, ಮೋಸ ಅಡಗಿದೆ. ಆದರೆ ಅದು ನಮಗೆ ಅರ್ಥವಾಗಲ್ಲ.

೧೫) ಕನಸು ನೋಡದಿರೋದನ್ನೆಲ್ಲ ತೋರಿಸುತ್ತೆ. ಆದ್ರೆ ಮನಸ್ಸು ಸಿಗದಿರೋದನ್ನೇ ಜಾಸ್ತಿ ಬಯಸುತ್ತೆ…

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

೧೬) ವ್ಯಕ್ತಿಗಳನ್ನು ಪ್ರೀತಿಸುವುದಕ್ಕಿಂತ ವ್ಯಕ್ತಿತ್ವಗಳನ್ನು ಪ್ರೀತಿಸುವುದು ಲೇಸು. ಯಾಕೆಂದರೆ ವ್ಯಕ್ತಿಗಳು ಬದಲಾದರೂ ವ್ಯಕ್ತಿತ್ವಗಳು ಬದಲಾಗಲ್ಲ.

೧೭) ಇನ್ನೊಬ್ಬರಲ್ಲಿ ಅಡಗಿದ್ದ ಕಲೆಯನ್ನು ಗುರ್ತಿಸೋದು ಕೂಡ ಒಂದು ಕಲೆ. ಆ ಕಲೆಯನ್ನು ಬಲ್ಲಂಥ ಮಹಾನ್ ಕಲಾವಿದರು ತುಂಬಾ ಕಡಿಮೆಯಿದಾರೆ.

೧೮) ಸೇಡಿಗಾಗಿ ಹೊರಟವಳು ಸುಡುಗಾಡು ಸೇರುತ್ತಾಳೆ. ಪ್ರೀತಿಗಾಗಿ ನಾಟಕವಾಡಿದವಳು ಪರದೇಶಿಯಾಗುತ್ತಾಳೆ. ಅರ್ಥವಿಲ್ಲದ ಅಹಂಕಾರವುಳ್ಳವಳು ಅಂರ್ತಗತಳಾಗುತ್ತಾಳೆ. ಅತೀಯಾಸೆವುಳ್ಳವಳು ಅಲೆಮಾರಿಯಾಗುತ್ತಾಳೆ. ಸುಮ್ಮನೆ ಸೋಲೊಕೆ ಸಿದ್ದವಾದವಳು ಸೋಮಾರಿಯಾಗುತ್ತಾಳೆ. ಇದನ್ನು ಅರ್ಥಮಾಡಿಕೊಂಡವಳು ಸಂತೋಷವಾಗಿರುತ್ತಾಳೆ.

೧೯) ಹೊಗಳಿಕೆಯ ಮಾತುಗಳಿಂದ ಹೊಟ್ಟೆ ತುಂಬಲ್ಲ. ಮಂಜಿನ ಹನಿಗಳಿಂದ ಬೆಳೆ ಬೆಳೆಕ್ಕಾಗಲ್ಲ. ಕಣ್ಣೀರ ಕಹಾನಿಗಳಿಂದ ಕೀರ್ತಿ ಲಭಿಸಲ್ಲ. ಪ್ರೀತಿಸಿದವರು ಸಿಗದಿದ್ರೆ ನಮ್ಮ ಬಾಳೇನು ಕತ್ತಲಾಗಲ್ಲ..

೨೦) ಕುದುರೆ ವಿಶ್ರಾಂತಿ ಪಡೆಯುತ್ತಿರಬೇಕಾದ್ರೆ ಇಲ್ಲವೇ ಕುದುರೆಗೆ ಅನಾರೋಗ್ಯ ಬಾಧಿಸಿದರೆ ಕತ್ತೆಗಳಿಗೆ ಕುದುರೆಯ ಬೇಡಿಕೆ ಬರುತ್ತೆ. ಆದ್ರೆ ಯಾವತ್ತಿದ್ದ್ರು ಕುದುರೆ ಕುದುರೆನೇ, ಕತ್ತೆ ಕತ್ತೆನೇ…

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

೨೧) ಮುರಿದು ಮಡಿದ ಹೃದಯಕ್ಕೆ
ಮುಗಿಯದ ವಿರಹವೇ ಉಡುಗೊರೆ,
ಪ್ರೀತಿಯಿಲ್ಲದೆ ಬಾಡಿದ ಮೊಗಕ್ಕೆ
ಮಾಸಿದ ನಗುವಿನ ಮೌನವೇ ಆಸರೆ…

೨೨) ಸೋದರಿನಾ ಸುಂದರಿ ಅನ್ನೋರು ತುಂಬಾ ಜನ ಇದ್ದಾರೆ. ಆದರೆ ಸುಂದರಿನಾ ಸೋದರಿ ಅನ್ನೋರು ತುಂಬಾ ಕಡಿಮೆ ಜನ ಇದ್ದಾರೆ. ಅದಕ್ಕೆನೆ ಹರೆಯ ಎಂಬ ಹೊಳೆ ಹಾದಿ ತಪ್ಪಿ ಹಾದರದ ಸಾಗರಕ್ಕೆ ಹೊರಟಿರುವುದು…

೨೩) ಹುಡ್ಗೀರು ಇಷ್ಟ ಪಡೋವಾಗ ಜಾಸ್ತಿ ಪೋರ್ಕಿಗಳನ್ನೇ ಇಷ್ಟಪಟ್ಟು ಲವ್ ಮಾಡ್ತಾರೆ. ನಂತ್ರ ನೀನು ಸರಿಯಿಲ್ಲ ಅಂತಾ ಸಲೀಸಾಗಿ ಸಾರಾಯಿ ಕೊಟ್ಟು ಹೊಂಟೊಗ್ತಾರೆ…

೨೪) ಹಾವಿಗೆ ಹಾಲೆರೆದಷ್ಟು ವಿಷ ಜಾಸ್ತಿ ಆಗುತ್ತೆ. ಹುಡ್ಗೀರ ಮೇಲಿನ ಪ್ರೀತಿ ಜಾಸ್ತಿ ಆದಷ್ಟು ಹೃದಯದ ಕಣ್ಣು (ಬುದ್ಧಿ) ಮಂಜಾಗುತ್ತೆ.

೨೫) ಆತ್ಮವಂಚನೆ ಮತ್ತು ಆತ್ಮಹತ್ಯೆ ಎರಡು ಒಂದೇ. ಯಾಕಂದ್ರೆ ಬದುಕಿದ್ದರೂ ಸತ್ತಂತೆ ಇರೋದು, ನಿಜವಾಗಿಯೂ ಸಾಯೋದು ಎರಡು ಒಂದೇ…

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

೨೬) ಲವ್ವರ್ ಕೈ ಕೊಟ್ಟ ಮೇಲೆ ಕಂಪನಿ ಫೋನು, ಮೆಸೆಜುಗಳೇ ಆಸರೆ…

೨೭) ಯಾರು ಕೂಡ ತಲೆಗೆ, ತಲೆಮಾರಿಗೆ ಬೆಲೆ ಕೊಡಲ್ಲ. ತಲೆ ಮೇಲಿನ ಕೀರಿಟಕ್ಕೆ ಮಾತ್ರ ಬೆಲೆ ಕೊಡ್ತಾರೆ…

೨೮) ಎಷ್ಟೋ ಮಂದಿ ತಮ್ಮ ಹೃದಯವನ್ನೇ ದಾನ ಮಾಡಿ ಸತ್ತಿದ್ದಾರೆ. ಆದರೆ ಕೆಲವರು ತಮ್ಮ ಹೃದಯದಲ್ಲಿರುವ ಪ್ರೀತಿಯನ್ನು ದಾನ ಮಾಡದೆ ಪ್ರೀತಿಪಾತ್ರರನ್ನು ಸತಾಯಿಸಿ ಸಾಯಿಸುತ್ತಿದ್ದಾರೆ.

೨೯) ಕಲಬೆರಕೆ ಹಾಲ ಕುಡಿಯೋದಕ್ಕಿಂತ ಪರಿಶುದ್ಧ ಆಲ್ಕೋಹಾಲ್ ಕುಡಿಯೋದು ಎಷ್ಟೋ ವಾಸಿ…

೩೦) ಪ್ರೀತಿ ಸಿಕ್ಕ್ರೆ ಜೀವವಾಹಿನಿ.
ಸಿಗದಿದ್ರೆ ಶವವಾಹಿನಿ…

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

೩೧) ಚಪ್ಪಲಿ ಚಿನ್ನದಾದ್ದ್ರೂ ಹೊಡೆದ ಮೇಲೆ ಮರ್ಯಾದೆ ಹೋಗೇ ಹೋಗುತ್ತೆ…

೩೨) ಬಡವರು ಭಾವನೆಗಳಿಗೆ ಬೆಲೆ ಕೊಡ್ತಾರೆ. ಆದ್ರೆ ಶ್ರೀಮಂತರು ಭಾವನೆಗಳಿಗೆ ಬೆಲೆ ಕಟ್ತಾರೆ…

೩೩) ಹಾಲು ಕೆಟ್ಟಾಗ್ಲೆ ಮೊಸರಾಗೋದು,
ಹುಡುಗಿ ಕೆಟ್ಟಾಗ್ಲೆ ಬಸರಾಗೋದು
ನಾಚಿಕೆ ಬಿಟ್ಟಾಗ್ಲೆ ಮಕ್ಕಳಾಗೋದು…

೩೪) ಒಂದು ಹೆಣ್ಣಿನ ಫೀಲಿಂಗ್ಸನಾ ಮತ್ತೊಂದು ಹೆಣ್ಣು ಅರ್ಥಾ ಮಾಡ್ಕೊಳ್ಳದೇ ಇರಬಹುದು. ಒಬ್ಬ ಪ್ರೇಮಿಯ ಫೀಲಿಂಗ್ಸನಾ ಮತ್ತೊಬ್ಬ ಪ್ರೇಮಿ ಅರ್ಥ ಮಾಡ್ಕೊಳ್ಳದೇ ಹೋಗಬಹುದು. ಆದ್ರೆ ಒಬ್ಬ ವಿರಹಿಯ ಫೀಲಿಂಗ್ಸನಾ ಮತ್ತೊಬ್ಬ ವಿರಹಿ ಖಂಡಿತ ಅರ್ಥಾ ಮಾಡ್ಕೊತ್ತಾನೆ.

೩೫) ಹಗ್ಗದಿಂದ ಮೂಗುದಾರಾನೂ ಹಾಕಬಹುದು, ನೇಣು ಹಾಕಬಹುದು.

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

೩೬) ಹುಡುಗರ ಕಣ್ಣಿಂದ ಜಲಪಾತ ಬಂದ್ರೂ ಸಹ ಯಾರು ಕೇರ್ ಮಾಡಲ್ಲ. ಆದ್ರೆ ಅದೇ ಹುಡ್ಗೀರ ಕಣ್ಣಿಂದ ಒಂದು ಮಂಜಿನ ಹನಿ ಬಂದ್ರೂ ಎಲ್ಲ್ರೂ ಕಾಳಜಿವಹಿಸತ್ತಾರೆ.

೩೭) ಓದಿದವರೆಲ್ಲ ಸೆಟ್ಲಾಗಿಲ್ಲ.
ಸೆಟ್ಲಾದವರೆಲ್ಲ ಓದಿರಲ್ಲ.
ಫಸ್ಟಬೆಂಚರ್ಸಯೆಲ್ಲ ಗ್ರೇಟ್ ಅಲ್ಲ.
ಲಾಸ್ಟ್ ಬೆಂಚರ್ಸಯೆಲ್ಲ ಕ್ರಿಮಿನಲ್ ಅಲ್ಲ.

೩೮) ಗಡ್ಡ ಬಿಟ್ಟವರೆಲ್ಲ ಬುದ್ಧಿಜೀವಿಗಳಲ್ಲ,
ವಯಸ್ಸಾದವರೆಲ್ಲ ವಿವೇಕಿಗಳಲ್ಲ…

೩೯) ನಮ್ಮ ನೆರಳೇ ನಮಗೆ ಭಯ ಹುಟ್ಟಿಸುತ್ತೆ. ಅಂದ್ಮೇಲೆ ನೆನಪುಗಳು ಕಾಡೋದ್ರಲ್ಲಿ ಅಚ್ಚರಿಯೇನಿಲ್ಲ.

೪೦) ಮನುಷ್ಯನ ಪ್ರತಿ ಮಾತಲ್ಲೂ ಮೋಸ ಅಡಗಿದೆ.

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

೪೧) ನಾವು ಬೇರೆಯವರಿಗೆ ಪುಕ್ಸಟ್ಟೆಯಾಗಿ ಹೃದಯ ಕೊಟ್ಟಿದ್ದಕ್ಕೆ ಅವರು ನಮ್ಮ ಪ್ರೀತಿಗೆ ಚಿಲ್ಲ್ರೆ ಬೆಲೆ ಕಟ್ಟಿ, ಕಣ್ಣೀರ್ನಾ ಟಿಪ್ಸ ಆಗಿ ಕೊಡ್ತಾರೆ. ಅದಕ್ಕೆ ಪುಕ್ಸಟ್ಟೆಯಾಗಿ ಯಾರಿಗೂ ಏನನ್ನು ಕೊಡಬಾರದು.

೪೨) ಹಾಳು ಮಾಡೋ ಹುಡ್ಗೀರ ಸಹವಾಸ ಮಾಡೋದಕ್ಕಿಂತ, ಹಾಳಾದ ಹುಡ್ಗೀರ ಸಹವಾಸ ಮಾಡೋದು ಲೇಸು.

೪೩) ಮಡಿಲಲ್ಲಿ ಮುಳ್ಳುಗಳು ಮನೆಮಾಡಿದ್ದ್ರೂ ಗುಲಾಬಿ ನಗುತ್ತಿರುತ್ತದೆ. ಅದೇ ರೀತಿ ಮನೆಯಲ್ಲಿ ಮಡದಿ ಎಷ್ಟೇ ಮುಳ್ಳುಗಳು ನಾಟಿದ್ರೂ ನಗುತ್ತಲೇ ಎಲ್ಲವನ್ನು ನೋಡಿಕೊಳ್ಳುತ್ತಾಳೆ.

೪೪) ಕೆಲವರ ಕಣ್ಣುಗಳು ಹಳದಿಯಾಗಿರುತ್ತವೆ. ಹಲವರ ಕಣ್ಣುಗಳು ಕೆಂಪಾಗಿರುತ್ತವೆ. ಬಹುಜನರ ಕಣ್ಣುಗಳು ನೀಲಿಯಾಗಿರುತ್ತವೆ.

೪೫) ದ್ವೇಷವಿರುವಲ್ಲಿ ಪ್ರೀತಿ ಇರುವಂತೆ, ಪ್ರೀತಿ ಇರೋವಲ್ಲಿ ದ್ವೇಷವೂ ಇರುತ್ತದೆ.

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

೪೬) ಬೀಸೋಗಾಳಿ ಒಂಟಿ ದೀಪವನ್ನು ಆರಿಸಬಹುದು. ಆದರೆ ಸಾವಿರಾರು ದೀಪಗಳನ್ನು ಆರಿಸಲು ಸುಂಟರಗಾಳಿಗೂ ಸಾಧ್ಯವಿಲ್ಲ.

೪೭) ಕೆಲ ಹುಡುಗಿಯರಿಗೆ ಕೊಬ್ಬು, ಕೊಲೆಸ್ಟರಾಲು ಜಾಸ್ತಿ. ಯಾಕಂದ್ರೆ ಅವರು ಬರೀ ಫಾಸ್ಟ್ ಫೂಡ್ ತಿಂದು ಫಾಸ್ಟಾಗುವ ಯೋಚನೆಯಲ್ಲೇ ಇರ್ತಾರೆ.

೪೮) ಒಂದು ಹುಡ್ಗಿ ನಕ್ಕ್ರೆ ಒಂದು ಹೂ ಅರಳುತ್ತೋ ಇಲ್ವೋ ಗೊತ್ತಿಲ್ಲ. ಆದರೆ ನಾಲ್ಕು ಹುಡುಗರ ಹೃದಯ ಮಾತ್ರ ಅತ್ತೇ ಅಳುತ್ತೇ…

೪೯) ರೋಡ್ ರೋಡ್ ಅಲೆದವರೆಲ್ಲ ರೋಲ್ ಮಾಡೆಲಗಳಾಗಿದ್ದಾರೆ. ಬೀದಿಬೀದಿ ಅಲೆದವರೆಲ್ಲ ಬಿಲೆನಿಯರಗಳಾಗಿದ್ದಾರೆ. ಆದರೆ ಅವರಲ್ಲಿ ಒಂದು ಕನಸು, ಗುರಿಯಿತ್ತು. ನಮ್ಮಲ್ಲಿ ಅದಿಲ್ಲ.

೫೦) ಕಲ್ಲು ಹೃದಯದಲ್ಲಿ ಕವಿತೆ ಅರಳಲ್ಲ,
ಬರಡು ಹೃದಯದಲ್ಲಿ ಭಾವನೆ ಉಕ್ಕಲ್ಲ,
ಪಾಪಿ ಹೃದಯದಲ್ಲಿ ಪ್ರೀತಿ ಹುಟ್ಟಲ್ಲ…

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

೫೧) ಬಡತನ ಹೋಗಿ ಸಿರಿತನ ಬರಬಹುದು. ಆದ್ರೆ ಬಡವನ ಹೃದಯದಲ್ಲಿ ಗೆಳೆತನ ಹಾಗೇ ಇರುತ್ತೆ.

೫೨) ಬೆವರು ಸುರಿಸದವರಿಗೆ ಪರಿಶ್ರಮದ ಬೆಲೆ ಗೊತ್ತಾಗಲ್ಲ. ಶೋಕಿಗಾಗಿ ಪ್ರೀತ್ಸೊ ತಿರುಬೋಕಿಗಳಿಗೆ ನಿಜವಾದ ಪ್ರೀತಿಯ ಬೆಲೆ ಗೊತ್ತಿರಲ್ಲ.

೫೩) ಎದೆನೋವಿಗೆ ಔಷಧಿ ಸಾಕಷ್ಟಿವೆ. ಆದ್ರೆ ಎದೆಲಿರೋ ನೋವಿಗೆ ಒಂದೂ ಔಷಧಿ ಇಲ್ಲ.

೫೪) ಬುದ್ಧಿಯಿಲ್ಲದವರ ಮುಖ್ಯಕಾಯಕ ಬೇರೆಯವರಿಗೆ ಬಿಟ್ಟಿಯಾಗಿ ಬುದ್ಧಿವಾದ ಹೇಳೋದು.

೫೫) ಸುಂದರವಾಗಿರೋ ಕೆಲವು ಹುಡ್ಗೀರು ಬಿಳಿಕಾಗೆಗಳಿದ್ದಾಗೆ. ಯಾಕಂದ್ರೆ ಅವರು ಫೇಸಲ್ಲಿ ಮಾತ್ರ ವೈಟು. ಹಾರ್ಟಲ್ಲಿ ಬ್ಲ್ಯಾಕು ಮತ್ತೆ ವೀಕು…

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

೫೬) ತಲೆಮೇಲಿರೋ ಹೆನನ್ನಾ Clinic + All Clear ಶಾಂಪು ಹಾಕಿ ಹೊಸ್ಕಾಗಿ ಬಿಡಬಹುದು. ಆದ್ರೆ ತಲೆಯಲ್ಲಿರೋ ಹೆಣ್ಣನ್ನಾ Surf Excel Detergent ಹಾಕಿ ಉಜ್ಜಿದ್ದ್ರು ಹೊಸ್ಕಾಕ್ಕಾಗಲ್ಲ.

೫೭) ಹುಡ್ಗೀರು ಮಾನ್ಸೂನ್ ಇದ್ದಾಗೆ, ಯಾವಾಗ ಬರ್ತಾರೆ? ಯಾವಾಗ ಹೋಗ್ತಾರೆ ಅನ್ನೋದು ಅವರ್ಗೆ ಗೊತ್ತಾಗಲ್ಲ.

೫೮) ಪ್ರೀತ್ಸೊರೆಲ್ಲ ಮದುವೆಯಾಗಲ್ಲ. ಮದುವೆಯಾದವರೆಲ್ಲ ಪ್ರೀತಿಸಲ್ಲ. ಪ್ರೀತಿ ಅನ್ನೋದು ಹೃದಯಗಳ ಕುದುರೆ ವ್ಯಾಪಾರವಲ್ಲ. ಅದು ನಮ್ಮ ಕನಸುಗಳ ಸಾಕಾರದೊಂದಿಗೆ ಜೀವದ, ಜೀವನದ ಸಾಕ್ಷಾತ್ಕಾರ…

೫೯) ಪ್ರೇಮಿಗಳಿಗೆ ಫೆಬ್ರುವರಿ 14ಕ್ಕೆ ಮಾತ್ರ ತಮ್ಮ ಲವ್ವರ್ಸ ನೆನಪಾಗ್ತಾರೆ. ಆದರೆ ವಿರಹಿಗಳಿಗೆ ಪ್ರತಿಕ್ಷಣ ಅವರ ಲವ್ವರ್ಸ ನೆನಪಾಗ್ತಾರೆ.

೬೦) ಒಂದ್ಸಲ ಚಪ್ಪಲಿ ಕಿತ್ತೊದ್ರೆ ಹೋಲಿಸಿಕೋಬಹುದು. ಎರಡ್ಸಲ, ಮೂರ್ಸಲ ಕಿತ್ತೊದ್ರೆ ಹೋಲಿಸಿಕೊಂಡು ಮತ್ತೆ ಹಾಕೋಬಹುದು. ಆದ್ರೆ ಪ್ರತಿಸಲ ಕಿತ್ರೊದ್ರೆ ಚಪ್ಪಲಿನಾ ಬದಲಾಯಿಸಲೇಬೇಕಾಗುತ್ತದೆ. ಅದೇ ರೀತಿ ನಮ್ಮ ಸಂಬಂಧಗಳು…

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

೬೧) ನಮ್ಮ ಜಾನಪದ ಹಾಡುಗಳನ್ನು ಪ್ರೀತಿಸಿ, ಉಳಿಸಿ, ಬೆಳೆಸಿದವರು ಟ್ರ್ಯಾಕ್ಟರ್ ಡ್ರೈವರಗಳು ಮಾತ್ರ…

೬೨) ಕಲ್ಲು ಹೃದಯದವರನ್ನು ಬದಲಾಯಿಸಬಹುದು. ಆದ್ರೆ ಕೊಳಕು ಹೃದಯದವರನ್ನು ಬದಲಾಯಿಸಲು ಸಾಧ್ಯವಿಲ್ಲ.

೬೩) ವೃತ್ತಿಗೆ ನಿವೃತ್ತಿಯಿದೆ. ಆದರೆ ಪ್ರವೃತ್ತಿಗೆ ನಿವೃತ್ತಿಯಿಲ್ಲ…

೬೪) ಒಳ್ಳೇ ಮಾತುಗಳನ್ನು ಆಡೋರೆಲ್ಲ ಒಳ್ಳೆಯವರಲ್ಲ…

೬೫) ಪಾಕಿಸ್ತಾನ ಬಾರ್ಡರನಲ್ಲಿ ಹುಟ್ಟೋ ಉಗ್ರಗಾಮಿಗಳನ್ನು ಸಾಯಿಸಬಹುದು. ಆದ್ರೆ ಎದೆಯಲ್ಲಿ ಹುಟ್ಟೋ ಪ್ರೀತಿನಾ ಸಾಯಿಸಕ್ಕಾಗಲ್ಲ…

ಅರ್ಧ ಸತ್ಯಗಳು : Kannada Status - whatsapp status Kannada - Facebook Status in Kannada - Kannada Quotes - Life Quotes Kannada

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books