ಬಿಜನೆಸನ ಭಯವನ್ನು ಸಾಯಿಸುವುದು ಹೇಗೆ? – How to Kill fear of Business? in Kannada

You are currently viewing ಬಿಜನೆಸನ ಭಯವನ್ನು ಸಾಯಿಸುವುದು ಹೇಗೆ? – How to Kill fear of Business? in Kannada

ಬಿಜನೆಸ್ ಲೆಸನ್ – 04

ಬಿಜನೆಸ್ ಸ್ಟಾರ್ಟ ಮಾಡುವಾಗ ಒಂದಲ್ಲ, ಎರಡಲ್ಲ ಹತ್ತಾರು ತರಹದ ಭಯಗಳಿರುತ್ತವೆ. ಫ್ಯಾಮಿಲಿಯಿಂದ ಅಪೋಜಿಷನ ಇದ್ದೇ ಇರುತ್ತದೆ. ಸುಮ್ಮನೆ ಗವರ್ನಮೆಂಟ್ ಜಾಬ್ ಮಾಡು ಎಂಬ ಬಿಟ್ಟಿ ಸಲಹೆ ಇರುತ್ತದೆ. ಜೊತೆಗೆ ಫ್ರೆಂಡ್ಸಗಳಿಂದ, ರಿಲೆಟಿವ್ಸಗಳಿಂದ ಡಿಮೊಟಿವೇಷನ ಇರುತ್ತದೆ. ಇವುಗಳ ಜೊತೆಗೆ ಕೆಲವೊಂದಿಷ್ಟು ಭಯಗಳು ಸ್ಟಾರ್ಟ ಆಗುತ್ತವೆ. ಉದಾಹರಣೆಗಾಗಿ ;

1) ಎಲ್ಲ ಸರಿಯಾಗಿ ಮಾಡಿದ್ರೂ ಬಿಜನೆಸ್ ಫೇಲ್ ಆದರೆ ಏನ ಮಾಡೋದು?

2) ಬಿಜನೆಸ್ ಫೇಲ್ ಆಗಿ ಎಲ್ಲ ಕಳೆದುಕೊಂಡು ಬೀದಿಗೆ ಬಂದ್ರೆ ಏನ ಮಾಡೋದು?

3) ಬಿಜನೆಸ್ ಲೋನ ತೀರಿಸೋಕ್ಕಾಗದಿದ್ರೆ? ಬ್ಯಾಂಕನವರು ಮನೆ ಗದ್ದೆಯೆಲ್ಲ ಹರಾಜಾಕಿದ್ರೆ?

4) ನಗೋರ ಮುಂದೆ ನಾನು ಸೊತೋದ್ರೆ? Etc, Etc, Etc…

ಬಿಜನೆಸ್ ಸ್ಟಾರ್ಟ ಮಾಡೋಕ್ಕಿಂತ ಮುಂಚೆ ಈ ತರಹದ ನೂರಾರು ಭಯಗಳಿರುತ್ತವೆ. ಇವೆಲ್ಲ ತರಹದ ಭಯಗಳು ಇರಲೇಬೇಕು. ಎಲ್ಲರಿಗೂ ಹೊಸ ಬಿಜನೆಸ್ ಸ್ಟಾರ್ಟ ಮಾಡುವಾಗ ಭಯ ಇದ್ದೇ ಇರುತ್ತದೆ. ಏಕೆಂದರೆ ಸಿಕ್ಕಾಪಟ್ಟೆ ದುಡ್ಡಾಕಿರ್ತಾರೆ. ನಿಮಗೂ ಸಹ ಬಿಜನೆಸ್ ಸ್ಟಾರ್ಟ ಮಾಡುವಾಗ ಸ್ವಲ್ಪ ಭಯ ಇರಲೇಬೇಕು. ಈ ಭಯವೇ ನಿಮಗೆ ಸರಿಯಾಗಿ ಯೋಚಿಸುವಂತೆ ಮಾಡುತ್ತದೆ. ಆತುರದ ನಿರ್ಧಾರಗಳಿಂದ ನಿಮ್ಮನ್ನು ತಪ್ಪಿಸಿ ನಷ್ಟವಾಗುವುದನ್ನು ತಡೆಹಿಡಿಯುತ್ತದೆ. ಈ ಭಯವಿರಲಿ ಪರವಾಗಿಲ್ಲ. ಈ ಭಯ ಒಳ್ಳೆದಾಗಿದೆ ಮತ್ತು ಅವಶ್ಯಕವಾಗಿದೆ. ಆದರೂ ಸಹ ನೀವು ಈ ಭಯವನ್ನು ದಾಟಿ ಮುಂದುವರೆಯಬೇಕಾಗುತ್ತದೆ. ಸೋ ಬಿಜನೆಸನ ಭಯವನ್ನು ಸಾಯಿಸಲು ಕೆಲವೊಂದಿಷ್ಟು ಸೂಕ್ತ ಉಪಾಯಗಳು ಇಲ್ಲಿವೆ ;

ಬಿಜನೆಸನ ಭಯವನ್ನು ಸಾಯಿಸುವುದು ಹೇಗೆ? - How to Kill fear of Business? in Kannada

1) ನೀವು ಮಾಡಬೇಕೆಂದಿರುವ ಬಿಜನೆಸ್ ಬಗ್ಗೆ ಸ್ಟಡಿ ಮಾಡಿ. ಮಾರ್ಕೆಟನಲ್ಲಿ ಈಗಾಗಲೇ ಯಾರಾದರೂ ಆ ಬಿಜನೆಸ್ಸನ್ನು ಮಾಡುತ್ತಿದ್ದಾರಾ ಎಂಬುದನ್ನು ಗಮನಿಸಿ. ಮಾಡುತ್ತಿದ್ದರೆ ಅವರನ್ನು ಗಮನಿಸಿ. ಅವರ ಬಿಜನೆಸ್ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ಆನಂತರ ನೀವು ಮಾಡಬೇಕೆಂದಿರುವ ಬಿಜನೆಸ್ಸನ್ನು ಅತೀ ಚಿಕ್ಕ ಹಂತದಲ್ಲಿ ಟೆಸ್ಟ್ ಆ್ಯಂಡ್ ಟ್ರೈಲ್ ಮಾಡಿ.

ಉದಾ ; ನೀವು ಬಟ್ಟೆ ವ್ಯಾಪಾರ ಮಾಡಬೇಕೆಂದಿದ್ದರೆ ಮೊದಲು ಸ್ವಲ್ಪ ಬಟ್ಟೆಗಳನ್ನು ಮಾತ್ರ ತರಿಸಿ. ಅವು ಮಾರಾಟವಾಗುತ್ತವೇಯೋ ಇಲ್ಲವೋ ನೋಡಿ. ಮಾರಾಟವಾದರೆ ಯಾವುದೇ ಸಮಸ್ಯೆಯಿಲ್ಲ ಮುಂದುವರೆಯಿರಿ. ಮಾರಾಟವಾಗದಿದ್ದರೆ ಎಲ್ಲಿ ಸಮಸ್ಯೆಯಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿ. ಕಸ್ಟಮರ್ಸಗಳಿಂದ ಫೀಡಬ್ಯಾಕನ್ನು ಪಡೆದುಕೊಳ್ಳಿ. ಅವರ ಫೀಡಬ್ಯಾಕ ನಿಮಗೆ ಅತಿದೊಡ್ಡ ಗಿಫ್ಟಾಗಿದೆ. ಅದನ್ನು ಬಿಡಬೇಡಿ, ಕ್ಯಾಚ್ ಮಾಡಿಕೊಳ್ಳಿ. ಸರಿಯಾಗಿ ಅನಲೈಜ ಮಾಡಿ, ಸರಿಯಾಗಿ ಅಡ್ವಟೈಜ ಮಾಡಿ. ಯಾವುದೇ ಬಿಜನೆಸ್ ಸಡನ್ನಾಗಿ ಹಿಟ್ ಆಗಲ್ಲ. ಸಾವಕಾಶವಾಗಿ ಸಕ್ಸೆಸಫುಲ್ ಆಗುತ್ತದೆ. ಬಿಜನೆಸಲ್ಲಿ ನಿಮ್ಮ ತಾಳ್ಮೆ, ಸಂಯಮ, ನಿಯತ್ತು, ಕಮ್ಯುನಿಕೆಷನ ಕಲೆ, ಮಾರ್ಕೆಟಿಂಗ್ ಸ್ಕೀಲ್ಸ ಎಲ್ಲ ಮುಖ್ಯವಾಗುತ್ತವೆ. ಅವುಗಳ ಮೇಲೆ ಹೆಚ್ಚಿನ ಗಮನ ಹರಿಸಿ.

ಬಿಜನೆಸನ ಭಯವನ್ನು ಸಾಯಿಸುವುದು ಹೇಗೆ? - How to Kill fear of Business? in Kannada

2) ನಿಮ್ಮ Skill ಮತ್ತು Will ಎರಡನ್ನೂ ಸ್ಟ್ರಾಂಗ ಮಾಡಿಕೊಳ್ಳಿ. ಮೊದಲು ನಿಮ್ಮನ್ನು ನೀವು ನಂಬಿ. Passionate ಆಗಿರಿ. ನಿಮ್ಮ ಸುತ್ತಮುತ್ತಲಿರುವ ಡಿಮೋಟಿವೇಟರಗಳನ್ನು ದೂರವಿಡಿ. ರಾಂಗ್ ವ್ಯಕ್ತಿಗಳಿಂದ ಯಾವುದೇ ಅಡ್ವೈಜನ್ನು ತೆಗೆದುಕೊಳ್ಳಬೇಡಿ. ಸರಿಯಾದ ವ್ಯಕ್ತಿಗಳಿಂದ ಅಡ್ವೈಜ ತೆಗೆದುಕೊಳ್ಳಿ. ಸೋಲಿಗೆ ಹೆದರಬೇಡಿ. ಏಕೆಂದರೆ ಸೋಲೆ ಗೆಲುವಿನ ಮೊದಲ ಮೆಟ್ಟಿಲಾಗಿದೆ.

ಬಿಜನೆಸನ ಭಯವನ್ನು ಸಾಯಿಸುವುದು ಹೇಗೆ? - How to Kill fear of Business? in Kannada

3) ಯಾವುದೇ ಬಿಜನೆಸ್ ಸ್ಟಾರ್ಟ ಮಾಡುವಾಗ ಯಾರು ಸಹ 100% ಪರಫೆಕ್ಟಾಗಿರುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಮಿಸ್ಟೇಕಗಳಿಂದಲೇ ಕಲಿಯುತ್ತಾರೆ. ತಮ್ಮ ಮಿಸ್ಟೇಕ್ಸಗಳಿಂದಲೇ ತಮ್ಮನ್ನು ತಾವು ಇಂಪ್ರೂವ ಮಾಡಿಕೊಳ್ಳುತ್ತಾರೆ. ತಮ್ಮ ಎಕ್ಸಪಿರಿಯನ್ಸನ್ನು ಹೆಚ್ಚಿಸುಕೊಳ್ಳುತ್ತಾರೆ. ನಿಮ್ಮ ಫಸ್ಟ್ ಪ್ರೋಡಕ್ಟ ಯಾವತ್ತು ನಿಮ್ಮ ಫೈನಲ್ ಪ್ರೋಡಕ್ಟ ಆಗಲ್ಲ. Your first product is not your final product. Your first business may or may not be your last business. ಸೋ ಡೇ ಟು ಡೇ ಇಂಪ್ರೂವ ಆಗಿ. ಇನಕಮ್ ತಾನಾಗಿಯೇ ಹೆಚ್ಚಾಗುತ್ತಾ ಹೋಗುತ್ತದೆ.

ಬಿಜನೆಸನ ಭಯ ಒಳ್ಳೆದಾಗಿದೆ. ಅದನ್ನು ಲಾಜಿಕಲ್ಲಾಗಿ ಡೀಲ ಮಾಡಿ. ಮುಂದೆ ನಿಮ್ಮ ಪ್ರೋಫಿಟ ನಿಮಗಾಗಿ ಕಾಯ್ತಿದೆ. All the Best and Thanks You….

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books