ಚೈಲ್ಡಿಶ ಆಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗುವುದು ಹೇಗೆ? – How to become mature by overcoming childish behavior? in Kannada

You are currently viewing ಚೈಲ್ಡಿಶ ಆಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗುವುದು ಹೇಗೆ? – How to become mature by overcoming childish behavior? in Kannada

ಹಾಯ್ ಗೆಳೆಯರೇ, ನಾನು ಮೊದಲ QNA ಎಪಿಸೋಡನಲ್ಲಿ ನಿಮ್ಮ ಬಳಿ ಯಾವುದಾದರೂ ಪ್ರಶ್ನೆಗಳಲ್ಲಿದ್ದರೆ ನನ್ನನ್ನು ಇನಸ್ಟಾಗ್ರಾಮಲ್ಲಿ ಫಾಲೋ ಮಾಡಿ ನಿಮ್ಮ ಪ್ರಶ್ನೆಗಳನ್ನು ಡೈರೆಕ್ಟ್ ಮೇಸೆಜ್ ಮಾಡಲು ಹೇಳಿದ್ದೆ. ಬಹಳಷ್ಟು ಜನ ಪ್ರಶ್ನೆಗಳನ್ನು ಕಳುಹಿಸಿದ್ದೀರಿ. ಪ್ರಶ್ನೆಗಳನ್ನು ಕಳುಹಿಸಿದವರಿಗೆಲ್ಲರಿಗೂ ಧನ್ಯವಾದಗಳು. ರಿಪ್ಲೆ ಬರಲಿಲ್ಲ ಅಂತಾ ಬೇಜಾರಾಗಬೇಡ‌. ನಿಮ್ಮ ಪ್ರಶ್ನೆ ವ್ಯಾಲಿಡ್ ಆಗಿದ್ರೆ ನಾನು ಅದರ ಮೇಲೆ ಖಂಡಿತವಾಗಿಯೂ ಡೆಡಿಕೆಟೆಡ ಎಪಿಸೋಡ ಮಾಡುವೆ. ಇವತ್ತಿನ ಎಪಿಸೋಡಗೆ ನಾನು ಆಯ್ಕೆ ಮಾಡಿಕೊಂಡ ಪ್ರಶ್ನೆ ಇಂತಿದೆ‌. “ಮ್ಯಾಚುರ್ ಪೀಪಲ್ ಹೇಗಿರುತ್ತಾರೆ ಅಥವಾ ಚೈಲ್ಡಿಶ್ ಬಿಹೇವಿಯರ್ ಬಿಡುವುದು ಹೇಗೆ?” ಈ ಪ್ರಶ್ನೆಯನ್ನು ರಕ್ಷಿತಾ ಎಂಬುವವರು ಹೇಳಿದ್ದಾರೆ. Thanks you lot for asking this question.

ಚೈಲ್ಡಿಶ ಆಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗುವುದು ಹೇಗೆ? - How to become mature by overcoming childish behavior? in Kannada

OK Anyway, ಬನ್ನಿ ಗೆಳೆಯರೇ ಇವತ್ತಿನ ಎಪಿಸೋಡನಲ್ಲಿ “ಚೈಲ್ಡಿಶಾಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗುವುದು ಹೇಗೆ?” ಎಂಬುದನ್ನು ನೋಡೋಣಾ…

ಚೈಲ್ಡಿಶ್ ಬಿಹೇವಿಯರ್ ಬಿಡುವುದು ಹೇಗೆ?

ಚೈಲ್ಡಿಶ್ ಬಿಹೇವಿಯರನ್ನು ಬಿಡಲು ಒಂದೇ ಒಂದು ಬೆಸ್ಟ್ ಉಪಾಯವಿದೆ. ಅದೆನೆಂದರೆ ಚೈಲ್ಡಿಶ್ ಆಗಿ ವರ್ತಿಸದೇ ಇರುವುದು. ಸಿಂಪಲ್… ಚೈಲ್ಡಗಳೊಂದಿಗೆ ಚೈಲ್ಡ್ ಆಗುವುದರಲ್ಲಿ ತಪ್ಪೇನಿಲ್ಲ, ಅವಾಗಾವಾಗ ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ನಿಮ್ಮ ಲೈಫ್ ಪಾರ್ಟ್ನರ್ ಜೊತೆಗೆ ಚೈಲ್ಡಿಶ್ಶಾಗಿ ವರ್ತಿಸೋದ್ರಲ್ಲಿ ತಪ್ಪೇನಿಲ್ಲ. ಆದ್ರೆ ಎಲ್ಲಾ ಕಡೆಗೂ ಎಲ್ಲ ಸಂದರ್ಭಗಳಲ್ಲೂ ಚೈಲ್ಡ್ ಆಗಿ ಬಿಹೇವ್ ಮಾಡುವುದು ಸರಿಯೆನಿಸಲ್ಲ. ಜನ ನಿಮ್ಮನ್ನು ಇಮಮ್ಯಾಚುರ್ ಅಂತಾ ಕರೆಯುತ್ತಾರೆ, ನಿಮ್ಮನ್ನು ಮಿಸಯುಜ್ ಮಾಡಿಕೊಳ್ತಾರೆ. ಅದಕ್ಕಾಗಿ ಎಲ್ಲೆಡೆಗೆ ಚೈಲ್ಡಿಶ್ಶಾಗಿ ವರ್ತಿಸಬೇಡಿ. ನಿಮ್ಮ ನಾಲೆಜನ್ನು ಹೆಚ್ಚಿಸಿಕೊಂಡು ಮ್ಯಾಚುರ್ ಆಗಿ ವರ್ತಿಸಿ.

ಚೈಲ್ಡಿಶ ಆಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗುವುದು ಹೇಗೆ? - How to become mature by overcoming childish behavior? in Kannada

ಮ್ಯಾಚುರ್ ಪೀಪಲ್ ಹೇಗಿರುತ್ತಾರೆ?

ಮ್ಯಾಚುರಿಟಿಗೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ. ಕಷ್ಟಗಳೊಂದಿಗೆ ಬೆಳೆದವರಿಗೆ ಬೇಗನೆ ಮ್ಯಾಚುರಿಟಿ ಬಂದಿರುತ್ತದೆ. ಕಷ್ಟ ಪಡದವರಿಗೆ ಮುದುಕರಾದರೂ ಮ್ಯಾಚುರಿಟಿ ಬರುವುದಿಲ್ಲ. ಈ ಗುಣಗಳು ನಿಮ್ಮಲ್ಲಿದ್ದರೆ ನೀವು ಮ್ಯಾಚುರ ಆಗಿದ್ದೀರಿ, ನಿಮಗೆ ಮ್ಯಾಚುರಿಟಿ ಬಂದಿದೆ ಎಂದರ್ಥ.

* ಯಾವತ್ತೂ ನೀವು ನಿಮ್ಮ ಆಂತರಿಕ ಭಾವನೆಗಳನ್ನು ಮುಚ್ಚಿಡುವುದನ್ನು ಕಲಿಯುತ್ತಿರೋ ಆವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನಿಮಗೆ ನಿಮ್ಮ ಪರ್ಸನಲ್ ಸಮಸ್ಯೆಗಳನ್ನು, ನೋವುಗಳನ್ನು, ಆಸೆಗಳನ್ನು, ಕನಸುಗಳನ್ನು, ಗುರಿಗಳನ್ನು ಯಾರೊಂದಿಗೆ ಶೇರ್ ಮಾಡಬೇಕು, ಯಾರೊಂದಿಗೆ ಶೇರ್ ಮಾಡಬಾರದು ಎಂಬುದು ಗೊತ್ತಾಗುತ್ತೋ ಆವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನಿಮಗೆ ಬೇರೆಯವರನ್ನು ಅವರಿದ್ದಂತೆಯೇ accept ಮಾಡುವ ಬುದ್ಧಿ ಬರುತ್ತೋ, ಬೇರೆಯವರು ಅವರ ವಿಚಾರಗಳಂತೆ ಸರಿಯಿದಾರೆ ಎಂಬ ಸತ್ಯ ಅರ್ಥವಾಗುತ್ತೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ Sorry ಕೇಳುವಲ್ಲಿ ಹಾಗೂ Thanks ಹೇಳುವಲ್ಲಿ ನಿಮ್ಮ ಇಗೋ ಅಡ್ಡ ಬರುವುದಿಲ್ಲವೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನಿಮಗೆ “ನಾನು ಯಾರಿಗೂ ಕಮ್ಮಿಯಿಲ್ಲ, ನಾನು ತೆಳ್ಳಗಿದ್ದರೂ, ದಪ್ಪಗಿದ್ದರೂ, ಕುಳ್ಳಗಿದ್ದರೂ, ಕಪ್ಪಗಿದ್ದರೂ, ಸುಂದರವಾಗಿದ್ದರೂ ನಾನು ನಾನಾಗಿರುವೆ, ನಾನು ಯುನಿಕ್ and ಸ್ಪೆಷಲ್ ಆಗಿರುವೆ…” ಎಂಬುದು ಅರ್ಥವಾಗುತ್ತೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

ಚೈಲ್ಡಿಶ ಆಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗುವುದು ಹೇಗೆ? - How to become mature by overcoming childish behavior? in Kannada

* ಯಾವತ್ತೂ ನಿಮಗೆ ನಿಮ್ಮ ತಪ್ಪುಗಳನ್ನು ಒಪ್ಪಿಕೊಂಡು ಅವುಗಳಿಂದ ಕಲಿಯುವ ಗಟ್ಸ್ ಬರುತ್ತೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನಿಮಗೆ ಬೇಡದಿರುವ ವಸ್ತುಗಳನ್ನು, ವ್ಯಕ್ತಿಗಳನ್ನು ಬಿಟ್ಟು ಬಿಡುವ ಧೈರ್ಯವಾಗುತ್ತೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನೀವು ನಿಮಗಿಷ್ಟವಿರುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿರೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನೀವು ಸದ್ಯಕ್ಕೆ ನಿಮ್ಮ ಬಳಿಯಿರುವುದೆಲ್ಲವನ್ನು ಗೌರವಿಸುತ್ತಿರೋ, ಪ್ರೀತಿಸುತ್ತೀರೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನೀವು ಪ್ರತಿ ಪ್ರಾಬ್ಲಮನಲ್ಲಿ ಅಪಾರ್ಚುನಿಟಿಯನ್ನು ಹುಡುಕುತ್ತಿರೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನೀವು ನಿಮ್ಮ ಕರ್ತವ್ಯಗಳನ್ನು, ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನೀವು ನಿಮಗೆ ಸಿಗುವ ನೋವು, ಅವಮಾನ, ರಿಜೆಕ್ಷನಗಳನ್ನು ಗಿಫ್ಟಾಗಿ ತೆಗೆದುಕೊಳ್ಳುತ್ತಿರೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

ಚೈಲ್ಡಿಶ ಆಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗುವುದು ಹೇಗೆ? - How to become mature by overcoming childish behavior? in Kannada

* ಯಾವತ್ತೂ ನೀವು ಸಿಲ್ಲಿ ಸಂಗತಿಗಳನ್ನು ಇಗ್ನೋರ್ ಮಾಡುತ್ತಿರೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನೀವು ಸಣ್ಣ ಸಣ್ಣ ಸಂಗತಿಗಳಲ್ಲಿರುವ ಖುಷಿಯನ್ನು ಅನುಭವಿಸುತ್ತಿರೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನಿಮಗೆ ಸಣ್ಣ ಸಣ್ಣ ಸಂಗತಿಗಳಲ್ಲಿರುವ ಸೂಕ್ಷ್ಮತೆ ಅರ್ಥವಾಗುತ್ತೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನೀವು ಬೇರೆಯವರ ಬಗ್ಗೆ ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡುವುದನ್ನು, ಬೇರೆಯವರನ್ನು ನಿಂದಿಸುವುದನ್ನು ಬಿಡುತ್ತೀರೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನಿಮಗೆ ಬೇರೆಯವರ ಕಷ್ಟಗಳು ಹಾಗೂ ಕೆಟ್ಟ ಪರಿಸ್ಥಿತಿಗಳು ಅರ್ಥವಾಗುತ್ತವೆಯೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನೀವು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡುತ್ತಿರೋ, ಗಾಳಿ ಮಾತುಗಳನ್ನು ಗಾಳಿಗೆ ತೂರುತ್ತಿರೋ, ತಲೆ ಹೋಗುವ ಸ್ಥಿತಿ ಬಂದರೂ ತಾಳ್ಮೆಯಿಂದ ಇರುತ್ತೀರೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನೀವು ಮೂರ್ಖರೊಂದಿಗೆ ವಾದ ಮಾಡುವುದನ್ನು ಬಿಟ್ಟು ಬಿಡುತ್ತೀರೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನೀವು ನೋವಿನಲ್ಲೂ ನಗುವುದನ್ನು ಕಲಿಯುತ್ತಿರೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

* ಯಾವತ್ತೂ ನೀವು ಮೊದಲು ನಿಮ್ಮನ್ನು ಪ್ರೀತಿಸುತ್ತೀರೋ, ನಿಮ್ಮ ಸುತ್ತಮುತ್ತಲಿರುವ ನಿಸರ್ಗವನ್ನು ಪ್ರೀತಿಸುತ್ತೀರೋ, ನಿಮ್ಮ ದೇಶವನ್ನು ಪ್ರೀತಿಸುತ್ತೀರೋ ಅವತ್ತು ನೀವು ಮ್ಯಾಚುರ ಆಗಿದ್ದೀರಿ ಎಂದರ್ಥ.

ಚೈಲ್ಡಿಶ ಆಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗುವುದು ಹೇಗೆ? - How to become mature by overcoming childish behavior? in Kannada

ಮ್ಯಾಚುರ್ ಆಗುವುದು ಹೇಗೆ?

Tip – 1 : Control Your Emotions

ನಿಮ್ಮ ಭಾವನೆಗಳನ್ನು ಕಂಟ್ರೋಲ್ ಮಾಡಲು ಕಲಿಯಿರಿ. ಎಮೋಷನಲ್ ಇಂಟಲಿಜೆನ್ಸನ್ನು ಬೆಳೆಸಿಕೊಳ್ಳಿ. ಎಮೋಷನಲಿ ಇಂಟಲಿಜೇಂಟಾಗಿ ವರ್ತಿಸಿ. ಮಾತನಾಡುವುದಕ್ಕಿಂತ ಮುಂಚೆ ಕೇಳಿಸಿಕೊಳ್ಳಿ. ಯಾವಾಗ ಎಲ್ಲಿ ಏನು ಮಾತನಾಡಬೇಕು? ಏನು ಮಾತನಾಡಬಾರದು? ಯಾವುದನ್ನು ಕೇಳಿಸಿಕೊಳ್ಳಬೇಕು? ಯಾವುದನ್ನು ಕೇಳಿಸಿಕೊಳ್ಳಬಾರದು? ಯಾವಾಗ ಕಿವುಡರಾಗಿರಬೇಕು? ಯಾವಾಗ ಕುರುಡರಾಗಿರಬೇಕು? ಏನು ಮಾಡಬೇಕು? ಏನು ಮಾಡಬಾರದು? ಯಾವಾಗ ಮೌನವಾಗಿರಬೇಕು? ಯಾವಾಗ ಮಾತನಾಡಬೇಕು? ಯಾರನ್ನು ನಂಬಬೇಕು? ಯಾರನ್ನು ನಂಬಬಾರದು? ಯಾರೊಂದಿಗೆ ಗೆಳೆತನ ಮಾಡಬೇಕು? ಯಾರೊಂದಿಗೆ ನಿಮ್ಮ ಪರ್ಸನಲ್ ವಿಷಯಗಳನ್ನು ಶೇರ್ ಮಾಡಬೇಕು? ಎಂಬಿತ್ಯಾದಿ ಸೂಕ್ಷ್ಮ ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ.

ಚೈಲ್ಡಿಶ ಆಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗುವುದು ಹೇಗೆ? - How to become mature by overcoming childish behavior? in Kannada

Tip – 2 : Know your Responsibilities and Manage them Correctly

ನಿಮ್ಮ ಜವಾಬ್ದಾರಿಗಳೇನು ಎಂಬುದನ್ನು ತಿಳಿದುಕೊಳ್ಳಿ ಮತ್ತು ಅವುಗಳನ್ನು ಸರಿಯಾಗಿ ಸಮರ್ಥವಾಗಿ ನಿಭಾಯಿಸಿ. ನಿಮ್ಮ ಕರ್ತವ್ಯಗಳಿಂದ, ಜವಾಬ್ದಾರಿಗಳಿಂದ ಓಡಿ ಹೋಗುವ ಹೇಡಿತನವನ್ನು ಮಾಡಬೇಡಿ. ನಿಮ್ಮ ಜವಾಬ್ದಾರಿಗಳನ್ನು ನಿಮ್ಮ ಹೆಗಲ ಮೇಲೆ ಹೊತ್ತುಕೊಂಡು ಅವುಗಳನ್ನು ನಿಭಾಯಿಸಿ. ಕಠಿಣ ಪರಿಸ್ಥಿತಿಗಳನ್ನು ಧೈರ್ಯವಾಗಿ ಹ್ಯಾಂಡಲ್ ಮಾಡಿ, ಪ್ರಾಬ್ಲಮ್ಸಗಳನ್ನು ಧೈರ್ಯವಾಗಿ ಫೇಸ್ ಮಾಡಿ. ಆಗ ಈ ಬದುಕು ನಿಮಗೆಲ್ಲವನ್ನು ಕಲಿಸುತ್ತದೆ, ನೀವು ಆಟೋಮ್ಯಾಟಿಕ್ಕಾಗಿ ಮ್ಯಾಚುರ್ ಆಗುತ್ತೀರಿ. ಅದಕ್ಕಾಗಿ ನಿಮ್ಮ ಜವಾಬ್ದಾರಿಗಳೇನು ಎಂಬುದನ್ನು ತಿಳಿದುಕೊಳ್ಳಿ ಮತ್ತು ಅವುಗಳನ್ನು ಸಮರ್ಥವಾಗಿ ನಿಭಾಯಿಸಿ.

ಚೈಲ್ಡಿಶ ಆಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗುವುದು ಹೇಗೆ? - How to become mature by overcoming childish behavior? in Kannada

Tip – 3 : Play your Roles Correctly

ನಿಮಗೆ ನಿಮ್ಮದೇ ಆದ ಪಾತ್ರಗಳಿವೆ. ಅವುಗಳನ್ನು ಸರಿಯಾಗಿ ನಿಭಾಯಿಸಿ. ನೀವು ನಿಮ್ಮ ಬೆಸ್ಟ್ ವರ್ಷನ್ ಆಗಿ. Be best version of yourself. Be a best father, best mother, best son, best daughter, best person, best friend, best life partner, best citizen, best servant etc…

ಚೈಲ್ಡಿಶ ಆಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗುವುದು ಹೇಗೆ? - How to become mature by overcoming childish behavior? in Kannada

Tip – 4 : Talk to Yourself & Set One Big Goal

ಟೈಮ್ ಸಿಕ್ಕಾಗ ಒಂದ್ಸಲ ನಿಮ್ಮೊಂದಿಗೆ ನೀವು ಮಾತನಾಡಿ, ನಿಮ್ಮನ್ನು ನೀವು ಅನಲೈಜ್ ಮಾಡಿಕೊಳ್ಳಿ. ಒಂದು ದೊಡ್ಡ ಗೋಲನ್ನು ಸೆಟ್ ಮಾಡಿ. ಆ ಗೋಲಗಾಗಿ ಹಗಲು ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡಿ. ಯಾವಾಗ ನೀವು ಕೆಲಸ ಮಾಡಿ ನಿಮ್ಮ ಜೀವನದಲ್ಲಿ ಮುಂದೆ ಬರುತ್ತಿರೋ ಆವಾಗ ನೀವು ಮ್ಯಾಚುರಿಟಿಯ ಬಗ್ಗೆ ಬೇರೆಯವರಿಗೆ ಉಪದೇಶ ಮಾಡುವುಷ್ಟು ಮ್ಯಾಚುರ್ ಆಗುತ್ತೀರಿ. So talk to yourself and set one big goal and achieve it.

ಚೈಲ್ಡಿಶ ಆಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗುವುದು ಹೇಗೆ? - How to become mature by overcoming childish behavior? in Kannada

ಓಕೆ ಫ್ರೆಂಡ್ಸ್, ಇವಿಷ್ಟು ಟಿಪ್ಸಗಳು ಚೈಲ್ಡಿಶ ಆಗಿ ವರ್ತಿಸುವುದನ್ನು ಬಿಟ್ಟು ಮ್ಯಾಚುರ್ ಆಗಲು ಸಾಕೆನಿಸುತ್ತವೆ. ಈ ಅಂಕಣ ನಿಮಗೆ ಇಷ್ಟವಾಗಿದ್ದರೆ ಈ ಅಂಕಣವನ್ನು ಲೈಕ್ ಮಾಡಿ ಮತ್ತು ನನ್ನ ಫೇಸ್ಬುಕ್ ಪೇಜನ್ನು ಫಾಲೋ ಮಾಡಿ. ಜೊತೆಗೆ ಟ್ವಿಟ್ಟರ್, ಇನ್ಸ್ಟಾಗ್ರಾಮ್, ಯುಟ್ಯೂಬಗಳಲ್ಲಿ ನನ್ನನ್ನು ಫಾಲೋ ಮಾಡಿ.

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books