ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

You are currently viewing ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ಹಾಯ್ ಗೆಳೆಯರೇ, ನೀವು ಸ್ಟೀವ ಜಾಬ್ಸ (Steve Jobs) ಅವರ ಹೆಸರನ್ನು ಕೇಳಿಲ್ಲದಿದ್ದರೂ ಐಫೋನ್, ಐಮ್ಯಾಕ್, ಐಟ್ಯೂನ್ಸ್, ಆ್ಯಪಲ್, ಆ್ಯಪಲ್ ಕಂಪ್ಯೂಟರ್ಸ, ಆ್ಯಪಲ್ ಸ್ಟೋರ್, ಐಪ್ಯಾಡ್ ಇತ್ಯಾದಿ ಹೆಸರುಗಳನ್ನು ಖಂಡಿತ ಕೇಳಿರುತ್ತೀರಿ. ಇವೆಲ್ಲವುಗಳ ಸೃಷ್ಟಿಕರ್ತರೇ ಈ ಸ್ಟೀವ್ ಪೌಲ್ ಜಾಬ್ಸ್ ಅರ್ಥಾತ ಸ್ಟೀವ್ ಜಾಬ್ಸ್. ಇವರು ಜಗತ್ತಿನ ಪ್ರಸಿದ್ಧ ಕಂಪನಿಯಾದ ಆ್ಯಪಲನ ಸಹ ಸಂಸ್ಥಾಪಕರಾಗಿದ್ದರು. ಜೊತೆಗೆ Computer Platform Developing Companyಯಾದ ನೆಕ್ಸ್ಟ್ (NeXt) ಹಾಗೂ most successful animation and visual effects ಕಂಪನಿಯಾದ ಪಿಕ್ಸಾರನ (Pixar) ಸಂಸ್ಥಾಪಕರು, ಮಾಲೀಕರು ಇವರೇ. ಸ್ಟೀವ್ ಜಾಬ್ಸ ಬರೀ ಒಬ್ಬ ಯಶಸ್ವಿ ಬ್ಯುಸಿನೆಸಮ್ಯಾನಾಗಿ ಮಾತ್ರವಲ್ಲ, ಒಬ್ಬ ಮೋಟಿವೇಷನಲ್ ಸ್ಪೀಕರಾಗಿ ಸಹ ಜಗತ್ತಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಬನ್ನಿ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳೋಣಾ.

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ಸ್ಟೀವ್ ಜಾಬ್ಸರವರ ಜನನ ಎಲ್ಲರಂತೆ ಸಾಮಾನ್ಯವಾಗಿರಲಿಲ್ಲ. ಅವರ ಹೆತ್ತತಾಯಿ ಜೋಯ್ನಾ ಶೀಬಿಲ್ ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದಳು. ಜೋಯ್ನಾ ಗ್ಯ್ರಾಜುಯೇಷನ ಓದುತ್ತಿರುವಾಗ ತನ್ನ ಸಹಪಾಠಿ ಅಬ್ದುಲ್ ಫತಾಖಾನ್ ಜಾನ ಜೊಂಡಾಲಿಯೊಂದಿಗೆ ಪ್ರೇಮ ಸಂಬಂಧದಲ್ಲಿದ್ದಳು. ಅವಳು ಜೊಂಡಾಲಿಯೊಂದಿಗೆ ಅವನ ದೇಶ ಸಿರಿಯಾಗೆ ಹೋದಾಗ ಅವಳಿಗೆ ತಾನು ಗರ್ಭಿಣಿಯಾಗಿರುವ ವಿಷಯ ತಿಳಿಯಿತು. ಜೊಯ್ನಾ ಕಟ್ಟಾ ಕ್ರಿಶ್ಚಿಯನ್ ಹುಡುಗಿಯಾಗಿದ್ದರೆ, ಜೊಂಡಾಲಿ ಪಕ್ಕಾ ಮುಸ್ಲಿಂ ಯುವಕನಾಗಿದ್ದನು. ಹೀಗಾಗಿ ಇವರಿಬ್ಬರ ಪ್ರೇಮ ಸಂಬಂಧವನ್ನು ಅವರ ಮನೆಯವರು ಒಂಚೂರು ಒಪ್ಪಲಿಲ್ಲ. ಅವರ ಮದುವೆಗೆ ಅವರ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಅವರಿಬ್ಬರಿಗೂ ಸಹ ಮದುವೆಯಾಗುವ ಮನಸ್ಸಿರಲಿಲ್ಲ. ಆವಾಗಿನ ಕಾಲದಲ್ಲಿ ಅಮೆರಿಕಾದಲ್ಲಿ ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧವಾಗಿತ್ತು. ಅದಕ್ಕಾಗಿ ಜೋಯ್ನಾ ತನ್ನ ಹೊಟ್ಟೆಯಲ್ಲಿರುವ ಮಗುವನ್ನು ಕೊಲ್ಲಲು ಹಿಂದೇಟು ಹಾಕಿದಳು. ಆ ಮಗುವಿಗೆ ಜನ್ಮ ಕೊಟ್ಟು ಅದನ್ನು ಯಾರಿಗಾದರೂ ದತ್ತು ನೀಡಲು ನಿರ್ಧರಿಸಿದಳು.

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ಜೋಯ್ನಾ ತನ್ನಾಸೆಯಂತೆ 1955ರ ಫೆಬ್ರವರಿ 24ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು. ತನ್ನ ಮಗುವನ್ನು ದತ್ತು ತೆಗೆದುಕೊಳ್ಳುವ ದಂಪತಿಗಳು ವಿದ್ಯಾವಂತರಾಗಿರಬೇಕು ಎಂಬುದು ಜೋಯ್ನಾಳ ಕಂಡಿಷನ್ ಆಗಿತ್ತು. ಅವಳ ಕಂಡಿಷನಗೆ ಒಪ್ಪಿ ಅವಳ ಮಗುವನ್ನು ದತ್ತು ತೆಗೆದುಕೊಳ್ಳಲು ಒಬ್ಬ ಶ್ರೀಮಂತ ವಕೀಲ ದಂಪತಿಗಳು ಮುಂದೆ ಬಂದರು. ಆದರೆ ಒಂದಿನ ಮುಂಚೆ ಅವರು ತಮ್ಮ ನಿರ್ಧಾರವನ್ನು ಬದಲಿಸಿದರು. ಆ ದಂಪತಿಗಳು ಗಂಡು ಮಗುವಿನ ಬದಲಾಗಿ ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾಗಿ ಜೊಯ್ನಾಳ ಮಗುವನ್ನು ದತ್ತು ತೆಗೆದುಕೊಳ್ಳಲು ನಿರಾಕರಿಸಿದರು. ಆಗ ಕಾಲ್ರಾ ಹಾಗೂ ಪೌಲ್ ಜಾಬ್ಸ ಎಂಬ ಮಿಡಲ್ ಕ್ಲಾಸ್ ದಂಪತಿಗಳು ಜೋಯ್ನಾಳ ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾದರು. ಆದರೆ ಜಾಬ್ಸ ದಂಪತಿಗಳು ಬಹಳಷ್ಟು ಓದಿರಲಿಲ್ಲ. ಪೌಲ್ ಜಾಬ್ಸ ಒಬ್ಬ ಮೆಕ್ಯಾನಿಕ ಆಗಿದ್ದರೆ, ಅವನ ಪತ್ನಿ ಕಾಲ್ರಾ ಅಕೌಂಟೆಂಟ ಆಗಿದ್ದಳು. ಹೀಗಾಗಿ ಜೋಯ್ನಾ ಅವರಿಗೆ ತನ್ನ ಮಗುವನ್ನು ದತ್ತು ಕೊಡಲು ನಿರಾಕರಿಸಿದಳು. ಆದರೆ ಜಾಬ್ಸ ದಂಪತಿಗಳು ಆ ಮಗುವನ್ನು ಸಕಲ ಸೌಲಭ್ಯಗಳೊಂದಿಗೆ ಉತ್ತಮ ಕಾಲೇಜಿನಲ್ಲಿ ಚೆನ್ನಾಗಿ ಓದಿಸುತ್ತೇವೆ ಎಂದು ಮಾತು ಕೊಟ್ಟಾಗ ಜೋಯ್ನಾ ತನ್ನ ಮಗುವನ್ನು ಅವರಿಗೆ ದತ್ತು ಕೊಡಲು ಒಪ್ಪಿದಳು. ಜಾಬ್ಸ ದಂಪತಿಗಳ ಆ ದತ್ತು ಪುತ್ರನೇ ಸ್ಟೀವ್ ಜಾಬ್ಸ.

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ಜೋಯ್ನಾಳಿಗೆ ಮಾತು ಕೊಟ್ಟಂತೆ ಜಾಬ್ಸ ದಂಪತಿಗಳು ಸ್ಟೀವನನ್ನು ಸಕಲ ಸೌಲಭ್ಯಗಳೊಂದಿಗೆ ಮುದ್ದಿನಿಂದ ಬೆಳೆಸಲು ಪ್ರಾರಂಭಿಸಿದರು. ತಮ್ಮ ಸುಖ ಸಂತೋಷಗಳನ್ನೆಲ್ಲ ತ್ಯಾಗ ಮಾಡಿ ಅವನನ್ನು ಒಳ್ಳೆಯ ಸ್ಕೂಲಿನಲ್ಲಿ ಓದಿಸಿದರು. ಸ್ಟೀವ ಜಾಬ್ಸರ ಆರಂಭಿಕ ಶಿಕ್ಷಣ Mountain Viewನ ಮೊಂಟಾ ಲೋಮಾ ಸ್ಕೂಲಿನಲ್ಲಿ ಪ್ರಾರಂಭವಾಯಿತು. ಆದರೆ ಅವರು ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿ 17ನೇ ವಯಸ್ಸಿನಲ್ಲಿ ಸ್ಟ್ಯಾನಪೋರ್ಡನಂಥ ದುಬಾರಿ ಕಾಲೇಜ ಸೇರಿಕೊಂಡಾಗ ಅವರಿಗೆ ಬದುಕಿನ ಕರಾಳ ಮುಖದ ಪರಿಚಯವಾಯಿತು. ಅವರು ಜಾಬ್ಸ ದಂಪತಿಗಳ ದತ್ತು ಪುತ್ರರೆಂಬ ಸತ್ಯವೂ ಅವರಿಗೆ ಪಕ್ಕದ್ಮನೆ ಹುಡುಗಿಯಿಂದ ಗೊತ್ತಾಯಿತು. ಅವರ ತಂದೆತಾಯಿಗಳು ಕಷ್ಟಪಟ್ಟು ಸಂಪಾದಿಸಿದ ಹಣವೆಲ್ಲ ಸ್ಟೀವ್ ಜಾಬ್ಸರವರ ಶಿಕ್ಷಣಕ್ಕೇನೆ ಖರ್ಚಾಗುತ್ತಿತ್ತು. ಇದರಿಂದಾಗಿ ಸ್ವೀವ ಜಾಬ್ಸರಿಗೆ ತುಂಬಾ ನೋವಾಯಿತು. ನಾನು ಸ್ಟ್ಯಾನಪೋರ್ಡನಂಥ ದುಬಾರಿ ಕಾಲೇಜನ್ನು ಸೇರಿ ತಪ್ಪು ಮಾಡಿದೆ ಎಂದೆನಿಸಿತು. ಆವಾಗಿನ ಕಾಲದಲ್ಲಿ ಸ್ಟ್ಯಾನಪೋರ್ಡ ಕ್ಯಾಲಿಫೋರ್ನಿಯಾದ ಅತ್ಯಂತ ದುಬಾರಿ ಕಾಲೇಜಗಳಲ್ಲಿ ಒಂದಾಗಿತ್ತು.

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ಸ್ಟೀವ್ ಜಾಬ್ಸರ ತಂದೆತಾಯಿಗಳ ಸಂಪಾದನೆ ಅವರ ಕಾಲೇಜ ಫೀಜಗೇನೆ ಸಾಕಾಗುತ್ತಿರಲಿಲ್ಲ. ಹೀಗಾಗಿ ಸ್ಟೀವ್ ಜಾಬ್ಸರವರು ಬೀದಿಯಲ್ಲಿ ಬಿದ್ದ ಕೋಲ್ಡ್ರಿಂಕ್ಸ ಬಾಟಲಗಳನ್ನು ಆಯ್ದು ಅವುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಪ್ರತಿವಾರ ನಾಲ್ಕಾರು ಮೈಲಿ ನಡೆದು ಹರೇಕೃಷ್ಣ ಮಂದಿರಕ್ಕೆ ಊಟಕ್ಕೆ ಹೋಗುತ್ತಿದ್ದರು. ವಾರಕ್ಕೆ ಒಂದ್ಸಾರಿಯಾದರೂ ಹೊಟ್ಟೆ ತುಂಬ ಊಟ ಸಿಗುತ್ತೆ ಎಂಬಾಸೆ ಅವರದ್ದಾಗಿತ್ತು. ಅವರು ಹೋಟೆಲ್ ಬಿಲ ಉಳಿಸುವುದಕ್ಕಾಗಿ ತಮ್ಮ ಗೆಳೆಯರ ರೂಮಲ್ಲಿ ನೆಲದ ಮೇಲೆ ಮಲಗುತ್ತಿದ್ದರು. ಇಷ್ಟೆಲ್ಲ ಹರಸಾಹಸ ಮಾಡಿದರೂ ಅವರ ಕಾಲೇಜ ಫೀಸ್ ಸರಿ ಹೊಂದುತ್ತಿರಲಿಲ್ಲ. ತಮ್ಮ ತಂದೆತಾಯಿಗಳು ಪಡುತ್ತಿರುವ ಕಷ್ಟವನ್ನು ಅವರಿಂದ ನೋಡಲಾಗಲಿಲ್ಲ. ಅಲ್ಲದೆ ಕಾಲೇಜ ಓದಿನಲ್ಲಿ ಅವರಿಗ್ಯಾವ ಭವಿಷ್ಯ ಕಾಣಿಸಲಿಲ್ಲ. ಹೀಗಾಗಿ ಅವರು ತಮ್ಮ ಕಾಲೇಜನ್ನು ಬಿಟ್ಟು ತಮಗಿಷ್ಟವಾದ ವಿಷಯಗಳನ್ನು ಕಲಿಯಲು ಪ್ರಾರಂಭಿಸಿದರು.

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ಕಾಲೇಜಿಗೆ ಬಾಯ್ ಹೇಳಿದ ನಂತರ ಅವರ ಮನಸ್ಸು ಮತ್ತಷ್ಟು ಗಲಿಬಿಲಿಯಾಯಿತು. ಅವರಿಗೆ ಅವರ ಭವಿಷ್ಯದ ಚಿಂತೆ ಕಾಡತೊಡಗಿತು. ಅದಕ್ಕಾಗಿ ಅವರು ಮನಶಾಂತಿಗಾಗಿ 1973ರಲ್ಲಿ ಭಾರತಕ್ಕೆ ಬಂದರು. ಮೂರು ತಿಂಗಳುಗಳ ಕಾಲ ಉತ್ತರ ಭಾರತದ ದೇಗುಲಗಳಿಗೆ ಭೇಟಿ ನೀಡಿದರು. ಪ್ರೇಕ್ಷಣೀಯ ತಾಣ ಹಾಗೂ ಪರ್ವತಗಳಲ್ಲಿ ಸುತ್ತಾಡಿ ತಮ್ಮ ಮನಸ್ಸನ್ನು ಹಗುರಾಗಿಸಿಕೊಂಡರು. ಭಾರತದ ಈ ಯಾತ್ರೆಯಿಂದಾಗಿ ಅವರ ಮನಸ್ಸು ಹಗುರಾಗಿ ಅವರಿಗೆ ಸಾಧನೆಯ ದಾರಿ ಸಿಕ್ಕಿತು. ಅವರು ಅಮೆರಿಕಾಗೆ ಮರಳಿದ ನಂತರ ರೀಡ ಕಾಲೇಜಿನಲ್ಲಿ ಕ್ಯಾಲಿಗ್ರಾಫಿ ಕಲಿಯಲು ಪ್ರಾರಂಭಿಸಿದರು. ಆವಾಗಿನ ಕಾಲದಲ್ಲಿ ರೀಡ ಕಾಲೇಜು ಕ್ಯಾಲಿಗ್ರಾಫಿಗೆ ಹೆಸರಾಗಿತ್ತು. ಅಲ್ಲಿನ ಪ್ರತಿಯೊಂದು ಚಿತ್ರಗಳನ್ನು ಅಚ್ಚುಕಟ್ಟಾಗಿ ಕೈಯ್ಯಿಂದ ಬಿಡಿಸಲಾಗಿತ್ತು. ಸ್ಟೀವ್ ಜಾಬ್ಸರಿಗೆ ನಾನ್ಯಾಕೆ ಈ ಕ್ಯಾಲಿಗ್ರಾಫಿಯನ್ನು ಕಲಿಯುತ್ತಿರುವೆ ಎಂಬುದು ಗೊತ್ತಿರಲಿಲ್ಲ. ಆದರೂ ಅವರು ಅದನ್ನು ಶ್ರದ್ಧೆಯಿಂದ ಕಲಿತರು. ಜೊತೆಗೆ ಸಿಕ್ಕ ಸಮಯದಲ್ಲಿ ತಮ್ಮ ತಂದೆಯ ಗ್ಯಾರೇಜನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಗ್ಯಾರೇಜನಲ್ಲಿ ಕೆಲಸ ಮಾಡುತ್ತಾ ಅವರು ಹಲವಾರು ವಿಷಯಗಳನ್ನು ಕಲಿತರು. ಕಣ್ಣಿಗೆ ಕಾಣಿಸದಿರುವ ಸಂಗತಿಗಳನ್ನು ಸಹ ಸುಂದರವಾಗಿ ಸೃಷ್ಟಿಮಾಡಬೇಕು ಎಂಬ ವಿಷಯವನ್ನು ಅವರು ತಮ್ಮ ತಂದೆಯಿಂದ ಕಲಿತರು.

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ಸ್ಟೀವ್ ಜಾಬ್ಸ ತಮ್ಮ ಹೆಚ್ಚಿನ ಸಮಯವನ್ನು ಕಂಪ್ಯೂಟರ್ ಪ್ರೋಗ್ರಾಮಿಂಗನಲ್ಲಿ ಕಳೆಯತೊಡಗಿದರು. ಅವರು ತಮ್ಮ ಕಾಲೇಜು ದಿನಗಳ ಗೆಳೆಯ ಸ್ವೀವ್ ವೋಜ್ನಾಯಿಕರೊಂದಿಗೆ (Steve Wozniak) ಸೇರಿ Mackintosh Operating Systemನ್ನು ಅಭಿವೃದ್ಧಿ ಪಡಿಸಿದರು. ನಂತರ ಅವರು ತಾವು ತಯಾರಿಸಿದ ಕಂಪ್ಯೂಟರಗಳನ್ನು ಮಾರುವುದಕ್ಕಾಗಿ 1976ರಲ್ಲಿ ತಮ್ಮ ತಂದೆಯ ಗ್ಯಾರೇಜಿನಲ್ಲಿಯೇ ಆ್ಯಪಲ್ ಕಂಪನಿಯನ್ನು ಪ್ರಾರಂಭಿಸಿದರು. ಆ್ಯಪಲ್ ಕಂಪನಿಯನ್ನು ಪ್ರಾರಂಭಿಸಿದಾಗ ಅವರಿಗೆ ಬರೀ 20 ವರ್ಷ ವಯಸ್ಸಾಗಿತ್ತು. ಸ್ಟೀವ್ ಜಾಬ್ಸರ ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದ ಫಲವಾಗಿ ಆ್ಯಪಲ ಕಂಪನಿ ಯಶಸ್ಸಿನ ಉತ್ತುಂಗಕ್ಕೇರಿತು. ನೋಡುನೋಡುತ್ತಿದಂತೆಯೇ ಎರಡು ಜನರಿಂದ ಪ್ರಾರಂಭವಾದ ಆ್ಯಪಲ್ ಕಂಪನಿ 2 ಬಿಲಿಯನ್ ಡಾಲರ್ ಲಾಭ ಗಳಿಸುವುದರೊಂದಿಗೆ 4000 ಜನ ನೌಕರರನ್ನು ಹೊಂದಿದ ವಿಶಾಲ ಕಂಪನಿಯಾಯಿತು.

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ಸ್ಟೀವ್ ಜಾಬ್ಸ ಹೆಚ್ಚಿನ ಲಾಭದ ಆಸೆಗಾಗಿ ಪೆಪ್ಸಿಕೋ ಕಂಪನಿಯ ವೈಸ್ ಪ್ರೆಸಿಡೆಂಟಾದ ಜಾನ್ ಸ್ಕಲ್ಲಿಯನ್ನು ಆ್ಯಪಲ್ ಕಂಪನಿಯ CEO ಆಗಿ ನೇಮಿಸಿದರು. ಜಾನ್ ಸ್ಕಲ್ಲಿ ತನ್ನೊಂದಿಗೆ ಸೇರಿ ಆ್ಯಪಲ್ ಕಂಪನಿಯ ಬೆಳವಣಿಗೆಗಾಗಿ ಕೆಲಸ ಮಾಡುತ್ತಾರೆಂದು ಅವರು ಭಾವಿಸಿದ್ದರು. ಆದರೆ ಅವರ ಲೆಕ್ಕಾಚಾರ ತಪ್ಪಾಯಿತು. ಸ್ಟೀವ್ ಜಾಬ್ಸರಿಗೂ, CEO ಜಾನ್ ಸ್ಕಲ್ಲಿಗೂ ತಮ್ಮ ಬೇರೆಬೇರೆ ವಿಜನಗಳಿಂದ ಮತಭೇದ ಉಂಟಾಯಿತು. ಅವರಿಬ್ಬರ ಮಧ್ಯೆ ಶೀತಲಸಮರ ಶುರುವಾಯಿತು. ಈ ಜಗಳ ಕಂಪನಿಯ ಬೋರ್ಡ ಆಫ್ ಡೈರೆಕ್ಟರ್ಸವರೆಗೆ ತಲುಪಿತು. ಕಂಪನಿಯ ಡೈರೆಕ್ಟರಗಳು ಸ್ಟೀವ್ ಜಾಬ್ಸರದ್ದೇ ತಪ್ಪೆಂದು ಅವರನ್ನು 1985ರಲ್ಲಿ ಆ್ಯಪಲ ಕಂಪನಿಯಿಂದ ಹೊರಹಾಕಿದರು. ತಾವೇ ಹುಟ್ಟಾಕಿದ ಕಂಪನಿಯಿಂದ ಉಚ್ಛಾಟಿತರಾದಾಗ ಸ್ಟೀವ್ ಜಾಬ್ಸರಿಗೆ ಅತೀವ ನೋವಾಯಿತು. ಆದರೆ ಅವರು ಈ ಘಟನೆಯಿಂದ ಅತೀ ದೊಡ್ಡ ಜೀವನ ಪಾಠವನ್ನು ಕಲಿತರು.

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ಆ್ಯಪಲನಿಂದ ಹೊರಬಂದ ನಂತರ ಸ್ಟೀವ್ ಜಾಬ್ಸರವರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ NeXt ಎಂಬ Computer Platform Developing Companyಯನ್ನು ಪ್ರಾರಂಭಿಸಿದರು. ಅವರು ತಮ್ಮ ಸಾವಿನ ಬಗ್ಗೆ ಯೋಚಿಸಿದಾಗ ಅವರಲ್ಲಿದ್ದ ಬಯಕೆಗಳು, ಸೋಲಿನ ಭಯ, ಅಹಂಕಾರ ಎಲ್ಲವೂ ಮಾಯವಾಗಿ ಸದ್ಯಕ್ಕೆ ಅತ್ಯವಶ್ಯಕವಿರುವ ಕೆಲಸಗಳು ಮಾತ್ರ ಅವರ ಕಣ್ಣಿಗೆ ಕಾಣಿಸಿದವು. ಅದಕ್ಕಾಗಿ ಅವರು ನಾಳೆ ಇಲ್ಲವೆಂಬಂತೆ ಕೆಲಸ ಮಾಡಲು ಪ್ರಾರಂಭಿಸಿದರು. ಈಗ 10 ವರ್ಷಗಳ ನಂತರ ಅವರಿಗೆ ಅವರು ಕಾರಣವಿಲ್ಲದೆ ಕಲಿತ ಕ್ಯಾಲಿಗ್ರಾಫಿ ಪ್ರಯೋಜನಕ್ಕೆ ಬಂದಿತು. ಅವರು ತಾವು ಕಲಿತ ಕ್ಯಾಲಿಗ್ರಾಫಿಯ ಸಹಾಯದಿಂದ ಡಾಟಗಳನ್ನು ಕನೆಕ್ಟ ಮಾಡಿ ಐಮ್ಯಾಕ ಕಂಪ್ಯೂಟರನಲ್ಲಿ ಸುಂದರವಾದ Fontsಗಳನ್ನು ಸೇರಿಸುವಲ್ಲಿ ಸಫಲರಾದರು. ಅವರು ಅಭಿವೃದ್ಧಿ ಪಡಿಸಿದ ಕಂಪ್ಯೂಟರ್, ಕ್ಯಾಲಿಗ್ರಾಫಗಳನ್ನು ಹೊಂದಿದ ವಿಶ್ವದ ಮೊದಲ ಕಂಪ್ಯೂಟರ್ ಆಗಿ ಹೊರಹೊಮ್ಮಿತು. ಇದರಿಂದಾಗಿ ಅವರಿಗೆ ಸದ್ಯಕ್ಕೆ ನಮ್ಮ ಜೀವನದಲ್ಲಾಗುತ್ತಿರುವ ಸಂಗತಿಗಳು ಮುಂದೆ ಒಂದಲ್ಲ ಒಂದಿನ ನಮ್ಮ ಫ್ಯುಚರನೊಂದಿಗೆ ಕನೇಕ್ಟ ಆಗುತ್ತವೆ ಎಂಬ ವಿಷಯ ಅರಿವಾಯಿತು.

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ಒಂದು ವೇಳೆ ಸ್ಟೀವ್ ಜಾಬ್ಸ ಸ್ಟ್ಯಾನಪೋರ್ಡ ಕಾಲೇಜನ್ನು ಬಿಟ್ಟು ಕ್ಯಾಲಿಗ್ರಾಫಿಯನ್ನು ಕಲಿಯದಿದ್ದರೆ ಇವತ್ತು ಕಂಪ್ಯೂಟರಗಳಲ್ಲಿ ಸುಂದರವಾದ Fontsಗಳಿರುತ್ತಿರಲಿಲ್ಲ. ಅವರು ತಮ್ಮ ಓದನ್ನು ಅರ್ಧಕ್ಕೆ ನಿಲ್ಲಿಸದಿದ್ದರೆ ಅವರು ಇಷ್ಟೊಂದೆಲ್ಲ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ವೇಳೆ ಅವರ ಕಲೆಯನ್ನು ಮೈಕ್ರೊಸಾಫ್ಟನವರು ಕದಿಯದಿದ್ದರೆ ಜಗತ್ತಿನ ಬೇರೆ ಯಾವ ಕಂಪ್ಯೂಟರಗಳಲ್ಲಿ ಅಷ್ಟೊಂದು ಸುಂದರವಾದ Fontsಗಳಿರುತ್ತಿರಲಿಲ್ಲ. NeXt ಕಂಪನಿ ಯಶಸ್ಸಿನ ಹಾದಿಯಲ್ಲಿರುವಾಗಲೇ ಅವರು Pixar ಎಂಬ Animations and Visual Effects ಕಂಪನಿಯನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಲಾರೆನ್ಸ್ ಪಾವೆಲ್ ಎಂಬ ಸುಂದರ ಯುವತಿಯೊಂದಿಗೆ ಅವರ ಭೇಟಿಯಾಯಿತು. ಮುಂದೆ ಅವಳನ್ನೇ ಅವರು ಮದುವೆಯಾಗಿ ತಮ್ಮ ಜೀವನದ ವಿಶೇಷ ಅಧ್ಯಾಯವನ್ನು ಪ್ರಾರಂಭಿಸಿದರು.

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ಸ್ಟೀವ್ ಜಾಬ್ಸರ NeXt ಹಾಗೂ Pixar ಕಂಪನಿಗಳು ಯಶಸ್ಸಿನ ದಾರಿಯಲ್ಲಿ ಸಾಗಿದ್ದವು. 1995ರಲ್ಲಿ ಅವರ Pixar ಕಂಪನಿ ಜಗತ್ತಿನ ಮೊದಲ 3D Computer Animated Film “Toy Story”ಯನ್ನು ನಿರ್ಮಿಸಿ ಜಗತ್ತಿನಾದ್ಯಂತ ಜನಪ್ರಿಯತೆಯನ್ನು ಗಳಿಸಿತು. ಆದರೆ ಆ್ಯಪಲ್ ಕಂಪನಿ ಅವನತಿಯ ಹಾದಿ ಹಿಡಿದಿತ್ತು. ಆ್ಯಪಲ್ ಕಂಪನಿ ಅಕ್ಷರಷ: ದಿವಾಳಿಯಾಗುವ ಭೀತಿಯಲ್ಲಿತ್ತು. ಆ ಸಂದರ್ಭದಲ್ಲಿ ಆ್ಯಪಲನ ಡೈರೆಕ್ಟರಗಳು ಸ್ಟೀವ್ ಜಾಬ್ಸರ NeXt ಕಂಪನಿಯನ್ನು ಖರೀದಿಸಿದರು. ಹೀಗಾಗಿ ಮತ್ತೆ ಸ್ಟೀವ್ ಜಾಬ್ಸ 1997ರಲ್ಲಿ ಆ್ಯಪಲ್ ಕಂಪನಿಗೆ ಸೇರಿಕೊಂಡರು. ಅಲ್ಲದೆ ಕೆಲ ದಿನಗಳಲ್ಲಿ ಅವರು ಆ್ಯಪಲ್ ಕಂಪನಿಯ CEO ಆದರು. CEO ಆದ ತಕ್ಷಣವೇ ಅವರು ಆ್ಯಪಲ್ ಕಂಪನಿಯಲ್ಲಿ ತಯಾರಾಗುತ್ತಿದ್ದ ಪ್ರೊಡಕ್ಟಗಳ ಸಂಖ್ಯೆಯನ್ನು 250ರಿಂದ ಕೇವಲ 10ಕ್ಕೆ ಇಳಿಸಿದರು. ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಎಂಬುದು ಅವರ ಸಿದ್ಧಾಂತವಾಗಿತ್ತು. ಅವರು NeXT ಕಂಪನಿಯಲ್ಲಿ ತಯಾರಿಸಿದ್ದ ಟೆಕ್ನಾಲಜಿಗಳನ್ನು ಆ್ಯಪಲನಲ್ಲಿ ಬಳಸಿ ಮುಳುಗುವ ಭಯದಲ್ಲಿದ್ದ ಆ್ಯಪಲ್ ಕಂಪನಿಯನ್ನು ಮತ್ತೆ ಯಶಸ್ಸಿನ ದಾರಿಗೆ ಎಳೆದು ತಂದರು.

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ಸ್ಟೀವ್ ಜಾಬ್ಸ ಆ್ಯಪಲ್ ಕಂಪನಿಯ ಪ್ರೋಡಕ್ಟಗಳ ಮಾರಾಟಕ್ಕಾಗಿ “Think Different” ಎಂಬ ಕ್ಯಾಂಪೇನನ್ನು ಪ್ರಾರಂಭಿಸಿದರು. ಇದರಿಂದಾಗಿ ಆ್ಯಪಲ್ ಜಗತ್ತಿನ ಟಾಪ್ ಕಂಪನಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಇವತ್ತು ಐಪೋನ್ ತೆಗೆದುಕೊಳ್ಳುವುದು ಎಷ್ಟೋ ಜನರ ಕನಸಾಗಿದೆ. ಎಲ್ಲವೂ ಯಶಸ್ವಿನ ದಾರಿಯಲ್ಲಿ ಸಾಗುತ್ತಿರುವಾಗ 2003ರಲ್ಲಿ ಸ್ಟೀವ್ ಜಾಬ್ಸ ಪ್ಯಾಂಕ್ರಿಯಾಟಿಕ ಕ್ಯಾನ್ಸರನಿಂದಾಗಿ ಸಾವಿನ ಬಾಯಿಗೆ ಸಿಲುಕಿದರು. ಆದರೆ ಅದೃಷ್ಟವಶಾತ ಯಶಸ್ವಿ ಶಸ್ತ್ರಚಿಕಿತ್ಸೆಯಿಂದಾಗಿ ಅವರು ಬದುಕುಳಿದರು. ನಂತರ ಅವರು ಮತ್ತೆ ತಮ್ಮ ಕೆಲಸದಲ್ಲಿ ನಿರತರಾದರು. ಆದರೆ ಮತ್ತೆ ಪ್ಯಾಂಕ್ರಿಯಾಟಿಕ ಕ್ಯಾನ್ಸರ್ ಅವರನ್ನು ಆವರಿಸಿಕೊಂಡಿತು. ಇದರಿಂದಾಗಿ ಅವರು 2011ರ ಅಕ್ಟೋಬರ್ 5ರಂದು ಕೊನೆಯುಸಿರೆಳೆದರು.

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

ತಮ್ಮನ್ನು ಕತ್ತಿಡಿದು ಆಚೆ ತಳ್ಳಿದ ಆ್ಯಪಲ್ ಕಂಪನಿಗೆ ಮತ್ತೆ ಸೇರಿಕೊಂಡು, ಅಲ್ಲಿಯೇ CEO ಆಗಿ ಅವಮಾನ ಮಾಡಿದವರಿಂದಲೇ ಸನ್ಮಾನ ಮಾಡಿಸಿಕೊಂಡ ಸ್ಟೀವ್ ಜಾಬ್ಸ ನಿಜಕ್ಕೂ ಎಲ್ಲರಿಗೂ ಮಹಾನ್ ಸ್ಪೂರ್ತಿಯಾಗಿದ್ದಾರೆ. ಅವರ “Stay Hungry and Stay Foolish” ಎಂಬ ವಾಕ್ಯ ಎಷ್ಟೋ ಸಾಧಕರಿಗೆ ದಾರಿದೀಪವಾಗಿದೆ. ಸ್ಟೀವ್ ಜಾಬ್ಸರ ಈ ಜೀವನ ಕಥೆ ನಿಮಗಿಷ್ಟವಾಗಿದ್ದರೆ ತಪ್ಪದೆ ಇದನ್ನು ಲೈಕ್ ಮತ್ತು ಶೇರ್ ಮಾಡಿ. ಪ್ರತಿದಿನ ಇದೇ ರೀತಿಯ ಸ್ಪೂರ್ತಿದಾಯಕ ಕಥೆಗಳನ್ನು ಉಚಿತವಾಗಿ ಓದಲು ಫೇಸ್ಬುಕ್, ಟ್ವೀಟರ, ಇನಸ್ಟಾಗ್ರಾಮ ಹಾಗೂ ಯ್ಯುಟ್ಯೂಬಗಳಲ್ಲಿ ತಪ್ಪದೆ ನನ್ನನ್ನು ಫಾಲೋ ಮಾಡಿ. (Search as Director Satishkumar and Roaring Creations)

ಸ್ಟೀವ್ ಜಾಬ್ಸರವರ ಜೀವನ ಕಥೆ : Life Story of Steve Jobs in Kannada

Note : This article based on Steve Jobs Stanford University Speech and His Wikipedia and Our Team Research on Steve Jobs.

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books