ಅನಾಥನ ಆತ್ಮವಿಶ್ವಾಸ – Kannada Short Poem

You are currently viewing ಅನಾಥನ ಆತ್ಮವಿಶ್ವಾಸ – Kannada Short Poem

ನಮ್ಮ ಸುತ್ತಮುತ್ತಲಿರುವ ಎಲ್ಲ ವಸ್ತುಗಳಿಂದ, ಎಲ್ಲ ವ್ಯಕ್ತಿಗಳಿಂದ ಕಲಿಯುವುದು ಸಾಕಷ್ಟಿದೆ. ಕೆಲವರು ತಂದೆ, ತಾಯಿ, ಬಂಧು, ಬಳಗ ಎಲ್ಲರೂ ಇದ್ದರೂ ಸಹ ಅನಾಥರಂತೆ ಬದುಕುತ್ತಾರೆ. ಅದಕ್ಕೆ ಹಲವಾರು ತಪ್ಪು ತಿಳುವಳಿಕೆ ಹಾಗೂ ವೈಮನಸ್ಸುಗಳೇ ಕಾರಣ. ಇನ್ನೂ ಕೆಲವರು ಎಲ್ಲರೂ ಇದ್ದರೂ ಅನಾಥಾಶ್ರಮದ ಸದಸ್ಯರಾಗಿರುತ್ತಾರೆ. ಆದರೆ ತನ್ನವರಂತಾ ಯಾರು ಇಲ್ಲದೆ ನಿಜವಾಗಿಯೂ ಅನಾಥರಾಗಿ ಹುಟ್ಟಿದವರು, ಎಲ್ಲರೂ ಇದ್ದು ಅನಾಥರಾಗಿರುವವರಿಗಿಂತ ಬಹಳ ಸಂತೋಷವಾಗಿರುತ್ತಾರೆ ಎಂಬುದು ನನಗೆ ಒಬ್ಬ ಅನಾಥ ಹುಡುಗನಿಂದ ಗೊತ್ತಾಯಿತು. ಅವನನ್ನು ಸ್ನೇಹಿತನಾಗಿ ಪರಿಚಯ ಮಾಡಿಕೊಂಡಾಗ ಅವನಿಂದ ಬದುಕನ್ನು ಪ್ರೀತಿಸುವ ಸ್ವಭಾವ ನನ್ನಲ್ಲಿ ಬಂದಿದೆ. ಅವನನ್ನು ನೋಡಿದಾಗಿನಿಂದ ನಾನು ನನ್ನಿಂದಾಗದ ಕೆಲಸಗಳಿಗೆ ಕುಂಟು ನೆಪಗಳನ್ನು ಹೇಳುವುದನ್ನು ಬಿಟ್ಟಿರುವೆ. ಕಷ್ಟಗಳನ್ನು ಇಷ್ಟಪಟ್ಟು ಎದುರಿಸುವ ಕಲೆ ನನಲ್ಲಿ ಬಂದಿದೆ. ಅವನು ಕೂಡ ನನಗೊಂದು ಸ್ಪೂರ್ತಿ. ಅವನ ನೆನಪಲ್ಲಿ ಈ ಚಿಕ್ಕ ಕವಿತೆ…

” ನಾನು ಯಾವತ್ತೂ ತಾಯಿಯ
ಜೋಗುಳ ಕೇಳಿ ಮಲಗಲಿಲ್ಲ…

ಒಂದಿನಾನೂ ತಂದೆಯ
ಬೈಗುಳ ಕೇಳಿ ಎದ್ದೇಳಲಿಲ್ಲ…

ಏಕಾಂಗಿ ಜಗತ್ತಿನಲ್ಲಿ ನಾನೊಬ್ಬ ಅನಾಥ.
ಆದರೂ ನನಗೇನು ಬೇಜಾರಿಲ್ಲ…

ಸೂರಿಲ್ಲದೇ ಬೀದಿಯ ಮೇಲೆ
ಜೀವನ ಸಾಗಿಸೋರೆಲ್ಲ ನನ್ನ ಬಂಧುಗಳು …

ದಿಕ್ಕಿಲ್ಲದ ಅನಾಥರೆಲ್ಲ ನನ್ನ ಸೋದರರು…

ಮಾಡದ ತಪ್ಪಿಗೆ ಮರೆಯಲಾಗದ ಶಿಕ್ಷೆಗೆ
ಗುರಿಯಾದವರೇ ನನ್ನ ಸ್ನೇಹಿತರು …

ಹಸಿವಾದಾಗ ಕರೆದು ಕೈತುತ್ತು
ಕೊಟ್ಟವರೆಲ್ಲ ನನ್ನ ಸೋದರಿಯರು..

ನೊಂದವರೆಲ್ಲ ನನ್ನ ಆತ್ಮೀಯರು…

ಏನೋ ಪುಣ್ಯ ಮಾಡಿದೀರಿ. ಅದಕ್ಕೆ
ಆ ಪಾಪಿ ದೇವರು ನಿಮಗೆಲ್ಲಾ ಕೊಟ್ಟೌನೆ…

ಹೊಟ್ಟೆ ಹಸಿವು ನೀಗದಿದ್ದರೂ
ನನಗೆ ಜ್ಞಾನದ ಹಸಿವು ಸಾಕಷ್ಟು ನೀಗಿದೆ…

ನೊಂದವರ ನಗುವೇ ನನಗೆ ಸ್ಪೂರ್ತಿ…

ದೇವರ ಆರ್ಶೀವಾದವೇ ನನಗೆ ಶಕ್ತಿ…

ನಿಮ್ಮಂತೆ ನಾನು ಸಣ್ಣಪುಟ್ಟ
ಕಷ್ಟಗಳಿಗೆಲ್ಲ ಕುಗ್ಗಲ್ಲ…

ಹೇಡಿಯಂತೆ ನಾನು ಸಾಧಿಸದೆ ಸಾಯಲ್ಲ…

ನಾನು ಅನಾಥನೇ ಆದರೂ ನನಗೇನು ಬೇಜಾರಿಲ್ಲ.
ಯಾಕೇಂದರೆ ನನ್ನೊಂದಿಗೆ ದೇವರಿದ್ದಾನೆ…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books