ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ – Your Competition Begins Before Your Birth – Motivational Article in Kannada

You are currently viewing ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ – Your Competition Begins Before Your Birth – Motivational Article in Kannada

ಮಾನವನಾಗಿ ಜನಿಸಿದ ತಪ್ಪಿಗೆ ನಿಮಗೆ ಪದೇ ಪದೇ ಸಂಕಷ್ಟಗಳು ಬರುತ್ತಿವೆ, ಜನಸಂಖ್ಯೆ ಹೆಚ್ಚಾಗಿರುವುದರಿಂದ ಸ್ಪರ್ಧೆ ಹೆಚ್ಚಿದೆ ಎಂದು ನೀವು ಕೊರಗುತ್ತಿದ್ದರೆ ಮೊದಲು ನೀವು ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. “ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ” ಎಂಬ ಸತ್ಯವನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನೀವು ಹುಟ್ಟುವುದಕ್ಕಿಂತ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ. ನೀವು ಹುಟ್ಟುವಾಗಲೇ ಒಂದು ಮಹಾನ್ ರೇಸನ್ನು ಗೆದ್ದು  ವಿಜಯಶಾಲಿಯಾಗಿ ಕಣ್ತೆರೆದಿರುವಿರಿ…

ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ - Your Competition Begins Before Your Birth - Motivational Article in Kannada

ಲೈಂಗಿಕ ಸಂಭೋಗದ ನಂತರ, ಮನುಷ್ಯನಿಂದ ಸಂಗ್ರಹಿಸಲ್ಪಟ್ಟ ಸುಮಾರು 200 ರಿಂದ 300 ಮಿಲಿಯನ್ ವೀರ್ಯಾಣುಗಳು (Sperms) ಅಂಡಾಣುವನ್ನು (Ovum / Egg) ತಲುಪಲು ಫೀಮೇಲ್ ರಿಪ್ರೊಡಕ್ಟಿವ್ ಟ್ರ್ಯಾಕನೊಳಗೆ ಮೇಲ್ಮುಖವಾಗಿ ಈಜಲು ಪ್ರಾರಂಭಿಸುತ್ತವೆ. 300 ಮಿಲಿಯನನಲ್ಲಿ ಕೇವಲ 300 ರಿಂದ 500 ವೀರ್ಯಾಣುಗಳು ಮಾತ್ರ ಅಂಡಾಣುವನ್ನು ತಲುಪುತ್ತವೆ. ಏಕೆಂದರೆ ಇದು ಸುಲಭವಾದ ಓಟವಲ್ಲ, ಇದರಲ್ಲಿ ಬಹಳಷ್ಟು ವೀರ್ಯಾಣುಗಳು ದಣಿದು ಹಿಂದೆ ಸರಿಯುತ್ತವೆ. ಅಂಡಾಣುವನ್ನು ತಲುಪಿದ 500 ವೀರ್ಯಾಣುಗಳಲ್ಲಿ ಕೇವಲ 1 ವೀರ್ಯಾಣು ಮಾತ್ರ ಮೊಟ್ಟೆಯೊಂದಿಗೆ ಫಲವತ್ತಾಗುತ್ತದೆ. ಅಂತಹ ವಿಜೇತ ವೀರ್ಯಾಣುಗಳಲ್ಲಿ ನೀವು ಒಬ್ಬರು. ನೀವು ಹುಟ್ಟುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗುತ್ತದೆ. ನೀವು ಹುಟ್ಟುವಾಗಲೇ ವಿಜಯಶಾಲಿಯಾಗಿ ಹುಟ್ಟುತ್ತೀರಿ. You are a champion from by birth only…

ನೀವು ಜನಿಸುವ ಮೊದಲೇ ನಿಮ್ಮ ಸ್ಪರ್ಧೆ ಪ್ರಾರಂಭವಾಗಿದೆ - Your Competition Begins Before Your Birth - Motivational Article in Kannada

ಈ ವಿಷಯ ಮೊದಲೇ ನಿಮಗೆ ಗೊತ್ತಿರಬಹುದು. ಆದರೆ ನೀವು ಇದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ. ಒಂದು ವೇಳೆ ಈ ವಿಷಯ ನಿಮ್ಮ ತಲೆಯೊಳಗೆ ಹೋಗಿದ್ದರೆ ನೀವು ನಿಮ್ಮ ಜೀವನದಲ್ಲಿ ಬರುವ ಸಂಕಷ್ಟಗಳಿಗೆ, ಸ್ಪರ್ಧೆಗೆ ಹೆದರುತ್ತಿರಲಿಲ್ಲ. ಒಂದು ಸಲ ಶಾಂತಚಿತ್ತದಿಂದ ಯೋಚಿಸಿ, ನೀವು ಜನಿಸುವ ಮೊದಲು ಕಣ್ಣಿಲ್ಲದೆ, ಕಾಲಿಲ್ಲದೇ, ಮೆದುಳಿಲ್ಲದೇ, ಬುದ್ಧಿಯಿಲ್ಲದೆ, ವಿದ್ಯೆಯಿಲ್ಲದೆ, ಯಾರ ಸಹಾಯವೂ ಇಲ್ಲದೆ ನೀವು ನಿಮ್ಮ ಮೊದಲ ಯುದ್ಧವನ್ನು ಯಶಸ್ವಿಯಾಗಿ ಗೆದ್ದಿರುವಿರಿ. ಹೀಗಿರುವಾಗ ನೀವು ಈಗ್ಯಾಕೆ ಸುಮ್ಮನೆ ಚಿಂತಿಸುತ್ತಾ ಕೈಕಟ್ಟಿ ಕುಳಿತ್ತಿದ್ದೀರಾ? ನಿಮ್ಮ ಬಳಿ ಈಗ ಕೈ, ಕಾಲು, ಕಣ್ಣು, ಮೆದುಳು, ಬುದ್ಧಿ, ವಿದ್ಯೆ ಎಲ್ಲವು ಇರುವಾಗ ಚಿಂತೆಯೇಕೆ? ನಿಮಗಿಂತ ನಿಮ್ಮ ಸಮಸ್ಯೆಗಳು ದೊಡ್ಡವಲ್ಲ. ಜನಿಸುವ ಮೊದಲೇ 300 ಮಿಲಿಯನ್ ಜನರೊಂದಿಗೆ ಸ್ಪರ್ಧಿಸಿ ಗೆದ್ದವರಿಗೆ ಈಗ ಜನಿಸಿದ ನಂತರ ಕೆಲವೊಂದಿಷ್ಟು ಜನರೊಂದಿಗೆ, ಕೆಲವೊಂದಿಷ್ಟು ಸಮಸ್ಯೆಗಳೊಂದಿಗೆ ಸ್ಪರ್ಧಿಸಿ ಗೆಲ್ಲುವುದು ದೊಡ್ಡ ವಿಷಯವೇನಲ್ಲ. ಅಲ್ವಾ? ಸತ್ತ ವೀರ್ಯಾಣುವಿಗೂ ಸಹ ಜನ್ಮ ನೀಡುವ ಸಾಮರ್ಥ್ಯವಿರುವಾಗ ಜೀವಂತವಾಗಿರುವ ನಿಮಗೇನಾಗಿದೆ? ನಿಮ್ಮ ಜೀವನದಲ್ಲಿ ಬಂದಿರುವ ಸಮಸ್ಯೆಗಳನ್ನು, ಸ್ಪರ್ಧೆಗಳನ್ನು ಧೈರ್ಯವಾಗಿ ಎದುರಿಸಿ ವಿಜಯಶಾಲಿಗಳಾಗಿ. ಚಾಂಪಿಯನಗಳಿಗೆ ಹೆಚ್ಚಿಗೆ ಹೇಳುವ ಅವಶ್ಯಕತೆಯಿಲ್ಲ ಅನ್ಕೋತ್ತೀನಿ. All the Best and Thanks you…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books