XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು…

You are currently viewing XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು…

ಯಾರಿಗೂ ಏನನ್ನೂ ಹೇಳದೆ ನಮ್ಮ ಪಾಡಿಗೆ ನಾವು ಹಾಯಾಗಿರಬೇಕು ಅಂತಾ ಎಷ್ಟೋ ಸಲ ಅಂದುಕೊಳ್ಳುತ್ತೇವೆ. ಆದರೆ ಕಣ್ಮು೦ದೆ ಹಾಳಾಗುವವರನ್ನು ನೋಡಿದಾಗ ಕೆಲವು ಮಾತುಗಳನ್ನು ಹೇಳಲೇಬೇಕು ಅಂತಾ ಅನಿಸುತ್ತೆ. ಈ ಹಾಳಾದ ಮನಕ್ಕೆ ಹಾಳಾಗುವವರನ್ನು ನೋಡಿ ಸುಮ್ಮನೆ ಕೂರಲು ಆಗುವುದೇ ಇಲ್ಲ. ಮನಸ್ಸು ಮನಸ್ಸಬಿಚ್ಚಿ ಮಾತಾಡುತ್ತಲೇ ಇರುತ್ತೆ. ಮನಸ್ಸಿನ ಮಾತುಗಳಿಗೆ ಬೆಲೆ ಕೊಡದವನು ತನ್ನ ಬೆಲೆಯನ್ನು ತಾನೇ ಕಳೆದುಕೊಳ್ಳುತ್ತಾನೆ. ಅಂತಹ XYZ ವ್ಯಕ್ತಿಗಳಿಗೆ ಹೇಳಲೇಬೇಕಾದ ಮಾತುಗಳು ಇಂತಿವೆ ;

೧) ಬಾಳನ್ನು ಬೆಳಗಬಲ್ಲವರನ್ನು ಬಾಳ ಸಂಗಾತಿಗಳಾಗಿ ಆಯ್ಕೆ ಮಾಡಿಕೊಳ್ಳಿ. ಬಾಳಿಗೆ ಬೆಂಕಿ ಇಡುವವರನ್ನು ನಂಬಿ ಮೋಸ ಹೋಗಬೇಡಿ.

೨) ನಿಮ್ಮ ಪ್ರೀತಿ ನಿಮ್ಮ ಹೃದಯದಲ್ಲಿದ್ದರೆ ಸಾಕು. ಅದನ್ನು ಕಂಡಕಂಡ ಕಬ್ಬನ್ ಪಾರ್ಕಗಳಲ್ಲಿ ಚಿತ್ರವಿಚಿತ್ರವಾಗಿ ಪ್ರದರ್ಶಿಸುವ ಅವಶ್ಯಕತೆ ಏನಿಲ್ಲ.

೩) ನಿಮ್ಮ ಪ್ರೀತಿಯನ್ನು ನಿಮ್ಮ ಪ್ರಾಣ ಕೊಟ್ಟಾದರೂ ನಿರೂಪಿಸಿ. ಕಾಮ ತೀರಿದ ಮೇಲೆ ಪ್ರೇಮ ಮುಳ್ಳು ಮುಳ್ಳು ಅಂತ ದೂರ ಓಡಬೇಡ. ಪ್ರೀತಿಗಿರುವ ಪಾವಿತ್ರ್ಯತೆಯನ್ನು ಕೆಡಿಸಬೇಡಿ.

೪) ಓದುವ ವಯಸ್ಸಿನಲ್ಲಿ “ಪ್ರೀತಿ: ಪ್ರೇಮ :ಕಾಮ” ಇತ್ಯಾದಿಗಳ ಅವಶ್ಯಕತೆ ಇಲ್ಲ. ಓದುವ ವಯಸ್ಸಲ್ಲಿ ಚೆನ್ನಾಗಿ ಓದಿ, ನಿಮ್ಮ ತಂದೆತಾಯಿಗಳು ಹೆಮ್ಮೆಪಡುವಂತಹ ಕೆಲಸಗಳನ್ನು ಮಾಡಿ.

೫) ಕತ್ತಲಲ್ಲಿ ಮಡದಿಯ ಮೈಮುಟ್ಟೋ ಮುಂಚೆ ಅವಳ ಮನಸ್ಸನ್ನು ಮುಟ್ಟಲು ಪ್ರಯತ್ನಿಸಿ. ಬೆಳಕಲ್ಲಿ ಅವಳ ಮನಸ್ಸಿನ ಭಾವನೆಗಳನ್ನು ಒಮ್ಮೆಯಾದರೂ ಪ್ರೀತಿಸಿ. ಅವಳ ಬೇಡಿಕೆಗಳನ್ನು ಪೂರೈಸಿ.

೬) ಶಕುನಿಯಂಥವರ ಸಿಹಿ ಮಾತುಗಳನ್ನು ನಂಬಬೇಡಿ. ಯಾಕೇಂದರೆ ಅವು ಮಾಯಾ ಮಾತುಗಳು. ಅವು ಒಂದಿನ ತಮ್ಮ ನಯವಂಚಕತನದ ನೆರಳಲ್ಲಿ ನಿಮ್ಮನ್ನೇ ಮಸಣ ಸೇರಿಸುತ್ತವೆ. ಅನುಮಾನವಿದ್ದರೆ ಒಮ್ಮೆ ನಂಬಿ ನೋಡಿ. ನಿಮಗೆ ಕೆಟ್ಟ ಮೇಲೆನೆ ಬುದ್ಧಿ ಬರೋದು.

೭) ಯಾರನ್ನೂ ಸಹ ಕೀಳಾಗಿ ಕಾಣುವ ಅವಶ್ಯಕತೆ ಇಲ್ಲ. ಯಾಕೇಂದರೆ Footpath ಮೇಲೆ ನಡೆದಾಡಿದವರು ಕೂಡ Footprints ಬಿಟ್ಟೊಗತ್ತಾರೆ.

೮) ಕೆಲವು ಸಲ ಸುಳ್ಳೇಳಬೇಕು. ಒಳ್ಳೆಯ ಉದ್ದೇಶಕ್ಕೆ ಸುಳ್ಳೆಳೋದು ತಪ್ಪಲ್ಲ. ಆದರೆ ಕೆಟ್ಟ ಉದ್ದೇಶಕ್ಕಾಗಿ ಸುಳ್ಳಿಗೂ ನಾಚಿಕೆಯಾಗುವಂತೆ ಸುಳ್ಳೇಳೊದು ಶುದ್ಧ ತಪ್ಪು.

೯) ಬೇಡವಾದವರ ಮಧ್ಯೆ ಬೇಸರದಿಂದ ಬದುಕುವುದಕ್ಕಿಂತ ಅಪರಿಚಿತರ ಜೊತೆ ಬದುಕೋದು ಎಷ್ಟೋ ವಾಸಿ.

೧೦) ಹತ್ತು ಕೈಗಳ ಕೆಲಸವನ್ನು ಒಬ್ಬಳೇ ಮಾಡಿದರೂ ಅವಳ ಮೇಲೆ ಯಾರಿಗೂ ಪ್ರೀತಿ ಹುಟ್ಟಲ್ಲ. ಅವಳ ಬೆಲೆ ಗೊತ್ತಾಗಲ್ಲ. ಪ್ರತಿ ಮನೆಯ ಮಹಾಲಕ್ಮೀ ಅವಳು. ಅವಳನ್ನು ಗೌರವಿಸಿ, ಪ್ರೀತಿಸಿ ಮತ್ತು ರಕ್ಷಿಸಿ.

XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು...

೧೧) ಕೆಲವರು ಬೇಡ ಅಂದ್ರು ಪ್ರೀತಿ ಅಂತಾ ಬರ್ತಾರೆ. ಬಂದು ಪರದೇಶಿ ಮಾಡಿ ಬಿಟ್ಟು ಹೋಗ್ತಾರೆ. ನಿಮ್ಮ ಹಾರ್ಟ್ ಜೋಪಾನ…

೧೨) ಹೊರಗೆ ಮುಳ್ಳಂತಿದ್ದರೂ, ಒಳಗೆ ಹೂವಿನಂತಿರಿ. ಆದರೆ ಹೊರಗೆ ಹೂವಿನಂತಿದ್ದು, ಒಳಗೆ ಮುಳ್ಳಿನಂತಿರಬೇಡಿ.

XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು...

೧೩) ಕಾರಣವಿಲ್ಲದೆ ತರಲೆಗಳನ್ನು ಮಾಡಬೇಡಿ. ಆಮೇಲೆ ಪುಕ್ಸಟ್ಟೆ ಜೋಕರ ಕೆಲ್ಸ ಮಾಡಬೇಕಾಗುತ್ತದೆ.

೧೪) ಕೊರಳಲ್ಲಿ ಶೂಲವಿದ್ರೂ ಪರವಾಗಿಲ್ಲ. ಆದರೆ ತಲೆ ಮೇಲೆ ಸಾಲ ಇರಬಾರದು.

XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು...

೧೫) ಅವಳ ಕಡೆಗೆ ಮತ್ತು ಅವಳ ದೇಹದ ಖಾಸಗಿ ಅಂಗಗಳ ಕಡೆಗೆ ದುರುಗುಟ್ಟಿಕೊಂಡು ನೋಡೋದನ್ನು ನಿಲ್ಲಿಸಿ. ಪ್ರತಿಕ್ಷಣ ಅವಳು ಭಯದಲ್ಲಿ ಬದುಕುತ್ತಿದ್ದಾಳೆ. ಅವಳಿಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ. ಅವಳನ್ನು ಅವಳ ಪಾಲಿಗೆ ಬದುಕಲು ಬಿಟ್ಟು ಬಿಡಿ ಪ್ಲೀಸ್…

೧೬) ಮುಂದೆ ನಗೆ ಸೂಸ್ತಾ ಬಲಗೈಯಲ್ಲಿ ಹ್ಯಾಂಡ ಶೇಕ್ ಮಾಡಿ, ಹಿಂದೆ ಹಗೆ ಕಾರಿ ಎಡಗಾಲಲ್ಲಿ ಒದೆಯೋ ದೋಸ್ತಿ ಬೇಡ. ಗೆಳೆಯರೆಲ್ಲ ಒಳ್ಳೆಯವರಲ್ಲ.

XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು...

೧೭) ಜೀವನದಲ್ಲಿ ಹಾಯ್-ಬಾಯ್ ಫ್ರೇಂಡ್ಸಗಿಂತ, ಹೆಗಲ ಮೇಲೆ ಕೈಹಾಕಿ ಹೆಮ್ಮೆಯಿಂದ ತಿರುಗಾಡೋ ಫ್ರೆಂಡ್ಸ್ ತುಂಬಾ ಮುಖ್ಯ.

೧೮) ಪ್ರತಿಸಲ ಶತ್ರುಗಳನ್ನು ಗೆಲ್ಲೊಕ್ಕಾಗಲ್ಲ. ಕೆಲವು ಸಲ ಕೊಲ್ಲಲೇಬೇಕಾಗುತ್ತದೆ. ಶತ್ರುಗಳನ್ನು ಮಿತ್ರರಂತೆ ಕಾಣುವ ಅವಶ್ಯಕತೆ ಏನಿಲ್ಲ.

೧೯) ಜೀವನದಲ್ಲಿ ಫೇಸ್ಬುಕ್ ಫ್ರೇಂಡ್ಸಗಿಂತ ಲೈಫ್ಬುಕ್ ಫ್ರೆಂಡ್ಸ್ ತುಂಬಾ ಮುಖ್ಯ ಆಗ್ತಾರೆ ಎಂಬುದು ನೆನಪಿದ್ದರೆ ಸಾಕು. ಎಲ್ಲೋ ದೂರದಲ್ಲಿರುವ ಗೆಳೆಯರಿಗಾಗಿ ಸಮೀಪದಲ್ಲಿರೋ ಗೆಳೆಯರನ್ನು ದೂರ ಮಾಡ್ಕೋಬೇಡಿ.

೨೦) ಪ್ರೀತಿ ಒಂದು ವಾಸಿಯಾಗದ ಕಾಯಿಲೆ. ಆದರೆ ಸ್ನೇಹ ಎಲ್ಲ ಕಾಯಿಲೆಗಳನ್ನು ವಾಸಿ ಮಾಡುವ ಸಂಜೀವಿನಿ. ಈ ಔಷಧಿಯನ್ನು ಸರಿಯಾದ ಸಮಯಕ್ಕೆ ಕೊಟ್ಟು ಜೀವ ಉಳಿಸುವವರು ತುಂಬಾ ಕಡಿಮೆ ಜನ ಇದಾರೆ. ಅವರನ್ನು ಗೌರವಿಸಿ, ಪ್ರೀತಿಸಿ, ಉಳಿಸಿ..

೨೧) ಸಮಾಜವನ್ನು ದೂರುವ ಮೊದಲು ನಿನ್ನನ್ನು ನೀನು ಅಧ್ಯಯನ ಮಾಡು. ನೀನೊಂದು ಜೀವಂತ ಕಾವ್ಯ…

೨೨) ಸಿಗದಿರೋ ಎಲ್ಲ ವಸ್ತುಗಳು ಶ್ರೇಷ್ಟವಲ್ಲ. ಸಿಕ್ಕಿರೋ ಎಲ್ಲ ವಸ್ತುಗಳು ಕೇವಲವಲ್ಲ. ಸಿಕ್ಕಿರೊದಕ್ಕೆ ಸಂತಸಪಟ್ಟು, ಸಿಗದಿರೊದನ್ನು ಮರೆತು ಬಿಡುವುದೇ ಜಾಣರ ಲಕ್ಷಣ.

೨೩) ಕಣ್ಣೀರಿಗೆ ಕರಗಿ ಕನಿಕರ ತೋರಿಸಬೇಕು. ಆದ್ರೆ ಮೊಸಳೆ ಕಣ್ಣೀರಿಗಲ್ಲ.

೨೪) ಪ್ರೀತಿಯೆಂಬ ಕಾಮನಬಿಲ್ಲಿನಲ್ಲಿ ಕಾಮದ ಬಣ್ಣವನ್ನು ಹುಡಕಬೇಡಿ. ಮೋಸದ ಬಣ್ಣವನ್ನು ಸೇರಿಸಬೇಡಿ. ನಂಬಿಕೆಯ ಬಣ್ಣವನ್ನು ಅಳಿಸಬೇಡಿ.

೨೫) “ಮುತ್ತು” ಪ್ರೀತಿ, ಆತ್ಮೀಯತೆ ಹಾಗೂ ಗೌರವದ ಸಂಕೇತ. ಅದನ್ನು ಬೇರೆ ಉದ್ದೇಶಕ್ಕೆ ಬಳಸಬೇಡಿ.

೨೬) ಕರಿ ಬೆಕ್ಕು ಎದುರಾದರೆ ಕೆಟ್ಟ ಕನಸು ಬೀಳ್ತದಾ?
ಕನ್ನಡಿ ಒಡೆದರೆ ಕೇಡಗಾಲ ಬರ್ತದಾ?
ರಾಹುಕಾಲದಲ್ಲಿ ಪ್ರೀತಿ ಮಾಡಬಾರ್ದಾ?
ಗ್ರಹಣ ಕಾಲದಲ್ಲಿ ಊಟ ಮಾಡಬಾರ್ದಾ?
ಇತ್ಯಾದಿ… ನಿಮ್ಮ ನಂಬಿಕೆಗಳು ಮೂಢನಂಬಿಕೆಗಳಾದಿರಲಿ ಅಷ್ಟೇ.

೨೭) ಹುಟ್ಟೋವಾಗ ಮೂರ ಜನ ಇದ್ದ್ರು ಪರವಾಗಿಲ್ಲ. ಹೊತ್ಕೊಂಡ ಹೋಗೋವಾಗ ಆರ್ ಜನ ಇದ್ದ್ರು ಪರವಾಗಿಲ್ಲ. ಆದ್ರೆ ಹುಟ್ಟು ಸಾವುಗಳ ನಡುವೆ ಕೋಟ್ಯಾಂತರ ಜನ ನಮ್ಮನ್ನು ಗುರ್ತಿಸಲೇಬೇಕು. ಆ ಮಟ್ಟಿಗೆ ನಾವು ಬೆಳೆಯಬೇಕು.

೨೮) ಮನಸ್ಸಲ್ಲಿ ಬೆಂಕಿಯಿದ್ರು, ತುಟಿಗಳಲ್ಲಿ ಸಿಹಿಯಾದ ನಗೆಯಾಡಬೇಕು. ಆದ್ರೆ ಆ ನಗೆಯಲ್ಲಿ ಹಗೆಯ ಹೊಗೆಯಾಡಬಾರದು.

XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು...

೨೯) ಕೇಜಿಗಟ್ಟಲೆ ಕನಸು ಕಂಡರೂ ಕ್ರೇಜಿನೆಸ್ (Craziness) ಇರಲಿ. ಕನಸು ಕಾಣೋಕೆ ಲೆಜಿನೆಸ್ (Laziness) ಬೇಡ.

೩೦) ರೋಗ ಬರುವುದಕ್ಕಿಂತ ಮುಂಚೆ ಯೋಗ ಮಾಡಿ.

XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು...

೩೧) ನಿಮ್ಮಲ್ಲಿರುವ ಕಲೆಯನ್ನು ಯಾವುದೇ ಕಾರಣಕ್ಕೂ ಕೊಲೆ ಮಾಡಬೇಡಿ ಪ್ಲೀಸ್.

೩೨) ತಾಕತ್ತನ್ನಾ ಮತ್ತು ಟ್ಯಾಲೆಂಟನ್ನಾ ಅನಾವಶ್ಯಕವಾಗಿ ಪ್ರದರ್ಶಿಸಬಾರದು. ಸಮಯ ಬಂದಾಗ ಅದು ತಾನಾಗಿಯೇ ಹೊರ ಬರುತ್ತದೆ.

೩೩) ಬೇರೊಬ್ಬರ ಭರವಸೆಗಳು ನಿಮ್ಮ ಬದುಕಿನ ದಾರಿಯನ್ನು ತಪ್ಪಿಸುತ್ತವೆ. So ಬಿಟ್ಟಿ ಭರವಸೆಗಳ ಮೇಲೆ ಭರವಸೆ ಇಡಬೇಡಿ

೩೪) ನಿಮ್ಮನ್ನು ಅವಮಾನ ಮಾಡಿದವರಿಗೆ, ನಿಮ್ಮನ್ನು ನೋಯಿಸಿದವರಿಗೆ, ನಿಮಗೆ ವಂಚಿಸಿದವರಿಗೆ Thanks ಹೇಳಿ. ಯಾಕೆಂದರೆ ಅವರು ನಿಮ್ಮನ್ನು ಮಾನಸಿಕವಾಗಿ ಬಲಿಷ್ಟರನ್ನಾಗಿ ಮಾಡಿದ್ದಾರೆ. ನಿಮ್ಮ ಸಾಧನೆಯಿಂದ ಅವರ ಮೇಲೆ ಸೇಡು ತೀರಿಸಿಕೊಳ್ಳಿ.

XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು...

೩೫) ದೇವರ ಪಾದವನ್ನು ಮುಟ್ಟಿ ಭಿಕ್ಷೆ ಬೇಡುವ ಬದಲು, ನಿಮ್ಮ ಒಳ್ಳೆಯ ಕೆಲಸಗಳಿಂದ ದೇವರ ಆತ್ಮವನ್ನು ತಟ್ಟಲು ಪ್ರಯತ್ನಿಸಿ.

೩೬) ಹುಡುಗರೇ, ಬೇರೆ ಹುಡುಗಿಯ ಜೊತೆ ಕೆಟ್ಟದಾಗಿ ವರ್ತಿಸುವಾಗ ನಿಮ್ಮ ಮುದ್ದು ತಂಗಿಯ ಮುಖವನ್ನೊಮ್ಮೆ ನೋಡಿ. ಅದೇ ರೀತಿ ಹುಡುಗಿಯರೇ, ಬೇರೆ ಹುಡುಗರ ಬಾಳಲ್ಲಿ ಆಟವಾಡೊವಾಗ ನಿಮ್ಮ ಪ್ರೀತಿಯ ಅಣ್ಣನ ಮುಖವನ್ನೊಮ್ಮೆ ನೆನಪಿಸಿಕೊಳ್ಳಿ.

೩೭) ಜೇಬಲ್ಲಿ ಎಂಟಾನೆ ದುಡ್ಡಿಲ್ಲದಿದ್ರೂ ಎಂಟೆದೆ ಗುಂಡಿಗೆ ಇರಬೇಕು. ಎಂಥ ಸವಾಲು ಎದುರಾದರೂ ಎದೆಯಲ್ಲಿರೋ ಧೈರ್ಯವನ್ನು ಕಳೆದುಕೊಳ್ಳಬಾರದು.

೩೮) ನೀರು ಎಷ್ಟೇ ಬಿಸಿಯಾಗಿದ್ದರೂ ಅದು ಬೆಂಕಿಯನ್ನು ಆರಿಸಬಲ್ಲದು. ಅದೇ ರೀತಿ ನಿನ್ನವಳು ನಿನ್ನ ಮೇಲೆ ಎಷ್ಟೇ ಕೋಪಿಸಿಕೊಂಡರೂ ಕೊನೆಗೆ ನಿನ್ನನ್ನು ಕಾಪಾಡುವಳು.

XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು...

೩೯) ಲವ್ವು ಅನ್ನೋದು ಒಂದು ಹಗ್ಗದಂತೆ. ಅದರಿಂದ ಜೋಕಾಲಿನೂ ಆಡಬಹುದು. ನೇಣು ಹಾಕಿಕೊಳ್ಳಬಹುದು. ಮುಂದೇನು ಮಾಡಬೇಕೆಂಬುದು ನಿನಗೆ ಬಿಟ್ಟಿದ್ದು.

೪೦) ಸರಸರಿಂದ ಸಾವನ್ನು ಆಮಂತ್ರಿಸುವ ಸಾಹಸ ಬೇಡ.

XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು...

೪೧) ಇತರರ ಸಣ್ಣಪುಟ್ಟ ತಪ್ಪುಗಳನ್ನು ಕಂಡುಹಿಡಿದು ಅವುಗಳನ್ನು ಜಗಕ್ಕೆ ಎತ್ತಿ ತೋರಿಸಿ, ಅವರ ಒಳ್ಳೆಯ ಕಾರ್ಯಗಳನ್ನು ಮರೆಮಾಚಿ ಅವರನ್ನು ನಿಂದಿಸಿ ಅವಮಾನ ಮಾಡೋದು ಶುದ್ಧ ತಪ್ಪು. ಬೇರೆಯವರನ್ನು ನಿಂದಿಸುವುದರಿಂದ ನಿಮಗೆ ಏನೂ ಸಿಗಲ್ಲ. ಜೊತೆಗೆ ನಿಮ್ಮಲಿರೋ ಒಳ್ಳೇ ಗುಣಗಳು ನಿಮ್ಮನ್ನು ಬಿಟ್ಟು ಹೋಗುತ್ತವೆ.

೪೨) ದುಡ್ಡಿಲ್ಲ ಅಂತಾ ವಿಧಿನಾ ದೂರಬೇಡ. ವಿದ್ಯೆ ಇಲ್ಲದಿದ್ದರೆ ಏನಂತೆ? ಬುದ್ಧಿ ಇದೆಯಲ್ಲ? ಬುದ್ಧಿನಾ ಬಳಸು, ಸರಿಯಾದ ದಾರಿ ಸಿಕ್ಕೇ ಸಿಗುತ್ತೆ…

೪೩) ಗುಟ್ಟನ್ನು ಬಿಟ್ಟು ಕೊಟ್ರೆ ನಿಮ್ಮ ಜುಟ್ಟನ್ನು ಬೇರೆಯವರ ಕೈಗೆ ಕೊಟ್ಟಂತೆ. ನಿಮ್ಮ ಗುಟ್ಟುಗಳು ಗುಟ್ಟಾಗಿದ್ರೇನೆ ನೀವು ಕ್ಷೇಮ.

೪೪) ಕಷ್ಟ ಬಂತು ಅಂತಾ ಇಷ್ಟಪಟ್ಟಿದನ್ನ ಬಿಡಬೇಡಿ. ಇಷ್ಟ ಪಟ್ಟಿದ್ದನ್ನು ಕಷ್ಟಪಟ್ಟು ದುಡಿದಾದರೂ ಪಡೆದುಕೊಳ್ಳಿ.

೪೫) ಓದೋಕೆ ಅಂತಾ ಕುಂತ್ಮೇಲೆ ಪುಸ್ತಕಗಳ ಲೆಕ್ಕ ಹಾಕಬಾರದು.

XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು...

೪೬) ಸಾವು ಬೆನ್ನಟ್ಟಿಕೊಂಡು ಬಂದು ಎದೆ ಮೇಲೆ ಕುಂತ್ರು ನೀವು ಮಾತ್ರ ಸಾಧಿಸದೇ ಸಾಯದಿರಿ.

೪೭) ಬರೀ ಶಾಲೆಯಲ್ಲಿ ABCD ಕಲಿಸಿದವರು ಮಾತ್ರ ಗುರುಗಳಲ್ಲ. ನಮ್ಮ ಜೀವನದಲ್ಲಿ ಬಂದೋದ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಗುರುಗಳೇ.

೪೮) ಮುಂದಾಲೋಚನೆ ಮಂದ ಆಲೋಚನೆಯಾದರೆ, ಮಂದಹಾಸ ಮದದ ಹಾಸ್ಯವಾದರೆ, ನಿನ್ನನ್ನು ನಿನ್ನ ಅವನತಿಯಿಂದ ಕಾಪಾಡಲು ಆ ದೇವರಿಗೂ ಸಾಧ್ಯವಿಲ್ಲ.

XYZಗಳಿಗೆ ಹೇಳಲೇಬೇಕಾದ 50 ಕಿವಿ ಮಾತುಗಳು...

೪೯) ಜಗತ್ತು ಯಾವತ್ತೂ ಕೂಡ ಮುಳಗೋ ಸೂರ್ಯನಿಗೆ ನಮಸ್ಕಾರ ಮಾಡಲ್ಲ. ಸಂಸ್ಕಾರ ಮತ್ತು ಸಂಪತ್ತು ಇಲ್ಲದವನ ಜೊತೆ ಯಾರು ಸ್ನೇಹ ಬೆಳೆಸಿ ಸಲಾಂ ಹೊಡೆಯಲ್ಲ.

೫೦) ಡಿಗ್ರಿ ಸರ್ಟಿಫಿಕೇಟುಗಳನ್ನು ಹಿಡಿದುಕೊಂಡು ಕೆಲ್ಸಕ್ಕಾಗಿ ಬೀದಿಬೀದಿ ಅಲೆಯೋದಕ್ಕಿಂತ ನಿಮ್ಮ ಕೆಲಸವನ್ನು ನೀವೇ ಸೃಷ್ಟಿಸಿಕೊಳ್ಳಿ. ಹೊಸದಾದ ಉದ್ಯಮಗಳನ್ನು ಹುಟ್ಟುಹಾಕಿ, ನಿಮಗೆ ನೀವೇ ಬಾಸ್ (Boss) ಆಗಿ. ಕಾರ್ಮಿಕನಾಗಲು ಡಿಗ್ರಿಗಳು ಬೇಕೇಬೇಕು. ಆದರೆ ಮಾಲೀಕನಾಗಲು ನಿಮ್ಮ ಇಚ್ಛಾಶಕ್ತಿಯೊಂದೆ ಸಾಕು.

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books