ನಿಮ್ಮ ಪ್ರೀತಿಪ್ರೇಮವನ್ನು ನಿಮ್ಮ ಪಾಲಕರು ದ್ವೇಷಿಸಲು ಕಾರಣಗಳು : Why your parents hate your love stories in Kannada

You are currently viewing ನಿಮ್ಮ ಪ್ರೀತಿಪ್ರೇಮವನ್ನು ನಿಮ್ಮ ಪಾಲಕರು ದ್ವೇಷಿಸಲು ಕಾರಣಗಳು : Why your parents hate your love stories in Kannada

ಸದ್ಯಕ್ಕೆ ನಮ್ಮ ಸಮಾಜ ಪ್ರೇಮಿಗಳನ್ನು ಭಯೋತ್ಪಾದಕರಂತೆ ನೋಡ್ತಿದೆ. ಪ್ರೇಮಿಗಳನ್ನು ಕಂಡರೆ ಎಲ್ಲರ ಮೂಗಿನ ಮೇಲೆ ಕೆಂಡದಂಥ ಕೋಪ ಬಂದು ಬರಬಾರದ ಮಾತುಗಳು ಬಾಯಲ್ಲಿ ಸಲೀಸಾಗಿ ಬರುತ್ತವೆ. ಹೊಸ ಪ್ರೇಮಿಗಳ ಪ್ರೀತಿ ಈಗ ಪವಿತ್ರವಾಗಿ ಉಳಿಯುತ್ತಿಲ್ಲ. ಅದಕ್ಕಾಗಿ ಎಲ್ಲರೂ ಪ್ರೀತಿಯನ್ನು ದ್ವೇಷಿಸುತ್ತಾರೆ. ಪವಿತ್ರ ಪ್ರೀತಿಗೆ ಕಳಂಕ ತಂದವರಲ್ಲಿ ನೀವು ಕೂಡ ಒಬ್ಬರಾಗಬೇಡಿ. ಕಾರಣವಿಲ್ಲದೆ ಯಾರು ಯಾರನ್ನು ದ್ವೇಷಿಸುವುದಿಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ.

“ಮೋಜಿಗಾಗಿ ಪ್ರೀತಿಯ ದೋಸ್ತಿ, ಕಾಮಕ್ಕಾಗಿ ಪ್ರೇಮ” ಎಂಬ ಸಿದ್ಧಾಂತದಲ್ಲಿ ಹಲವರು ಮೋಹದ ಮುಖವಾಡಕ್ಕೆ ಪ್ರೀತಿಯ ಕಿರೀಟವನ್ನು ಧರಿಸಿ ಮೇಲೊಂದು ನಗುವಿನ ನವಿಲುಗರಿಯನ್ನು ಸಿಕ್ಕಿಸಿಕೊಂಡು, ಮಾತುಗಳಿಗೆ ಬಣ್ಣ ಹಚ್ಚಿಕೊಂಡು ಹೃದಯಗಳ ಜೊತೆಗೆ ಹುಸಿಪ್ರೀತಿಯ ರಂಗೀನಾಟವಾಡುತ್ತಿದ್ದಾರೆ. ಇಂಥಹ ಮೋಸದ ಪ್ರೀತಿಯನ್ನು ಗುರ್ತಿಸುವಲ್ಲಿ ವಿಫಲವಾದ ಮುಗ್ಧ ಮನಸ್ಸುಗಳು ಇಂದಿಗೂ ನರಳುತ್ತಿವೆ. ಆ ನೊಂದ ಮನಸ್ಸುಗಳಲ್ಲಿ ತಮ್ಮ ಮಕ್ಕಳು ಮನಸ್ಸು ಸಹ ಒಂದಾಗಬಾರದು ಎಂಬ ಪುಟ್ಟ ಆಸೆ ನಿಮ್ಮ ಹೆತ್ತವರದ್ದು…

ನಿಮ್ಮ ಪಾಲಕರೆಲ್ಲ ಮಾಡುವುದು ನಿಮ್ಮ ಒಳ್ಳೆಯದಕ್ಕೆನೇ ಅಲ್ವಾ? ಜೀವನದಲ್ಲಿ ಮನೆ ಕಟ್ಟಿ, ಮದುವೆಯಾಗಿ, ಮಕ್ಕಳು ಮಾಡೋದು ಒಂದು ಸಾಧನೆಯಲ್ಲ. ನಿಮ್ಮ ಪಾಲಕರು ನಿಮ್ಮನ್ನು ಉನ್ನತವಾದ ಸ್ಥಾನದಲ್ಲಿ ನೋಡಲು ಬಯಸುತ್ತಾರೆ. ಮೊದಲು ಏನಾದರೂ ಒಂದನ್ನು ಸಾಧಿಸಿ ಉನ್ನತ ಸ್ಥಾನಕ್ಕೇರಿ. ನಂತರ ಪ್ರೀತಿಸಿ. ಆಮೇಲೆ ನಿಮ್ಮ ಪ್ರೀತಿಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಮತ್ತು ಬೆಂಬಲಿಸುತ್ತಾರೆ. ಅದನ್ನು ಬಿಟ್ಟು ಓದನ್ನು ಅರ್ಧಕ್ಕೆ ನಿಲ್ಲಿಸಿ ಕೆಲ್ಸ ಕಾರ್ಯ ಇಲ್ಲದೆ ಬರೀ ಪ್ರೀತಿ ಪ್ರೇಮ ಅಂತ ತಿರುಗಿದರೆ ಯಾರು ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ? ಯಾವ ಮುಠ್ಠಾಳ ತಾನೇ ಕೆಲಸ ಕಾರ್ಯಗಳಿಲ್ಲದೆ ತಿರುಗುವವನನ್ನ ಬೆಂಬಲಿಸುತ್ತಾನೆ?

ನಿಮ್ಮ ತಂದೆತಾಯಿಗಳು ಸಿನಿಮಾದಲ್ಲಿನ ಪ್ರೀತಿಯನ್ನು ನೋಡಿ ಖುಷಿಪಡ್ತಾರೆ. ಆದರೆ ನಿಮ್ಮ ಪ್ರೀತಿಪ್ರೇಮದ ಕಥೆ ಕೇಳಿದಾಗ ಬಹಳಷ್ಟು ಆತಂಕ ಪಡ್ತಾರೆ. ಅದಕ್ಕಿರುವ ಕಾರಣ ಒಂದೇ!. ನಿಮ್ಮ ಭವಿಷ್ಯದ ಬಗ್ಗೆ ನಿಮ್ಮ ಪಾಲಕರಿಗಿರುವ ಅತೀವ ಕಾಳಜಿ. ಈ ಕಾಳಜಿಯಿಂದಲೆ ಅವರು ನಿಮ್ಮ ಪ್ರೀತಿಯನ್ನು ಮತ್ತು ಪ್ರೀತಿಪಾತ್ರರನ್ನು ದ್ವೇಷಿಸುತ್ತಾರೆ.

ಓಡೋಗಿ ಮದುವೆಯಾಗೋಕೆ ನೀವೇನು ಹೇಡಿಗಳಾ? ಹುಟ್ಟಿದ ಊರಲ್ಲೇ ಎಲ್ಲರ ಮನಗೆದ್ದು, ಎಲ್ಲರನ್ನೂ ಒಪ್ಪಿಸಿ, ಎಲ್ಲರ ಆರ್ಶೀವಾದಗಳೊಂದಿಗೆ ಮದುವೆಯಾಗುವವರೆ ನಿಜವಾದ ಪ್ರೇಮಿಗಳು. ಬರೀ ನಿಮ್ಮ ಪಾಲಕರಷ್ಟೇ ಅಲ್ಲ, ಇಡೀ ಸಮಾಜ ಒಪ್ಪಿ ನಿಮ್ಮನ್ನು ಬೆಂಬಲಿಸುವ, ಪ್ರೀತಿಸುವ ಪ್ರೇಮಿಗಳು ನೀವಾಗಿ… ಸಮಾಜ ದ್ವೇಷಿಸುವ ಪ್ರೇಮಿಗಳು ನೀವಾಗದಿರಿ… All the best…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books