ವರ ಮಹಾಲಕ್ಷ್ಮಿ ಪೂಜಾ ಕಥೆ – ವರ ಮಹಾಲಕ್ಷ್ಮೀ ವೃತ ಕಥೆ – Mahalaxmi Pooja Story in Kannada – Varamahalakshmi Vratha Story in Kannada

You are currently viewing ವರ ಮಹಾಲಕ್ಷ್ಮಿ ಪೂಜಾ ಕಥೆ – ವರ ಮಹಾಲಕ್ಷ್ಮೀ ವೃತ ಕಥೆ – Mahalaxmi Pooja Story in Kannada – Varamahalakshmi Vratha Story in Kannada

ಮಹಾಲಕ್ಷ್ಮೀ ಪೂಜಾ ದಿನ ದೀಪಾವಳಿ ಹಬ್ಬದ ಮುಖ್ಯ ದಿನವಾಗಿದೆ‌. ಕಾರ್ತಿಕ ಮಾಸದ ಅಮಾವಾಸ್ಯೆಯ ರಾತ್ರಿ ಲಕ್ಷ್ಮೀ ಪೂಜೆಯನ್ನು ಆಚರಿಸುತ್ತಾರೆ. ಲಕ್ಷ್ಮೀದೇವಿಯ ಜೊತೆಗೆ ವಿಘ್ನ ನಿವಾರಕನಾದ ಗಣಪತಿ, ವಿದ್ಯಾದೇವಿ ಸರಸ್ವತಿ ಹಾಗೂ ಸಂಪತ್ತಿನ ದೇವರು ಕುಬೇರನನ್ನೂ ಸಹ ಈ ದಿನ ಪೂಜಿಸುತ್ತಾರೆ.

ಕಾರ್ತಿಕ ಮಾಸದ ಅಮವಾಸ್ಯೆಯ ದಿನ ರಾತ್ರಿ ಲಕ್ಷ್ಮೀದೇವಿ ಭೂಮಿಯ ಮೇಲೆ ಸಂಚರಿಸುತ್ತಾಳೆ ಹಾಗೂ ತನ್ನನ್ನು ಸ್ವಚ್ಛ ಮನಸ್ಸಿನಿಂದ ಆರಾಧಿಸಿದವರಿಗೆ ಐಶ್ವರ್ಯ ಹಾಗೂ ಆರೋಗ್ಯವನ್ನು ಕೊಟ್ಟು ಆರ್ಶೀವದಿಸುತ್ತಾಳೆ‌. ಅದಕ್ಕಾಗಿ ದೀಪಾವಳಿಯ ಅಮವಾಸ್ಯೆ ದಿನದಂದು ವರ ಮಹಾಲಕ್ಷ್ಮಿ ಪೂಜೆಯನ್ನು ಭಕ್ತಿಯಿಂದ ಮಾಡುತ್ತಾರೆ. ಪ್ರತಿ ಮನೆಯ ನಿಜವಾದ ಮಹಾ ಲಕ್ಷ್ಮೀಯರಾದ ಮಹಿಳೆಯರು ಮನೆಯನ್ನು ಸಾರಿಸಿ ಗೂಡಿಸಿ ಸ್ವಚ್ಛಗೊಳಿಸುತ್ತಾರೆ. ತಳಿರು ತೋರಣಗಳಿಂದ ಶೃಂಗರಿಸುತ್ತಾರೆ. ಸಂಜೆ ಮನೆ ತುಂಬೆಲ್ಲ ದೀಪಗಳನ್ನು ಹಚ್ಚಿ ಬೆಳಕನ್ನು ಬೆಳಗಿಸುತ್ತಾರೆ. ಮನೆಯ ದೇವರ ಕೋಣೆಯಲ್ಲಿ ವಿಧಿ ವಿಧಾನ ಪೂರ್ವಕವಾಗಿ ಮಹಾಲಕ್ಷ್ಮೀಯ ಪೂಜೆ ಮಾಡಿ ಲಕ್ಷ್ಮೀದೇವಿಯನ್ನು ಮನೆಗೆ ಆಮಂತ್ರಿಸುತ್ತಾರೆ. ಸಿಹಿ ತಿಂಡಿಗಳ ನೈವೇದ್ಯ ತೋರಿಸುತ್ತಾರೆ. ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಮಹಾಲಕ್ಷ್ಮಿ ಪೂಜೆ ಮಾಡುತ್ತಾರೆ. ಆನಂತರ ಲಕ್ಷ್ಮೀದೇವಿ ತನ್ನನ್ನು ಭಕ್ತಿಯಿಂದ ಪೂಜಿಸಿದ ಭಕ್ತರ ಮನೆಗೆ ಹೋಗಿ ಅವರನ್ನು ಆರ್ಶಿವದಿಸುತ್ತಾಳೆ. ಇದು ಮಹಾಲಕ್ಷ್ಮಿ ಪೂಜೆಯ ಆಚರಣೆ ಹಾಗೂ ಮಹತ್ವವಾಯಿತು. ಇದರ ಹಿಂದೆಯೂ ಒಂದು ಕಥೆಯಿದೆ.

Varamahalakshmi diwali Pooja

ವರ ಮಹಾಲಕ್ಷ್ಮಿ ಪೂಜಾ ಕಥೆ – ವರ ಮಹಾಲಕ್ಷ್ಮಿ ವೃತ ಕಥೆ : Varamahalakshmi Vratha Story in Kannada

ಪ್ರಾಚೀನ ಪುರಾಣಗಳ ಅನುಸಾರ ಬಹಳ ವರ್ಷಗಳ ಹಿಂದೆ ಒಂದು ಹಳ್ಳಿಯಲ್ಲಿ ಒಬ್ಬ ಸಾಹುಕಾರನಿದ್ದನು. ಆದರೆ ಅವನ ಬಳಿ ಅಷ್ಟೊಂದು ಹಣ ಆಸ್ತಿ ಅಂತಸ್ತೇನು ಇರಲಿಲ್ಲ. ಅವನ ಮಗಳು ಪ್ರತಿ ದಿನ ತಪ್ಪದೇ ಊರಾಚೆ ಇರುವ ಒಂದು ದೊಡ್ಡ ಆಲದ ಮರಕ್ಕೆ ನೀರು ಹಾಕಲು ಹೋಗುತ್ತಿದ್ದಳು. ಆ ಆಲದ ಮರ ಸಾಕ್ಷಾತ್ ಲಕ್ಷ್ಮೀ ದೇವಿಯ ವಾಸಸ್ಥಾನವಾಗಿತ್ತು. ಒಂದಿನ ಲಕ್ಷ್ಮೀದೇವಿ ಆ ಸಾಹುಕಾರನ ಮಗಳ ಭಕ್ತಿಗೆ ಮೆಚ್ಚಿ “ನೀನು ನನ್ನ ಗೆಳತಿಯಾಗು…” ಎಂದು ಕೇಳಿಕೊಂಡಳು. ಆಗ ಆ ಹುಡುಗಿ “ನನ್ನ ತಂದೆಗೆ ಕೇಳಿ‌ ಹೇಳುವೆ…” ಎಂದೇಳಿ ಮನೆಗೆ ಮರಳಿದಳು. ಅವಳು ತನ್ನ ತಂದೆಗೆ “ಆಲದ ಮರದಲ್ಲಿರುವ ಮಹಿಳೆಯೊಬ್ಬಳು ನನಗೆ ಅವಳೊಂದಿಗೆ ಗೆಳೆತನ ಮಾಡುವಂತೆ ಹೇಳಿದ್ದಾಳೆ, ಏನು ಮಾಡಲಿ…?” ಎಂದು ಕೇಳಿದಳು. ಆಗ ಸಾಹುಕಾರ “ಸರಿ ಗೆಳೆತನ ಮಾಡು, ಅದರಲ್ಲಿ ತಪ್ಪೇನಿದೆ, ಗೆಳೆತನ ಮಾಡು” ಎಂದು ಅವಳಿಗೆ ಅನುಮತಿ ಕೊಟ್ಟನು‌. ಮರು ದಿನ ಸಾಹುಕಾರನ ಮಗಳು ಎಂದಿನಂತೆ ಆಲದ ಮರಕ್ಕೆ ನೀರು ಹಾಕಲು ಹೋದಳು. ಆಗಾಕೆ ಲಕ್ಷ್ಮೀದೇವಿಯೊಡನೆ ಗೆಳೆತನ ಮಾಡಲು ಒಪ್ಪಿಗೆ ನೀಡಿದಳು. ಅವತ್ತಿನಿಂದ ಲಕ್ಷ್ಮೀದೇವಿ ಹಾಗೂ ಆ ಸಾಹುಕಾರನ ಮಗಳು ಒಳ್ಳೇ ಗೆಳತಿಯರಾದರು.

ಒಂದಿನ ಲಕ್ಷ್ಮೀದೇವಿ ತನ್ನ ‌ಗೆಳತಿ ಸಾಹುಕಾರನ ಮಗಳನ್ನು ತನ್ನ ಮನೆಗೆ ಊಟಕ್ಕೆ ಆಮಂತ್ರಿಸಿದಳು. ಸಾಹುಕಾರನ ಮಗಳು ಬಂದಾಗ ಲಕ್ಷ್ಮೀದೇವಿ ಅವಳನ್ನು ಬಹಳಷ್ಟು ಪ್ರೀತಿ ಆದರಗಳಿಂದ ಬರಮಾಡಿಕೊಂಡಳು‌. ಅವಳನ್ನು ಬಂಗಾರದ ಕಂಬಳಿ ಮೇಲೆ ಕೂಡಿಸಿದಳು. ಅವಳಿಗೆ ಬಂಗಾರದ ತಟ್ಟೆಯಲ್ಲಿ ಊಟ ಬಡಿಸಿದಳು. ಬಂಗಾರದ ಲೋಟದಲ್ಲಿ ಕುಡಿಯಲು ನೀರು ಕೊಟ್ಟಳು. ಈ ರೀತಿ ಲಕ್ಷ್ಮೀದೇವಿ ತನ್ನ ಗೆಳತಿಯನ್ನು ಬಹಳಷ್ಟು ಆದರದಿಂದ ನೋಡಿಕೊಂಡಳು. ಭೋಜನವಾದ ನಂತರ ಸಾಹುಕಾರನ ಮಗಳು ತನ್ನ ಮನೆಗೆ ತೆರಳಲು ಸಿದ್ಧಳಾದಳು. ಆಗ ಆಕೆಗೆ ಲಕ್ಷ್ಮೀದೇವಿ “ನನ್ನನ್ನು ನಿಮ್ಮ ಮನೆಗೆ ಯಾವಾಗ ಊಟಕ್ಕೆ ಕರೆಯುವೆ?” ಎಂದು ಕೇಳಿದಳು. ಲಕ್ಷ್ಮೀದೇವಿಯನ್ನು ತನ್ನ ಮನೆಗೆ ಆಮಂತ್ರಿಸುವುದು ಸಾಹುಕಾರನ ಮಗಳಿಗೆ ಇಷ್ಟವಿರಲಿಲ್ಲ. ಏಕೆಂದರೆ ಅಷ್ಟೊಂದು ಸಿರಿತನ ಅವಳ ಮನೆಯಲ್ಲಿರಲಿಲ್ಲ. ಆದರೂ ಸಹ ಅವಳು ಲಕ್ಷ್ಮೀದೇವಿಯನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿ ಮನೆಗೆ ಹೋದಳು‌.

ಮನೆಗೆ ಹೋದ ನಂತರ ಸಾಹುಕಾರನ ಮಗಳು ಚಿಂತಿತಳಾಗಿ ಸಪ್ಪೆ ಮೋರೆ ಹಾಕಿಕೊಂಡು ಕುಂತಳು. ಆಗ ಅವಳ ತಂದೆ ಕಾರಣ ಕೇಳಿದಾಗ ಅವಳು “ಲಕ್ಷ್ಮೀ ನನ್ನನ್ನು ಬಹಳಷ್ಟು ಪ್ರೀತಿಯಿಂದ ಆದರಿಸಿದ್ದಾಳೆ‌. ಬಂಗಾರದ ಕಂಬಳಿಯ ಮೇಲೆ ಕೂಡಿಸಿ ಬಂಗಾರದ ತಟ್ಟೆಯಲ್ಲಿ ಊಟ ಮಾಡಿಸಿದ್ದಾಳೆ. ಆದರೆ ನಮ್ಮಲ್ಲಿ ಅವ್ಯಾವು ಇಲ್ಲವಲ್ಲ…” ಎಂದು ತನ್ನ ದು:ಖವನ್ನು ವ್ಯಕ್ತಪಡಿಸಿದಳು. ಆಗ ಸಾಹುಕಾರ ತನ್ನ ಮಗಳಿಗೆ “ನಮ್ಮತ್ರ ಎಷ್ಟಿದಿಯೋ ಅಷ್ಟರಲ್ಲೇ ನಾವು ಲಕ್ಷ್ಮೀಯನ್ನು ಪ್ರೀತಿಯಿಂದ ಆದರಿಸೋಣಾ‌. ನೀನು ಈಗಲೇ ಸಗಣಿ ನೀರಿನಿಂದ ಮನೆ ಸಾರಿಸಿ ಸ್ವಚ್ಛ ಗೊಳಿಸು. ನಾಲ್ಕು ಮುಖದ ದೀಪ ಹಚ್ಚಿ ಲಕ್ಷ್ಮೀದೇವಿಯನ್ನು ಪ್ರಾರ್ಥಿಸು” ಎಂದನು‌. ತನ್ನ ತಂದೆ ಹೇಳಿದಂತೆ ಅವಳು ಮಾಡಿದಳು. ಅಷ್ಟರಲ್ಲಿ ಒಂದು ಹದ್ದು ರಾಣಿಯ ಚಿನ್ನದ ನೆಕ್ಲೇಸನ್ನು ಅವಳತ್ತಿರ ಬೀಸಾಕಿ ಹೋಯಿತು. ಕೂಡಲೇ ಆಕೆ ಅದನ್ನು ಮಾರಿ ಅದರಿಂದ ಬಂಗಾರದ ಕಂಬಳಿ, ಬಂಗಾರದ ತಟ್ಟೆ, ಬಂಗಾರದ ಲೋಟಗಳನ್ನು ತಂದಳು. ರುಚಿ ರುಚಿಯಾದ ಭೋಜನವನ್ನು, ಸಿಹಿ ತಿಂಡಿಗಳನ್ನು ತಯಾರಿಸಿ ತನ್ನ ಗೆಳತಿ ಲಕ್ಷ್ಮೀಯ ದಾರಿ ಕಾಯುತ್ತಾ ಕುಳಿತಳು.

ಸ್ವಲ್ಪ ಸಮಯದ ನಂತರ ಲಕ್ಷ್ಮೀದೇವಿ ಗಣಪತಿಯೊಂದಿಗೆ ಸಾಹುಕಾರನ ಮನೆಗೆ ಬಂದಳು. ಸಾಹುಕಾರನ ಮಗಳು ಅವರನ್ನು ಬಹಳಷ್ಟು ಪ್ರೀತಿಯಿಂದ ಬರಮಾಡಿಕೊಂಡಳು. ಅವರನ್ನು ಬಂಗಾರದ ಕಂಬಳಿಯ ಮೇಲೆ ಕೂಡಲು ಹೇಳಿದಳು. ಆದರೆ ಲಕ್ಷ್ಮೀದೇವಿ ಕೂಡಲು ನಿರಾಕರಿಸಿದಳು‌. ಆಗ ಸಾಹುಕಾರನ ಮಗಳು ಬಹಳಷ್ಟು ಒತ್ತಾಯ ಮಾಡಿ ಅವರನ್ನು ಬಂಗಾರದ ಕಂಬಳಿಯ ಮೇಲೆ ಕೂಡಿಸಿದಳು. ಬಂಗಾರದ ತಟ್ಟೆಯಲ್ಲಿ ರುಚಿಯಾದ ಭೋಜನವನ್ನು ಬಡಿಸಿದಳು. ಅವಳ ಪ್ರೀತಿಯ ಆತಿಥ್ಯಕ್ಕೆ ಲಕ್ಷ್ಮೀದೇವಿ ಪಸನ್ನವಾದಳು. ಊಟವಾದ ನಂತರ ಲಕ್ಷ್ಮೀದೇವಿ ತನ್ನ ಗೆಳತಿಗೆ ತನ್ನ ನಿಜವಾದ ರೂಪವನ್ನು ತೋರಿಸಿದಳು. ಇಲ್ಲಿ ತನಕ ಸಾಹುಕಾರನ ಮಗಳಿಗೆ ನನ್ನ ಗೆಳತಿ ಲಕ್ಷ್ಮೀ ನಿಜವಾದ ಲಕ್ಷ್ಮೀದೇವಿ ಎಂಬುದು ಗೊತ್ತಿರಲಿಲ್ಲ. ಲಕ್ಷ್ಮೀದೇವಿ ಆ ಸಾಹುಕಾರನ ಮಗಳಿಗೆ ಬಹಳಷ್ಟು ಹಣ, ಬಂಗಾರ, ಆಯುಷ್ಯ, ಆಸ್ತಿಯನ್ನು ಅನುಗ್ರಹಿಸಿ ಹೋದಳು.

ಇದಿಷ್ಟು ಲಕ್ಷ್ಮೀ ಪೂಜೆಯ ಹಿಂದಿರುವ ಪೌರಾಣಿಕ ಕಥೆ. ಅವತ್ತಿನಿಂದ ಲಕ್ಷ್ಮೀದೇವಿ ‌ಪ್ರತಿವರ್ಷ ಕಾರ್ತಿಕ ಅಮಾವಾಸ್ಯೆಯ ದಿನ ತನ್ನ ಭಕ್ತರ ಮನೆಗೆ ಗಣೇಷನೊಂದಿಗೆ ಬರುತ್ತಾಳೆ. ಸ್ವಚ್ಛ ಮನಸ್ಸಿನಿಂದ ಅವಳನ್ನು ಆರಾಧಿಸಿದವರಿಗೆ ಐಶ್ವರ್ಯವನ್ನು ನೀಡಿ ಅನುಗ್ರಹಿಸುತ್ತಾಳೆ. ಸಿರಿತನವನ್ನು ನೀಡಿ ಆರ್ಶಿವದಿಸುತ್ತಾಳೆ. ನೀವು ಸಹ ಸ್ವಚ್ಛ ಮನಸ್ಸಿನಿಂದ ಲಕ್ಷ್ಮೀದೇವಿಯನ್ನು ಪೂಜಿಸಿ ನಿಮ್ಮ ಬಾಳಲ್ಲಿಯೂ ಸಹ ಸಿರಿತನದ ದೀಪಾವಳಿ ಬಂದೇ ಬರುತ್ತದೆ, ನಂಬಿಕೆಯಿಡಿ. ಈ ಕಥೆಯನ್ನು ನಿಮ್ಮೆಲ್ಲ ಪ್ರೀತಿಪಾತ್ರರೊಡನೆ ಮರೆಯದೇ ಶೇರ್ ಮಾಡಿ. ಧನ್ಯವಾದಗಳು…..

Varamahalakshmi diwali Pooja

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books