ಯುವತಿಯರಿಗೆ 5 ಸಲಹೆಗಳು – 5 Suggestions to Young Women in Kannada – Life Changing Articles in Kannada

You are currently viewing ಯುವತಿಯರಿಗೆ 5 ಸಲಹೆಗಳು – 5 Suggestions to Young Women in Kannada – Life Changing Articles in Kannada

ಬೇಜಾರಾಗಲಿ ಅಥವಾ ಆಗದೇ ಇರಲಿ, ಟೈಮ ಸಿಕ್ಕಾಗಲೆಲ್ಲ ಮುಂಬೈನ ಬ್ಯೂಟಿಫುಲ ಬೀಚಗಳ ದಡದಲ್ಲಿ ಕುಳಿತುಕೊಂಡು ರಭಸದಲ್ಲಿ ಬರುತ್ತಿರುವ ಸಮುದ್ರದಲೆಗಳನ್ನು ನೋಡುತ್ತಾ ಗಂಟೆಗಟ್ಟಲೆ ಕಾಲ ಕಳೆಯುವುದು ನನ್ನ ನೆಚ್ಚಿನ ಕೆಲಸಗಳಲ್ಲೊಂದು. ಹೀಗೆ ಒಂದಿನ ನಾನು ಬೀಚವೊಂದರಲ್ಲಿ ಕುಳಿತಿರುವಾಗ ಲೇಡಿ ಫ್ಯಾನವೊಬ್ಬಳು ಬಂದು ಮಾತಾಡಿಸಿ ಪರಿಚಯ ಮಾಡಿಕೊಂಡು ನೀವು ಬರೆದ “ಯುವಕರಿಗೆ 5 ಸಲಹೆಗಳು” ಅಂಕಣ ತುಂಬಾ ಚೆನ್ನಾಗಿದೆ. ಅಲ್ಲದೇ ಅದು ಯುಟ್ಯೂಬನಲ್ಲಿಯೂ ಜೋರಾಗಿ ಸದ್ದು ಮಾಡ್ತಿದೆ ಅಂದಳು. ಅವಳ ಅರ್ಧ ಹಿಂದಿ, ಅರ್ಧ ಕರಾವಳಿ ಕನ್ನಡ ಮಿಶ್ರಿತ ಭಾಷೆಯನ್ನು ಕೇಳಿ ನನಗೆ ನಗಬೇಕೋ ಅಥವಾ ಅಳಬೇಕೋ ಎಂಬುದು ತಿಳಿಯದಾಗಿತ್ತು. ಅಷ್ಟರಲ್ಲಿ ಅವಳು ಅದೇ ತರಹ ಯುವತಿಯರಿಗಾಗಿಯೂ ಒಂದು ಅಂಕಣವನ್ನು ಬರೆಯುವಂತೆ ಕೇಳಿಕೊಂಡಳು. ಅವಳ ಕೋರಿಕೆಗಾಗಿ ಈ “ಯುವತಿಯರಿಗೆ 5 ಸಲಹೆಗಳು” ಅಂಕಣವನ್ನು ಬರೆಯುತ್ತಿರುವೆ. ಬೇರೆಯವರಿಗೆ ಬುದ್ಧಿವಾದ ಹೇಳೊವಷ್ಟು ಬುದ್ಧಿವಂತ ನಾನಲ್ಲ. ಅದಕ್ಕಾಗಿ ಯುವತಿಯರಿಗೆ 5 ಸಲಹೆಗಳು ಇಲ್ಲಿವೆ ;

ಯುವತಿಯರಿಗೆ 5 ಸಲಹೆಗಳು - 5 Suggestions to Young Women in Kannada - Life Changing Articles in Kannada

೧) ಭಾವನಾತ್ಮಕ ಪ್ರಪಂಚದಿಂದ ಹೊರಬಂದು ಪ್ರ್ಯಾಕ್ಟಿಕಲ್ಲಾಗಿ ಬದುಕಿ :

ಸೋದರಿಯರೇ, ನಿಮ್ಮಷ್ಟು ಈ ಜಗತ್ತು ಒಳ್ಳೆಯದಾಗಿಲ್ಲ ಮತ್ತು ಸುಂದರವಾಗಿಲ್ಲ. ಅದಕ್ಕಾಗಿ ಭಾವನಾತ್ಮಕ ಪ್ರಪಂಚದಿಂದ ಹೊರಬಂದು ಪ್ರ್ಯಾಕ್ಟಿಕಲ್ಲಾಗಿ ಬದಕಲು ಪ್ರಯತ್ನಿಸಿ. ಮನೆಹಾಳ ಧಾರಾವಾಹಿಗಳನ್ನು, ಗೊಡ್ಡು ಟಿವಿ ಶೋಗಳನ್ನು ನೋಡಿ ನಿಮ್ಮ ಮಾನಸಿಕ ಆರೋಗ್ಯವನ್ನು ಹದಗೆಡಿಸಿಕೊಳ್ಳಬೇಡಿ. ಸಿನೆಮಾದಲ್ಲಿ ತೋರಿಸುವ ಪ್ರೀತಿ ಪ್ರೇಮದ ಹುಚ್ಚಾಟಗಳನ್ನು ನಿಜ ಜೀವನದಲ್ಲಿ ಮಾಡಲು ಹೋಗಿ ಹೆತ್ತವರ ಹೊಟ್ಟೆ ಉರಿಸಬೇಡಿ. ಓದೋ ಟೈಮಲ್ಲಿ ಚೆನ್ನಾಗಿ ಓದಿ, ಹೆತ್ತವರಿಗೆ, ಹೊತ್ತವರಿಗೆ, ಕಲಿಸಿದವರಿಗೆ ಕೀರ್ತಿ ತನ್ನಿ. ಅದಾಗದಿದ್ದರೆ ಸುಮ್ಮನಿದ್ದು ಬಿಡಿ. ನಿಮ್ಮ ತಂದೆ ತಾಯಿಗಳು ತಲೆ ತಗ್ಗಿಸಿ ನಡೆಯುವಂಥ ಕೆಲಸಗಳನ್ನು ಮಾಡಬೇಡಿ ಪ್ಲೀಸ್. ಈಗ ಯಾವೊಬ್ಬ ಹುಡುಗನು ಮನಸ್ಸು ನೋಡಿ ಪ್ರೀತಿಸಲ್ಲ. ಎಲ್ಲರೂ ಸುಂದರವಾದ ಮೈಮುಖವನ್ನು ನೋಡಿಯೇ ಪ್ರೀತಿಸುತ್ತಾರೆ. ಅದಕ್ಕಾಗಿ ಹುಡುಗರು ಹೇಳುವ ಫಿಲ್ಮಿ ಡೈಲಾಗಗಳಿಗೆಲ್ಲ ಫೀದಾ ಆಗಿ ಮೋಸಹೋಗಿ ಕಣ್ಣೀರಲ್ಲಿ ಕೈ ತೊಳೆಯಬೇಡಿ. ನಿಮ್ಮಲ್ಲಿಯ ಕೆಲವು ಹುಡುಗಿಯರು ಹುಡುಗರನ್ನು ಆಟದ ಗೊಂಬೆಗಳಂತೆ ಬದಲಾಯಿಸುವಂತೆ, ಹುಡುಗರಲ್ಲಿನ ಕೆಲವು ಕಿಡಿಗೇಡಿಗಳು ನಿಮ್ಮ ಭಾವನೆಗಳೊಂದಿಗೆ, ಬದುಕಿನೊಂದಿಗೆ ಆಟವಾಡಿ ತಮ್ಮ ಸ್ವಾರ್ಥ ಸಾಧಿಸುತ್ತಾರೆ. ಆದ ಕಾರಣ ಹುಷಾರಾಗಿರಿ. ಬೇರೆಯವರೊಂದಿಗೆ ವ್ಯವಹರಿಸುವಾಗ ಮನಸ್ಸಿನ ಜೊತೆಗೆ ಮೆದುಳನ್ನು ಸಹ ಬಳಸಿ. ಯಾರಿಗೂ ಮೋಸ ಮಾಡಬೇಡಿ ಮತ್ತು ಯಾರಿಂದಲೂ ಮೋಸ ಹೋಗಬೇಡಿ.

ಯುವತಿಯರಿಗೆ 5 ಸಲಹೆಗಳು - 5 Suggestions to Young Women in Kannada - Life Changing Articles in Kannada

೨) ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಟರಾಗಿ :

ಸೋದರಿಯರೇ, ನೀವು ಅಬಲೆಯರಾಗಿ ಉಳಿದರೆ ಎಲ್ಲರೂ ನಿಮ್ಮ ಮೇಲೆ ದಬ್ಬಾಳಿಕೆ ಮಾಡಲು ಮುಂದಾಗುತ್ತಾರೆ. ಆದರೆ ಅದೇ ನೀವು ಸಬಲೆಯರಾದರೆ ಎಲ್ಲರೂ ನಿಮಗೆ ಸಲಾಂ ಹೊಡೆಯುತ್ತಾರೆ. ಆದ್ದರಿಂದ ಸೋದರಿಯರೇ, ನೀವು ಸೋಮಾರಿ ಸುಂದರಿಯರಾಗಬೇಡಿ. ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಟರಾಗಿ. ದಿನಾಲು ಎಕ್ಸರಸೈಜ ಮಾಡಿ. ಯೋಗ ಪ್ರಾಣಾಯಾಮಗಳನ್ನು ಮಾಡಿ. ಆಕರ್ಷಕ ದೇಹದ ಜೊತೆಗೆ ಆಕರ್ಷಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ. ಈ ದೇಹ ನಮಗೆ ಆ ದೇವರು ಕೊಟ್ಟ ಬೆಲೆಕಟ್ಟಲಾಗದ ಆಸ್ತಿ. ಅದನ್ನು ಸುಂದರವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ. ಮದುವೆಗೆ ಮುಂಚೆ ಎಕ್ಸರಸೈಜ್ ಮಾಡದೆ ಬಲೂನ ಥರ ಊದಿಕೊಂಡು ಮದುವೆ ಗಂಡುಗಳ ತಾತ್ಸಾರಕ್ಕೆ ಒಳಗಾಗಿ ಅವಮಾನಿತರಾಗಬೇಡಿ. ಮದುವೆಯಾದ ನಂತರ ಸೊಂಟದ ಸುತ್ತಳತೆಯನ್ನು ಹೆಚ್ಚಿಸಿಕೊಂಡು ಗಂಡನಿಗೆ ಬೋರಾಗಬೇಡಿ. ಬೇರೆಯವರಿಗಾಗಿ ಬೇಡವಾದರೂ, ಸ್ವಂತ ಆರೋಗ್ಯಕ್ಕಾಗಿ ಆದರೂ ದಿನಾಲು ತಪ್ಪದೇ ಎಕ್ಸರಸೈಜ್ ಮಾಡಿ. ಯಾವಾಗಲೂ ಫಿಟ್ ಆ್ಯಂಡ್ ಆ್ಯಕ್ಟೀವ್ ಆಗಿರಿ. ನಿಮ್ಮ ದೇಹ ಸದೃಢವಾಗಿದ್ದರೆ ಮಾತ್ರ ನಿಮ್ಮ ಮನಸ್ಸು ಸಹ ಸದೃಢವಾಗಿರುತ್ತದೆ.

ಯುವತಿಯರಿಗೆ 5 ಸಲಹೆಗಳು - 5 Suggestions to Young Women in Kannada - Life Changing Articles in Kannada

ಇನ್ನು ಗಂಡನ ದುಡ್ಡಲ್ಲಿ ದೀಪಾವಳಿ ಆಚರಿಸುವ ದುರಾಸೆಗಳನ್ನು, ಕುರುಡು ಕನಸುಗಳನ್ನು ಬಿಟ್ಟು ಆರ್ಥಿಕವಾಗಿ ಸ್ವಾವಲಂಬಿಯಾಗುವುದರ ಕಡೆಗೆ ಗಮನ ಹರಿಸಿ. ಸೋಮಾರಿಯಾಗದೆ ಸ್ವಂತ ಉದ್ಯೋಗ ಮಾಡಿ ಹಣ ಸಂಪಾದಿಸಿ. ನೀವು ಆರ್ಥಿಕವಾಗಿ ಸ್ವಾವಲಂಬಿಯಾದರೆ ಮಾತ್ರ ನಿಮ್ಮ ಗಂಡ ನಿಮ್ಮ ಅನುಮತಿಯಿಲ್ಲದೆ ನಿಮ್ಮ ಸೆರಗಿಗೆ ಕೈಹಾಕುವುದಿಲ್ಲ. ಇಲ್ಲವಾದರೆ ನೀವು ಅವನ ಸುಖದ ಸರಕ್ಕಾಗುತ್ತೀರಿ, ಅಡುಗೆ ಮನೆಯ ಆಳಾಗುತ್ತೀರಿ, ಜೀವನಪೂರ್ತಿ ಅವನ ದಾಸಿಯಾಗುತ್ತೀರಿ ಅಷ್ಟೇ…! ಇಲ್ಲಿ ನಿಮಗೊಂದು ಕಿವಿಮಾತು, “ನಿಮಗೆ ಬೀರಬಲನಂಥ ಗೆಳೆಯ ಬೇಕಾದರೆ ಮೊದಲು ನೀವು ಅಕ್ಬರ್ ಬಾದಷಹ ಆಗಬೇಕು. ನಿಮಗೆ ವಿರಾಟ ಕೊಹ್ಲಿಯಂಥ ಗಂಡ ಬೇಕಾದರೆ ಮೊದಲು ನೀವು ಅನುಷ್ಕಾ ಶರ್ಮ ಆಗಲೇಬೇಕಲ್ಲವೇ?. ಇದಕ್ಕಿಂತಲೂ ಬಿಡಿಸಿ ಹೇಳಲು ಸಾಧ್ಯವಿಲ್ಲ. ಬರೀ ಕುರುಡು ಕನಸುಗಳಿಂದ ಪ್ರಯೋಜನವಾಗಲ್ಲ. ಅದಕ್ಕೆ ತಕ್ಕಂತೆ ಕೆಲಸವೂ ಮಾಡಬೇಕು.

ಯುವತಿಯರಿಗೆ 5 ಸಲಹೆಗಳು - 5 Suggestions to Young Women in Kannada - Life Changing Articles in Kannada

೩) ಫೇಕ್ ಫೆಮಿನಿಷ್ಟಗಳಿಂದ ದೂರವಿರಿ :

ಸೋದರಿಯರೇ, ನಿಮಗಿಷ್ಟ ಬಂದ ಬಟ್ಟೆಗಳನ್ನು ನೀವು ಹಾಕಿಕೊಳ್ಳಬಹುದು. ನಿಮಗಿಷ್ಟ ಬಂದ ಕಡೆಗೆ ನೀವು ಸುತ್ತಾಡಬಹುದು. ನಿಮಗಿಷ್ಟ ಬಂದವರ ಜೊತೆಗೆ ನೀವು ಬದುಕಬಹುದು. ಅದನ್ನು ವಿರೋಧಿಸುವ ಅಥವಾ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ನೀವು ಇವುಗಳನ್ನೆಲ್ಲ ನಿಮ್ಮ ಸ್ವಂತ ಯೋಚನಾ ಶಕ್ತಿಯಿಂದ ಮಾಡುತ್ತಿದ್ದರೆ ಏನು ತೊಂದರೆಯಿಲ್ಲ. ಆದರೆ ನೀವು ಫೇಕ್ ಫೆಮಿನಿಸಮ್ ಪಂಡಿತೆಯರ ದುಷ್ಪ್ರಭಾವಕ್ಕೆ ಒಳಗಾಗಿ ಇಂಥ ಅನಿಷ್ಟ ಆಚರಣೆಗಳನ್ನು ಮಾಡುತ್ತಿದ್ದರೆ ಖಂಡಿತ ನೀವು ಅವನತಿಯ ಹಾದಿಯನ್ನು ಹಿಡಿಯುತ್ತಿರಿ. ಏಕೆಂದರೆ ಕೆಲವರು ಅಶ್ಲೀಲವಾಗಿ ಬಟ್ಟೆ ಧರಿಸುವುದನ್ನು, ಅಶ್ಲೀಲವಾಗಿ ಮಾತನಾಡುವುದನ್ನು, ಮದ್ಯ ಮಾದಕ ವಸ್ತುಗಳನ್ನು ಸೇವಿಸುವುದನ್ನು, ತಡರಾತ್ರಿ ಪಾರ್ಟಿಗಳನ್ನು ಮಾಡುವುದನ್ನು, ತಡರಾತ್ರಿ ಮನೆಗೆ ಬರುವುದನ್ನು, ದಿನಕ್ಕೊಬ್ಬರ ಜೊತೆ ಮಲಗುವುದನ್ನು, ಗಂಡನನ್ನು ಅವಮಾನಿಸಿ ಗೋಳಿಡಿದುಕೊಳ್ಳುವುದನ್ನೇ ಫೆಮಿನಿಸಮ್ ಎಂದುಕೊಂಡಿದ್ದಾರೆ. ಅಲ್ಲದೆ ಅದನ್ನು ಬೇರೆಯವರ ತಲೆತುಂಬಿ ಸುಂದರ ಸಂಸಾರಗಳನ್ನು ಹಾಳು ಮಾಡುತ್ತಿದ್ದಾರೆ.

ಯುವತಿಯರಿಗೆ 5 ಸಲಹೆಗಳು - 5 Suggestions to Young Women in Kannada - Life Changing Articles in Kannada

ಹೆಣ್ಮಕ್ಕಳ ಶಿಕ್ಷಣಕ್ಕಾಗಿ, ಉನ್ನತಿಗಾಗಿ, ಸಮಾನತೆಗಾಗಿ ಶ್ರಮಿಸಿದ ಸಾವಿತ್ರಿಬಾಯಿ ಫುಲೆಯಂಥವರು ನಿಜವಾದ ಫೆಮಿನಿಷ್ಟಗಳು. ಈಗಿನ ಮಂಥರೆಯಂಥ ಕೆಲ ಅನಿಷ್ಟಗಳಲ್ಲ. ತನ್ನ ಗಂಡನನ್ನು ಗುಲಾಮನನ್ನಾಗಿ ಮಾಡಿಕೊಂಡು ಪಿಶಾಚಿಯಂತೆ ನರಳುತ್ತಾ ಬಾಳುತ್ತಿರುವ ಯುವತಿಯರು ನಮ್ಮ ಕಣ್ಮುಂದೆ ಇದ್ದಾರೆ. ತಮ್ಮ ಗಂಡನನ್ನು ರಾಜನನ್ನಾಗಿ ಮಾಡಿ ರಾಣಿಯಂತೆ ನಗುನಗುತ್ತಾ ಬಾಳುತ್ತಿರುವ ಯುವತಿಯರೂ ನಮ್ಮ ಕಣ್ಮುಂದೆ ಇದ್ದಾರೆ. ನೀವು ರಾಣಿಯಾಗುತ್ತೀರೋ ಅಥವಾ ಪಿಶಾಚಿಯಾಗುತ್ತಿರೋ ನಿಮಗೆ ಬಿಟ್ಟಿದ್ದು. ಸೋದರಿಯರೇ, ನಮ್ಮ ದೇಶಕ್ಕೆ ನಿಮ್ಮ ಮೇಲೆ ಅಪಾರ ಗೌರವ, ಕಾಳಜಿ, ನಂಬಿಕೆ ಪ್ರೀತಿ ಎಲ್ಲವೂ ಇದೆ. ಅದಕ್ಕಾಗಿಯೇ ನಮ್ಮ ದೇಶ ನಿಮಗೆ ಸ್ವಾತಂತ್ರ್ಯ, ಸಮಾನತೆಗಳನ್ನು ನೀಡಿದೆ. ಅಂದ್ಮೇಲೆ ದೇಶದ ನಂಬಿಕೆ, ಗೌರವ ಉಳಿಸುವುದು ನಿಮ್ಮ ಆದ್ಯ ಕರ್ತವ್ಯವಲ್ಲವೇ? ಮೈಗಂಟಿರುವ, ಮನಸ್ಸಿಗಂಟಿರುವ ಕೊಳೆಯನ್ನು ಅಳಿಸಿ ಹಾಕಬಹುದು. ಆದರೆ ಹೆಸರಿಗೆ ಅಂಟಿರುವ ಕೊಳೆಯನ್ನು ಸತ್ತರೂ ಅಳಿಸಲು ಸಾಧ್ಯವಿಲ್ಲ. ಆದ್ದರಿಂದ ಬೇರೆಯವರು ಬಳಸಿ ಬೇಜಾರಾದಾಗ ಬೀಸಾಕುವಂಥ ಬಟ್ಟೆಗಳಂತೆ ನೀವಾಗಬೇಡಿ.

ಯುವತಿಯರಿಗೆ 5 ಸಲಹೆಗಳು - 5 Suggestions to Young Women in Kannada - Life Changing Articles in Kannada

೪) ನಿಮ್ಮಲ್ಲಿನ ಕೀಳರಿಮೆಯನ್ನು ಸಾಯಿಸಿ :

ಸೋದರಿಯರೇ, ನೀವು ಅನಾವಶ್ಯಕವಾಗಿ ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ನೀವು ಬದುಕುತ್ತಿರುವುದು ಸ್ವತಂತ್ರ ಭಾರತದಲ್ಲಿ ಎಂಬುದನ್ನು ಮರೆಯದಿರಿ. ನಿಮಗೆ ನಮ್ಮ ದೇಶ ಸ್ವಾತಂತ್ರ್ಯ, ಸಮಾನತೆಗಳನ್ನು ನೀಡಿರುವಾಗ ಸ್ವಾಭಿಮಾನದಿಂದ, ಧೈರ್ಯದಿಂದ ಬದುಕಿ. ನಿಮ್ಮಲ್ಲಿನ ಕೀಳರಿಮೆಯನ್ನು ಸಾಯಿಸಿ. ನೀವು ಯಾರಿಗೂ ಕಮ್ಮಿಯಿಲ್ಲ. ನಿಮ್ಮಿಂದ ಎಲ್ಲವೂ ಸಾಧ್ಯವಿದೆ ಎಂಬುದನ್ನು ಈಗಾಗಲೇ ಎಷ್ಟೋ ಜನ ಸಾಧಕಿಯರು ಸಾಬೀತು ಮಾಡಿ ತೋರಿಸಿದ್ದಾರೆ. ಅಡುಗೆ ಮನೆಯಿಂದ ಅಂತರಿಕ್ಷದವೆರೆಗೆ, ಮನೆ ಸ್ವಚ್ಛತೆಯಿಂದ ಸೈನ್ಯದವರೆಗೆ ನಮ್ಮ ಸೋದರಿಯರ ಹೆಜ್ಜೆ ಗುರುತುಗಳಿವೆ. ಅವರ ಹೆಜ್ಜೆ ಗುರುತುಗಳನ್ನು ಹಿಂಬಾಲಿಸಿ ನೀವು ಅವರಂತೆ ಸಾಧಕಿಯರಾಗಿ. ಹೆಣ್ಣು ಹುಣ್ಣಲ್ಲ, ದೇಶದ ಕಣ್ಣು ಎಂಬುದನ್ನು ಸಾಬೀತುಪಡಿಸಿ.

ಯುವತಿಯರಿಗೆ 5 ಸಲಹೆಗಳು - 5 Suggestions to Young Women in Kannada - Life Changing Articles in Kannada

೫) ನಿಮಗಾಗುತ್ತಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ :

ಸೋದರಿಯರೇ, ನಿಮ್ಮ ಕನಸುಗಳನ್ನು ನೀವೇ ಕೊಲ್ಲದಿರಿ. ವಿರೋಧಗಳು, ತೆಗಳಿಕೆಗಳು, ಅವಮಾನಗಳು ಎಲ್ಲ ಒಳ್ಳೆ ಕಾರ್ಯಗಳಿಗೆ ಇದ್ದೇ ಇರುತ್ತವೆ. ಆದ್ದರಿಂದ ನಿಮ್ಮ ಕನಸುಗಳನ್ನು ಕೊಲೆ ಮಾಡಬೇಡಿ. ನೀವು ಹೊಸದನ್ನು ಮಾಡಲು ಹೊರಟಾಗ ಮೊದಲು ನಿಮ್ಮ ಮನೆಯವರೇ ನಿಮ್ಮನ್ನು ತಡೆಯುತ್ತಾರೆ. ಆಮೇಲೆ ನಿಮ್ಮ ಗಂಡನ ಮನೆಯವರು ನಿಮ್ಮನ್ನು ತಡೆಯುತ್ತಾರೆ ಎಂಬುದು ನಂಗೊತ್ತು. ಆದರೆ ನಾನೇನು ಮಾಡಲಾರೆ. ನಾನು ಬಿಟ್ಟಿ ಸಲಹೆಗಳನ್ನು ಕೊಡಬಲ್ಲೆ ಅಷ್ಟೇ. ನಿಮ್ಮ ಯುದ್ಧವನ್ನು ನೀವೇ ಹೋರಾಡಿ ಗೆಲ್ಲಬೇಕು. ನಿಮಗಾಗುತ್ತಿರುವ ಅನ್ಯಾಯಗಳ ವಿರುದ್ಧ ನೀವೇ ಧ್ವನಿ ಎತ್ತಬೇಕು. ನಿಮ್ಮನ್ನು ಕಾಪಾಡುವ ಸಾಮರ್ಥ್ಯವಿರುವುದು ನಮ್ಮ ದೇಶದ ಸಂವಿಧಾನಕ್ಕೆ ಮಾತ್ರ. ಆದ್ದರಿಂದ ನಮ್ಮ ಸಂವಿಧಾನವನ್ನು ನಂಬಿ, ಗೌರವಿಸಿ. ಅದು ಖಂಡಿತ ನಿಮ್ಮನ್ನು ಕಾಪಾಡುತ್ತದೆ. ನನ್ನ ಕನಸುಗಳಿಗೆ ನನ್ನ ಮನೆಯವರು ಸಪೋರ್ಟ್ ಮಾಡಲಿಲ್ಲ, ನನ್ನ ಗಂಡ ಸಪೋರ್ಟ್ ಮಾಡಲಿಲ್ಲ, ಅತ್ತೆ ಅಡ್ಡಗಾಲಾಕಿದಳು ಎಂಬ ಕುಂಟುನೆಪಗಳನ್ನು ಹೇಳುವುದನ್ನು ನಿಲ್ಲಿಸಿ, ನಿಮ್ಮ ಕನಸುಗಳನ್ನು ನನಸಾಗಿರುವುದರ ಕಡೆಗೆ ಗಮನ ಹರಿಸಿ. ಸುಳ್ಳೇಳಿ, ನೆಪಗಳನ್ನು ಹೇಳಿ ನಿಮಗೆ ನೀವೇ ವಂಚಿಸಿಕೊಳ್ಳಬೇಡಿ.

ಯುವತಿಯರಿಗೆ 5 ಸಲಹೆಗಳು - 5 Suggestions to Young Women in Kannada - Life Changing Articles in Kannada

ಒಂದು ಹೆಣ್ಣು ಚೆನ್ನಾಗಿ ಸೆಟ್ಲಾದರೆ ಹತ್ತು ಮನೆಗಳು ಉದ್ಧಾರವಾಗುತ್ತವೆ. ಅದೇ ಹೆಣ್ಣು ಹಾಳಾದರೆ ನೂರು ಮನೆಗಳು ನಾಶವಾಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ನನಗೆ ಸರಿ ಅನ್ನಿಸಿದ್ದನ್ನು ನಾನು ಹೇಳಿರುವೆ. ನಿಮಗೆ ಸರಿ ಅನ್ನಿಸಿದ್ದನ್ನು ನೀವು ಮಾಡಬಹುದು. ನಿಮ್ಮ ಇಷ್ಟ, ಕಷ್ಟ, ನಷ್ಟಗಳಿಗೆಲ್ಲ ನೀವೇ ಕಾರಣರು, ಹೊರತು ಬೇರೆಯವರಲ್ಲ. ಸಮಾಜ ಹೆಮ್ಮೆಯಿಂದ ಗೌರವಿಸುವ ಹೆಣ್ಮಗಳು ನೀವಾಗಿ. All the very Best and Thanks you…

ಯುವತಿಯರಿಗೆ 5 ಸಲಹೆಗಳು - 5 Suggestions to Young Women in Kannada - Life Changing Articles in Kannada

ಈ ಅಂಕಣ ಇಷ್ಟವಾಗಿದ್ದರೆ ತಪ್ಪದೆ ಇದನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ. ಜೊತೆಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ. ಪ್ರತಿದಿನ ಇದೇ ರೀತಿ ಇಂಟರೆಸ್ಟಿಂಗಾಗಿರೋ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು, ಜೀವನ ಕಥೆಗಳನ್ನು, ಬ್ಯುಸಿನೆಸ್ ಟಿಪ್ಸಗಳನ್ನು ಉಚಿತವಾಗಿ ಓದಲು ಫೇಸ್ಬುಕ್, ಇನಸ್ಟಾಗ್ರಾಮ, ಟ್ವೀಟರ್ ಹಾಗೂ ಯುಟ್ಯೂಬಗಳಲ್ಲಿ ತಪ್ಪದೆ ನನ್ನನ್ನು ಫಾಲೋ ಮಾಡಿ. (Search as Director Satishkumar and Roaring Creations)

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books