57 ಪ್ರೇಮವಿರಹ ಗೀತೆಗಳು – ಕನ್ನಡ ವಿರಹ ಕವನಗಳು – Sad Love Kavanagalu in Kannada – Kannada Viraha Kavanagalu

You are currently viewing 57 ಪ್ರೇಮವಿರಹ ಗೀತೆಗಳು – ಕನ್ನಡ ವಿರಹ ಕವನಗಳು – Sad Love Kavanagalu in Kannada – Kannada Viraha Kavanagalu

೧) ಅವತ್ತು ನನ್ನೆದೆಯ ಮೇಲೆ ಮಲಗಿ ಪ್ರೀತಿ ಮಾತುಗಳನ್ನು ಆಡಿದವಳು, ಇವತ್ತು ಮತ್ತೊಬ್ಬನ ತೋಳತೆಕ್ಕೆಯಲ್ಲಿ ಬಂಧಿಯಾಗಿ ಒದ್ದಾಡುತ್ತಿರುವಳು. ನನ್ನ ಉಸಿರಲ್ಲಿ ಉಸಿರಾಗಿದ್ದವಳು, ಅವನ ಬಿಸಿಯೂಸಿರಿಗೆ ಕೆಮ್ಮುತ್ತಿರುವಳು…

೨) ಕೊರೆಯುವ ಚಳಿಯಲಿ
ಬೆಚ್ಚನೆಯ ಕಣ್ಣೀರ ಹನಿಗಳು…
ಬೀಳುವ ಮಳೆಯಲಿ
ಕಾಡುವ ನೆನಪುಗಳು…
ಸುಡುವ ಬಿಸಿಲಲಿ
ಸತಾಯಿಸೋ ಆಸೆಗಳು ಸಿಕ್ಕಿದ್ದು ನಿನ್ನಿಂದಲೇ…

೩) ಗೆಳತಿ ನೀ ನನ್ನ ಬಿಟ್ಟರು, ಇಲ್ಲ ನಾ ನಿನ್ನ ಬಿಟ್ಟರು, ಈ ನೆನಪುಗಳು ನಮ್ಮಿಬ್ರರನ್ನು ಕಾಡದೆ ಬಿಡಲ್ಲ. ಈ ನೆನಪುಗಳೆಂದರೆ ಬೆನ್ನಟ್ಟಿದ ಬೇತಾಳ…

೪) ಕಾರ್ಮೋಡ ಕವಿದ ಎದೆಯಲ್ಲಿ
ಕಾಮನಬಿಲ್ಲು ಮೂಡುವುದೇ?
ತೂತು ಬಿದ್ದ ದೋಣಿಯಲ್ಲಿ
ದೂರತೀರ ಸೇರಬಹುದೇ?
ಪಾಳುಬಿದ್ದ ಕನಸ್ಸಲ್ಲಿ
ಪ್ರೀತಿ ಹಣತೆ ಹತ್ತುವುದೇ?

೫) ಕನಸ್ಸಲ್ಲಿ ಬಂದು ಕಾಡೋವಾಸೆ
ಮನಸ್ಸಲ್ಲಿ ಬಂದು ಮಲಗೋವಾಸೆ
ಆ ಆಸೆ ಬಂದಾಗಲೆಲ್ಲ ನಿರಾಸೆ…
ಹೇಳೇ ಪ್ರೇಯಸಿ,
ಯಾಕೆ ಹೋದೆ ನೀ ವಂಚಿಸಿ??

57 ಪ್ರೇಮವಿರಹ ಗೀತೆಗಳು - ಕನ್ನಡ ವಿರಹ ಕವನಗಳು - Sad Love Kavanagalu in Kannada - Kannada Viraha Kavanagalu

೬) ನೀನಾಗಿ ಹೇಳಲಿಲ್ಲ
ನಾನಾಗಿ ಕೇಳಲಿಲ್ಲ
ಎದೆಯಲ್ಲಿನ ಪ್ರೀತಿ
ಎದೆಯಲ್ಲೇ ಸತ್ತೊತ್ತೈತಲ್ಲ?

೭) ಮಡಿದ ಪ್ರೀತಿಗೆ ಮನಸೇ ಮಸಣ
ನೆನಪಿನ ದಾಳಿಗೆ ಕಣ್ಣಿರೇ ಸಾಂತ್ವನ
ನಗುವ ತುಟಿಗೆ ಕವಿದಿದೆ ಮೌನ
ನಲುಗಿದ ಮನವು ಬಯಸಿದೆ ಮರಣ
ಈ ನೋವಲ್ಲಿ ನಾ ಬರೆಯಲೇ ಒಂದು ಕವನ?
ಹೇಳುವೆಯಾ ಗೆಳತಿ ನೀನೊಂದು ಸುಳ್ಳು ಕಾರಣ?

೮) ಭಾರವಾದ ಹೆಜ್ಜೆಗಳು
ಭರವಸೆಗೆ ಬೆಂಕಿ ಹಚ್ಚಿವೆ…
ಮೈಲಿಗಲ್ಲುಗಳು ಮನಸ್ಸುಗಳ
ಏಕಾಂಗಿತನವನ್ನು ಆನಂದಿಸಿವೆ
ಬೀದಿ ದೀಪಗಳು ನನ್ನ ನೋಡಿ ನಗ್ತಿವೆ…

೯) ಕಗ್ಗಂಟಾಗಿದೆ ನಿನ್ನಯ ಮೌನ
ಕಣ್ಣೀರಿಟ್ಟಿದೆ ನನ್ನಯ ಮನ
ನೆನಪಿಸಿಕೋ ನನ್ನನ್ನು ಒಂದು ಕ್ಷಣ
ಅದುವೇ ನಂಪ್ರೀತಿಗೆ ಪುನರಜನನ
ಮೌನ ಮೌನ ಮಹಾಮೌನ
ತಂದಿಗೆ ಎನಗೆ ಮರಣ… ಓ ಪ್ರೇಯಸಿ ಇದು ಸರೀನಾ?

೧೦) ಮಾತಾಡು ಮಾತಾಡು ಮಲ್ಲಿಗೆ
ಮುದ್ದಾಡು ಮುದ್ದಾಡು ಮೆಲ್ಲಗೆ
ಭಾರವಾಯ್ತು ಮೌನ ಈ ಭೂಮಿಗೆ
ನಿನ್ನ ನಗುವೇ ಬಡಿತ ನನ್ನೆದೆಗೆ
ನೀಡು ಸ್ವಲ್ಪ ಕೆಲ್ಸ ನಿನ್ನ ತುಟಿಗೆ
ಮಾಡು ಗಾಯ ನನ ಕೆನ್ನೆಗೆ…

57 ಪ್ರೇಮವಿರಹ ಗೀತೆಗಳು - ಕನ್ನಡ ವಿರಹ ಕವನಗಳು - Sad Love Kavanagalu in Kannada - Kannada Viraha Kavanagalu

೧೧) ಆಸೆಗಳ ಹೊಸ್ತಿಲಲಿ
ನಿರಾಸೆಗಳ ದಾಪುಗಾಲು…
ಎದೆಯ ಹೆಬ್ಬಾಗಿನಲಿ
ಬಂತೊಂದು ಒಂಟಿ ನೋವು…
ಭಾರವಾಗಿದೆ ಬದುಕಿನ ದಾರಿ
ಸಾಕಾಗಿದೆ ಕನಸಿನ ಸವಾರಿ… ಮರೆಯಲಿ ಹೇಗೆ ನಿನ್ನ ಹೇಳೇ ಗುಳಿಕೆನ್ನೆ ಸುಂದರಿ?

೧೨) ಸಿಗರೇಟಿನ ಹೊಗೆಯಲ್ಲು
ಅವಳದ್ದೇ ನೆನಪು…
ನೆನಪನ್ನು ಉಜ್ಜೋಕೆ ಇದೆಯಾ ಸೋಪು?
ಹುಡ್ಗೀರ ಪ್ರೀತಿ ನೀರ ಮೇಲಿನ ಗುಳ್ಳೆ
ಹುಡುಗರು ಸಿಕ್ಕಲೆಲ್ಲ ತೂರಾಡೋ ಸೊಳ್ಳೆ…

೧೩) ನಾನು ನಾನಾಗಿಲ್ಲ ನೀ ನನ್ನೆದೆ ಸೇರಿದಾಗ
ಕೊಡುವೆಯಾ ಗೆಳತಿ ನಿನ್ನೆದೆಯಲಿ ನನಗೊಂದು ಜಾಗ?
ನನ್ನೆದೆ ಮಿಡಿತದ ವೇಗ ನೀನು
ನನ್ನ ಜೀವನದ ಭಾಗ ನೀನು
ಕಾಡದೆ ಬೇಗ ಬಾ ನೀನಿನ್ನು…

೧೪) ಮಾಡುತ್ತಿರುವೆನು ನಿನ್ನ ಜಪ
ನಿನ್ನ ನೋಡಲು ಸಿಗ್ತಿಲ್ಲ ನೆಪ
ನಾನೇನು ಮಾಡಿರುವೆ ಪಾಪ?
ಕಾಡುತಿದೆ ನಿನ್ನಯ ರೂಪ
ಏರುತಿದೆ ಭೂಮಿಯ ತಾಪ…

೧೫) ಕಣ್ಣಲ್ಲಿಯೇ ನೀ ಕೊಲ್ಲುವೆಯಾ?
ಕನಸ್ಸಲ್ಲಿ ನೀ ಬರುವೆಯಾ?
ಮನಸ್ಸಲ್ಲಿಯೇ ಮುದ್ದಾಡುವೆಯಾ?
ಎದುರಲಿ ನೀ ಬರುವೆಯಾ?
ಹೀಗೆ ನೀ ನನ್ನ ಕಾಡುವೆಯಾ?

57 ಪ್ರೇಮವಿರಹ ಗೀತೆಗಳು - ಕನ್ನಡ ವಿರಹ ಕವನಗಳು - Sad Love Kavanagalu in Kannada - Kannada Viraha Kavanagalu

೧೬) ನಿನ್ನಿಂದಲೇ ಹಾಳಾದ ಹಾರ್ಟಲ್ಲಿ
ನಿನ್ನದೇ ನೆನಪುಗಳ ದಾಳಿ…
ಕಂಬನಿ ಮಿಡಿಯುವ ಕಣ್ಣಲ್ಲಿ
ನಿನ್ನದೇ ಕನಸುಗಳ ಹಾವಳಿ…
ತಂಗಾಳಿಯಂತೆ ಎದೆಯಲ್ಲಿ ಬಂದೆ
ಬಿರುಗಾಳಿಯಂತೆ ನನ್ನ ಕೊಂದೆ…

೧೭) ದೂರ ಹೋದ ಹೂವೊಂದು
ದೂರ ನಿಂತು ದೂರುತಿದೆ…
ಕಳೆದು ಹೋದ ಮುತ್ತೊಂದು
ಕನಸಲಿ ಬಂದು ಕಾಡುತಿದೆ…
ಮರೆತು ಹೋದ ಮಾತೊಂದು
ಮನಸ್ಸನ್ನೇ ಮಸಣವಾಗಿಸಿದೆ…

೧೮) ಹುಡುಕುತ್ತಿರುವೆನು ಹೊಸದಾರಿ
ಮರೆಯಲಾಗದೇ ಹಳೇ ಊಸಾಬರಿ
ಮುಗಿಯದ ನೋವಿಗೆ ಮುನ್ನುಡಿ ಬರೆದಳು ಸುಂದರಿ
ಮನಸಲಿ ಕನಸನು ಕೊಂದಳು ಕಿನ್ನರಿ…

೧೯) ಭಾರವಾಗಿದೆ ಮನಸು
ದೂರ ಓಡಿದೆ ಕನಸು
ಸಾಕಿನ್ನು ನಿನ್ನ ಮುನಿಸು
ಓ ಒಲವೇ ನನ್ನ ಉಳಿಸು…

೨೦) ನಲ್ಲೆ ಎನುತಾ ಲಲ್ಲೆ ಹೊಡೆಯಲೇ?
ಕೊಲ್ಲೆ ಎನುತಾ ಕಾಟ ಕೊಡಲೇ?
ನೀ ಸಿಗಲಾರೆ ಎಂದು ಜೀವ ಬಿಡಲೇ?
ಏನು ಮಾಡಲಿ ನೀನೇ ಹೇಳೆಲೇ?

57 ಪ್ರೇಮವಿರಹ ಗೀತೆಗಳು - ಕನ್ನಡ ವಿರಹ ಕವನಗಳು - Sad Love Kavanagalu in Kannada - Kannada Viraha Kavanagalu

೨೧) ಭೂಮಿ ಸುತ್ತಲೇ ಬೇಕು
ಗಾಳಿ ಬೀಸಲೇ ಬೇಕು
ಮೋಡ ಕಟ್ಟಲೇ ಬೇಕು
ಏನಾದ್ರೂ ನೀ ನನ್ನ ಪ್ರೀತಿಸಲೇಬೇಕು…

೨೨) ಆಡ್ತಾಆಡ್ತಾ ಪ್ರೀತಿಯ ಲಗೋರಿ
ಕಟ್ಟೇ ಬಿಟ್ಲು ನನ್ನ ಗೋರಿ
ಮುಖದಿಂದ ಅವಳು ತುಂಬಾ ಸುಂದರಿ
ಆದರೆ, ಮನಸ್ಸಿನಿಂದ ಸ್ವಲ್ಪ ಕ್ರೂರಿ…

೨೩) ಏ ಪ್ರೀತಿಯೇ ನೀ ನನ್ನ ಸಾಥಿಯೇ?
ಕಣ್ಣಂಚಲ್ಲಿ ನಿನ್ನ ಕಣ್ಣೀರಿಗೆ
ಸಿಗದಂತೆ ಹಾಗೇ ಬಚ್ಚಿಡಲೇ?
ಎದೆಯ ಚಿಪ್ಪಿನಲ್ಲಿ ನಿನ್ನ ಮುಚ್ಚಿಡಲೇ?
ಆಗಾಗ ನನ್ನೆದೆಯಲ್ಲಿ ಮೂಡುವ
ಮಳೆಬಿಲ್ಲು ನೀನು…
ನಿನ್ನ ಕಂಡರೆ ದೂರ ಓಡುವ
ಬಿಸಿಲುಗುದುರೆ ನಾನು…
ಏ ಪ್ರೀತಿಯೇ ನೀ ನನ್ನ ಸಾಥಿಯೇ…

೨೪) ಹೂವಿಂದ ಹೂವಿಗೆ
ಹಾರುವ ದುಂಬಿಯಾದೆಯಾ?
ಮೋಹದ ಮಾರುಕಟ್ಟೆಯಲ್ಲಿ
ಮನಸ ಮಾರಿಕೊಂಡೆಯಾ?
ಎದೆಯಲ್ಲಿ ಮಾಯದ ಗಾಯ
ಮಾಡಿ ಮಾಯವಾದೆಯಾ?

೨೫) ನಿನಗಾಗಿ ನನ್ನೆದೆಯಲ್ಲಿ
ಸಾವಿರ ಬಾಗಿಲುಗಳನ್ನು ತೆರೆದಿರುವೆ…
ಬರಿದಾದ ಬಾಳಲ್ಲಿ
ನೀ ಬೆಳದಿಂಗಳಾಗಿ ಬಾ…
ಬತ್ತೊದ ಎದೆಯಲ್ಲಿ
ನೀ ಪ್ರೇಮಗಂಗೆಯಾಗಿ ಬಾ…

57 ಪ್ರೇಮವಿರಹ ಗೀತೆಗಳು - ಕನ್ನಡ ವಿರಹ ಕವನಗಳು - Sad Love Kavanagalu in Kannada - Kannada Viraha Kavanagalu

೨೬) ಜೀವಜಲ ಇಲ್ಲದೆ
ಜಲಚರಗಳು ಬದುಕಲ್ಲ.
ಆಮ್ಲಜನಕ ಇಲ್ಲದೆ
ಪ್ರಾಣಿಗಳು ಬದುಕಲ್ಲ.
ಸ್ನೇಹ ಇಲ್ಲದೆ ಸಹಚರರು ಬದುಕಲ್ಲ.
ನೀನಿಲ್ಲದೆ, ನಿನ್ನ ಪ್ರೀತಿಯಿಲ್ಲದೆ ನಾನು ಬದುಕಲ್ಲ…

೨೭) ಎಲ್ಲಿಂದಲೋ ಹಾರಿ
ಬಂದ ದುಂಬಿ ನೀನು.
ಇದ್ದಲ್ಲೇ ಇರುವ ಹೂವು ನಾನು
ಸಾಧ್ಯವೇ ನಮ್ಮ ಒಲವಿನ ಗೆಲುವು?

೨೮) ಕಣ್ಣ ಕೊಳದಲ್ಲಿ
ಈಜಾಡಿದೆ ಅವಳ ನೆನಪು.
ಮರೆತವಳನ್ನು ಮತ್ತೆಮತ್ತೆ
ನೆನೆಯುತ್ತಿದೆ ಮನಸು.
ಮನಸಿಗೆ ಮನಸ್ಸೇ ಶತ್ರು
ಪ್ರೀತಿಗೆ ನೆನಪೇ ಶತ್ರು, ಕಣ್ಣೀರಿಗೆ ಕರ್ಚಿಫೇ ಶತ್ರು…

೨೯) ನಾನು ಬಡವ,
ಆದ್ರೆ ಅವಳು ಬಡವಿಯಲ್ಲ.
ಒಲವು ನನ್ನ ಬಾಳಿಗೆ ಬೆಳಕಾಗಲಿಲ್ಲ
ನೆನಪು ಕಣ್ಣೀರಿಗೆ ಮನೆ ಹಾಕಿತಲ್ಲ…?

೩೦) ಕಾದಿದ್ದೆ ನಿನಗಾಗಿ ನಾನು
ಏಕೆ ಬರಲಿಲ್ಲ ಹೇಳು ನೀನು?
ಕಣ್ಣೀರು ನಿನ್ನ ಉಡುಗೊರೆಯೇನು?
ನೀನಿಲ್ಲದೆ ಉಸಿರಾಡೋಕೆ ಆಗುತ್ತೇನು?
ಯಾವಾಗ ಬರುವೆ ನೀನು?

57 ಪ್ರೇಮವಿರಹ ಗೀತೆಗಳು - ಕನ್ನಡ ವಿರಹ ಕವನಗಳು - Sad Love Kavanagalu in Kannada - Kannada Viraha Kavanagalu

೩೧) ನನ್ನೊಳಗಿನ ಪ್ರೇಮ ಕವಿತೆಯೊಂದು
ಹಣತೆಯಾಗಿ ದಾರಿ ತೋರಿದೆ…
ಅವಳ ಹುಸಿಮುನಿಸೊಂದು
ಕನಸಾಗಿ ಎದುರು ನಿಂತಿದೆ…

೩೨) ಮಸಣದಲ್ಲಿ ಮನಶಾಂತಿಯನ್ನು
ಅರಸಿ ಹೊಂಟಿದೆ ಮನ…
ನಿನ್ನನ್ನು ಕಳ್ಕೊಂಡ ಕ್ಷಣ ನೆನಪಾದಾಗ
ಕೊಡಲೇ ಕಣ್ಣೀರಿಗೆ ಆಮಂತ್ರಣ…?

೩೩) ಹೆಜ್ಜೆಹೆಜ್ಜೆಗೂ ಹೆಜ್ಜೇನು ಕಚ್ಚಿದ ಅನುಭವ.
ನೀನಿಲ್ಲದಿರುವಾಗ ಹೋಗಬಾರದೇಕೆ ನನ್ನ ಜೀವ?
ನೀನಿಲ್ಲದಿದ್ದರೆ ನಾನು ಉಸಿರಾಡುವ ಶವ…

೩೪) ದೀಪದಂತೆ ಇದ್ದೆ ನಾನು
ಬಿರುಗಾಳಿಯಂತೆ ಬಂದೆ ನೀನು
ನಿನ್ನನ್ನು ನಂಬಿದ್ದೆ ನಾನು
ನನ್ನನ್ನು ನಂದಿಸಿದೆ ನೀನು…

೩೫) ನಾ ಲಿಪಸ್ಟಿಕ್ಕಾಗಿ ಹುಟ್ಟಿದ್ರೆ ನಿನ್ನ ತುಟಿಗಳ ಮೇಲಿರುತ್ತಿದ್ದೆ. ಕಾಡಿಗೆಯಾಗಿದ್ದರೆ ನಿನ್ನ ಕಣ್ಣಂಚಿನಲ್ಲಿರುತ್ತಿದ್ದೆ. ಬಿಂದಿಯಾಗಿದ್ದರೆ ನಿನ್ನ ಹಣೆಯ ಮೇಲಿರುತ್ತಿದ್ದೆ. ಮುತ್ತಾಗಿದ್ದರೆ ನಿನ್ನ ಮೂಗುತಿಯಲ್ಲಿರುತ್ತಿದ್ದೆ. ಪ್ಲಾಸ್ಟಿಕ್ ಬಳೆಯಾಗಿದ್ದರೆ ನಿನ್ನ ಕೈಯಲ್ಲಿರುತ್ತಿದ್ದೆ. ಚಪ್ಪಲಿಯಾದರೂ ಆಗಿದ್ದರೆ ನಾನಿನ್ನ ಕಾಲಲ್ಲಿರುತ್ತಿದ್ದೆ. ಆದ್ರೆ ಏನೋ ಪಾಪ ಮಾಡಿ ಹುಡುಗನಾಗಿ ನಿನ್ನಿಂದ ಬಹುದೂರದಲ್ಲಿರುವೆ…

57 ಪ್ರೇಮವಿರಹ ಗೀತೆಗಳು - ಕನ್ನಡ ವಿರಹ ಕವನಗಳು - Sad Love Kavanagalu in Kannada - Kannada Viraha Kavanagalu

೩೬) ಟೀನೆಜು ಟೆಂಟಲ್ಲಿ
ಕಾಲೇಜು ಲೈಫಲ್ಲಿ
ಡ್ಯಾಮೇಜಾದ ಕನಸುಗಳಲ್ಲಿ
ಮುಗಿಯದ ನಿನ್ನ ಮೌನದಲ್ಲಿ
ಬರೆಯಲೇ ಒಂದು ಕವನ?

೩೭) ಕಣ್ಣಲ್ಲಿ ಮಿಂಚು ಮೂಡಿದಾಗ
ಕಂಬನಿ ಒರೆಸಿದ ಕೈಯನ್ನು ಮರೆತೆಯಾ?
ಬಾಳಲ್ಲಿ ಬೆಳಕು ಬಂದಾಗ
ಜೀವತೆತ್ತ ದೀಪವನ್ನು ದೂರ ಎಸೆದೆಯಾ?

೩೮) ನೀನಿಲ್ಲದ ಈ ಜಗದಲ್ಲಿ ಇನ್ನೇನಿದೆ?
ನಿನ್ನ ಬಿಟ್ಟು ಬೇರೆನು ಬೇಕಿದೆ?
ಹಾಳಾಗೋಗಿವೆ ನಿದಿರೆಗಳು
ಕಂಗಾಲಾಗಿವೆ ಕನಸುಗಳು
ಬಾಡಿ ನಿಂತಿವೆ ಬೃಂದಾವನದ ಹೂಗಳು…

೩೯) ಪುಟ್ಟ ಎದೆಯಲ್ಲಿ ದೊಡ್ಡ ನೋವು
ಬಯಸಿದರೂ ಬರ್ತಿಲ್ಲ ನನ್ನ ಸಾವು
ಬದುಕು ಒಂದು ಬೇವುಬೆಲ್ಲ
ನನ್ನ ಪಾಲಿಗೆ ಬರೀ ಬೇವೆ ಬಂತಲ್ಲ?
ಕತ್ತಲು ಕಳೆದರೂ ಬೆಳಕು ಮೂಡ್ತಿಲ್ಲ…

೪೦) ಚೂರಾಯಿತು ಎದೆಯ ಕವಿತೆ
ಆರಿತು ಪ್ರೀತಿಯ ಹಣತೆ
ನಿನಗಾಗಿ ನಾ ಸೋತು ಸತ್ತೆ
ನಿನ್ನಿಂದಲೇ ನಾನೊಂದು ಪಾಠ ಕಲಿತೆ
ನಿನ್ನ ನಗೆಯ ಹೊಗೆಯ ಸಂಚು
ತುಂಬಿಸಿದೆ ನನ್ನ ಕಣ್ಣ ಅಂಚು…

57 ಪ್ರೇಮವಿರಹ ಗೀತೆಗಳು - ಕನ್ನಡ ವಿರಹ ಕವನಗಳು - Sad Love Kavanagalu in Kannada - Kannada Viraha Kavanagalu

೪೧) ಅವಳ ಒಂದು ಪಿಸುಮಾತಿಗೆ ಕಿವಿಗಳು ಕಾದಿವೆ.
ಅವಳ ಒಂದು ಕುಡಿನೋಟಕ್ಕೆ ಕಂಗಳು ಕಾತರಿಸಿವೆ.
ಅವಳ ಒಂದು ಅಪ್ಪುಗೆಗೆ ಹೃದಯ ಹಂಬಲಿಸಿದೆ.
ಆದ್ರೆ ಅವಳು ಮತ್ತೆ ಯಾವತ್ತೂ ಬರಲ್ಲ.
ಮತ್ತದೆ ರಾಗ, ಮತ್ತದೆ ಹಾಡು.
ಲವರ್ ಮಾಡಿದ ತಪ್ಪಿಗೆ ಲಿವರಿಗೆ ಶಿಕ್ಷೆ…

೪೨) ಈ ಭೂಮಿ ಆ ಬಾನಿನಂತೆ
ದೂರಾಗಿ ಹೋದೆವು ನಾವು…
ಸಂಧಾನಕ್ಕೆ ಬಂದ ಮಳೆಯಲ್ಲಿ
ನೆನಪುಗಳ ನೋವು…
ಬೇಕೆಬೇಕು ನೆನಪುಗಳಿಗೆ ಸಾವು
ಸಾಕುಸಾಕು ಈ ವಿರಹದ ಬೇವು…

೪೩) ಸದ್ದಿಲ್ಲದೆ ಕೊಲೆಯಾದೆ
ನಾ ನಿನ್ನ ಕಣ್ಣಲ್ಲಿ…
ಅರಿವಿಲ್ಲದೆ ನಾ ಬಿದ್ದೆನು
ನಿನ್ನ ಕೆನ್ನೆಗುಳಿಯಲ್ಲಿ…
ಹುಡುಕಿಕೊಡು ಹುಡುಗಿ ನೀ ನನ್ನನು
ನಾ ಬೀಳುವ ಮುನ್ನ ಪ್ರೀತಿಯಲ್ಲಿ…

೪೪) ಓ ನನ್ನ ಮನಸೇ,
ಅವಳಿಂದೆ ಮತ್ಯಾಕೆ ಓಡುವೆ?
ಬಂದು ಸೇರು ನೀ ನನ್ನೇ ಕೂಸೇ
ಬಿಟ್ಟು ಬಿಡು ನೀ ಅವಳಾಸೆ
ಅವಳೊಂದು ಅಮರ ಅಮವಾಸ್ಯೆ…

೪೫) ಪ್ರೀತಿಯ ಗುಲಾಬಿಯಲ್ಲಿ
ಮುಳ್ಳನ್ನು ನೆಟ್ಟವರು ಯಾರೋ?
ನಗುವ ಮನಸ್ಸಲ್ಲಿ ನೋವನ್ನು ಬಿತ್ತಿದವಳ್ಯಾರೋ?
ಹೆದರದಿರು ನೀ,,, ನಾ ನಿನ್ನೆಡೆಗೆ
ಬೆರಳು ಮಾಡಿ ತೋರಿಸುವುದಿಲ್ಲ…

57 ಪ್ರೇಮವಿರಹ ಗೀತೆಗಳು - ಕನ್ನಡ ವಿರಹ ಕವನಗಳು - Sad Love Kavanagalu in Kannada - Kannada Viraha Kavanagalu

೪೬) ಹುಚ್ಚು ಮನಸ್ಸು ಹುಚ್ಚು
ಆಸೆಯಾ ಬಿಚ್ಚಿ ಹೇಳಿದೆ…
ಅವಳ ಹೆಜ್ಜೆ ಸದ್ದಿಗೆ
ನನ್ನೆದೆಯ ತಾಳ ತಪ್ಪಿದೆ…
ಕಣ್ಣ ಕಾಡಿಗೆ ಮನಸ ಕದಡಿದೆ
ಹಾರಾಡೋ ಕೂದಲು ಹೃದಯ ಕದ್ದಿದೆ
ಯಾಕೋ ಏನೋ ಇಂದು ಏನೋ ಆಗಿದೆ
ನನ್ನ ಹೃದಯ ಅವಳ ಸಂಗ ಬಯಸಿದೆ…

೪೭) ಪ್ರೀತಿಸಿದ ಹುಡುಗಿ ದೂರಾದಾಗ
ಕಣ್ಣೀರಿಗೆ ಬರವೆಲ್ಲಿ?
ಚಡ್ಡಿ ದೊಸ್ತಗಳೇ ಬೆನ್ನಿಗೆ ಚೂರಿ
ಹಾಕಿದಾಗ ದೋಸ್ತಿಗೆ ಬೆಲೆಯಲ್ಲಿ?
ಬರಗಾಲ ಬಿದ್ದ ನನ್ನೆದೆಗೆ
ಮಳೆ ತರೋ ಪ್ರೀತಿ ಮೋಡವೆಲ್ಲಿ?

೪೮) ನಾವಿಕನಿಲ್ಲದ ನೌಕೆಯಲ್ಲಿ
ನನ್ನ ಬಾಳ ಪಯಣ…
ನೂರಾರು ಕನಸುಗಳು ನೂಚ್ಚು ನೂರಾದರೂ
ನಿನ್ನನ್ನೇ ಹುಡುಕಿವೆ ನನ್ನ ನಯನ..
ಮನಸ್ಸು ಮುರಿದರೂ ಮನಸ್ಸಲ್ಲಿವೆ ನಿನ್ನದೇ ನೆನಪುಗಳು…
ಮಾತು ಮುರಿದರೂ ತುಂಬಿ ನಿಂತಿವೆ ನನ್ನೆದೆ ಕಂಗಳು…

೪೯) ತಂಗಾಳಿ ಬೀಸಿದರೂ ಎದೆಯಲ್ಲಿ ತಳಮಳ.
ಮಂದಹಾಸ ಮೂಡಿದರೂ ಕಣ್ಣೀರಲಿ ಕಿರುಕುಳ.
ಉಸಿರಾಡೋ ಗಾಳಿಯಲ್ಲಿ, ಅವಳ ಗೆಜ್ಜೆ ಸಪ್ಪಳ.
ಉರುಳಾಗಿದೆ ನೆನಪುಗಳ ಬಿಟ್ಟಿ ಸಾಲ…

೫೦) ನಿನ್ನೆದೆಯಲ್ಲಿ ಮಲಗಿರುವ
ಮಹಾಮೌನವನ್ನು ಬಡಿದೆಬ್ಬಿಸು
ಕಣ್ಣುಗಳ ಪ್ರಶ್ನೆಗೆ ತುಟಿಗಳಿಂದ ಉತ್ತರಿಸು
ಮೌನ ಮಾತಾದಾಗಲೇ ಮನಸ್ಸಿಗೆ ನೆಮ್ಮದಿ
ಬೇಗನೆ ಬರೆದು ಬಿಡು ಪ್ರೀತಿಗೆ ಮುನ್ನುಡಿ
ನನ್ನ ಕಂಗಳೇ ನಿನ್ನೆದೆಯಲ್ಲಿರೋ ಪ್ರೀತಿಗೆ ಕನ್ನಡಿ…

57 ಪ್ರೇಮವಿರಹ ಗೀತೆಗಳು - ಕನ್ನಡ ವಿರಹ ಕವನಗಳು - Sad Love Kavanagalu in Kannada - Kannada Viraha Kavanagalu

೫೧) ಎದೆಯ ಕಡಲೊಳಗೆ
ಹೊಸ ಕವಿತೆ ಚಿಗುರೊಡೆದ ಹಾಗೇ,
ಚೆಂದ್ರನ ಕೆನ್ನೆ ಮೇಲೆ
ಚೆಂದ ಗಾಯ ಆದ ಹಾಗೇ,
ನೀ ನನ್ನೆದೆ ಸೇರಿದೆ ಹುಡುಗಿ…

೫೨) ಕಂಡಾಗಿನಿಂದ ನಿನ್ನ ಕಣ್ಣಲ್ಲಿ ಕಾಮನಬಿಲ್ಲು
ಶುರುವಾಗಿದೆ ನನ್ನೆದೆಯಲ್ಲಿ ನಿಂದೆ ಗುಲ್ಲು
ಖಾಲಿ ಹೃದಯದಲ್ಲಿ ಬಿತ್ತೊಂದು ಪ್ರೀತಿ ಕಲ್ಲು
ನನ್ನ ಏಕಾಂತವನ್ನು ನೀನೇ ಕೊಲ್ಲು…

೫೩) ಗಾಳಿಗೂ ಉಸಿರು ಕಟ್ಟಿದೆ
ನಿನ್ನ ಸುಳಿದಾಟವಿಲ್ಲದೇ…
ಮೋಡವೂ ಕಣ್ಣೀರಿಟ್ಟಿದೆ
ನಿನ್ನ ನಗುವಿನ ಸದ್ದಿಲ್ಲದೇ…
ಕಿವಿಗಳು ಕಂಪಿಸಿವೆ
ಕೇಳದೆ ನಿನ್ನ ಧ್ವನಿ…
ಕಾರಣ ಕೇಳಿವೆ
ಪ್ರತಿಯೊಂದು ಕಣ್ಣೀರ ಹನಿ…

೫೪) ನನ್ನೆದೆಯ ಕಿಟಕಿಯಲ್ಲಿ
ಇಣುಕಿತೊಂದು ಒಂಟಿ ಹೂವು
ಒಂದೇ ಕಣ್ಣೆಟಿಗೆ ಆಗೋಯ್ತು ಹೆವ್ವಿ ಲವ್ವು…
ಏ ಚೆಲುವೆ ನೀ ಎಲ್ಲಿರುವೆ?
ನಾ ಸುಮ್ನಿರಲಾರದೆ ಹಾರ್ಟಲ್ಲಿ
ಪ್ರೀತಿ ಇರುವೆ ಬಿಟ್ಕೊಂಡಿರುವೆ…

೫೫) ಕದನಕೆ ಕಾದಿದೆ ನಿನ್ನಯ ಮನ
ಪ್ರೀತಿಗೆ ಕರೆದಿದೆ ನನ್ನಯ ನಯನ…
ನಿನ್ನ ಹೆಜ್ಜೆಗಳನ್ನು ಹಿಂಬಾಲಿಸುತ್ತಿದೆ ನನ್ನ ಹೃದಯ.
ನಿನ್ನಿಂದೆ ಬರಬೇಡ ಎಂದು ನೀ ಹೇಳುವೆಯಾ?

57 ಪ್ರೇಮವಿರಹ ಗೀತೆಗಳು - ಕನ್ನಡ ವಿರಹ ಕವನಗಳು - Sad Love Kavanagalu in Kannada - Kannada Viraha Kavanagalu

೫೬) ಏ ಚೆಲುವೆ, ನೀ ಏಕೆ ಹೀಗೆ ಕಾಡುವೆ?
ಎದುರಿಗೆ ಬಂದಾಗ ಕಣ್ಣಲ್ಲೇ ಕೊಲ್ಲುವೆ
ಕನಸಲಿ ಬಂದು ಮುದ್ದು ಮಾಡುವೆ…
ಪ್ರೀತಿ ಪ್ರೀತಿ ನೀನೇಕೆ ತರುವೆ ಫಜೀತಿ?
ಪ್ರೀತಿ ಪ್ರೀತಿ ನೀನೇಕೆ ಈ ರೀತಿ…?

೫೭) ಏಳು ಮನವೇ ಏದ್ದೇಳು
ಅವಳ ಮರೆತು ಸಿಡಿದೇಳು
ಕಣ್ಣ ತೆರೆದು ಜಗವ ನೋಡು
ನಿದ್ದೆಗೆಟ್ಟು ನೀ ಹೋರಾಡು
ಏಳುಮನವೇ ನೀ ಎದ್ದೇಳು
ಅವಳ ಮರೆತು ನೀ ಸಿಡಿದೇಳು….

ನೋವಿನಲ್ಲೂ ನೀ ಅರಳು
ಸೋಲಿನಲ್ಲೂ ನೀ ಗೆಲ್ಲು
ನಿನ್ನದೇ ಈ ಜಗವು
ನಿನ್ನ ಜೊತೆಗಿರಲಿ ಗೆಲುವು
ಅತ್ತಿದ್ದು ಸಾಕು ಇನ್ನು ನೀ ನಗಬೇಕು
ಮರೆತು ಬಿಡು ನೀ ಅವಳನ್ನು, ನೆನಪಿಸಿಕೋ ನೀ ನಿನ್ನನ್ನು…

57 ಪ್ರೇಮವಿರಹ ಗೀತೆಗಳು - ಕನ್ನಡ ವಿರಹ ಕವನಗಳು - Sad Love Kavanagalu in Kannada - Kannada Viraha Kavanagalu

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books