ಚಾಣಕ್ಯ ನೀತಿಗಳು : Chanakya Niti in Kannada – chanakya quotes in kannada

You are currently viewing ಚಾಣಕ್ಯ ನೀತಿಗಳು : Chanakya Niti in Kannada – chanakya quotes in kannada

ಹಾಯ್ ಗೆಳೆಯರೇ, ಜೀವನದಲ್ಲಿ ಕಲಿಯುವುದು ಸಾಕಷ್ಟಿದೆ. ಸಮಯ ಸಿಕ್ಕಾಗ ಸಾಕಷ್ಟು ಕಲಿತು ಸಾಧ್ಯವಾದಷ್ಟು ಸಾಧಿಸಬೇಕು ಎಂಬ ಮನೋಧರ್ಮ ನನ್ನದು. ನನಗೆ ನೋವಾದಾಗ, ಬೇಜಾರಾದಾಗ ಕೆಲವೊಂದಿಷ್ಟು ನುಡಿಮುತ್ತುಗಳು ನೆನಪಾಗುತ್ತವೆ. ಅವುಗಳಲ್ಲಿ ಚಾಣಕ್ಯ ನೀತಿಗಳು ಸಹ ಸೇರಿಕೊಂಡಿವೆ. ಪಂಚತಂತ್ರಗಳು ಕೈಕೊಟ್ಟಾಗ ರಣತಂತ್ರಗಳನ್ನು ಪ್ರಯೋಗಿಸಿಬೇಕು. ರಣತಂತ್ರಗಳು ಕೈಕೊಟ್ಟಾಗ ಚಾಣಕ್ಯ ತಂತ್ರಗಳನ್ನು ಅನುಸರಿಸಬೇಕು. ಸಾಧನೆಗೆ, ಸೇಡಿಗೆ, ಗೆಲುವಿಗೆ, ಮನಶಾಂತಿಗೆ, ಸುಖಕ್ಕೆ, ಕೊನೆಗೆ ಶತ್ರುನಾಶಕ್ಕೆ ಕೆಲವೊಂದಿಷ್ಟು ಪವರಫುಲ್ ಚಾಣಕ್ಯ ತಂತ್ರಗಳು ಇಲ್ಲಿವೆ.

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

ಚಾಣಕ್ಯ ನೀತಿಗಳು : Chanakya Niti in Kannada

೧) ಮೈಮುಖದಿಂದ ಸುಂದರವಾಗಿರುವ ಸ್ತ್ರೀ ಕೇವಲ ಒಂದು ರಾತ್ರಿ ಮಾತ್ರ ಸುಖ ಕೊಡಬಲ್ಲಳು. ಆದರೆ ಮನಸ್ಸಿನಿಂದ ಸುಂದರವಾಗಿರುವ ಸ್ತ್ರೀ ಜೀವನಪೂರ್ತಿ ಸುಖ ಕೊಡುತ್ತಾಳೆ. ಮನಸ್ಸಿನಿಂದ ಸುಂದರವಾಗಿರುವವಳನ್ನು ಮಡದಿಯಾಗಿ ಸ್ವೀಕರಿಸುವುದು ಒಳ್ಳೆಯದು…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೨) ಅವಶ್ಯಕತೆಗಿಂತ ಅಧಿಕವಾಗಿ ಪ್ರಾಮಾಣಿಕತೆ ತೋರುವ ಅವಶ್ಯಕತೆಯಿಲ್ಲ. ಅತಿಯಾಗಿ ಪ್ರಾಮಾಣಿಕರಾಗಿರುವುದು ಆರೋಗ್ಯಕರವಲ್ಲ. ಏಕೆಂದರೆ ಅಂಕುಡೊಂಕಾಗಿರುವ ಮರಗಳನ್ನು ಬಿಟ್ಟು ನೇರವಾಗಿರುವ ಮರಗಳನ್ನೇ ಮೊದಲು ಕಡಿಯುತ್ತಾರೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೩) ದುಷ್ಟ ವ್ಯಕ್ತಿಗಳ ಸಿಹಿ ಮಾತುಗಳ ಮೇಲೆ ತಪ್ಪಿಯೂ ವಿಶ್ವಾಸವಿಡಬಾರದು. ಯಾಕೆಂದರೆ ಅವರು ತಮ್ಮ ಮೂಲ ಸ್ವಭಾವವನ್ನು ಮರೆತಿರುವುದಿಲ್ಲ. ಹುಲಿ ಹಿಂಸೆ ಮಾಡುವುದನ್ನು ಬಿಡುವುದಿಲ್ಲ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೪) ತನ್ನ ಹಲ್ಲಲ್ಲಿ ವಿಷವಿಲ್ಲದಿದ್ದರೂ ಹಾವು ತನ್ನ ಆತ್ಮರಕ್ಷಣೆಗಾಗಿ ಬುಸುಗುಡಲೇಬೇಕು…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೫) ಯಾವಾಗಲೂ ಗುಣವಂತರ ಜೊತೆ ಗೆಳೆತನ ಬೆಳೆಸುವುದು ಶ್ರೇಯಸ್ಸುಕರ. ಯಾಕೆಂದರೆ ಹಾಲಲ್ಲಿ ನೀರು ಹಾಲಾಗುವಂತೆ ನಾವು ಗುಣವಂತರ ಜೊತೆ ಸೇರಿ ಗುಣವಂತರಾಗುತ್ತೇವೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೬) ಯಾವ ರಾಜ ಅಧರ್ಮದ ದಾರಿಯಲ್ಲಿ ಸಾಗುತ್ತಾನೋ ಅವನಿಗೆ ತನ್ನ ಪ್ರಜೆಗಳ ಸುಖದು:ಖಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ. ಅವನು ತನ್ನ ಸ್ವಾರ್ಥದಿಂದಲೇ ಸರ್ವನಾಶವಾಗುತ್ತಾನೆ. ಅದೇ ರೀತಿ ತನ್ನ ಸಮಾಜದ ಹಿತ ಕಾಯದ ವ್ಯಕ್ತಿ ಹೀನಾಯವಾಗಿ ಅಳಿಯುತ್ತಾನೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೭) ದೊಡ್ಡ ಆನೆಯನ್ನು ನಿಯಂತ್ರಿಸಲು ಒಂದು ಅಂಕುಶ ಸಾಕು. ಅಂಧಕಾರವನ್ನು ಅಳಿಸಲು ಒಂದು ಸಣ್ಣ ದೀಪ ಸಾಕು. ದೊಡ್ಡ ಪರ್ವತವನ್ನು ಪುಡಿಮಾಡಲು ಒಂದು ಸಿಡಿಲು ಬಡಿತ ಸಾಕು. ನಿಮ್ಮ ದೇಹ, ಆಕಾರ, ಗಾತ್ರ, ಸೌಂದರ್ಯ ಮುಖ್ಯವಲ್ಲ. ನಿಮ್ಮಲ್ಲಿರುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಮಾತ್ರ ಮುಖ್ಯ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೮) ಶಿಕ್ಷಣವನ್ನು ಪಡೆಯುವುದು ಒಂದು ತಪಸ್ಸಿದ್ದಂತೆ. ಅದಕ್ಕಾಗಿ ಮನೆ ಮತ್ತು ಮಾಯೆಯ ಮೋಹವನ್ನು ತ್ಯಾಗಮಾಡಬೇಕಾಗುತ್ತದೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೯) ಸ್ತ್ರೀಯರನ್ನು ಕೆಟ್ಟ ದೃಷ್ಟಿಯಿಂದ ನೋಡುವವನು ಯಾವತ್ತು ಪವಿತ್ರನಾಗಿರುವುದಿಲ್ಲ. ಅವನು ತನ್ನ ಅವನತಿಯನ್ನು ತಾನೇ ಆಹ್ವಾನಿಸಿಕೊಳ್ಳುತ್ತಾನೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೧೦) ಹುಟ್ಟು ಗುಣಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಬೇವಿನ ಗಿಡದ ಮೇಲೆ ಹಾಲಿನ ಅಭಿಷೇಕ ಮಾಡಿದರೂ ಬೇವು ಬೇವಾಗಿಯೇ ಇರುತ್ತದೆ. ಅದು ಬೆಲ್ಲವಾಗಲೂ ಸಾಧ್ಯವಿಲ್ಲ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೧೧) ಕಾಗೆ ಎಷ್ಟೇ ಎತ್ತರವಾದ ಕಟ್ಟಡವೇರಿ ಕುಳಿತರೂ ಅದನ್ನು ರಣಹದ್ದೆಂದು ಕರೆಯಲಾಗುವುದಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿಯ ಗೌರವ ಅವನ ಗುಣಗಳ ಮೇಲೆ ನಿರ್ಧಾರಿತವಾಗುತ್ತದೆಯೇ ಹೊರತು ಅವನಿರುವ ಎತ್ತರ, ಸ್ಥಾನಮಾನ, ಸಿರಿವಂತಿಕೆಯ ಮೇಲಲ್ಲ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೧೨) ಒಂದು ಹೂವಿನ ಸುವಾಸನೆ ಗಾಳಿ ಬೀಸುವ ದಿಕ್ಕಲ್ಲಿ ಮಾತ್ರ ಪಸರಿಸುತ್ತದೆ. ಆದ್ರೆ ಒಬ್ಬ ಒಳ್ಳೇ ವ್ಯಕ್ತಿಯ ಗುಣಗಾನ ಎಲ್ಲ ದಿಕ್ಕುಗಳಲ್ಲಿ ಪಸರಿಸುತ್ತದೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೧೩) ಒಬ್ಬ ಆಸೆಬುರುಕನನ್ನು ಹಣಕೊಟ್ಟು ಕೈವಶಮಾಡಿಕೊಳ್ಳಬಹುದು. ಆದ್ರೆ ಒಬ್ಬ ಸಜ್ಜನನನ್ನು ಕೈವಶ ಮಾಡಿಕೊಳ್ಳಬೇಕಾದರೆ ಬರೀ ಸತ್ಯವನ್ನೇ ನುಡಿಯಬೇಕಾಗುತ್ತದೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೧೪) ಹೇಗೆ ಒಬ್ಬ ಕುಡುಕನಿಗೆ ಸರಿ ಕೆಟ್ಟದ್ದು ಗೊತ್ತಾಗುವುದಿಲ್ಲವೋ ಅದೇ ರೀತಿ ಒಬ್ಬ ಸ್ವಾರ್ಥ ಆಸೆಗಳ ಸಾಧಕನಿಗೆ ಸರಿ ಕೆಟ್ಟದ್ದು ಸ್ವಲ್ಪವೂ ಗೊತ್ತಾಗುವುದಿಲ್ಲ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೧೫) ಚಿನ್ನದ ಅಸಲಿಯತ್ತನ್ನು ಪರೀಕ್ಷಿಸಲು ಅದನ್ನು ಬೆಂಕಿಯಲ್ಲಿ ಹಾಕಿ ಬೇಯಿಸುತ್ತಾರೆ. ಅದೇ ರೀತಿ ವ್ಯಕ್ತಿಗಳ ಮೇಲೆ ಬರುವ ಆಪಾದನೆಗಳು ಅವರ ಅಸಲಿಯತ್ತನ್ನು ಪರೀಕ್ಷಿಸುತ್ತವೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೧೬) ಕೆಟ್ಟ ಗೆಳೆಯ, ಕೆಟ್ಟ ಹೆಂಡತಿ, ಕೆಟ್ಟ ಶಿಷ್ಯರ ಜೊತೆಗೆ ಇರುವುದಕ್ಕಿಂತ ಒಂಟಿಯಾಗಿ ಇರುವುದೇ ಒಳ್ಳೆಯದು. ಯಾಕೆಂದರೆ ಅವರು ನಮ್ಮ ಬಾಳನ್ನು ಬೆಳಗುವುದಕ್ಕಿಂತ ಮತ್ತಷ್ಟು ಬಿಗಡಾಯಿಸುತ್ತಾರೆ.

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೧೭) ನಮ್ಮ ಸಮಸ್ಯೆಗಳನ್ನು, ನೋವುಗಳನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳಬಾರದು. ಏಕೆಂದರೆ ಜನ ನಮ್ಮನ್ನು ನೋಡಿ ಗೇಲಿ ಮಾಡಿಕೊಂಡು ನಗುವುದರ ಜೊತೆಗೆ ನಮ್ಮ ದುರ್ಬಲತೆಗಳ ಲಾಭ ಪಡೆಯುತ್ತಾರೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೧೮) ಜೀವನದಲ್ಲಿ ಏನಾದರೂ ಒಂದನ್ನು ಕಲಿಯುವಾಗ, ಬ್ಯುಸಿನೆಸ್ಸ ಮಾಡುವಾಗ ಮತ್ತು ಊಟ ಮಾಡುವಾಗ ನಾಚಿಕೆಯನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕು…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೧೯) ಕಾನೂನನ್ನು ಪಾಲಿಸದ, ಮಾನ ಮರ್ಯಾದೆಗೆ ಹೆದರದ, ತಿಳುವಳಿಕೆ ಇಲ್ಲದ, ದಾನ ಮಾಡದ, ಕಲೆಯನ್ನು ಗೌರವಿಸಿದ ಜನರಿರುವ ರಾಜ್ಯದಲ್ಲಿ ಬುದ್ಧಿವಂತರು ಯಾವುದೇ ಕಾರಣಕ್ಕೂ ಇರಬಾರದು.

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೨೦) ಏನಾದರೂ ಒಂದು ಹೊಸ ಕೆಲಸವನ್ನು ಪ್ರಾರಂಭಿಸಿದರೆ ಯಾವುದೇ ಕಾರಣಕ್ಕೂ ಹೆದರಬೇಡಿ. ಹೆದರಿ ಹಿಂದೆ ಸರಿದು, ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡಬೇಡಿ. ಹಿಡಿದ ಕೆಲಸವನ್ನು ಧೈರ್ಯದಿಂದ ಪ್ರಾಮಾಣಿಕವಾಗಿ ಮಾಡಿ ಮುಗಿಸಿದವರು ಮಾತ್ರ ಸಂತೋಷವಾಗಿರುತ್ತಾರೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೨೧) ಬಡತನವನ್ನು ಭಾಗ್ಯದಿಂದ ಬೆಳಗಬಹುದು. ಶುಚಿಯಾಗಿದ್ದರೆ ಸಾದಾ ಬಟ್ಟೆಗಳು ಸಹ ಸುಂದರವಾಗಿ ಕಾಣುತ್ತವೆ. ಬಿಸಿಯಾಗಿದ್ದರೆ ರುಚಿಯಿಲ್ಲದ ಆಹಾರವು ಇಷ್ಟವಾಗುತ್ತದೆ. ಅದೇ ರೀತಿ ಸಿರಿತನ, ಸೌಂದರ್ಯ, ಸಂಪತ್ತು ಇಲ್ಲದಿದ್ದರೂ ಸದ್ಗುಣಗಳಿರುವ ವ್ಯಕ್ತಿ ಎಲ್ಲರಿಗೂ ಇಷ್ಟವಾಗುತ್ತಾನೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೨೨) ಉನ್ನತ ಆದರ್ಶಗಳಿಲ್ಲದ ಪತ್ನಿಯ ಜೊತೆ ಬದುಕುವುದು, ಬೆನ್ನಿಂದೆ ಚೂರಿ ಹಾಕುವವನ ಜೊತೆ ಸ್ನೇಹ ಬೆಳೆಸುವುದು, ಬರೀ ಮಾತಾಡುವವನ ಜೊತೆ ಕೆಲಸ ಮಾಡುವುದು, ವಿಷ ಸರ್ಪಗಳಿರುವ ಮನೆಯಲ್ಲಿ ವಾಸಿಸುವುದು ಎಲ್ಲ ಒಂದೇ ಮತ್ತು ಅಕ್ಷೇಮ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೨೩) ಗಳಿಸುವುದಕ್ಕಿಂತ ಹೆಚ್ಚಾಗಿ ಖರ್ಚು ಮಾಡುವವನ, ತನಗಿಂತ ಶಕ್ತಿಶಾಲಿಯಾಗಿರುವವರ ಜೊತೆ ಕಾಲುಕೆರೆದು ಜಗಳ ಕಾಯುವವನ, ಸ್ತ್ರೀಯರ ಮೇಲೆ ಕೆಟ್ಟ ಕಣ್ಣು ಇಟ್ಟಿರುವವನ ಅವನತಿಗೆ ಬಹಳ ಸಮಯ ಬೇಕಾಗುವುದಿಲ್ಲ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೨೪) ಯಾವಾಗಲೂ ಮನೆ, ಮಡದಿ, ಮಕ್ಕಳು, ಗಳಿಕೆ, ಸಂಪತ್ತಿನ ವಿಷಯದಲ್ಲಿ ಸಾಧ್ಯವಾದಷ್ಟು ಸಂತೃಪ್ತರಾಗಿರಬೇಕು. ಆದರೆ ಜ್ಞಾನದ ವಿಚಾರದಲ್ಲಿ ಸಂತೃಷ್ಟನಾಗಿರಬಾರದು…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೨೫) ಓರ್ವ ಒಳ್ಳೆಯ ಹೆಂಡತಿ ತನ್ನ ಗಂಡನನ್ನು ಬೆಳಿಗ್ಗೆ ಮಗನಂತೆ ನೋಡುತ್ತಾಳೆ. ದಿನವೆಲ್ಲ ಸೋದರಿಯಂತೆ ಪ್ರೀತಿಸುತ್ತಾಳೆ. ರಾತ್ರಿಯೆಲ್ಲ ವೈಷ್ಯೆಯಂತೆ ನಿರ್ಲಜ್ಜೆಯಾಗಿ ಅವನನ್ನು ಸಂಪೂರ್ಣವಾಗಿ ಸಂತುಷ್ಟಪಡಿಸುತ್ತಾಳೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೨೬) ಕಟ್ಟಿಗೆಯನ್ನು ಕೊರೆದು ಕೆಡಿಸುವ ಜೇನು ಹುಳುವಿಗೆ ಒಂದು ಹೂವನ್ನು ಕೊರೆಯುವ ಮನಸ್ಸಾಗುವುದಿಲ್ಲ. ಆ ಹೂವಿಗೆ ದುಂಬಿ ಮನಸೋತಿರುತ್ತದೆ. ಅದೇ ರೀತಿ ಈ ಪ್ರೀತಿ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೨೭) ಊಟ ಮಾಡುವಾಗ ಮಾತ್ರ ದೊಡ್ಡದಾಗಿ ಬಾಯಿ ತೆರೆಯುವ ಮನುಷ್ಯ ನೂರು ವರುಷದ ಸುಖವನ್ನು ಒಂದೇ ವರ್ಷಕ್ಕೆ ಪಡೆದುಕೊಳ್ಳುತ್ತಾನೆ. ಅಂದರೆ ಮೌನವೇ ಮಹಾ ಅಸ್ತ್ರ. ಮಹಾಯುದ್ಧದಿಂದ ಗೆಲ್ಲಲಾಗದ್ದನ್ನು ಮೌನದಿಂದ ಗೆಲ್ಲಬಹುದು. ಹೆಚ್ಚಿಗೆ ಮಾತಾಡಿದಷ್ಟು ಹೆಚ್ಚಿನ ಸಮಸ್ಯೆಗಳು ಮೈಮೇಲೆ ಬರುತ್ತವೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೨೮) ಕಾಲ ವ್ಯಕ್ತಿಗಳನ್ನು ಸಮರ್ಥರನ್ನಾಗಿಸಬಹುದು, ಶಕ್ತಿಶಾಲಿಗಳನ್ನಾಗಿಸಬಹುದು. ಇಲ್ಲ ದುರ್ಬಲರನ್ನಾಗಿಸಿ ಕೊಲ್ಲಬಹುದು. ಕಾಲ ಯಾರ ಕೈಯಲ್ಲು ಇಲ್ಲ. ಯಾರು ಯಾರಿಗೂ ಮಿತ್ರನೂ ಅಲ್ಲ, ಶತ್ರುನೂ ಅಲ್ಲ. ಕಾಲ ಎಲ್ಲರನ್ನೂ ಮಿತ್ರ ಶತ್ರುವನ್ನಾಗಿಸುತ್ತದೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೨೯) ಬೇರೆಯವರ ತಪ್ಪುಗಳನ್ನು ನೋಡಿ ನಾವು ನಮ್ಮನ್ನು ತಿದ್ದಿಕೊಳ್ಳಬೇಕು. ಎಲ್ಲ ತಪ್ಪುಗಳನ್ನು ನಾವೇ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಮ್ಮ ಬಳಿಯಿಲ್ಲ. ಅದಕ್ಕಾಗಿ ನಾವು ಬೇರೆಯವರ ತಪ್ಪುಗಳಿಂದ ಕಲಿಯಬೇಕು…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೩೦) ಯೌವ್ವನ ಮತ್ತು ಸ್ತ್ರೀಯ ಸೌಂದರ್ಯ ಜಗತ್ತಿನ ಶಕ್ತಿಶಾಲಿ ಶಸ್ತ್ರಗಳಾಗಿವೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೩೧) ಪ್ರಾಮಾಣಿಕರಿಗೆ, ಮುಗ್ಧರಿಗೆ ಶಿಕ್ಷೆ ವಿಧಿಸುವ ಮೂಲಕ ನೀವು ಅನಾವಶ್ಯಕವಾಗಿ ಒಬ್ಬ ಶತ್ರುವನ್ನು ಸೃಷ್ಟಿಸಿಕೊಳ್ಳುತ್ತೀರಿ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೩೨) ಅತೀ ದೊಡ್ಡ ಗುರು ಮಂತ್ರವೆಂದರೆ ನಿಮ್ಮ ಗುಟ್ಟುಗಳನ್ನು ಯಾವುದೇ ಕಾರಣಕ್ಕೂ ಬೇರೆಯವರೊಂದಿಗೆ ಹಂಚಿಕೊಳ್ಳದೆ ಇರುವುದು. ಇಲ್ಲವಾದರೆ ನಿಮ್ಮ ಸಮಾಧಿಯನ್ನು ನೀವೇ ತೊಡಿಕೊಳ್ಳುತ್ತೀರಿ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೩೩) ನಾಸ್ತಿಕರಿಗೆ ಮಿತ್ರರಿರುವುದಿಲ್ಲ. ಶೂರರಿಗೆ ಸಾವಿನ ಭಯವಿರುವುದಿಲ್ಲ. ಆತ್ಮತೃಪ್ತಿಯೇ ಸಂತೋಷದ ತಾಯಿ ಬೇರು…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೩೪) ಸಂಪೂರ್ಣ ಮನಸ್ಸಿನಿಂದ ಪರಿಪೂರ್ಣ ಪ್ರಯತ್ನ ಮಾಡಿ ಬೇಕಾಗಿರುವುದನ್ನು ಬೇಟೆಯಾಡಿ ಪಡೆದುಕೊಳ್ಳುವುದನ್ನು ನಾವು ಸಿಂಹದಿಂದ ಕಲಿಯಬೇಕು…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೩೫) ಕುರುಡನಿಗೆ ಕನ್ನಡಿ ಹೇಗೆ ನಿರುಪಯುಕ್ತ ವಸ್ತುವೋ ಅದೇ ರೀತಿ ಒಬ್ಬ ಮೂಢನಿಗೆ ಪುಸ್ತಕಗಳು ಅನುಪಯುಕ್ತವಾಗಿವೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೩೬) ಶಿಕ್ಷಣವೆನ್ನುವುದು ಉತ್ತಮ ಸ್ನೇಹಿತನಿದ್ದಂತೆ. ಕಲಿತ ವ್ಯಕ್ತಿ ಎಲ್ಲ ಕಡೆಗೂ ಎಲ್ಲರಿಂದಲೂ ಗೌರವಿಸಿಕೊಳ್ಳುತ್ತಾನೆ. ಸೌಂದರ್ಯ ಮತ್ತು ಯೌವ್ವನದ ಮೇಲೆ ಶಿಕ್ಷಣ ಮೇಲುಗೈ ಸಾಧಿಸುತ್ತದೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೩೭) ಮನುಷ್ಯ ಒಂಟಿಯಾಗಿ ಹುಟ್ಟಿ ಒಂಟಿಯಾಗಿ ಸಾಯುತ್ತಾನೆ. ಅವನು ಮಾಡುವ ಕರ್ಮಗಳ ಆಧಾರದ ಮೇಲೆ ಆತ ಸುಖದು:ಖಗಳನ್ನು ಅನುಭವಿಸಿ ಸ್ವರ್ಗಕ್ಕೋ ಇಲ್ಲ ನರಕಕ್ಕೋ ಹೋಗುತ್ತಾನೆ.

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೩೯) ಮನುಷ್ಯ ತಾನು ಮಾಡುವ ಕೆಲಸಗಳಿಂದ ಶ್ರೇಷ್ಟನಾಗುತ್ತಾನೆಯೇ ಹೊರತು ಹುಟ್ಟಿನಿಂದಲ್ಲ.

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೪೦) ಯಾವುದಾದರೂ ಕೆಲಸವನ್ನು ಪ್ರಾರಂಭಿಸುವ ಮೊದಲು “ನಾನು ಯಾಕೀ ಕೆಲಸ ಮಾಡುತ್ತಿರುವೆ? ಈ ಕೆಲಸದಲ್ಲಿ ನಾನು ಸಫಲನಾಗಬಲ್ಲನೆ? ಈ ಕೆಲಸದ ಲಾಭನಷ್ಟಗಳೇನು?” ಎಂಬ ಪ್ರಶ್ನೆಗಳನ್ನು ನಿಮಗೆ ನೀವು ಕೇಳಿಕೊಳ್ಳಿ. ಸಮಾಧಾನಕರ ಉತ್ತರಗಳು ಸಿಕ್ಕರೆ ಮಾತ್ರ ಮುಂದುವರೆಯಿರಿ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೪೧) ಸಮಸ್ಯೆ ಮತ್ತು ಭಯ ನಿನ್ನ ಸನಿಹ ಬಂದು ನಿನ್ನ ಮೇಲೆ ದಾಳಿ ಮಾಡಿ ನಿನ್ನನ್ನು ಸಾಯಿಸುವ ಮಂಚೆಯೇ ನೀನು ಅವುಗಳನ್ನು ಸಾಯಿಸು…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೪೨) ಒಬ್ಬ ಕೆಲಸಗಾರನನ್ನು ಅವನು ರಜೆಯಲ್ಲಿರುವಾಗ ಪರೀಕ್ಷಿಸಬೇಕು. ಸಂಬಂಧಿಕರನ್ನು ಮತ್ತು ಸ್ನೇಹಿತರನ್ನು ಸಂಕಷ್ಟ ಬಂದಾಗ ಪರೀಕ್ಷಿಸಬೇಕು. ಆದರೆ ಮಡದಿಯನ್ನು ಮನೆಯಲ್ಲಿ ಬಡತನ ಬಂದಾಗ ಪರೀಕ್ಷಿಸಬೇಕು…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೪೩) ಯಾವನು ತನ್ನ ಕುಟುಂಬಕ್ಕೆ ಅತಿಯಾಗಿ ಅಂಟಿಕೊಂಡಿರುತ್ತಾನೆಯೋ ಅವನು ಅತೀ ಹೆಚ್ಚಿನ ಭಯ ಮತ್ತು ದು:ಖವನ್ನು ಅನುಭವಿಸುತ್ತಾನೆ. ಈ ಅಟ್ಯಾಚಮೆಂಟಗಳೇ ದು:ಖದ ಮೂಲಕಾರಣಗಳು. ಸಂತೋಷವಾಗಿರಬೇಕೆಂದರೆ ಅಟ್ಯಾಚಮೆಂಟಗಳನ್ನು ಬಿಟ್ಟು ಬಿಡಬೇಕು.

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೪೪) ಮನಸ್ಸಲ್ಲಿರುವವರು ಮೈಲಿಗಟ್ಟಲೆ ದೂರದಲ್ಲಿದ್ದರೂ ಸನಿಹದಲ್ಲೇ ಇರುತ್ತಾರೆ. ಆದರೆ ಮನಸ್ಸಿನಲ್ಲಿ ಇರದವರು ಜೊತೆಗಿದ್ದರೂ ಬಹುದೂರದಲ್ಲಿರುತ್ತಾರೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೪೫) ಪ್ರತಿಯೊಂದು ಸ್ನೇಹ ಸಂಬಂಧದ ಹಿಂದೆ ಒಂದಲ್ಲ ಒಂದು ಸ್ವಾರ್ಥ ಅಡಗಿರುತ್ತದೆ. ಸ್ವಾರ್ಥವಿಲ್ಲದ ಸ್ನೇಹವಿಲ್ಲ. ಇದು ಸತ್ಯ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೪೬) ದೇವರು ಕಲ್ಲು, ಕಟ್ಟಿಗೆ, ಮಣ್ಣಿನ ಮೂರ್ತಿಗಳಲ್ಲಿ ಇಲ್ಲ. ಅವನು ನಮ್ಮ ಭಾವನೆಗಳಲ್ಲಿ, ಯೋಚನೆಗಳಲ್ಲಿ ಇದ್ದಾನೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೪೭) ನಿಮ್ಮ ದೇಹ ಆರೋಗ್ಯಕರವಾಗಿರುವ ತನಕ ಮಾತ್ರ ಸಾವು ನಿಮ್ಮಿಂದ ದೂರದಲ್ಲಿರುತ್ತದೆ. ನಿಮ್ಮ ಆತ್ಮವನ್ನು ಸಾವಿನಿಂದ ಸಾಧ್ಯವಾದಷ್ಟು ಸಂರಕ್ಷಿಸಿಕೊಳ್ಳಿ. ಕಳೆದುಕೊಂಡ ಸಂಪತ್ತನ್ನು, ಸ್ನೇಹಿತನನ್ನು, ಮಡದಿಯನ್ನು ಮರಳಿ ಪಡೆಯಬಹುದು. ಆದರೆ ನಮ್ಮ ಶರೀರ ನಶಿಸಿದರೆ ಮರಳಿ ಪಡೆಯಲು ಸಾಧ್ಯವಿಲ್ಲ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೪೮) ಮಕ್ಕಳನ್ನು ಐದು ವರ್ಷದ ತನಕ ಮುದ್ದಿಸಬೇಕು. ಹತ್ತು ವರ್ಷದ ತನಕ ಬೈದು ಬೆಳೆಸಬೇಕು. ಆದರೆ ಮಕ್ಕಳು 16 ವರ್ಷ ದಾಟಿದರೆ ಅವರನ್ನು ಸ್ನೇಹಿತರಂತೆ ಕಾಣಬೇಕು…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೪೯) ಹಿಂದೆ ಕಳೆದು ಹೋಗಿರುವುದಕ್ಕೆ ಕೊರಗಬಾರದು. ಮುಂದೆ ಬರುವುದಕ್ಕಾಗಿ ಬಾಯ್ತೆರೆದು ಕೂಡಬಾರದು. ಸದ್ಯಕ್ಕಿರುವುದನ್ನು ಸರಿಯಾಗಿ ಮಾಡಬೇಕು…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

೫೦) ಯಾವ ವ್ಯಕ್ತಿ ತನ್ನ ನಿಂದನೆಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳುತ್ತಾನೆಯೋ ಅವನು ಈಡೀ ಜಗದ ಮೇಲೆ ವಿಜಯ ಸಾಧಿಸುತ್ತಾನೆ…

ಚಾಣಕ್ಯ ನೀತಿಗಳು : Chanakya Niti in Kannada - ಚಾಣಕ್ಯ ತಂತ್ರಗಳು - ಚಾಣಕ್ಯ ಸೂತ್ರಗಳು - chanakya quotes in kannada

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books