45+ ಲೀಡರಶೀಪ ಕೋಟ್ಸ – Leadership Quotes in Kannada

You are currently viewing 45+ ಲೀಡರಶೀಪ ಕೋಟ್ಸ – Leadership Quotes in Kannada

1) ಗ್ರೇಟ ಲೀಡರ್ ಬರೀ ತಾನಷ್ಟೇ ಬೆಳೆಯುವುದಿಲ್ಲ. ಒಬ್ಬ ನಿಜವಾದ ಗ್ರೇಟ ಲೀಡರ್ ತನ್ನಂತೆ ಇರುವ ನೂರಾರು ಜನರನ್ನು ತನಗಿಂತಲೂ ಎತ್ತರದ ಸ್ಥಾನಕ್ಕೆ ಬೆಳೆಸುತ್ತಾನೆ…

Leadership Quotes in Kannada

2) ಗ್ರೇಟ ಲೀಡರ್ ತಾನು ಗ್ರೇಟ ಕೆಲಸಗಳನ್ನು ಮಾಡುವುದರ ಜೊತೆಗೆ ತನ್ನ ಹಿಂಬಾಲಕರಿಂದಲೂ ಹೆಚ್ಚಿನ ಗ್ರೇಟ ಕೆಲಸಗಳನ್ನು ಮಾಡಿಸುತ್ತಾನೆ…

Leadership Quotes in Kannada

3) ನಿಜವಾದ ಲೀಡರನಿಗೆ ಗುರಿಯೆಡೆಗೆ ಹೋಗುವ ದಾರಿ ಗೊತ್ತಿರುತ್ತದೆ, ಆತ ಬೇರೆಯವರಿಗೆ ಆ ದಾರಿಯನ್ನು ತೋರಿಸುತ್ತಾನೆ ಮತ್ತು ತಾನೇ ಖುದ್ದಾಗಿ ಎಲ್ಲರನ್ನು ಆ ದಾರಿಯಲ್ಲಿ ಕರೆದುಕೊಂಡು ಹೋಗುತ್ತಾನೆ, ಎಲ್ಲರನ್ನು ಗುರಿ ತಲುಪಿಸುತ್ತಾನೆ…

Leadership Quotes in Kannada

4) ಜನ ನೀವು ಹೇಳಿದ್ದನ್ನು ಮರೆತು ಬಿಡುತ್ತಾರೆ, ನೀವು ಮಾಡಿದ್ದನ್ನು ಸಹ ಮರೆತು ಬಿಡುತ್ತಾರೆ. ಆದರೆ ನೀವು ಅವರನ್ನು ಇನ್ವಾಲ್ವ ಮಾಡಿಕೊಂಡು ಅವರೊಂದಿಗೆ ಸೇರಿ ಮಾಡಿದ ಕೆಲಸವನ್ನು ಯಾವತ್ತೂ ಮರೆಯುವುದಿಲ್ಲ. ಇಂಥ ಮರೆಯಲಾಗದ ಕೆಲಸಗಳನ್ನು ಒಬ್ಬ ಗ್ರೇಟ ಲೀಡರ್ ಮಾಡುತ್ತಾನೆ…

Leadership Quotes in Kannada

5) ಬಾಸ್ ಟೀಮ ಮೆಂಬರಗಳಿಗೆ ಆರ್ಡರ್ ಮಾಡಿ‌ ಕೈಕಟ್ಟಿ ಕುಳಿತುಕೊಳ್ಳುತ್ತಾನೆ. ಆದರೆ ಲೀಡರ್ ಟೀಮ ಮೆಂಬರಗಳ ಜೊತೆಗೆ ಕೈಜೋಡಿಸಿ ಕೆಲಸ ಮಾಡಿ ಟಾರ್ಗೆಟ ರೀಚ್ ಆಗುತ್ತಾನೆ….

Leadership Quotes in Kannada

https://www.instagram.com/successpictures/

6) ಗುರು ಬರೀ ಗುರಿಯೆಡೆಗೆ ಹೋಗುವ ದಾರಿ ತೋರಿಸುತ್ತಾನೆ.‌ ಆದರೆ ಲೀಡರ್ ನಿಮ್ಮನ್ನು ನಿಮ್ಮ ಗುರಿಯೆಡೆಗೆ ಕರೆದುಕೊಂಡು ಹೋಗುತ್ತಾನೆ…

7) ನಿಮ್ಮನ್ನು ನೀವು ಹ್ಯಾಂಡಲ್ ಮಾಡಲು ನಿಮ್ಮ ಮೆದುಳನ್ನು ಬಳಸಿ. ಆದರೆ ಬೇರೆಯವರನ್ನು ಹ್ಯಾಂಡಲ್ ಮಾಡಲು ನಿಮ್ಮ ಮನಸ್ಸನ್ನು ಬಳಸಿ. ಇದು ಅರ್ಥವಾದರೆ ಮಾತ್ರ ನೀವು ಗ್ರೇಟ ಲೀಡರ್ ಆಗುತ್ತೀರಿ…‌

8) ನಿಮ್ಮಲ್ಲಿ ಮತ್ತು ನಿಮ್ಮ ಮಾತುಗಳಲ್ಲಿ ನೈಜತೆ ಹಾಗೂ ಪ್ರಾಮಾಣಿಕತೆ ಇದ್ದರೆ ಮಾತ್ರ ಜನ ನಿಮ್ಮನ್ನು ಹಿಂಬಾಲಿಸುತ್ತಾರೆ.

9) ಹುಲಿಗಳ ಸೈನ್ಯವನ್ನು ಕುರಿಯಂತಿರುವ ಲೀಡರ್ ಮುನ್ನಡೆಸಿದರೆ ಯಾರು ಹೆದರಲ್ಲ. ಆದರೆ ಕುರಿಗಳ ಸೈನ್ಯವನ್ನು ಹುಲಿಯಂತಿರುವ ಲೀಡರ್ ಮುನ್ನಡೆಸಿದರೆ ಎಲ್ಲರೂ ಹೆದರಿ ತಲೆ ಬಾಗುತ್ತಾರೆ. ಇದು ಗ್ರೇಟ್ ಲೀಡರನ ಗತ್ತು…‌

Leadership Quotes in Kannada

10) ನೀವೊಬ್ಬ ಗ್ರೇಟ ಲೀಡರ್ ಆಗಬೇಕೆಂದರೆ ಬಲಿಷ್ಟರಾಗಿ, ಆದರೆ ಒರಟರಾಗಬೇಡಿ, ದುಷ್ಟರಾಗಬೇಡಿ. ಕರುಣಾಮಯಿಗಳಾಗಿ, ಆದರೆ ದುರ್ಬಲರಾಗಬೇಡಿ. ಸ್ವಾಭಿಮಾನಿಗಳಾಗಿ, ಆದರೆ ಅಹಂಕಾರಿಗಳಾಗಬೇಡಿ.

Leadership Quotes in Kannada

11) ನಾಯಕನಾಗುವ ಆಸೆಯಿದ್ದರೆ ಇವತ್ತೇ ಹಿಂಬಾಲಕನಾಗುವುದನ್ನು ನಿಲ್ಲಿಸಿ. ಮುಂದೆ ಬಂದು ಜವಾಬ್ದಾರಿ ತೆಗೆದುಕೊಳ್ಳಿ. ಆಗ ಜನ ನಿಮ್ಮನ್ನು ತಾನಾಗಿಯೇ ಲೀಡರ್ ಮಾಡುತ್ತಾರೆ…

Leadership Quotes in Kannada

12) ಒಬ್ಬ ಗ್ರೇಟ ಲೀಡರ್ ಗೆದ್ದಾಗ ಗೆಲುವಿನ ಎಲ್ಲ ಕ್ರೆಡಿಟನ್ನು ತನ್ನ ಟೀಮಗೆ ಕೊಡುತ್ತಾನೆ, ಸೋತಾಗ ಎಲ್ಲ ನಿಂದನೆಗಳನ್ನು ತನ್ನ ಮೇಲೆ ಹಾಕಿಕೊಳ್ಳುತ್ತಾನೆ…

Leadership Quotes in Kannada

13) ಈ ಜಗತ್ತಿನಲ್ಲಿ ಯಾರು ನಿಮ್ಮನ್ನು ಲೀಡರ್ ಮಾಡಿ ಗಾದಿ ಮೇಲೆ ಕೂಡಿಸಲ್ಲ. ನಿಮಗೆ ಲೀಡರ್ ಆಗಬೇಕೆಂಬ ಆಸೆಯಿದ್ದರೆ ನೀವು ಜವಾಬ್ದಾರಿ ತೆಗೆದುಕೊಂಡು ಕಷ್ಟಗಳ ಹಾದಿಯಲ್ಲಿ ನಡೆದು ನಿಮಗೆ ನೀವೇ ಲೀಡರ್ ಆಗಬೇಕು…

Leadership Quotes in Kannada

14) ಇವತ್ತಿನ ರೀಡರ್ ನಾಳೆ ಒಂದಲ್ಲ ಒಂದಿನ ಲೀಡರ್ ಆಗುತ್ತಾನೆ‌. ಅದಕ್ಕಾಗಿ ಓದಿ ನಿಮ್ಮ ನಾಲೇಜ್ಡನ್ನು ಹೆಚ್ಚಿಸಿಕೊಳ್ಳಿ…

Leadership Quotes in Kannada

15) ಸಮಸ್ಯೆಗಳನ್ನು ಸಾಲ್ವ ಮಾಡುವುದೇ ಲೀಡರನ ಮೊದಲ ಹೆಜ್ಜೆಯಾಗಿದೆ…‌

Leadership Quotes in Kannada

16) ಆ್ಯಪಲ ಮರದಿಂದ ಕೆಳಗೆ ಬೀಳುವುದನ್ನು ಸಾವಿರಾರು ಜನ ನೋಡಿದ್ದರು. ಆದರೆ ನ್ಯೂಟನ ಮಾತ್ರ ಯಾಕೆ ಅಂತಾ ಪ್ರಶ್ನಿಸಿದನು. ಅದಕ್ಕೆ ಆತ ವಿಜ್ಞಾನಿಯಾದನು. ಅದೇ ರೀತಿ ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಲಕ್ಷಾಂತರ ಜನ ನೋಡುತ್ತಾ ನಿಲ್ಲುತ್ತಾರೆ. ಆದರೆ “ಯಾಕೆ?” ಅಂತಾ ಪ್ರಶ್ನಿಸಿದವನು ಮಾತ್ರ ಲೀಡರ್ ಆಗುತ್ತಾನೆ…

Leadership Quotes in Kannada

17) ಲೀಡರಶೀಪಯೆಂದರೆ ಒಂದು ದೊಡ್ಡ ವಿಜನನ್ನು ರಿಯಾಲಿಟಿಯಾಗಿ ಬದಲಿಸಲ್ಲ ಮಹಾಶಕ್ತಿ…

Leadership Quotes in Kannada

18) ಟೀಮ ಮೆಂಬರಗಳು ಲೀಡರ್ ಏನು ಹೇಳುತ್ತಾನೆ ಎಂಬುದಕ್ಕಿಂತ ಹೆಜ್ಜಾಗಿ ಲೀಡರ್ ಏನು ಮಾಡುತ್ತಾನೆ ಇಲ್ಲ ಮಾಡಿದ್ದಾನೆ ಎಂಬುದನ್ನು ನೋಡುತ್ತಾರೆ. ಅದಕ್ಕಾಗಿ ಮಾತಿಗಿಂತ ಕೃತಿ ಮುಖ್ಯ ಎಂಬುದನ್ನು ಒಪ್ಪಿಕೊಂಡು ನೀವು ಮೊದಲು ಕೆಲಸ ಮಾಡಲು ಸ್ಟಾರ್ಟ ಮಾಡಿ. ನಿಮ್ಮನ್ನು ನೋಡಿ ನಿಮ್ಮ ಟೀಮ ಮೆಂಬರಗಳು ತಾನಾಗಿಯೇ ಕೆಲಸ ಮಾಡಲು ಸ್ಟಾರ್ಟ ಮಾಡುತ್ತಾರೆ…‌

Leadership Quotes in Kannada

19) ಇನ್ನೋವೆಶನ (ಅನ್ವೇಷಣೆ) ಎಂಬುದು ಲೀಡರ್ ಹಾಗೂ ಫಾಲೋವರನ ನಡುವೆ ಒಂದು ದೊಡ್ಡ ಅಂತರವನ್ನು ಸೃಷ್ಟಿಸುತ್ತೆ…

Leadership Quotes in Kannada

20) ಎಲ್ಲದಕ್ಕೂ ಯೆಸ್ ಅನ್ನುವವನು ಯಾವತ್ತೂ ಸಕ್ಸೆಸಫುಲ ಲೀಡರ ಆಗಲ್ಲ. ಸರಿಯಾಗಿರುವುದಕ್ಕೆ ಮಾತ್ರ ಯೆಸ್ ಹೇಳಿ ಮಿಕ್ಕಿದ್ದಕ್ಕೆಲ್ಲ ಧೈರ್ಯವಾಗಿ ನೋ ಹೇಳುವ ಗಟ್ಸಯಿದ್ದವನು ಮಾತ್ರ ಸಕ್ಸೆಸಫುಲ ಲೀಡರ್ ಆಗುತ್ತಾನೆ…

Leadership Quotes in Kannada

21) ಅನಾವಶ್ಯಕವಾಗಿ ಗೊಳ್ಳು ಮಾತನಾಡುವ ಚಟವಿರುವ ಲೀಡರನನ್ನು ಯಾರು ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಶಿಸ್ತು ಹಾಗೂ ಸೀರಿಯಸನೆಸ ಇರುವ ಲೀಡರನಿಗೆ ಮಾತ್ರ ಎಲ್ಲರೂ ನಿಯತ್ತಾಗಿ ಕೆಲಸ ಮಾಡುತ್ತಾರೆ…

Leadership Quotes in Kannada

22) ಕೆಲಸ, ಗೌರವ ಹಾಗೂ ಜವಾಬ್ದಾರಿ ನಾಯಕತ್ವದ ಬುನಾದಿಯಾಗಿವೆ‌…

Leadership Quotes in Kannada

23) ಬಲಿಷ್ಟರನ್ನು ತೆಗೆದುಕೊಂಡು ಮುನ್ನಡೆಯುವವನು ಒಬ್ಬ ಲೀಡರ್ ಆಗಬಹುದು. ಆದರೆ ದುರ್ಬರನ್ನು ತೆಗೆದುಕೊಂಡು ಅವರನ್ನು ಬಲಿಷ್ಟರನ್ನಾಗಿಸಿ ಮುನ್ನಡೆಯುವವನು ಮಾತ್ರ ಒಬ್ಬ ಗ್ರೇಟ ಲೀಡರ್ ಆಗುತ್ತಾನೆ, ಅವನು ಮಾತ್ರ ಎಲ್ಲ ಕಠಿಣ ಪರಿಸ್ಥಿತಿಗಳಲ್ಲಿ ಗೆಲ್ಲುತ್ತಾನೆ….

Leadership Quotes in Kannada

24) ಒಬ್ಬ ಲೀಡರನ ಯೋಗ್ಯತೆ ಅವನ ಭಾಷಣಗಳಿಂದ ಗೊತ್ತಾಗಲ್ಲ, ಅವನು ಮಾಡುವ ಕೆಲಸಗಳಿಂದ ಗೊತ್ತಾಗುತ್ತೆ. ಗೊಳ್ಳು ಭಾಷಣಗಳು ಬಹಳ ದಿನ ಬಾಳುವುದಿಲ್ಲ….

Leadership Quotes in Kannada

25) ದೃಢ ಆತ್ಮವಿಶ್ವಾಸ ಹಾಗೂ ಪ್ರಬಲ ಇಚ್ಛಾಶಕ್ತಿ ಲೀಡರನಲ್ಲಿದ್ದರೆ ಗುರಿ ಮುಟ್ಟುವ ಶಕ್ತಿ ಟೀಮಗೆ ಅವನನ್ನು ನೋಡಿ ತಾನಾಗಿಯೇ ಬರುತ್ತದೆ….‌

Leadership Quotes in Kannada

26) ಪ್ರಾಬ್ಲಮಗಳಲ್ಲಿರುವ ಅಪಾರ್ಚುನಿಟಿ ವಿಜನರಿ ಲೀಡರಗಳ ಕಣ್ಣಿಗೆ ಮಾತ್ರ ಕಾಣಿಸುತ್ತದೆ. ಅದಕ್ಕೆ ಅವರು ಲೀಡರ ಆಗುತ್ತಾರೆ, ಮಿಕ್ಕವರು ಫಾಲೋವರಗಳಾಗುತ್ತಾರೆ.‌

Leadership Quotes in Kannada

27) ಇರುವ ಕೆಲಸಗಳನ್ನು ಸರಿಯಾಗಿ ಮಾಡುವವನು ಮ್ಯಾನೇಜರ್ ಆಗುತ್ತಾನೆ. ಕೆಟ್ಟಿರುವ ಕೆಲಸಗಳನ್ನು ಸರಿ ಮಾಡುವವನು ಲೀಡರ್ ಆಗುತ್ತಾನೆ…

Leadership Quotes in Kannada

28) ಲೀಡರಶೀಪ ಕಲಿಸುವ ಗುಣವಲ್ಲ. ಲೀಡರ್ ಆಗೋ ಅರ್ಹತೆ ಇದ್ದವರು ತಾನಾಗಿಯೇ ಅದನ್ನು ಕಲಿತುಕೊಳ್ಳುತ್ತಾರೆ…‌

Leadership Quotes in Kannada

29) ಪರಿಸ್ಥಿತಿಗಳಿಗನುಸಾರವಾಗಿ ತನ್ನ ನಿರ್ಧಾರಗಳನ್ನು ಬದಲಿಸುವವನು ಗ್ರೇಟ ಲೀಡರಲ್ಲ. ತನ್ನ ನಿರ್ಧಾರಗಳಿಗನುಸಾರವಾಗಿ ಮುಂದಿರುವ ಕಠಿಣ ಪರಿಸ್ಥಿತಿಗಳನ್ನು ಬದಲಿಸುವವನು ಮಾತ್ರ ಗ್ರೇಟ ಲೀಡರ್…

Leadership Quotes in Kannada

30) ಬರೀ ಪ್ರಾಬ್ಲಮ ಹುಡುಕಿದರೆ ನೀವು ಬ್ಲೇಮರ ಆಗುತ್ತೀರಾ. ಆದರೆ ಆ ಪ್ರಾಬ್ಲಮಗಳ ಜೊತೆಗೆ ಅವುಗಳ ಸೋಲುಷನ ಹುಡುಕಿದರೆ ನೀವು ಲೀಡರ್ ಆಗುತ್ತೀರಿ…

Leadership Quotes in Kannada

31) ನಿಮ್ಮ ನಿರ್ಧಾರಗಳಲ್ಲಿ ಕ್ಲಾರಿಟಿ ಇದ್ದರೆ ಫೋಕಸ ತಾನಾಗಿಯೇ ಬರುತ್ತದೆ. ಪ್ರತಿ ಹೆಜ್ಜೆಯಲ್ಲಿ ಕಾನ್ಫಿಡೆಂಟಾಗಿರಿ, ಕ್ಲಿಯರಾಗಿರಿ, ನೀವು ಬೇಗನೆ ಗುರಿ ಮುಟ್ಟುತ್ತಿರಿ…‌

Leadership Quotes in Kannada

32) ಕಠಿಣ ಗುರಿಗಳನ್ನು ತಲುಪಲು ತಾಳ್ಮೆ ಎಷ್ಟು ಮುಖ್ಯವೋ ಕನ್ಸಿಸ್ಟನ್ಸಿಯೂ ಅಷ್ಟೇ ಮುಖ್ಯವಾಗಿದೆ…‌

Leadership Quotes in Kannada

33) ಗುರಿಯ ಬಗ್ಗೆ ಕ್ಲಾರಿಟಿಯಿಲ್ಲದೆ ಮುಂದುವರೆದರೆ ನೀವು ಎಷ್ಟೇ ಗ್ರೇಟ ಲೀಡರಾಗಿದ್ದರೂ ನೀವು ಫೇಲಾಗುತ್ತೀರಿ, ಮುಖದ ಮೇಲೆ ಬೀಳುತ್ತಿರಿ‌‌‌…

Leadership Quotes in Kannada

34) ಈಡೀ ಜಗತ್ತು ಹೆದರಿ ಸುಮ್ಮನೆ ಕುಳಿತಿರುವಾಗ ಗ್ರೇಟ ಲೀಡರ್ ತನ್ನ ಶಸ್ತ್ರಾಸ್ತ್ರಗಳನ್ನು ಹರಿತ ಮಾಡುತ್ತಿರುತ್ತಾನೆ, ಮುಂದಿನ ಯುದ್ಧಕ್ಕೆ ತಯಾರಿ ನಡೆಸುತ್ತಿರುತ್ತಾನೆ…

Leadership Quotes in Kannada

35) ವಿಜನ ಹಾಗೂ ರಿಸ್ಪಾನ್ಸಿಬಿಲಿಟಿಯಿಂದ ಲೀಡರಶೀಪ ನಿರ್ಮಾಣವಾಗುತ್ತದೆ, ಬರೀ ಪವರ ಹಾಗೂ ಪೋಜಿಷನನಿಂದಲ್ಲ…

Leadership Quotes in Kannada

36) ತಾಕತ್ತಿದೆ ಎಂದು ಒಂಟಿಯಾಗಿ ಹೋರಾಡಲು ಹೋದವನು ಸೋತು ಒಂಟಿಯಾಗಿಯೇ ಸಾಯುತ್ತಾನೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಒಗ್ಗಟ್ಟಿನಿಂದ ಹೋರಾಡಿದವನು ಮಾತ್ರ ವಿಜಯಶಾಲಿಯಾಗುತ್ತಾನೆ…

Leadership Quotes in Kannada

37) ನಿಜವಾದ ಲೀಡರ್ ಬರೀ ಮಾತಾಡಲ್ಲ, ಮೊದಲು ತಾನು ಮಾಡಿ ತೋರಿಸುತ್ತಾನೆ‌. ಆನಂತರ ಅದನ್ನು ಬೇರೆಯವರಿಂದ ಮಾಡಿಸುತ್ತಾನೆ…

Leadership Quotes in Kannada

38) ಟೀಮ ಮೆಂಬರಗಳಲ್ಲಿನ ಮತ ಭೇದಗಳನ್ನು ಸಾಯಿಸಿ ಟೀಮನ್ನು ಒಗ್ಗಟಿನಿಂದ ಕೂಡಿಸಿ ಕೆಲಸ ಮಾಡಿಸಿ ಬೇಕಾದ ರಿಜಲ್ಟನ್ನು ಪಡೆದುಕೊಳ್ಳುವುದೇ ಲೀಡರನ ಕೆಲಸವಾಗಿದೆ…‌

Leadership Quotes in Kannada

39) ನೀವು ಏನು ಮಾತಾಡುತ್ತೀರಿ ಎಂಬುದಕ್ಕಿಂತ ನೀವೇನು ಮಾಡುತ್ತೀರಿ ಎಂಬುದು ನಿಮ್ಮ ಫಾಲೋವರಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ…

Leadership Quotes in Kannada

40) ಪ್ರಾಬ್ಲಮಗಳನ್ನು ಅವೈಡ ಮಾಡಿ ಓಡಿ ಹೋಗುವವನು ಹೇಡಿಯಾಗುತ್ತಾನೆ. ಬಂದ ಪ್ರಾಬ್ಲಮಗಳನ್ನು ಧೈರ್ಯವಾಗಿ ಫೇಸ್ ಮಾಡಲು ಮುಂದಾದವನು ಲೀಡರ್ ಆಗುತ್ತಾನೆ…

Leadership Quotes in Kannada

41) ತಪ್ಪಾದ ದಾರಿಯಲ್ಲಿ ಗುಂಪಿನಲ್ಲಿ ನಡೆಯಬೇಡಿ.‌ ಒಂಟಿಯಾಗಿ ಸರಿಯಾದ ದಾರಿಯಲ್ಲಿ ನಡೆಯುವ ಧೈರ್ಯ ಮಾಡಿ, ನೀವು ಬೇಡವೆಂದರೂ ಜನ ಗುಂಪು ಗುಂಪಾಗಿ ನಿಮ್ಮನ್ನು ಹಿಂಬಾಲಿಸುತ್ತಾರೆ…

Leadership Quotes in Kannada

42) ಟೈಮ ಲಿಮಿಟ ಹಾಕಿಕೊಂಡು ಕೆಲಸ ಮಾಡಿದರೆ ಲಿಮಿಟೆಡ್ ರಿಜಲ್ಟಗಳು ಸಿಗುತ್ತವೆ. ಟೈಮ ಲಿಮಿಟ ಬಿಟ್ಟು ಕೆಲಸ ಮಾಡಿದರೆ ಅನಲಿಮಿಟೆಡ ರಿಜಲ್ಟಗಳು ಬರುತ್ತವೆ…

Leadership Quotes in Kannada

43) ಲೀಡರಶೀಪ ಆ್ಯಕ್ಷನ ಆಗಿದೆ, ಪೋಜಿಷನ ಅಲ್ಲ…

Leadership Quotes in Kannada

44) ನಿಮ್ಮ ಮಾತುಗಳು ಬೇರೆಯವರಿಗೆ ಸ್ಪೂರ್ತಿ ಕೊಡುತ್ತಿದ್ದರೆ, ಧೈರ್ಯ ಕೊಡುತ್ತಿದ್ದರೆ, ಏನಾದರೂ ಒಂದನ್ನು ಕಲಿಸುತ್ತಿದ್ದರೆ ನೀವು ಲೀಡರ್ ಆಗಿದ್ದೀರಿ ಎಂದರ್ಥ…

Leadership Quotes in Kannada

45) ದಾರಿಯಿಲ್ಲದಿದ್ದರೆ ನಿಮ್ಮದೇ ಆದ ದಾರಿ ನಿರ್ಮಿಸಿಕೊಂಡು ಮುನ್ನುಗ್ಗಿ. ಮುಂದೆ ಒಂದಲ್ಲ ಒಂದಿನ ಜನ ನಿಮ್ಮ ದಾರಿಯಲ್ಲಿ ಬಂದೇ ಬರುತ್ತದೆ…

Leadership Quotes in Kannada

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books