“ಎಲ್ಲಾ ಮುಗೀತು…” ಅನ್ನೋ ಸ್ಥಿತಿ ಬಂದಾಗ ಈ ರೀತಿ ಮಾಡಿ : How to Handle Bad Situations in Kannada

You are currently viewing “ಎಲ್ಲಾ ಮುಗೀತು…” ಅನ್ನೋ ಸ್ಥಿತಿ ಬಂದಾಗ ಈ ರೀತಿ ಮಾಡಿ : How to Handle Bad Situations in Kannada

ಹಾಯ್ ಗೆಳೆಯರೇ, ಪ್ರತಿಯೊಬ್ಬರ ಲೈಫಲ್ಲಿ ಒಂದಲ್ಲ ಒಂದು ಸಲ “ಎಲ್ಲಾ ಮುಗೀತು, The End…” ಅನ್ನೋ ಸ್ಥಿತಿ ಬಂದೇ ಬರುತ್ತೆ, ಈ ಲೈಫ ಎಲ್ಲರಿಗೂ ಅಟಲಿಸ್ಟ ಒಂದು ಸಲನಾದ್ರೂ ಹೀರೋ ಆಗುವ ಗೋಲ್ಡನ್ ಅಪಾರ್ಚುನಿಟಿಯನ್ನು ಕೊಟ್ಟೆ ಕೊಡುತ್ತದೆ. ಬಟ್ ಆ ಗೋಲ್ಡನ್ ಅಪಾರ್ಚುನಿಟಿ ಕೆಟ್ಟ ಪರಿಸ್ಥಿತಿಯ ರೂಪದಲ್ಲಿ ಬರುತ್ತದೆ. ಎಲ್ಲಾ ಮುಗೀತು, The End ರೂಪದಲ್ಲಿ ಬರುತ್ತದೆ. ಕೆಟ್ಟ ಪರಿಸ್ಥಿತಿಯಲ್ಲಿ ನೀವು ಹೇಗೆ ಬಿಹೇವ ಮಾಡ್ತಿರಿ ಎಂಬುದರ ಮೇಲೆ ನಿಮ್ಮ ಫ್ಯುಚರ್ ಬ್ರೈಟ ಆಗುತ್ತೆ ಇಲ್ಲಾ ಬರ್ಬಾದ ಆಗುತ್ತೆ. ಪೋಜಿಟಿವ ಆ್ಯಟಿಟೂಡದಿಂದ ಬಂದಿರುವ ಬ್ಯಾಡ್ ಸಿಚುವೇಷನನ್ನು ಫೇಸ್ ಮಾಡಿದರೆ ನೀವು ಹೀರೋ ಆಗುತ್ತೀರಿ. ಅದೇ ಟೈಮಲ್ಲಿ ಹೆದರಿ ಓಡೋದರೆ ಜೀವನಪೂರ್ತಿ ಆರ್ಡಿನರಿಯಾಗಿ ಹೆಸರಿಲ್ಲದಂತೆ ಬದುಕಿ ಸುಳಿವಿಲ್ಲದಂತೆ ಸಾಯುತ್ತೀರಿ. ಸೋ ಬ್ಯಾಡ್ ಸಿಚುವೇಷನ ಬಂದಾಗ ನೀವು ಎಷ್ಟು ಬೋಲ್ಡ ಆಗಿ ಬಿಹೇವ ಮಾಡ್ತೀರಿ ಎಂಬುದು ಬಹಳಷ್ಟು ಇಂಪಾರಟಂಟಾಗುತ್ತದೆ.

ನಿಮ್ಮ ಲೈಫಲ್ಲಿ ಬಂದ ಬ್ಯಾಡ್ ಸಿಚುವೇಷನ ಒಂದು ಆ್ಯಕ್ಷನ ಆಗಿರುತ್ತದೆ. ಈ ಆ್ಯಕ್ಷನಗೆ ನೀವು ಯಾವ ರೀತಿ ರಿಯಾಕ್ಷನ ಕೊಡುತ್ತೀರಿ ಎಂಬುದರ ಮೇಲೆ ರಿಜಲ್ಟ ಡಿಪೆಂಡಾಗುತ್ತದೆ. ನಿಮ್ಮ ರಿಯಾಕ್ಷನ್ ಮ್ಯಾಚುರ್ ಆಗಿದ್ದರೆ ನಿಮಗೆ ಗುಡ್ ರಿಜಲ್ಟಗಳು ಸಿಗುತ್ತವೆ. ಅದೇ ನಿಮ್ಮ ರಿಯಾಕ್ಷನ ಇಮಮ್ಯಾಚುರ್ ಆಗಿದ್ದರೆ ಬ್ಯಾಡ್ ರಿಜಲ್ಟಗಳು ಸಿಗುತ್ತವೆ.

ಉದಾಹರಣೆಗೆ ;

1) ಶ್ರೀರಾಮನಿಗೆ 16ನೇ ವಯಸ್ಸಿಗೆ 14 ವರ್ಷ ವನವಾಸಕ್ಕೆ ಹೋಗಬೇಕಾದ ಪರಿಸ್ಥಿತಿ ‌ಎದುರಾಯಿತು. ಆದರೆ ಶ್ರೀರಾಮ ಒಂದು ಪ್ರಶ್ನೆಯನ್ನು ಕೇಳದೆ, ಅತ್ತು ಕಣ್ಣಿರಾಕಿ ಎಮೋಷನಲ ಡ್ರಾಮಾ ಮಾಡದೇ, ಯಾರನ್ನು ಬ್ಲೇಮ ಮಾಡದೇ ಆತ ಬಂದಿರೋ ಬ್ಯಾಡ್ ‌ಸಿಚುವೇಷನನ್ನು ಫೇಸ ಮಾಡಿ ಗೆದ್ದನು‌. ಅದಕ್ಕೆ ನಾವಿವತ್ತು ಶ್ರೀರಾಮನನ್ನು ದೇವರೆಂದು ಪೂಜಿಸುತ್ತೇವೆ.

ಒಂದ್ಸಲ ಫೇಮಸ ಸೈಂಟಿಸ್ಟ ಥಾಮಸ್ ಅಲ್ವಾ ಎಡಿಸನರ ರಿಸರ್ಚ ಲ್ಯಾಬಿಗೆ ಬೆಂಕಿ ಬಿದ್ದು ಬಿಲ್ಡಿಂಗ್ ಪೂರ್ತಿ ಸುಟ್ಟು ಹೋಯಿತು. ಅದರ ಜೊತೆಗೆ ಅವರ 20 ವರ್ಷದ ರಿಸರ್ಚ ಪೇಪರಗಳು ಸಹ ಸುಟ್ಟೋದವು. ಆದರೆ ಎಡಿಸನ ಎದೆ ಬಡಿದುಕೊಂಡು ಅಳುವ ಬದಲು “ಬಿಲ್ಡಿಂಗ್ ಜೊತೆಗೆ ನನ್ನ 20 ವರ್ಷದ ಮಿಸ್ಟೇಕಗಳು ಸಹ ಸುಟ್ಟೋದವು…” ಅಂತೇಳಿ ಮತ್ತೆ ನಾಳೆಯಿಂದ ಹೊಸ ರಿಸರ್ಚಗಳನ್ನು ಸ್ಟಾರ್ಟ ಮಾಡಿದರು. ಈ ರೀತಿ ನಿಮ್ಮ ರಿಯಾಕ್ಷನ್ ಮ್ಯಾಚುರಾಗಿದ್ದರೆ ಗುಡ್ ರಿಜಲ್ಟಗಳು ಸಿಗುತ್ತವೆ.

2) ಇತ್ತೀಚೆಗೆ ಲಾಕಡೌನನಲ್ಲಿ ಬಹಳಷ್ಟು ಬಿಜನೆಸಗಳು ಲಾಸನಿಂದ ಶಟಡೌನಾದವು. ಬಹಳಷ್ಟು ಜನ ಯಂಗ ಬಿಜನೆಸಮ್ಯಾನಗಳು ಬಿಜನೆಸ ಕ್ಲೋಜ ಮಾಡಿ ಗವರ್ನಮೆಂಟ ಜಾಬನ ತಯಾರಿಯಲ್ಲಿ ತೊಡಗಿದರು. ಬಿಜನೆಸ್ಸಲ್ಲಿ ಒಂದು ಸಣ್ಣ ಲಾಸ್ ಬಂತು ಅಂತಾ ಫೀಲ್ಡ ಬಿಟ್ಟು ಓಡೋದರು. ಕ್ವೀಟ ಮಾಡಿದರು. ಇಲ್ಲೇ ಇವರು ಇಮಮ್ಯಾಚುರ್ ಆಗಿ ಬಿಹೇವ ಮಾಡಿ ಗೋಲ್ಡನ್ ಅಪಾರ್ಚುನಿಟಿಯನ್ನು ಪರ್ಮನೆಂಟಲಿ ಕಳೆದುಕೊಂಡರು. ಬಿಜನೆಸ ಮಾಡಿ ಸಾವಿರಾರು ಜನರಿಗೆ ಕೆಲಸ ಕೊಟ್ಟು ರಾಜನಾಗಿ ಮೆರೆಯುವ ಚಾನ್ಸನ್ನು ಬಿಟ್ಟು ಗವರ್ನಮೆಂಟ ಗುಲಾಮನಾಗಲು ಹೋದರು. ಇದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ. ಸೋ ಬ್ಯಾಡ್ ಸಿಚುವೇಷನ ಬಂದಾಗ ನೀವು ಇಮಮ್ಯಾಚುರಾಗಿ ಬಿಹೇವ ಮಾಡಿದರೆ, ಹೇಡಿಯಂತೆ ಬಿಹೇವ ಮಾಡಿದರೆ ನೀವು ಹೀರೋ ಆಗುವ ಚಾನ್ಸನ್ನು ಕಳೆದುಕೊಂಡು ಬಿಡುತ್ತೀರಿ, ಜೀವನಪೂರ್ತಿ ಆರ್ಡಿನರಿಯಾಗಿ ಬದುಕುತ್ತೀರಿ.

ಮೈ ಡಿಯರ್ ಫ್ರೆಂಡ್ಸ, ಆ್ಯಕ್ಷನ ನಿಮ್ಮ ಕೈಯಲ್ಲಿಲ್ಲ. ಅಂದರೆ ನಿಮ್ಮ ಲೈಫಲ್ಲಿ ಬರುವ ಬ್ಯಾಡ ಸಿಚುವೇಷನ ಮೇಲೆ ನಿಮಗೆ ಯಾವುದೇ ಕಂಟ್ರೋಲ್ ಇರಲ್ಲ. ನೀವು ಏನೇ ತಪ್ಪು ಮಾಡದಿದ್ದರೂ ಸಹ ಬ್ಯಾಡ ಸಿಚುವೇಷನಗಳು ಬರುತ್ತವೆ. ಏಕೆಂದರೆ ಈ ಲೈಫ ಎಲ್ಲರಿಗೂ ಒಂದ್ಸಲ ಹೀರೋ ಆಗುವ ಅವಕಾಶವನ್ನು ಕೊಟ್ಟೆ ಕೊಡುತ್ತದೆ. ಆ್ಯಕ್ಷನ ನಿಮ್ಮ ಕೈಯಲ್ಲಿಲ್ಲ. ಆದರೆ ರಿಯಾಕ್ಷನ್ ಫುಲ್ಲಿ ನಿಮ್ಮ ಕೈಯಲ್ಲಿದೆ. ನೀವು ಯಾವ ರೀತಿ ರಿಯಾಕ್ಷನ್ ಕೊಡುತ್ತೀರಿ ಎಂಬುದರ ಮೇಲೆ ರಿಜಲ್ಟ ಡಿಪೆಂಡಾಗುತ್ತದೆ. ಬ್ಯಾಡ್ ಸಿಚುವೇಷನಗಳು ಬಂದ್ರೆ ಬರಲಿ, ಬಟ್ ಅವು ಬಂದಾಗ ನೀವು ಮ್ಯಾಚುರಾಗಿ ಬಿಹೇವ ಮಾಡಿದರೆ ಸಾಕು, ಅವುಗಳನ್ನು ಬೋಲ್ಡ ಆಗಿ ಫೇಸ್ ಮಾಡಿದರೆ ಸಾಕು, ಆ ಬ್ಯಾಡ್ ಸಿಚುವೇಷನ ಬೆಸ್ಟಾಗುತ್ತದೆ, ನೀವು ಹೀರೋ ಆಗುತ್ತೀರಿ. ಅದನ್ನು ಬಿಟ್ಟು ನೀವು ಗಳೋ ಅಂತಾ ಅಳುತ್ತಾ ರಣ ಹೇಡಿಗಳಂತೆ ಓಡೋದರೆ ಬ್ಯಾಡ್ ಸಿಚುವೇಷನ ವರ್ಸ್ಟಾಗುತ್ತದೆ. ನೀವು ವೇಸ್ಟಾಗುತ್ತೀರಿ. ಸೋ ರಿಯಾಕ್ಷನ್ ಫುಲ್ಲಿ ನಿಮ್ಮ ಕೈಯಲ್ಲಿದೆ, ನೀವು ಹೀರೋ ಆಗ್ತೀರೋ ಅಥವಾ ವೇಸ್ಟಾಗುತ್ತಿರೋ ಎಂಬುದು ನಿಮ್ಮ ಪರ್ಸನಲ್ ಚಾಯ್ಸ.

ಪ್ರತಿ ಬ್ಯಾಡ್ ಸಿಚುವೇಷನನಲ್ಲಿ ಎರಡು ಪಾರ್ಟಗಳಿರುತ್ತವೆ. ಒಂದು ಪೋಜಿಟಿವ ಪಾರ್ಟ, ಇನ್ನೊಂದು ನೆಗೆಟಿವ್ ಪಾರ್ಟ. ನೀವು ಪೋಜಿಟಿವ ಪಾರ್ಟನ್ನು ಕ್ಯಾಚ ಮಾಡಿಕೊಂಡು ಮ್ಯಾಚುರಾಗಿ ವರ್ತಿಸಿ ಮ್ಯಾಚುರ್ಡ ರಿಯಾಕ್ಷನ ಕೊಟ್ಟರೆ ರಿಜಲ್ಟ ನಿಮಗೆ ಲಾಭವಾಗುವ ರೀತಿಯಲ್ಲೇ ಬರುತ್ತದೆ. Friends, No problem is bigger than you. Pains and problems are temporary. So be bold. ನಿಮ್ಮೊಂದಿಗೆ ನೀವಿದ್ದರೆ ಸಾಕು ಎಲ್ಲ ಸಾಧ್ಯವಿದೆ, ಎಲ್ಲ ಸ್ಟೆಪ ಬೈ ಸ್ಟೆಪ ಸಾಲ್ವಾಗುತ್ತದೆ. ನೀವೇ ಯುದ್ಧಭೂಮಿ ಬಿಟ್ಟು ಓಡೋದರೆ ಸಿಚುವೇಷನ ವರ್ಸ್ಟಾಗುತ್ತದೆ‌. ನಿಮ್ಮ ಲೈಫಲ್ಲಿ “ಎಲ್ಲಾ ಮುಗೀತು…” ಅನ್ನೋ ಟೈಮ ಬಂದಾಗ ಪೋಜಿಟಿವ ಪಾರ್ಟ ಕಡೆಗೆ ಫೋಕಸ ಮಾಡಿ, ನಿಮ್ಮತ್ರ ಇರುವ ಅಸೆಟ್ಸಗಳನ್ನು ಲಿಸ್ಟ ಮಾಡಿ, ನಿಮ್ಮತ್ರ ಇರುವುದೆಲ್ಲವನ್ನು ಸರಿಯಾಗಿ ಬಳಸಿಕೊಂಡು ಬಂದಿರುವ ಬ್ಯಾಡ್ ಸಿಚುವೇಷನನ್ನು ಬೆಸ್ಟಾಗಿ ಕನವರ್ಟ ಮಾಡಿಕೊಂಡು ಹೀರೋ ಆಗಿ‌. ಹ್ಯಾಪಿಯಾಗಿ ಬದುಕಿ. Be Mature, End is not end, it’s a New Start. All the Best and Thanks You…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books