ನೀವು ಓದಲೇಬೇಕಾದ 5 ಬುಕ್ಸಗಳು – 5 Best Books You Should Read in Kannada – Best Kannada Books

You are currently viewing ನೀವು ಓದಲೇಬೇಕಾದ 5 ಬುಕ್ಸಗಳು – 5 Best Books You Should Read in Kannada – Best Kannada Books

ಹಾಯ್ ಗೆಳೆಯರೇ, ಯಾರು ಬುಕ್ಸಗಳ‌ ಜೊತೆಗೆ ಫ್ರೆಂಡಶೀಪ ಮಾಡ್ತಾರೋ ಅವರು ಒಂದಲ್ಲ ಒಂದಿನ ಬುಕ್ಸಗಳಲ್ಲಿ ಬರುತ್ತಾರೆ. ಒಂದು ಅವರು ಬುಕ್ ಬರೆಯುತ್ತಾರೆ ಇಲ್ಲವೇ ಅವರ ಮೇಲೆ ಬೇರೆಯವರು ಬುಕ್ ಬರೆಯುತ್ತಾರೆ. ಸೋ ಬುಕ್ಸಗಳೊಂದಿಗೆ ದೋಸ್ತಿ ಮಾಡಿ ನೀವು ಬಯಸಿದ್ದೆಲ್ಲವು ನಿಮಗೆ ಸಿಗುತ್ತದೆ.‌ ಬುಕ್ಸಗಳಿಂದ ನಿಮಗೆ ನಾಲೇಡ್ಜ ಸಿಗುತ್ತದೆ, ನಾಲೇಜ್ಡ‌ ಸಿಕ್ಕ ನಂತರ ನಿಮಗೆ ಎಲ್ಲವೂ ಸಿಕ್ಕಂತೆ. ನನ್ನಲ್ಲಿ ನಿಮಗೆ ಏನಾದರೂ ಸ್ವಲ್ಪ ನಾಲೇಜ್ಡ ಕಾಣಿಸಿದರೆ, ಕರೇಜ & ಕಾನ್ಫಿಡೆನ್ಸ ಕಾಣಿಸಿದರೆ, ಒಳ್ಳೆ ಗುಣ ಕಾಣಿಸಿದರೆ, ನಾನು ನನ್ನ‌ ಲೈಫಲ್ಲಿ ಹಣ ಗಳಿಸಿದ್ದರೆ‌ ಅದರ ಸಂಪೂರ್ಣ ‌ಕ್ರೆಡಿಟ್ ಈ 5 ಬುಕಗಳಿಗೆ ಸಲ್ಲುತ್ತದೆ. ಈ 5 ಬುಕ್ಸಗಳು ನನ್ನ ಮೊಸ್ಟ ಫೇವರೆಟ ಆಗಿವೆ. ನಾನು ಇವುಗಳನ್ನು ಓದಲು ಸ್ಟ್ರಾಂಗಲಿ ರೆಕಮೇಂಡ ಮಾಡುವೆ. ಎಲ್ಲ ಬುಕಗಳ ಲಿಂಕನ್ನು ಡಿಸ್ಕ್ರಿಪ್ಷನನಲ್ಲಿ ಕೊಟ್ಟಿರುವೆ.‌ ಓಕೆ ನನ್ನ ಪ್ರಕಾರ ನೀವು ಓದಲೇಬೇಕಾದ 5 ಬೆಸ್ಟ ಬುಕ್ಸಗಳು ‌ಇಂತಿವೆ ;

ನೀವು ಓದಲೇಬೇಕಾದ 5 ಬುಕ್ಸಗಳು – 5 Books You Should Read in Kannada – Best Kannada Books

1) ಸಂಪೂರ್ಣ ರಾಮಾಯಣ : Sampurna Ramayana

ರಾಮಾಯಣ ಒಂದು ಬೆಸ್ಟ ಲೀಡರಶೀಪ ಡೆವಲಪ್ಮೆಂಟ್ ‌& ರಿಲೆಷನಶೀಪ ಮ್ಯಾನೇಜ್ಮೆಂಟ್ ಬುಕ್ಕಾಗಿದೆ. ಇದನ್ನು ಬರೀ ಧಾರ್ಮಿಕ ಗ್ರಂಥವಾಗಿ ಓದಬೇಡಿ, ಕಲಿಯುವ ದೃಷ್ಟಿಯಿಂದ ಓದಿ. ಇದನ್ನು ಬರೀ ಪೂಜೆ ಮಾಡಬೇಡಿ, ಫಾಲೋ ಮಾಡಿ. ರಾಮಾಯಣದಲ್ಲಿ ನಮಗೆ ಕಲಿಯಲು ಬಹಳಷ್ಟು ವಿಷಯಗಳಿವೆ.

ಉದಾಹರಣೆಗೆ ; ನೀವು ದು:ಖದಲ್ಲಿರುವಾಗ ಇಲ್ಲವೇ ಸಂತೋಷವಾಗಿರುವಾಗ ಯಾರಿಗೂ ಪ್ರಾಮೀಸ ಮಾಡಬಾರದು ಎಂಬುದು ದಶರಥನಿಂದ ಗೊತ್ತಾಗುತ್ತದೆ. ದುಷ್ಟರ ಸಲಹೆ ತೆಗೆದುಕೊಳ್ಳಬಾರದು, ಜನ ಏನು ಹೇಳುತ್ತಾರೆ ಎಂಬುದನ್ನು ಕಿವಿಗೆ ಹಾಕಿಕೊಳ್ಳಬಾರದು, ಊಟದಲ್ಲಿ ಹಾಕಿದ ವಿಷಕ್ಕೆ ಔಷಧಿಯಿದೆ, ಆದರೆ ಕಿವಿಯಲ್ಲಿ ಹಾಕಿದ ವಿಷಕ್ಕೆ ಔಷಧಿಯಿಲ್ಲ ಎಂಬುದು ನಮಗೆ ಕೈಕೆಯಿಂದ ಗೊತ್ತಾಗುತ್ತದೆ. ನಿಮ್ಮ ಡ್ಯುಟಿಯನ್ನು ನೀವು ಸರಿಯಾಗಿ ಮಾಡಬೇಕು, ನಿಮ್ಮ ಪತ್ನಿಗೆ ನೀವು ನಿಷ್ಟರಾಗಿರಬೇಕು, ನಿಮ್ಮ ಎನಿಮಿಯನ್ನು ಗೌರವಿಸಬೇಕು, ಲೀಡರಶೀಪನ್ನು ತೆಗೆದುಕೊಂಡು ಮುನ್ನುಗ್ಗಬೇಕು, ಯಾವಾಗಲೂ ಒಳ್ಳೇಯವರೊಂದಿಗೆ ದೋಸ್ತಿ ಮಾಡಬೇಕು ಎಂಬುದು ರಾಮನಿಂದ ಗೊತ್ತಾಗುತ್ತದೆ. ಒಗ್ಗಟ್ಟು, ಸೋದರರ ಸಪೋರ್ಟ್, ಮಿತ್ರರ ಸಪೋರ್ಟ್ ನಿಮಗಿದ್ದರೆ ನೀವು ನಿಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಚಾಲೆಂಜಸಗಳು ಬಂದರೂ ಸಹ ಅವುಗಳನ್ನು ‌ಈಜಿಯಾಗಿ ಫೇಸ್ ಮಾಡುತ್ತೀರಿ ಎಂಬುದು ರಾಮ ಲಕ್ಷಣರಿಂದ ಗೊತ್ತಾಗುತ್ತದೆ. ಸತ್ಯ ಯಾವಾಗಲೂ ಗೆಲ್ಲುತ್ತದೆ, ಎಷ್ಟೇ ಲೇಟಾದರೂ ಜಸ್ಟಿಸ ಸಿಕ್ಕೆ ಸಿಗುತ್ತದೆ, ಪ್ರಭುವಿನ ಸೇವೆಯೇ ಅಂತಿಮ ಸೇವೆಯಾಗಿದೆ ಎಂಬುದು ಹನುಮಂತನಿಂದ ಗೊತ್ತಾಗುತ್ತದೆ. ನಿಮ್ಮ ಅಳಿಲು ಸೇವೆಯೂ ಸಹ ಕೌಂಟಾಗುತ್ತದೆ. ಸೋ ಸಣ್ಣ ಸಹಾಯ ಮಾಡಲು ಸಾಧ್ಯವಾದರೆ ನಿಸ್ವಾರ್ಥದಿಂದ ಮಾಡಬೇಕು ಎಂಬುದನ್ನು ರಾಮ ಸೇತುವೆ ನಿರ್ಮಾಣದಲ್ಲಿ ಸೇವೆ ಮಾಡಿದ ಅಳಿಲನ್ನು ನೋಡಿ ನಾವು ಕಲಿಯಬೇಕು. ನೀವು ಎಷ್ಟೇ ಪರಮ ಜ್ಞಾನಿಯಾಗಿದ್ದರೂ ಸಹ ಕಾಮ, ಈಗೋ, ಆ್ಯರೋಗನ್ಸ ನಿಮ್ಮಲ್ಲಿದ್ದರೆ ನಿಮ್ಮ ದುರಂತ ಸಾವು ನಿಶ್ಚಿತ ಎಂಬುದು ರಾವಣನಿಂದ ಗೊತ್ತಾಗುತ್ತದೆ. ನಿಜವಾದ ಸರಳ ಶ್ರೇಷ್ಠ ನಡತೆ, ವಿಧೆಯತೆ, ಪತಿ ಪ್ರೇಮ, ಸಹನೆ, ಸದ್ಗುಣ, ಸಂಸ್ಕಾರ ಎಂದರೆ ಏನೆಂಬುದು ಸೀತಾ ಮಾತೆಯಿಂದ ಗೊತ್ತಾಗುತ್ತದೆ. ಈ ರೀತಿ ರಾಮಾಯಣದಿಂದ ಬಹಳಷ್ಟು ಜೀವನ ಪಾಠಗಳು ಕಲಿಯಲು ಸಿಗುತ್ತವೆ. ನೀವು ಏನಾದರೂ ರಾಮಾಯಣವನ್ನು ಒಂದ್ಸಲ ಓದಲೇಬೇಕು. ಓದಿದರೆ ಖಂಡಿತ ನಿಮ್ಮ ಎಲ್ಲ ರಿಲೇಶನಶೀಪಗಳು ಸೂಪರಾಗಿರುತ್ತವೆ ಮತ್ತು ನಿಮ್ಮಲ್ಲಿ ಲೀಡರಶೀಪ ಗುಣ ಡೆವಲಪ ಆಗುತ್ತದೆ.

Book Link – Sampoorna Ramayana Kannada Book Link Click Here

2) ಸಂಪೂರ್ಣ ಮಹಾಭಾರತ : Sampurna Mahabharata

ನನ್ನ ಪ್ರಕಾರ ಮಹಾಭಾರತ ಬೆಸ್ಟ ಪ್ರಾಬ್ಲಮ ಮ್ಯಾನೇಜ್ಮೆಂಟ್ ಬುಕ್ಕಾಗಿದೆ. ನೀವು ಮಹಾಭಾರತವನ್ನು ಓದಿದರೆ ನಿಮಗೆ ಪ್ರಾಬ್ಲಮ್ಸಗಳನ್ನು ಹ್ಯಾಂಡಲ ಮಾಡುವ ಗ್ರೇಟ ಸ್ಕೀಲ್ ಖಂಡಿತ ಡೆವಲಪ ಆಗುತ್ತದೆ. ಮಹಾಭಾರತದಿಂದಲೂ ನಮಗೆ ಬಹಳಷ್ಟು ಲೈಫ ಲೆಸನಗಳು ಸಿಗುತ್ತವೆ.

ಉದಾಹರಣೆಗೆ ; ಸರಿಯಾದ ಸಂಗತಿಗಳ ಪರ, ಸತ್ಯದ ಪರ, ನ್ಯಾಯದ ಪರ ನಿಂತರೆ ನಾವು ಸೇಫಾಗಿರುತ್ತೇವೆ, ಇಲ್ಲವಾದರೆ ಸರ್ವನಾಶವಾಗುತ್ತೇವೆ‌. ಹಾಫ್ ನಾಲೇಡ್ಜ‌ ಡೆಂಜರಸ್ಸಾಗಿದೆ ಎಂಬುದು ಅಭಿಮನ್ಯುವಿನಿಂದ ಅರ್ಥವಾಗುತ್ತದೆ. ದುರಹಂಕಾರ ಹಾಗೂ ದುಷ್ಟತನ ನಿಮ್ಮನ್ನು ಡೆಸ್ಟ್ರಾಯ ಮಾಡುತ್ತದೆ ಎಂಬುದಕ್ಕೆ ದುರ್ಯೋಧನ ಜೀವಂತ ಉದಾಹರಣೆಯಾಗಿದ್ದಾನೆ‌‌. ದುಷ್ಕರ್ಮ ನಿಮ್ಮನ್ನು ಕೊಲ್ಲುತ್ತದೆ ಎಂಬುದನ್ನು ದುಶ್ಯಾಸನ ಕಲಿಸುತ್ತಾನೆ‌. ಎಲ್ಲ ತರಹದ ಜೂಜು‌ ಹಾಗೂ ದುರಾಸೆ ನಿಮ್ಮನ್ನು ದುರಂತಕ್ಕೆ ತಳ್ಳುತ್ತದೆ ಎಂಬುದನ್ನು ಧರ್ಮರಾಯನಿಂದ ಕಲಿಯಬಹುದು.‌ ಎಷ್ಟೇ ಕಷ್ಟವಾದರೂ Never Give Up ಎಂಬ ಆ್ಯಟಿಟ್ಯೂಡನ್ನು ನಾವು ಅರ್ಜುನನಿಂದ ಕಲಿಯಬಹುದು. ‌ದ್ರೌಪದಿಯ ಚುಚ್ಚು ಮಾತುಗಳು ದುರ್ಯೋಧನನ ಮತ್ಸರಕ್ಕೆ ಮುನ್ನುಡಿ ಬರೆದವು. ಸೋ ಮಾತಾಡುವುದಕ್ಕಿಂತ ಮುಂಚೆ ನಾವು ಸಾವಿರ ಸಲ ಸರಿಯಾಗಿ ಯೋಚಿಸಬೇಕು, ಇಲ್ಲವಾದರೆ ದ್ರೌಪದಿಯ ಸ್ಥಿತಿ ನಮಗೂ ಬರುತ್ತದೆ. ಸಿಂಗಲ ಮೈಂಡೆಡಾಗಿ ಫೋಕಸ್ಡಾಗಿ ಕೆಲಸ ಮಾಡಿದರೆ ಬೇಗನೆ ನಾವು ನಮ್ಮ‌ ಗೋಲಗಳನ್ನು ರೀಚ್ ಆಗಬಹುದು‌. ನಮ್ಮ ಲೈಫಲ್ಲಿ ಶ್ರೀಕೃಷ್ಣನಂಥ ಗುಡ್ ಫ್ರೆಂಡ್ & ಗ್ರೇಟ ಗುರುವಿನ ಅವಶ್ಯಕತೆ ತುಂಬಾನೆ ಇದೆ. ಎಮೋಷನಲ ಫೂಲಾಗಿರೋದು ಹಾರ್ಮಫುಲ್ ಆಗಿದೆ. ಹೆಣ್ಣಿನ ಕೋಪ ತಾಪ ಶಾಪ ಶುಭವಲ್ಲ, ಹೆಣ್ಣನ್ನು ಗೌರವಿಸದಿದ್ದರೆ ನಾವು ಬೇಗನೆ ಮಣ್ಣಾಗುತ್ತೇವೆ. ಶಕುನಿಯಂಥವರನ್ನು ದೂರವಿಡದಿದ್ದರೆ ನಮ್ಮ ಸಮಾಧಿಯನ್ನು ನಾವೇ ತೋಡಿಕೊಳ್ಳುತ್ತೇವೆ. ಸೇಡಿಗಾಗಿ ಹೊರಟವನು ಕೊನೆಗೆ ಸುಡುಗಾಡು ಸೇರುತ್ತಾನೆ, ಸ್ವರ್ಗಕ್ಕಲ್ಲ. ಪ್ರೀತಿ ಹಾಗೂ ವ್ಯಾಮೋಹದಲ್ಲಿ ಕುರುಡರಾದರೆ ನಮ್ಮನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ‌. ನೀವು ಪ್ಯಾಷಿನೇಟೆಡ ಆಗಿದ್ದರೆ ನಿಮ್ಮನ್ನು ತಡೆಯುವ ಸಾಮರ್ಥ್ಯ, ನಿಮ್ಮನ್ನು ‌ಸೋಲಿಸುವ ಸಾಮರ್ಥ್ಯ ಯಾರಿಗೂ ಇಲ್ಲ‌. ಈ ರೀತಿ ಸಾವಿರಾರು ಲೈಫ ಲೆಸನಗಳು ಮಹಾಭಾರತದಿಂದ ನಮಗೆ ಸಿಗುತ್ತವೆ. ಸೋ ಗೆಳೆಯರೇ ಕಂಪಲಸಿರಿಯಾಗಿ ಒಂದ್ಸಲ ಮಹಾಭಾರತವನ್ನು ಓದಿ.

Book Link – Sampurna Mahabharata Kannada Book Link Click Here

ಮೈ ಡಿಯರ್ ಫ್ರೆಂಡ್ಸ, ರಾಮಾಯಣ ಮಹಾಭಾರತಗಳು ಮುಗಿದು ಎಷ್ಟೋ ವರ್ಷಗಳಾಗಿವೆ. ಆದರೆ ಅವುಗಳಲ್ಲಿ ನಡೆದ ಎಲ್ಲ ಇನ್ಸಿಡೆಂಟಗಳು ನಮ್ಮ ಡೇ ಟು ಡೇ ಲೈಫಲ್ಲಿ ರೀಪಿಟಾಗುತ್ತವೆ. ನೀವು ರಾಮಾಯಣ ಹಾಗೂ ಮಹಾಭಾರತಗಳನ್ನು ಓದಿ ಅವುಗಳಿಂದ ಜೀವನ ಪಾಠಗಳನ್ನು ಕಲಿತರೆ ನಿಮ್ಮ ಲೈಫ ಈಜಿಯಾಗಿ ಸಾಗುತ್ತದೆ. ನೀವು ನಿಮ್ಮ ಪಾಲಿನ ಆಸ್ತಿಯನ್ನು ತ್ಯಾಗ ಮಾಡಿದರೆ ರಾಮಾಯಣವಾಗುತ್ತದೆ, ನಿಮ್ಮ ಪಾಲಿನ ಆಸ್ತಿಯನ್ನು ಕೇಳಿದರೆ ಮಹಾ ಭಾರತವಾಗುತ್ತದೆ.‌ ನಿಮ್ಮ ಲೈಫ ಈ ತರ ಜಟಿಲವಾಗಿದೆ. ಇದನ್ನು ಈಜಿಯಾಗಿಸಬೇಕೆಂದರೆ ನೀವು ಈ ಬುಕಗಳನ್ನು ಓದುವುದು ಬೆಟರ ಆಗಿದೆ.

3) ಭಗವದ್ಗೀತಾ ಯಥಾರೂಪ : Bhagavad Gita As It Is in Kannada

ಗೆಳೆಯರೇ, ನಿಮ್ಮ ಲೈಫ ಕೂಡ ಯಾವುದೇ ಕುರುಕ್ಷೇತ್ರ ಯುದ್ಧಕ್ಕೆ ಕಡಿಮೆಯಿಲ್ಲ. ನೀವು ಸಹ ಅರ್ಜುನನಂತಾಗಿರುವಿರಿ. ನಿಮಗೆ ಏನು ಮಾಡಬೇಕು? ಎಂಬುದು ಗೊತ್ತು, ಯಾಕೆ ಮಾಡಬೇಕು? ಎಂಬುದು ಗೊತ್ತು, ಹೇಗೆ ಮಾಡಬೇಕು? ಎಂಬುದು ಗೊತ್ತು. ಆದರೆ ಮಾಡುವ ಮನಸ್ಸಿಲ್ಲ. ಪ್ರಬಲ ಇಚ್ಛಾಶಕ್ತಿಯಿಲ್ಲ. ಆ ಮೋಟಿವೇಷನ ನಿಮಗೆ ಭಗವದ್ಗೀತೆಯಿಂದ ಸಿಗಲು ಮಾತ್ರ ಸಾಧ್ಯ. ಮೂರ್ನಾಲ್ಕು ಬುಕ ಓದಿ ಬಿಲ್ಡಪ ಕೊಡುವ ಮೋಟಿವೇಷನಲ ಸ್ಪೀಕರಗಳನ್ನು ಬಿಡಿ. ಜಗತ್ತಿನ ಫಸ್ಟ & ಬೆಸ್ಟ ಮೋಟಿವೇಷನಲ ಸ್ಪೀಕರ ಶ್ರೀಕೃಷ್ಣನ ಮಾತನ್ನು ಕೇಳಿ. ಅವನನ್ನು ಬರೀ ಪೂಜಿಸುವ ಬದಲು ಅವನು ಕೊಟ್ಟ ಸಗೇಷನ್ಸಗಳನ್ನಷ್ಟೇ ಫಾಲೋ ಮಾಡಿ ನಿಮ್ಮ ಲೈಫಲ್ಲಿ ಮುಂದೆ ಬನ್ನಿ ಸಾಕು. ಗೂಗಲನಲ್ಲಿ ಉತ್ತರ ಸಿಗದ ನಿಮ್ಮ ‌ಎಲ್ಲ ಪರ್ಸನಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ಭಗವದ್ಗೀತೆಯಲ್ಲಿ ಈಜಿಯಾಗಿ ಸಿಗುತ್ತದೆ. ಅಲ್ಲಿ ಇಲ್ಲಿ ಹುಡುಕಾಡಿ ಟೈಮವೇಸ್ಟ ಮಾಡುವ ಬದಲು ಒಂದ್ಸಲ ಭಗವದ್ಗೀತೆ ಓದಿ, ನಿಮ್ಮ ಎಲ್ಲ ಸಮಸ್ಯೆಗಳಿಗೆ ಸೋಲುಷನ ಸಿಗುತ್ತದೆ. ನೀವು ನಿಮ್ಮ‌ ಜೀವನದ ಕುರುಕ್ಷೇತ್ರ ಯುದ್ಧವನ್ನು ಗೆದ್ದೇ ಗೆಲ್ಲುತ್ತಿರಿ.

Book Link – ಕನ್ನಡದಲ್ಲಿ ಭಗವದ್ಗೀತಾ ಯಥಾರೂಪವನ್ನು ನೀವು ಈ ಪುಸ್ತಕದಲ್ಲಿ ಓದಬಹುದು. ಲಿಂಕ್ Click Here – Bhagavad Gita As It Is (Kannada)

4) ಭಾರತದ ಸಂವಿಧಾನ : Constitution of India

ನಮ್ಮ ದೇಶದ ಸಂವಿಧಾನ ಎಲ್ಲ ಧರ್ಮ ಗ್ರಂಥಗಳಿಗಿಂತ ಬೆಸ್ಟಾಗಿದೆ. ಅದನ್ನ ಗೌರವಿಸುವುದು, ಅದನ್ನು ಫಾಲೋ ಮಾಡೋದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಜೊತೆಗೆ ಜವಾಬ್ದಾರಿಯಾಗಿದೆ. ನಮ್ಮ ಸಂವಿಧಾನ ನಮಗೆ ಎಲ್ಲ ತರಹದ ಸ್ವಾತಂತ್ರ್ಯ ಕೊಟ್ಟಿದೆ, ಸವಲತ್ತುಗಳನ್ನು ಕೊಟ್ಟಿದೆ. ಆದರೂ ಸಹ ನಾವು ನಮ್ಮ ಸ್ವತಂತ್ರ ಸ್ವಂತ ದೇಶದಲ್ಲಿ ಗುಲಾಮರಂತೆ ಹೆದರುತ್ತಾ ಬಾಳುತ್ತಿದ್ದೇವೆ. ನಮಗೆ ಅನ್ಯಾಯವಾದಾಗಲೂ ಸಹ ನಾವು ನ್ಯಾಯ ಕೇಳಲು ಹೆದರುತ್ತೇವೆ. ಲಂಚ ಕೇಳಿದಾಗ ಕ್ವೇಷನ ಮಾಡದೇ ಕೊಟ್ಟು ಬಿಡುತ್ತೇವೆ. ಏಕೆಂದರೆ ನಮ್ಮಲ್ಲಿ 90% ಜನರಿಗೆ ನಮ್ಮ ಕಾನೂನುಗಳ‌‌ ಬಗ್ಗೆ ಗೊತ್ತಿಲ್ಲ. ಒಂದ್ಸಲ‌ ನಾವು ನಮ್ಮ ಸಂವಿಧಾನವನ್ನು ಓದಿ ಅದರಲ್ಲಿರುವ ನಮ್ಮ ಹಕ್ಕು ಕರ್ತವ್ಯಗಳನ್ನು ಅರ್ಥಮಾಡಿಕೊಂಡರೆ ಸಾಕು ನಾವು ಈ ದೇಶದಲ್ಲಿ ಯಾವುದೇ ಭಯವಿಲ್ಲದೆ ಹೆಮ್ಮೆಯಿಂದ ಧೈರ್ಯವಾಗಿ ಬದುಕಬಹುದು. ಲಂಚ ಕೇಳಿದವರನ್ನು ಹಾಡುಹಗಲೇ ಬೆತ್ತಲೆ ಮಾಡಬಹುದು, ಡ್ಯುಟಿ ಮಾಡುವುದನ್ನು ಬಿಟ್ಟು ಬರೀ ದಬ್ಬಾಳಿಕೆ ಮಾಡುವ ಪೋಲಿಸ್ ಆಫೀಸರಗಳನ್ನು, ಮೂರ್ಖ‌ IAS ಅಧಿಕಾರಗಳನ್ನು, ಕೆಲಸ ಮಾಡದ ರಾಜಕಾರಣಿಗಳನ್ನು ಲೈನ ಮೇಲೆ ತರಬಹುದು. ಎಲ್ಲಿ ತನಕ ನೀವು ಪ್ರಶ್ನೆ ಕೇಳಲ್ಲವೋ ಅಲ್ಲಿ ತನಕ ‌ಈ ದೇಶದಲ್ಲಿ ರಾಮರಾಜ್ಯ ಬರಲ್ಲ‌. ಇದೇ ತರ ಅಂಧೇರಿ‌ ನಗರಿ ದೌಲತ‌ ರಾಜಾ ಕಥೆ ಕಂಟಿನ್ಯುವ ಆಗುತ್ತದೆ.

ದೇಶದ ಸುಧಾರಣೆಗಾಗಿ ಓದದಿದ್ದರೂ ಅಟಲಿಸ್ಟ ನಿಮ್ಮ ಸೇಫ್ಟಿಗಾಗಿ ಒಂದ್ಸಲ ನಮ್ಮ‌ ದೇಶದ ಸಂವಿಧಾನವನ್ನು ಓದಿ. “We the people of India” ಎಂಬುದನ್ನು ಸಾಬೀತು ಪಡಿಸಿ ಡಾ‌. ಬಿ ಆರ್ ಅಂಬೇಡ್ಕರ ಅವರಿಗೆ ಥ್ಯಾಂಕ್ಸ ಹೇಳಿ‌. ಏಕೆಂದರೆ ನಮ್ಮ‌ ಸಂವಿಧಾನ ಬೆಸ್ಟಾಗಿದೆ. ಅದಕ್ಕೆ ನಾವು ಮಿಕ್ಕ ದೇಶಗಳಿಗಿಂತ ಸುಖಿಯಾಗಿದ್ದೇವೆ. ಇದು ಸ್ವರ್ಗವಾಗಬೇಕೆಂದರೆ ನಾವೊಂದು ಸಲ ಗರ್ಜಿಸಿದರೆ ಸಾಕು ದೇಶ ವಿರೋಧಿಗಳು ಸರ್ವನಾಶವಾಗುತ್ತಾರೆ, ನಾವು ಶಾಂತಿಯಿಂದ ಪ್ರೀತಿಯಿಂದ ಬದುಕಬಹುದು. ನಮ್ಮ ಕಾನೂನುಗಳು ಸಹ ಸ್ಟ್ರಾಂಗ್ ಆಗಿವೆ, ಆದರೆ ಸರಿಯಾಗಿ ಇಂಪ್ಲಿಮೆಂಟ್ ಮಾಡದ ಕಾರಣ ಎಲ್ಲ ಅಸ್ತವ್ಯಸ್ತವಾಗಿದೆ. ಪ್ರಜೆಗಳು ಕ್ವೆಶ್ಚನ್ ಮಾಡಲು ಸ್ಟಾರ್ಟ್ ಮಾಡಿದಾಗ ಒಂದೊಂದಾಗಿ ಲೈನಿಗೆ ಬರುತ್ತವೆ. ಸ್ವಾಮಿ ವಿವೇಕಾನಂದರು ನಮಗೆ ಸಿಂಹದ ಮರಿಗಳಂತೆ ಬದುಕಲು ಹೇಳಿದ್ದಾರೆ, ಆದರೆ ನಾವು ಗುಲಾಮರಂತೆ ಬದುಕುತ್ತಿದ್ದೇವೆ. ಕಣ್ಮುಂದೆ ಅತ್ಯಾಚಾರವಾದರೂ ಸುಮ್ಮನಿದ್ದೇವೆ. ಪ್ರಜೆಗಳು ಗರ್ಜಿಸಿದರೇನೇ ದೇಶದ ಆಡಳಿತ ವ್ಯವಸ್ಥೆ ಸರಿಯಾಗೋದು. ಸೋ ನೀವು ಸಂವಿಧಾನವನ್ನು ಓದಿ, ನಿಮ್ಮ ಮಕ್ಕಳಿಗೂ ಕಂಪಲಸರಿಯಾಗಿ ಓದಿಸಿ.

Book Link – Constitution of India Book Link

5) ರೀಚ್ ಡ್ಯಾಡ್ ಪೂವರ ಡ್ಯಾಡ್ : Rich Dad Poor Dad Book in Kannada

ಗೆಳೆಯರೇ, ಬರೀ ಭಾರತದಲ್ಲಷ್ಟೇ ಬಡವರ ಸಂಖ್ಯೆ ಹೆಚ್ಚಾಗಿಲ್ಲ. ಜಗತ್ತಿನಾದ್ಯಂತ ಬಡವರ ಸಂಖ್ಯೆ ಹೆಚ್ಚಾಗಿದೆ. ಏಕೆಂದರೆ ಮೈಂಡಸೆಟ್ಟಿನ ಡಿಫರೆನ್ಸನಿಂದಾಗಿ ಬಡವರು ಬಡವರಾಗುತ್ತಿದ್ದಾರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ನಮ್ಮ ಶಾಲಾ ಕಾಲೇಜುಗಳನ್ನು ನಾನು ಬಹಳಷ್ಟು ಹೇಟ್ ಮಾಡುವೆ.‌ ಜೊತೆಗೆ ನನ್ನ ಲೈಫಿನ್ ಗೋಲ್ಡನ್ ಮುಮೆಂಟಗಳನ್ನ ವೆಸ್ಟ ಮಾಡಿದ ಎಲ್ಲ ಟೀಚರಗಳಿಗೆ ಶಾಪ ಹಾಕುವೆ. ಏಕೆಂದರೆ ಇವರು ಯಾವತ್ತೂ ಸಹ ನನ್ನ ಟ್ಯಾಲೆಂಟಗೆ ಸಪೋರ್ಟ್ ಮಾಡಿಲ್ಲ‌. ಒಂದಿನವೂ ನನ್ನನ್ನು ಗೌರವದಿಂದ ನಡೆಸಿಕೊಂಡಿಲ್ಲ. ಬರೀ ಜಾಸ್ತಿ ಮಾರ್ಕ್ಸ ತೆಗೆದುಕೊಳ್ಳುವ ಗೂಬೆಗಳೊಂದಿಗೆ ಕಂಪೇರ್ ಮಾಡಿ ನನ್ನನ್ನು ಕಿಂಡಲ್ ಮಾಡಿ ನನ್ನನ್ನು ಡಿಮೋಟಿವೇಟ್ ಮಾಡಿದ್ದಾರೆ. ಆದರೆ ನಾನೀಗ ನನ್ನ ಸಕ್ಸೆಸನಿಂದ, ಸಂಪತ್ತಿನಿಂದ ಅವರನ್ನು ಇನಡೈರೆಕ್ಟಾಗಿ ಕಿಂಡಲ ಮಾಡುವ ಸ್ಟೇಟಸ್ ತನಕ ತಲುಪಿರುವೆ ಎಂದರೆ ಅದಕ್ಕೆ ಕಾರಣ ರಿಚ್ ಡ್ಯಾಡ ಪೂವರ ಡ್ಯಾಡ ಬುಕನಂಥಹ ಬಿಜನೆಸ್ ಬುಕಗಳು.

ಲೈಫಲ್ಲಿ ಹ್ಯಾಪಿಯಾಗಿ ಬದುಕಲು ಸಾಕಷ್ಟು ದುಡ್ಡು ಬೇಕೆ ಬೇಕು. ದುಡ್ಡಿದ್ರೇನೆ ದುನಿಯಾ. ಬಟ್‌ ನಮ್ಮ ಕಾಲೇಜಲ್ಲಿ ನಮಗೆ ಹಣ ಮಾಡುವುದನ್ನು ಕಲಿಸಲ್ಲ. ಏಕೆಂದರೆ ಅಲ್ಲಿರುವ ಸ್ಟೂಪಿಡ ಟೀಚರಗಳಿಗೇನೆ ಯಾವುದೇ ಫೈನಾನ್ಸಿಯಲ್ ನಾಲೇಡ್ಜ ಇರುವುದಿಲ್ಲ. ಅವರು EMI ಕಟ್ಟುವಲ್ಲಿ ಎಕ್ಸ್ಪರ್ಟ್ ಆಗಿರುತ್ತಾರೆಯೇ ಹೊರತು ದೇಶಕ್ಕೆ ಬೇಕಾದ ಸಮರ್ಥ ನಾಯಕರನ್ನು, ಗ್ರೇಟ್ ಬಿಜನೆಸ್ ಮ್ಯಾನಗಳನ್ನು ರೆಡಿ ಮಾಡುವಲ್ಲಿ ಅವರಿಗೆ ಇಂಟರೆಸ್ಟ ಇರಲ್ಲ. ಹೀಗಾಗಿ ಇವರು ನಮ್ಮಿಂದ ಲಕ್ಷಗಟ್ಟಲೆ ಫೀಜ ತೆಗೆದುಕೊಂಡರೂ ಸಹ ನಮಗೆ ಹಣ ಮಾಡುವುದನ್ನು ಕಲಿಸಲ್ಲ, ಒಂದೊಳ್ಳೆ ಮಾರಲ ವ್ಯಾಲೂ ಕಲಿಸಲ್ಲ. Rat Race ಬಿಟ್ಟರೆ ಅವರಿಗೆ ಬೇರೇನೂ ಬರಲ್ಲ. ಅವರ ನಾಲೇಜ್ ಬರೀ ನೌಕರಿ ಮಾಡುವ ಗುಲಾಮರನ್ನು ರೆಡಿ ಮಾಡಲು ಸೀಮಿತವಾಗಿದೆ. ಅದಕ್ಕಾಗಿಯೇ ನಾವು ಎಷ್ಟೇ ಎಜುಕೇಟೆಡಾದರೂ ಆರ್ಡಿನರಿ ವ್ಯಕ್ತಿಗಳಾಗುತ್ತೇವೆ. ಆದರೆ ಕಾಲೇಜ್ ಡ್ರಾಪ್ಔಟ್ ಮಾಡಿದವರು ಲೈಫಲ್ಲಿ ಏಟು ತಿಂದು ರಾಯಲ್ ಲೈಫ್ ಲೀಡ್ ಮಾಡುತ್ತಾರೆ. ಟೀಚರಗಳು ಎಲ್ಲಿ ತನಕ ದೇಶದ ಅಸಲಿ ಟ್ಯಾಲೆಂಟ್‌ ಲಾಸ್ಟ ಬೆಂಚಲ್ಲಿದೆ ಎಂಬುದನ್ನು ಅರ್ಥಮಾಡಿಕೊಂಡು ಎಲ್ಲ ಸ್ಟೂಡೆಂಟ್ಸಗಳನ್ನು ಈಕ್ವಲಾಗಿ ನೋಡಲ್ಲವೋ ಅಲ್ಲಿ ತನಕ ನಾನು ಅವರಿಗೆ ಜಾಸ್ತಿ ರೆಸ್ಪೆಕ್ಟನ್ನು ಕೊಡಲ್ಲ. ಟೀಚರಗಳಲ್ಲಿನ ಈ ಕೀಳು ಮೆಂಟ್ಯಾಲಿಟಿ ಬದಲಾಗಬೇಕು, ಇಲ್ಲವಾದರೆ ನಮ್ಮ ದೇಶ ಬದಲಾಗಲ್ಲ. ಅದಿರಲಿ ಬಿಡಿ, ಮ್ಯಾಟರ ದಾರಿ ಬಿಟ್ಟು ಹೊರಟಿದೆ, ಸ್ವಾರಿ. ನೀವು ರೀಚ್ ಆಗಬೇಕೆಂದರೆ ಮೊದಲು ನೀವು ರೀಚ್ ಮೈಂಡಸೆಟ್ಟನ್ನು ಬೆಳೆಸಿಕೊಳ್ಳಬೇಕು. ಒಂದ್ಸಲ ರೀಚ್ ಡ್ಯಾಡ ಪೂವರ ಡ್ಯಾಡ್ ಬುಕ್ಕನ್ನು ಓದಿ, ರೀಚ್ ಮೈಂಡಸೆಟ ಬೆಳೆಸಿಕೊಳ್ಳಿ. ನೀವು ಖಂಡಿತ ರೀಚ್ ಆಗುತ್ತೀರಾ.

Book Link – Rich Dad Poor Dad Book Link – Click Here

ಫ್ರೆಂಡ್ಸ ನಾನು ಈ 5 ಬುಕ್ಸಗಳನ್ನು ಓದಲು ಸ್ಟ್ರಾಂಗಲಿ ರೆಕಮೇಂಡ ಮಾಡುವೆ. ನಿಮಗೆ ಲೈಫಲ್ಲಿ ಹ್ಯಾಪಿ‌ & ಸಕ್ಸೆಸಫುಲ್ಲಾಗಿರಬೇಕು ಎಂಬಾಸೆ ಇದ್ದರೆ ಒಂದ್ಸಲ ಇವುಗಳನ್ನು ಓದಿ. ಎಲ್ಲ ಬುಕಗಳ ಲಿಂಕ ಡಿಸ್ಕ್ರಿಪ್ಷನನಲ್ಲಿದೆ, ಚೆಕ್ ಮಾಡಿಕೊಳ್ಳಿ. ನನ್ನ ಕಡೆಯಿಂದ ಯಾವುದೇ ತೆರನಾದ ಫೋರ್ಸ ಇಲ್ಲ. ಇಂಟರೆಸ್ಟ ಇದ್ದರೆ ‌ಓದಿ, ಇಲ್ಲದಿದ್ರೆ ಬಿಡಿ. ನಿಮ್ಮ ಲೈಫ್ ನಿಮ್ಮಿಷ್ಟ. ಮುಂದೆ ನಿಮ್ಮ ವೈಫ ಬಂದು ಒದ್ದು ಬುದ್ಧಿವಾದ ಹೇಳಿದಾಗ ನನ್ನ ನೆನಪಾದರೆ ಈ ಅಂಕಣವನ್ನು ಹುಡುಕಿಕೊಂಡು ಬಂದು ಲೈಕ ಮಾಡಿ. All the Best and Thanks You…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books