ಕನ್ನಡ ನೀತಿ ಕಥೆಗಳು – Moral Stories in Kannada – Kannada Neethi Kathegalu – Kannada Neeti Kathegalu

You are currently viewing ಕನ್ನಡ ನೀತಿ ಕಥೆಗಳು – Moral Stories in Kannada – Kannada Neethi Kathegalu – Kannada Neeti Kathegalu

1) True ಗರ್ಲಫ್ರೆಂಡ್ – One Friendship love story in Kannada

True ಗರ್ಲಫ್ರೆಂಡ್ - One Friendship love story in Kannada

“True ಗರ್ಲಫ್ರೆಂಡ್” ಇದು ಹದಿಹರೆಯದ ಹುಡುಗ ಹುಡುಗಿಯರ ಕಣ್ಣು ತೆರೆಸುವ ಕಥೆಯಾಗಿದೆ. ಫೇಸ್ಬುಕ್ ಸ್ನೇಹವೇ ನಿಜವಾದ ಸ್ನೇಹವೆಂದು ಹೆಚ್ಚಿನ ಜನ ನಂಬಿದ್ದಾರೆ. ಆದರೆ ಅದು ನಿಜವಾದ ಸ್ನೇಹವಲ್ಲ. ನಕಲಿ ಫೇಸ್‌ಬುಕ್ ಸ್ನೇಹಿತರಿಗಿಂತ ಲೈಫ್‌ಬುಕ್ ಸ್ನೇಹಿತರು ಮುಖ್ಯ ಎಂದು ಈ ಕಥೆ ಸಾಬೀತುಪಡಿಸುತ್ತದೆ. ಫೇಸ್‌ಬುಕ್ ಮತ್ತು ಮೊಬೈಲ್ ಸ್ನೇಹಿತರು ನಿಜವಾದ ಸ್ನೇಹಿತರಾಗಿದ್ದಾರೆ ಹಾಗೂ ಅವರು ನಮ್ಮ ಸಂಕಷ್ಟದ ಸಮಯದಲ್ಲಿ ನಮಗೆ ಸಹಾಯ ಮಾಡಲು ಬರುತ್ತಾರೆ ಎಂದು ನಂಬಿದ್ದ ಇಬ್ಬರು ಒಡಹುಟ್ಟಿದವರ ಕಥೆ ಇದು. ಅವರು ಹೇಗೆ ನಕಲಿ ಸ್ನೇಹಿತರನ್ನು ಬಿಟ್ಟು ನಿಜವಾದ ಸ್ನೇಹಿತರನ್ನು ಕಂಡುಕೊಳ್ಳುತ್ತಾರೆ ಎಂಬುದು ಈ ಕಥೆಯ ಆತ್ಮವಾಗಿದೆ. ನಾನು ಈ ಕಥೆಯನ್ನು ಆರು ವರ್ಷಗಳ ಹಿಂದೆ ಬರೆದಿರುವೆ. ಆದರೆ ಇದು ಇಂದಿನ ಸಂದರ್ಭಗಳಿಗೆ ಹೆಚ್ಚು ಸೂಕ್ತವಾಗಿದೆ. ಫೇಸ್‌ಬುಕ್ ಸ್ನೇಹಿತರನ್ನು ನಿಜವಾದ ಸ್ನೇಹಿತರೆಂದು ನಂಬುವ, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಜನರು ಈ ಸಣ್ಣ ಕಥೆಯನ್ನು ಒಮ್ಮೆ ಓದಬೇಕು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

2) ಸುಂದರಿಯ ಗರ್ವಭಂಗ : Success Story of a Love Failured Boy

ಸುಂದರಿಯ ಗರ್ವಭಂಗ : Success Story of a Love Failured Boy - Kannada Inspirational Story

   “ಸುಂದರಿಯ ಗರ್ವಭಂಗ” ಇದು ಮನಸ್ಸು ಮುರಿದ ಪ್ರೇಮಿಗಳಿಗೆ ಬೆಸ್ಟ್ ಮೋಟಿವೇಶನಲ್ ಕಥೆಯಾಗಿದೆ. ಪ್ರೇಮ ವೈಫಲ್ಯದಿಂದಾಗಿ ಜೀವನದಲ್ಲಿ ಹೀನಾಯವಾಗಿ ಸೋತ ಕುಮಾರ ಎಂಬ ಹುಡುಗನ ಯಶಸ್ಸಿನ ಕಥೆ ಇದು. ಕಾರು, ದೊಡ್ಡ ಮನೆ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಶ್ರೀಮಂತ ಸರ್ಕಾರಿ ನೌಕರನನ್ನು ಮದುವೆಯಾಗಲು ಅವನ ಪ್ರೇಯಸಿ ಸುಂದರಿ ಅವನನ್ನು ಬಿಡುತ್ತಾಳೆ. ಅವನ ಬಡತನದಿಂದಾಗಿ ಅವಳು ಅವನನ್ನು ತಿರಸ್ಕರಿಸುತ್ತಾಳೆ. ಅದಕ್ಕಾಗಿ ಕುಮಾರ ತನ್ನ ಸಕ್ಸೆಸ ಮತ್ತು ಶ್ರೀಮಂತಿಕೆಯಿಂದ ಅವಳ ಮೇಲೆ ಸೇಡು ತೀರಿಸಿಕೊಳ್ಳಲು ಹಠಮಾರಿಯಾಗುತ್ತಾನೆ. ಅವನು ಅವಳ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ? ಮದುವೆಯ ನಂತರ ಸುಂದರಿಯ ಜೀವನದಲ್ಲಿ ಏನಾಗುತ್ತದೆ? ಎಂಬುದೇ ಈ ಕಥೆಯ ಜೀವವಾಗಿದೆ. ಪ್ರೀತಿಯಲ್ಲಿ ಮನಸ್ಸು ಮುರಿದುಕೊಂಡ ಎಲ್ಲ ಹುಡುಗ ಹುಡುಗಿಯರು ಓದಲೇಬೇಕಾದ ಬೆಸ್ಟ್ ಕಥೆಯಿದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

3) ಮಡದಿಯ ಪ್ರೇಮ ಪಾಠ – Life Lesson of Wife – One Romantic Love Story in Kannada

ಮಡದಿಯ ಪ್ರೇಮ ಪಾಠ - Life Lesson of Wife - One Romantic Love Story in Kannada

  “ಮಡದಿಯ ಪ್ರೇಮ ಪಾಠ” ಇದು ಹೊಸದಾಗಿ ಮದುವೆಯಾದ ಗಂಡ ಮತ್ತು ಹೆಂಡತಿಯರ ನಡುವೆ ನಡೆದ ಒಂದು ರೋಮ್ಯಾಂಟಿಕ್ ಪ್ರೇಮಕಥೆಯಾಗಿದೆ. ಜೀವನದಲ್ಲಿ ಯಾವುದೇ ದೊಡ್ಡ ಗುರಿಗಳನ್ನು ಹೊಂದಿರದ ಗಂಡ ಹಾಗೂ ಐಎಎಸ್ ಅಧಿಕಾರಿಯಾಗಲು ಬಯಸುವ ಹೆಂಡತಿಯ ಕಥೆ ಇದಾಗಿದೆ. ಒಂದು ಕಡೆ ಗಂಡ ಅವಳನ್ನು ದೈಹಿಕ ಸುಖಕ್ಕಾಗಿ ಬಲವಂತವಾಗಿ ಬಳಸಿಕೊಳ್ಳಲು ಮುಂದಾಗುತ್ತಾನೆ. ಮತ್ತೊಂದು ಕಡೆ ಅವನ ತಾಯಿ ಉದ್ದೇಶಪೂರ್ವಕವಾಗಿ ಅವನ ಹೆಂಡತಿಗೆ ಕಾಟ ಕೊಟ್ಟು ಹಿಂಸಿಸುತ್ತಾಳೆ. ಕಥೆ ಈ ರೀತಿ ಮುಂದುವರಿಯುತ್ತದೆ. ಕೊನೆಗೆ ಆ ಸೃಜನಶೀಲ ಹೆಂಡತಿಯ ಪ್ರೇಮಪಾಠದೊಂದಿಗೆ ಗಂಡನ ಮುಚ್ಚಿದ ಕಣ್ಣುಗಳು ತೆರೆಯುತ್ತವೆ, ಆತ ಬದಲಾಗುತ್ತಾನೆ. ಇಲ್ಲೊಂದು ರೋಚಕ ತಿರುವಿದೆ. ಅದನ್ನು ತಿಳಿಯಲು ಈ ಪುಸ್ತಕವನ್ನು ಓದಿ…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

4) ಮಾಜಿ ಪ್ರೇಯಸಿಗೊಂದು ಪತ್ರ – Letter to X Lover in Kannada – Love Letter in Kannada

ಮಾಜಿ ಪ್ರೇಯಸಿಗೊಂದು ಪತ್ರ - A letter to X lover in Kannada

“ಮಾಜಿ ಪ್ರೇಯಸಿಗೊಂದು ಪತ್ರ” ಇದೊಂದು ಅತ್ಯುತ್ತಮ ಲವ್ ಬ್ರೇಕಪ್ ಮೋಟಿವೇಷನ್ ಬುಕ್ ಆಗಿದೆ. ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಒಬ್ಬ ಸುಂದರ ಹಾಗೂ ಯಶಸ್ವಿ ಹುಡುಗನಿಂದ ದೂರಾದ ಒಬ್ಬಳು ಅನಲಕ್ಕಿ ಹುಡುಗಿಯನ್ನು ಈ ಪುಸ್ತಕವು ಮೋಟಿವೇಟ್ ಮಾಡುತ್ತದೆ. ಟೀನೇಜಲ್ಲಿ ತಮ್ಮ ಹೃದಯಕ್ಕೆ ಗಾಯ ಮಾಡಿಕೊಂಡ ಎಲ್ಲ ಹರೆಯದ ಹುಡುಗಿಯರಿಗೆ ಜೀವನದಲ್ಲಿ ಸಕ್ಸೆಸಫುಲ್ಲಾಗಲು ಈ ಪುಸ್ತಕ ಪ್ರೇರೇಪಿಸುತ್ತದೆ. ಲವ್ವಲ್ಲಿ ಫೇಲಾದಾಗ ಲೈಫಲ್ಲಿ ಪಾಸಾಗಲು ಈ ಪುಸ್ತಕ ಉಪದೇಶಿಸುತ್ತದೆ. ಮನಸ್ಸು ಮುರಿದ ಹುಡುಗ ಅಥವಾ ಹುಡುಗಿ ಒಮ್ಮೆ ಓದಲೇಬೇಕಾದ ಪುಸ್ತಕವಿದು…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

5) ಪರ್ಲಿಯ ಪ್ರೇಮಕಥೆ : A sad love story of mermaid Pearly

ಪರ್ಲಿಯ ಪ್ರೇಮಕಥೆ : Great Love Story of Mermaid Pearly

ಪರ್ಲಿ ಒಬ್ಬಳು ಸುಂದರವಾದ ಮತ್ಯ್ಸ ಕನ್ಯೆ. ಜೊತೆಗೆ ಆಕೆ ಸಾಗರದ ರಾಣಿ. ಅವಳಿಗೆ ಸಮುದ್ರ ಜೀವನ ಬೇಸರವಾಗಿ ಒಬ್ಬ ಮಾಂತ್ರಿಕನ ಸಹಾಯ ಪಡೆದುಕೊಂಡು ಆಕೆ ಮನುಜೆಯಾಗಿ ಭೂಮಿಗೆ ಬರುತ್ತಾಳೆ. ಆಕೆ ಭೂಮಿಗೆ ಬಂದು ಭೂಮಿಯ ಸೌಂದರ್ಯವನ್ನು ಸವಿಯುವಾಗ ಆಕೆಗೆ ಒಬ್ಬ ಸುಂದರವಾದ ರಾಜಕುಮಾರ ಕಾಣಿಸುತ್ತಾನೆ. ಆಕೆ ಅವನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ. ಆದರೆ ಅವಳ ರಾಜಕುಮಾರ ಈ ಮೊದಲೇ ಬೇರೆಯವಳನ್ನು ಪ್ರೀತಿಸುತ್ತಿರುತ್ತಾನೆ. ಅದಕ್ಕಾಗಿ ಆಕೆ ಅವನ ಪ್ರೇಯಸಿಯನ್ನು ಕೊಂದು ತಾನು ಅವನೊಂದಿಗೆ ಬಾಳಲು ನಿರ್ಧರಿಸುತ್ತಾಳೆ. ಪರ್ಲಿಗೆ ಅವಳು ಇಷ್ಟಪಟ್ಟ ರಾಜಕುಮಾರನ ಪ್ರೀತಿ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರವೇ ಪರ್ಲಿಯ ಪ್ರೇಮಕಥೆ…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

6) ಒಂದು ಬಂಗಾರದ ಗುಲಾಬಿ : ಕಾಲೇಜ ಹುಡುಗಿಯ ಪ್ರೇಮಕಥೆ Beautiful Love Story of a College girl

ಒಂದು ಬಂಗಾರದ ಗುಲಾಬಿ - ಕಾಲೇಜ ಹುಡುಗಿಯ ಪ್ರೇಮಕಥೆ One Golden Rose - Love Story of Indian College Girl in Kannada

ರಶ್ಮಿ ಒಬ್ಬಳು ಭಾರತೀಯ ಕಾಲೇಜು ಹುಡುಗಿ. ಅವಳೇ ಕಾಲೇಜ ಟಾಪರ್. ಅವಳು ಕಾಲೇಜ್ ಟಾಪರ್ ಆಗಿದ್ದರೂ ಸಹ ಆಕೆ ಬಹು ಸುಂದರವಾಗಿದ್ದಳು. ಅವಳಂದಕ್ಕೆ ಜೊಲ್ಲು ಸುರಿಸಿ ನಾಲ್ಕಾರು ಶ್ರೀಮಂತ ಹುಡುಗರು ಅವಳ ಹಿಂದೆ ಸುತ್ತುತ್ತಿರುತ್ತಾರೆ. ಅವರಲ್ಲೊಬ್ಬ ಅವಳಿಗೆ ಬಂಗಾರದ ಗುಲಾಬಿಯನ್ನು ಗಿಫ್ಟಾಗಿ ಕೊಡುತ್ತಾನೆ. ಅವಳನ್ನು ಸೂರ್ಯ ಎಂಬ ಬಡ ಹುಡುಗ ಸಹ ಪ್ರೀತಿಸುತ್ತಿರುತ್ತಾನೆ. ರಶ್ಮಿ ಯಾರ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ ? ಮುಂದೆ ಏನು ಮಾಡುತ್ತಾಳೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರವೇ “ಒಂದು ಬಂಗಾರದ ಗುಲಾಬಿ” ಎಂಬ ಪ್ರೇಮಕಥೆ…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

7) ರೆಡಲೈಟ್ ಹುಡುಗಿಯ ಲೈಫಪಾಠ – Kannada Romantic Story

ರೆಡಲೈಟ್ ಹುಡುಗಿಯ ಲೈಫಪಾಠ - Fictional Romance and Social Message Story in Kannada - Kannada Romantic Story

“ರೆಡಲೈಟ್ ಹುಡುಗಿಯ ಲೈಫಪಾಠ” ಇದು ಫಿಕ್ಷನಲ್ ರೋಮ್ಯಾನ್ಸ್ ಮತ್ತು ಸಾಮಾಜಿಕ ಸಂದೇಶವುಳ್ಳ ಸುಂದರ ಕಥೆಯಾಗಿದೆ. ಸಾರಾಯಿ ಕುಡಿದು ತಮ್ಮ ಬೆಡ್ರೂಮ್ ರಹಸ್ಯಗಳನ್ನು ಬೀದಿಗೆ ತಂದು ತಮ್ಮ ಹೆಂಡತಿಯರಿಗೆ ಕಿರುಕುಳ ಕೊಡುವ ಎಲ್ಲ ಗಂಡಂದಿರಿಗೆ ಇದು ಬದುಕು ಬದಲಾಯಿಸುವ ಕಥೆಯಾಗಿದೆ. ಹರಿ ಎಂಬ ದುಷ್ಟನ ಗೆಳೆತನ ಮಾಡಿ ತನ್ನ ಹೆಂಡತಿ ಲಕ್ಷ್ಮಿಗೆ ಕಿರುಕುಳ ಕೊಡುವ ಸಂತೋಷ ಈ ಕಥೆಯ ಮುಖ್ಯ ಪಾತ್ರದಾರಿಯಾಗಿದ್ದಾನೆ. ತನ್ನ ಗೆಳೆಯನ ಹೆಂಡತಿ ಲಕ್ಷ್ಮಿಯ ಮೇಲೆ ಕೆಟ್ಟ ಕಣ್ಣಿಟ್ಟಿರುವ ಹರಿ ಈ ಕಥೆಯ ವಿಲನ್ ಆಗಿದ್ದಾನೆ. ಹರಿ ಲಕ್ಷ್ಮಿಯನ್ನು ಪಡೆಯಲು ಅವಳಿಗೆ ಕಾಟ ಕೊಡುತ್ತಾನೆ. ಸಂತೋಷ ಮತ್ತು ಲಕ್ಷ್ಮಿಯ ಪರ್ಸನಲ್ ಜೀವನದಲ್ಲಿ ಮೂಗು ತೂರಿಸಿ ಅವರಿಬ್ಬರ ನಡುವೆ ತಡೆಗೋಡೆಯಾಗುತ್ತಾನೆ. ಆದರೆ ಓರ್ವ ರೆಡ್ ಲೈಟ್ ಹುಡುಗಿಯಿಂದಾಗಿ ಸಂತೋಷ ಸಂಪೂರ್ಣವಾಗಿ ಬದಲಾಗುತ್ತಾನೆ ಮತ್ತು ಲಕ್ಷ್ಮಿಯೊಡನೆ ಮತ್ತೆ ಒಂದಾಗುತ್ತಾನೆ. ಆ ರೆಡ್ ಲೈಟ್ ಹುಡುಗಿ ಯಾರು? ಅವಳ ಕಥೆಯೇನು? ಲಕ್ಷ್ಮಿ ಹರಿಯ ಸೊಕ್ಕನ್ನು ಹೇಗೆ ಮುರಿಯುತ್ತಾಳೆ? ಎಂಬೆಲ್ಲ ರೋಚಕ ವಿಷಯಗಳನ್ನು ತಿಳಿದುಕೊಳ್ಳಲು ಈ ರೋಮ್ಯಾಂಟಿಕ್ ಕಥೆಯನ್ನೊಮ್ಮೆ ಓದಿ.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

8) ಒಂದು ಭಯಾನಕ ಕನಸು… One Dangerous Dream – Kannada Social Message Story

ಒಂದು ಭಯಾನಕ ಕನಸು... One Dangerous Dream Kannada Social Message Story

ನಾನು ಡಿಗ್ರಿ ಸೆಕೆಂಡ್ ಇಯರನಲ್ಲಿ ಓದುತ್ತಿರುವಾಗ ಒಂದಿನ ಸೆಮಿನಾರ್ ಡೇ ಇತ್ತು. ಆವತ್ತು ನಮ್ಮ ಕ್ಲಾಸ್ ಟಾಪರ್ ರಾಜಿ ಒಳ್ಳೆ ಮದುವೆ ಹೆಣ್ಣಿಗಿಂತಲೂ ಹೆಚ್ಚಾಗಿ ಮೇಕಪ್ ಮಾಡಿಕೊಂಡು ಬಂದಿದ್ದಳು. ಸೆಮಿನಾರ್ ಮಾಡಬೇಕು ಅಂತಾ ಅಷ್ಟೊಂದು ಮೇಕಪ್ ಮಾಡಿಕೊಂಡು ಬಂದಿದ್ದಳೋ ಅಥವಾ ಯಾರನ್ನೋ ಇಂಪ್ರೆಸ್ ಮಾಡಬೇಕು ಅಂತಾ ಬಂದಿದ್ದಳೋ ಅದು ಅವಳಿಗೆ ಗೊತ್ತು. ಅವತ್ತು ಸೆಮಿನಾರ್ ನಡೆಯುತ್ತಿರುವಾಗ ಬೋರಾಗಿ ನಾನು ಬೆಂಚ್ ಮೇಲೆಯೇ ನಿದ್ರೆಗೆ ಜಾರಿದೆ. ನಿದ್ರೆಯಲ್ಲಿ ನಾನೊಂದು ಭಯಾನಕ ಕನಸನ್ನು ಕಂಡೆ. ಆ ಕನಸನ್ನೇ ಈ ಪುಸ್ತಕದಲ್ಲಿ ಯಥಾವತ್ತಾಗಿ ಬರೆದಿರುವೆ. ಇದು ಎಲ್ಲ ಪುಸ್ತಕಗಳಂತೆ ಪ್ರೇಮ ಕಥೆಯಲ್ಲ. ಇದರಲ್ಲಿ ಒಂದು ಸಾಮಾಜಿಕ ಸಂದೇಶವಿದೆ, ಭವಿಷ್ಯದ ಬಗ್ಗೆ ಕಾಳಜಿಯಿದೆ ಅಷ್ಟೇ.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

9) ಬಿಳಿಕಾಗೆ : ಕಾಲೇಜ ಕಿರಾತಕಿಯ ಕಥೆ – Kannada Short Story – Kannada Moral Story

ಬಿಳಿಕಾಗೆ : ಕಾಲೇಜ ಕಿರಾತಕಿಯ ಕಥೆ - Kannada Short Story - Kannada Moral Story

ಎಷ್ಟೋ ಜನ ಫೆಮಿನಿಸಮ್ ಪಂಡಿತೆಯರಿಗೆ ಫೆಮಿನಿಸಮ್ ಪದದ ನಿಜವಾದ ಅರ್ಥ ಹಾಗೂ ಉದ್ದೇಶ ಗೊತ್ತಿಲ್ಲ. ಅವರು ತಾವು ಮಾಡುವ ದುಶ್ಚಟಗಳಿಗೆ ಫೆಮಿನಿಸಮನ ಲೇಬಲ್ ಅಂಟಿಸಿ ಜಾರಿಕೊಳ್ಳುತ್ತಾರೆ. ಎಲ್ಲ ತರಹದ ದುಶ್ಚಟಗಳನ್ನು, ಅಶ್ಲೀಲತೆಗಳನ್ನು ಮಾಡಿ ದಾರಿ ತಪ್ಪಿ ಹಾಳಾಗುತ್ತಾರೆ. ಅಂಥವರಲ್ಲಿ ಈ ಕಥೆಯ ನಾಯಕಿ ಅನಿ ಕೂಡ ಒಬ್ಬಳು. ಹುಡುಗಿಯರು ಫೇಕ್ ಫೆಮಿನಿಸಮನಿಂದ ಹೇಗೆ ದಾರಿ ತಪ್ಪುತ್ತಾರೆ ಎಂಬುದಕ್ಕೆ ಈ ಕಥೆಯ ನಾಯಕಿ ಉತ್ತಮ ಉದಾಹರಣೆಯಾಗಿದ್ದಾಳೆ. ಹುಡುಗಿಯರ ಉನ್ನತಿಗಾಗಿ ಫೆಮಿನಿಸಮ್ ಬೇಕು. ಆದರೆ ಅದನ್ನು ದುರುಪಯೋಗಪಡಿಸಿಕೊಂಡರೆ ಅದರಿಂದಲೇ ಅವರು ಅವನತಿಯಾಗುತ್ತಾರೆ ಎಂಬುದನ್ನು ಈ ಕಥೆ ನಿರೂಪಿಸುತ್ತದೆ.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

10) ದುರಾಸೆಯ ಹೆಂಡತಿ : ಒಂದು ನೀತಿಕಥೆ – Kannada Moral Story

ದುರಾಸೆಯ ಹೆಂಡತಿ : ಒಂದು ನೀತಿಕಥೆ - Kannada Moral Story

  ಇನಕಮ್ ಟ್ಯಾಕ್ಸ್ ಡಿಪಾರ್ಟಮೆಂಟಲ್ಲಿ ಕೆಲಸ ಸಿಕ್ಕ ನಂತರ ಪ್ರವೀಣ ಯಾವುದೇ ದುರಾಸೆಗಳಿಲ್ಲದೆ ಸುಮಾ ಎಂಬ ಸುಂದರಿಯನ್ನು ಮದುವೆಯಾದನು. ಆದರೆ ಆಕೆ ದುರಾಸೆಗಳ ರಾಣಿಯಾಗಿದ್ದಳು. ಅವಳಿಗೆ ದೊಡ್ಡ ಮನೆಯಲ್ಲಿ ಐಷಾರಾಮಿ ಜೀವನ ನಡೆಸಬೇಕು, ಎಸಿ ಕಾರಲ್ಲಿ ಸುತ್ತಾಡಬೇಕು, ಮೈತುಂಬ ಬಂಗಾರ, ಬ್ರಾಂಡೆಂಡ್ ಬಟ್ಟೆಗಳನ್ನು ಹಾಕಿಕೊಂಡು ಬೇರೆಯವರ ಹೊಟ್ಟೆಯೂರಿಸಬೇಕು ಎಂಬೆಲ್ಲ ದುರಾಸೆಗಳಿದ್ದವು. ಅವಳ ದುರಾಸೆಗಳನ್ನು ಈಡೇರಿಸುವುದಕ್ಕಾಗಿ ಪ್ರವೀಣ ಭ್ರಷ್ಟನಾಗುತ್ತಾನೆ. ಮಡದಿಯ ಮಂಚಸುಖಕ್ಕಾಗಿ ಲಂಚ ಮುಟ್ಟುತ್ತಾನೆ. ಆದರೆ ಅವನು ಮಾಡಿದ ಕೆಟ್ಟ ಕರ್ಮಕ್ಕೆ ಅವನಿಗೆ ಕೊನೆಗೆ ಕೆಟ್ಟ ಫಲ ಸಿಗುತ್ತದೆ. ತಮ್ಮ ದುರಾಸೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಅಡ್ಡ ದಾರಿ ಹಿಡಿಯುವವರಿಗೆ ಈ ಕಥೆ ಜೀವನ ಪಾಠವಾಗಿದೆ…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

11) ರಾತ್ರಿರಾಣಿಯ ಹಗಲುಗನಸು – ಒಂದು ರೆಡಲೈಟ್ ಲವಸ್ಟೋರಿ – Love Story of a Red Light Girl in Kannada

ರಾತ್ರಿರಾಣಿಯ ಹಗಲುಗನಸು - ಒಂದು ರೆಡಲೈಟ್ ಲವಸ್ಟೋರಿ - Love Story of a Red Light Girl in Kannada

“ರಾತ್ರಿರಾಣಿಯ ಹಗಲುಗನಸು” ಇದೊಂದು ರೆಡಲೈಟ್ ಹುಡುಗಿಯ ಲವ್ ಮತ್ತು ಲೈಫ್ ಸ್ಟೋರಿಯಾಗಿದೆ. ಓರ್ವ ಹುಡುಗಿ ಪ್ರೀತಿಯಲ್ಲಿ ಮೋಸ ಹೋದ ನಂತರ ಹೇಗೆ ರೆಡ್ ಲೈಟ್ ಕಾಲೋನಿ ಪಾಲಾಗುತ್ತಾಳೆ, ಅಲ್ಲಿ ಆಕೆ ಯಾವ್ಯಾವ ತೊಂದರೆಗಳನ್ನು ಅನುಭವಿಸುತ್ತಾಳೆ, ಹಣಕ್ಕಾಗಿ ಮೈ ಮಾರಿಕೊಳ್ಳುವ ಪ್ರತಿ ಹುಡುಗಿಯ ಹಿಂದೆ ಒಂದೊಂದು ಕಣ್ಣೀರ ಕಥೆಯಿರುತ್ತೆ, ರಾತ್ರಿರಾಣಿಯರ ಸಮಸ್ಯೆಗಳೇನು ಎಂಬಿತ್ಯಾದಿ ಗಂಭೀರ ವಿಷಯಗಳ ಮೇಲೆ ಈ ಕಥೆ ಬೆಳಕು ಚೆಲ್ಲುತ್ತದೆ. ಈ ಕಥೆಯ ನಾಯಕಿ ಪ್ರೀತಿಯಲ್ಲಿ ಮೋಸಹೋಗಿ ಇಷ್ಟವಿಲ್ಲದಿದ್ದರೂ ರಾತ್ರಿರಾಣಿಯಾಗುತ್ತಾಳೆ. ಅವಳ ಕನಸುಗಳೆಲ್ಲ ಕತ್ತಲ ಕೊನೆಯಲ್ಲಿ, ಅವಳ ಕಣ್ಣೀರಲ್ಲಿ ಕೊಚ್ಚಿಕೊಂಡು ಹೋಗುತ್ತವೆ. ಆದರೂ ಅವಳ ಬಳಿ ಕೇವಲ ಒಂದು ಕನಸು ಉಳಿದುಕೊಳ್ಳುತ್ತದೆ. ಆ ಕನಸು ಯಾವುದು? ಅದು ನನಸಾಗುತ್ತಾ? ಎಂಬುದನ್ನು ತಿಳಿಯಲು ನೀವು ಈ ಕಥೆಯನ್ನು ಓದಬೇಕು. ಯಾರನ್ನೋ ಪ್ರೀತಿಸಿ ಮನೆ ಬಿಟ್ಟು ಓಡೋಗುವ ಪ್ರತಿ ಹುಡುಗಿ ಓದಲೇಬೇಕಾದ ಕಥೆಯಿದು. ಅಯೋಗ್ಯರನ್ನು ಪ್ರೀತಿಸುವ ಪ್ರತಿ ಹುಡುಗಿಗೆ ಪಾಠವಾಗುವ ಕಥೆಯಿದು…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

12) ಕಣ್ತೆರೆಸಿದ ಹುಡುಗಿ : ಒಂದು ನೀತಿ ಕಥೆ – Kannada Moral Life Changing Story

ಕಣ್ತೆರೆಸಿದ ಹುಡುಗಿ : ಒಂದು ನೀತಿ ಕಥೆ - Kannada Moral Life Changing Story

 ಹ್ರದಯ ಸೆಕೆಂಡ ಪಿಯುಸಿ ಮುಗಿದ ನಂತರ ತನ್ನ ಊರಲ್ಲಿ ಒಳ್ಳೇ ಡಿಗ್ರಿ ಕಾಲೇಜಿದ್ದರೂ ಹಠ ಮಾಡಿ ಒಂದು ಪಟ್ಟಣದ ಕಾಲೇಜು ಸೇರಿದನು. ಇದರ ಹಿಂದೆ ಕಲಿಯುವ ಉದ್ದೇಶವಿರಲಿಲ್ಲ. ಇದರ ಹಿಂದೆ ಹಳ್ಳಿಯಲ್ಲಿ ಸಿಗದ ಹುಡುಗಿಯರನ್ನು ಪಟ್ಟಣದ ಕಾಲೇಜಿನಲ್ಲಿ ಪಟಾಯಿಸುವುದಾಗಿತ್ತು. ಸಿನಿಮಾಗಳಲ್ಲಿ ತೋರಿಸಿದಂತೆ ಸೀಟಿ ಕಾಲೇಜಿನಲ್ಲಿ ಹುಡುಗಿಯರು ಮಾಡರ್ನಾಗಿ ಬರುತ್ತಾರೆ, ಸುಲಭವಾಗಿ ಸರಸಕ್ಕೆಲ್ಲ ಸಿಗುತ್ತಾರೆ ಎಂದುಕೊಂಡಿದ್ದನು. ಆದರೆ ಅವನಿಗೆ ಸೀಟಿ ಕಾಲೇಜ ಸೇರಿದ ಮೇಲೆ ಎಲ್ಲೆಡೆಗೆ ಹುಡುಗಿಯರು ಸಭ್ಯವಾಗಿಯೇ ಇರುತ್ತಾರೆ, ಸಿನಿಮಾದ ಸನ್ನಿವೇಶಗಳು ಸುಳ್ಳು ಎಂದು ಗೊತ್ತಾಯಿತು. ಅವನಿಗೆ ಕಾಲೇಜ ಹುಡುಗಿಯರು ಬೀಳದಿದ್ದಾಗ ಆತ ತನ್ನ ರೂಮಿನ ಪಕ್ಕದಲ್ಲಿದ್ದ ಹೊಸದಾಗಿ ಮದುವೆಯಾಗಿದ್ದ ದಾರಿ ತಪ್ಪಿದ ಹೆಂಡತಿಯತ್ರ ಸೆ**ಗಾಗಿ ಹಿಂದೆ ಬೀಳುತ್ತಾಳೆ. ಆಗವಳು ತನ್ನ ವರ್ತನೆಯ ಮೂಲಕ ಅವನ ಕಣ್ಣನ್ನು ತೆರೆಸಿ ಅವನನ್ನು ಸರಿದಾರಿಗೆ ತರುತ್ತಾಳೆ. ಇದೊಂದು ನೀತಿಕಥೆಯಾಗಿದ್ದು, ಕಾಲೇಜು ದಿನಗಳಲ್ಲಿ ಓದುವುದನ್ನು ಬಿಟ್ಟು ಪ್ರೇಮಕಾಮಗಳನ್ನು ಮಾಡಲು ಬಯಸುವವರಿಗೆ ಈ ಕಥೆ ಒಂದು ಪಾಠವಾಗಿದೆ.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

13) ಪರರ ಹೆಂಡತಿ ಪರಮ ಸುಂದರಿ – Romantic Life Story of Cute Couples in Kannada

ಪರರ ಹೆಂಡತಿ ಪರಮ ಸುಂದರಿ - Romantic Life Story Book of Cute Couples in Kannada

ಪರರ ಹೆಂಡತಿ ಪರಮ ಸುಂದರಿ” ಇದು ಎರಡು ಮುದ್ದಾದ ದಂಪತಿಗಳ ನಡುವೆ ನಡೆಯುವ ಒಂದು ರೋಮ್ಯಾಂಟಿಕ್ ಕಥೆಯಾಗಿದೆ. ಬಹಳಷ್ಟು ಜನರಿಗೆ ಪರರ ಹೆಂಡತಿ ಪರಮ ಸುಂದರಿಯಾಗಿ ಕಾಣುತ್ತಾಳೆ, ಪರರ ಗಂಡ ಪರಮಾಪ್ತನಂತೆ ಕಾಣುತ್ತಾನೆ. ಈ ವಿಷಯ ಈ ಕಥೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ಒಂದೇ ಅಪಾರ್ಟಮೆಂಟಲ್ಲಿ ಎದುರು ಬದುರು ವಾಸವಾಗಿದ್ದ ಎರಡು ವಿವಾಹಿತ ದಂಪತಿಗಳು ಪರ ಹೆಂಡತಿ ಮತ್ತು ಪರ ಗಂಡನ ಮೇಲೆ ಆಕರ್ಷಿತರಾಗುತ್ತಾರೆ. ದಾರಿ ತಪ್ಪುವ ಹಂತಕ್ಕೆ ತಲುಪುತ್ತಾರೆ. ಮುಂದೇನಾಗುತ್ತೆ ಎಂಬುದನ್ನು ಕಥೆಯಲ್ಲಿ ಓದಿ…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

14) ಒಂಟಿ ಹೆಣ್ಣಿನ ದಿಟ್ಟ ಹೆಜ್ಜೆಗಳು : ಒಂದು ಡೈವೋರ್ಸಿನ ಕಥೆ – One Divorce Story in Kannada

ಒಂಟಿ ಹೆಣ್ಣಿನ ದಿಟ್ಟ ಹೆಜ್ಜೆಗಳು : ಒಂದು ಡೈವೋರ್ಸಿನ ಕಥೆ - One Divorce Story Book in Kannada

“ಒಂಟಿ ಹೆಣ್ಣಿನ ದಿಟ್ಟ ಹೆಜ್ಜೆಗಳು” ಇದೊಂದು ಡೈವೋರ್ಸ್ ಆದ ಒಬ್ಬ ಹುಡುಗಿಯ ಜೀವನ ಕಥೆಯಾಗಿದೆ. ಡೈವೋರ್ಸ್ ಆದ ಹೆಣ್ಣು ಮಗಳು ಏನೆಲ್ಲಾ ತೊಂದರೆಗೆ ಒಳಗಾಗುತ್ತಾಳೆ? ನೀಲಿ ಕಣ್ಣುಗಳುಳ್ಳ ಸಮಾಜ ಅವಳನ್ನು ಹೇಗೆ ನೋಡುತ್ತದೆ ಎಂಬಿತ್ಯಾದಿ ವಿಷಯಗಳ ಮೇಲೆ ಈ ಕಥೆ ಬೆಳಕು ಚೆಲ್ಲುತ್ತದೆ. ಡೈವೋರ್ಸ್ ಆದ ಸೋದರಿಯರಿಗೆ ಸ್ಫೂರ್ತಿ ತುಂಬುವ ಮೋಟಿವೇಶನಲ್ ಕಥೆ ಇದಾಗಿದೆ…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

15) ದಾರಿ ತಪ್ಪಿದ ಪ್ರೇಮಿಗಳು : ಒಂದು ನೀತಿ ಕಥೆ – Kannada Moral Story

ದಾರಿ ತಪ್ಪಿದ ಪ್ರೇಮಿಗಳು : ಒಂದು ನೀತಿ ಕಥೆ - Kannada Moral Story

“ದಾರಿ ತಪ್ಪಿದ ಪ್ರೇಮಿಗಳು” ಇದು ಎಲ್ಲ ಕಾಲೇಜ ವಿದ್ಯಾರ್ಥಿಗಳು, ಅವರ ಪಾಲಕರು, ಲೆಕ್ಚರರಗಳು ತಪ್ಪದೇ ಓದಲೇಬೇಕಾದ ಕಥೆಯಾಗಿದೆ. ಒಂದಿನ ತಮ್ಮ ಮಗಳು ರಾಣಿ ಬಸ್ ಮಿಸ್ಸಾಗಿ ಲೇಟಾಗಿ ಬಂದಿದ್ದಕ್ಕಾಗಿ ಅವರಮ್ಮ ಅವಳಿಗೆ ಮುಂದೆ ಏನಾದ್ರು ಸಮಸ್ಯೆಯಾದರೆ ಮನೆಗೆ ವಿಷಯ ತಿಳಿಸುವುದಕ್ಕಾಗಿ ಮೊಬೈಲ್ ಕೊಡಿಸಿದರು. ಆದರೆ ಅವಳು ಓದು ಬಿಟ್ಟು ಫೇಸ್ಬುಕ್ಕಲ್ಲಿ ಸೆಲ್ಫಿಗಳನ್ನು ಹಾಕುತ್ತಾ ಕುಳಿತಳು. ಅವಳ ಫೋಟೋಗಳಿಗೆ ಕಾಮೆಂಟ್ ಮಾಡಿ ಅವಳ ಕ್ಲಾಸ್ಮೇಟ್ ರವಿ ಅವಳೊಂದಿಗೆ ಸ್ನೇಹ ಬೆಳೆಸಿದನು. ರಾಣಿ ಒಂದಿನ ಕ್ಲಾಸಲ್ಲಿ ಅವನೊಂದಿಗೆ ಚಾಟಿಂಗ್ ಮಾಡುವಾಗ ಸುಮಾ ಮಿಸ್ ಕೈಗೆ ಸಿಕ್ಕಿ ಬಿದ್ದಳು. ಅವರು ಅವಳ ಮೊಬೈಲನ್ನು ಜಪ್ತಿ ಮಾಡಿದರು. ಅವರಿಗೆ ಅವಳ ಮೊಬೈಲನ್ನು ತೆಗೆದು ನೋಡಿದಾಗ ಅವಳು ದಾರಿ ತಪ್ಪಿದ್ದು ತಿಳಿಯಿತು. ಜೊತೆಗೆ ಯಾರ ಕ್ಲಾಸಿಗೂ ಸರಿಯಾಗಿ ಬರದ ಹುಡುಗರು ನನ್ನ ಕ್ಲಾಸಿಗೆ ಯಾಕೆ ತಪ್ಪದೆ ಬರುತ್ತಾರೆ? ಬಂದರೂ ಯಾಕೆ ಕಮ್ಮಿ ಅಂಕ ತೆಗೆದುಕೊಳ್ಳುತ್ತಾರೆ? ಯಾಕೆ ನನ್ನ ಶರೀರದ ಖಾಸಗಿ ಅಂಗಗಳನ್ನು ಗುರಾಯಿಸುತ್ತಾರೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಬಿಗಡಾಯಿಸಿದ ಈ ವಿದ್ಯಾರ್ಥಿಗಳನ್ನು ಸುಮಾ ಮಿಸ್ ಹೇಗೆ ಬದಲಾಯಿಸುತ್ತಾರೆ ಎಂಬುದು ಈ ಕಥೆಯ ಇಂಟರೆಸ್ಟಿಂಗ್ ಭಾಗವಾಗಿದೆ…

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books