ಜೀಸಸನ ಜೀವನಕಥೆ – Life Story of Jesus in Kannada – yesu krista life story in kannada

You are currently viewing ಜೀಸಸನ ಜೀವನಕಥೆ – Life Story of Jesus in Kannada – yesu krista life story in kannada

ಸರಿ ಸುಮಾರು 2000 ವರ್ಷಗಳ ಹಿಂದೆ ಇಸ್ರೇಲ ದೇಶದ ನಜರೇಥ ಎಂಬ ನಗರದಲ್ಲಿ ಮೇರಿ ಹಾಗೂ ಜೋಸೆಫ್‌ ಎಂಬ ದಂಪತಿಗಳು ವಾಸವಾಗಿದ್ದರು. ಜೋಸೆಫ್‌ ವೃತ್ತಿಯಿಂದ ಬಡಗಿಯಾಗಿದ್ದನು. ಯಹೂದಿಗಳ ಹಳೆಯ ಗ್ರಂಥಗಳಲ್ಲಿ ಭವಿಷ್ಯದಲ್ಲಿ ಒಬ್ಬ ಅವತಾರ ಪುರುಷ ಅಥವಾ ದೇವರ ಪ್ರವಾದಿಯ ಆಗಮನದ ಬಗ್ಗೆ ಉಲ್ಲೇಖವಿತ್ತು‌‌. ಕೆಲವೊಂದಿಷ್ಟು ಜನ ಅವನ ಆಗಮನದ ನಿರೀಕ್ಷೆಯಲ್ಲಿದ್ದರು. ಅದೇ ಸಮಯಕ್ಕೆ ಮೇರಿ ಗರ್ಭವತಿಯಾದಳು. ಆಗ ಗೇಬ್ರಿಯಲ್ ಎಂಬ ದೇವದೂತನಿಂದ “ಮೇರಿಯ ಹೊಟ್ಟೆಯಲ್ಲಿ ಜೀಸಸ ಎಂಬ ಪವಿತ್ರಾತ್ಮವುಳ್ಳ ಮಗ ಜನಿಸುತ್ತಾನೆ, ಅವನು ದೇವರ ಮಗ” ಎಂಬ ಆಕಾಶವಾಣಿಯಾಗುತ್ತದೆ.

ಮೇರಿ ತನ್ನ ಮಗುವಿನ ನಿರೀಕ್ಷೆಯಲ್ಲಿ ಬಹಳಷ್ಟು ಖುಷಿಯಾಗಿರುತ್ತಾಳೆ. ಅದೇ ಸಮಯಕ್ಕೆ ಜೋಸೆಫನ ಪೂರ್ವಜರ ಊರಾದ ಬೆತ್ಲೆಮನಲ್ಲಿ ಜನಗಣತಿ ಪ್ರಾರಂಭವಾಗುತ್ತದೆ. ಅದರಲ್ಲಿ ತಮ್ಮ ಹೆಸರನ್ನು ನೋಂದಾಣಿಸಲು ಮೇರಿ ಹಾಗೂ ಜೋಸೆಫ್‌ ಇಬ್ಬರು ಬೆತ್ಲೆಮಗೆ ತೆರಳುತ್ತಾರೆ. ಅಲ್ಲಿ ಬಹಳಷ್ಟು ಜನ ಸೇರಿರುವುದರಿಂದ ಇವರಿಗೆ ಇರಲು ಸರಿಯಾದ ಜಾಗ ಸಿಗುವುದಿಲ್ಲ. ಆಗವರು ಕುರಿಗಾಯಿಗಳ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಆಗ ಮೇರಿಗೆ ಹೆರಿಗೆ ನೋವು ಶುರುವಾಗುತ್ತದೆ. ಅಲ್ಲಿದ್ದ ಕುದುರೆ ಲಾಳದಲ್ಲಿ ಜೀಸಸನ ಜನನವಾಗುತ್ತದೆ. ಅಷ್ಟರಲ್ಲಿ ದೈವವಾಣಿಯಾಗುತ್ತದೆ. ಆಕಾಶದಲ್ಲಿ ಒಂದು ವಿಶೇಷ ನಕ್ಷತ್ರ ಮಿನುಗಿ ಮರೆಯಾಗುತ್ತದೆ. ಇದರಿಂದ ಜೀಸಸನ ಜನನದ ಬಗ್ಗೆ ಅಲ್ಲಿದ್ದ ಕುರಿಗಾಯಿಗಳಿಗೆ ಗೊತ್ತಾಗುತ್ತದೆ. ಬಂದ ಕೆಲಸ ಮುಗಿದ ನಂತರ ಮೇರಿ ಹಾಗೂ ಜೋಸೆಫ್ ತಮ್ಮ‌ ಪುಟ್ಟ ಮಗು ಜೀಸಸನೊಂದಿಗೆ ಮತ್ತೆ ತಾವಿದ್ದ ನಜರೇಥ ನಗರಕ್ಕೆ ಹಿಂದಿರುತ್ತಾರೆ.

ಜೀಸಸ ಬಾಲ್ಯದಿಂದಲೇ ಓರ್ವ ವಿಭಿನ್ನ ಬಾಲಕನಾಗಿ ಗುರ್ತಿಸಿಕೊಳ್ಳುತ್ತಾನೆ. ಅವನ ಆಲೋಚನೆಗಳು, ಮಾತುಗಳು ಬೇರೆ ಮಕ್ಕಳಿಗಿಂತ ವಿಭಿನ್ನವಾಗಿದ್ದವು. ಆತ ಸಂತನಂತೆ ಮಾತಾಡುತ್ತಿದ್ದನು. ಮುಂದೆ ಆತ ತನ್ನ ಮನೆ ಬಿಟ್ಟು ಜೇರುಸಲೆಮ ನಗರಕ್ಕೆ ಬಂದನು.‌ ಅದು ರೋಮನ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಜೇರುಸಲೆಮಗೆ ಬಂದ ಮೊದಲ ದಿನವೇ ಜೀಸಸ ತಾನು ಭೂಮಿಗೆ ಬರಲು ಕಾರಣವಾದ ಕೆಲಸ ಮಾಡಲು ಪ್ರಾರಂಭಿಸಿದನು. ಅಲ್ಲಿನ ಒಂದು ದೊಡ್ಡ ದೇವಸ್ಥಾನದಲ್ಲಿ ಪ್ರಾಣಿ ಬಲಿ ಕೊಡಲು ನೂರಾರು ಮೇಕೆಗಳನ್ನು, ಪಕ್ಷಿಗಳನ್ನು ಬಂಧಿಸಿಟ್ಟಿದ್ದರು. ಇದನ್ನು ಕಂಡು ಜೀಸಸ ಅವುಗಳನ್ನೆಲ್ಲ ಬಂಧನದಿಂದ ಬಿಡಿಸಿ ಓಡಿಸಿದನು. ಭಕ್ತರನ್ನು ದೋಚುತ್ತಿದ್ದ ದೇವಸ್ಥಾನದ ಅರ್ಚಕರ ಜೊತೆಗೆ ವಾದ ಮಾಡಿದನು. ಪ್ರಾಣಿ ಹಿಂಸೆಯನ್ನು ಖಂಡಿಸಿ “ನನ್ನ ಅಪ್ಪನ ಮನೆಯನ್ನು ಪಾಪದ ಮನೆಯನ್ನಾಗಿ ಮಾಡಬೇಡಿ” ಎಂದೇಳಿದನು. ಆತ ದೇವರನ್ನು ನನ್ನ ಅಪ್ಪ ಎಂದು ಸಂಭೋದಿಸುತ್ತಿದ್ದನು. ಹೀಗಾಗಿ ದೇವಸ್ಥಾನ ಅವನಿಗೆ ಅವನ ಅಪ್ಪನ ಮನೆಯಾಗಿತ್ತು. ಇಲ್ಲಿಂದ ಜೀಸಸನ ಸಮಾಜೋದ್ಧಾರ ಆರಂಭವಾಯಿತು.

ಮನೆಯಲ್ಲಿ ಹೇಳದೆ ಜೀಸಸ ಜೇರುಸಲೆಮಗೆ ಬಂದಿದ್ದನು. ಅವನು ಅಲ್ಲಿರುವುದು ಗೊತ್ತಾಗಿ ಅವನ ತಾಯಿ ಮೇರಿ ಬಂದು ಅವನನ್ನು ಪ್ರಶ್ನಿಸಿದಳು. ಆಗ ಆತ “ನಾನು ನನ್ನ ಅಪ್ಪನ ಮನೆಯಲ್ಲಿಯೇ ಇರಬೇಕು ಅಂದರೆ ದೇವಸ್ಥಾನದಲ್ಲಿ ಇರಬೇಕು” ಎಂದೇಳಿ “ನಾನು ಆವಾಗಾವಾಗ ಮನೆಗೆ ಬರುವೆ ಚಿಂತಿಸದಿರು” ಎಂದು ಭರವಸೆ ನೀಡಿ ಅವಳನ್ನು ಸಮಾಧಾನ ಮಾಡಿ ಮನೆಗೆ ಕಳುಹಿಸಿದನು. ಜೀಸಸ ದೇವಸ್ಥಾನಗಳಲ್ಲಿ, ಧರ್ಮ ಸಭೆಗಳಲ್ಲಿ ತನ್ನ ಉಪದೇಶಗಳನ್ನು ಕೊಡಲು ಪ್ರಾರಂಭಿಸಿದನು. ಆತ ತನ್ನ ಉಪದೇಶಗಳಲ್ಲಿ “ನನ್ನ ಮಾತುಗಳು ನನ್ನನ್ನು ಕಳುಹಿಸಿದವರದ್ದು ಅಂದರೆ ನನ್ನ ತಂದೆಯದ್ದು, ದೇವರದ್ದು. ನೀವು ನನ್ನನ್ನು ನಂಬಿದರೆ ದೇವರನ್ನು ನಂಬಿದಂತೆ, ನನ್ನನ್ನು ನೋಡಿದರೆ ದೇವರನ್ನು ನೋಡಿದಂತೆ. ನೀವು ನನ್ನಿಂದ ಅನಂತ ಜೀವನವನ್ನು ಪಡೆಯಬಲ್ಲಿರಿ‌.‌..” ಎಂದೆಲ್ಲ ಹೇಳುತ್ತಿದ್ದನು‌. ಹೀಗಾಗಿ ಬಹಳಷ್ಟು ಜನ ಅವನನ್ನು ಹುಚ್ಚನೆಂದು ನಿಂದಿಸಲು ಪ್ರಾರಂಭಿಸಿದರು. ಅವನನ್ನು ಕಲ್ಲಿನಿಂದ ಹೊಡೆದು ಕೊಲ್ಲಲು ಪ್ರಯತ್ನಿಸಿದರು. ‌

ತಾನು ದೇವರ ಮಗ ಎಂಬುದನ್ನು ಯಾರು ನಂಬದಿದ್ದಾಗ ಜೀಸಸ‌ ಪವಾಡಗಳನ್ನು ಮಾಡಲು ಪ್ರಾರಂಭಿಸಿದನು. ಅವನ ಶಿಷ್ಯರಿಗೂ ಸಹ ಅವನ ಮೇಲೆ ನಂಬಿಕೆಯಿರಲಿಲ್ಲ. ಅವನು ಪವಾಡಗಳನ್ನು ಮಾಡಿ ತೋರಿಸಿದ ನಂತರ ಅವನ ಶಿಷ್ಯರಿಗೆ ಅವನ ಮೇಲೆ ನಂಬಿಕೆ ಬಂತು. ನಂತರ ಕೆಲವೊಂದಿಷ್ಟು ‌ಜನರಿಗೂ ಅವನ ಮೇಲೆ ಭರವಸೆ ಮೂಡಿತು. ಜೀಸಸ ಒಮ್ಮೆ ತನ್ನ ತಾಯಿಯೊಂದಿಗೆ ಮದುವೆ ಮನೆಗೆ ಹೋಗಿದ್ದನು. ಅಲ್ಲಿ ವೈನ ಖಾಲಿಯಾಗಿತ್ತು. ಆಗ ಜೀಸಸ ನೀರನ್ನು ವೈನ ಆಗಿ ಪರಿವರ್ತಿಸಿ ತನ್ನ ಮೊದಲ ಪವಾಡವನ್ನು ಪ್ರದರ್ಶಿಸಿದನು. ಗಲೀಲ ಎಂಬ ಊರಲ್ಲಿ ಕೇವಲ 5 ರೊಟ್ಟಿ ಹಾಗೂ 2 ಮೀನುಗಳಿಂದ 5 ಸಾವಿರಕ್ಕೂ ಅಧಿಕ ಜನರಿಗೆ ಊಟ ಬಡಿಸಿ ಎರಡನೇ ಪವಾಡ ಮಾಡಿದನು. ಈ ರೀತಿ ಆತ ತನ್ನ ಅಸ್ಥಿತ್ವವನ್ನು ಸಾಬೀತು ಪಡಿಸಲು ಪವಾಡಗಳನ್ನು ಮಾಡುತ್ತಾ ಸಾಗಿದನು. ಸತ್ತವನನ್ನು ಬದುಕಿಸಿದನು, ಹುಟ್ಟು ಕುರುಡನಿಗೆ ಕಣ್ಣು ಬರಿಸಿದನು, ರೋಗಿಗಳನ್ನು ಸರಿ ಮಾಡಿದನು, ನೀರಿನ ಮೇಲೆ ನಡೆದನು, ಸುನಾಮಿಯನ್ನು ಶಾಂತಗೊಳಿಸಿದನು. ಈ ರೀತಿ ‌ಅನೇಕ ಪವಾಡಗಳನ್ನು ಮಾಡಿದನು. ಪ್ರಾಣಿ ಬಲಿ ಖಂಡಿಸಿದನು‌. ಯಹೂದಿ ಮಠಾಧೀಶರ ಅಕ್ರಮಗಳನ್ನು, ಮೂಢನಂಬಿಕೆಗಳನ್ನು ಖಂಡಿಸಿದನು‌. ಹೀಗಾಗಿ ಆತ ಅಲ್ಲಿದ್ದ ಅರ್ಚಕರ ಕೆಂಗಣ್ಣಿಗೆ ಗುರಿಯಾದನು. ಅವನನ್ನು ಸಾಯಿಸಲು ಷಡ್ಯಂತ್ರಗಳು ಶುರುವಾದವು.

ಒಮ್ಮೆ ಜೇರುಸಲೆಮನ ಸೈನಿಕರು ಓರ್ವ ವೈಷ್ಯವನ್ನು ಎಳೆದು ತಂದು ನಡು ಬೀದಿಯಲ್ಲಿ ನಿಲ್ಲಿಸಿ ಅವಳನ್ನು ಕಲ್ಲೊಡೆದು ಸಾಯಿಸುವಂತೆ ಅಲ್ಲಿದ್ದ ಜನರಿಗೆ ಹೇಳಿದರು.‌ ಆಗ ಜೀಸಸ ಮಧ್ಯೆ ಪ್ರವೇಶಿಸಿ ಅವಳನ್ನು ಕಾಪಾಡಿದನು. ನಿಮ್ಮಲ್ಲಿ ಯಾರು ಒಂದೂ ತಪ್ಪನ್ನು, ಪಾಪವನ್ನು ಮಾಡಿಲ್ಲವೋ ಅವರು ಮೊದಲು ಆಕೆಗೆ ಕಲ್ಲು ಹೊಡೆಯಿರಿ ಎಂದು ಜೀಸಸ ಗುಡುಗಿದಾಗ ಅಲ್ಲಿದ್ದ ಜನರೆಲ್ಲ ತಲೆ ಕೆಳಗಾಕಿ ಅಲ್ಲಿಂದ ತೆರಳಿದರು. ನಂತರ ಜೀಸಸ ಅವಳಿಗೆ “ಇನ್ಮುಂದೆ ಪಾಪ ಮಾಡದಿರು, ಮಾಡಿರುವ ತಪ್ಪಿಗೆ ಪ್ರಾಯಶ್ಚಿತ್ತ ‌ಮಾಡಿಕೊಂಡು ಹೊಸ ಬದುಕು ಪ್ರಾರಂಭಿಸು” ಎಂದೇಳಿ ಅವಳನ್ನು ಉದ್ಧರಿಸಿದನು. ಈ ರೀತಿ ಜೀಸಸ ಜನರಿಗೆ ಪ್ರೀತಿ ಪ್ರೇಮ ಕರುಣೆ ಕ್ಷಮೆಯ ಪಾಠಗಳನ್ನು ಬೋಧಿಸಿದನು. ಜನರಿಗೆ ದೇವರ ಸಾಮ್ರಾಜ್ಯವಾದ ಸ್ವರ್ಗದ ಬಗ್ಗೆ, ಜೀವನ ಜ್ಯೋತಿ, ಅನಂತ ಜೀವನಗಳ ಬಗ್ಗೆ ವಿವರಿಸಿದನು‌‌. ತನ್ನನ್ನು ತಾನು “ದೇವರ ಮಗ” ಎಂದು ಕರೆದುಕೊಂಡು ತಿರುಗಾಡಿದನು. ಇದರಿಂದ ಜನ ಅವನ ವಿರುದ್ಧ ತಿರುಗಿ ಬಿದ್ದರು. ಅವನನ್ನು ಹುಚ್ಚನೆಂದು ಘೋಷಿಸಿದರು. ಯಹೂದಿಗಳ ಅರ್ಚಕರು, ಮಠಾಧೀಶರು ಕೋಪಗೊಂಡರು. ಜನರ ತಲೆ ಕೆಡಿಸಿ ಯಹೂದಿಗಳ ರಾಜನಾಗಲು‌ ಪ್ರಯತ್ನಿಸುತ್ತಿದ್ದಾನೆ, ತನ್ನನ್ನು ತಾನು ದೇವರ ಮಗನೆಂದು ಹೇಳಿ ನಮ್ಮ‌ ಧರ್ಮಕ್ಕೆ ಹಾಗೂ ದೇವರಿಗೆ ಅಪಮಾನ ಮಾಡಿದ್ದಾನೆಂಬ ಆರೋಪ ಹೊರಿಸಿ ಅವನ ಸಾವಿಗೆ ಸಂಚು ರೂಪಿಸಿದರು. ಇದು ಗೊತ್ತಾಗಿ ಜೀಸಸ ಗುಟ್ಟಾಗಿ ಸಂಚರಿಸಲು ಪ್ರಾರಂಭಿಸಿದನು. ಅವನು ಯಾವಾಗ ಎಲ್ಲಿರುತ್ತಾನೆ ಎಂಬುದು ಅವನ ಶಿಷ್ಯರಿಗಷ್ಟೇ ಗೊತ್ತಿತ್ತು. ‌

ಜೀಸಸನಿಗೆ ಮುಂದೆ ತನ್ನೊಂದಿಗೆ ಏನಾಗುತ್ತೆ ಎಂಬುದು ಮೊದಲೇ ಗೊತ್ತಿತ್ತು. ಅವನ ಶಿಷ್ಯರಲ್ಲೇ ಒಬ್ಬನು ಅವನಿಗೆ ಮೋಸ ಮಾಡಿ ಅವನನ್ನು ರೋಮನ ಸೈನಿಕರಿಗೆ ಹಿಡಿದು ಕೊಡುತ್ತಾನೆ ಎಂಬುದು ಸಹ ಗೊತ್ತಿತ್ತು. ಅದಕ್ಕಾಗಿ ಜೀಸಸ ತನ್ನ ಶಿಷ್ಯರಿಗೆ ಕೊನೆಯ ಊಟಕ್ಕೆ ಕರೆದುಕೊಂಡು ಹೋದನು. ಇದನ್ನು ಲಾಸ್ಟ ಸಪರ್ ಎಂದು ಕರೆಯುತ್ತಾರೆ. ‌ಜೀಸಸ ತನ್ನ ಶಿಷ್ಯರಿಗೆ ತನ್ನ ವಿದಾಯದ ಬಗ್ಗೆ ಹೇಳಿದನು. “ದ್ವೇಷ ಹಾಗೂ ಕಾಮದಿಂದ ದೂರವಿರಲು, ಶತ್ರುಗಳಿಗೂ ಸಹ ಕ್ಷೇಮ ಬಯಸುವುದು, ನಿಮಗೆ ಕೆಟ್ಟದ್ದನ್ನು ಮಾಡಿದವರನ್ನು ಕ್ಷಮಿಸುವುದು, ಒಂದು ‌ಕೆನ್ನೆಗೆ ಹೊಡೆದರೆ ಮತ್ತೊಂದನ್ನು ತೋರಿಸುವುದು” ಎಂದೆಲ್ಲ ಉಪದೇಶಗಳನ್ನು ನೀಡಿದನು. ಲಾಸ್ಟ ಸಪರನಲ್ಲಿ ಜೀಸಸ ತನ್ನ ಸಾವು ಹಾಗೂ ಪುನರುತ್ಥಾನದ ಬಗ್ಗೆ ತನ್ನ ಶಿಷ್ಯರಿಗೆ ‌ಹೇಳಿದನು. ನನ್ನ ನಿಧನದ ನಂತರದ ಮೂರು ದಿನಗಳಲ್ಲಿ ನಾನು ನಿಮಗೆ ಮತ್ತೆ ಕಾಣಿಸಿಕೊಳ್ಳುವೆ ಎಂದೇಳಿ ಜೀಸಸ ತನ್ನ ಶಿಷ್ಯರಿಗೆ ವಿದಾಯ ಹೇಳಿದನು. ಆದರೆ ಅಷ್ಟರಲ್ಲಿ ಅವನ ಶಿಷ್ಯರಲ್ಲಿ ಒಬ್ಬನಾದ ಜ್ಯೂಡಸ ಕೇವಲ 30 ಬೆಳ್ಳಿ ನಾಣ್ಯಗಳಿಗಾಗಿ ಅವನ ಗುರು ಜೀಸಸಗೆ ಮೋಸ ಮಾಡಿದನು‌.‌ ಅವನನ್ನು ಸೈನಿಕರಿಂದ ಬಂಧಿಸಿ ಯಹೂದಿಗಳ ಅರ್ಚಕರಿಗೆ ಒಪ್ಪಿಸಿದನು‌.

ಸೈನಿಕರು ಜೀಸಸನನ್ನು ಬಂಧಿಸಿ ಯಹೂದಿಗಳ ಅರ್ಚಕರ ಹಾಗೂ ಮುಖ್ಯ ಮಠಾಧೀಶರ ಮುಂದೆ ಹಾಜರು ಪಡಿಸಿದರು. ಅವನನ್ನು ರೋಮನ ಸಾಮ್ರಾಜ್ಯದ ಗವರ್ನರನ‌ ಮುಂದೆ ಹಾಜರು ಪಡಿಸಿ “ದೇವರ ಅಪಮಾನ ಹಾಗೂ ರಾಜನಾಗುವ ಆಸೆಗೆ ಜನರ ತಲೆ ಕೆಡಿಸಿದ” ಆರೋಪದ ಮೇಲೆ ಶಿಲುಬೆಗೆ ಏರಿಸಿ ಸಾಯಿಸುವಂತೆ ಕೇಳಿಕೊಂಡರು. ಅವರ ಕೋರಿಗೆಯಂತೆ ಗವರ್ನರ್ ಅವನನ್ನು ಶಿಲುಬೆಗೆ ಏರಿಸಿ ಸಾಯಿಸುವಂತೆ ಆದೇಶಿಸಿದನು‌‌. ನಂತರ ಯಹೂದಿಗಳ ಅರ್ಚಕರು ಜೀಸಸಗೆ ಚಾವಟಿ ಏಟಿಯಿಂದ ಹೊಡೆಸಿದರು. ಅವನನ್ನು ಅವಮಾನ ಮಾಡಲು ಅವನ ತಲೆ ಮೇಲೆ ಮುಳ್ಳಿನ ಕೀರಿಟ ಇಟ್ಟರು. ಭಾರವಾದ ಶಿಲುಬೆಯನ್ನು ಅವನ ಮೇಲೆ‌ ಹೊರೆಸಿ ಈಡೀ ಜೇರುಸಲೆಮ ನಗರದ ತುಂಬೆಲ್ಲ ಮೆರವಣಿಗೆ ಮಾಡಿಸಿದರು. ಅವನನ್ನು ನಗರದ ಆಚೆ ಶಿಲುಬೆಗೆ ಏರಿಸಿದರು. ಅವನ ಕೈ ಹಾಗೂ ಕಾಲುಗಳಿಗೆ ಮೊಳೆಗಳನ್ನು ಹೊಡೆದು ಅವನನ್ನು ಶಿಲುಬೆಗೆ ನೇತಾಕಿದರು. ನಂತರ ಆ ಶಿಲುಬೆಗೆ “ನಜರೇಥನ ಜೀಸಸ್ – ಯಹೂದಿಗಳ ರಾಜ” ಎಂಬ ಬೋರ್ಡನ್ನು ನೇತಾಕಿದರು. ಜೀಸಸ ತನ್ನನ್ನು ನೋಯಿಸಿದ ಈ ಮೂಢರನ್ನು ಕ್ಷಮಿಸುವಂತೆ ದೇವರಲ್ಲಿ ಪ್ರಾರ್ಥಿಸಿ ತನ್ನ ಪ್ರಾಣವನ್ನು ದೇವರಿಗೆ ಅರ್ಪಿಸಿದನು. ಜೀಸಸ ಸತ್ತಿದ್ದಾನೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸೈನಿಕರು ಅವನೆದೆಗೆ ಭರ್ಚಿಯಿಂದ ಚುಚ್ಚಿದರು. ಆಗ ಅವನೆದೆಯಿಂದ ನೀರು ಹಾಗೂ ರಕ್ತ ಹೊರಬಂತು. ಜೀಸಸ ಸತ್ತಿದ್ದಾನೆ ಎಂದು ತಿಳಿದು ಸೈನಿಕರು ಹೋದರು‌.

ಜೀಸಸನ ಶಿಷ್ಯರು ಅವನ ನಿಧನದ ನಂತರ ತಲೆ ಮರೆಸಿಕೊಂಡರು. ಅವರಲ್ಲಿ ‌ಒಬ್ಬ ಶಿಷ್ಯ ಯಹೂದಿಗಳ ಅರ್ಚಕರೊಂದಿಗೆ ಒಳ್ಳೆ ಸಂಪರ್ಕ ಇಟ್ಟುಕೊಂಡಿದ್ದನು. ಆತ ಅವರಿಗೆ ಕೇಳಿಕೊಂಡು ಜೀಸಸನ ಶವವನ್ನು ಶಿಲುಬೆಯಿಂದ ಕೆಳಗಿಳಿಸಿ ಅದನ್ನು ಸುಗಂಧ ದ್ಯವ್ಯದಿಂದ ಸ್ವಚ್ಛಗೊಳಿಸಿ ಬಿಳಿ ಬಟ್ಟೆಯಲ್ಲಿ ಸುತ್ತಿ ಒಂದು ಗುಹೆಯಲ್ಲಿ ಸಮಾಧಿ ಮಾಡಿದನು. ಮರುದಿನ ಅವನ ಶಿಷ್ಯೆಯೊಬ್ಬಳು ಅವನ ಸಮಾಧಿಗೆ ಬಂದಾಗ ಅದರ ಬಾಗಿಲಿನ ಮುಂದಿರುವ ಕಲ್ಲು ಪಕ್ಕಕ್ಕೆ ಸರಿದಿರುವುದನ್ನು ಗಮನಿಸಿದಳು. ಒಳ ಹೋಗಿ ನೋಡಿದರೆ‌ ಜೀಸಸನ ಶರೀರ ಅಲ್ಲಿರಲಿಲ್ಲ‌. ಅದನ್ನಾಕೆ‌ ಅವನ‌ ಮಿಕ್ಕ ಶಿಷ್ಯರಿಗೂ ಸಹ ತಿಳಿಸಿದಳು. ಅದರ ಮಾರನೇ ದಿನ ಜೀಸಸ ತನ್ನ ಶರೀರ ಸಮೇತ ತನ್ನ ಶಿಷ್ಯರಿಗೆ ದರ್ಶನ ಕೊಟ್ಟನು. ನಂತರ ಮಾಯವಾದನು. ಇದಕ್ಕೆ ಜೀಸಸನ ಪುನರುತ್ಥಾನ ಎನ್ನುತ್ತಾರೆ.

ಜೀಸಸನ ಮರಣದ ನಂತರ ಕ್ರಿಸ್ತ ಶಕೆ ಶುರುವಾಯಿತು. ಕ್ರೈಸ್ತ ಧರ್ಮ ಶುರುವಾಯಿತು. ಅವಾಗಿನಿಂದ ಜೀಸಸನ ಶಿಷ್ಯರು, ಭಕ್ತರು ಅವನ ಹುಟ್ಟಿದ ದಿನವನ್ನು ಕ್ರಿಸಮಸ ಆಗಿ ಆಚರಿಸುತ್ತಾರೆ, ಅವನನ್ನು ಶಿಲುಬೆಗೆ ಏರಿಸಿದ ದಿನವನ್ನು ಗುಡ್ ಫ್ರಾಯಡೇ ಎಂದು ಆಚರಿಸುತ್ತಾರೆ, ಅವನ ಪುನರುತ್ಥಾನದ ‌ದಿನವನ್ನು ಈಸ್ಟರ್ ಸಂಡೇ ಎಂದು ಆಚರಿಸುತ್ತಾರೆ. ಇದೀಷ್ಟು ಜೀಸಸನ ಜೀವನಕಥೆ‌. ಇದನ್ನು ಲೈಕ‌ ಮಾಡಿ ಹಾಗೂ ಶೇರ್ ಮಾಡಿ. ಧನ್ಯವಾದಗಳು…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books