ದುಷ್ಟರನ್ನು ಡೀಲ್ ಮಾಡುವುದೇಗೆ? – How to deal with bad people? in Kannada

You are currently viewing ದುಷ್ಟರನ್ನು ಡೀಲ್ ಮಾಡುವುದೇಗೆ? – How to deal with bad people? in Kannada

ಹಾಯ್ ಗೆಳೆಯರೇ, ನಾವು ಒಳ್ಳೆಯವರಾದಷ್ಟು ನಮಗೆ ವಿರೋಧಿಗಳು, ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಹಾಗಂತ ನಾವು ಅವರಂತೆ ಕೆಟ್ಟವರಾಗಕ್ಕಾಗಲ್ಲ. ಏಕೆಂದರೆ ಕೊನೆಗೆ ಗೆಲ್ಲೋದು ಒಳ್ಳೆತನವೇ. ಸೋ ಒಳ್ಳೆಯವರಾಗೋದ್ರಲ್ಲಿ ತಪ್ಪೇನಿಲ್ಲ, ನಾವು ಒಳ್ಳೆಯವರಾಗಿರೋದೆ ಬೆಟರ್ ಆಗಿದೆ. ಆದರೆ ಕೆಟ್ಟ ಜನ ನಮ್ಮ ಬೆನ್ನ ಹಿಂದೆ ಬೀಳ್ತಾರಲ್ಲ? ಅವರನ್ನು ಡೀಲ ಮಾಡುವುದೇಗೆ? ಇದು ಸಿಂಪಲಾಗಿದೆ. ಈ ಅಂಕಣವನ್ನು ಕೊನೆ ತನಕ ಓದಿ ಗೊತ್ತಾಗುತ್ತೆ.

ನಾವ ಎಲ್ಲೇ ಹೋದರೂ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಕೆಟ್ಟ ಜನ ಸಿಕ್ಕೇ ಸಿಗ್ತಾರೆ, ದುಷ್ಟರು ಸಿಕ್ಕೇ ಸಿಗ್ತಾರೆ. ವಿಲನ ಇರದಿದ್ರೆ ನಮ್ಮ‌ ಲೈಫಲ್ಲಿ ನಾವು ಹೀರೊ ಆಗೋದೇಗೆ? ವಿಲನಗಳಿದ್ದಾಗಲೇ ನಮಗೆ ಬೆಲೆ ಬರೋದು. ನಾವು ಕಾಲೇಜಿನಲ್ಲಿ ಕಲಿಯೋವಾಗ ಕೆಟ್ಟ ಕ್ಲಾಸಮೇಟ್ಸಗಳು‌, ಕೆಟ್ಟ ಫ್ರೆಂಡ್ಸಗಳು ನಮಗೆ ಸಿಗ್ತಾರೆ. ಆನಂತರ ಜಾಬ್ ಮಾಡುವಾಗ ಕೆಟ್ಟ ಕಲೀಗಗಳು ಇಲ್ಲವೇ ಕೆಟ್ಟ ಸೂಪರವೈಸರ, ಟೀಮ ಲೀಡರ್ ಅಥವಾ ಕ್ಯಾರೆಕ್ಟರಲೆಸ ಬಾಸ್ ಸಿಗ್ತಾರೆ. ಬಿಜನೆಸ ಮಾಡೋವಾಗ ಕೆಟ್ಟ ಕಾಂಪಿಟೇಟರ್ಸ ಸಿಗ್ತಾರೆ. ಈ ರೀತಿ ನಾವು ಎಲ್ಲೇ ಹೋದರೂ, ಏನೇ ಮಾಡಿದ್ರೂ ನಮಗೆ ಕೆಟ್ಟ ಜನ ಸಿಕ್ಕೇ ಸಿಗ್ತಾರೆ. ಕೆಲವೊಂದಿಷ್ಟು ಜನ ರೂಢ್ ಆಗಿರುತ್ತಾರೆ, ಟಾಕ್ಸಿಕ ಆಗಿರುತ್ತಾರೆ, ಟೈಮಪಾಸ ಆಗಿರುತ್ತಾರೆ, ನೆಗೆಟಿವ್ ಆಗಿರುತ್ತಾರೆ, ಸ್ಟೂಪಿಡ್ ಆಗಿರುತ್ತಾರೆ, ಡಿಸ್ಟರ್ಬ್ಡ ಆಗಿರುತ್ತಾರೆ. ಇಂಥವರ ಮಧ್ಯೆ ನಾವು ಒಳ್ಳೆಯವರಾದರೆ ಖಂಡಿತ ಇವರು ನಮಗೆ ಕಾಟ ಕೊಡುತ್ತಾರೆ, ಬೆನ್ನ‌ ಹಿಂದೆ ಟೀಸ್ ಮಾಡುತ್ತಾರೆ.

ನಿಮ್ಮ ಆಫೀಸನಲ್ಲಿ ಕೆಟ್ಟ ಕಲೀಗಗಳಿದ್ದಾರೆ ಅಂತಾ ಅಥವಾ ನಿಮ್ಮ ಮನೆ‌ ಅಕ್ಕಪಕ್ಕದವರು ಸರಿಯಿಲ್ಲ ಅಂತಾ ಪದೇಪದೇ ಕೆಲಸ ಚೆಂಜ ಮಾಡಕ್ಕಾಗತ್ತಾ? ಪದೇಪದೇ ಮನೆ ಚೆಂಜ ಮಾಡಕ್ಕಾಗತ್ತಾ? ಇಲ್ಲ ತಾನೇ? ಅವರನ್ನ ಚೆಂಜ ಮಾಡಕ್ಕಾಗಲ್ಲ. ನಾವೇ ಚೆಂಜ ಆಗಬೇಕು‌. ನಾವೇ ಒಳಗಿನಿಂದ ಸ್ಟ್ರಾಂಗ್ ಆಗಬೇಕು.

ಇಂಥ ದುಷ್ಟ ಜನರೊಂದಿಗೆ ಡೀಲ್ ಮಾಡೋವಾಗ ನಾವು ಬಹಳಷ್ಟು ಹುಷಾರಾಗಿರಬೇಕು. ಏಕೆಂದರೆ ಇವರೊಂಥರಾ ಎರಡು ತಲೆ ಹಾವಿದ್ದಂತೆ. ಅವರ ಮೈತುಂಬ ವಿಷವಿರುತ್ತದೆ. ಸೋ ದುಷ್ಟರನ್ನು ಬದಲಾಯಿಸಲು ಪ್ರಯತ್ನಿಸುವ ಬದಲು ಅವರಿಂದ ದೂರವಿರುವುದು ಜಾಣತನವಾಗಿದೆ. ಹಾವನ್ನು ಸಾಯಿಸಿ ಅನಾವಶ್ಯಕವಾಗಿ ಪಾಪ ಕಟ್ಟಿಕೊಳ್ಳುವ ಬದಲು ನಾವು ಅದರಿಂದ ದೂರ ಹೋಗುವುದು ಜಾಣತನವಾಗಿದೆ. ಈ ದುಷ್ಟರೊಂದಿಗೆ ವಾದ ಮಾಡುವುದು ಇಲ್ಲವೇ ಅವರೊಂದಿಗೆ ಜಗಳವಾಡೋದು ನಮ್ಮ‌ ಕೆನ್ನೆ ಮೇಲೆ ಕುಂತ ಸೊಳ್ಳೆಯನ್ನು ಸಾಯಿಸುವಂತಿದೆ. ಸೊಳ್ಳೆ ಸತ್ತರೂ ಸಾಯದಿದ್ದರೂ ಏಟು ಮಾತ್ರ ನಮ್ಮ‌ ಕೆನ್ನೆಗೇನೆ ಬೀಳುತ್ತದೆ. ನಮಗೇ ನೋವಾಗುತ್ತೆ, ನಮಗೇ ನಷ್ಟವಾಗುತ್ತದೆ. ಸೋ ದುಷ್ಟರನ್ನು ಡೀಲ ಮಾಡಲು ಇರುವ ಸಿಂಪಲ್ ಉಪಾಯವೆಂದರೆ ಅವರಿಂದ ಸಾಧ್ಯವಾದಷ್ಟು ದೂರವಿರುವುದು. ಅವರನ್ನು ಅವೈಡ ಮಾಡುವುದು. ‌

ಈ ದುಷ್ಟರನ್ನು ಡೀಲ್ ಮಾಡಲು ಇರುವ ಇನ್ನೊಂದು ಬೆಸ್ಟ ಉಪಾಯವೆಂದರೆ‌ ಅವರನ್ನು ಇಗ್ನೋರ ಮಾಡುವುದು. ಕಾಲೇಜನಲ್ಲಿ ನಿಮ್ಮ‌‌ ಕೆಟ್ಟ ಕ್ಲಾಸಮೇಟ್ಸ ನಿಮ್ಮ ಕಾಲೆಳೆದರೆ, ಆಫೀಸನಲ್ಲಿ ನಿಮ್ಮ ಕೆಟ್ಟ ಕಲೀಗಗಳು ನಿಮಗೆ ಕಾಟ ಕೊಡಲು ಪ್ರಾರಂಭಿಸಿದರೆ ಅವರನ್ನು ಸೈಲೆಂಟಾಗಿ ಇಗ್ನೋರ ಮಾಡುವುದನ್ನು ಕಲಿಯಿರಿ. ನೀವು ಅವರನ್ನು ಪದೇಪದೇ ಇಗ್ನೋರ ಮಾಡಿದಾಗ ಅವರ ಈಗೋ ಹರ್ಟಾಗುತ್ತದೆ, ಅವರು ನಿಮ್ಮಿಂದ ತಾನಾಗಿಯೇ ದೂರ ಹೋಗುತ್ತಾರೆ. ಆಗ ನಿಮ್ಮ‌ ಫೋಕಸನ್ನು ಒಳ್ಳೆಯದರ ಕಡೆಗೆ ಶಿಫ್ಟ ಮಾಡಿ. ಏಕೆಂದರೆ ಜಗತ್ತಿನಲ್ಲಿ ಒಳ್ಳೆಯವರಿಗೇನು ಕೊರತೆಯಿಲ್ಲ. ಒಳ್ಳೆಯವರೊಂದಿಗೆ ದೊಸ್ತಿ ಮಾಡಿ, ಕೆಟ್ಟವರು ನಿಮ್ಮ ಕಣ್ಣಿಗೆ ಕಾಣಿಸುವುದೇ ಇಲ್ಲ.

ಕೆಟ್ಟ ಜನ ನಿಮ್ಮ ಕಾಲೆಳೆದಾಗ, ನಿಮ್ಮನ್ನು ಟೀಸ್ ಮಾಡಿದಾಗ ಅವರಿಗೆ ನಿಮ್ಮ ಅಟೆನಷನನ್ನು‌ ಕೊಡಬೇಡಿ. ಅವರು ಏನಾದರೂ ‌ಮಾಡಿದಾಗ ಓವರ ರಿಯಾಕ್ಟ ಮಾಡಬೇಡಿ, ಡಿಸ್ಟರ್ಬ ಆಗಬೇಡಿ. ನೀವು ತಕ್ಷಣವೇ‌ ರಿಯಾಕ್ಟ ಮಾಡಿದಾಗ ಅವರಿಗೆ ಮೊಟಿವೇಷನ ಸಿಗುತ್ತದೆ. ಅವರು ಮತ್ತಷ್ಟು ನಿಮಗೆ ಕಾಡುತ್ತಾರೆ. ಸೋ ನೀವು ರಿಯಾಕ್ಟ ಮಾಡಬೇಡಿ, ಅವರನ್ನು ಫುಲ್ಲಿ ಇಗ್ನೋರ ಮಾಡಿ. ಅವರು ನಿಮಗೆ ಇರೀಟೇಟ ಮಾಡಿದಾಗ ನೀವು ಅವರನ್ನು ಇಗ್ನೋರ ಮಾಡಿ. ಇದು ಅವರನ್ನು ಸೈಲೆಂಟಾಗಿ ಕೊಲ್ಲುತ್ತದೆ. ಈ ಟೆಕ್ನಿಕ್ 100% ವರ್ಕಾಗುತ್ತದೆ. ದುಷ್ಟರನ್ನು‌ ನೆಗೆಟಿವ ಜನರನ್ನು ಫುಲ್ಲಿ ಇಗ್ನೋರ ಮಾಡಿ, ಅವರು ‌ನಿಮ್ಮೆಡೆಗೆ ಸುಳಿಯುವುದಿಲ್ಲ.

ಇನ್ನೂ ಜಾಬ್ ಪ್ಲೇಸಲ್ಲಿ ನಮ್ಮ‌ ಸಿಸ್ಟರಗಳಿಗೆ ಒಂದು ಕಾಮನ್ ಪ್ರಾಬ್ಲಮ ಫೇಸ್ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಸೂಪರವೈಸರ ಅಥವಾ ಟೀಮ ಲೀಡರ್ ಅಥವಾ ಹಾಯರ ಆಫೀಸರ ಅನಾವಶ್ಯಕವಾಗಿ ಟಾರ್ಚರ ಕೊಡುತ್ತಾನೆ. ಬೆಡ್ ಶೇರ್ ಮಾಡಲು ಇನ್ವೈಟ ಮಾಡುತ್ತಾನೆ.‌ ಈ ಸಮಸ್ಯೆ ಬರೀ ಸಿಸ್ಟರ್ಸಗಳಿಗಷ್ಟೇ ಅಲ್ಲ, ಬ್ರದರ್ಸಗಳಿಗೂ ಕಾಡುತ್ತೆ. ಲೇಡಿ ಬಾಸ್ ಅಥವಾ ಹಾಯರ ಆಫೀಸರ್ ಹೇರಾಜ ಮಾಡಿದಕ್ಕೆ ಬಹಳಷ್ಟು ಪ್ರೂಫ್ಸಗಳಿವೆ. ಇಂಥ ಸಮಯದಲ್ಲಿ ಏನು ಮಾಡೋದಂತ ಬಹಳಷ್ಟು ಜನರಿಗೆ ಅರ್ಥವಾಗಲ್ಲ. ಅವರು ಮೋಸ ಹೋಗುತ್ತಾರೆ, ಶೋಷಣೆಗೆ ಒಳಗಾಗುತ್ತಾರೆ. ಇಂಥ ದುಷ್ಟರನ್ನು ಡೀಲ್ ಮಾಡಲು ಇರುವ ಬೆಸ್ಟ ಮೆಥಡ ಎಂದರೆ ನಾವು ಬಲಿಷ್ಟರಾಗೋದು, ನಂತರ ಇವರನ್ನು ಎಕ್ಸಪೋಸ ಮಾಡೋದು. ಈ ದುಷ್ಟರು ಯಾವಾಗಲೂ ದುರ್ಬಲರನ್ನೇ ಟಾರ್ಗೆಟ್ ಮಾಡುತ್ತಾರೆ. ಯಾರು ಸಹಿಸಿಕೊಂಡು‌ ಸುಮ್ಮನಿರುವಂತೆ ಕಾಣ್ತಾರೋ ಅವರ ಸೆರಗಿಗೆ ಕೈಹಾಕಲು ಟ್ರಾಯ ಮಾಡುತ್ತಾರೆ. ಸ್ಟೂಪಿಡ ಮೆಸೆಜ ಮಾಡ್ತಾರೆ ಇಲ್ಲ ಫೋನ ಕಾಲ್ ಮಾಡಿ ತಲೆ ತಿಂತಾರೆ. ಸೋ ನಿಮ್ಮ ಮೊಬೈಲನಲ್ಲಿ ಏನಿಟೈಮ ಕಾಲ್ ರೆಕಾರ್ಡರನ್ನು ಆನ ಮಾಡಿಡಿ. ಅವರು ತೊಂದರೆ ಕೊಟ್ಟಾಗ ಸಿಂಪ್ಲಿ ಅವರನ್ನು ಎಕ್ಸಪೋಜ ಮಾಡಿಬಿಡಿ, ಅಂಥವರಿಗೆ ಅದೇ ಶಿಕ್ಷೆ. ನೀವು ಸುಮ್ಮೆ ಇದಿರಿ ಅಂತಾನೇ‌ ಇಂಥವರ ಸಂ‌ಖ್ಯೆ ಹೆಚ್ಚಾಗುತ್ತಿದೆ. ನೀವು ಒಬ್ಬರನ್ನು ದಂಡಿಸಿದರೆ ಸಾಕು ನೂರು ಜನ ಹೆದರಿ ತಾನಾಗಿಯೇ ಸರಿ ದಾರಿಗೆ ಬರುತ್ತಾರೆ.‌ ಹುಡುಗರು ಅಷ್ಟೇ, ನೀವು ಇದೇ ಟೆಕ್ನಿಕನ್ನು ಯುಜ ಮಾಡಿಕೊಂಡು ಸೇಫಾಗಿ. ಏಕೆಂದರೆ ಈಗ ಹುಡುಗರ ಮೇಲೂ ದಬ್ಬಾಳಿಕೆಗಳಾಗುತ್ತಿವೆ, ಹುಡುಗಿಯರಿಂದ ಕಿರುಕುಳಗಳು, ಬೆದರಿಕೆಗಳು ಬರುತ್ತಿವೆ, ಸುಳ್ಳು ಕೇಸಾಗಿ ಮಾನ ಕಳೆಯುವ ಕುತಂತ್ರಗಳಾಗುತ್ತಿವೆ. ಸೋ ನೀವು ಅಲರ್ಟಾಗಿರಿ.

ಓಕೆ ಗೆಳೆಯರೇ, ಈ ರೀತಿ ನೀವು ದುಷ್ಟರೊಂದಿಗೆ ಡೀಲ ಮಾಡಬಹುದು. ಸಣ್ಣಪುಟ್ಟ ದುಷ್ಟರು ನಿಮ್ಮ ದಾರಿಗೆ ಅಡ್ಡ ಬಂದರೆ‌ ಅವರನ್ನು ಇಗ್ನೋರ ಮಾಡಿ ಅವರು ನಿಮ್ಮಿಂದ ದೂರ ಹೋಗುತ್ತಾರೆ. ಕ್ಯಾರೆಕ್ಟರಲೆಸ್ ದುಷ್ಟರು ನಿಮ್ಮನ್ನು ಅಡ್ಡದಾರಿಗೆಳೆಯಲು ಟ್ರಾಯ ಮಾಡಿದರೆ ಅವರನ್ನು ಎಕ್ಸಪೋಜ‌ ಮಾಡಿ ನಮ್ಮ ಕಾನೂನು ಅವರಿಗೆ ತಕ್ಕ ಶಾಸ್ತಿ ಮಾಡುತ್ತದೆ. ಎಲ್ಲದಕ್ಕಿಂತ ಬೆಸ್ಟ ಉಪಾಯವೆಂದರೆ‌ ನೀವು ಬಲಿಷ್ಟರಾಗಿ.‌ ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಟರಾಗಿ. ಆಗ ದುಷ್ಟರಿಗೆ ನಿಮ್ಮೆಡೆಗೆ‌ ಕಣ್ಣೆತ್ತಿ‌ ನೋಡುವ ಧೈರ್ಯ ಕೂಡ ಆಗುವುದಿಲ್ಲ. ನೀವು ಬಲಿಷ್ಟರಾದರೆ ನೀವು ಸೇಫಾಗಿರ್ತಿರಿ, ಮುಂದೆ ನಿಮ್ಮ ಮಕ್ಕಳು ಸೇಫಾಗಿರ್ತಾರೆ. ಸೋ ಬಲಿಷ್ಟರಾಗಲು ಟ್ರಾಯ ಮಾಡಿ. All the Best and Thanks You…

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books