ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada – Exam Study Tips in Kannada

You are currently viewing ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada – Exam Study Tips in Kannada

ಹಾಯ್ ಗೆಳೆಯರೇ, ಕಳೆದ ಎಪಿಸೋಡನಲ್ಲಿ ನಾನು ಸ್ಟಡಿ ಮೋಟಿವೇಷನ ಬಗ್ಗೆ ಡಿಸ್ಕಸ ಮಾಡಿದ್ದೆ‌. ಇವತ್ತಿನ ಎಪಿಸೋಡನಲ್ಲಿ ಎಫೆಕ್ಟಿವ್ ಸ್ಟಡಿ ಟಿಪ್ಸಗಳ ಬಗ್ಗೆ ನೋಡೋಣಾ. ನಾನು 10th ಎಕ್ಸಾಮಲ್ಲಿ ಹಾಗೂ ಡಿಗ್ರಿ ಎಕ್ಸಾಮಗಳಲ್ಲಿ ಸ್ಕೋರ ಮಾಡಲು ಯುಜ ಮಾಡಿದ ಟ್ರಿಕ್ಸಗಳನ್ನೇ ನಾನೀ ಎಪಿಸೋಡನಲ್ಲಿ ಶೇರ್ ಮಾಡುವೆ‌. ನನ್ನ 10th Marks card ಇಂತಿದೆ. ನನ್ನ ಮಾರ್ಕ್ಸ ಇಷ್ಟವಾದರೆ ನೀವು ನನ್ನ ಟಿಪ್ಸಗಳನ್ನು ಫಾಲೋ ಮಾಡಿ, ಇಷ್ಟವಾಗದಿದ್ದರೆ ನೆಗ್ಲೆಕ್ಟ ಮಾಡಿ. ಏನಿವೇ ಯಾವುದೇ ಎಕ್ಸಾಮನ್ನು ಈಜಿಯಾಗಿ ಕ್ರ್ಯಾಕ್ ಮಾಡಲು, ಯಾವುದೇ ಎಕ್ಸಾಮಲ್ಲಿ ಟಾಪ ಮಾಡಲು ಬೆಸ್ಟ ಟಿಪ್ಸಗಳು ಇಲ್ಲಿವೆ ;

ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada - Exam Study Tips in Kannada

ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada

Tip 1 : First Develop the Interest

ನನಗೆ ಬಹಳಷ್ಟು ವಿದ್ಯಾರ್ಥಿಗಳು “ಸರ್ ಓದೋಕೆ ಇಂಟರೆಸ್ಟ ಬರ್ತಿಲ್ಲ, ಏನಾದರೂ ಐಡಿಯಾ ಕೊಡಿ” ಅಂತಾ ಕೇಳ್ತಾನೆ ಇರ್ತಾರೆ. ಅಟೋಮ್ಯಾಟಿಕಾಗಿ ಇಂಟರೆಸ್ಟ ಬರಲ್ಲ‌‌. ನೀವು ಇಂಟರೆಸ್ಟನ್ನು ಕ್ರಿಯೆಟ ಮಾಡಿಕೊಳ್ಳಬೇಕು. ನಿಮ್ಮ ನೋವುಗಳಿಂದ, ಸಮಸ್ಯೆಗಳಿಂದ, ನಿಮಗಾಗಿರುವ ಅವಮಾನ, ಅನ್ಯಾಯದಿಂದ, ನಿಮಗೆ ಸಿಕ್ಕ ರಿಜೆಕ್ಷನನಿಂದ ಮೊಟಿವೇಟ ಆಗಿ ಓದಲು ಸ್ಟಾರ್ಟ ಮಾಡಬೇಕು. ಈ ನೋವುಗಳಿಂದ ಹಾಗೂ ನಿಮ್ಮ ಕೊರತೆಗಳಿಂದ ನೀವು ಮೊಟಿವೇಟ ಆಗಬೇಕು, ಅವೇರ್ ಆಗಬೇಕು. ಇವುಗಳನ್ನು ಸಾಲ್ವ ಮಾಡುವ ಗುರಿಯೊಂದಿಗೆ ನೀವು ‌ಓದಿನಲ್ಲಿ ಇಂಟರೆಸ್ಟ ಕ್ರಿಯೆಟ ಮಾಡಿಕೊಳ್ಳಬೇಕು. ಮೊದಲು‌ ಓದಿನಲ್ಲಿ ಇಂಟರೆಸ್ಟನ್ನು ಕ್ರಿಯೆಟ ಮಾಡಿಕೊಳ್ಳಿ, ಆನಂತರ ಓದಲು ಸ್ಟಾರ್ಟ ಮಾಡಿ.

ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada - Exam Study Tips in Kannada

Tip 2 : Delete Distractions

ನಿಮ್ಮ‌ ಓದಿಗೆ ಡಿಸ್ಟರ್ಬ ಮಾಡುತ್ತಿರುವ ಎಲ್ಲ ಡಿಸ್ಟ್ರ್ಯಾಕ್ಷನ್ಸಗಳನ್ನು ಡೀಲಿಟ ಮಾಡಿ. ಎಕ್ಸಾಮ ಮುಗಿಯುವ ತನಕ ನಿಮ್ಮ ಗೊಳ್ಳು ಗೆಳೆಯರಿಗೆ, ಗರ್ಲಫ್ರೆಂಡ, ಬಾಯಫ್ರೆಂಡಗಳಿಗೆ ಸ್ವಲ್ಪ ದೂರವಿರಲು ಹೇಳಿ. ಪದೇಪದೇ ಡಿಸ್ಟರ್ಬ ಮಾಡದಂತೆ ವಾರ್ನ ಮಾಡಿ. ಟಿವಿ ನೋಡುವುದನ್ನು ಹಾಗೂ ಮೊಬೈಲ್ ಫೋನ್ ಯುಜ ಮಾಡುವುದನ್ನು ಕಮ್ಮಿ ಮಾಡಿ. ಸಾಧ್ಯವಾದರೆ ಕಂಪ್ಲಿಟಾಗಿ ಅವೈಡ ಮಾಡಿ. ನಿಮ್ಮ‌ ಓದಿಗೆ ಭಂಗ ತರುವ ಎಲ್ಲ ದುಶ್ಚಟಗಳನ್ನು, ದುಷ್ಟವಸ್ತುಗಳನ್ನು, ವ್ಯಕ್ತಿಗಳನ್ನು ಕಂಪ್ಲಿಟಾಗಿ ಅವೈಡ ಮಾಡಿ. ಎಲ್ಲ ಟೈಮಪಾಸ ವಿಷಯಗಳಿಗೆ ಗುಡ್ ಬಾಯ್ ಹೇಳಿ, ಫುಲ್ಲಿ ಫೊಕಸ್ಡಾಗಿ ಓದಲು ಸ್ಟಾರ್ಟ ಮಾಡಿ.

ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada - Exam Study Tips in Kannada

Tip 3 : Don’t Take Unnecessary Tensions. Take it Easy

ನೀವು ಬರೆಯುತ್ತಿರುವ ಎಕ್ಸಾಮನ್ನು ಈಜಿಯಾಗಿ ಹ್ಯಾಂಡಲ್ ಮಾಡಿ. ಅನಾವಶ್ಯಕ ಟೆನ್ಶನಗಳನ್ನು ತೆಗೆದುಕೊಳ್ಳಬೇಡಿ. ಎಕ್ಸಾಮ ಬಂತು ಅಂದ್ರೆ‌‌‌ ಸಾಕು ಎಲ್ಲರು ನಿಮ್ಮ ಮೇಲೆ ಪ್ರೆಶ್ಶರ‌ ಕ್ರಿಯೆಟ ಮಾಡಿ ನಿಮ್ಮನ್ನು ಹೆದರಿಸುತ್ತಾರೆ. ಆದರೆ ನೀವು ಹೆದರಬೇಡಿ. ಇದು ಬರೀ ಒಂದು ಎಕ್ಸಾಮ ಎಂಬುದನ್ನು ಅರ್ಥಮಾಡಿಕೊಳ್ಳಿ. ಇದು ನಿಮಗೆ ಇಂಪಾರಟಂಟಾಗಿದೆ ಎಂಬುದು ನಿಜ. ಆದರೆ ಇದೇ‌ ಎಲ್ಲ ಅಲ್ಲ. ಅದಕ್ಕಾಗಿ ಎಕ್ಸಾಮನ ಒತ್ತಡದಿಂದ, ಭಯದಿಂದ ಹೊರಬನ್ನಿ ಹಾಗೂ ಅದನ್ನು ಈಜಿಯಾಗಿ ಹ್ಯಾಂಡಲ ಮಾಡಿ. ಕೂಲ ಕ್ಯಾಪ್ಟನ್ ಎಮ್. ಎಸ್.ಧೋನಿಯಂತೆ ನಿಮ್ಮ ಎಕ್ಸಾಮ ಮ್ಯಾಚನ್ನು ಕೂಲಾಗಿ ಆಡಿ ಗೆಲ್ಲಿ.

ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada - Exam Study Tips in Kannada

Tip 4 : Schedule Your Study in Small Parts

ನಿಮ್ಮ ಎಂಟೈರ್ ಸ್ಟಡಿಯನ್ನು ಸಣ್ಣಸಣ್ಣ ಶೆಡ್ಯೂಲಗಳಲ್ಲಿ ಡಿವೈಡ ಮಾಡಿ. ಬಹಳಷ್ಟು ಜನ ಸ್ಟೂಡೆಂಟಗಳು ಕಂಟಿನ್ಯುವಸಾಗಿ ನಾಲ್ಕೈದು ಗಂಟೆ ಸ್ಟಡಿ ಮಾಡುತ್ತಾರೆ. ಆದರೆ ನೀವು ಆ ರೀತಿ ಮಾಡಬೇಡಿ. ನೀವು ಪ್ರತಿ ಸ್ಕೋರಿಂಗ್ ಸಬ್ಜೆಕ್ಟಗೆ ಒಂದು ಗಂಟೆ‌ ಕೊಡಿ. ನಂತರ 15 ನಿಮಿಷ ಬ್ರೇಕ್ ತೆಗೆದುಕೊಳ್ಳಿ. ಬ್ರೇಕನ ನಂತರ ಮತ್ತೆ ಒಂದು ಗಂಟೆ ಮತ್ತೊಂದು ಸ್ಕೋರಿಂಗ್ ಸಬ್ಜೆಕ್ಟಗೆ ಕೊಡಿ. ನಂತರ ಮತ್ತೆ ಬ್ರೇಕ್ ತೆಗೆದುಕೊಳ್ಳಿ. ಲಾಂಗ್ವೇಜ್ ಸಬ್ಜೆಕ್ಟಗಳಿಗೆ ಅರ್ಧಗಂಟೆ ಕೊಡಿ ಸಾಕು. ಈ ರೀತಿ ನಿಮ್ಮ‌ ಸ್ಟಡಿಯನ್ನು ಸಣ್ಣಸಣ್ಣ ಶೆಡ್ಯುಲಗಳಲ್ಲಿ ಡಿವೈಡ ಮಾಡಿ. ಏಕೆಂದರೆ ನಿಮ್ಮ ಬ್ರೇನನ ಆ್ಯಕ್ಸೆಪ್ಟನ್ಸ ಕ್ಯಾಪ್ಯಾಸಿಟಿ ಬರೀ 45 Minutes ಇದೆ ಅಂತಾ ನಮ್ಮ ಟೀಚರ ಹೇಳ್ತಾರೆ. ಅದು ನಿಜ ಅಂತಾ ನನಗನಿಸುತ್ತೆ‌. ಸೋ ದೊಡ್ಡ ದೊಡ್ಡ ಸ್ಟಡಿ ಹವರಗಳ ಬದಲಾಗಿ ಸಣ್ಣಸಣ್ಣ ಸ್ಟಡಿ ಹವರಗಳನ್ನು ಫಾಲೋ ಮಾಡಿ.

ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada - Exam Study Tips in Kannada

Tip 5 : Solve Old Question Papers

ಹಳೇ ‌ಕ್ವೆಷ್ಶನ ಪೇಪರಗಳನ್ನು ಕಂಪಲ್ಸರಿಯಾಗಿ ಸಾಲ್ವ ಮಾಡಿ. ಅಟಲಿಸ್ಟ ಮೂರು ವರ್ಷದ ಕ್ವೇಷ್ಶನ ಪೇಪರಗಳನ್ನು ನೀವು ಸಾಲ್ವ ಮಾಡಲೇಬೇಕು. ಅವುಗಳನ್ನು ಸಾಲ್ವ ಮಾಡಿದಾಗಲೇ ನಿಮಗೆ ನಿಮ್ಮ‌ ಎಕ್ಸಾಮನ ಬಗ್ಗೆ ಒಂದು ಐಡಿಯಾ ಬರುತ್ತದೆ. ಜೊತೆಗೆ ಕಾನ್ಫಿಡೆನ್ಸ್ ಬರುತ್ತದೆ. ಅದಕ್ಕಾಗಿ ಒಲ್ಡ ಕ್ವೇಷ್ಶನ ಪೇಪರಗಳನ್ನು ಕಂಪಲ್ಸರಿಯಾಗಿ ಸಾಲ್ವ ಮಾಡಿ.

ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada - Exam Study Tips in Kannada

Tip 6 : Don’t Memorize the Concepts – Understand the Concepts Clearly

ನಿಮ್ಮ‌ ಸ್ಟಡಿಯಲ್ಲಿ ಬರೋ ಕಾನ್ಸೆಪ್ಟಗಳನ್ನು ಯಾವುದೇ ಕಾರಣಕ್ಕೂ ಬಾಯಿಪಾಠ ಮಾಡಬೇಡಿ. ಎಲ್ಲ ಕಾನ್ಸೆಪ್ಟಗಳನ್ನು ಕ್ಲಿಯರಾಗಿ ಅರ್ಥಮಾಡಿಕೊಳ್ಳಿ. ಬಾಯಿಪಾಠ ಮಾಡೋದು ಒಳ್ಳೇ ರೂಢಿಯಲ್ಲ. ನೀವು ಬಾಯಿಪಾಠ ಮಾಡಿ ಒಂದು ಎಕ್ಸಾಮ ಕ್ಲಿಯರ್ ಮಾಡಬಹುದು. ಆದರೆ ಲೈಫಿನ ಎಕ್ಸಾಮವನ್ನು ಕ್ಲಿಯರ್ ಮಾಡಬೇಕೆಂದರೆ ನಿಮಗೆ ನಾಲೇಡ್ಜ ಬೇಕೆಬೇಕು. ಸೋ ಯಾವುದೇ ವಿಷಯವನ್ನು ಬಾಯಿಪಾಠ ಮಾಡಬೇಡಿ, ಅದನ್ನು ಕ್ಲಿಯರಾಗಿ ಅರ್ಥಮಾಡಿಕೊಳ್ಳಿ. ನಿಮ್ಮತ್ರ ಒಂದು ವರ್ಷ ಟೈಮಿರುತ್ತೆ, ಅದನ್ನು ಸರಿಯಾಗಿ ಯುಟಿಲೈಜ ಮಾಡಿಕೊಂಡರೆ ನಿಮಗೆ ಸ್ಟಡಿ ಮಾಡಲು ಸಾಕಷ್ಟು ಟೈಮ‌ ಸಿಕ್ಕೆ ಸಿಗುತ್ತೆ. ಕ್ವಾಲಿಟಿ ಸ್ಟಡಿ ಮಾಡಿ, ಕ್ವಾಂಟಿಟಿ ಸ್ಟಡಿ ಮಾಡಬೇಡಿ. ನೀವು ಎಷ್ಟು ಗಂಟೆ ಸ್ಟಡಿ ಮಾಡಿದೀರಿ ಎಂಬುದು ಇಂಪಾರಟಂಟಲ್ಲ, ನಿಮಗೆ ಎಷ್ಟು ಅರ್ಥವಾಗಿದೆ ಎಂಬುದಷ್ಟೇ ಇಂಪಾರಟಂಟಾಗುತ್ತದೆ. ಅದಕ್ಕಾಗಿ ಕ್ವಾಲಿಟಿ ಸ್ಟಡಿ ಮಾಡಿ. ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ.

ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada - Exam Study Tips in Kannada

Tip 7 : Avoid Group Study and Online Study

ಗ್ರೂಪ್ ಸ್ಟಡಿ ಮತ್ತು ಆನ್ಲೈನ್ ಸ್ಟಡಿಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ. ನಂಗೊತ್ತು ನೀವು ಗ್ರೂಪ್ ಸ್ಟಡಿಯಲ್ಲಿ ಸ್ಟಡಿಗಿಂತ ಜಾಸ್ತಿ ಅನವಾಂಟೆಡ್ ಗ್ರೂಪ್ ಡಿಸ್ಕಶನಗಳನ್ನು ಮಾಡ್ತೀರಾ ಅಂತಾ. ಇನ್ನು ಆನ್ಲೈನ್ ಸ್ಟಡಿ ಅಂತೂ ಫುಲ್ಲಿ ವೇಸ್ಟ್ ಆಫ್ ಟೈಮ್ & ಕಾನ್ಸಂಟ್ರೇಶನ್ ಆಗಿದೆ. ಗೂಗಲಗೆ ಕಾಲಿಡುವಾಗ ಸೈನ್ಸ್ ಸ್ಟೂಡೆಂಟ್ ಆಗಿ ಹೋದವರು ಬರೋವಾಗ ಸನ್ನಿ ಲಿಯೋನ್ ಜೊತೆ ಹೊರ ಬರ್ತೀರಾ. ಅದಕ್ಕಾಗಿ ಗ್ರೂಪ್ ಸ್ಟಡಿ ಮತ್ತು ಆನ್ಲೈನ್ ಸ್ಟಡಿಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.

ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada - Exam Study Tips in Kannada

Tip 8 : Do Self Study

ಸೆಲ್ಫ್ ಸ್ಟಡಿ ಮಾಡಿ. ಬೇರೆಯವರ ನೋಟ್ಸಗಳನ್ನು ಜೆರಾಕ್ಸ್ ಮಾಡಿಸಿ ತಂದು ಓದಬೇಡಿ. ಟೀಚರ್ ಮೇಲೆ ಬಹಳಷ್ಟು ಡಿಪೆಂಡ್ ಆಗಬೇಡಿ. ನಿಮ್ಮದೇ ಆದ ಸ್ವಂತ ನೋಟ್ಸಗಳನ್ನು ಪ್ರಿಪೇರ್ ಮಾಡಿ. ನಿಮ್ಮ ನೋಟ್ಸಗಳನ್ನು ಹಾಗೂ ಸ್ಟಡಿ ಮೆಟೀರಿಯಲಗಳನ್ನು ನೀವೇ ಪ್ರಿಪೇರ್ ಮಾಡಿ. ನೋಟ್ ಮೇಕಿಂಗ್ ಕಲೆಯನ್ನು ಈಗಲೇ ಕಲಿಯಿರಿ. ಇದು ಮುಂದೆ ಹೈಯರ್ ಸ್ಟಡಿಜಗಳಲ್ಲಿ ಬಹಳಷ್ಟು ಹೆಲ್ಪಾಗುತ್ತೆ. ದೊಡ್ಡ ದೊಡ್ಡ ಕಾನ್ಸೆಪ್ಟಗಳನ್ನು ಸಣ್ಣ ಸಣ್ಣ ನೋಟ್ಸಗಳ ಮೂಲಕ, ಶಾರ್ಟ್ ಫಾರ್ಮುಲಾಗಳ ಮೂಲಕ ಹಾಗೂ ಫನ್ನಿ ಡೈಗ್ರಾಮಗಳ ಮೂಲಕ ನೆನಪಿಡಿ. ಇವು ನಿಮಗೆ ಅರ್ಥವಾದರೆ, ಎಕ್ಸಾಮಲ್ಲಿ ನೆನಪಾದ್ರೆ ಸಾಕು. ಈ ರೀತಿ ಸೆಲ್ಫ್ ಸ್ಟಡಿ ಮಾಡಿ. ನಿಮ್ಮ ಸ್ಟಡಿಯನ್ನು ಎಂಜಾಯ್ ಮಾಡಿ. ಖುಷಿಯಾಗಿ ಸ್ಟಡಿ ಮಾಡಿ.

ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada - Exam Study Tips in Kannada

Tip 9 : Follow R-R-R (Read, Recall and Revision)

Read, Recall and Revision ಈ RRRಗಳನ್ನು ಫಾಲೋ ಮಾಡಿ. ಮೊದಲು ಸರಿಯಾಗಿ ಓದಿ, ನಂತರ ಓದಿದನ್ನು ರಿಕಾಲ್ ಮಾಡಿಕೊಳ್ಳಿ, ಆನಂತರ ಅದನ್ನ ಪದೇಪದೇ ರಿವಿಜನ್ ಮಾಡಿ. ಈ RRR ಫಾರ್ಮುಲಾವನ್ನು ರಿಪೀಟ್ ರಿಪೀಟಾಗಿ ಫಾಲೋ ಮಾಡಿ. ನಿಮ್ಮ ರೈಟಿಂಗ್ ಸ್ಪೀಡ್ ಹಾಗೂ ಹ್ಯಾಂಡ್ ರೈಟಿಂಗನ್ನು ಇಂಪ್ರೂವ್ ಮಾಡಿಕೊಳ್ಳಿ. ನಿಮ್ಮ ಸ್ಕೂಲಲ್ಲಿ ನಡೆಸುವ ಎಲ್ಲ ಟೆಸ್ಟ್ ಸೀರೀಸಗಳಿಗೆ ಕಂಪಲ್ಸರಿಯಾಗಿ ಅಟೆಂಡ್ ಆಗಿ. ನಿಮ್ಮ ಸ್ಕೂಲಲ್ಲಿ ಅಥವಾ ಕಾಲೇಜನಲ್ಲಿ ನಿಮಗೆ ಸೆಮಿನಾರ್ ಮಾಡುವ ಅವಕಾಶ ಸಿಕ್ರೆ ಅದನ್ನು ಮಿಸ್ ಮಾಡಿಕೊಳ್ಳಬೇಡಿ. ಸೆಮಿನಾರ್ ಮಾಡಿ. ಬೇರೆಯವರಿಗೆ ಟೀಚ್ ಮಾಡಿದಷ್ಟು ನಿಮಗೆ ಕಾನ್ಸೆಪ್ಟಗಳು ಕ್ಲಿಯರ್ ಆಗುತ್ತವೆ. ನೀವು ಪರ್ಫೆಕ್ಟ್ ಆಗುತ್ತೀರಿ. ಅದಕ್ಕಾಗಿ ಚಾನ್ಸ್ ಸಿಕ್ರೆ ಟೀಚ್ ಮಾಡಿ. ವೀಕ್ ಸಬ್ಜೆಕ್ಟಗಳಿಗೆ ಬಹಳಷ್ಟು ವರಿ ಮಾಡ್ಕೊಂಡು ಫೆವರೇಟ್ ಸಬ್ಜೆಕ್ಟಗಳಲ್ಲಿ ಕಡಿಮೆ ಸ್ಕೋರ್ ಮಾಡಬೇಡಿ. ಫೆವರೇಟ್ ಸಬ್ಜೆಕ್ಟಗಳಲ್ಲಿ ಫುಲ್ ಸ್ಕೋರ್ ಮಾಡಿ. ಈಜಿ ಸಬ್ಜೆಕ್ಟಗಳಲ್ಲಿ ನೀವು ಸೆಂಚುರಿ ಮಾಡಲೇಬೇಕು. ಈಜಿ ಸಬ್ಜೆಕ್ಟಗಳಲ್ಲಿ ನೀವು ಸೆಂಚುರಿ ಮಾಡದಿದ್ರೆ Rank ಮಿಸ್ಸಾಗುತ್ತೆ. ವೀಕ್ ಸಬ್ಜೆಕ್ಟಗಳಲ್ಲಿ ಸ್ಟ್ರಾಂಗ್ ಆಗಲು ಟ್ರೈ ಮಾಡಿ. ಆದರೆ ವೀಕ್ ಸಬ್ಜೆಕ್ಟಗಳಿಗೆ ಜಾಸ್ತಿ ಟೈಮ್ ಕೊಟ್ಟು ಈಜಿ ಸಬ್ಜೆಕ್ಟಗಳಲ್ಲಿ ಕಡಿಮೆ ಸ್ಕೋರ್ ಮಾಡಬೇಡಿ. ಎರಡನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಿ.

ಯಾವುದೇ ಎಕ್ಸಾಮಲ್ಲಿ‌ ಟಾಪ ಮಾಡಲು ಈಜಿ ಟಿಪ್ಸ : Best Tips to Crack Any Exam Easily in Kannada - Exam Study Tips in Kannada

Tip 10 : Stay Fit and Healthy

ಯಾವಾಗಲೂ ಫಿಟ್ & ಹೆಲ್ದಿಯಾಗಿರಿ. ದಿನಾಲು ಮಾರ್ನಿಂಗ್ ಬೇಗನೆ ಎದ್ದೇಳಿ. ಸ್ವಲ್ಪ ಯೋಗ, ಎಕ್ಸರಸೈಜ್ ಹಾಗೂ ಮೆಡಿಟೇಶನ್ ಮಾಡಿ. ಸ್ವಲ್ಪ ಟೈಮ್ ಫ್ರೀ ಮಾಡ್ಕೊಂಡು ಆಟವಾಡಿ ರಿಲ್ಯಾಕ್ಸ್ ಆಗಿ. ವಿಡಿಯೋ ಗೇಮ್ ಆಡಬೇಡಿ. ಗ್ರೌಂಡಿಗಿಳಿದು ಆಟವಾಡಿ. ನಿಮ್ಮ ಮೈಂಡನ್ನು ಕಂಟ್ರೋಲನಲ್ಲಿಡಿ. ಚೆನ್ನಾಗಿ ಊಟ ಮಾಡಿ, ಸಾಕಷ್ಟು ನೀರ್ ಕುಡಿಯಿರಿ, ಚೆನ್ನಾಗಿ ನಿದ್ದೆ ಮಾಡಿ. ನಿದ್ದೆಗೆಟ್ಟು ಬಾಯಿಪಾಠ ಮಾಡಿ ಏನು ಯುಜ್ ಇಲ್ಲ. ಯಾವುದೇ ತರಹದ ಟೆನ್ಶನ್ ಇಲ್ಲದೆ ಚೆನ್ನಾಗಿ ಸ್ಟಡಿ ಮಾಡಿ. ಸ್ಟಡಿ ಮಾಡಲು ನೈಟ್ ಬೆಸ್ಟ್, ಮಾರ್ನಿಂಗ್ ಬೆಸ್ಟ್ ಅಂತೇನು ಇರಲ್ಲ. ನಿಮಗೆ ಯಾವಾಗ ಇಷ್ಟವಾಗುತ್ತೋ ಆವಾಗ ಇಷ್ಟಪಟ್ಟು ಸ್ಟಡಿ ಮಾಡಿ. ಇಷ್ಟಪಟ್ಟು ಸ್ಟಡಿ ಮಾಡಿದ್ರೆ ಎಲ್ಲವೂ ತಲೆಯೊಳಗೆ ಇಳಿಯುತ್ತೆ.

ಇವಿಷ್ಟು ನನ್ನ ಪರ್ಸನಲ್ ಸ್ಟಡಿ ಟ್ರಿಕ್ಸಗಳು. ಇಷ್ಟ ಆದ್ರೆ ಫಾಲೋ ಮಾಡಿ, ಕಷ್ಟ ಆದ್ರೆ ನೆಗ್ಲೆಕ್ಟ್ ಮಾಡಿ. All the best and Thanks You…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books