ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn’t be done in Facebook in Kannada

You are currently viewing ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn’t be done in Facebook in Kannada

ಜೀವನದಲ್ಲಿ ಜನರಿಗೆ ಮಾಡಲು ನೂರೆಂಟು ಕೆಲಸಗಳಿವೆ. ಆದರೆ ನಮ್ಮ ಜನ ಎಲ್ಲ ಬಿಟ್ಟು ಮೂರವೋತ್ತು ಫೇಸ್ಬುಕಲ್ಲಿ ಕಾಗೆ ಹಾರಿಸುವ ಕೆಲಸ ಮಾಡುತ್ತಾರೆ. ಫೇಸ್ಬುಕನ್ನು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರೂ ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ಫೇಸ್ಬುಕನ್ನು ಬಳಸುವುದು ತಪ್ಪಲ್ಲ. ಆದರೆ ಅದನ್ನು ಬೇಜವಾಬ್ದಾರಿತನದಿಂದ ಬೇಕಾಬಿಟ್ಟಿಯಾಗಿ ಬಳಸುವುದು ಶುದ್ಧ ತಪ್ಪು. ಕೆಲವರು ತಿಳಿದೋ ಅಥವಾ ತಿಳಿಯದೇನೋ ಮಾಡುವ ಕೆಲಸಗಳು ಅವರಿಗೆ ಅನಾವಶ್ಯಕವಾಗಿ ಕಂಟಕಗಳನ್ನು ತಂದಿಡುತ್ತವೆ. ಮೂರ್ಖರಿಗೆ ಬುದ್ಧಿವಾದ ಹೇಳುವ ಮುಠ್ಠಾಳತನವನ್ನು ನಾನೆಂದೂ ಮಾಡಲು ಇಷ್ಟಪಡುವುದಿಲ್ಲ. ಆದರೆ ಈಗ ಆ ಸಂದರ್ಭ ಬಂದಿರುವುದು ನನ್ನ ದೌರ್ಭಾಗ್ಯ. ಫೇಸ್ಬುಕನಲ್ಲಿ ತಪ್ಪಿಯೂ ಮಾಡಬಾರದ ಕೆಲಸಗಳು ಇಂತಿವೆ ;

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

೧) ಫೇಸ್ಬುಕ್ ಇರುವುದು ಎಂಟರಟೈನಮೆಂಟಗಾಗಿಯೇ ಹೊರತು ಪರ್ಸನಲ್ ವಿಷಯಗಳನ್ನು ಶೇರ್ ಮಾಡುವುದಕ್ಕಾಗಿ ಅಲ್ಲ. ಫೇಸ್ಬುಕಲ್ಲಿ ಲೈಕಗಳ ಆಸೆಗೋ ಇಲ್ಲ ಕಮೆಂಟಗಳ ಕನಿಕರಕ್ಕೋ ನಿಮ್ಮ ವೈಯಕ್ತಿಕ ವಿಷಯಗಳನ್ನು ಚಾಚು ತಪ್ಪದೇ ಪೋಸ್ಟ ಮಾಡುವುದು ಅಷ್ಟೇನೂ ಸುರಕ್ಷಿತವಲ್ಲ. ಫೇಸ್ಬುಕಲ್ಲಿ ನಿಮ್ಮ ಮನೆ ವಿಳಾಸ, ಫೋನ್ ನಂಬರ ಇತ್ಯಾದಿಯೆಲ್ಲ ಹಾಕುವ ಅವಶ್ಯಕತೆ ಏನಿಲ್ಲ. ನಿಮ್ಮ ಖಾಸಗಿ ಸಮಸ್ಯೆಗಳನ್ನು ಫೇಸ್ಬುಕಲ್ಲಿ ಶೇರ್ ಮಾಡುವುದರಿಂದ ನಿಮಗೆ ಸೋಲುಷನ್ ಸಿಗಲ್ಲ. ಅದಕ್ಕಾಗಿ ನಿಮ್ಮ ಪರ್ಸನಲ್ ವಿಷಯಗಳನ್ನು ಯಾವುದೇ ಕಾರಣಕ್ಕೂ ಫೇಸ್ಬುಕಲ್ಲಿ ಪೋಸ್ಟ ಮಾಡದಿರುವುದು ಒಳ್ಳೆಯದು…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

೨) ಫೇಸ್ಬುಕಲ್ಲಿ ಪ್ರತಿಸಲ ನಿಮ್ಮ ಕರೆಂಟ ಲೋಕೆಷನನ್ನು ಪೋಸ್ಟ ಮಾಡುವುದು ಕ್ಷೇಮವಲ್ಲ. ನೀವು ಯಾವ ಹೋಟೆಲಗೆ ಹೋಗಿದ್ದೀರಿ, ಅಲ್ಲೇನು ಮಾಡುತ್ತಿರುವಿರಿ ಎಂಬುದನ್ನು ಫೇಸ್ಬುಕಲ್ಲಿ ಯಾಕೆ ಪೋಸ್ಟ್ ಮಾಡಬೇಕು? ನೀವಿರುವ ಲೈವ ಲೋಕೆಷನ ತಿಳಿದು ನಿಮಗಾಗದಿರುವವರು ನಿಮಗೆ ಹಾನಿ ಮಾಡಬಹುದು. ಇಲ್ಲ ಹೊಸಬರು ಯಾವುದೋ ಒಂದು ಆಸೆಗಾಗಿ ನಿಮ್ಮ ಮೇಲೆ ಅಟ್ಯಾಕ ಮಾಡಬಹುದು. ಅದಕ್ಕಾಗಿ ನಿಮ್ಮ ಕರೆಂಟ ಲೋಕೆಷನನ್ನು ಶೇರ್ ಮಾಡಬಾರದು. ಹೋದಲೆಲ್ಲ ಸೆಲ್ಫಿ ಹೊಡೆದುಕೊಂಡು ಕರೆಂಟ ಲೋಕೆಷನ್ ಶೇರ್ ಮಾಡಿ ಬೇಡದ ಅಪಾಯಗಳನ್ನು ಆಹ್ವಾನಿಸುವುದು ಸರಿಯಲ್ಲ…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

೩) ಹುಡುಗಿಯರು ಮನೆಯಲ್ಲಿರುವ ನಾಯಿ, ಬೆಕ್ಕು ಇತ್ಯಾದಿಗಳ ಜೊತೆಗಿನ ಸೆಲ್ಫಿಗಳನ್ನು ಪೋಸ್ಟ ಮಾಡಿ ಹುಡುಗರ ನಿದ್ದೆ ಕೆಡಿಸುವುದರೊಂದಿಗೆ ಮಾನಗೇಡಿಯಾಗುವ ಅವಶ್ಯಕತೆ ಏನಿಲ್ಲ. ಹುಡುಗಿಯರು ಶೇರ್ ಮಾಡುವ ಬಹುಪಾಲು ಫೋಟೋಗಳನ್ನು ಫೇಸ್ಬುಕಲ್ಲಿರೋ ಕಿರಾತಕರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಅಲ್ಲದೆ ಅಶ್ಲೀಲವಾಗಿ ಎಡಿಟ್ ಮಾಡಿ ಅವುಗಳನ್ನು ಎಲ್ಲ ಕಡೆಗೆ ಶೇರ್ ಮಾಡುತ್ತಾರೆ. ಹೀಗಾಗಿ ಲೈಕಗಳ ಆಸೆಗಾಗಿ ಅರೆಬೆತ್ತಲೆ ಫೋಟೋಗಳನ್ನು ಪೋಸ್ಟ ಮಾಡಿದ ಎಷ್ಟೋ ಅಮಾಯಕ ಹುಡುಗಿಯರು ತಮ್ಮ ಲೈಫನ್ನು ಕಳೆದುಕೊಂಡಿದ್ದಾರೆ. ಅದಕ್ಕಾಗಿ ಯಾರೇ ಆಗಲಿ ಫೇಸ್ಬುಕಲ್ಲಿ ತಮ್ಮ ಫೋಟೋಗಳನ್ನು ಬೇಕಾಬಿಟ್ಟಿಯಾಗಿ ಪೋಸ್ಟ ಮಾಡದಿದ್ದರೆ ತುಂಬಾ ಒಳ್ಳೆಯದು…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

೪) ಫೇಸ್ಬುಕಲ್ಲಿ ಬೇರೆಯವರನ್ನು ಹೀಯಾಳಿಸುವುದು, ಕಿಂಡಲ್ ಮಾಡುವುದು, ಅಶ್ಲೀಲ ಶಬ್ದಗಳಿಂದ ನಿಂದಿಸುವುದು ಸರಿಯಲ್ಲ. ನಿಮಗೆ ಬೇರೆಯವರ ಪೋಸ್ಟ ಇಷ್ಟವಾಗದಿದ್ದರೆ ನೆಗ್ಲೆಕ್ಟ ಮಾಡಿ. ಅದನ್ನು ಬಿಟ್ಟು ಕೆಟ್ಟಕೆಟ್ಟದಾಗಿ ಕಮೆಂಟ ಮಾಡಿ ನಿಮ್ಮ ಡರ್ಟಿ ಮನಸ್ಸನ್ನು ಪ್ರದರ್ಶಿಸಬೇಡ. ನಿಮ್ಮ ಕೆಟ್ಟ ಕಮೆಂಟಗಳಿಂದ ಮತ್ತು ಮೆಸೇಜಗಳಿಂದ ಫೇಸ್ಬುಕಲ್ಲಿನ ಯಾರಿಗೂ ಮಾನಸಿಕ ಕಿರುಕುಳ ಕೊಡಬೇಡಿ. ಫೇಸ್ಬುಕಲ್ಲಿ ನೀವು ಬೇರೆಯವರಿಗೆ ಕೊಟ್ಟ ಕಿರುಕುಳ ಸಾಬೀತಾದರೆ ನಿಮಗೆ ಜೈಲು ಶಿಕ್ಷೆಯಾಗುವುದು ಖಚಿತ. ಅದಕ್ಕಾಗಿ ಎಲ್ಲರನ್ನೂ ಗೌರವಿಸಿ ಮತ್ತು ಎಲ್ಲರಿಂದಲೂ ಗೌರವಿಸಿಕೊಳ್ಳಿ…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

೫) ಮಾಡಲು ಬೇರೇನು ಕೆಲಸವಿಲ್ಲದ ಟ್ರೋಲಿಗರು ಹೇಳಿದರಂತ ಬರಗೆಟ್ಟ ಪೋಸ್ಟಗಳಲ್ಲಿ ನಿಮ್ಮ ಗೆಳೆಯರನ್ನು ಟ್ಯಾಗ ಮಾಡಿ ಅವಮಾನಿಸಬೇಡಿ. ಯಾರೋ ಹೇಳಿದರಂತ ನಿಮ್ಮ ಗೆಳೆಯರನ್ನು ಟ್ಯಾಗ ಮಾಡಿ ನಿಮ್ಮ ಸ್ನೇಹವನ್ನು ಹದಗೆಡಿಸಿಕೊಳ್ಳಬೇಡಿ. ಯಾರನ್ನು ಸಹ ಟ್ರೋಲ ಮಾಡಬೇಡಿ ಮತ್ತು ಯಾರಿಂದಲೂ ಸಹ ಟ್ರೋಲ ಮಾಡಿಸಿಕೊಳ್ಳಬೇಡಿ…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

೬) ಫೇಸ್ಬುಕಲ್ಲಿ ಯಾವುದೋ ಅಪರಿಚಿತ ಹುಡುಗಿ ಹೇಳಿದಳಂತ ಅವಳ ಫೋಟೋವನ್ನು ಯಾರೊಂದಿಗೂ ಶೇರ್ ಮಾಡಬೇಡಿ. “ನನ್ನ ಫೋಟೋ ಶೇರ್ ಮಾಡಿದರೆ, ನಿಮಗೆ ತಪ್ಪದೆ ನನ್ನ ವಾಟ್ಸಾಪ ನಂಬರ ಕೊಡುತ್ತೇನೆ…” ಎಂದೇಳಿ ಕಾಗೆ ಹಾರಿಸುವ ಹುಡುಗಿಯರನ್ನು ನಂಬಿ ಮೋಸಹೋಗಿ ನಿರಾಶರಾಗಬೇಡಿ. ಯಾಕೆಂದರೆ ಅವರು ಅಸಲಿಗೆ ಹುಡುಗಿಯರೇ ಆಗಿರುವುದಿಲ್ಲ. ಕೆಲ ಕಿಡಿಗೇಡಿ ಹುಡುಗರು ಹುಡುಗಿಯರ ಪ್ರೊಫೈಲನಿಂದ ಫೋಟೋಗಳನ್ನು ಕದ್ದು ಎಡಿಟ್ ಮಾಡಿ ತಮ್ಮ ಪೇಜ್ ಪ್ರಮೋಷನಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಾರೆ. ತೋಳಲ್ಲಿ ದುಡಿದು ತಿನ್ನುವ ತಾಕತ್ತಿಲ್ಲದ ಸೋಮಾರಿ ಹುಡುಗರು ಹುಡುಗಿಯರ ಹೆಸರಲ್ಲಿ ಇಂಥ ಮಂಗನಾಟಗಳನ್ನು ಮಾಡುತ್ತಾರೆ. ನಿಜವಾದ ಯಾವ ಹುಡುಗಿಯೂ ಹೀಗೆ ಮಾಡುವುದಿಲ್ಲ…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

೭) 18- ಆಗಿರುವವರು ಫೇಸ್ಬುಕನಲ್ಲಿ ಅಥವಾ ಗೂಗಲನಲ್ಲಿ ತಮಗೆ ಬೇಡದಿರುವ ವಿಷಯಗಳ ಕಡೆಗೆ ಗಮನ ಹರಿಸುವುದು ಸರಿಯಲ್ಲ. ಇನ್ನೂ 18+ ಆಗಿರುವವರು ನೀಲಿಚಿತ್ರಗಳನ್ನು ನೋಡಬಾರದು. ಅವುಗಳನ್ನು ನೋಡುವುದು ತಪ್ಪಲ್ಲ. ಅದು ನಿಮ್ಮ ವೈಯಕ್ತಿಕ ಆಸಕ್ತಿ ಮತ್ತು ಹಕ್ಕು. ಆದರೆ ಮೊಬೈಲನಲ್ಲಿರುವ ನಿಮ್ಮ ಪರ್ಸನಲ್ ಡೇಟಾಗಳ ಸುರಕ್ಷತೆಯ ದೃಷ್ಟಿಯಿಂದ ನೋಡದಿದ್ದರೆ ತುಂಬಾ ಒಳ್ಳೆಯದು…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

೮) ಫೇಸ್ಬುಕಲ್ಲಿಯೂ ಕಲಿಯಲು ಸಾಕಷ್ಟು ವಿಷಯಗಳು ಲಭ್ಯವಾಗಿವೆ. ನಿಮಗಿಷ್ಟವಿರುವ ಪೇಜಗಳನ್ನು ಫಾಲೋ ಮಾಡಿ ಮನರಂಜನೆಯನ್ನು ಪಡೆದುಕೊಳ್ಳಿ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಫೇಸ್ಬುಕಲ್ಲಿ ಯಾರಿಗೂ ಕೊಡಬೇಡಿ. ಬರೀ ಮೋಜಿಗಾಗಿ ಮತ್ತು ನಿಮ್ಮ ಬ್ಯುಸಿನೆಸ್ಸಿನ ಬೆಳವಣಿಗೆಗಾಗಿ ಮಾತ್ರ ಫೇಸ್ಬುಕನ್ನು ಬಳಸಿ…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

೯) ನಿಮಗೆ ಪರ್ಸನಲ್ಲಾಗಿ ಗೊತ್ತಿರದ ಯಾವುದೇ ವ್ಯಕ್ತಿಗೂ ನೀವು ಫೇಸ್ಬುಕಲ್ಲಿ ಫ್ರೆಂಡ್ ರಿಕ್ವೇಸ್ಟ ಕಳಿಸಬೇಡ. ನಿಮಗೆ ಪರ್ಸನಲ್ಲಾಗಿ ಗೊತ್ತಿರದ ವ್ಯಕ್ತಿಯ ಫ್ರೆಂಡ್ ರಿಕ್ವೇಸ್ಟನ್ನು ಸಹ ಆ್ಯಕ್ಸೇಪ್ಟ ಮಾಡಬೇಡಿ. ಫೇಸ್ಬುಕಲ್ಲಿ ಹೊಸ ಪ್ರೇಯಸಿಯರನ್ನು ಹುಡುಕಾಡಬೇಡಿ. ಅಪರಿಚಿತರೊಂದಿಗೆ ಯಾವುದೇ ಕಾರಣಕ್ಕೂ ಚಾಟಿಂಗ್ ಇತ್ಯಾದಿಯೆಲ್ಲ ಮಾಡಬೇಡಿ. ಅನಾವಶ್ಯಕವಾಗಿ ಯಾರಿಗೂ ನಿಮ್ಮ ಮೊಬೈಲ್ ನಂಬರ್ ಕೊಡಬೇಡಿ. ಯಾಕೆಂದರೆ ಫೇಸ್ಬುಕಲ್ಲಿ ಅಸಲಿ ವ್ಯಕ್ತಿಗಳಿಗಿಂತ ನಕಲಿ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಯಾರು ಯಾವ ಉದ್ದೇಶವಿಟ್ಟುಕೊಂಡು ಫೇಸ್ಬುಕನ್ನು ಬಳಸುತ್ತಿದ್ದಾರೆ ಎಂಬುದು ಅವರಿಗಷ್ಟೇ ಗೊತ್ತು. ಅದಕ್ಕಾಗಿ ಅಪರಿಚಿತರಿಗೆ ಅಪರಿಚಿತರಾಗಿಯೇ ಇರುವುದು ತುಂಬಾ ಒಳ್ಳೆಯದು…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

೧೦) ಬಿಟ್ಟಿಯಾಗಿ ಸಿಕ್ಕಿರೋ ಪಬ್ಲಿಕ್ ವೈಫೈನಿಂದ ನಿಮ್ಮ ಫೇಸ್ಬುಕನ್ನು ತೆರೆಯಬೇಡಿ. ಯಾಕೆಂದರೆ ಈ ಸಮಯದಲ್ಲಿ ನಿಮ್ಮ ಪರ್ಸನಲ್ ಡೇಟಾ ಲೀಕ್ ಆಗುವ ಸಾಧ್ಯತೆಗಳು ಅಧಿಕವಾಗಿರುತ್ತವೆ. ಬರೀ ನಿಮ್ಮ ಮೊಬೈಲನಿಂದ ಮಾತ್ರ ನಿಮ್ಮ ಫೇಸ್ಬುಕ ಅಕೌಂಟನ್ನು ಬಳಸಿ. ಬೇರೆಯವರ ಮೊಬೈಲನಲ್ಲಿ ನಿಮ್ಮ ಫೇಸ್ಬುಕ ಅಕೌಂಟಿಗೆ ಲಾಗಿನ ಆಗಬೇಡಿ. ಯಾಕೆಂದರೆ ಲಾಗೌಟ್ ಆಗಲು ಮರೆತರೆ ನಿಮ್ಮ ಫೇಸ್ಬುಕ್ ಖಾತೆ ದುರ್ಬಳಕೆಯಾಗಬಹುದು…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

೧೧) ಫೇಸ್ಬುಕನಲ್ಲಿ ಪ್ರತಿದಿನ, ಪ್ರತಿಕ್ಷಣ ನಡೆಯುವ ಕೆಲ್ಸಕ್ಕೆ ಬಾರದ ವಿಷಯಗಳಲ್ಲಿ ನೀವು ತಲೆ ಹಾಕಬೇಡಿ. ಫೇಸ್ಬುಕ ಗ್ರೂಪಗಳಲ್ಲಿ ಮೂರ್ಖರು ಮಾಡುವ ರಾಜಕೀಯ ಮತ್ತು ಧರ್ಮದ ಚರ್ಚೆಗಳಲ್ಲಿ ಭಾಗವಹಿಸಬೇಡಿ. ಕೆಲಸವಿಲ್ಲದ ಕಿಡಿಗೇಡಿಗಳು ಮಾಡುವ ಸ್ಟಾರವಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಸಿನಿಮಾ ಸ್ಟಾರಗಳ, ರಾಜಕೀಯ ಹುಳುಗಳ ಟ್ರೋಲಗಳಲ್ಲಿ ಅನಗತ್ಯವಾಗಿ ನೀವು ಭಾಗಿಯಾಗಬೇಡಿ. ನಿಮ್ಮ ಅಮೂಲ್ಯವಾದ ಸಮಯವನ್ನು ಉನ್ನತ ವಿಚಾರಗಳಲ್ಲಿ ಇನವೇಸ್ಟ ಮಾಡಿ…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

೧೨) ಫೇಸ್ಬುಕಲ್ಲಿ ಬರುವ ಬಹುಪಾಲು ಸುದ್ದಿಗಳು ಮತ್ತು ಜಾಹೀರಾತುಗಳು ನಿಜವಲ್ಲ. ಹೆಚ್ಚಾಗಿ ಸುಳ್ಳು ಸುದ್ದಿಗಳೇ ಬರುತ್ತವೆ. ಅದಕ್ಕಾಗಿ ಅವುಗಳನ್ನೆಲ್ಲ ನಂಬಿ ಮತ್ತೊಬ್ಬರಿಗೆ ಹೇಳಿ ನಗೆಪಾಟಲಿಗೆ ಒಳಗಾಗುವುದು ಬೇಡ. ನೀವು ಫೇಸ್ಬುಕನ್ನು ಬಳಸಿ. ಆದರೆ ಫೇಸ್ಬುಕ್ಕಿಗೆ ನೀವು ಬಳಕೆಯಾಗಬೇಡಿ…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

ಇವಿಷ್ಟು ನನ್ನ ಪ್ರಕಾರ ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ ಕೆಲಸಗಳು. ನಿಮಗೆ ಹೇಳಲು ನಾನ್ಯಾರು ಅಲ್ಲ. ನನಗೆ ಅನಿಸಿದ್ದನ್ನು ನಾನು ಹೇಳಿರುವೆ. ನಿಮಗೆ ಬೇಕಾಗಿರುವುದನ್ನು ನೀವು ಮಾಡಬಹುದು. ನನಗೆ ನಷ್ಟವೂ ಇಲ್ಲ, ಲಾಭವೂ ಇಲ್ಲ. ನಿಮ್ಮ ಫೇಸ್ಬುಕ್ ನಿಮ್ಮಿಷ್ಟ…

ಫೇಸ್ಬುಕಲ್ಲಿ ತಪ್ಪಿಯೂ ಮಾಡಬಾರದ 12 ಕೆಲಸಗಳು : 12 Things Shouldn't be done in Facebook

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books