ಕನಸಿನ ಕನ್ಯೆಯ 25 ಗುಣಗಳು – 25 Characters of dream Girls in Kannada

You are currently viewing ಕನಸಿನ ಕನ್ಯೆಯ 25 ಗುಣಗಳು – 25 Characters of dream Girls in Kannada

ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಶೇಷ ಕನಸುಗಳಿರುತ್ತವೆ. ಆ ಕನಸುಗಳಲ್ಲಿ ಡ್ರೀಮ್ ಗರ್ಲಗೆ ಅಂದರೆ ಕನಸಿನ ಕನ್ಯೆಗೆ ಹೆಚ್ಚಿನ ಆದ್ಯತೆಗಳಿರುತ್ತವೆ. ಎಲ್ಲರಿಗೂ ಸಾಮಾನ್ಯವಾಗಿ ಡ್ರಿಮ್ ಗರ್ಲ್ ಸಿಗುವುದಿಲ್ಲ. ಆದರೆ ಅವಳನ್ನು ಹುಡುಕುವುದರಲ್ಲಿ ತಪ್ಪೇನಿಲ್ಲ. ಯೌವ್ವನದಲ್ಲಂತು ಕೇಳೊದೆ ಬೇಡ, ಸಾವಿರಾರು ನೀಲಿ ಕನಸುಗಳು ಸೆನ್ಸಾರಿಲ್ಲದೆ ಬೀಳುತ್ತಲೇ ಇರುತ್ತವೆ. ಕೆಲಸ ಸಿಕ್ಕ ಹುಡುಗರು ತಮ್ಮ ಮುದ್ದಿನ ಮಡದಿ ಹಾಗಿರಬೇಕು, ಹೀಗಿರಬೇಕು, ವಿಶ್ವ ಸುಂದರಿಗಿಂತ ಸುಂದರವಾಗಿರಬೇಕು, ಅಪ್ಸರೆಗಿಂತ ಸೆಕ್ಸಿಯಾಗಿರಬೇಕು ಎಂದೆಲ್ಲ ಲೆಕ್ಕಾಚಾರ ಹಾಕುತ್ತಾರೆ. ಇನ್ನೂ ಕೆಲಸ ಸಿಗದ ಹುಡುಗರು ಕೆಲಸ ಹುಡುಕುವುದಕ್ಕಿಂತ ಹೆಚ್ಚಾಗಿ ಹುಡುಗಿಯರನ್ನೇ ಹುಡುಕುತ್ತಿರುತ್ತಾರೆ. ತುಂಟ ಕಣ್ಣುಗಳಿಗೆ ಇಷ್ಟವಾದವಳನ್ನು ಮನಸ್ಸಲ್ಲಿ ಬಿಟ್ಟುಕೊಂಡು ರಾತ್ರಿ ಕನಸ್ಸಲ್ಲಿ ಒಬ್ಬಂಟಿಯಾಗಿ ತಲೆದಿಂಬನ್ನು ತಬ್ಬಿಕೊಂಡು ಒದ್ದಾಡುತ್ತಿರುತ್ತಾರೆ.

ಡ್ರೀಮ್ ಗರ್ಲ್ ಹುಡುಕಾಟದಲ್ಲಿ ಮನಸ್ಸು ಮಂಗನಂತೆ ವರ್ತಿಸುವಾಗ ಚಾಣಕ್ಯ ಹೇಳಿದ, “ಜೀವನಪೂರ್ತಿ ಸುಖವಾಗಿರಬೇಕೆಂದರೆ, ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸುವ ಆಸೆಯಿದ್ದರೆ ಸುಂದರವಾಗಿರುವ ಹುಡುಗಿ ಹಿಂದೆ ತಪ್ಪಿಯೂ ಓಡಬೇಡ. ಮುಖದಿಂದ ಸುಂದರವಾಗಿರುವವಳು ಒಂದು ರಾತ್ರಿ ಮಾತ್ರ ಸುಖ ಕೊಡುತ್ತಾಳೆ. ಆದರೆ ಮನಸ್ಸಿನಿಂದ ಸುಂದರವಾಗಿರುವವಳು ಜೀವನಪೂರ್ತಿ ಸುಖ ಕೊಡುತ್ತಾಳೆ. ಆದ್ದರಿಂದ ಮನಸ್ಸಿನಿಂದ ಸುಂದರವಾಗಿರುವ ಹುಡುಗಿಯನ್ನೇ ಮದುವೆಯಾಗು” ಎಂಬ ಮಾತು ಮನಸ್ಸಿಗೆ ಕಡಿವಾಣ ಹಾಕಿ ಬಿಡುತ್ತದೆ. ಆದರೂ ಮೂರ್ಖ ಮನಸ್ಸು ಮೆದುಳಿನ ಮಾತನ್ನು ಕೇಳುವುದಿಲ್ಲ. ಅದು ಸುಂದರವಾಗಿರುವ ಸಿಗದ ಕನಸಿನ ಕನ್ಯೆಯನ್ನು ಪದೇಪದೇ ಕಲ್ಪಿಸಿಕೊಳ್ಳುತ್ತಲೇ ಇರುತ್ತದೆ. ಅಂಥ ಸಿಗದ ಕನಸಿನ ಹುಡುಗಿಯ ಗುಣಗಳು ಇಂತಿವೆ ;

೧) ಅವಳು ಅಷ್ಟೊಂದು ಸಂಪ್ರದಾಯಸ್ಥೆ ಆಗಿರದಿದ್ದರೂ ಪರವಾಗಿಲ್ಲ. ಆದರೆ ಸರಳ ಮತ್ತು ಸುಂದರವಾಗಿರಬೇಕು. ಸಾವಿರಾರು ಹುಡುಗಿಯರ ಮಧ್ಯೆದಲ್ಲಿದ್ದರೂ ಅವಳು ಎದ್ದು ಕಾಣಬೇಕು. ಎಲ್ಲರನ್ನು ಸೆಳೆಯುವ ಆಕರ್ಷಣೆ ಅವಳದ್ದಾಗಿರಬೇಕು.

೨) ಅವಳು ಬುದ್ಧಿವಂತೆ, ಗುಣವಂತೆ, ಧೈರ್ಯವಂತೆಯಾಗಿರಬೇಕು. ಜೊತೆಗೆ ಸ್ವಲ್ಪ ಪೆದ್ದಿಯಾಗಿರಬೇಕು.

೩) Kind and Caring ಆಗಿರಬೇಕು. ಅವಳ ಹಕ್ಕುಗಳನ್ನು ಅವಳು ಮರೆಯದೆ ಪಡೆದುಕೊಳ್ಳಬೇಕು ಮತ್ತು ತನ್ನ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಬೇಕು.

೪) ನನ್ನನ್ನು ಹುಚ್ಚಿಯಂತೆ ಪ್ರೀತಿಸಬೇಕು. ಅವಳ ಪ್ರೀತಿಯಲ್ಲಿ ನಾ ಕಳೆದೋಗಬೇಕು.

೫) ಬರೀ ಬ್ಯೂಟೀಪೂಲ್ ಆಗಿದ್ರೆ ಸಾಲದು. ಸ್ವಲ್ಪನಾದ್ರೂ ಬುದ್ಧಿ ಇರಬೇಕು. ಅವಳಲ್ಲಿ ಏನಾದರೂ ಒಂದು ವಿಶೇಷ ಕಲೆ ಇರಬೇಕು.

೬) ಅವಳಿಗೆ ನಾನೇ ಪ್ರಪಂಚವಾಗಿರಬೇಕು. ಆದರೆ ಪ್ರಪಂಚದ ಜ್ಞಾನವೂ ಅವಳಿಗೆ ಇರಬೇಕು.

೭) ತಿಳಿಯದೆ ತಪ್ಪಾದಾಗ ಒಪ್ಪಿಕೊಂಡು ಬೇಗನೆ ರಾಜಿ ಆಗಬೇಕು. ತನ್ನ ಬಳಿ ತಪ್ಪಿಟ್ಟುಕೊಂಡು ಸುಮ್ಮನೆ ವಾದಿಸಬಾರದು.

೮) ನಾನು ತಪ್ಪು ಮಾಡಿದಾಗ ನನ್ನನ್ನು ತಿದ್ದಿ ಸರಿಯಾದ ದಾರಿಯಲ್ಲಿ ನಡೆಸಬೇಕು. ನನ್ನ ಕೆಟ್ಟ ಕೆಲಸಗಳಿಗೆ, ಚಟಗಳಿಗೆ ಕುಮ್ಮಕ್ಕು ಕೊಡಬಾರದು.

೯) ನನ್ನ ಸೌಂದರ್ಯ, ಸಂಪತ್ತಿಗಿಂತ ಹೆಚ್ಚಾಗಿ ನನ್ನನ್ನು, ನನ್ನ ಗುಣವನ್ನು ಇಷ್ಟಪಡಬೇಕು.

೧೦) ಅವಳ ಕನಸು, ಮನಸ್ಸಲ್ಲಿ ನಾನಷ್ಠೇ ಇರಬೇಕು. ಅವಳ ಮೈಮನಸ್ಸುಗಳು ಬರೀ ನನಗಷ್ಟೇ ಮೀಸಲಿರಬೇಕು. ಈ ವಿಷಯದಲ್ಲಿ ತುಂಬ ಸ್ವಾರ್ಥಿ ನಾನು.

ಕನಸಿನ ಕನ್ಯೆಯ 25 ಗುಣಗಳು - 25 Characters of dream Girls in Kannada

೧೧) ಮೆದುಳಿನಿಂದ ಮನುಜೆಯಾದರೆ, ಮನಸ್ಸಿನಿಂದ ಮಗುವಾಗಿರಬೇಕು. ಪದೇಪದೇ ಪ್ರೀತಿಯಿಂದ ನನ್ನೊಂದಿಗೆ ಕಾದಾಡಬೇಕು. ಮುನಿಸಿಕೊಂಡು ಮುದ್ದು ಮಾಡಬೇಕು.

೧೨) ಅವಳಿಗೆ ಬೇಕಾಗಿದ್ದೆಲ್ಲವನ್ನು ನೇರವಾಗಿ ಕೇಳಿ ಪಡೆಯಬೇಕು. ಅದನ್ನು ಬಿಟ್ಟು ಅನಾವಶ್ಯಕವಾಗಿ ಕಣ್ಣೀರಾಕಿ ನನ್ನನ್ನು ಎಮೋಷನಲಾಗಿ ಬ್ಲ್ಯಾಕ್ಮೇಲ್ ಮಾಡಬಾರದು. ಅವಳ ಬೇಡಿಕೆಗಳನ್ನು ಈಡೇರಿಸುವುದು ನನ್ನ ಕರ್ತವ್ಯ ಎಂಬುದನ್ನು ಮರೆಯಬಾರದು.

೧೩) ನನ್ನಿಂದ ಏನನ್ನೂ ಮುಚ್ಚಿಡುವ ಪ್ರಯತ್ನ ಮಾಡಬಾರದು. ಡ್ರಾಮಾ ಕ್ವೀನ್ ಆಗಿರಬಾರದು. ಮುಕ್ತ ಮನಸ್ಸಿನಿಂದ ವರ್ತಿಸಬೇಕು.

೧೪) ನನ್ನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಅರ್ಥಮಾಡಿಕೊಂಡು, ಸಹಕರಿಸಿಕೊಂಡು ಜೀವನ ಸಾಗಿಸಬೇಕು. ಅನುಮಾನಿಸಿದರೂ ಪರವಾಗಿಲ್ಲ, ಪ್ರಮಾಣಿಸಿ ನೋಡಿ ನಂತರ ನಿರ್ಧಾರ ತೆಗೆದುಕೊಳ್ಳಬೇಕು.

೧೫) ಸೆನ್ಸ್ ಆಫ್ ಹ್ಯುಮರ್ ಜೊತೆಗೆ ಟೈಮ್ ಸೆನ್ಸ್ ಕೂಡ ಇರಬೇಕು. ಆದರೆ ನಾವಿಬ್ಬರೂ ಏಕಾಂತದಲ್ಲಿರುವಾಗ ಅವಳು ಸ್ವಲ್ಪ ನಾಚಿಕೆ ಬಿಟ್ಟು ನಾನ್ ಸೆನ್ಸ್ ಆಗಿ ವರ್ತಿಸಬೇಕು.

೧೬) ಅವಳು ಆಲಸಿಯಾಗಿದ್ದರೂ ಪರವಾಗಿಲ್ಲ. ಅವಳಲ್ಲಿ ಕಲಾತ್ಮಕತೆ ಇರಬೇಕು. ಕ್ರಿಯೇಟಿವಿಟಿ ಇರಲೇಬೇಕು. ಪ್ರತಿದಿನ ಹೊಸಹೊಸ ಆಲೋಚನೆಗಳನ್ನು ಮಾಡಬೇಕು. ಮನೆಹಾಳ ಧಾರಾವಾಹಿಗಳನ್ನು ನೋಡುತ್ತಾ ಟೈಮ್ ವೆಸ್ಟ್ ಮಾಡಬಾರದು.

೧೭) ಅವಳಲ್ಲಿ ರಸಿಕತೆ ಇರಲೇಬೇಕು. ಸಂಸಾರದಲ್ಲಿ ಅರಾಜಕತೆ ಬರದಂತೆ ಅವಳು ನೋಡಿಕೊಳ್ಳಬೇಕು.

೧೮) ಅವಳಿಗೆ ನಾನು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿರುವಾಗ, ನನ್ನ ವೈಯುಕ್ತಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಬಾರದು. ನನ್ನನ್ನು ನನ್ನ ಗೆಳೆಯರಿಂದ ಮತ್ತು ತಂದೆತಾಯಿಗಳಿಂದ ದೂರ ಮಾಡಬಾರದು.

೧೯) ಅವಳಿಗಿಷ್ಟವಾದ ಬಟ್ಟೆಗಳನ್ನು ಅವಳು ಧರಿಸಬಹುದು. ಆದರೆ ನನ್ನ ಸಲಹೆಗಳನ್ನು ಧಿಕ್ಕರಿಸಬಾರದು.

೨೦) ಅವಳ ಪ್ರೇಮದಲ್ಲಿ ಸ್ವಲ್ಪ ಪೋಲಿತನವೂ ಇರಬೇಕು.

ಕನಸಿನ ಕನ್ಯೆಯ 25 ಗುಣಗಳು - 25 Characters of dream Girls in Kannada

೨೧) ನಾನು ಅವಳ ತಂದೆತಾಯಿಗಳನ್ನು ಗೌರವಿಸುವಂತೆ, ಅವಳು ಸಹ ನನ್ನ ತಂದೆತಾಯಿಗಳನ್ನು ಗೌರವಿಸಬೇಕು, ಪ್ರೀತಿಸಬೇಕು.

೨೨) ನನ್ನ ಪ್ರತಿಯೊಂದು ಇಷ್ಟ, ಕಷ್ಟ, ನಷ್ಟಗಳಲ್ಲಿ ಅವಳು ತಪ್ಪದೇ ಭಾಗಿಯಾಗಬೇಕು.

೨೩) ಅವಳ ನೋವುಗಳನ್ನು ನನ್ನಿಂದ ಮುಚ್ಚಿಡುವ ಮೂರ್ಖತನ ಮಾಡಬಾರದು.

೨೪) ಅವಳ ಎಲ್ಲ ಆಸೆಗಳನ್ನು ನನ್ನಿಂದ ಸಂಪೂರ್ಣವಾಗಿ ಈಡೇರಿಸಿಕೊಳ್ಳಬೇಕು. ಅವಳು ನನ್ನ ಮನಸ್ಸಿನ ಮೌನ ತರಂಗಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.

೨೫) ನನ್ನ ನಗುವಿಗೆ, ಯಶಸ್ಸಿಗೆ ಅವಳು ಸ್ಫೂರ್ತಿಯಾಗಬೇಕು. ನನ್ನ ಪ್ರತಿಯೊಂದು ಹೆಜ್ಜೆಗೆ ಅವಳು ಹೆಗಲು ಕೊಡಬೇಕು.

ಕನಸಿನ ಕನ್ಯೆಯ 25 ಗುಣಗಳು - 25 Characters of dream Girls in Kannada

ಇತ್ಯಾದಿ , ಇತ್ಯಾದಿ, ಇತ್ಯಾದಿ…..

ಕನಸಿನ ಕನ್ಯೆಯೊಬ್ಬಳನ್ನು ಬಿಟ್ಟು ಬಹಳಷ್ಟು ಜನರಿಗೆ ಅವರು ಬಯಸಿದೆದ್ದವೂ ಅವರ ಬಾಳಲ್ಲಿ ಸಿಕ್ಕಿರುತ್ತದೆ. ಆದರೂ ಅವರ ಮನಸ್ಸು ಮೊದಲು ಇಷ್ಟವಾದವಳೇ ಮಡದಿಯಾಗಿದ್ದರೆ ಚೆನ್ನಾಗಿರುತಿತ್ತು ಎಂದು ಜೀವನಪೂರ್ತಿ ಕೊರಗುತ್ತಿರುತ್ತದೆ. ಬೇರೆ ಹುಡುಗರ ಕಥೆವ್ಯಥೆಗಳೇನು ನನಗೆ ಗೊತ್ತಿಲ್ಲ. ಆದರೆ ನನ್ನ ಕನಸ್ಸಲ್ಲಿ ಕನ್ಯೆಯರಿಗಿಂತ ಹೆಚ್ಚಾಗಿ ಕಾರುಗಳೇ ಬರುತ್ತವೆ. ನಾನು ಹೆಚ್ಚಾಗಿ ಹುಡುಗಿಯರನ್ನು ಕಲ್ಪಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಏಕೆಂದರೆ ನನಗೆ ನನ್ನ ಓದು ಮತ್ತು ಕೆಲಸಗಳಲ್ಲಿ ಸಾಕಷ್ಟು ಸಮಯ ಸಿಗುವುದಿಲ್ಲ. ಕೆಲವು ಸಲ ಸಮಯ ಸಿಕ್ಕಾಗ ಮನಸ್ಸಲ್ಲಿ ಪೆದ್ದ ಆಸೆಗಳು ಸುನಾಮಿಯಂತೆ ಸಿಡಿದೇಳುತ್ತವೆ. ಆದರೆ ಆ ಆಸೆಗಳೆಲ್ಲ ಕವನಗಳಲ್ಲಿ ಕಣ್ಮರೆಯಾಗಿ ಹೋಗಿ ಬಿಡುತ್ತವೆ.

ಕನಸಿನ ಕನ್ಯೆಯ 25 ಗುಣಗಳು - 25 Characters of dream Girls in Kannada

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books