ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ – Kannada Sad Love Kavanagalu – Love Kavana – Kannada Feeling Kavanagalu

You are currently viewing ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ – Kannada Sad Love Kavanagalu – Love Kavana – Kannada Feeling Kavanagalu

೧) ಅವತ್ತು ನನ್ನ ಕಾಲಲ್ಲಿ ಮುಳ್ಳು ಚುಚ್ಚಿದಾಗ ನಿನ್ನ ಕಣ್ಣಂಚಲ್ಲಿ ಕಣ್ಣೀರು ಇಣುಕಿ ನೋಡಿತ್ತು. ಆದರೆ ಇವತ್ತು ನನ್ನೆದೆಗೆ ಮುಳ್ಳು ಚುಚ್ಚಿದರೂ ನೀನೇಕೆ ಮೌನವಾಗಿರುವೆ?

೨) ಅವತ್ತು ನಾನು ಕಣ್ಣಲ್ಲಿ ಕಸ ಬಿದ್ದವರಂತೆ ನಾಟಕವಾಡುವಾಗ ಸಿಕ್ಕಾಪಟ್ಟೆ ಕೇರ್ ತೆಗೆದುಕೊಂಡ ನೀನು, ಇವತ್ತು ನಾನು ನಿಜವಾಗಿಯೂ ಅಳೋವಾಗ ಕಲ್ಲಾಗಿ ಕುಳಿತಿರುವೆ ಏಕೆ?

ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ - Kannada Sad Love Kavanagalu - Love Kavana - Kannada Feeling Kavanagalu

೩) ನಿನ್ನ ನೋಡಿದಾಗಲೇ ಕಣ್ಣಿಗೌತಣ
ನಿನ್ನ ಪ್ರೀತಿಸಿದಾಗಲೇ ಈ ಮನಸ್ಸಿಗೆ ಸಮಾಧಾನ.
ಕಂಗಳಿದ್ದು ಏನು ಫಲ ನಿನ್ನ ನೋಡದೆ?
ಕೈಗಳಿದ್ದು ಏನು ಫಲ ನಿನ್ನ ಮುದ್ದಾಡದೆ?

ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ - Kannada Sad Love Kavanagalu - Love Kavana - Kannada Feeling Kavanagalu

೪) ನೀರಲ್ಲಿ ಬಿದ್ದು ಸಾಯುವ ಇರುವೆಯನ್ನು ಬದುಕಿಸುವ ವಿಶಾಲ ಹೃದಯಿ ನೀನು. ಆದ್ರೆ ನಿನ್ನ ಪ್ರೀತಿಯಲ್ಲಿ ಬಿದ್ದ ಹೃದಯವನ್ನು ಸತಾಯಿಸಿ ಸಾಯಿಸುತ್ತಿರುವೆ ಯಾಕೀನ್ನು?

ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ - Kannada Sad Love Kavanagalu - Love Kavana - Kannada Feeling Kavanagalu

೫) ನಿನ್ನೊಂದಿಗೆ ಜಡಿಮಳೆಯಲ್ಲಿ ನೆನೆಯುವಾಗ,
ಒಂದೇ ತಟ್ಟೆಯಲ್ಲಿ ಊಟ ಮಾಡುವಾಗ,
ಬೀದಿಯಲ್ಲಿ ಕೈಕೈಹಿಡಿದು ನಡೆಯುವಾಗ,
ಪದೇಪದೇ ಕಾರಣವಿಲ್ಲದೆ ಕಿತ್ತಾಡುವಾಗ
ಗೊತ್ತಾಗದ ಪ್ರೀತಿ, ನೀನು ದೂರಾದ ಮೇಲೇಕೆ ಗೊತ್ತಾಗಿ ನನ್ನ ಕಾಡುತ್ತಿದೆ?

೬) ನನಗ್ಯಾಕೋ ಸಂದೇಹ, ನೀನು ನಿಜವಾಗಿಯೂ ಹೃದಯಿಯೆಂದು. ನಿನ್ನ ನೆನಪಲ್ಲಿ ಕೊರಗಿ ಕೊರಗಿ ನನ್ನ ಆನೆದೇಹ ಕರಗಿತು. ಆದರೆ ನಿನ್ನ ಪುಟ್ಟ ಹೃದಯ ಕರಗಲಿಲ್ಲವಲ್ಲ?

ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ - Kannada Sad Love Kavanagalu - Love Kavana - Kannada Feeling Kavanagalu

೭) ನಾನು ನನ್ನೆದೆಯಲ್ಲೊಂದು ಪುಟ್ಟ ಗುಡಿ ಕಟ್ಟಿ ಅಲ್ಲಿ ನಿನ್ನನ್ನು ದೇವತೆಯಾಗಿ ಪೂಜಿಸುತ್ತಿಲ್ಲ. ನಿನ್ನನ್ನು ನಾನು ನನ್ನೆದೆಯ ಗುಡಿಸಲಲ್ಲಿ ರಾಣಿಯಾಗಿ ಘೋಷಿಸಿ ಪ್ರೀತಿಸುತ್ತಿರುವೆ. ಹೀಗಿರುವಾಗ ನಿನ್ನ ಹೃದಯದಲ್ಲಿ ಪ್ರೀತಿ ಸಿಂಹಾಸನವನ್ನು ನೀಡದಿದ್ದರೂ ಪರವಾಗಿಲ್ಲ. ಕೊನೆಗೆ ನಿನ್ನ ಹೃದಯದ ಯಾವುದೋ ಒಂದು ಮೂಲೆಯಲ್ಲಿ ವಿಶ್ರಮಿಸಲು ಆರಡಿ-ಮೂರಡಿ ಜಾಗವನ್ನು ಸಹ ನೀಡದಷ್ಟು ಕ್ರೂರಿಯೇ ನೀನು?

ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ - Kannada Sad Love Kavanagalu - Love Kavana - Kannada Feeling Kavanagalu

೮) ನೀ ನನ್ನ ಮೇಲೆ ಕೋಪಿಸಿಕೊಂಡು ಕೋಪಾಸ್ತ್ರದಿಂದ ನನ್ನ ಕೊಲ್ಲುವ ಬದಲು, ನಿನ್ನ ಚೆಂದುಟಿಯ ಬಿಲ್ಲಿನಿಂದ ಒಂದು ನಗುವಿನ ಹೂಬಾಣವನ್ನು ಬಿಟ್ಟು ನನ್ನನ್ನು ಸಂತೋಷದಿಂದ ಕೊಲ್ಲಬಹುದಿತ್ತಲ್ಲ?

ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ - Kannada Sad Love Kavanagalu - Love Kavana - Kannada Feeling Kavanagalu

೯) ನಾನು ನೋವುಗಳಿದ್ದರೂ ನನ್ನ ಪಾಡಿಗೆ ನಗುನಗುತ್ತಾ ಆರಾಮಾಗಿದ್ದೆ. ನೀನು ನನ್ನ ಬಾಳಿಗೆ ಬೆಳಕಾಗಿ ಬಂದು ಹೋಗುವಾಗ ನೋವನ್ನು ನೀಡಿ ಹೋದೆ. ಒಂಟಿ ಯೌವ್ವನದಲ್ಲಿ ಬಂದು ಹೋಗುವ ಪೋಲಿ ಕವನವಾದೆ ಏಕೆ ನೀನು?

ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ - Kannada Sad Love Kavanagalu - Love Kavana - Kannada Feeling Kavanagalu

೧೦) ನನ್ನ ತಪ್ಪುಗಳನ್ನು ನಾ ತಿದ್ದಿಕೊಂಡು ಬದಲಾದರೂ, ನಿನಗ್ಯಾಕೆ ನಿನ್ನ ತಪ್ಪಿನ್ನು ಅರ್ಥವಾಗ್ತೀಲ್ಲ? ನೀನಿಲ್ಲದೆ ನಾನು ಬದುಕಬಲ್ಲೆ. ಆದರೆ ಸಂತೋಷವಾಗಿರಲಾರೆ. ನಾನಿಲ್ಲದೆ ನೀನು ಸಂತೋಷವಾಗಿರಬಲ್ಲೆಯಾ? ಗೆಳತಿ ಹೇಳಿ ಹೋಗು ಕಾರಣ. ಕೊಲ್ಲದಿರು ವಿನಾಕಾರಣ…

ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ - Kannada Sad Love Kavanagalu - Love Kavana - Kannada Feeling Kavanagalu

ಇಲ್ಲಿ ”ನಾನು” ಒಂದು ಕಾಲ್ಪನಿಕ ವಿರಹಿಯ ಪಾತ್ರವಷ್ಟೇ. ವಿರಹಿಗಳ ನೋವಿಗೆ ಯಾವುದೇ ಔಷಧಿಯಿಲ್ಲ. ನೋವಿನಲ್ಲೂ ನಗುವ ಹೂಗಳೇ ವಿರಹಿಗಳು….

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books